Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಮಂಗಳೂರು,ನ.23: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆ ಚುನಾವಣಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ ಮಂಗಳವಾರ ನಾಮಪತ್ರ ಸಲ್ಲಿಸಿದರು.  ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯಾಗಿರುವ ಡಾ. ರಾಜೇಂದ್ರ ಕೆ.ವಿ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಶಾಸಕ ಯು.ಟಿ ಖಾದರ್, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಬೈಂದೂರು ಮಾಜಿ ಶಾಸಕರುಗಳಾದ ಕೆ. ಗೋಪಾಲ ಪೂಜಾರಿ, ಶಕುಂತಲಾ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಉಡುಪಿ ಬೈಂದೂರು ಕಾಂಗ್ರೆಸ್ ಪ್ರಮುಖರಾದ ಮದನ್ ಕುಮಾರ್, ಎಸ್. ರಾಜು ಪೂಜಾರಿ, ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ರಘುರಾಮ್ ಶೆಟ್ಟಿ, ಎಸ್. ಪ್ರಕಾಶ್ವಂದ್ರ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಪ್ರಸ್ನನ್ ಕುಮಾರ್ ಶೆಟ್ಟಿ, ಮೋಹನ್ ಪೂಜಾರಿ, ನರಸಿಂಹ ದೇವಾಡಿಗ, ಶೇಖರ್ ಪೂಜಾರಿ ಸೇರಿದಂತೆ ವಿವಿಧ ಬ್ಲಾಕ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕು ಕೇಂದ್ರದ ರುಪೀ ಮಾಲ್ ಕಟ್ಟಡದಲ್ಲಿ ಪ್ರಧಾನ ಶಾಖೆಯನ್ನು ಹೊಂದಿರುವ ಪವರ್ ಜಿಮ್ ಮತ್ತು ಫಿಟ್‌ನೆಸ್ಸೆಂಟರ್ ಇದೀಗ ಉಪ್ಪುಂದದಲ್ಲಿ ತನ್ನ ಶಾಖೆ ತೆರೆಯುತ್ತಿದ್ದು ನ.24ರಂದು ಶುಭಾರಂಭಗೊಳ್ಳಲಿದೆ. ಉಪ್ಪುಂದ ಕಂಚಿಕಾನ್ ರಸ್ತೆಯಲ್ಲಿರುವ ವೈಶಾಲಿ ರೆಸ್ಟೋರೆಂಟ್ ಕಟ್ಟಡದಲ್ಲಿ ನ.24ರ ಬೆಳಿಗ್ಗೆ 10:30ಕ್ಕೆ ಪವರ್ ಜಿಮ್ ಮತ್ತು ಫಿಟ್‌ನೆಸ್ ಸೆಂಟರ್ ಉದ್ಘಾಟನೆಗೊಳ್ಳಲಿದೆ. ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಅವರು ಜಿಮ್ ಉದ್ಘಾಟಿಸಲಿದ್ದು, ವೈದ್ಯ ಡಾ. ಪ್ರವೀಣ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಟ್ಟಡ ಮಾಲಿಕ ಬಿ. ವಜುರಾಜ ಶೆಟ್ಟಿ, ರುಪೀ ಮಾಲ್ ಸಿಇಓ ರಾಜೀವ ಕುಮಾರ್, ಪತ್ರಕರ್ತ ಅರುಣ ಕುಮಾರ್, ಸುಮುಖ ಗ್ರೂಫ್ ಸಿಇಓ ಬಿ. ಎಸ್. ಸುರೇಶ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಜಿಮ್ ಮತ್ತು ಫಿಟ್‌ನೆಸ್ ಸೆಂಟರ್ ಮಾಲಿಕ ವಿಘ್ನೇಶ್ ಅವರು ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಯ್ಯಪ್ಪ ಸ್ವಾಮಿ ಭಕ್ತವೃಂದ ಮಾರಣಕಟ್ಟೆ ವತಿಯಿಂದ ಆದಿಗುರು ಶ್ರೀ ಶಂಕರಾಚಾರ್ಯ ಸ್ಥಾಪಿತ ಶ್ರೀಚಕ್ರ ಯಂತ್ರದ ಚಿತ್ರಪಟವನ್ನು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಅರ್ಪಿಸಲಾಯಿತು. ಈ ಸಂದರ್ಭ ಗುರುಸ್ವಾಮಿ ವಂಡಬಳ್ಳಿ ಜಯರಾಮ ಶೆಟ್ಟಿ, ದೇವಸ್ಥಾನದ ಆಡಳಿತ ಮೊಕ್ತೇಸರ ಸದಾಶಿವ ಶೆಟ್ಟಿ, ರಘುರಾಮ ಶೆಟ್ಟಿ, ನಾರಾಯಣ ಶೆಟ್ಟಿ ಮತ್ತು ಅಯ್ಯಪ್ಪ ಸ್ವಾಮಿ ಭಕ್ತವೃಂದದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಐಟಿ ಬಿಟಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ ನಾರಾಯಣ ಅವರು ಸೋಮವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಳದ ವತಿಯಿಂದ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಕಾರ್ಯನಿರ್ವಹಣಾಕಾರಿ ಎಸ್.ಪಿ.ಬಿ. ಮಹೇಶ್, ಸಹಾಯಕ ಕಾರ್ಯನಿರ್ವಹಣಾಕಾರಿ ಗೋವಿಂದ ನಾಯ್ಡ್, ವ್ಯವಸ್ಥಾಪನಾ ಸಮಿತಿ ಸದಸ್ಯೆ ರತ್ನ ರಮೇಶ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಜನರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ದೃಷ್ಟಿಯಿಂದ ಅಮ್ಮೆಂಬಲ ಸುಬ್ಬರಾವ್ ಪೈ ಅವರು 1906ರಲ್ಲಿ ಕೆನರಾ ಬ್ಯಾಂಕ್‌ನ್ನು ಸ್ಥಾಪನೆ ಮಾಡಿ ಲಕ್ಷಾಂತರ ಕುಟುಂಬಗಳಿಗೆ ನೆರವಾದರು. ಸೇವೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ ಕೆನರಾ ಬ್ಯಾಂಕ್ ಇಂದು ದೇಶದಲ್ಲಿ ೩ನೇ ಅತಿ ದೊಡ್ಡ ಬ್ಯಾಂಕ್ ಆಗಿ ಬೆಳೆದು ನಿಂತಿದೆ. ಬ್ಯಾಂಕುಗಳು ಕೇವಲ ಹಣಕಾಸಿನ ಹೃದಯ ಮಾತ್ರವಲ್ಲದೇ, ಮಾನವೀಯ ಹೃದಯದಿಂದಲೂ ಕಾರ್ಯನಿರ್ವಹಿಸಿ, ಜನಸಾಮಾನ್ಯರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಶ್ರಮಿಸಬೇಕೆಂದು ಹೇಳುತ್ತಿದ್ದ ಕೆನರಾ ಬ್ಯಾಂಕಿನ ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಅವರು ಬಡವರಿಗಾಗಿ ಬ್ಯಾಂಕ್ ತೆರೆದ ಕರ್ಮಯೋಗಿ ಎಂದು ಗಂಗೊಳ್ಳಿಯ ಉದ್ಯಮಿ ಎಚ್.ಗಣೇಶ ಕಾಮತ್ ಹೇಳಿದರು. ಕೆನರಾ ಬ್ಯಾಂಕ್‌ನ ಸಂಸ್ಥಾಪಕ ಅಮ್ಮೆಂಬಳ ಸುಬ್ಬ ರಾವ್ ಪೈ ಅವರ ಜನ್ಮ ದಿನಾಚರಣೆ ಅಂಗವಾಗಿ ಕೆನರಾ ಬ್ಯಾಂಕ್ ಗಂಗೊಳ್ಳಿ ಶಾಖೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಅಮ್ಮೆಂಬಳ ಸುಬ್ಬರಾವ್ ಪೈ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಕೆನರಾ ಬ್ಯಾಂಕ್ ಗಂಗೊಳ್ಳಿ ಶಾಖಾ ಪ್ರಬಂಧಕ ವಿಷ್ಣುಮೂರ್ತಿ, ಗಂಗೊಳ್ಳಿಯ ಉದ್ಯಮಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಜಿ.ಎಸ್.ಬಿ.ಮಹಿಳಾ ಮಂಡಳಿ ಗಂಗೊಳ್ಳಿ ಇವರ ವತಿಯಿಂದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ವಿದ್ಯಾಧಿರಾಜ ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಿತು. ದೇವಸ್ಥಾನದ ತಾಂತ್ರಿಕ ಜಿ.ವಸಂತ ಭಟ್ ಕಲ್ಯಾಣೋತ್ಸವದ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಎಸ್.ವೆಂಕಟರಮಣ ಆಚಾರ್ಯ, ಪುರೋಹಿತರಾದ ಜಿ.ವೇದವ್ಯಾಸ ಆಚಾರ್ಯ, ಜಿ.ರಾಘವೇಂದ್ರ ಆಚಾರ್ಯ ಮತ್ತು ಜಿ.ನಾರಾಯಣ ಆಚಾರ್ಯ ಕಲ್ಯಾಣೋತ್ಸವದ ಧಾರ್ಮಿಕ ಅನುಷ್ಠಾನದಲ್ಲಿ ಸಹಕರಿಸಿದರು. ಭಾಂಡ್ಯ ಶ್ರೀಕಾಂತ ಪೈ ದಂಪತಿ ಯಜಮಾನಿಕೆ ವಹಿಸಿದ್ದರು. ದೇವಸ್ಥಾನದ ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್, ಜಿ.ವೆಂಕಟೇಶ ನಾಯಕ್, ಜಿಎಸ್‌ಬಿ ಮಹಿಳಾ ಮಂಡಳಿ ಅಧ್ಯಕ್ಷೆ ನಿರ್ಮಲಾ ಡಿ.ನಾಯಕ್, ಕಾರ್ಯದರ್ಶಿ ವಿಜಯಶ್ರೀ ವಿ.ಆಚಾರ್ಯ, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಮಹಿಳಾ ಮಂಡಳಿ ಸದಸ್ಯರು, ಊರಿನ ಹತ್ತು ಸಮಸ್ತರು, ಭಜಕರು, ಸಮಾಜಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀದೇವರ ಪ್ರಸಾದ ಸ್ವೀಕರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಬ್ಲ್ಯಾಕ್ ಫಂಗಸ್‌ಗೆ ಔಷಧಿಯನ್ನು ಸಂಶೋಧಿಸಿದ ಸಂಶೋಧಕ ಗಂಗೊಳ್ಳಿ ಮೂಲದ ಬಿ.ಶ್ರೀಕಾಂತ ಪೈ ಅವರನ್ನು ಗಂಗೊಳ್ಳಿ ಜಿ.ಎಸ್.ಬಿ.ಮಹಿಳಾ ಮಂಡಳಿ ವತಿಯಿಂದ ಗಂಗೊಳ್ಳಿ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವಿದ್ಯಾಧಿರಾಜ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಜಿಎಸ್‌ಬಿ ಮಹಿಳಾ ಮಂಡಳಿ ಅಧ್ಯಕ್ಷೆ ನಿರ್ಮಲಾ ಡಿ.ನಾಯಕ್, ಕಾರ್ಯದರ್ಶಿ ವಿಜಯಶ್ರೀ ವಿ.ಆಚಾರ್ಯ, ದೇವಸ್ಥಾನದ ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ಜಿ.ವೇದವ್ಯಾಸ ಆಚಾರ್ಯ, ಜಿ.ವೆಂಕಟೇಶ ನಾಯಕ್, ಎಂ.ರಾಮಕೃಷ್ಣ ಪೈ ಅವರು ಬಿ.ಶ್ರೀಕಾಂತ ಪೈ ಅವರನ್ನು ಗಂಗೊಳ್ಳಿ ಜಿ.ಎಸ್.ಬಿ.ಮಹಿಳಾ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಿ ಶುಭ ಹಾರೈಸಿದರು. ಸುರೇಖಾ ಎಸ್.ಪೈ, ಜಿಎಸ್‌ಬಿ ಮಹಿಳಾ ಮಂಡಳಿ ಪದಾಧಿಕಾರಿಗಳು, ಸದಸ್ಯರು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಶ್ರಮ ವಹಿಸಿ ಶ್ರದ್ಧೆಯಿಂದ ಕೆಲಸ ಮಾಡಿದರೆ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಬೋಜೇಗೌಡ ತಿಳಿಸಿದರು ಆಳ್ವಾಸ ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರವೇಶಾತಿ ಕಾರ್ಯಕ್ರಮ – ಆಳ್ವಾಸ್ ಆಗಮನ ೨೦೨೧-೨೨ರ ಸರಣಿ ಕಾರ್ಯಕ್ರಮದ ಏಳನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣದಿಂದ ಇಂದು ಸಮಾಜದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಶಿಕ್ಷಣದ ನೆಲೆಯಲ್ಲಿ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಿದೆ. ಜೀವನದಲ್ಲಿ ಸಂಪ್ರದಾಯಿಕ ಶಿಕ್ಷಣದ ಜತೆಗೆ ಜೀವನ ಶಿಕ್ಷಣವನ್ನು ನಮ್ಮ ದಿನ ನಿತ್ಯದ ಅನುಭವದಿಂದ ಕಲಿಯುವುದು ಮುಖ್ಯ. ದುರಾದೃಷ್ಟವಶಾತ್, ಮನುಷ್ಯ ಇಂದು ಬುದ್ದಿವಂತನಾದಂತೆ ಸಂಬಂಧಗಳು ಸಹಕಾರ ಗುಣ, ಅನ್ಯೋನ್ಯತೆಯ ಭಾವಗಳು ನಮ್ಮಲ್ಲಿ ಕ್ಷೀಣಿಸುತ್ತಾ ಸಾಗಿದೆ. ಪ್ರೀತಿ ವಾತ್ಸಲ್ಯ ನಮ್ಮ ನಡುವೆ ಉಳಿದಿಲ್ಲ. ಬುದ್ದಿಯಿಂದ ಹಣವನ್ನು ಸಂಪಾದಿಸಬಹುದೇ ಹೊರತು, ಹಣದಿಂದ ಬುದ್ದಿಯನ್ನು ಸಂಪಾದಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ನಾವೆಲ್ಲ ಅರಿಯಬೇಕು. ಮನುಷ್ಯತ್ವವನ್ನು ಕಳೆದುಕೊಂಡು ಎಷ್ಟೂ ವಿದ್ಯೆಯನ್ನು ಸಂಪಾದಿಸಿದರೂ ಅಪ್ರಯೋಜಕ ಎಂದರು. ರಾಷ್ಟ್ರೀಯ ಶಿಕ್ಷಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನು ಬೆನ್ನಟ್ಟಿ ನಿರಂತರ ಪ್ರಯತ್ನ ನಡೆಸಿದರೆ ಅಸಾಧ್ಯವಾದುದು ಯಾವುದೂ ಇಲ್ಲ. 38 ವಿದ್ಯಾರ್ಥಿಗಳಲ್ಲಿ 34 ವಿದ್ಯಾರ್ಥಿಗಳು ಸಿಎಸ್ ಫೌಂಡೇಶನ್ (ಸಿಎಸ್ಇಇಟಿ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದು ಸುಲಭದ ಮಾತಲ್ಲ ವಿದ್ಯಾರ್ಥಿಗಳನ್ನು ಈ ಮಟ್ಟಿಗೆ ಸಿದ್ಧಗೊಳಿಸಿದ ಶಿಕ್ಷ ಪ್ರಭಾ ಅಕಾಡೆಮಿ ಮತ್ತು ಸಾಧಕ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದು ಸಿಎಸ್ ರಮ್ಯಾ ರಾವ್ ಹೇಳಿದರು. ಅವರು ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸಿಎ/ ಸಿಎಸ್ ತರಬೇತಿ ಸಂಸ್ಥೆಯಲ್ಲಿ ಸಿಎಸ್ ಪರೀಕ್ಷೆ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನುಡಿದರು. ಇಂದಿನ ದಿನಮಾಸದಲ್ಲಿ ಸಿಎಸ್ ಕೋರ್ಸುಗಳಿಗೆ ಬೇಡಿಕೆ ಜಾಸ್ತಿಯಾಗಿದ್ದು ವಿಶ್ವದಾದ್ಯಂತ ಅವಕಾಶಗಳು ಕೈ ಬೀಸಿ ಕರೆಯುತ್ತಿದೆ ಕುಂದಾಪುರದಂತಹ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ಜೊತೆಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವುದು ವಿದ್ಯಾರ್ಥಿಗಳ ಇಂತಹ ಸಾಧನೆಗೆ ಪ್ರೇರಕವಾಗಿದೆ ಎಂದರು. ಸಂಸ್ಥೆಯ ಮುಖ್ಯಸ್ಥರಾದ ಪ್ರತಾಪ್ ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳ ಸಾಧನೆ ಮೆಚ್ಚುವಂತದ್ದು, ಮುಂದಿನ ಹಂತದ ಪರೀಕ್ಷೆಯಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಮನುಷ್ಯರಲ್ಲಿ ಜಾತಿ, ಮತ, ಭೇದ ತೊರೆದು ಸಮಾನತೆ ಸಾರುವ ಕನಕದಾಸರ ಚಿಂತನೆ ಮತ್ತು ತತ್ವಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದ್ದು,ಸಾರ್ವಕಾಲಿಕ ಸತ್ಯ ಆಗಿವೆ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಹೇಳಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ನಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ನಡೆದ ಶ್ರೀ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ, ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಅಂದಿನ ಕಾಲದಲ್ಲಿದ್ದ ಜಾತಿ ಭೇದ ಭಾವಗಳ ಕುರಿತು ಕನಸದಾಸರು ತಮ್ಮ ಕೀರ್ತನೆಗಳಲ್ಲಿ ತಿಳಿಸಿದ್ದು, ಇಂದಿಗೂ ಸಮುದಾಯಗಳಲ್ಲಿ ಈ ಅಸಮಾನತೆ ಕಂಡು ಬರುತ್ತಿದ್ದು, ಕನಕದಾಸರ ಚಿಂತನೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಸಮಾಜದಲ್ಲಿ ಅಸಮಾನತೆ ತೊಡೆಯಲು ಸಾಧ್ಯವಿದೆ. ಯಾವುದೇ ವ್ಯಕ್ತಿ ಅಹಂಕಾರದಿAದ ಶ್ರೇಷ್ಠನಾಗಲು ಸಾಧ್ಯವಿಲ್ಲ ಎಂಬುದನ್ನು ತಮ್ಮ ರಾಮ ಧಾನ್ಯ ಚರಿತ್ರೆ ಕೃತಿಯ ಮೂಲಕ ಮಾನವಕುಲಕ್ಕೆ ತಿಳಿಸಿದ್ದಾರೆ ಎಂದ ಜಿಲ್ಲಾಧಿಕಾರಿ ಕೂರ್ಮಾರಾವ್, ಉಡುಪಿಗೂ ಕನಕದಾಸರಿಗೂ ಅವಿನಾಭಾವ ಸಂಬಧವಿದೆ ಎಂದರು. ಕನಕದಾಸರ ಜೀವನ ಮತ್ತು ವ್ಯಕ್ತಿತ್ವದ ಕುರಿತು…

Read More