ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ನಾಗೂರಿನ ಕುಸುಮ ಫೌಂಡೇಶನ್ ನಡೆಸುತ್ತಿರುವ ಬ್ಲಾಸಂ ಸಂಗೀತ ನೃತ್ಯ ಶಾಲೆಯ ಫೆಬ್ರವರಿ ತಿಂಗಳ ’ಗಾನಯಾನ-5’ ಕಾರ್ಯಕ್ರಮದಲ್ಲಿ ಸಂಗೀತದ ಬದಲು ಶ್ರೋತೃಗಳಿಗೆ ಹಿಂದೂಸ್ಥಾನಿ ಸಂಗೀತವನ್ನು ಪರಿಚಯಿಸುವ ಪ್ರಾತ್ಯಕ್ಷಿಕೆ ನಡೆಸಲಾಯಿತು. ಭಾನುವಾರದ ಈ ಕಾರ್ಯಕ್ರಮದಲ್ಲಿ ಹಾಜರಿದ್ದವರು ಹೆಚ್ಚು ಆಸಕ್ತರೂ, ಸಹೃದಯಿ ಶ್ರೋತೃಗಳೂ ಆಗಬೇಕೆನ್ನುವುದು ಅದರ ಉದ್ದೇಶವಾಗಿತ್ತು. ಗೋಪಾಡಿಯಲ್ಲಿ ನೆಲೆಸಿ ಗುರುಪರಂಪರಾ ಸಂಗೀತ ಪ್ರತಿಷ್ಠಾನದ ಆಶ್ರಯದಲ್ಲಿ ಸಂಗೀತ ಕಲಿಸುತ್ತಿರುವ, ಪಂ. ಗಣಪತಿ ಭಟ್ ಹಾಸಣಗಿ ಅವರ ಶಿಷ್ಯರೂ, ಆಕಾಶವಾಣಿ ಗ್ರೇಡ್ ಕಲಾವಿದರೂ ಆಗಿರುವ ವಿದ್ವಾನ್ ಸತೀಶ ಭಟ್ ಮಾಳಕೊಪ್ಪ-ಪ್ರತಿಮಾ ಭಟ್ ಮಾಳಕೊಪ್ಪ ದಂಪತಿ ತಮ್ಮ ಹಿರಿಯ ಕಿರಿಯ ಶಿಷ್ಯರನ್ನು ಕೂಡಿಕೊಂಡು ಸಂಗೀತದ ವಿವಿಧ ಮಜಲು ಮತ್ತು ಆಯಾಮಗಳನ್ನು ಶ್ರೋತೃಗಳ ಮುಂದೆ ತೆರೆದಿಟ್ಟರು. ಜತೀಂದ್ರ ಮರವಂತೆ ಮತ್ತು ಗುರುದಂಪತಿಯ ನಡುವಿನ ಸಂವಾದ ಮತ್ತು ವಿಷಯಕ್ಕೆ ಪೂರಕವಾಗಿ ವಿದ್ಯಾರ್ಥಿಗಳ ಹಾಡುಗಾರಿಕೆ, ಶಶಿಕಿರಣ ಮಣಿಪಾಲ ಅವರ ತಬಲಾ ವಾದನದ ಮೂಲಕ ನಡೆದ ಕಾರ್ಯಕ್ರಮ ಸೇರಿದ್ದ ಸಂಗೀತಾಸಕ್ತರ ಕುತೂಹಲ ಮತ್ತು ಜಿಜ್ಞಾಸೆ ತಣಿಸಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಂಗಭೂಮಿ ಧರ್ಮ, ಜಾತಿ, ಸ್ಥಳ ಮೀರಿದ ಪ್ರಕ್ರಿಯೆ. ಅದು ತನ್ನ ಚಟುವಟಿಕೆಗಳ ಮೂಲಕ ಸಾಮಾಜಿಕ ಬದಲಾವಣೆಯ ಗುರಿ ಹೊಂದಿದೆ ಎಂದು ಹಿರಿಯ ರಂಗಕರ್ಮಿ ಬಾಸುಮ ಕೊಡಗು ಹೇಳಿದರು. ಇಲ್ಲಿನ ಸುರಭಿ ಸಂಸ್ಥೆ ನಡೆಸುತ್ತಿರುವ 7 ದಿನಗಳ ಶಿಶಿರ ನಾಟಕೋತ್ಸವದ ಅಂಗವಾಗಿ ಶನಿವಾರ ಸುರಭಿ ಕಲಾ ಗ್ರಾಮದಲ್ಲಿ ಆಯೋಜಿಸಿದ್ದ ’ರಂಗಭೂಮಿಯಲ್ಲಿ ಸಂಘಟನೆಯ ಪಾತ್ರ’ ಕುರಿತು ರಂಗಸಂವಾದ ಕಾರ್ಯಕ್ರಮದಲ್ಲಿ ಅವರು ತಮ್ಮ ವಿಚಾರ ಮಂಡಿಸಿದರು. ರಂಗಭೂಮಿಯ ಯಶಸ್ಸಿನಲ್ಲಿ ಅದರ ಹಿಂದಿರುವ ಸಂಘಟನೆಯ ಪಾತ್ರ ನಿರ್ಣಾಯಕವಾದುದು. ಅದರ ಸದಸ್ಯರಿಗೆ ರಂಗಚಟುವಟಿಕೆಯಲ್ಲಿ ಇರುವ ಬದ್ಧತೆಯೇ ಅದರ ಬಲ. ಅದರ ಎಲ್ಲ ಸದಸ್ಯರಿಗೆ ತಮ್ಮನ್ನು ಜನ ಗುರುತಿಸಬೇಕು ಎಂಬ ಹಂಬಲ ಇರುತ್ತದೆ. ಆಗ ಪರಸ್ಪರ ಅಸೂಯೆಯೂ ಇರುತ್ತದೆ. ಎಲ್ಲರಿಗೆ ಆಯ್ಕೆಯ ಸ್ವಾತಂತ್ರ್ಯ ಮತ್ತು ಅವಕಾಶ ನೀಡುವ ಮೂಲಕ ಅದನ್ನು ಮೀರಬಹುದು. ಅದರಲ್ಲಿ ಹೊಣೆಗಳ ವಿಭಜನೆ ಆಗಬೇಕು. ಸಂಘಟನೆಯ ಪರಿಣಾಮಕಾರಿ ನಿರ್ವಹಣೆಯೂ ಅದಕ್ಕೆ ಯಶಸ್ಸು ತಂದುಕೊಡುತ್ತದೆ. ಅದು ಶುದ್ಧ ಚಾರಿತ್ರ್ಯ ಹೊಂದಿರಬೇಕು ಎಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಪರಿ ಸಂಸ್ಥೆಯ ಮುಖ್ಯಸ್ಥ ಮ್ಯಾಗ್ಸಸೆ ಪುರಸ್ಕೃತ ಪತ್ರಕರ್ತ ಪಿ. ಸಾಯಿನಾಥ ಇದೇ 14 ರಂದು ಸಂಜೆ 5.30ಕ್ಕೆ ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾಮಂದಿರದಲ್ಲಿ ‘ಕಾರ್ಪೋರೇಟ್ ಫಾರ್ಮಿಂಗ್ ಮತ್ತು ಭಾರತದ ಕೃಷಿ ಬಿಕ್ಕಟ್ಟುಗಳು’ ಕುರಿತು ಉಪನ್ಯಾಸ ನೀಡಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಮುದಾಯ ಕುಂದಾಪುರದ ಕಾರ್ಯದರ್ಶಿ ಸದಾನಂದ ಬೈಂದೂರು, ‘ಕೃಷಿ ಬಿಕ್ಕಟ್ಟುಗಳು ಹೆಚ್ಚುತ್ತಾ ಹೋಗುತ್ತಿದ್ದು, ರೈತರು ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾರೆ. ‘ಕೃಷಿಕರ ಆದಾಯ ದುಪ್ಪಟ್ಟು ಮಾಡುವ ಉದ್ದೇಶ ಹೊಂದಿದ್ದೇವೆ’ ಎಂದು ಸರ್ಕಾರಗಳು ಹೇಳುತ್ತಿವೆ. ಜೊತೆಗೆ ಕಾರ್ಪೋರೇಟ್ ಫಾರ್ಮಿಂಗ್‌ಗೆ ಪ್ರೋತ್ಸಾಹ ನೀಡುವ ಕ್ರಮಗಳು ವೇಗ ಪಡೆದುಕೊಳ್ಳುತ್ತಿದೆ. ಇಂತಹದೊಂದು ಸನ್ನಿವೇಶದಲ್ಲಿ ರೈತನ ಪಾತ್ರ ಏನು? ಈ ವಿಚಾರಗಳಿಗೆ ರೈತ ಹೇಗೆ ಮುಖಾಮುಖಿ ಆಗಬಹುದು? ಎನ್ನುವ ಬಗ್ಗೆ ರೈತ ಸಮುದಾಯದ ಜೊತೆ ಸಂವಾದ ನಡೆಸುವುದು ಈ ಉಪನ್ಯಾಸದ ಉದ್ದೇಶ’ ಎಂದರು. ‘ಕುಂದಾಪುರಕ್ಕೆ ಮೊದಲ ಬಾರಿ ಬರುತ್ತಿರುವ ಪಿ.ಸಾಯಿನಾಥ ಅವರು, ಮಹಾರಾಷ್ಟ್ರದ ಮರಾಠವಾಡಾ, ವಿದರ್ಭ ಪ್ರಾಂತ್ಯಗಳಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗಾಣಿಗ ಸಮಾಜ ಸೇವಾ ಸಂಘ, ತಗ್ಗರ್ಸೆ ಗ್ರಾಮ ಇದರ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭವು ಚಂದಣ ಶ್ರೀ ಸೋಮಲಿಂಗೇಶ್ವರ ದೇವಸ್ಥಾನ ಜರುಗಿತು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರಮೇಶ ಗಾಣಿಗ ಕೊಲ್ಲೂರು ಇವರು ಉದ್ಘಾಟಿಸಿದರು. ನೂತನ ಅಧ್ಯಕ್ಷರಾದ ರಾಜು ಗಾಣಿಗ ಹುಳುವಾಡಿಯವರಿಗೆ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಇದರ ಅಧ್ಯಕ್ಷರಾದ ಪ್ರಭಾಕರ ಗಾಣಿಗ ಕುಂಭಾಶಿ ಪದಗ್ರಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ನಾಗರಾಜ್ ಗಾಣಿಗ ಬೈಂದೂರು, ಗಾಣಿಗ ಯುವ ಸಂಘಟನೆ, ಬೈಂದೂರು ವಲಯದ ಅಧ್ಯಕ್ಷರಾದ ಗಣೇಶ ಗಾಣಿಗ ಉಪ್ಪುಂದ, ಗ್ರಾಮ ಪಂಚಾಯತ್ ಸದಸ್ಯರಾದ ಭವಾನಿ, ನಾಗರಾಜ್ ಹಾಲಂಬೇರು, ಗೌರವಾಧ್ಯಕ್ಷರಾದ ಗೋವಿಂದ ಗಾಣಿಗ ಹೆಗ್ಗೇರಿ, ಭಜನಾ ಮಂಡಳಿ ಅಧ್ಯಕ್ಷರಾದ ರಂಗ ಗಾಣಿಗ ಮತ್ತು ಸಮಾಜ ಬಾಂದವರು ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ವೀರಭದ್ರ ಗಾಣಿಗ ಹಾಲಂಬೇರು ಸ್ವಾಗತಿಸಿ, ತಗ್ಗರ್ಸೆ ತಿಮ್ಮಪ್ಪ ಗಾಣಿಗ ಮತ್ತು ನೂತನ ಖಜಾಂಚಿ ಗಣೇಶ್ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಜರ ಕಾಲದಿಂದ ಇಂದಿನತನಕವೂ ಕಲಾ ಪ್ರಕಾರಗಳು ಆಶ್ರಯದಲ್ಲಿಯೇ ಬೆಳೆದು ಬರುತ್ತಿವೆ. ಆದರೆ ಕಲೆಗೆ ಸ್ವಾಯತ್ತತೆ ದೊರೆಯುವ ಅವಕಾಶ ಮಾಡಿಕೊಟ್ಟಾಗ ಅದು ಮತ್ತುಷ್ಟು ಗಟ್ಟಿಗೊಳ್ಳುತ್ತವೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಘು ನಾಯ್ಕ್ ಹೇಳಿದರು. ಅವರು ಸುರಭಿ ರಿ. ಬೈಂದೂರು ಹಾಗೂ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಿ. ಬೈಂದೂರು ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ರಂಗ ಸುರಭಿ ೨೦೨೦ – ಶಿಶಿರ ನಾಟಕೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಚಂಡೆ ಹಾಗೂ ತಬಲ ವಾದಕ ಗೋಪಾಲಕೃಷ್ಣ ಜೋಷಿ ಉಪ್ಪುಂದ ಅವರನ್ನು ಸನ್ಮಾನಿಸಲಾಯಿತು. ರತ್ತೂಬಾಯಿ ಜನತಾ ಪ್ರೌಢಶಾಲೆಯ ಮುಖ್ಯೋಪಧ್ಯಾಯ ಮಂಜು ಕಾಳಾವರ ಅಧ್ಯಕ್ಷತೆ ವಹಿಸಿದ್ದರು. ಉಪ್ಪುಂದದ ವೈದ್ಯ ಎ.ಎಸ್. ಉಡುಪ, ಸುರಭಿ ಬೈಂದೂರು ಅಧ್ಯಕ್ಷ ಸತ್ಯನಾ ಕೊಡೇರಿ, ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಉಪ್ಪುಂದ ಉಪಸ್ಥಿತರಿದ್ದರು. ನಿರ್ದೇಶಕ ಸುಧಾಕರ ಪಿ. ಕಾರ್ಯಕ್ರಮ ನಿರೂಪಿಸಿದರು. ಬಳಿಕ ರಂಗಾಯಣ ಮೈಸೂರು ಪ್ರಸ್ತುತಿಯ, ಶರವಣ್ ಕುಮಾರ್ ರಚಿಸಿ ನಿರ್ದೇಶಿಸಿದ ರೆಕ್ಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಉಪ್ಪುಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಈಗ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿದ ಎನ್.ಕೆ ಬಿಲ್ಲವ ಹಾಗೂ ಅವರ ಪತ್ನಿ ಜ್ಯೋತಿ ಅವರನ್ನು ಶಾಲೆಯ ಶಿಕ್ಷಕರು, ಎಸ್.ಡಿ.ಎಂ.ಸಿ ಸದಸ್ಯರು ಸನ್ಮಾನಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಸುನೀತಾ ಅಧ್ಯಕ್ಷತೆ ವಹಿಸಿದ್ದರು. ಎನ್.ಕೆ ಬಿಲ್ಲವರ ಬಗ್ಗೆ ಮುಖ್ಯಶಿಕ್ಷಕರಾದ ವೆಂಕ್ಟ ಉಪ್ಪಾರರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಶಿಕ್ಷಕರಾದ ಭಾರತಿ ಸ್ವಾಗತಿಸಿದರು, ಭಾಸ್ಕರ್ ಪ್ರಭು ಹಾಗೂ ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ದೇವಾಡಿಗ ಸಹಕರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜಿಲ್ಲಾ ಪಂಚಾಯಿತಿ, ಹೇರೂರು ಗ್ರಾಮ ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಉಪ್ಪುಂದ ರೈತಸಿರಿ ಸ್ವಸಹಾಯ ಸಂಘಗಳ ಒಕ್ಕೂಟ, ಮೇಕೋಡು, ಕಿರಿಮಂಜೇಶ್ವರ, ಕೊಡೇರಿ, ಖಂಬದಕೋಣೆ, ಹೇರಂಜಾಲು ಹಾಲು ಉತ್ಪಾದಕರ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಹೇರೂರಿನ ಮೇಕೋಡು ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ಜಾನುವಾರು ಪ್ರದರ್ಶನ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ ‘ಕೇವಲ ಕೃಷಿ ಅವಲಂಬಿಸಿರುವ ರೈತರಿಗೆ ವರ್ಷವಿಡೀ ದುಡಿಮೆ ಇಲ್ಲ. ಅದಕ್ಕಾಗಿ ಹೈನುಗಾರಿಕೆಯನ್ನು ಮಾಡಬೇಕು’ ಎಂದು ಶಾಸಕ ಸಲಹೆ ನೀಡಿದರು. ‘ಹಾಲಿನ ಉತ್ಪಾದನಾ ವೆಚ್ಚ ಸರಿದೂಗಿಸುವ ಬೆಲೆ ಇಲ್ಲ. ಹೈನುಗಾರರಿಗೆ ಸರ್ಕಾರ ಪ್ರತಿ ಲೀಟರ್‌ಗೆ ?೫ ಪ್ರೋತ್ಸಾಹ ಧನ ನೀಡುತ್ತಿದೆ. ಆದರೂ, ಅವರಿಗೆ ನಿರೀಕ್ಷಿಸಿದ ಪ್ರತಿಫಲ ಸಿಗುತ್ತಿಲ್ಲ. ಆದುದರಿಂದ ಒಕ್ಕೂಟ ಸರಬರಾಜು ಮಾಡುವ ಪಶು ಆಹಾರದ ಬೆಲೆ ಕಡಿಮೆ ಮಾಡಬೇಕು. ಪಶುವೈದ್ಯರು ಅವರಿಗೆ ಉತ್ತಮ ಸೇವೆ ನೀಡಬೇಕು’ ಎಂದ ಅವರು ‘ಈ ಪ್ರದೇಶದಲ್ಲಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿಯಲ್ಲಿ ಶಾಂತಿ ಸೌಹಾರ್ದದ ವಾತಾವರಣ ನೆಲೆಸಿದ್ದು, ಎಲ್ಲಾ ವರ್ಗಗಳ ಜನರ ಸಹಕಾರದಿಂದ ಗಂಗೊಳ್ಳಿಗೆ ಅಂಟಿಕೊಂಡಿದ್ದ ಕೋಮು ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ಕಳಚಿ ಹೋಗುತ್ತಿದೆ. ಈ ಭಾಗದ ಯುವಕರು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಗಂಗೊಳ್ಳಿಯ ಕಾರಣೀಕ ಕ್ಷೇತ್ರವಾಗಿರುವ ಶ್ರೀ ಹಾಲುಮಕ್ಕಿ ಜಟ್ಟಿಗ ದೇವಸ್ಥಾನದಲ್ಲಿ ಹತ್ತು ಸಮಸ್ತರ ಸೇವೆ ಬಯಲಾಟ ಅಪೂರ್ವವಾಗಿದ್ದು, ಇದನ್ನು ಮುನ್ನಡೆಸಿಕೊಂಡು ಬಂದಿರುವ ಸಮಿತಿಯ ಸದಸ್ಯರು ಅಭಿನಂದನಾರ್ಹರು ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಗಂಗೊಳ್ಳಿಯ ಶ್ರೀ ರಾಮ ಪೈ ಮಠದ ಸಮೀಪದಲ್ಲಿರುವ ಶ್ರೀ ಹಾಲುಮಕ್ಕಿ ಜಟ್ಟಿಗ ದೇವಸ್ಥಾನದ ಪ್ರಯುಕ್ತ ಹತ್ತು ಸಮಸ್ತರ ಸೇವೆ ಬಯಲಾಟದ ಬೆಳ್ಳಿ ಹಬ್ಬ ಸಮಾರಂಭದ ಅಂಗವಾಗಿ ದೇವಸ್ಥಾನದ ವಠಾರದಲ್ಲಿ ಶುಕ್ರವಾರ ಜರಗಿದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. ಗಂಗೊಳ್ಳಿಯ ಪಂಚಗಂಗಾವಳಿ ಸೌಹಾರ್ದ ಕೋ-ಆಪರೇಟಿವ್ ಅಧ್ಯಕ್ಷ ರಾಜು ದೇವಾಡಿಗ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ…
ಕುಂದಾಪ್ರ ಡಾಟ್ ಕಾಂ’ ಸುದ್ದಿ ಬೈಂದೂರು: ರೈತರು ಬೆಳೆದ ಬೆಳೆಗೆ ಹಾಪ್‌ಕಾಮ್ಸ್ ಮಾರಾಟ ಮಳಿಗೆಯಲ್ಲಿ ಲಾಭದಾಯಕ ಧಾರಣೆ ದೊರೆಯಬೇಕು. ಜಿಲ್ಲೆಯ ಹೊರಗಿನ ಉತ್ಪನ್ನ ಮತ್ತು ಇಲ್ಲಿನ ಬೆಳೆಗಳ ದರಗಳಲ್ಲಿ ವ್ಯತಾಸವಿದ್ದು, ಸ್ಥಳೀಯ ರೈತರಿಗೆ ಯಾವುದೇ ಕಾರಣಕ್ಕೆ ನಷ್ಟವಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು. ಮಂಗಳೂರಿನ ಜಿಲ್ಲಾ ಹಾಪ್‌ಕಾಮ್ಸ್ ಮಾರುಕಟ್ಟೆ, ರಾಜ್ಯ ತೋಟಗಾರಿಕಾ ಮಾರಾಟ ಮಹಾಮಂಡಲ ವತಿಯಿಂದ 2014–15ನೇ ಸಾಲಿನ ರಾಜ್ಯವಲಯ ಯೋಜನೆಯಡಿ ಉಳಿಕೆಯಾಗಿರುವ ಅನುದಾನದಿಂದ ಉಪ್ಪುಂದ ಪೇಟೆಯಲ್ಲಿ ನಿರ್ಮಿಸಿರುವ ನೂತನ ಹಾಪ್‌ಕಾಮ್ಸ್ ಮಾರಾಟ ಮಳಿಗೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಇಂದು ಸಾವಯವ ಮತ್ತು ರಸಗೊಬ್ಬರ ನಡುವೆ ಸಮತೋಲನ ಕಾಪಾಡುವ ಅಗತ್ಯವಿದೆ. ಸಾಧ್ಯವಾದಷ್ಟೂ ಸಾವಯವ ಕೃಷಿಗೆ ಮರಳುವುದು ಅನಿವಾರ್ಯವೆನಿಸಿದೆ. ರೈತರಿಗೆ ತರಬೇತಿ ನೀಡಬೇಕು. ಕೃಷಿಯೊಂದಿಗೆ ತೋಟಗಾರಿಕೆ, ಹೈನುಗಾರಿಕೆ, ಕೋಳಿಸಾಕಣೆ ನಡೆಸುವುದಲ್ಲದೇ, ಕಡಿಮೆ ವೆಚ್ಚದಲ್ಲಿ ಆರೋಗ್ಯ ನೀಡುವ ಪಪ್ಪಾಯಿ, ನುಗ್ಗೆ, ಬಸಳೆ, ತೊಂಡೆ, ಸೌತೆ, ಬಾಳೆ ಬೆಳೆಸಿ ಮನೆಯ ಖರ್ಚಿಗೆ ಬಳಸಿಕೊಂಡು ಸ್ವಾವಲಂಬನೆ ಸಾಧಿಸಬೇಕು’ ಎಂದರು. ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಲಕ್ಷ್ಮೀನಾರಾಯಣ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಂಗೀತ, ಕಲೆ, ಸಂಸ್ಕೃತಿಯ ಉಪಾಸನೆ ಇದ್ದಲ್ಲಿ ಮನುಷ್ಯ ಮನುಷ್ಯನಾಗಿರುತ್ತಾನೆ. ಅಂತಹದ್ದೊಂದು ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ಸಂಘ ಸಂಸ್ಥೆಗಳನ್ನು ಪ್ರೋತ್ಸಾಹಿಸುವುದು ಪ್ರಜ್ಞಾವಂತ ಸಮಾಜದ ಜವಾಬ್ದಾರಿಯಾಗಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಕೆ. ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು. ಅವರು ಸುರಭಿ ರಿ. ಬೈಂದೂರು ಹಾಗೂ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಿ. ಬೈಂದೂರು ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ರಂಗ ಸುರಭಿ ೨೦೨೦ – ಶಿಶಿರ ನಾಟಕೋತ್ಸವ ಎರಡನೇ ದಿನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತೀಯ ಜೀವವಿಮಾ ಅಭಿವೃದ್ಧಿ ಅಧಿಕಾರಿ ಸೋಮನಾಥನ್ ಆರ್, ಬೈಂದೂರು ಶಿಶುಮಂದಿರದ ಅಧ್ಯಕ್ಷ ಮಂಜುನಾಥ ಶೆಟ್ಟಿ, ಬೈಂದೂರು ಡಾ. ಬಿ.ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷ ಲಕ್ಷ್ಮಣ ಯಡ್ತರೆ, ಬೈಂದೂರು ಮಾದರಿ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ರವೀಂದ್ರ ಶ್ಯಾನುಭಾಗ್, ಉದ್ಯಮಿ ಕೆ.ಎ ಸತೀಶ್ ಉಡುಪಿ, ಸುರಭಿ ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಉಪ್ಪುಂದ, ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ ವೈ. ಕೊರಗ ಉಪಸ್ಥಿತರಿದ್ದರು. ಗಾಯಕಿ ಗೀತಾ…
