Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜನರ ವಿಶ್ವಾಸ ಗಳಿಸುವುದರಲ್ಲಿ ಹಣಕಾಸು ಸಂಸ್ಥೆಗಳ ಯಶಸ್ಸು ಅಡಗಿದೆ. ಮೂರು ದಶಕದ ಇತಿಹಾಸ ಹೊಂದಿರುವ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಇಂದು ಜನರ ವಿಶ್ವಾಸ ಗಳಿಸಿ ಮುನ್ನಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದು ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ಅ| ವಂ| ಸ್ಟ್ಯಾನಿ ತಾವ್ರೊ ಹೇಳಿದರು. ಭಾನುವಾರ ಯಡ್ತರೆಯಲ್ಲಿ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ ಇದರ ಬೈಂದೂರು ಶಾಖೆಯ ಸ್ವಂತ ಕಟ್ಟಡ ಉದ್ಘಾಟನೆ ಹಾಗೂ ಸ್ಥಳಾಂತರ ನೆರವೇರಿಸಿ ಮಾತನಾಡಿ ಸಂಸ್ಥೆಯ ಬೆಳೆಯುವುದರೊಂದಿಗೆ ಜನರಿಗೆ ನಗುಮೊಗದ ಸೇವೆ ನೀಡುವುದು ಅತಿ ಅಗತ್ಯ. ಮನೆಯಾಗಲಿ, ಸಂಸ್ಥೆಯಾಗಲಿ ಸ್ವಂತದ್ದಾಗಿರಲು ಎಲ್ಲರೂ ಬಯಸುತ್ತಾರೆ ಅದರಂತೆ ಬೈಂದೂರು ಶಾಖೆಯು 23 ವರ್ಷಗಳ ಬಳಿಕ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದೆ. ಇದರೊಂದಿಗೆ ಜನರಿಗೆ ಉತ್ತಮ ಸೇವೆ ನೀಡಲಿ ಎಂದರು. ಬೈಂದೂರು ಹೋಲಿ ಕ್ರಾಸ್ ಚರ್ಚ್ ಧರ್ಮಗುರುಗಳಾದ ವಂ| ವಿನ್ಸೆಂಟ್ ಕುವೆಲ್ಲೋ ಆಶೀರ್ವದಿಸಿ, ಹೊಸ ಕಟ್ಟಡ ನಿರ್ಮಾಣಗೊಳ್ಳುವುದರ ಜೊತೆಗೆ ಸಂಸ್ಥೆ ಈ ಭಾಗದಲ್ಲಿ ಮತ್ತಷ್ಟು ಖ್ಯಾತಿಗಳಿಸಲಿ, ಎಲ್ಲರ ಸಹಕಾರದಿಂದ…

Read More

ಸಾಧಿಸುವ ಶ್ರದ್ಧೆಯಿದ್ದರೆ ಸಾಧನೆ ಸಾಧ್ಯವಿದೆ: ಸದಾಶಿವ್ ಆರ್. ಗವರೋಜಿ ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ.ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಯ ಉದ್ಘಾಟನೆಗೊಂಡಿತು. ಕುಂದಾಪುರ ಪೋಲಿಸ್ ಉಪನಿರೀಕ್ಷಕರಾದ ಸದಾಶಿವ್ ಆರ್. ಗವರೋಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರಿಕ್ಷೀಕೆ ತರಬೇತಿ ಅಗತ್ಯವಾಗಿದ್ದು ಅದನ್ನು ಬಳಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ನೌಕರಿ ಪಡೆಯಿರಿ. ಒಳ್ಳೆಯ ಗುರಿ ನಿಮ್ಮದಿರಲಿ, ಅದನ್ನು ಸಾಧಿಸುವ ಶ್ರದ್ಧೆಯಿರಲಿ, ಖಂಡಿತ ನೀವು ಸಾಧಿಸುತ್ತಿರಿ ಎಂದರು. ನಂತರ ಮಾರತಹಳ್ಳಿ ಠಾಣಾ ಉಪನಿರೀಕ್ಷಕರಾದ ಅನಿತಾ ಕೆ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿಯವರು ಮಾತನಾಡಿ ಎಸ್ಡಿಎ, ಎಫ್ಡಿಎ, ಬ್ಯಾಂಕಿಂಗ್ ಹುದ್ದೆಗಳು, ಪಿಡಿಓ, ಪೋಲಿಸ್ ಇಲಾಖೆ, ಅಂಚೆ ಇಲಾಖೆ, ಆರೋಗ್ಯ, ಹೀಗೆ ಎಲ್ಲಾ ತರಹದ ಸರ್ಕಾರಿ ಪರೀಕ್ಷೆಗಳನ್ನು ಎದುರಿಸುವ ತರಬೇತಿ ಇಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು. ಸೃಷ್ಠಿ ಇನ್ಛೋಟೆಕ್ನ ರೂವಾರಿಗಳಾದ ಹರ್ಷವರ್ಧನ ಶೆಟ್ಟಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಬೋಧಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ತಗ್ಗರ್ಸೆ ಸ.ಹಿ.ಪ್ರಾ. ಶಾಲೆಯಲ್ಲಿ ಕಳೆದ 6 ವರ್ಷಗಳಿಂದ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ, ಕಂಚಿಕಾನು ಸ.ಹಿ.ಪ್ರಾ. ಶಾಲೆಗೆ ವರ್ಗಾವಣೆಗೊಂಡ ತಿಮ್ಮಪ್ಪ ಗಾಣಿಗ ಅವರನ್ನು ಶಾಲಾ ಎಸ್.ಡಿ.ಎಮ್.ಸಿ ,ಹಳೆ ವಿದ್ಯಾರ್ಥಿ ಸಂಘ, ಶಿಕ್ಷಕ ವೃಂದದ ವತಿಯಿಂದ ಸನ್ಮಾನಿಸಲಾಯಿತು. ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಪ್ರಭಾಕರ ಗಾಣಿಗ, ಉಪಾಧ್ಯಕ್ಷೆ ಸುಮತಿ ಮೊಗವೀರ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದು, ಶಾಲಾ ಶಿಕ್ಷಕ ವೃಂದ ಸೇರಿ ಗೌರವ ಪೂರ್ವಕವಾಗಿ ಸನ್ಮಾನಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಸಂತ ಮೊಗವೀರ, ಕಾರ್ಯದರ್ಶಿ ಮಂಜುನಾಥ ಪೂಜಾರಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದು ಸನ್ಮಾನಿಸಿದರು. ಶಾಲಾ ಶಿಕ್ಷಕ ವೃಂದ ಮತ್ತು ಅಂಗನವಾಡಿ ಕಾರ್ಯಕರ್ತೆಯರು ನೆನಪಿನ ಕಾಣಿಕೆಯನ್ನು ನೀಡಿದರು. ತಿಮ್ಮಪ್ಪ ಗಾಣಿಗರು ಸನ್ಮಾನಿತರ ಭಾಷಣದಲ್ಲಿ ತನ್ನ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಶಾಲೆಗೆ ಫ್ಯಾನ್ ನ್ನು ಕೊಡುಗೆಯಾಗಿ ನೀಡಿದರು. ಹಿರಿಯರಾದ ಹನುಮಂತ ಶೇರುಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಹಳೆವಿದ್ಯಾರ್ಥಿಗಳು ಸನ್ಮಾನಿತರ ಬಗ್ಗೆ ಅನಿಸಿಕೆ ಹೇಳಿದರು. ಎಸ್.ಡಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರದ ಗ್ರಾಮೀಣ ಹವಾಮಾನ ಸೇವಾ ಯೋಜನೆ ಹಾಗೂ ಶ್ರೀ ಮೂಕಾಂಬಿಕಾ ಆತ್ಮ ರೈತರ ಸಂಘ ಗೋಳಿಹೊಳೆ ವತಿಯಿಂದ ಗೋಳಿಹೊಳೆ ಗ್ರಾಮದಲ್ಲಿ ರೈತರಿಗೆ ಹವಾಮಾನ ಬದಲಾವಣೆ ಮತ್ತು ಕೃಷಿ ಕುರಿತಾದ ರೈತ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರದ ಸಹ ಸಂಶೋಧನಾ ನಿರ್ದೇಶಕರಾದ ಡಾ. ಲಕ್ಷ್ಮಣ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಹವಾಮಾನದಿಂದ ಕೃಷಿಯಲ್ಲಿ ಅನೇಕ ರೀತಿಯ ತೊಂದರೆಗಳು ಎದುರಾಗುತ್ತಿರುವುದನ್ನು ನಾವೆಲ್ಲರೂ ಗಮನಿಸುತ್ತಿದ್ದೇವೆ ಇದರ ಪರಿಣಾಮವಾಗಿ ರೈತರು ನಷ್ಟವನ್ನು ಅನುಭವಿಸುತ್ತಿದ್ದಾರೆ. ಈ ರೀತಿಯ ನಷ್ಟಗಳನ್ನು ಹಿಮ್ಮೆಟ್ಟಿ ಕೃಷಿಯಲ್ಲಿ ಲಾಭ ಗಳಿಸಬೇಕೆಂದರೆ ರೈತರು ಕೃಷಿಯಲ್ಲಿ ಲಭ್ಯವಿರುವ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಹವಾಮಾನ ವೈಪರೀತ್ಯದಿಂದ ಗೇರು ಬೆಳೆಯಲ್ಲಿ ಆಗುವ ನಷ್ಟವನ್ನು ತಪ್ಪಿಸಲು ರೈತರು ಪಾಲಿಸಬೇಕಾದ ಕೃಷಿ ಚಟುವಟಿಕೆಗಳನ್ನು ಸಂಕ್ಷಿಪ್ತವಾಗಿ ತಿಳಿಸಿದರು. ಮೇಘಧೂತ್ ತಾಂತ್ರಿಕ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಕೃಷಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸದುದ್ಧೇಶದಿಂದ ಕಾರ್ಯಕ್ರಮಕ್ಕೆ ಮುಂದಡಿ ಇಟ್ಟರೆ ಕಾರ್ಯಗಳು ಸಂಪನ್ನವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆಯ ಯಶಸ್ವಿ-25ಬೆಳ್ಳಿ ಹಬ್ಬದ ಆಚರಣೆಗಾಗಿ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಸಾಲಿಗ್ರಾಮ ಮೇಳ ಹಾಗೂ ಅತಿಥಿ ಕಲಾವಿದರ ಅಟ್ಟಣಿಗೆ ಯಕ್ಷಗಾನವನ್ನು ಏರ್ಪಡಿಸಿ ಅಸಾಧಾರಣ ಸಾಧನೆಗೆ ನಾಂದಿ ಹಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಉದ್ಯಮಿ ಕೃಷ್ಣಮೂರ್ತಿ ಮಂಜ ಹೇಳಿದರು. ಅವರು ಯಶಸ್ವಿ ಕಲಾವೃಂದದ ನೇತೃತ್ವದಲ್ಲಿ ಕುಂದಾಪುರ ನೆಹರೂ ಮೈದಾನದಲ್ಲಿ ಜರುಗಿದ ಸಾಲಿಗ್ರಾಮ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಧರ್ಮಾಧರ್ಮ ಸಂಘರ್ಷ ಯಕ್ಷಗಾನ ಕಾರ‍್ಯಕ್ರಮದಲ್ಲಿ ಹಿರಿಯ ಕಲಾವಿದ ರಾಜ್ಯ ಪ್ರಶಸ್ತಿ ಪುರಸ್ಕೃತ ತೀರ್ಥಳ್ಳಿ ಗೋಪಾಲ ಆಚಾರ್ ಇವರನ್ನು ಸನ್ಮಾನಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಮಲ್ಯಾಡಿ ಶಿವರಾಮ ಶೆಟ್ಟಿ, ರಮೇಶ್ ರಾವ್ ಪಾಂಡೇಶ್ವರ, ಸಂಘಟಕ ರಾಮಕೃಷ್ಣ ಹೇರ್ಳೆ, ಜನಾರ್ಧನ ಹಂದೆ, ಪಂಚ ಮೇಳಗಳ ಯಜಮಾನ ಕಿಶನ್ ಹೆಗ್ಡೆ, ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಕೊಕೂರು ಸೀತಾರಾಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಕರ್ನಾಟಕ ಸರ್ಕಾರ ಮೈಸೂರು ಇವರ ನೇತೃತ್ವದಲ್ಲಿ ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಹೊಸಮಠದ ಕೊರಗರ ಕಾಲೋನಿಯಲ್ಲಿ ಎಸ್‌ಇಪಿ ಮತ್ತು ಟಿಎಸ್‌ಪಿ ಕಾಯ್ದೆಯ ಮಾಹಿತಿ ಕಾರ‍್ಯಗಾರ ನಡೆಯಿತು. ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಮೇಶ್ ಕುಲಾಲ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು ಕೆದೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಧವ ಗ್ರಾಮ ಪಂಚಾಯತ್‌ನಲ್ಲಿ ಕೊರಗರಿಗೆ ಸಿಗುವ ಸೌಲಭ್ಯದ ಕುರಿತು ಮಾಹಿತಿ ನೀಡಿದರು. ಕೋಟ ಆರಕ್ಷಕ ಠಾಣೆಯ ಎಎಸ್‌ಐ ಗಣೇಶ್ ಮಾತನಾಡಿ, ಕೊರಗರ ಮೇಲೆ ದೌರ್ಜನ್ಯ ನಡೆದರೇ ಹೇಗೆ ದೂರು ನೀಡಬೇಕು ಮತ್ತು ಪೊಲೀಸ್ ಇಲಾಖೆಯಲ್ಲಿ ಸಿಗುವ ಸೌಲಭ್ಯದ ಕುರಿತು ಮಾಹಿತಿ ನೀಡಿದರು. ಕೆದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ, ಪಂಚಾಯತ್ ಸದಸ್ಯೆ ಗುಬ್ಬಿ ಉಪಸ್ಥಿತರಿದ್ದರು. ಕುಂಭಾಸಿ ಮಕ್ಕಳ ಮನೆ ಶಿಕ್ಷಕಿ ವಿನುತಾ ಸ್ವಾಗತಿಸಿದರು. ಬುಡಕಟ್ಟು ಸಂಶೋಧನಾ ಕೇಂದ್ರದ ಮನೋಜ್ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ಮನೆ ಸಂಚಾಲಕ ಗಣೇಶ್ ವಿ ಕುಂದಾಪುರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಚಂದನ ಯುವಕ ಮಂಡಲ ಬೀಜಾಡಿ ಗೋಪಾಡಿ ಇವರ ೧೮ನೇ ವರ್ಷದ ವಾರ್ಷಿಕೋತ್ಸವ ಹಾಗೂ ದಿ.ಬೀಜಾಡಿ ನಾರಾಯಣ ಉಪಾಧ್ಯರ ಸಂಸ್ಮರಣ ಪ್ರಶಸ್ತಿ ಪ್ರಧಾನ ಸಮಾರಂಭ ಬೀಜಾಡಿ ಪೂಜಾ ಟೈಲ್ಸ್ ಅವರಣದಲ್ಲಿ ಜರುಗಿತು. ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಹಂದಕುಂದ ಅಶೋಕ್ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ರಥಶಿಲ್ಪಿ ರಾಜಗೋಪಾಲ ಆಚಾರ್ಯ, ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಪ್ರಭಾಕರ ಶೆಟ್ಟಿ, ಚಂದನ ಯುವಕ ಮಂಡಲದ ಅಧ್ಯಕ್ಷ ಮಹೇಶ್ ಚಂದನ್, ಕಾರ್ಯದರ್ಶಿ ಗಣೇಶ್ ಆಚಾರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಯಕ್ಷಲೋಕ ತಿರುಗಾಟದಲ್ಲಿ ೫ ದಶಕಗಳ ಕಾಲ ಸೇವೆ ಸಲ್ಲಿಸಿದ ಬಡಗುತಿಟ್ಟಿನ ಖ್ಯಾತ ಹಾಸ್ಯ ಯಕ್ಷ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟಿ ಇವರಿಗೆ ದಿ.ಬೀಜಾಡಿ ನಾರಾಯಣ ಉಪಾಧ್ಯರ ಸಂಸ್ಮರಣ ಪ್ರಶಸ್ತಿ ಪ್ರಧಾನ ಮಾಡಿ ನಗದು ಪುರಸ್ಕಾರ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಗಿರಿಧರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗೀತಾ ಜಯಂತಿಯ ಅಂಗವಾಗಿ ಕೋಟೇಶ್ವರದ ಶ್ರೀ ಶಂಕರ ಜಯಂತಿ ಭಜನಾ ಮಂಡಳಿಯವರಿಂದ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಶ್ರೀಮದ್ ಭಗವದ್ಗೀತೆಯ ಸಾಮೂಹಿಕ ಪಠಣ ನಡೆಯಿತು. ಬೆಳಿಗ್ಗೆ ೯ಕ್ಕೆ ಪಠಣ ಆರಂಭಿಸಿದ ತಂಡ ಮಧ್ಯಾಹ್ನ ೧೨ ರವರೆಗೂ ಗೀತೆಯ ಸಮಗ್ರ ಹದಿನೆಂಟು ಅಧ್ಯಾಯಗಳನ್ನು ಪಠಿಸಿದರು. ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ ಮತ್ತು ಸದಸ್ಯರು ಉಪಸ್ಥಿತರಿದ್ದು ಶುಭ ಕೋರಿದರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸದಸ್ಯೆ ವಸಂತಿ ಮಿತ್ಯಂತ ಗೀತೆಯ ಶ್ರೇಷ್ಠತೆ ಮತ್ತು ಅದರ ಪಠಣದ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಾಮೂಹಿಕವಾಗಿ ಪೂಜೆ ನೆರವೇರಿಸಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕ 1 ಮತ್ತು ಘಟಕ 2ರ 2021-22ರ ಸಾಲಿನ ಕಾರ್ಯಕ್ರಮಗಳ ಉದ್ಘಾಟನೆ ಇತ್ತಿಚಿಗೆ ನಡೆಯಿತು. ಬೈಂದೂರು ಪೊಲಿಸ್‌ ಠಾಣೆ ಆರಕ್ಷಕ ಉಪನೀರಿಕ್ಷಕರಾದ ಪವನ್‌ ನಾಯಕ್‌ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ, ಗುರಿಗಳು, ದೇಶ ಕಟ್ಟುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವದ ಬಗ್ಗೆ ಅರಿವು ಮುಡಿಸಿದರು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯ ಕುರಿತು ಯಾವ ತರಹದ ಸಿದ್ಧತೆಯನ್ನು ನಡೆಸಬೇಕು, ಪಠ್ಯಕ್ರಮ ಮತ್ತು ಯಾವ ಪುಸ್ತಕಗಳನ್ನು ಓದಬೇಕು ಅನ್ನುವ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ರಘು ನಾಯ್ಕ ಅವರು ವಹಿಸಿದ್ದರು. ಘಟಕ 2 ರ ಯೋಜನಾಧಿಕಾರಿ ಲತಾ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ದ್ವಿತೀಯ ಬಿ ಕಾಂ ವಿದ್ಯಾರ್ಥಿನಿ ಕು. ಸುಶ್ಮೀತಾ ನಿರೂಪಿಸಿದರು. ದ್ವಿತೀಯ ಬಿ ಕಾಂ ವಿದ್ಯಾರ್ಥಿನಿ ಮೋನಾಕ್ಷಿ ಸ್ವಾಗತಿಸಿದರು. ಘಟಕ 1 ರ ಯೋಜನಾಧಿಕಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಎನ್ಸಿಸಿ ಆರ್ಮಿ ಘಟಕದ ಆಯೋಜನೆಯಲ್ಲಿ ಕುಂದಾಪುರದಿಂದ ಮರವಂತೆ ತನಕ ಸೈಕಲ್ ಜಾಥಾವನ್ನು ಡಿಸೆಂಬರ್ 18ರಂದು ಬೆಳಿಗ್ಗೆ ಹಮ್ಮಿಕೊಳ್ಳಲಾಯಿತು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ನಾರಾಯಣ ನಾಯ್ಕ್ ಎನ್ಸಿಸಿ ಧ್ವಜ ಏರಿಸುವುದರ ಮೂಲಕ ಜಾಥಕ್ಕೆ ಚಾಲನೆ ನೀಡಿದರು. ನಾಗರಿಕ ಸಮಾಜವನ್ನು ಎಚ್ಚರಿಸುವ ಭಿತ್ತಿ ಪತ್ರಗಳನ್ನು ಹೊಂದಿರುವ, ವಿವಿಧ ಸಾಮಾಜಿಕ ಸಂದೇಶ ಸಾರುವ ಸೈಕಲ್ಗಳಲ್ಲಿ ವಿದ್ಯಾರ್ಥಿಗಳು ಕಾಲೇಜಿನಿಂದ ಮರವಂತೆ ಬೀಚ್ ತನಕ ಪಯಣಿಸಿದರು. ಚಾಲನೆ ವೇಳೆ ಕುಂದಾಪುರಠಾಣಾಧಿಕಾರಿ ಸದಾಶಿವ್ ಆರ್ ಗೌರೋಜಿ, ಪ್ರಾಂಶುಪಾಲ ಪ್ರೊ. ಕೆ. ಉಮೇಶ್ ಶೆಟ್ಟಿ, ಶಿವರಾಜ್ ಸಿ. ಎನ್ಸಿಸಿ ಅಧಿಕಾರಿ ಮತ್ತು ಸಹ ಸಂಯೋಜಕ ಸುಜಯ್ ಹಾಗೂ ಕಾಲೇಜಿನ ಬೋಧಕ ಬೋಧಕೇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಕುಮಾರಿ ಸೌಮ್ಯ ಕುಂದರ್ ನಿರೂಪಿಸಿ ವಂದಿಸಿದರು.

Read More