ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆಶಾ ಕಾರ್ಯಕರ್ತೆಗೆ ಬೆದರಿಕೆ ಹಾಕಿದ ಆರೋಪದಡಿ ಕುಂದಾಪುರ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಕುಂದಾಪುರ ಮದ್ದುಗುಡ್ಡೆ ನಿವಾಸಿ ಸಂದೀಪ್ ಮೇಸ್ತ (37) ಹಾಗೂ ಖಾರ್ವಿಕೇರಿ ನಿವಾಸಿ ಮಹೇಶ್ ಖಾರ್ವಿ (38) ಬಂಧಿತರು.
ಸಂದೀಪ್ ಮೇಸ್ತ ಬೆಂಗಳೂರಿನಿಂದ ಬಂದಿದ್ದರಿಂದ 28 ದಿನಗಳ ಕಾಲ ಎಲ್ಲಿಗೂ ತೆರಳದೇ ಮನೆಯಲ್ಲಿಯೇ ಇರುವಂತೆ ಮದ್ದುಗುಡ್ಡೆ ನಿವಾಸಿ ಆಶಾ ಕಾರ್ಯಕರ್ತೆ ಲಕ್ಷ್ಮೀ ಎಂಬುವವರು ಸೂಚಿಸಿದ್ದರು. ಆದರೆ ಆರೋಪಿ ಕ್ವಾರಂಟೈನ್ ಅವಧಿಯಲ್ಲಿಯೂ ತಿರುಗಾಡುವುದು ಗಮನಕ್ಕೆ ಬಂದಿತ್ತು. ಇದನ್ನು ಒಂದೆರಡು ಭಾರಿ ಆಶಾ ಕಾರ್ಯಕರ್ತೆಯೇ ಪ್ರಶ್ನಿಸಿದ್ದರು. ಆ ಸಿಟ್ಟಿಗೆ ಸಂದೀಪ್ ಮೇಸ್ತನ ಜೊತೆಗೆ ಬೈಕಿನಲ್ಲಿ ಬಂದ ಆತನ ಸ್ನೇಹಿತ ಮಹೇಶ್ ಖಾರ್ವಿ ಆಶಾ ಕಾರ್ಯಕರ್ತೆಗೆ ಹೀಗೆ ಪ್ರಶ್ನಿಸುತ್ತಿದ್ದರೆ ಬದುಕಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಈ ಬಗ್ಗೆ ಆಶಾ ಕಾರ್ಯಕರ್ತೆ ನೀಡಿದ ದೂರಿನ ಅನ್ವಯ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ./
ಇದನ್ನೂ ಓದಿ:
► ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್ ಡೌನ್: ಒಟ್ಟು 14 ಮಂದಿಗೆ ಕ್ವಾರಂಟೈನ್ – https://kundapraa.com/?p=37169 .