ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇತ್ತಿಚಿಗೆ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಕೊಲ್ಲೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ವಿರುದ್ಧ ಮಾಡಿದ ಬೆದರಿಕೆ ಹಾಗೂ ಮಾನಸಿಕ ಹಿಂಸೆ ಆರೋಪಗಳು ಮತ್ತು ಅವುಗಳಿಗೆ ಸುಕುಮಾರ ಶೆಟ್ಟಿ ನೀಡಿದ ವಾಸ್ತವ ಅಂಶ ಆಧಾರಿತ ಸ್ಪಷ್ಟನೆಯ ಹಿನ್ನೆಲೆಯಲ್ಲಿ ಪಕ್ಷ ಕಾರ್ಯಕರ್ತರಲ್ಲಿ, ಮತದಾರರಲ್ಲಿ ಗೊಂದಲ ಏರ್ಪಟ್ಟಿದೆ. ಈ ಪ್ರಕರಣವನ್ನು ವಿರೋಧ ಪಕ್ಷಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ತೊಡಗಿವೆ. ಈ ಕಾರಣದಿಂದ ಮತ್ತು ಸದಾನಂದ ಕುಟುಂಬದವರ ಮೇಲಿನ ಮಾನವೀಯತೆಯಿಂದ ಅವರ ವಿರುದ್ಧ ದಾಖಲಿಸಿರುವ ಚೆಕ್ ಬೌನ್ಸ್ ಪ್ರಕರಣವನ್ನು ಹಿಂತೆಗೆದುಕೊಳ್ಳಲು ಶಾಸಕರು ನಿರ್ಧರಿಸಿದ್ದಾರೆ ಎಂದು ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ ತಿಳಿಸಿದರು. ಭಾನುವಾರ ಇಲ್ಲಿನ ಪಕ್ಷ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಬಿಜೆಪಿ ಶಿಸ್ತಿನ ಪಕ್ಷ. ಅದರಲ್ಲಿ ಹಿರಿಯರು, ಕಿರಿಯರು ಒಂದು ಕುಟುಂಬದ ಸದಸ್ಯರಿದ್ದಂತೆ. ಒಂದು ಕೆಟ್ಟ ಘಳಿಗೆಯಲ್ಲಿ ಈ ಬೆಳವಣಿಗೆ ಆಗಿದೆ. ಇದನ್ನು ಮುಂದುವರಿಸಬಾರದೆಂದು ಪಕ್ಷದ ಜಿಲ್ಲಾ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಪ್ತಿ ಗ್ರಾಮದ ಸುಣ್ಣಾರಿಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ವಾರಾಹಿ ಎಡದಂಡೆ ನೀರಾವರಿ ಯೋಜನೆ ಅಚ್ಚುಕಟ್ಟು ಪ್ರದೇಶದ ರೈತರ ಸಭೆ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ವಾರಾಹಿ ನೀರಾವರಿ ಯೋಜನೆಯ ಉದ್ದೇಶ ರೈತರಿಗೆ ನೀರು ಕೊಡುವುದು. ಮೂಲ ಯೋಜನೆಯಲ್ಲಿರುವಂತೆ ನೀರು ಆರ್ಹ ರೈತರನ್ನು ತಲುಪಬೇಕು. ರೈತರ ತಾಳ್ಮೆಯನ್ನು ಪರೀಕ್ಷೆ ಮಾಡುವುದು ಸರಿಯಲ್ಲ. ಅದಷ್ಟು ಬೇಗ ಮೂಲಯೋಜನೆಯಲ್ಲಿರುವ ಎಲ್ಲ ಗ್ರಾಮಗಳಿಗೂ ನೀರು ಕೊಡುವ ಕೆಲಸ ಆಗಬೇಕು ಎಂದರು. ರೈತ ಸಂಘ ಧರಣಿ ಸತ್ಯಾಗ್ರಹ ನಡೆಸಿ ಆರು ವರ್ಷವಾಯಿತು. ಇನ್ನೂ ಕೂಡಾ ಎಡದಂಡೆ ಯೋಜನೆಯೇ ಪೂರ್ಣವಾಗಿಲ್ಲ. ಇಷ್ಟು ಸಮಯ ಕಾದಿದ್ದೇವೆ. ತಾಂತ್ರಿಕ ಸಮಸ್ಯೆಗಳು, ಹಣಕಾಸು, ಇಂಜಿನಿಯರ್, ಭೂಸ್ವಾಧೀನ ಇತ್ಯಾದಿ ಸಮಸ್ಯೆಗಳು ನಮಗೂ ಅರಿವಿದೆ. ಇನ್ನೂ ಅದೆಷ್ಟು ಬೇಗ ಕೆಲಸ ಪೂರ್ಣಗೊಳಿಸಿ. ಇವತ್ತು ಎಲ್ಲರಿಗೂ ವಾರಾಹಿ ನೀರಾವರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಿಜೆಪಿ ಮುಖಂಡರಾದ ಸದಾನಂದ ಉಪ್ಪಿನಕುದ್ರು ಅವರಿಗೆ ತಾನು ಬಡ್ಡಿಯಲ್ಲಿ ಸಾಲ ನೀಡಿಲ್ಲ. ಅವರಿಂದ ಯಾವುದೇ ಬ್ಲ್ಯಾಂಕ್ ಚೆಕ್ ಪಡೆದಿಲ್ಲ. ಈ ಹಿಂದೆ ಜಾಗ ಖರೀದಿಯ ವ್ಯವಹಾರದಲ್ಲಿ ಅವರು ನೀಡಿದ ಚೆಕ್ಗಳು ಬೌನ್ಸ್ ಆಗಿದ್ದು ಆ ಪ್ರಕರಣ ಕೋರ್ಟ್ನಲ್ಲಿದೆ ಎಂದು ಕುಂದಾಪುರದ ನ್ಯಾಯವಾದಿ ಸದಾನಂದ ಶೆಟ್ಟಿ ಹೇಳಿದ್ದಾರೆ. ಶನಿವಾರ ಕುಂದಾಪುರ ಪ್ರೆಸ್ ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ಸದಾನಂದ ಉಪ್ಪಿನಕುದ್ರು ಅವರಿಗೆ ತಾನು ವಂಚನೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸ್ಪಷನೆ ನೀಡಿ ಸದಾನಂದ ಉಪ್ಪಿನಕುದ್ರು ನನ್ನ ಮೇಲೆ ಮಾನಹಾನಿಕರ ಮತ್ತು ಸುಳ್ಳು ಆರೋಪಗಳನ್ನು ಜಗದ್ವಿಖ್ಯಾತ ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ಮಾಡಿದ್ದಾರೆ. ಇದರ ಹಿನ್ನೆಲೆ ಏನು, ಉದ್ದೇಶವೇನು ಮತ್ತು ಇದರ ಹಿಂದೆ ಯಾರಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಆದರೆ ಸದಾನಂದ ಉಪ್ಪಿನಕುದ್ರು ಮಾಡಿರುವ ಆರೋಪಗಳು ಸಂಪೂರ್ಣ ಸತ್ಯಕ್ಕೆ ದೂರವಾಗಿದೆ ಎಂದು ಸದಾನಂದ ಶೆಟ್ಟಿ ಹೇಳಿದ್ದಾರೆ. ಅವರು ಮಾಡಿರುವ ಆರೋಪಕ್ಕೆ ಒಂದೇ ಒಂದು ಸಾಕ್ಷ್ಯವನ್ನು ಅವರು ನೀಡಿಲ್ಲ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ವೈದ್ಯಕೀಯ ವೃತ್ತಿ ಒಂದು ವೃತ್ತಿ ಮಾತ್ರವಲ್ಲದೆ, ಜನರ ನಿಸ್ವಾರ್ಥ ಸೇವೆ ಮಾಡಲು ಇರುವ ಮಾರ್ಗ. ವೈದ್ಯಕೀಯ ಶಿಕ್ಷಣದಲ್ಲಿ ಪ್ರಮಾಣಪತ್ರ ಪಡೆದುಕೊಂಡು ಹೆಸರಿಗೆ ವೈದ್ಯರಾಗದೇ ಜನಸೇವೆ ಮಾಡಿ ಜನರಿಂದ ಮೆಚ್ಚುಗೆ ಪಡೆಯಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು. ಮೂಡುಬಿದಿರೆಯ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ಆಯುರ್ವೇದ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ನಡೆದ “ಸಂಪನ್ನಮ್” ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಬ್ಬ ಜವಾಬ್ದಾರಿಯುತ ವೈದ್ಯನಾಗಿ ಕೆಲಸ ಮಾಡಿದಾಗ ಮಾತ್ರ, ಜನರಿಗೆ ವಿಶ್ವಾಸ ಮೂಡಲು ಸಾಧ್ಯ. ಲಾಭಕ್ಕಾಗಿ ಕೆಲಸ ಮಾಡದೇ ಜನರ ನಂಬಿಕೆ ಉಳಿಸಿಕೊಳ್ಳುವ ವೈದ್ಯರಾಗಬೇಕು ಎಂದು ಕಿವಿಮಾತು ಹೇಳಿದರು. ಮನುಷ್ಯ ಮಾಡುವ ತಪ್ಪಿನಿಂದ ಕೊರೋನಾದಂತಹ ಸಾಂಕ್ರಾಮಿಕ ರೋಗಗಳು ಬರುವುದು ಸಹಜ. ಹಾಗೆಂದು ಭಯಪಟ್ಟು ಪಲಾಯನ ಮಾಡುವುದರ ಬದಲು, ಅದನ್ನು ಎದುರಿಸಬೇಕು. ಓಡಿ ಹೋಗುವವರಾದರೆ, ವೈದ್ಯಕೀಯ ಪದವಿ ಪಡೆಯುವುದೇ ವ್ಯರ್ಥ” ಎಂದು ಹೇಳಿದ ಡಾ. ಆಳ್ವ, ಕೊರೊನಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಮೀಪದ ಅಶೋಕ ದೇವಾಡಿಗ ಎನ್ನುವವರ ಅಂದಾಜು ೩೦ ಅಡಿಯ ಬಾವಿಗೆ ಚಿರತೆ ಬಿದ್ದಿರುವುದನ್ನು ಕಂಡ ಮನೆಯವರು ಸ್ಥಳೀಯರ ಸಹಕಾರದಿಂದ ಕಾರ್ಯಾಚರಣೆ ನಡೆಸಿ ಚಿರತೆಯನ್ನು ರಕ್ಷಿಸಿದ್ದಾರೆ. ಚಿರತೆ ಬಾವಿಯೊಳಗೆ ಇರುದನ್ನು ಗಮನಿಸಿ ಸ್ಥಳೀಯರಿಗೆ ತಿಳಿಸಿ ಬಳಿಕ ಅರಣ್ಯ ಇಲಾಖೆಗೆ ತಿಳಿಸಿದರು. ತಕ್ಷಣ ಆಗಮಿಸಿದ ನೇರಳಕಟ್ಟೆ ಉಪವಯ ಅರಣ್ಯಾಧಿಕಾರಿ ಶರತ್ ಗಾಣಿಗ ಹಾಗೂ ಸಿಬ್ಬಂದಿ, ಸ್ಥಳೀಯರ ನೆರವಿನೊಂದಿಗೆ ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್ ಸ್ಥಳಕ್ಕಾಗಮಿಸಿ ಹಗ್ಗ ಹಾಗೂ ಬುಟ್ಟಿಯನ್ನು ಬಳಸಿ ಚಿರತೆಗೆ ಬುಟ್ಟಿಯಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಲಾಯಿತು. ಸುಮಾರು ಅರ್ಧ ಗಂಟೆ ಕಾರ್ಯಾಚರಣೆ ನಡೆಸಿ ಬೋನಿನ ಸಹಾಯದಿಂದ ಚಿರತೆಯನ್ನು ಮೇಲತ್ತಲಾಯಿತು. ಚಿರತೆ 2 ವರ್ಷ ಪ್ರಾಯ ಎಂದು ಅಂದಾಜಿಸಲಾಗಿದೆ. ಈ ಸಂದರ್ಭ ವಂಡ್ಸೆ ಉಪವಲಯ ಅರಣ್ಯಾಧಿಕಾರಿ ಹೇಮಾ, ಅರಣ್ಯ ರಕ್ಷಕ ಶಿವು ಕುಮಾರ್, ವಿಜಯ, ಬೈಂದೂರು ವಲಯ ಅರಣ್ಯಾಧಿಕಾರಿ ಕಿರಣ್ ಬಾಬು, ಕುಂದಾಪುರ ಉಪವಲಯ ಅರಣ್ಯಾಧಿಕಾರಿ ಉದಯ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮುಜರಾಯಿ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಂದೆರಡು ದಿನದಲ್ಲಿ ಸಚಿವರ ಸಂಪರ್ಕಕ್ಕೆ ಬಂದವರು ಕೋವಿಡ್ ಟೆಸ್ಟ್‌ನ್ನು ಮಾಡಿಸಿಕೊಳ್ಳುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾನು ಬದುಕಿನಲ್ಲಿ ಪ್ರಾಮಾಣಿಕವಾಗಿ ಆರಾಧಿಸಿ ಸರ್ವಸ್ವವೆಂದು ನಂಬಿಕೊಂಡು ಬಂದ ಜಗನ್ಮಾತೆ ತಾಯಿ ಮೂಕಾಂಬಿಕೆ ಸನ್ನಿಧಿಯಲಲ್ಇ ನನ್ನ ಬಗೆಗೆ ಆರೋಪ ಬಂದಿದ್ದು ಈ ಎಲ್ಲಾ ಆರೋಪಗಳ ಸತ್ಯಾಸತ್ಯೆಯನ್ನು ತಾಯಿ ಮೂಕಾಂಬಿಕೆಯ ಚಿತ್ತಕ್ಕೆ ಬಿಡುತ್ತೇನೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದ್ದಾರೆ. ಬೈಂದೂರು ಶಾಸಕರ ಮೇಲೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರ ಅವರ ಮಾಡಿರುವ ಆರೋಪಕ್ಕೆದ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕರು ಪ್ರತಿಕ್ರಿಯಿಸಿದ್ದಾರೆ. ಅರ್ಥಿಕ ಸಂಕಷ್ಟದಲ್ಲಿ ಇದ್ದಾರೆ ಎನ್ನುವ ಕಾರಣಕ್ಕೆ ಫೆಬ್ರವರಿ 2018ರ ಸಮಯದಲ್ಲಿ ಸ್ವಲ್ಪ ನಗದು ಹಣವನ್ನು ಮತ್ತು ಚೆಕ್ ಮೂಲಕ ಐದು ಲಕ್ಷ ಹಣವನ್ನು ನೀಡಿದ್ದೇನೆ. ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿರುವುದರ ಬಗ್ಗೆ ನನ್ನ ಬಳಿ ದಾಖಲೆ ಇದೆ. ಶ್ರೀ ಕ್ಷೇತ್ರ ಕೊಲ್ಲೂರಿನ ಪಾವಿತ್ರ್ಯಕ್ಕೆ ಧಕ್ಕೆ ತರುವಂತೆ ಆಣೆ ಪ್ರಮಾಣದ ಮಾತನಾಡಿರುವ ಸದಾನಂದ ಉಪ್ಪಿನಕುದ್ರು ಮತ್ತು ಅವರ ಕುಟುಂಬದವರೇ ಕೊಲ್ಲೂರು ಮೂಕಾಂಬಿಕೆಯಲ್ಲಿ ನಿಂತು ನನ್ನಿಂದ ಹತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಿಯ ಉತ್ಸವ ಮೂರ್ತಿಯೊಂದಿಗೆ ಜಾತ್ರಾ ಸಮಯದಲ್ಲಿ ರಥ ಬೀದಿಯಲ್ಲಿ ಸಾಗುವ ಬ್ರಹ್ಮರಥವು ಸರಿಸುಮಾರು 600 ವರ್ಷದ ಹಿಂದೆ ವಿಜಯ ನಗರ ಸಂಸ್ಥಾನದ ಕೊಡುಗೆ ಆಗಿದ್ದು ಸದ್ಯದ ಪರಿಸ್ಥಿತಿಯಲ್ಲಿ ಶ್ರೀ ದೇವಿಯ ಜಾತ್ರೆಗೆ ಬಳಸಲು ಯೋಗ್ಯವಲ್ಲದ ಪರಿಸ್ಥಿತಿಯಲ್ಲಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಶಿಥೀಲಗೊಂಡ ಬ್ರಹ್ಮರಥದ ಬದಲಾಗಿ ನೂತನ ಬ್ರಹ್ಮರಥದ ನಿರ್ಮಾಣ ಕಾರ್ಯದಲ್ಲಿ ತೊಡಗಬೇಕಾಗಿ ಮಾನ್ಯ ಶಾಸಕರಿಗೆ ಹಾಗೂ ದೇವಾಲಯದ ಆಡಳಿತ ವರ್ಗ, ಕಾರ್ಯನಿರ್ವಹಣಾಧಿಕಾರಿಗಳಿಗೆ ವಿಶ್ವ ಹಿಂದೂ ಪರಿಷತ್ -ಬಜರಂಗದಳ, ಭಕ್ತಾಭಿಮಾನಿಗಳು ಹಾಗೂ ಊರಿನ ಸಮಸ್ತರ ಪರವಾಗಿ ಮನವಿ ಸಲ್ಲಿಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿಕೊರೋನಾಎರಡನೇಅಲೆಯನ್ನು ನಿಯಂತ್ರಿಸಲು ಸರ್ಕಾರದ ಸೂಚನೆಯಂತೆ ಹೆಚ್ಚಿನ ಸಂಖ್ಯೆಯಲ್ಲಿ ಟೆಸ್ಟಿಂಗ್ಗಳನ್ನು ನಡೆಸಿ, ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನುಕೂಡಲೇ ಪತ್ತೆ ಹಚ್ಚಿ ಪರೀಕ್ಷೆ ನಡೆಸಿ, ಪಾಸಿಟಿವಿಟಿ ಪ್ರಮಾಣವನ್ನುಕಡಿಮೆ ಮಾಡುವಂತೆಜಿಲ್ಲಾಉಸ್ತುವಾರಿ ಕಾರ್ಯದರ್ಶಿ ಡಾ. ಎಂ.ಟಿರೇಜು ಹೇಳಿದರು. ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿಕೋವಿಡ್ಎರಡನೇ ಅಲೆಯಲ್ಲಿ ಯುವಜನತೆ ಮತ್ತು ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿದ್ದು, ಇವರಿಂದ ಕುಟುಂಬದ ಹಿರಿಯ ನಾಗರೀಕರೂ ಸೇರಿದಂತೆ ಪ್ರತಿಯೊಬ್ಬರರಿಗೂ ಸೋಂಕು ಹರಡುವ ಸಾಧ್ಯತೆಗಳಿದ್ದು, ಸರ್ಕಾರ ನಿಗದಿಪಡಿಸಿದಂತೆ ಪ್ರತಿದಿನ 4000 ಟೆಸ್ಟಿಂಗ್ಗಳನ್ನು ನಡೆಸಿ, ಶೀಘ್ರದಲ್ಲಿ ಸೋಂಕಿತರನ್ನು ಪತ್ತೆಹಚ್ಚಿ, ಸೋಂಕು ಹರಡುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಿ ಎಂದು ಡಾ. ರೇಜು ತಿಳಿಸಿದರು. ಪ್ರಸ್ತುತ ಪಾಸಿಟಿವ್ ಪ್ರಕರಣ ಕಂಡು ಬರುತ್ತಿರುವ ಹೆಚ್ಚಿನ ಪ್ರಕರಣಗಳಲ್ಲಿರೋಗ ಲಕ್ಷಣಗಳು ಇಲ್ಲವಾಗಿದ್ದು, ಇಂತಹವರನ್ನು ಹೋಂ ಐಸೋಲೇಷನ್ಗೆ ಒಳಪಡಿಸಿ, ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆಯಾಗದಂತೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಭಾರತೀಯ ಬಾಲ್ ಬ್ಯಾಡ್ಮಿಂಟನ್ ಫೆಡರೇ?ನ್ ಕೊಡಮಾಡಲ್ಪಡುವ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿಗೆ ಭಾಜನರಾಗಿದ್ದಾರೆ . ರಾಜಸ್ಥಾನದ ಜೈಪುರದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ 66ನೇ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಉತ್ತಮ ನಿರ್ವಹಣೆ ನೀಡಿದ ಪುರುಷರ ವಿಭಾಗದಲ್ಲಿ ಚೇತನ್ ಬಿ. ಕೆ ಹಾಗೂ ಮಹಿಳೆಯರ ವಿಭಾಗದಲ್ಲಿ ಕವನ ಎಂ. ಎಂ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ . ಪ್ರಶಸ್ತಿ ವಿಜೇತ ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ ಎಂ ಮೋಹನ್ ಆಳ್ವ ಅಭಿನಂದನೆ ವ್ಯಕ್ತಪಡಿಸಿದ್ದಾರೆ.
