ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ಖಂಬದಕೋಣೆಯಲ್ಲಿ ಹಲವು ವರ್ಷಗಳಿಂದ ವೈದ್ಯ ವೃತ್ತಿ ನಿರತರಾಗಿದ್ದ ಗುಜ್ಜಾಡಿ ಮೂಲದ ಡಾ. ಪ್ರಕಾಶ ಕೊಡಂಚ (75) ಕೆಲಕಾಲದ ಅನಾರೋಗ್ಯದಿಂದ ಸೋಮವಾರ ರಾತ್ರಿ ನಿಧನರಾದರು. ವೈದ್ಯ ವೃತ್ತಿಯ ಜತೆಗೆ ಸಾಮಾಜಿಕ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದರು. ಅವರ ಪುತ್ರರಾದ ಪ್ರತಾಪ ಕೊಡಂಚ ಅಮೇರಿಕೆಯಲ್ಲಿ ಇಂಜಿನಿಯರ್ ಆಗಿ, ಡಾ. ಪ್ರಭಾತ ಕೊಡಂಚ ಆಸ್ಟ್ರೇಲಿಯಾದಲ್ಲಿ ವೈದ್ಯರಾಗಿ ದುಡಿಯುತ್ತಿದ್ದಾರೆ. ಲಾಕ್‌ಡೌನ್ ಕಾರಣದಿಂದ ಅವರಿಗೆ ಬರಲಾಗದ್ದರಿಂದ ಬಂದು-ಮಿತ್ರರು ಮಂಗಳವಾರ ಅವರ ಅಂತಿಮ ಸಂಸ್ಕಾರ ನೆರವೇರಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಮಾಜಿ ಶಾಸಕಿ ವಿನ್ನಿಫ್ರೆಡ್ ಫರ್ನಾಂಡಿಸ್ (92) ಮಂಗಳವಾರ ಮಧ್ಯಾಹ್ನ ಚರ್ಚ್ ರಸ್ತೆಯ ಸ್ವಗೃಹದಲ್ಲಿ ನಿಧನರಾದರು. ವಿನ್ನಿಫ್ರೆಡ್ ಫರ್ನಾಂಡೀಸ್ ಅವರು ಪ್ರಜಾ ಸೋಶಿಯಲಿಸ್ಟ್ ಪಕ್ಷದ ಮೂಲಕ ರಾಜಕೀಯ ರಂಗ ಪ್ರವೇಶಿಸಿ ಪುರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಎರಡು ಬಾರಿ ಕುಂದಾಪುರ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ನಂತರ ವಿಧಾನಪರಿಷತ್ ಸದಸ್ಯೆಯಾಗಿಯೂ ಆಗಿದ್ದರು. ಮೃತರು ಮೂವರು ಪುತ್ತಿಯರು ಮತ್ತು ಮೂವರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆಶಾ ಕಾರ್ಯಕರ್ತೆಗೆ ಬೆದರಿಕೆ ಹಾಕಿದ ಆರೋಪದಡಿ ಕುಂದಾಪುರ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಕುಂದಾಪುರ ಮದ್ದುಗುಡ್ಡೆ ನಿವಾಸಿ ಸಂದೀಪ್ ಮೇಸ್ತ (37) ಹಾಗೂ ಖಾರ್ವಿಕೇರಿ ನಿವಾಸಿ ಮಹೇಶ್ ಖಾರ್ವಿ (38) ಬಂಧಿತರು. ಸಂದೀಪ್ ಮೇಸ್ತ ಬೆಂಗಳೂರಿನಿಂದ ಬಂದಿದ್ದರಿಂದ 28 ದಿನಗಳ ಕಾಲ ಎಲ್ಲಿಗೂ ತೆರಳದೇ ಮನೆಯಲ್ಲಿಯೇ ಇರುವಂತೆ ಮದ್ದುಗುಡ್ಡೆ ನಿವಾಸಿ ಆಶಾ ಕಾರ್ಯಕರ್ತೆ ಲಕ್ಷ್ಮೀ ಎಂಬುವವರು ಸೂಚಿಸಿದ್ದರು. ಆದರೆ ಆರೋಪಿ ಕ್ವಾರಂಟೈನ್ ಅವಧಿಯಲ್ಲಿಯೂ ತಿರುಗಾಡುವುದು ಗಮನಕ್ಕೆ ಬಂದಿತ್ತು. ಇದನ್ನು ಒಂದೆರಡು ಭಾರಿ ಆಶಾ ಕಾರ್ಯಕರ್ತೆಯೇ ಪ್ರಶ್ನಿಸಿದ್ದರು. ಆ ಸಿಟ್ಟಿಗೆ ಸಂದೀಪ್ ಮೇಸ್ತನ ಜೊತೆಗೆ ಬೈಕಿನಲ್ಲಿ ಬಂದ ಆತನ ಸ್ನೇಹಿತ ಮಹೇಶ್ ಖಾರ್ವಿ ಆಶಾ ಕಾರ್ಯಕರ್ತೆಗೆ ಹೀಗೆ ಪ್ರಶ್ನಿಸುತ್ತಿದ್ದರೆ ಬದುಕಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಈ ಬಗ್ಗೆ ಆಶಾ ಕಾರ್ಯಕರ್ತೆ ನೀಡಿದ ದೂರಿನ ಅನ್ವಯ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ./ ಇದನ್ನೂ ಓದಿ: ► ತೆಕ್ಕಟ್ಟೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮುಂಬಯಿನಿಂದ ಮಂಡ್ಯಕ್ಕೆ ಸರಕು ಸಾಗಾಟ ವಾಹನದಲ್ಲಿ ತೆರಳಿದ್ದ ಕೋವಿಡ್ 19 ಸೋಂಕಿತ ವ್ಯಕ್ತಿ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಪೆಟ್ರೋಲ್ ಬಂಕಿಗೆ ತೆರಳಿರುವುದು ದೃಢಪಟ್ಟಿದ್ದು, ಬಂಕ್ ಸೀಲ್ ಡೌನ್ ಮಾಡಿ ಹಲವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಸೋಂಕಿತ ವ್ಯಕ್ತಿ ಪೆಟ್ರೋಲ್ ಬಂಕಿನಲ್ಲಿ ಸ್ನಾನ ಮಾಡಿ ಅಲ್ಲಿಯೇ ಕೆಲಗಂಟೆಗಳ ಕಾಲ ಉಳಿದುಕೊಂಡು ಬಳಿಕ ತೆರಳಿರುವುದು ತೆಕ್ಕಟ್ಟೆ ಬಂಕಿನ ಸಿಸಿ ಟಿವಿ ಪರಿಶೀಲನೆ ವೇಳೆ ಪತ್ತೆಯಾಗಿದೆ. ತಡರಾತ್ರಿಯ ತನಕ ನಡೆದ ತಪಾಸಣೆ ನಡೆದಿತ್ತು. ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್ ಡೌನ್: ತೆಕ್ಕಟ್ಟೆ ಪೆಟ್ರೋಲ್ ಬಂಕಿನಲ್ಲಿಯೇ ಕೊರೋನಾ ಸೋಂಕಿತ ವ್ಯಕ್ತಿ ಕೆಲ ಗಂಟೆ ತಂಗಿರುವುದು ದೃಢಪಡುತ್ತಿದ್ದಂತೆಯೇ ಅಧಿಕಾರಿಗಳು ಬಂಕ್ ಸೀಲ್ ಡೌನ್ ಮಾಡಿದ್ದಾರೆ. ಬಂಕಿನ ಮಾಲಕ ಸೇರಿಂದತೆ ಏಳು ಮಂದಿಯನ್ನು ಉಡುಪಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇವರ ಜೊತೆಗೆ ಸಾಸ್ತಾನ ಟೋಲ್ ದಾಟಿ ಹೋಗಿರುವುದರಿಂದ ಟೋಲ್ ಪಡೆಯಲು ಅಂದು ಕರ್ತವ್ಯದಲ್ಲಿದ್ದ ಸಿಬ್ಬಂಧಿಗಳು ಸೇರಿ ಏಳು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಕುಂದಾಪುರ ತಾಲೂಕು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮುಂಬಯಿನಿಂದ ಮಂಡ್ಯಕ್ಕೆ ಸರಕು ಸಾಗಾಟ ವಾಹನದಲ್ಲಿ ತೆರಳಿದ್ದ ವ್ಯಕ್ತಿಗೆ ಕೋವಿಡ್ 19 ಸೋಂಕು ತಗಲಿರುವುದು ಪತ್ತೆಯಾಗಿದೆ. ಆತ ತ್ರಾಸಿಯ ಪೆಟ್ರೋಲ್ ಬಂಕ್ನಲ್ಲಿ ಸ್ನಾನ ಮಾಡಿದ್ದೆ ಎನ್ನುವ ಮಾಹಿತಿ ಹಂಚಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ತ್ರಾಸಿಯ ಪೆಟ್ರೋಲ್ ಬಂಕ್ನಲ್ಲಿ ಸಿಸಿಟಿವಿ ಪರಿಶೀಲನೆ ನಡೆಸಲಾಗಿದ್ದು, ಈವರೆಗಿನ ತನಿಕೆಯಲ್ಲಿ ಅದು ದೃಢಪಟ್ಟಿಲ್ಲ. ಬಂಕಿನಲ್ಲಿದ್ದ ಸಿಸಿ ಟಿವಿ ಪರಿಶೀಲನೆ: ಮುಂಬೈಯಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ಸರಕು ಸಾಗಾಟ ವಾಹನದಲ್ಲಿ ಎ.20ರಂದು ಮಂಬೈನಿಂದ ಹೊರಟು ಎ. 21 ರಂದು ತ್ರಾಸಿಯಲ್ಲಿರುವ ಪೆಟ್ರೋಲ್ ಬಂಕ್ನಲ್ಲಿ ವಾಹನ ನಿಲ್ಲಿಸಿದ್ದಾಗ ಅಲ್ಲಿ ಸ್ನಾನ ಮಾಡಿ, ಅಲ್ಲಿಯೇ ಸಮೀಪ ಊಟ ಮಾಡಿ ಹೋಗಿರುವುದಾಗಿ ಹೇಳಿಕೊಂಡಿದ್ದ ಎನ್ನಲಾಗಿದೆ. ಲಾರಿ ಎ. 21ರ ಸಂಜೆ 4:55ಕ್ಕೆ ಶಿರೂರು ಟೋಲ್‌ಗೇಟ್, 5:19ಕ್ಕೆ ತ್ರಾಸಿ ಪೆಟ್ರೋಲ್ ಬಂಕ್ ಎದುರು ಪಾಸಾಗಿದ್ದು, ಬೆಳಿಗ್ಗೆ 3 ಗಂಟೆ ಸುಮಾರಿಗೆ ಸಾಸ್ತಾನ ಟೋಲ್ ಪಾಸ್ ಆಗಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಗಂಗೊಳ್ಳಿ ಪಿಎಸ್ಐ ಭೀಮಾಶಂಕರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರೋನಾ ತಡೆಗಟ್ಟುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರ ಶ್ರಮ ಬಹಳ ಮುಖ್ಯವಾದುದು. ಅವರು ಸೈನಿಕರಂತೆ ಕೆಲಸ ಮಾಡಿದ್ದಾರೆ. ಅವರ ಕಾರ್ಯ ಎಲ್ಲರೂ ಮೆಚ್ಚುವಂತದ್ದು. ಅವರೆನ್ನೆಲ್ಲ ನಾವು ಗೌರವಿಸಬೇಕು. ಹಾಗೇ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಸಿಬ್ಬಂದಿಗಳು ಭಯ ತೊರೆದು ಕೆಲಸ ಮಾಡಿದ್ದಾರೆ. ಅವರೆಲ್ಲ ಅಭಿನಂದನಾರ್ಹರು ಎಂದು ಕಾವ್ರಾಡಿ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಸದಾನಂದ ಬಳ್ಕೂರು ಹೇಳಿದರು. ಅವರು ಕಂಡ್ಲೂರು ಪಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತರುಗಳಿಗೆ ಗೌರವ ಸಲ್ಲಿಸಿ, ಗೌರವಧನ ವಿತರಿಸಿ, ವೈದ್ಯಾಧಿಕಾರಿ ಡಾ| ಲತಾರವರನ್ನು ಸನ್ಮಾನಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ರಾಜು ಪೂಜಾರಿ, ಚಂದ್ರ ಹೆಗ್ಡೆ, ಜಿ. ಸೀತಾರಾಮ ಶೆಟ್ಟಿ, ದೇವಾನಂದ ಶೆಟ್ಟಿ, ಜ್ಯೋತಿ ಪುತ್ರನ್, ಎಂ. ಸುಧಾಕರ ಹೆಗ್ಡೆ, ಭಾಸ್ಕರ ಶೆಟ್ಟಿ, ಕೆ. ಚಂದ್ರ, ರಾಜೇಂದ್ರ ಕುಲಾಲ್, ಸುರೇಶ ಕುಮಾರ್ ಉಪಸ್ಥಿತರಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಲತಾ ನಾಯಕ್ ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೋನಾ ತಡೆಗಟ್ಟಬೇಕೆಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿನ ಪ್ರತಿ ಮನೆಗೆ ಭೇಟಿ ನೀಡಿ, ಶೀತ ಜ್ವರ ಇರುವವರ ವಿವರಗಳನ್ನು , ಬಿ.ಎಲ್.ಓ ಗಳ ಮೂಲಕ ಸಂಗ್ರಹಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಸೂಚಿಸಿದ್ದಾರೆ. ಅವರು ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಕುರಿತು ಕೈಗೊಂಡಿರುವ ಕ್ರಮಗಳ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಪ್ರಸ್ತುತ ಕೊರೋನಾ ಪ್ರಕರಣ ಇಲ್ಲವಾಗಿದ್ದು, ಆದರೆ ಮುಂಜಾಗ್ರತೆಯಾಗಿ ಜಿಲ್ಲೆಯಾದ್ಯಂತ ಶೀತ ಜ್ವರ ಇರುವವರ ಕುರಿತು ಮನೆ ಮನೆಗಳ ವ್ಯಾಪಕ ತಪಾಸಣೆ ನಡೆಸುವಂತೆ ಸೂಚಿಸಿದ ಮಹೇಶ್ವರ ರಾವ್, ಈ ಕುರಿತಂತೆ ಜಿಲ್ಲೆಯ ಎಲ್ಲಾ ಬಿಎಲ್ ಓ ಗಳನ್ನು ಬಳಸಿಕೊಳ್ಳುವಂತೆ ಹಾಗೂ ತಪಾಸಣೆ ನಡೆಸುವ ಕುರಿತಂತೆ ಅವರಿಗೆ ಅಗತ್ಯ ತರಬೇತಿ ನೀಡುವಂತೆ ಹಾಗೂ ಮಾಹಿತಿ ದಾಖಲಿಸಲು ಅಗತ್ಯ ನಮೂನೆಯನ್ನು ಸಿದ್ದಪಡಿಸಿ ನೀಡಿ, ಮುಂದಿನ ೩ ದಿನದಲ್ಲಿ ಎಲ್ಲಾ ಬಿ.ಎಲ್.ಓ ಗಳಿಗೆ ತರಬೇತಿ ನೀಡುವ ಕಾರ್ಯಕ್ರಮ ಮುಗಿಸುವವಂತೆ ಸೂಚಿಸಿದರು. ಜಿಲ್ಲೆಯ ಜನತೆ ತಮಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಶ್ರೀ ಜಟ್ಟಿಗೇಶ್ವರ ಮತ್ತು ಸಹಪರಿವಾರ ದೈವಗಳ ಸೇವಾಸಮಿತಿ (ರಿ) ಮತ್ತು ಶ್ರೀ ಜಟ್ಟಿಗೇಶ್ವರ ಯುವಕ ಮಂಡಳಿ ಬಪ್ಪನಬೈಲು ಇವರ ಜಂಟಿ ಸಹಯೋಗದಲ್ಲಿ ಬಪ್ಪನಬೈಲಿನ ಜಟ್ಟಿಗೇಶ್ವರ ದೇವರನ್ನು ನಂಬಿಕೊಂಡು ಬಂದಿರುವ ಸುಮಾರು ೯೩ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್‌ನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ತಾನದ ಆಡಳಿತ ಮಂಡಳಿಯ ಗೌರವಾದ್ಯಕ್ಷರು, ಅಧ್ಯಕ್ಷರು, ಕಾರ್ಯದರ್ಶಿ, ಯುವಕ ಮಂಡಲದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಏರಡೂ ಮಂಡಳಿಯ ಸರ್ವಸದಸ್ಯರು ಮತ್ತು ಊರಿನ ನಾಗರಿಕರು ಹಾಜರಿದ್ದರು. ಆಹಾರ ಸಾಮಾಗ್ರಿ ವಿತರಿಸಲು ಧನ ಸಹಾಯ ಮಾಡಿದ ಊರಿನ ಮಹನೀಯರನ್ನು ಅಭಿನಂದಿಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಕಳೆದ ಒಂದು ತಿಂಗಳಿನಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನ ಮನೆಯಲ್ಲಿದ್ದರೆ, ಆಶಾ ಕಾರ್ಯಕರ್ತರು ಬೀದಿಯಲ್ಲಿದ್ದಾರೆ. ಕೋವಿಡ್-19 ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಸಮಗ್ರವಾಗಿ ತೊಡಗಿಸಿಕೊಂಡಿದ್ದಾರೆ. ಪ್ರತಿ ಗ್ರಾಮದಲ್ಲಿಯೂ ಸುಡುಬಿಸಿಲಿನಲ್ಲಿಯೂ ಜಾಗೃತಿಯಲ್ಲಿ ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರ ಕಾರ್ಯವೈಖರಿ ಶ್ಲಾಘನೀಯವಾದುದು. ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಅವರ ಆಶಯದಂತೆ ಆಶಾ ಕಾರ್ಯಕರ್ತೆಯರ ಸೇವೆಯನ್ನು ಗುರುತಿಸಿ ಅವರನ್ನು ಗೌರವಿಸಲಾಗುತ್ತಿದೆ ಎಂದು ಎಸ್.ಸಿ.ಡಿ.ಸಿಸಿ ಬ್ಯಾಂಕಿನ ನಿರ್ದೇಶಕ ಎಸ್. ರಾಜು ಪೂಜಾರಿ ಹೇಳಿದರು. ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು. ತಾಲೂಕು ಪಂಚಾಯತ್ ಸದಸ್ಯ ಸುರೇಂದ್ರ ಖಾರ್ವಿ, ಹೆಮ್ಮಾಡಿ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ರಾಜು ದೇವಾಡಿಗ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗಂಗೊಳ್ಳಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಾಕ್‌ಡೌನ್ ಸಂದರ್ಭ ಅಗತ್ಯ ನೆರವು ನೀಡುವ ಸಲುವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಅವರು ಆರಂಭಿಸಿದ ಮೊಬೈಲ್ ಹೆಲ್ಪ್ ಡೆಸ್ಕ್ ಸೇವೆ ಸಂಕಷ್ಟದಲ್ಲಿರುವವರಿಗೆ ವಿವಿಧ ಹಂತದಲ್ಲಿ ಉಪಯೋಗವಾಗುತ್ತಿದೆ. ಬೈಂದೂರು ತಾಲೂಕು ವ್ಯಾಪ್ತಿಯ ಮುದೂರು ಗ್ರಾಮದಲ್ಲಿ ವಾಸವಿದ್ದ ಕುಟುಂಬದ ಮಗುವಿಗೆ ಪೀಡ್ಸ್ ಕಾಯಿಲೆಯಿದ್ದು, ಶಿವಮೊಗ್ಗ ಮಾನಸಾ ಆಸ್ಪತ್ರೆಯಿಂದ ತುರ್ತಾಗಿ ತರಬೇಕಾಗಿದ್ದ ಔಷಧಿಗಾಗಿ ಮುದೂರು ವಿ.ಎ ವೀರೇಶ್ ಅವರ ಮೂಲಕ ಬೇಡಿಕೆ ಇಟ್ಟಿದ್ದು, ತಕ್ಷಣ ಸ್ಪಂದಿಸಿದ ಹೆಲ್ಪ್‌ಡೆಸ್ಕ್ ತಂಡ ಶಿವಮೊಗ್ಗ ಆಸ್ಪತ್ರೆಯಿಂದ ಸ್ಥಳೀಯ ಸರ್ವೆಯರ್ ಪ್ರವೀಣ್ ಕುಮಾರ್ ಅವರ ಮೂಲಕ ನಿಟ್ಟೂರು ತನಕ ಹಾಗೂ ನಿಟ್ಟೂರಿನಿಂದ ಯಡ್ತರೆ ವಿ.ಎ ಮಂಜು ಹಾಗೂ ಸಂಸದರ ಆಪ್ತ ಸಹಾಯಕ ಶಿವಕುಮಾರ್ ಅವರು ಮುದೂರಿಗೆ ತಂದು ವ್ಯಕ್ತಿಯ ಮನೆಗೆ ತೆರಳಿ ಉಚಿತವಾಗಿ ಔಷಧಿಯನ್ನು ತಲುಪಿಸಿದರು. ಹೆಲ್ಪ್ ಡೆಸ್ಕ್‌ಗೆ ಆಹಾರ ಸಾಮಾಗ್ರಿ, ಔಷಧಿ ಸೇರಿದಂತೆ ವಿವಿಧ ಸಹಾಯಕ್ಕಾಗಿ ಕರೆ ಬರುತ್ತಿದ್ದು, ಆದ್ಯತೆಯಂತೆ ಸ್ಪಂದಿಸಲಾಗುತ್ತಿದೆ ಎಂದು ಸಂಸದ ಮೊಬೈಲ್ ಹೆಲ್ಪ್‌ಡೆಸ್ಕ್…
