Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ’ವ್ಯಕ್ತಿ ತನ್ನ ವ್ಯವಹಾರದ ದೃಷ್ಟಿಯಿಂದ ಮಾಡಿದ ಕೆಲಸವಾದರೂ ಅದರಿಂದ ಜನರಿಗೆ ಅನುಕೂಲ, ಸಂತೋಷ ಆಗುವುದಾದರೆ ಆ ಕೆಲಸ ದೇವರ ಪೂಜೆಗೆ ಸಮನಾದುದು. ವೈ. ಬಾಬು ರಾವ್ ಕುಟುಂಬ ನಂದನವನದಲ್ಲಿ ನಿರ್ಮಿಸಿರುವ ಸಭಾ ಭವನ ಮತ್ತು ಹೋಟೆಲ್ ಸಮುಚ್ಚಯ ಗ್ರಾಮದ ಜನರಿಗೆ ನಗರದ ಸೌಲಭ್ಯ ಒದಗಿಸುವುದರಿಂದ ಅಂತಹ ಕೆಲಸದ ಸಾಲಿಗೆ ಸೇರುತ್ತದೆ’ ಎಂದು ಉಡುಪಿಯ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು. ಉಪ್ಪುಂದದ ಅಂಬಾಗಿಲು ಸಮೀಪದ ನಂದನವನದಲ್ಲಿ ನವಿ ಮುಂಬಯಿಯ ಹೋಟೆಲ್ ಉದ್ಯಮವಾದ ’ವೈ. ಬಾಬು ರಾವ್ ಹಾಸ್ಪಿಟ್ಯಾಲಿಟಿ ಎಂಡ್ ಸರ್ವೀಸಸ್’ ನಿರ್ಮಿಸಿರುವ ದೇವಕಿ ಸಭಾ ಭವನ, ಪರಿಚಯ ವಸತಿ ಗೃಹ ಮತ್ತು ಪ್ರಕೃತಿ ರೆಸ್ಟೊರಂಟ್ ಸಮುಚ್ಛಯವನ್ನು ಬುಧವಾರ ಉದ್ಘಾಟಿಸಿದ ಬಳಿಕ ಆಶೀರ್ವಚನ ನೀಡಿದರು. ’ದೇವರ ಅನುಗ್ರಹ ಮತ್ತು ಸ್ವಪ್ರಯತ್ನ ವ್ಯಕ್ತಿಯ ಬದುಕಿನ ರಥದ ಎರಡು ಚಕ್ರಗಳು. ಅವು ಜತೆಯಲ್ಲಿ ಸಾಗಿದರಷ್ಟೆ ಯಶಸ್ಸಿನ ಯಾತ್ರೆಯ ಗುರಿ ತಲಪಲು ಸಾಧ್ಯ. ಇಲ್ಲಿ ನಿರ್ಮಿಸಿರುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬುಡಕಟ್ಟು ಸಮುದಾಯಕ್ಕೆ ಸೇರಿದ ಕೊರಗ ಮಕ್ಕಳಲ್ಲಿ ಅಭಿಜಾತ ಪ್ರತಿಭೆ ಇದೆ. ಬಿಲ್ಲುವಿದ್ಯೆಯಲ್ಲಿ ಅವರು ತೋರಿದ ಪರಿಶ್ರಮ ಇದಕ್ಕೆ ನಿದರ್ಶನ. ಅವರು ಪಡೆದ ಶಿಕ್ಷಣ ಸಂಬಂಧಿತ ಚಟುವಟಿಕೆಗಳನ್ನು ಕೈಬಿಡದೆ ಮುಂದುವರಿಸಿದರೆ ಆ ಕೌಶಲ ವೃದ್ಧಿಸುತ್ತದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು. ಕುಂಭಾಶಿಯ ಡಾ. ಬಿ. ಆರ್. ಅಂಬೇಡ್ಕರ್ ನಗರದ ’ಮಕ್ಕಳಮನೆ’ಯಲ್ಲಿ ನಡೆದ ಕೊರಗ ಮಕ್ಕಳ ಬಿಲ್ಲುವಿದ್ಯೆ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ಕುಂಭಾಶಿಯ ಕೊರಗರ ’ಮಕ್ಕಳ ಮನೆ’ಯಲ್ಲಿ ವಿಶೇಷ ಅನುಭವ ನೀಡುವ ವಾತಾವರಣ ಇದೆ. ಈ ಕಾರ್ಯಕ್ರಮ ಒಂದು ಕನಸಿನ ಲೋಕದಲ್ಲಿ ನಡೆದಿದೆ. ಇಲ್ಲಿ ಕ್ರಿಯಾಶೀಲತೆ ಇದೆ. ಇದು ಸರ್ಕಾರಿ ಇಲಾಖೆಗಳ ಕಾರ್ಯಕ್ರಮಗಳಲ್ಲಿ ಅಲಭ್ಯ. ಅನ್ಯ ಸಮುದಾಯದ ಮಕ್ಕಳಿಗೆ ಇಂತಹ ಅನುಭವ ಸಿಗದಿರುವ ಬಗ್ಗೆ ಬೇಸರವಿದೆ. ಇಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಬರುವೆನೆಂದ ಜಿಲ್ಲಾಧಿಕಾರಿ, ಕೊರಗ ಸಮುದಾಯದ ಸದಸ್ಯರು ಸರ್ಕಾರದ ಸೌಲಭ್ಯಗಳು ಸಿಕ್ಕಿಲ್ಲ ಎಂದು ದೂರಿದ್ದಿಲ್ಲ. ಅವರು…

Read More

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ಲೇಖನ ತನ್ನ ಸ್ನೇಹಮಯಿ ವ್ಯಕ್ತಿತ್ವ ಹಾಗೂ ಹುರುಪಿನ ಮಾತುಗಾರಿಕೆಯ ಮೂಲಕ ಸಹಕಾರಿ, ಸಾಮಾಜಿಕ ಹಾಗೂ ಧಾರ್ಮಿಕ ರಂಗದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಕವಿಹೃದಯಿ ನಾಯ್ಕನಕಟ್ಟೆಯ ಕೆ. ಪುಂಡಲೀಕ ನಾಯಕ್. ವೃತ್ತಿ ಬದುಕಿನ ನಿವೃತ್ತಿಯ ತರುವಾಯ ಪುಂಡಲೀಕ ನಾಯಕ್ ಅವರ ಆಸಕ್ತಿ ಹೊರಳಿದ್ದು ಸಾಹಿತ್ಯ ಪ್ರಕಾರವೊಂದರೆಡೆಗೆ. ಮೊದಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಕವನ ರೂಪದಲ್ಲಿ ಅವರು ನೀಡುತ್ತಿದ್ದ ಪ್ರತಿಕ್ರಿಯೆಗಳೇ ಕ್ರಮೇಣ ಹವ್ಯಾಸವಾಗಿ, ಹನಿಗವಿತೆಗಳಾಗಿ, ಮುಂದೆ ಸಾಲು ಸಾಲು ಕವನವಾಗಿ ಈಗ ’ಕಿರುಗೆಜ್ಜೆ’ ಕವನ ಸಂಕಲನವೊಂದನ್ನು ಹೊರತರುವಲ್ಲಿಗೆ ಬಂದು ನಿಂತಿದೆ. 1972ರಲ್ಲಿ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘಕ್ಕೆ ಚಿಕ್ಕ ರೈತರ ಅಭಿವೃದ್ಧಿ ಯೋಜನೆಯಡಿಯಲ್ಲಿ ನೇರ ನೇಮಕಾತಿ ಪಡೆದು ವೃತ್ತಿ ಬದುಕು ಆರಂಭಿಸಿದ್ದ ಪುಂಡಲೀಕ ನಾಯಕ್ ಅವರು ಮುವತ್ತೆಂಟುವರೆ ವರ್ಷ ಸುದೀರ್ಘ ಸೇವೆ ಸಲ್ಲಿಸಿದ್ದರು. ಕೊನೆಯ ಮೂರು ವರ್ಷ ಸಂಸ್ಥೆಯ ಆಡಳಿತ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಸಂಸ್ಥೆಯ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡಿದ್ದರು. ಆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಂಟ್ಸ್ ಕತಾರ್ ಸಂಸ್ಥೆಯ 2018-20ನೇ ಸಾಲಿನ ಅಧ್ಯಕ್ಷರಾಗಿ ದೀಪಕ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಉಪಾಧ್ಯಕ್ಷರಾಗಿ ರಾಮಣ್ಣ ಎಸ್. ಹೆಗ್ಡೆ, ಕಾರ್ಯದರ್ಶಿಯಾಗಿ ಅಶ್ವಿನಿ ಶೆಟ್ಟಿ, ಖಜಾಂಚಿಯಾಗಿ ನರೇಶ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಡಾ. ಪದ್ಮಶ್ರೀ ಶೆಟ್ಟಿ, ಪ್ರಮುಖ ಕಾರ್ಯಕ್ರಮಗಳ ಕಾರ್ಯದರ್ಶಿಯಾಗಿ ಮನೋಹರ ಶೆಟ್ಟಿ, ಸದಸ್ಯತ್ವ ಕಾರ್ಯದರ್ಶಿಯಾಗಿ ನಿತ್ಯಾನಂದ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಅಕ್ಷಿನಿ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ಸ್ವರೂಪ್ ಶೆಟ್ಟಿ, ಸಹ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಪ್ರೀಯಾ ಶೆಟ್ಟಿ, ಕಾರ್ಯಕ್ರಮಗಳ ಕಾರ್ಯದರ್ಶಿಯಾಗಿ ನಿತೀನ್ ಶೆಟ್ಟಿ, ಸಲಹಾ ಸಮಿತಿ ಮುಖ್ಯಸ್ಥರಾಗಿ ನವನೀತ್ ಶೆಟ್ಟಿ ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ ಪ್ರಯುಕ್ತ ನಡೆಯುತ್ತಿರುವ ಸಾಂಸ್ಕೃತಿಕ ಉತ್ಸವದಲ್ಲಿ ಹೈದರಬಾದಿನ ಭರತನಾಟ್ಯ ಕಲಾವಿದೆ ಮಾರಣಕಟ್ಟೆ ಅಮೂಲ್ಯ ಮಂಜ ಅವರ ಭರತನಾಟ್ಯ ಪ್ರದರ್ಶನ ನಡೆಯಿತು. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹೈದರಬಾದ್‌ನ ಹೋಟೆಲ್ ಉದ್ಯಮಿ, ಸಮಾಜ ಸೇವಕ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಹಾಗೂ ಶಾಂತಿ ಕೆ. ಮಂಜ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ, ಸದಸ್ಯರಾದ ವಂಡಬಳ್ಳಿ ಜಯರಾಮ ಶೆಟ್ಟಿ ಚಿತ್ತೂರು, ರಮೆಶ್ ಗಾಣಿಗ ಕೊಲ್ಲೂರು, ರಾಜೇಶ್ ಕಾರಂತ ಉಪ್ಪಿನಕುದ್ರು, ಕೆ.ವಿ. ಶ್ರಿಧರ ಅಡಿಗ ಕೊಲ್ಲೂರು, ಅಂಬಿಕಾ ದೇವಾಡಿಗ, ನರಸಿಂಹ ಹಳಗೇರಿ, ಜಯಂತಿ ವಿಜಯಕೃಷ್ಣ, ಕ್ಷೇತ್ರ ಸಿಬ್ಬಂದಿ ವರ್ಗ ಹಾಗೂ ಅರ್ಚಕ ವೃಂದದವರು ಉಪಸ್ಥಿತರಿದ್ದರು. ಅಮೂಲ್ಯ ಅವರು ಗಜವದನ, ಪುಷ್ಪಾಂಜಲಿ, ತ್ರಿಶಕ್ತಿ ದರ್ಶನ, ಭೋಷಂಬೋ, ಶ್ರೀ ಮೂಕಾಂಬಿಕಾ ಸ್ತೋತ್ರ’ದ ಭರತನಾಟ್ಯ ಪ್ರದರ್ಶನವನ್ನು ನೀಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ದೇವಸ್ಥಾನದ ಅರ್ಚಕ ನರಸಿಂಹ ಅಡಿಗ ಅವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಮಲೇಷಿಯಾದಲ್ಲಿ ಜರುಗಿದ 32ನೇ ಮಲೇಷಿಯನ್ ಅಂತರಾಷ್ಟ್ರೀಯ ಒಪನ್ ಮಾಸ್ಟರ‍್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬೆಳ್ಳೆ ಸರಕಾರಿ ಹೌಸ್ಕೂಲಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿರುವ, ಬೈಂದೂರು ಮಯ್ಯಾಡಿಯ ಶಾಂತಾ ಕುಮಾರಿ ಜಿ. ಅವರು ಪ್ರತ್ಯೇಕ ವಿಭಾಗಗಳನ್ನು 2 ಚಿನ್ನ ಹಾಗೂ 1 ಕಂಚಿನ ಪದಕ ಗೆದ್ದಿದ್ದಾರೆ. ಶಾಂತಾಕುಮಾರಿ ಅವರು ಅಥ್ಲೆಟಿಕ್ಸ್‌ನ ಹೈಜಂಪ್ ಹಾಗೂ ತ್ರಿಬಲ್ ಜಂಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರೆ, ಲಾಂಗ್ ಜಂಪ್ ನಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಸ್ವರ್ಧೆಯಲ್ಲಿ ಭಾಗವಹಿಸಿದ ಶಾಂತಾ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಈ ಸಾಧನೆ ಮಾಡಿದ್ದಾರೆ. 2013ರಿಂದಲೂ ಇಂಡಿಯನ್ ಮಾಸ್ಟರ್ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಶಾಂತಾ ಕುಮಾರಿ ಅವರು ಪ್ರತಿ ವರ್ಷವೂ ವಿವಿಧ ವಿಭಾಗಳಲ್ಲಿ ಪದಕ ಗೆದ್ದು ಅಂತರಾಷ್ಟ್ರೀಯ ಮಟ್ಟದಲ್ಲೂ ಭಾಗವಹಿಸಲು ಅರ್ಹತೆ ಪಡೆಯುತ್ತಲೇ ಬಂದಿದ್ದಾರೆ. ಪ್ರಸಕ್ತ ವರ್ಷ ಮಂಗಳೂರಿನಲ್ಲಿ ನಡೆದ ನ್ಯಾಶನಲ್ ಅಥ್ಲೆಟ್ಸ್‌ನಲ್ಲಿ 1 ಚಿನ್ನ, 2 ಬೆಳ್ಳಿಯ ಪದಕವನ್ನು ಗೆದ್ದಿದ್ದು ಮೊದಲ ಭಾರಿಗೆ ಅಂತರಾಷ್ಟ್ರೀಯ ಒಪನ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇರಾನಿನಲ್ಲಿ ಬಂಧಿತರಾಗಿರುವ ಭಟ್ಕಳ್ ಪ್ರದೇಶದ 23 ಮಂದಿಯನ್ನು ಬಿಡುಗಡೆಗೊಳ್ಳಿಸುವ ಪ್ರಯತ್ನಕ್ಕಾಗಿ ಕೆ.ಏನ್.ಆರ್ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಅವರ ನೇತೃತ್ವದ ತಂಡ ಇಂದು ದುಬೈಯಲ್ಲಿರುವ ಭಾರತದ ಉಪ ರಾಯಬಾರಿ ಕಚೇರಿಗೆ ಭೇಟಿ ನೀಡಿ ಉಪ ರಾಯಬಾರಿಗಳಾದ ವಿಪುಲ್ ಅವರೊಂದಿಗೆ ಚರ್ಚೆ ನಡೆಸಿದರು. ಶೀಘ್ರ ಈ ಬಗ್ಗೆ ಇರಾನಲ್ಲಿರುವ ಭಾರತ ರಾಯಬಾರಿಯವರೊಂದಿಗೆ ಚರ್ಚೆ ನಡಿಸಿ ಬಿಡುಗಡೆಗೆ ಬೇಕಾದ ವ್ಯವಸ್ಥೆ ಮಾಡುವುದಾಗಿ ವಿಪುಲ್ ಅವರು ಭರವಸೆ ನೀಡಿದ್ದಾರೆ. ಭಟ್ಕಳ್ ಸಂಘಟನೆಯ ಮುಖ್ಯಸ್ಥರಾದ ಸಯೀದ್ ಖಲೀಲ್ ಹಾಗು ಕೆ ಏನ್ ಆರ್ ಐ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಮೊಹಮ್ಮದ್ ಚರ್ಚೆಯಲ್ಲಿ ಭಾಗವಹಿಸಿದರು. ಪ್ರದಾನ ಕಾರ್ಯದರ್ಶಿ ಪ್ರಭಾಕರ್ ಅಂಬಲತೆರೆ ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜರ್ಮನಿಯ ಇಂಟರ್ ನ್ಯಾಶನಲ್ ಓಪನ್ ಯೂವರ್‌ಸಿಟಿ ವತಿಯಿಂದ ಕಾರ್ಮಿಕ ಮುಖಂಡ ಹಾಗೂ ಕಾರ್ಮಿಕ ವೇದಿಕೆಯ ಕರ್ನಾಟಕ ರಾಜ್ಯದ ರಾಜ್ಯಾಧ್ಯಕ್ಷ, ಜೆಡಿಎಸ್‌ನ ಯುವ ನಾಯಕ ರವಿ ಶೆಟ್ಟಿ ಬೈಂದೂರು ಇವರಿಗೆ ಇತ್ತೀಚೆಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಈ ಹಿನ್ನೆಲೆಯಲ್ಲಿ ಉಪ್ಪುಂದ ಶಂಕರ ಕಲಾಮಂದಿರದ ಸಮೃದ್ಧ ಸಭಾ ಭವನದಲ್ಲಿ ಬೈಂದೂರು ಬ್ಲಾಕ್ ಜೆಡಿಎಸ್ ವತಿಯಿಂದ ಅಭಿನಂದನಾ ಸಮಾರಂಭ ನಡೆಯಿತು. ಬೈಂದೂರು ಬ್ಲಾಕ್ ಜೆಡಿಎಸ್ ಅಧ್ಯಕ್ಷ ಯು. ಸಂದೇಶ ಭಟ್ ರವರು ರವಿ ಶೆಟ್ಟಿ ಇವರಿಗೆ ಶುಭ ಹಾರೈಸಿ ಅಭಿನಂದಿಸಿ ಮಾತನಾಡುತ್ತಾ ರವಿ ಶೆಟ್ಟಿ ಅವರು ಕಾರ್ಮಿಕರು ಹಾಗೂ ಷೋಷಿತರು, ರೈತ ಪರ, ಹಲವಾರು ಹೋರಾಟ ನಡೆಸಿ ಕಾರ್ಮಿಕ ಸಂಘಟನೆ ಮುನ್ನೆಡೆಸಿರುತ್ತಾರೆ ಮತ್ತು ಜೆಡಿಎಸ್ ವತಿಯಿಂದ ಜನಪಯೋಗಿ ಕೆಲಸಗಳನ್ನು ಮಾಡಿರುವುದರಿಂದ ಸಂಧಿರುವ ಗೌರವ ಡಾಕ್ಟರೇಟ್ ಸಾಮಾಜಿಕ ಮತ್ತು ಷೋಷಿತರ ಪರವಾಗಿ ದುಡಿಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗಲಿದೆ ಹಾಗೂ ಯುವ ಸಮುದಾಯಕ್ಕೆ ಸ್ಪೂರ್ತಿಯಾಗಲಿ ಎಂದು ಹೇಳಿದರು. ಪಕ್ಷದ ಹಿರಿಯ ನಾಯಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ತೆಕ್ಕಟ್ಟೆ ಕುವೆಂಪು ಮಾದರಿ ಶಾಲೆಯಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಅತಿಥೇಯ ಕುವೆಂಪು ಶತಮಾನೋತ್ಸವ ಮಾದರಿ ಶಾಲೆ, ತೆಕ್ಕಟ್ಟೆ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನಗಳಿಸಿದೆ. ಶಾಲೆಯ ವಿದ್ಯಾರ್ಥಿಗಳಾದ ಪ್ರಶಾಂತ, ಆದಿತ್ಯ, ಅಂಜನ್, ಪ್ರೀತಮ್ ಮತ್ತು ಸನ್ನಿಧಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಮಲ್ಯಾಡಿ ಸದಾರಾಮ ಶೆಟ್ಟಿ ತರಬೇತಿ ನೀಡಿದ್ದಾರೆ. ಚಿತ್ರದಲ್ಲಿ ಮುಖ್ಯೋಪಾಧ್ಯಾಯಿನಿ ಲಲಿತಾ ಸಖಾರಾಮ್, ಶಿಕ್ಷಕರಾದ ವೇಣುಗೋಪಾಲ ಹೆಗ್ಡೆ, ಸದಾನಂದ ಶೆಟ್ಟಿ, ಸೀತಾಲಕ್ಷ್ಮಿ, ಪಾರ್ವತಿ ಮುದ್ದೋಡಿ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಸದಾರಾಮ ಶೆಟ್ಟಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಕಾರ್ತ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರ್ ಗೇಮ್ಸ್‌ನಲ್ಲಿ ಕುಂದಾಪುರ ಗಂಗೊಳ್ಳಿಯ ಚೆಸ್ ತಾರೆ ಕಿಶನ್ ಗಂಗೊಳ್ಳಿ ಅವರು ಪುರುಷರ ವಿಭಾಗದ ಚೆಸ್ ಬಿ೨/ಬಿ೩ ವೈಯಕ್ತಿಕ ರ‍್ಯಾಪಿಡ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಮೂಲತಃ ಗಂಗೊಳ್ಳಿಯವರಾದ, ಪ್ರಸ್ತುತ ಶಿವಮೊಗ್ಗದಲ್ಲಿ ನೆಲೆಸಿರುವ ಗೀತಾ ಗಂಗೊಳ್ಳಿ ಅವರ ಪುತ್ರರಾದ ಕಿಶನ್ ಗಂಗೊಳ್ಳಿ ತಮ್ಮ ಅಂಧತ್ವವನ್ನು ಮೆಟ್ಟಿ ನಿಂತು ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಸಾಧನೆ ಮಾಡಿದ್ದಾರೆ. 2012ರಲ್ಲಿ ಚೆನ್ನೈನಲ್ಲಿ ನಡೆದ ಅಂಧರ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಕಿಶನ್ ಅವರು ೨೦೧೩ರಿಂದ ೨೦೧೭ರ ತನಕ ಸತತ ನಾಲ್ಕು ಬಾರಿ ಅಂಧರ ರಾಷ್ಟ್ರೀಯ ಚೆಸ್ ಚಾಂಪಿಯನ್ ಆಗಿ ದಾಖಲೆ ನಿರ್ಮಿಸಿದ್ದರು. ಈಗ ಮತ್ತೊಂದು ಸಾಧನೆ ಮುಡಿಗೇರಿದೆ.

Read More