ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೆಲೆ ಏರಿಕೆ, ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಸಮಸ್ಯೆ ಹಾಗೂ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ಪರಿಹಾರ ವಿಳಂಬ ವಿರೋಧಿಸಿ ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಬೈಂದೂರು ಬ್ಲಾಕ್ ಹಾಗೂ ಯುವ ಕಾಂಗ್ರೆಸ್ ವತಿಯಿಂದ ತಾಲೂಕು ಕಛೇರಿ ಮುಂಭಾಗ ಧರಣಿ ನಡೆಸಿ ಬೈಂದೂರು ತಹಶಿಲ್ದಾರ್ ಬಸಪ್ಪ ಪಿ. ಪೂಜಾರ್ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನಕುಮಾರ್, ಕರ್ನಾಟಕದ ೨೨ ಜಿಲ್ಲೆಗಳಲ್ಲಿ ಭೀಕರ ನೆರೆ ಹಾವಳಿಯ ಪರಿಣಾಮ ಅಪಾರ ಹಾನಿ ಸಂಭವಿಸಿದ್ದರೂ ಸರಕಾರ ಪರಿಹಾರ ನೀಡಲು ವಿಳಂಬ ನೀಡಿ ಅನುಸರಿಸಿ ಸರ್ವಾಧಿಕಾರ ಮೆರೆಯುತ್ತಿದೆ. ತಕ್ಷಣವೇ ನೆರ ಸಂತ್ರಸ್ಥರಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ್ ಪೂಜಾರಿ ಉಪ್ಪುಂದ, ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯರಾದ ಜಗದೀಶ್ ದೇವಾಡಿಗ, ಪ್ರಮೀಳಾ ದೇವಾಡಿಗ, ಯಡ್ತರೆ…
Author: ನ್ಯೂಸ್ ಬ್ಯೂರೋ
ಸೆ. 13ರಂದು ಇಂದು ’ರುಪೀ ಮಾಲ್’ ಶುಭಾರಂಭ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಆರ್. ಎಸ್. ವೆಂಚರ‍್ಸ್ ಪ್ರವರ್ತಿತ ಬೈಂದೂರಿನ ಪ್ರಥಮ ವ್ಯಾಪಾರ ಮಳಿಗೆ ’ರುಪೀ ಮಾಲ್’ ಸೆಪ್ಟೆಂಬರ್ 13ರಂದು ಅಧಿಕೃತವಾಗಿ ಆರಂಭಗೊಳ್ಳಲಿದೆ. ಕ್ರಿಕೆಟ್ ಆಟಗಾರ ಹಾಗೂ ನಟ ಎಸ್. ಶ್ರೀಶಾಂತ್ ರುಪೀ ಮಾಲ್ ಉದ್ಘಾಟನೆಗೈಯಲಿದ್ದಾರೆ. ಬೈಂದೂರು ಶಾಸಕರಾದ ಬಿ. ಎಂ. ಸುಕುಮಾರ್ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟನೆಗೈಯಲಿದ್ದಾರೆ. ಬೈಂದೂರು ಪ್ಯಾಲೇಸ್‌ನ ಮಾದರಿ ಫ್ಲಾಟ್‌ನ್ನು ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಅವರು ಉದ್ಘಾಟಿಸಲಿದಾರೆ. ಕಿಡ್ಸ್ ಝೋನ್‌ನ್ನು ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೂಕಾಂಬು ದೇವಾಡಿಗ ಅವರು ಉದ್ಘಾಟಿಸಲಿದ್ದಾರೆ. ಫ್ಯಾಶನ್ ಸ್ಟೋರನ್ನು ಮಿಸ್ ಸೌತ್ ಇಂಡಿಯಾ 2019 ನಿಕಿತಾ ಥೋಮಸ್ ಅವರು ಉದ್ಘಾಟಿಸಲಿದ್ದಾರೆ. 50,000 ಸ್ವ್ಯಾರ್ ಫೀಟ್ ವಿಸ್ತೀರ್ಣದ ಮಾಲ್‌ನ ಎರಡನೇ ಮಳಿಗೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಕರ್ಯಗಳೊಂದಿಗೆ ಕಿಡ್ಸ್ ಝೋನ್ ಆರಂಭಗೊಳ್ಳಲಿದ್ದು ಮಕ್ಕಳಿಗಾಗಿಯೇ ಕ್ರೀಡಾ ಜಗತ್ತು ತೆರೆದುಕೊಳ್ಳಲಿದೆ. ಬೈಂದೂರು ಹಾಗೂ ಸುತ್ತಲಿನ ನಗರಗಳಲ್ಲಿ ಮೊದಲ ಭಾರಿಗೆ ಈ ಎಲ್ಲಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್‌ಕಾರ‍್ಸ್ ಕಾಲೇಜಿನ 1989ರ ಸಾಲಿನ ಬಿ.ಎಸ್ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು ಗುರುನಮನ ಕಾರ್ಯಕ್ರಮವನ್ನು ಕಾಲೇಜಿನ ರಾಧಾ ಬಾ ರಂಗ ಮಂದಿರ (ಕೋಯಾಕುಟ್ಟಿ ಹಾಲ್)ನಲ್ಲಿಆಯೋಜಿಸಲಾಗಿತ್ತು. 30 ವರ್ಷಗಳ ಹಿಂದೆ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಸಂಘಟನೆಗೊಂಡು ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಮೊದಲಿಗೆ ಗುರುನಮನ ಕಾರ್ಯಕ್ರಮ ನೇರವೇರಿತು. ಅಂದಿನ ಪ್ರಾಂಶುಪಾಲರಾದ ಪ್ರೊ. ಎ. ನಾರಾಯಣ ಆಚಾರ್ಯರಿಗೆ ಮೊದಲು ಗೌರವಿಸಿ, ’ಗುರುವಂದನೆ’ ಸಲ್ಲಿಸಿದರು. ನಂತರ ಭಾಷಾ ವಿಭಾಗಗಳನ್ನು ಒಳಗೊಂಡು ವಿಜ್ಞಾನದ ಸುಮಾರು 19 ಮಂದಿ ಗುರುಗಳಿಗೆ ’ಗುರುನಮನ’ ಸಲ್ಲಿಸಲಾಯಿತು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಪಿ. ನಾರಾಯಣ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರೊ. ಎ. ನಾರಾಯಣ ಆಚಾರ್ಯ, ವಿಶ್ಯಸ್ಥಮಂಡಳಿಯ ಹಿರಿಯ ಸದಸ್ಯರಾದ ಕೆ. ಶಾಂತಾರಾಮ್ ಪ್ರಭು, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜಿ. ಎಂ. ಗೊಂಡ ಭಾಗವಹಿಸಿದ್ದರು. ದುಬೈನ ಫಾರ್ಚೂನ್ ಗ್ರೂಫ್‌ನ ಚೇರ್‌ಮನ್ ಹಾಗೂ ಉದ್ಯಮಿ ಕೆ. ಪ್ರವೀಣ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಕಬಡ್ಡಿ ಪಂದ್ಯಾವಳಿಯಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜು ಬಾಲಕಿಯರ ಕಬಡ್ಡಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ದ್ವಿತೀಯ ಸ್ಥಾನ ವಿಜೇತ ವಿದ್ಯಾರ್ಥಿಗಳೊಂದಿಗೆ ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ, ದೈಹಿಕ ಶಿಕ್ಷಣ ಶಿಕ್ಷಕ ಸಚಿನ್ ಕುಮಾರ್ ಶೆಟ್ಟಿ ಹುಂಚನಿ ಹಾಗೂ ಉಪನ್ಯಾಸಕರಾದ ನಾಗರಾಜ್ ಅಡಿಗ ಮತ್ತು ಹಳೆ ವಿದ್ಯಾರ್ಥಿ ಪ್ರದೀಪ್ ಭಟ್ ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೈಂದೂರಿನ ಮೊದಲ ಲಕ್ಸುರಿ ಅಪಾರ್ಟ್‌ಮೆಂಟ್ ಪ್ರಾಜೆಕ್ಟ್ ‘ಬೈಂದೂರು ಪ್ಯಾಲೇಸ್’ಗೆ ಸೆ.12ರಂದು ಶಂಕುಸ್ಥಾಪನೆ ನೆರವೇರಲಿದೆ. ಬೈಂದೂರು ರಾಷ್ಟ್ರೀಯ ಹೆದ್ದಾರಿ – 66ರಲ್ಲಿ ಹೊಸ ಬಸ್ ನಿಲ್ದಾಣದ ಸಮೀಪ ಆರಂಭಗೊಳ್ಳಲಿರುವ ಈ ಅಪಾರ್ಟ್‌ಮೆಂಟ್‌ನಲ್ಲಿ ಹೆಲ್ತ್ ಕ್ಲಬ್, ಸ್ವಿಮ್ಮಿಂಗ್ ಪೂಲ್, ಒಳಾಂಗಣ ಕ್ರೀಡೆ, 24*7 ಸೆಕ್ಯೂರಿಟಿ, ಸಿಸಿ ಟಿವಿ, ಕ್ಲಬ್ ಹೌಸ್, ಜಾಗಿಂಗ್ ಟ್ರ್ಯಾಕ್, ಶಟಲ್ ಕೋರ್ಟ್, ಮಿನಿ ಮಾರ್ಕೆಟ್, ಲಿಫ್ಟ್, ಜನರೇಟರ್ ಬ್ಯಾಕಪ್, ವಿಶಾಲ ಕಾರು ಪಾರ್ಕಿಂಗ್ ಮೊದಲಾದ ಸೌಕರ್ಯಗಳು ಇರಲಿವೆ. ಬೈಂದೂರಿನಲ್ಲಿ ಈಗಾಗಲೇ ರುಪೀ ಮಾಲ್ ಆರಂಭಿಸಿರುವ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಬಳಿ ಅಪಾರ್ಟ್‌ಮೆಂಟ್ ನಿರ್ಮಿಸುತ್ತಿರುವ ಆರ್. ಎಸ್. ವೆಂಚರ‍್ಸ್ ಸಂಸ್ಥೆಯು ಉದ್ಯಮಿ ವೆಂಕಟೇಶ್ ಕಿಣಿ ಅವರೊಂದಿಗೆ ಜಂಟಿಯಾಗಿ ‘ಬೈಂದೂರು ಪ್ಯಾಲೇಸ್’ ಪ್ರಾಜೆಕ್ಟ್ ಕೈಗೆತ್ತಿಕೊಂಡಿದೆ. ಬೈಂದೂರಿನ ಮೊದಲ ಪ್ರಾಜೆಕ್ಟ್ ಆಗಿರುವ ಕಾರಣ ಆರ್. ಎಸ್. ವೆಂಚರ‍್ಸ್ ’ಮಾದರಿ ಫ್ಲಾಟ್’ ನಿರ್ಮಿಸಿದ್ದು ಬೈಂದೂರು ಪ್ಯಾಲೇಸ್‌ನ ಫ್ಲಾಟ್‌ಗಳು ಪೂರ್ಣಗೊಂಡ ಬಳಿಕ ಹೇಗಿರಲಿವೆ ಎಂಬುದರ ಸ್ಪಷ್ಟ ಚಿತ್ರಣ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತ ಸರಕಾರದ ನೆಹರು ಯುವ ಕೇಂದ್ರ, ಯುವಕ-ಯುವತಿ ಮಂಡಳಿಗಳಿಗೆ ಜಿಲ್ಲಾ ಯುವ ಮಂಡಳಿ ಪ್ರಶಸ್ತಿಯನ್ನು ಪ್ರತಿವರ್ಷ ನೀಡುತ್ತಾ ಬಂದಿದ್ದು, ಅದರಂತೆ 2018-19 ರ ಸಾಲಿನ ಪ್ರಶಸ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಯುವಕ/ ಯುವತಿ ಮಂಡಳಗಳು ಜಿಲ್ಲಾ ನೊಂದಾಣಾಧಿಕಾರಿಗಳ ಕಛೇರಿಯಲ್ಲಿ ನೋಂದಾವಣೆಯಾಗಿದ್ದು, ನೆಹರು ಯುವ ಕೇಂದ್ರದಲ್ಲಿ ಸಂಯೋಜನೆ ಹೊಂದಿರಬೇಕು. ಕಳೆದ ಸಾಲಿನ 2018-19 ರಲ್ಲಿ ಗ್ರಾಮ/ಪಟ್ಟಣ/ತಾಲೂಕು ಅಭಿವೃದ್ಧಿಗಾಗಿ ಜನಪರ ಕಾರ‍್ಯಕ್ರಮಗಳನ್ನು ನಡೆಸಿರಬೇಕು. ಮಾಹಿತಿಯು ಎಪ್ರಿಲ್ 1, 2018 ರಿಂದ ಮಾರ್ಚ್ 31, 2019 ರ ಒಳಗಿರಬೇಕು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಯುವ ಮಂಡಳಕ್ಕೆ 25,000 ರೂ., ಪ್ರಶಸ್ತಿ ಪತ್ರ ನೀಡಲಾಗುವುದು. ಸಂಪೂರ್ಣ ಮಾಹಿತಿ ಹಾಗೂ ಅರ್ಜಿಗಳನ್ನು ನೆಹರು ಯುವ ಕೇಂದ್ರ (ಬಿ-102, ಜಿಲ್ಲಾಧಿಕಾರಿ ಕಛೇರಿ ಆವರಣ), ರಜತಾದ್ರಿ, ಮಣಿಪಾಲ, ಉಡುಪಿ ಇವರ ಕಛೇರಿಯಿಂದ ಪಡೆದುಕೊಳ್ಳಬಹುದಾಗಿದೆ. ಸ್ಥಳೀಯ ಅರ್ಜಿಗಳನ್ನು ಸಲ್ಲಿಸಲು ಸೆಪ್ಟಂಬರ್ ೨೫ ಕೊನೆಯ ದಿನ. ಆಸಕ್ತ ಉಡುಪಿ ಜಿಲ್ಲೆಯ ಯುವಕ/ಯುವತಿ ಮಂಡಳಗಳು ಸಂಪೂರ್ಣ ಮಾಹಿತಿ ಹಾಗೂ ದಾಖಲೆಗಳೊಂದಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಪ್ರಾಕೃತಿಕ ವಿಕೋಪ ಕಡಿಮೆಯಾಗಲು, ಮತ್ಸ್ಯಸಂಪತ್ತು ಸಮೃದ್ಧಿಯಾಗಲೆಂದು, ಮೀನುಗಾರಿಕೆಗೆ ತೆರಳಿದ ಮೀನುಗಾರರಿಗೆ ಯಾವುದೇ ರೀತಿಯ ತೊಂದರೆಯಾಗದಿರಲೆಂದು ಹಾಗೂ ಗೋ ಸಂತತಿ ರಕ್ಷಣೆಗಾಗಿ ಮತ್ತು ಸಮಸ್ತ ಹಿಂದು ಸಮಾಜ ಒಗ್ಗಟ್ಟಿನಿಂದ ಇರಬೇಕೆಂಬ ಉದ್ದೇಶದಿಂದ ಗಂಗೊಳ್ಳಿ ಹಿಂದು ಜಾಗರಣ ವೇದಿಕೆಯ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಗಂಗೊಳ್ಳಿಯಿಂದ ಶ್ರೀ ಕ್ಷೇತ್ರ ಮಾರಣಕಟ್ಟೆಗೆ ಸೋಮವಾರ ಪಾದಯಾತ್ರೆ ನಡೆಸಿದರು. ಇಂದು ಬೆಳಿಗ್ಗೆ ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ಬಳಿಯಿಂದ ಶ್ರೀ ಕ್ಷೇತ್ರ ಮಾರಣಕಟ್ಟೆಗೆ ಪಾದಯಾತ್ರೆ ಕೈಗೊಂಡ ನೂರಾರು ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಮಧ್ಯಾಹ್ನ ಶ್ರೀ ಮಾರಣಕಟ್ಟೆ ತಲುಪಿದರು. ಬಳಿಕ ಶ್ರೀ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವರಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿ ಪಾದಯಾತ್ರೆ ಕೈಗೊಂಡ ಉದ್ದೇಶವನ್ನು ಈಡೇರಿಸುವಂತೆ ಶ್ರೀದೇವರಲ್ಲಿ ಪ್ರಾರ್ಥಿಸಿದರು. ಶ್ರೀ ಕ್ಷೇತ್ರದ ಪ್ರಸಾದವನ್ನು ತಂದು ಪಂಚಗಂಗಾವಳಿ ನದಿಗೆ ಅರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಹಿಂದು ಜಾಗರಣ ವೇದಿಕೆ ಜಿಲ್ಲಾ ಉಪಾಧ್ಯಕ್ಷ ವಾಸುದೇವ ದೇವಾಡಿಗ, ಗಂಗೊಳ್ಳಿ ಹಿಂದು ಜಾಗರಣ ವೇದಿಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಾರತ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (DDU –GKY) ಅಡಿಯಲ್ಲಿ ಗ್ರಾಮಿಣ ನಿರುದ್ಯೋಗಿ ಯುವಕ ಯುವತಿಯರಿಗೆ ಉಚಿತ ತರಬೇತಿ ಹಾಗೂ ಉದ್ಯೋಗವಕಾಶ / ಸ್ವ-ಉದ್ಯೋಗವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಬೈಂದೂರಿನ ನೈಪುಣ್ಯ ಇಂಟರ‍್ನ್ಯಾಷನಲ್ ಸಂಸ್ಥೆಯ ಮೂಲಕ ವಿವಿಧ ಕೋರ್ಸುಗಳ ನೊಂದಣಿಗೆ ಅರ್ಜಿ ಆಹ್ವಾನಿಸಲಾಗಿದೆ. ಹತ್ತನೇ ತರಗತಿಯಿಂದ ಸ್ನಾತಕೋತ್ತರ ಪದವಿ ಪಡೆದಿರುವ 18 ರಿಂದ 35 ವರ್ಷದ ವರೆಗಿನ ನಿರುದ್ಯೋಗಿ ಯುವಕ ಯುವತಿಯರ ಉಚಿತ ಉದ್ಯೋಗಾಧಾರಿತ ಕೋರ್ಸುಗಳಿಗೆ ನೊಂದಣಿ ಮಾಡಿಕೊಂಡು ಪ್ರವೇಶ ಪರೀಕ್ಷೆ ಹಾಗೂ ಸಂದರ್ಶನಕ್ಕೆ ಹಾಜರಾಗಿ ಪ್ರವೇಶಾತಿ ಪಡೆಯಬಹುದಾಗಿದೆ. ಪ್ರಸಕ್ತ ಸಾಲಿನಲ್ಲಿ ಅಕೌಂಟ್ ಅಸಿಸ್ಟೆಂಟ್, ಟು-ವೀಲರ್ ಡೆಲಿವರಿ ಅಸೋಸಿಯೇಟ್ ಹಾಗೂ ರಿಟೇಲ್ ಕೋರ್ಸುಗಳಿಗೆ ಮೂರು ತಿಂಗಳ ತರಬೇತಿ ನೀಡಲಾಗುತ್ತದೆ. ಪ್ರವೇಶ ಪಡೆಯುವ ಪ್ರತಿ ಅಭ್ಯರ್ಥಿಗೂ ದಿನದ ಭತ್ಯೆ ನೀಡುವುದರೊಂದಿಗೆ ಟ್ಯಾಬ್ಲೆಟ್, ಕಲಿಕಾ ಸಾಮಾಗ್ರಿ, ಊಟ, ವಸತಿ, ಸಮವಸ್ತ್ರ ಹಾಗೂ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ. ಬೆಳಿಗ್ಗೆ 9…
ಕುಂದಾಪ್ರ ಡಾಟ್ ಕಾಂ’ ಸುದ್ದಿ ಬೈಂದೂರು: ವಿಮಾ ಸೌಲಭ್ಯ ನೀಡುವುದರ ಜತೆಯಲ್ಲಿ ದೇಶದ ಆರ್ಥಿಕ ಪ್ರಗತಿಗೆ ಅಗತ್ಯವಾದ ಸಂಪನ್ಮೂಲ ಕ್ರೋಢೀಕರಣ ಮಾಡುವಲ್ಲಿ ನೆರವಾಗುತ್ತಿರುವ ಭಾರತೀಯ ಜೀವ ನಿಗಮದ ನೌಕರರು ಮತ್ತು ವಿಮಾ ಪ್ರತಿನಿಧಿಗಳು ಅರ್ಥವ್ಯವಸ್ಥೆಯ ಕಾಲಾಳುಗಳು ಎಂದು ಅಂಕಣಕಾರ ಬೈಂದೂರು ಚಂದ್ರಶೇಖರ ನಾವಡರು ಹೇಳಿದರು. ಅವರು ಇತ್ತೀಚೆಗೆ ಜೀವವಿಮಾ ನಿಗಮದ ಬೈಂದೂರು ಉಪಗ್ರಹ ಶಾಖೆಯಲ್ಲಿ ಏರ್ಪಡಿಸಿದ 63 ನೇ ವಿಮಾ ಸಪ್ತಾಹದ ಅಂಗವಾಗಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಮಾಜದ ವಿವಿಧ ವರ್ಗಗಳನ್ನು ದೃಷ್ಟಿಯಲ್ಲಿರಿಸಿಕೊಂಡು ನಿಗಮ ರೂಪಿಸುವ ಪ್ಲಾನ್ ಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮಹಾನ್ ಕಾರ್ಯ ಮಾಡುವ ವಿಮಾ ಪ್ರತಿನಿಧಿಗಳ ಸೇವೆಯನ್ನು ಅವರು ಪ್ರಶಂಸಿದರು. ಶಾಖಾಧಿಕಾರಿ ಜಗದೀಶ ಶೆಟ್ಟಿ 1956ರಲ್ಲಿ ಭಾರತ ಸರ್ಕಾರದ ಕೇವಲ 5 ಕೋಟಿ ರೂ ಹೂಡಿಕೆಯೊಂದಿಗೆ ಪ್ರಾರಂಭಗೊಂಡ ನಿಗಮ ಇಂದು ಸುಮಾರು 31 ಲಕ್ಷ ಕೋಟಿ ರೂ ಆಸ್ತಿ ಹಾಗೂ ಅಂದಾಜು 28 ಲಕ್ಷ ಕೋಟಿ ರೂ ವಿಮಾನಿಧಿ ಹೊಂದಿದ ಬೃಹದ್ ಸಂಸ್ಥೆಯಾಗಿ ಬೆಳೆದ ಪ್ರೇರಣಾದಾಯಿ ಯಶೋಗಾಥೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೇವಾಡಿಗ ಸಮುದಾಯವು ದೀರ್ಘಕಾಲ ತುಳಿತಕ್ಕೆ ಒಳಗಾಗಿತ್ತು. ಶ್ರಮಪಟ್ಟು ಸಂಘಟಿತವಾಗಿ ಇದೀಗ ಸಮಾಜದ ಪ್ರಧಾನ ವಾಹಿನಿಗೆ ಸೇರಿಕೊಳ್ಳುತ್ತಿದೆ. ಅದನ್ನು ಇನ್ನಷ್ಟು ಉನ್ನತಿಗೊಯ್ಯಲು ಎಲ್ಲ ಹಂತಗಳಲ್ಲೂ ಅದು ಸಂಘಟಿತವಾಗಬೇಕು ಎಂದು ಶಿವಮೊಗ್ಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕ ಆಲೂರು ರಘುರಾಮ ದೇವಾಡಿಗ ಹೇಳಿದರು. ಮರವಂತೆ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮರವಂತೆ ದೇವಾಡಿಗ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ದೇವಾಡಿಗ ಸಮುದಾಯ ಸಂಘಟಿತವಾದರೆ ಮಹತ್ಸಾಧನೆ ಮಾಡಬಹುದು ಎನ್ನುವುದಕ್ಕೆ ಬಾರ್ಕೂರಿನಲ್ಲಿ ರೂ. ೯.೫ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಕುಲದೇವತೆ ಏಕನಾಥೇಶ್ವರಿ ದೇವಾಲಯವೇ ನಿದರ್ಶನ. ಸಮುದಾಯ ಮಕ್ಕಳ ಶಿಕ್ಷಣಕ್ಕೆ, ಪಾರಂಪರಿಕವಾಗಿ ಬಂದ ಕುಲಕಸುಬಿನ ಆಧುನೀಕರಣಕ್ಕೆ ಒತ್ತು ನೀಡಬೇಕು. ತಳಮಟ್ಟದ ಸಂಘಟನೆಗಳಲ್ಲಿ ಭೇದಭಾವಕ್ಕೆ ಎಡೆಕೊಡದೆ, ಹೊಂದಾಣಿಕೆಯ ಮೂಲಕ ಗುರಿ ಸಾಧಿಸಬೇಕು ಎಂದು ಅವರು ಹೇಳಿದರು. ದಿಕ್ಸೂಚಿ ಭಾಷಣ ಮಾಡಿದ ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ, ದೇವಾಡಿಗ ಸಮುದಾಯ ತನ್ನ ಉನ್ನತ ಪರಂಪರೆ ಮತ್ತು ಸಮಾಜಕ್ಕೆ ನೀಡುತ್ತಬಂದ ಕೊಡುಗೆಗಳನ್ನು…
