ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜೆಸಿಐ ಬೈಂದೂರು ಸಿಟಿ ಘಟಕಕ್ಕೆ ಜೆಸಿಐ ವಲಯ 15ಅಧ್ಯಕ್ಷೆ ಪಿ. ಪಿ. ಪಿ. ಸೌಜನ್ಯ ಹೆಗ್ದೆ ಭೇಟಿ ನೀಡಿದರು. ಈ ಸಂದರ್ಭ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಾಶ್ವತ ನಾಮಫಲಕ ಉದ್ಘಾಟಿಸಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶಾಶ್ವತ ನಾಮಫಲಕವನ್ನು ವಲಯ ಅಧ್ಯಕ್ಷರಿಂದ ಹಸ್ತಾಂತರಿಸಿದರು. ಹಸ್ತಾಂತರಿಸಿ ಮಾತನಾಡಿದ ಅವರು, ಜೆಸಿಐ ಬೈಂದೂರು ಜೆಸಿಐ ಇಂತಹ ಒಂದು ಅದ್ಭುತ ಕಾರ್ಯಕ್ರಮವನ್ನು ಉದ್ಘಾಟಿಸಿದಕ್ಕೆ ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ.ಹಾಗೂ ಜೆಸಿಐ ಬೈಂದೂರು ಸಿಟಿ ಘಟಕದ ಅಧ್ಯಕ್ಷರನ್ನು ಹಾಗೂ ಸರ್ವ ಸದಸ್ಯರನ್ನು ತನ್ನ ಮುಕ್ತಕಂಠದಿಂದ ಪ್ರಶಂಸಿಸಿದರು. ಜೆಸಿಐ ವಲಯ 15ರ EA TO ZP ಜೆ ಎಫ್ ಎಂ ದೀಪಕ್ ಗಂಗೋಲಿ, ಬೈಂದೂರು ಸಿಟಿ ಘಟಕದ ಅಧ್ಯಕ್ಷರಾದ ಜೆಸಿ ಎಚ್ ಜಿ ಎಫ್ ಶ್ರೀಧರ ಆಚಾರ್ಯ, ಜೆಸಿಐ ವಲಯಾಧಿಕಾರಿ ಎಚ್ ಜಿ ಎಫ್ ಮಣಿಕಂಠ ಎಸ್ ದೇವಾಡಿಗ, ಜೆಸಿ ಎಚ್ ಜಿ ಎಫ್ ಪ್ರಿಯದರ್ಶಿನಿ ಕಮಲೇಶ್ ಬೆಸ್ಕೂರ್, ಜೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಇವರ ಸಹಯೋಗದಲ್ಲಿ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಗಾಂಧಿ ಓದು ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸಮುದಾಯ ಕುಂದಾಪುರದ ಅಧ್ಯಕ್ಷ ಉದಯ ಗಾಂವಕಾರ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು. ಪ್ರತಿ ಶಾಲೆಯ ವಾಚನಾಲಯಕ್ಕೂ ಗಾಂಧೀಜಿಯವರ ಆತ್ಮಚರಿತ್ರೆಯ ಪುಸ್ತಕಗಳನ್ನು ನೀಡಲಾಯಿತು. ಈ ಸಂದರ್ಭ ಕ್ಷೇತ್ರ ಸಂಪನ್ಮೂಲ ಕೇಂದ್ರದ ಪ್ರಭಾರ ಸಮನ್ವಯಾಧಿಕಾರಿ ಸದಾನಂದ ಬೈಂದೂರು, ಹಿರಿಯ ರಂಗಕರ್ಮಿ ಜಿ.ವಿ ಕಾರಂತ ಉಪಸ್ಥಿತರಿದ್ದರು. ಶಿಕ್ಷಕ ಬಾಬು ಶೆಟ್ಟಿ ಗಾಂಧಿ ಓದಿನ ಪ್ರಸ್ತುತೆಯನ್ನು ವಿವರಿಸಿದರು. ರವೀಂದ್ರ ಸ್ವಾಗತಿಸಿದರು, ರವಿ ಕಟ್ಕೆರೆ ನಿರೂಪಿಸಿದರು, ವಾಸುದೇವ ಗಂಗೇರ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ನಂಜನಗೂಡಿನ ಪುರಾತನ ಹಿಂದೂ ದೇವಾಲಯ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳನ್ನು ಬಿಜೆಪಿ ಸರಕಾರ ಕೆಡುವುತ್ತಿದ್ದ ಎಂದು ಆಪಾದಿಸಿ ಬೈಂದೂರು ಯುವ ಕಾಂಗ್ರೆಸ್ ನೇತೃತ್ವದಲ್ಲಿ ಸೋಮವಾರ ಪಂಜಿನ ಮೆರವಣಿಗೆ ನಡೆಯಿತು. ಹೊಸ ಬಸ್ ನಿಲ್ದಾಣದಿಂದ ಸೇನೇಶ್ವರ ದೇವಸ್ಥಾನದ ತನಕ ಪಂಜಿನ ಮೆರವಣಿಗೆ ನಡೆಸಿ ಬಿಜೆಪಿ ಸರಕಾರದ ನೀತಿ-ಧೋರಣೆಯನ್ನು ಖಂಡಿಸಲಾಯಿತು. ಬಳಿಕ ನಡೆದ ಸಭೆಯನ್ನುದ್ದೇಶಿಸಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಮಾತನಾಡಿ ಜಾತಿ ಧರ್ಮಗಳ ನಡುವೆ ವಿಷಬೀಜ ಬಿತ್ತಿ ತನ್ನ ಬೇಳೆ ಬೇಯಿಸಿಕೊಳ್ಳುವುದೇ ಬಿಜೆಪಿ ಪಕ್ಷದ ಸಿದ್ಧಾಂತ. ಹಿಂದೂ ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷ ಇಂದು ದೇವಸ್ಥಾನಗಳನ್ನು ಕೆಡವುತ್ತಿದೆ. ಬಿಜೆಪಿಯ ಇಬ್ಬಗೆಯ ನೀತಿ ಇದರಿಂದಲೇ ತಿಳಿಯುತ್ತದೆ. ಜನರಿಗೆ ಸುಳ್ಳು ಹೇಳಿ ಮರಳು ಮಾಡುವುದು ಈಗ ಸಾಧ್ಯವಿಲ್ಲ. ಸರಕಾರದ ಬೊಕ್ಕಸ ಕೊಳ್ಳೆ ಹೊಡೆಯುವುದು ಬಿಟ್ಟರೆ ಬಿಜೆಪಿ ಮತ್ತೇನು ಮಾಡಿಲ್ಲ. ಎಲ್ಲದಕ್ಕೂ ಜನರು ಸರಿಯಾದ ಉತ್ತರ ನೀಡಲಿದ್ದಾರೆ ಎಂದರು. ಪ್ರತಿಭಟನೆಯಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ವಿಘೇಶ್ವರ ಯುವಕ ಮಂಡಲ ಬೆಟ್ಟಾಗರ ಇದರ 2021-2022ನೇ ಸಾಲಿನ ನೂತನ ಅಧ್ಯಕ್ಷರಾಗಿ ಕೃಷ್ಣ ಪೂಜಾರಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕಿಶೋರ್, ಕಾರ್ಯದರ್ಶಿಯಾಗಿ ಸುಶಾಂತ್, ಜೊತೆ ಕಾರ್ಯದರ್ಶಿಯಾಗಿ ಗುರುರಾಜ್, ಕೋಶಾಧಿಕಾರಿಯಾಗಿ ಮನೋಹರ್, ಜಯರಾಮ, ಕ್ರೀಡಾ ಕಾರ್ಯದರ್ಶಿಯಾಗಿ ನಿತೀಶ್, ದಿನೇಶ್ ದೋಣಿಮನೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಾಸು, ಗಿರೀಶ್, ಲೆಕ್ಕ ಪರಿಶೋಧಕರಾಗಿ ವಿಜೇಂದ್ರ ಪೂಜಾರಿ, ಗುರುರಾಜ್, ದಿನೇಶ್, ನಿರ್ದೇಶಕರುಗಳಾಗಿ ಮಹೇಂದ್ರ ಪೂಜಾರಿ, ಪ್ರದೀಪ್ ಪೂಜಾರಿ, ರವಿ ಗೋದಾವರಿ, ಪ್ರವೀಣ್ ಪೂಜಾರಿ, ಗೋಪಾಲ್ ಪೂಜಾರಿ, ನಾರಾಯಣ ಪೂಜಾರಿ, ಅಣ್ಣಪ್ಪ ಮೆಂಡನ್, ಶಿವ ದೋಣಿಮನೆ, ನಾಗೇಂದ್ರ ಕಾಂಚನ್, ಕೃಷ್ಣಾನಂದ್ ಶ್ಯಾನುಭಾಗ ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕಾರಂತರು ಬದುಕು ಒಂದು ದಂತಕಥೆಯಾಗಿದ್ದು, ಅವರ ಹೊಸತನದ ತುಡಿತ ಅವರ ಬದುಕಿನ ಒಂದು ವೈಶಿಷ್ಟ್ಯ, ಅವರ ಕೈಕೊಳ್ಳುತ್ತಿದ್ದ ಪ್ರವಾಸಗಳಲ್ಲಿ ಸಂಶೋಧಕರರಾಗಿ ಹೊಸತನದ ಅನ್ವೇಷಕರಾಗಿ ಬದುಕಿದವರು. ಕಾರಂತರು ವಿದ್ಯಾರ್ಥಿಗಳಿಗಾಗಿ ಸಮಯವನ್ನು ಕೊಡುತ್ತಿದ್ದು ಶಾಲಾ ಪ್ರವಾಸದಲ್ಲಿ ಅವರ ಅನುಭವನ್ನು ಅವರಲ್ಲಿ ತುಂಬಿ ಜ್ಞಾನಾರ್ಜನೆಯ ಸೂರ್ಯನಂತೆ ಮೂಡುತ್ತಿದ್ದರು. ಕಾರಂತರ ಸಿಡಿಮಿಡಿ ಕಾರಂತರ ಮೌಲ್ಯಗಳ ಒಂದು ಅಂಗವೇ ಸರಿ ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಅವರು ಹೇಳಿದರು. ಅವರು ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ರಿ. ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ರಿ. ಉಡುಪಿ ಸಹಯೋಗದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ17ನೇ ವರುಷದ ಸಂಭ್ರಮದ ಸಾಹಿತ್ಯಕ-ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿತ-2021(ಎಣೆಯಿಲ್ಲದ ಚಕಿತ) ಕಾರ್ಯಕ್ರಮದ ನುಡಿ ಚೇತನದಲ್ಲಿ ಮಾತನಾಡುತ್ತಿದ್ದರು. ಕಾರಂತರು ಮಾನವೀಯ ಮೌಲ್ಯಗಳಿಗೆ ಬೆಲೆ ಕೊಟ್ಟ ಕವಿ ಹೃದಯಿ, ಸಮಯ ಪಾಲನೆಯಲ್ಲಿ ಅವರಿಗಿದ್ದ ನಿಷ್ಠೆ ನಮಗೆ ಮಾದರಿ, ಯಕ್ಷಗಾನಕ್ಕೆ ಕಾರಂತರು ಜೀವಂತ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಅ.4: ತಾಲೂಕಿನ ಯಳಜಿತ್ ಗ್ರಾಮದ ಗುಳ್ನಾಡಿ ಹಾಡಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಇಸ್ವೀಟ್ ಜುಗಾರಿ ಆಡುತ್ತಿದ್ದ 15 ಮಂದಿಯನ್ನು ಬೈಂದೂರು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ಇಸ್ಪೀಟ್ ಜುಗಾರಿ ಆಟ ಆಡುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ತೆರಳಿದ ಪೊಲೀಸರು ಸ್ಥಳವನ್ನು ಸುತ್ತುವರಿದ್ದಾರೆ. ಈ ವೇಳೆ ಆಟವಾಡುತ್ತಿದ್ದ ರಾಘವೇಂದ್ರ ಪೂಜಾರಿ, ಮೋಹನ ಕೊಠಾರಿ, ದಯಾನಂದ ಗೌಡ, ಗಣಪತಿ ಗೌಡ , ರಾಘವೇಂದ್ರ ದೇವಾಡಿಗ, ಚಂದ್ರ ನಾಯ್ಕ, ಗಣೇಶ ನಾಯ್ಕ, ರಮೇಶ ನಾಯ್ಕ, ಕರುಣಾಕರ ಕೊಠಾರಿ, ಸಂತೋಷ ಕೊಠಾರಿ, ಮಧು ಬಳೆಗಾರ, ಸುಧಾಕರ ಕೊಠಾರಿ, ದಿನೇಶ ಕೊಠಾರಿ, ಕೃಷ್ಣ ಗೌಡ, ಜಯಾ ಗೌಡ ಎಂಬುವವರನ್ನು ವಶಕ್ಕೆ ಪಡೆದಿದ್ದು, ಜೂಜಾಟಕ್ಕೆ ರೂ.10,400 ನಗದು ಉಪಯೋಗಿಸಿರುವ ಬಗ್ಗೆ ವಿಚಾರಣೆ ತಿಳಿದು ಬಂದಿದೆ. ಕಾರ್ಯಾಚರಣೆಯಲ್ಲಿ ಬೈಂದೂರು ಪೊಲೀಸ್ ಉಪನಿರೀಕ್ಷಕ ಪವನ್ ನಾಯಕ್, ಪೊಲೀಸ್ ಸಿಬ್ಬಂದಿಗಳಾದ ನಾಗೇಶ್ ಗೌಡ, ಅಶೋಕ್ ರಾಥೋಡ್, ಕಲ್ಲೊಲಪ್ಪ ಭಜಂತ್ರಿ, ಪರಯ್ಯ ಮಟಪತಿ, ಶ್ರೀಧರ ಪಾಟೀಲ್ ಭಾಗವಹಿಸಿದ್ದರು. ಬೈಂದೂರು ಪೊಲೀಸ್ ಠಾಣೆಯಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳು ಉದ್ಘಾಟನಾ ಕಾರ್ಯಕ್ರಮವು ಇತ್ತೀಚೆಗೆ ಗಂಗೊಳ್ಳಿಯ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಇಂಡೋರ್ ಸ್ಟೇಡಿಯಂನಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಕ್ಲಬ್ ಗಂಗೊಳ್ಳಿಯ ಅಧ್ಯಕ್ಷರಾದ ರಾಜೇಶ್ ಎಂ. ಜಿ ನೆರವೇರಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಲಯನ್ಸ್ ಅಕ್ಷಯ ಹೆಗ್ಡೆ ಮೊಳಹಳ್ಳಿ ಸ್ವಯಂಸೇವಕರನ್ನುಉದ್ದೇಶಿಸಿ ರಾಷ್ಟ್ರೀಯ ಸೇವಾ ಯೋಜನೆ ಯಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಸಹಬಾಳ್ವೆ ಭಾವೈಕ್ಯತೆ ಜಾತ್ಯಾತೀತ ಮನೋಭಾವ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸಾಧ್ಯ. ವ್ಯಕ್ತಿತ್ವ ನಿರ್ಮಾಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ಉಪನ್ಯಾಸಕರಾದ ವೆಂಕಟೇಶಮೂರ್ತಿ ಎನ್.ಸಿ, ಶ್ರೀಪತಿ ಭಟ್, ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರಭಾಕರ್ ಪೈ ಮತ್ತು ದೀಕ್ಷಾ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸುಗುಣ ಆರ್ ಕೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಕ್ಷಿತಾ ಆರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಶಾಲೆಗಳ ಅಭಿವೃದ್ಧಿ ದೇವಸ್ಥಾನದ ಅಭಿವೃದ್ಧಿಯಷ್ಟೇ ಪುಣ್ಯದ ಕೆಲಸ, ನಾವು ವಿದ್ಯಾರ್ಜನೆಗೈದ ಶಾಲೆಗಳಿಗೆ ನಮ್ಮಿಂದಾದ ನೆರವು ನೀಡಿದಾಗ ಶಾಲೆ ಅಭಿವೃದ್ಧಿ ಜೊತೆಗೆ ಮಕ್ಕಳಿಗೂ ಕಲಿಕೆಗೆ ಸಹಕಾರವಾಗುತ್ತದೆ. ಊರಿನ ಸಂಘಟನೆಗಳು ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ಬಗ್ಗೆ ಆಸಕ್ತಿ ವಹಿಸಬೇಕು, ಶಾಲೆಗಳ ಅಭಿವೃದ್ಧಿಯಲ್ಲಿ ಸಂಘಟನೆಯ ಪಾತ್ರ ಬಹು ಮುಖ್ಯವಾಗಿದೆ ಎಂದು ಯುವವಾಹಿನಿ (ರಿ) ಯಡ್ತಾಡಿ ಘಟಕದ ಅಧ್ಯಕ್ಷ ರಾಜು ಪೂಜಾರಿ ಅವರು ಹೇಳಿದರು. ಅವರು ಯುವವಾಹಿನಿ (ರಿ) ಯಡ್ತಾಡಿ ಘಟಕದ ವತಿಯಿಂದ ಯಡ್ತಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪೀಠೋಪಕರಣ ವಿತರಣೆ ಹಾಗೂ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಶಾಂತ ಪೈ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಂತ ಪೈ ಅವರು ಹಳ್ಳಿ ಕಡೆ ವಿದ್ಯಾರ್ಥಿಗಳು ಆಧುನಿಕ ಶಿಕ್ಷಣ ವ್ಯವಸ್ಥೆಯಿಂದ ವಂಚಿತರಾಗುತ್ತಿರುವುದನ್ನು ಕಾಣುತ್ತಿದ್ದೇವೆ, ಅವರಿಗೂ ಗುಣಮಟ್ಟದ ಶಿಕ್ಷಣ ನೀಡಿ ಪ್ರೋತ್ಸಾಹಿಸಿದಾಗ ಅವರು ಸಾಧನೆ ಮಾಡಲು ಸಾಧ್ಯ, ಈ ನಿಟ್ಟಿನಲ್ಲಿ ಯುವವಾಹಿನಿ (ರಿ)…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತೀಯ ವೈದ್ಯಕೀಯ ಸಂಘ ಕುಂದಾಪುರ ಶಾಖೆಯ 21-22ನೇ ಸಾಲಿನ ನೂತನ ಪಧಾದಿಕಾರಿಗಳ ಪದಗ್ರಹಣ ಸಮಾರಂಭ ಇಲ್ಲಿನ ಹೋಟೆಲ್ ಶೆರೋನ್ನಲ್ಲಿ ನಡೆಯಿತು. ಕುಂದಾಪುರದ ಎಲುಬು ಕೀಲು ತಜ್ಞರಾದ ಡಾ. ಸಂದೀಪ ನಾವಡ ಅವರು ಸಂಸ್ಥೆಯ ಅಧ್ಯಕ್ಷರಾಗಿ, ಮನೋರೋಗ ತಜ್ಞ ಡಾ. ರವೀಂದ್ರ ಮನೋಳಿ ಕಾರ್ಯದರ್ಶಿಯಾಗಿ, ಮಕ್ಕಳ ತಜ್ಞ ಡಾ. ಗಣೇಶ್ ಪ್ರಸಾದ್ ಕಾಮತ್ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಪದಗ್ರಹಣ ಅಧಿಕಾರಿ ಡಾ. ಭಾಸ್ಕರಾನಂದ ಕುಮಾರ, ಡಾ. ಕೆ.ಎಸ್ ಕಾರಂತ್, ಡಾ. ಬಿ.ವಿ ಉಡುಪ, ಡಾ. ಶ್ರೀದೇವಿ ಕಟ್ಟೆ ಡಾ. ಪ್ರಮೀಳಾ ನಾಯಕ್ ಡಾ. ರೆನಿ ವಿಲ್ಸನ್ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ ಪಡೆದ ನಿವೃತ್ತ ಉಪನ್ಯಾಸಕ, ಪತ್ರಕರ್ತ ಎಸ್. ಜನಾರ್ದನ ಅವರನ್ನು ಸುರಭಿ ಬೈಂದೂರು ಸಂಸ್ಥೆಯಿಂದ ಭಾನುವಾರ ಸನ್ಮಾನಿಸಲಾಯಿತು. ಅವರ ಮರವಂತೆಯ ನಿವಾಸದಲ್ಲಿ ಸುರಭಿ ಅಧ್ಯಕ್ಷ ನಾಗರಾಜ್ ಪಿ. ಯಡ್ತರೆ ಹಾಗೂ ಕಾರ್ಯದರ್ಶಿ ಭಾಸ್ಕರ ಬಾಡ ಹಾಗೂ ಪದಾಧಿಕಾರಿಗಳೂಂದಿಗೆ ಸನ್ಮಾನಿಸಲಾಯಿತು.
