Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ಐತಿಹಾಸಿಕ ಮಹತೋಭಾರ ಶ್ರೀ ಸೇನೇಶ್ವರ ದೇವರ ವಾರ್ಷಿಕ ಜಾತ್ರಾ ಮಹೋತ್ಸವವು ಎ.15ರಿಂದ ಮೊದಲ್ಗೊಂಡು ಎ.23ರ ತನಕ ಜರುಗಲಿದ್ದು, ಆ ಪ್ರಯುಕ್ತ ದೇವಳದ ತಂತ್ರಿ ಕೃಷ್ಣ ಸೋಮಯಾಜಿ ಆಚಾರ್ಯತ್ವದಲ್ಲಿ ಧ್ವಜಾರೋಹಣ ನೆರವೇರಿತು. ಬೆಳಿಗ್ಗೆ ದೇವಳದಲ್ಲಿ ಕಲಶಪ್ರತಿಷ್ಠೆ, ಕಂಕಣ ಧಾರಣೆಯ ನಂತರ ರುಜ್ಜು ಬಂಧನ ಮುಂತಾದ ಧಾರ್ಮಿಕ ವಿಧಾನಗಳು ನಡೆಯಿತು. ಈ ಸಂದರ್ಭ ದೇವಳದ ಅಧ್ಯಕ್ಷ ಚೆನ್ನಕೇಶವ ಉಪಾಧ್ಯಾಯ, ಅರ್ಚಕ ವೃಂದ, ಸ್ಥಳೀಯ ಜನಪ್ರತಿನಿಧಿಗಳು, ದೇವಳದ ಸಿಬ್ಬಂದಿವರ್ಗ ಹಾಗೂ ಊರಿನ ಹತ್ತು ಸಮಸ್ತರು ಭಾಗವಹಿಸಿದ್ದರು. ಪ್ರತಿದಿನ ಅಪ್ಪಿಕಟ್ಟೆ, ಬಿಯಾರಕಟ್ಟೆ, ಜಟ್ಕನಕಟ್ಟೆ, ನಾಕಟ್ಟೆ, ಪಡುವರಿಕಟ್ಟೆ, ಬಂಕೇಶ್ವರಕಟ್ಟೆ ಉತ್ಸವಗಳು ಜರುಗಲಿದ್ದು, ಎ.21ರ ಶನಿವಾರ ಶ್ರೀ ಸೇನೇಶ್ವರ ದೇವರ ಶ್ರೀಮನ್ಮಹಾರಥೋತ್ಸವ ಹಾಗೂ ಎ.22ರಂದು ಅವಭೃತ ಸ್ನಾನ, ಓಕುಳಿ ಮತ್ತು ನಗರೋತ್ಸವ ನಡೆಯಲಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದಲ್ಲಿ ದಲಿತರಿಗೆ ಮೀಸಲು, ದೌರ್ಜನ್ಯ ತಡೆ ಕಾಯ್ದೆಯ ವಿಶೇಷ ಸವಲತ್ತು ನೀಡಿದ ಪರಿಣಾಮ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಿದೆ. ಕೆಲ ಜಾತಿವಾದಿ ಶಕ್ತಿಗಳು ಅದನ್ನು ಕಸಿದು ದಲಿತರ ನಿರ್ಮೂಲನೆಗೆ ಪಣ ತೊಟ್ಟಿವೆ ಎಂದು ದಸಂಸ ಜಿಲ್ಲಾ ಪ್ರಧಾನ ಸಂಘಟನಾ ಸಂಚಾಲಕ ಟಿ. ಮಂಜುನಾಥ ಗಿಳಿಯಾರು ಹೇಳಿದರು. ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ಡಾ. ಅಂಬೇಡ್ಕರ್ ಅವರ 127 ನೇ ಜನ್ಮದಿನಾಚರಣೆ ಅಂಗವಾಗಿ ರಾಜ್ಯ ದಸಂಸ ಬೈಂದೂರು ತಾಲೂಕು ಶಾಖೆ ಇವರ ಸಹಕಾರದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಮಹಿಳಾ ಸಂಘ ಬೈಂದೂರು ಮತ್ತು ದಸಂಸ ಮಹಿಳಾ ಘಟಕದ ಜಂಟಿ ಆಶ್ರಯದಲ್ಲಿ ನಡೆದ ಅಂಬೇಡ್ಕರ್ ಜನ್ಮ ಜಯಂತಿ ಹಾಗೂ ಭೀಮ ಭಾರತ ಮಹಾ ರ‍್ಯಾಲಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸಮಾಜದಲ್ಲಿ ಬಹುಸಂಖ್ಯೆಯಲ್ಲಿರುವ ದಲಿತರ ಕೈಗಿನ್ನು ರಾಜಕೀಯ ಅಧಿಕಾರದ ಚುಕ್ಕಾಣಿ ಸಿಕ್ಕಿಲ್ಲ. ಇದರಿಂದಾಗಿ ದಲಿತರ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ ಎಂದ ಅವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಇಲ್ಲಿನ ಸೋಶಿಯಲ್ ಸ್ಪೋರ್ಟ್ಸ್ ಎಂಡ್ ಚಾರಿಟೇಬಲ್ ಅಸೋಸಿಯೇಶನ್ ವತಿಯಿಂದ ಕುಂದಾಪುರದ ಸಮಾಜಸೇವಕ ವಿ.ವಾಸುದೇವ ಹಂದೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಂಗೊಳ್ಳಿ ಜಾಮೀಯಾ ಮೊಹಲ್ಲಾದ ವಂಟಿ ಕಂಪೌಂಡ್‌ನಲ್ಲಿ ಗುರುವಾರ ಜರಗಿದ ಸೋಶಿಯಲ್ ಸ್ಪೋರ್ಟ್ಸ್ ಎಂಡ್ ಚಾರಿಟೇಬಲ್ ಅಸೋಸಿಯೇಶನ್‌ನ 3ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗೋವಾದ ಮತ್ಸ್ಯೋದ್ಯಮಿ ಮೌಲಾನಾ ಇಬ್ರಾಹಿಂ ಸಾಹೇಬ್ ಅವರು ವಿ.ವಾಸುದೇವ ಹಂದೆ ಅವರನ್ನು ಸನ್ಮಾನಿಸಿ ಗೌರವಿಸಿದರು. ಕಿರಿಮಂಜೇಶ್ವರ ಪೇಶ್ ಇಮಾಮ್ ಜುಮ್ಮಾ ಮಸೀದಿಯ ಮೌಲಾನಾ ಜಮೀಕ್ ರಶದಿ, ನಾಗೂರು ಪೇಶ್ ಇಮಾಮ್ ಮೌಲಾನಾ ಮೀರಾ ಸಾಹೇಬ್ ನದ್ವಿ, ಗಂಗೊಳ್ಳಿ ಫಾತಿಮಾ ತುಜ್ ಜಹರಾ ಮದ್ರಸಾ ಮುಖ್ಯಸ್ಥ ಮೌಲಾನಾ ಮತಿನ್ ಸಿದ್ಧಿಕಿ, ಎಸ್‌ಡಿಪಿಐ ಗಂಗೊಳ್ಳಿ ಘಟಕದ ಅಧ್ಯಕ್ಷ ತಬ್ರೇಜ್ ಖಲೀಫೆ, ಅಬು ಮೊಹಮ್ಮದ್, ಖಾಜಿ ಅಶ್ರಫ್, ಗಂಗೊಳ್ಳಿ ಜಮಾತುಲ್ ಮುಸ್ಲಿಮಿನ್ ಕಾರ್ಯದರ್ಶಿ ಅಬ್ದುಲ್ ರಹೀಮ್, ಉಮ್ಮರ್ ಸಾಹೇಬ್ ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದಲ್ಲಿ ನಡೆಯಲಿರುವ ವಸಂತ ವೇದಿಕ ಶಿಬಿರಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ಸಂಯುಕ್ತ ಆಶ್ರಯದಲ್ಲಿ 20 ದಿನಗಳ ಕಾಲ ಈ ಶಿಬಿರ ನಡೆಯಲಿದೆ. ಆಡಳಿತ ಮಂಡಳಿ ಅಧ್ಯಕ್ಷ ಅನಂತಪದ್ಮನಾಭ ಅಡಿಗ ಕಾರ್ಯಕ್ರಮ ಉದ್ಘಾಟಿಸಿ, ಸುಮಾರು 20 ವರ್ಷದಿಂದ ಬೇಸಿಗೆ ರಜೆಯಲ್ಲಿ ವಿಪ್ರ ಬಾಂಧವರ ಮಕ್ಕಳಿಗಾಗಿ ಸಾಲಿಗ್ರಾಮದಲ್ಲಿ ಆಯೋಜಿಸುತ್ತಿರುವ ‘ವಸಂತ ವೇದ ಶಿಬಿರ’ ಪೂಜೆಯ ವಿಧಿ-ವಿಧಾನ, ವೈದಿಕ ಪದ್ಧತಿಯ ಆಚಾರ-ವಿಚಾರ ಮುಂತಾದ ಧಾರ್ಮಿಕ ಪ್ರಜ್ಞೆಯನ್ನು ಬೋಧಿಸುವಲ್ಲಿ ಯಶಸ್ವಿಯಾಗಿದೆ. ಈ ಬಾರಿ 20 ದಿನಗಳ ಕಾಲ ಸಂಪೂರ್ಣ ಉಚಿತವಾಗಿ ಶಿಬಿರ ನಡೆಯಲಿದೆ. ಗೋವಾ, ಮುಂಬೈ ಹಾಗೂ ಹೊರ ಜಿಲ್ಲೆಗಳ ಸಹಿತ 400 ವಿದ್ಯಾರ್ಥಿಗಳು ವಿದ್ಯಾರ್ಥಿಗಳಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದರು. ಆಡಳಿತ ಮಂಡಳಿ ಸದಸ್ಯ ಸದಾರಮ ಹೇರ್ಳೆ ಮಾತನಾಡಿ, ಮಕ್ಕಳಿಗೆ ಧಾರ್ಮಿಕತೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಶಿಬಿರ ಸಹಾಯಕವಾಗಿದೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಪಾಠ-ಪ್ರವಚನಗಳನ್ನು ತಿಳಿಯಬೇಕು ಎಂದರು. ಕೂಟ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಕಲ್ಮಾಡಿ ಯುವಕ ಮಂಡಲ ರಿ. ಇದರ ವಾರ್ಷಿಕೋತ್ಸವ ಸಮಾರಂಭ ಕೋಟತ್ತಟ್ಟು ಕಾರಂತ ಥೀಂ ಪಾರ್ಕ್ ಸಮೀಪ ಶ್ರೀಧರ ಗಾಣಿಗರ ಮನೆ ವಠಾರದಲ್ಲಿ ಜರಗಿತು. ಕಾರ್ಯಕ್ರಮವನ್ನು ಬೆಂಗಳೂರಿನ ಉದ್ಯಮಿ ಬೇಳೂರು ರಾಘವೇಂದ್ರ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಒಗ್ಗಟ್ಟಿನ ಮೂಲಕ ಯುವ ಸಮುದಾಯ ಕಾರ್ಯಪ್ರವೃತ್ತಗಾಗುವುದನ್ನು ನಾವುಗಳು ಇತ್ತೀಚಿಗಿನ ದಿನಗಳಲ್ಲಿ ಕಾಣುತ್ತಿದ್ದೇವೆ ಅದು ಆಯಾ ಊರಿನ ಶ್ರೇಯಾಭಿವೃದ್ಧಿಗೆ ಪೂರಕವಾದ ಯುವಕ ಮಂಡಲಗಳನ್ನು ಸ್ಥಾಪಿಸಿಕೊಂಡು ಸಮಾಜಮುಖಿ ಚಿಂತನೆಗಳನ್ನಿರಿಸಿ ಕಾರ್ಯನಿರ್ವಹಿಸುತ್ತಿರುವುದು ಪ್ರಶಂಸನೀಯ. ಇಂಥಹ ಸಂಘಟನೆಗಳು ರಾಜಕೀಯ ರಹಿತವಾಗಿ ಚಟುವಟಿಕೆಯಲ್ಲಿದ್ದಾಗ ಬಹು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ಸನ್ಮಾನಗಳು ಎತ್ತೇಚ್ಚವಾಗಿ ಹಲವು ಸಂಘಟನೆಗಳ ಮೂಲಕ ನಡೆಯುತ್ತದೆ.ಆದರೆ ಕಾರಂತರು ಹುಟ್ಟಿದ ಈ ನೆಲದಲ್ಲಿ ಸನ್ಮಾನಿಸುವ ವ್ಯಕ್ತಿಗಳು ಅದಕ್ಕೆ ಅರ್ಹರಾಗಿರುತ್ತಾರೆ ಎಂಬ ನಂಬಿಕೆ ನನ್ನದು ಅಂಥಹ ವ್ಯಕ್ತಿಯನ್ನು ನೀವು ಆರಿಸಿದ್ದೀರಿ. ಸುಕ್ರಿಬೋಮ್ಮೆಗೌಡ ಎನ್ನುವಂಥ ಮಹಿಳೆಗೆ ಗೌರವ ನೀಡುತ್ತಿರುವುದು ನಿಮ್ಮ ಸಂಘಟನೆಗೆ ಹಾಗೂ ಊರಿಗೆ ಗೌರವವನ್ನು ಇಮ್ಮಡಿಗೊಳಿಸಿದೆ ಎಂದು ಅಭಿಪ್ರಾಯಪಟ್ಟರು. ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತೆ ಸುಕ್ರಿ ಬೋಮ್ಮೆಗೌಡರಿಗೆ ಕಲ್ಮಾಡಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದಲ್ಲಿ ಮೇ.2 ರಿಂದ 8 ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪ್ರಯುಕ್ತ ಚಪ್ಪರ ಮುಹೂರ್ತ ಜರಗಿತು. ಈ ಪ್ರಯುಕ್ತ ವಿವಿಧ ದಾರ್ಮಿಕ ಕಾರ್ಯಕ್ರಮಗಳು ನಡೆಯಿತು. ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂತಪದ್ಮನಾಭ ಐತಾಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಪ್ರಯುಕ್ತ ನಡೆಯಲಿರುವ ಬ್ರಹ್ಮಕಲಶೋತ್ಸವ, ಧ್ವಜ ಪ್ರತಿಷ್ಠಾಪನೆ, ದುರ್ಗಾಪರಮೇಶ್ವರೀ ಬಿಂಬ ಪ್ರತಿಷ್ಠೆ, ಬ್ರಹ್ಮರಥೋತ್ಸವ ಕಾರ್ಯಕ್ರಮ ಸುಗಮವಾಗಿ ಸಾಗಲಿ ಎಂದು ಪುರೋಹಿತ ವೇ|ಮೂ| ಚಂದ್ರಶೇಖರ ಅಡಿಗ ಪ್ರಾರ್ಥನೆ ಸಲ್ಲಿಸಿದರು. ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಕಾರ್ಯದರ್ಶಿ ರಾಮಕೃಷ್ಣ ಐತಾಳ, ಸಾಲಿಗ್ರಾಮ ಘಟಕದ ಅಧ್ಯಕ್ಷ ಕೆ.ತಾರನಾಥ ಹೊಳ್ಳ, ಚಂದ್ರಶೇಖರ್ ಉಪಾಧ್ಯ, ಚಂದ್ರಶೇಖರ ಹೊಳ್ಳ, ಸದಾರಮ ಹೇರ್ಳೆ, ಶಿವರಾಮ ಉಡುಪ ಮುಂತಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ : ಅಂತರ್ರಾಷ್ಟ್ರೀಯ ಜಾದೂಗಾರ ನಟ ಓಂಗಣೇಶ್ ಉಪ್ಪುಂದ ಇವರು ಬರೆದ 35 ಸಣ್ಣ ಸಣ್ಣ ಘಟನೆಯಾಧರಿತ ಜನಮನ ಕಥನಗಳ ಸಂಕಲನ ’ಗಿರಿಗಿಟ್ಲಿ ಹುಡುಗ’ ಕೃತಿಯನ್ನು ಪದ್ಮವಿಭೂಷಣ ಡಾ| ಡಿ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು. ವಿಶ್ವ ಸಂಚಾರದ ಹಿನ್ನೆಲೆಯಿಂದ ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ ಕೃತಿಯಿಂದ ತಮಗೆ ಇನ್ನಷ್ಟು ಶಾರದೆಯ ಅನುಗ್ರಹ ಹಾಗೂ ಮಂಜುನಾಥನ ಅನುಗ್ರಹ ಒದಗುವಂತಾಗಲಿ ಎಂದು ಅಭಿನಂದಿಸಿದ ಹೆಗ್ಗಡೆಯವರು ಶ್ರೀ ಮಂಜುನಾಥನ ಬೆಳ್ಳಿ ಪದಕವನ್ನು ಕೃತಿಕಾರ ಓಂಗಣೇಶರಿಗೆ ನೀಡಿ ಶುಭಹಾರೈಸಿದರು. ಓಂಗಣೇಶ್ ಅವರ ಪ್ರಪ್ರಥಮ ಕೃತಿ ಕೂಡಾ ಈ ಕ್ಷೇತ್ರದಲ್ಲೇ ಲೋಕಾರ್ಪಣೆ ಹೊಂದಿದ್ದು ಬಳಿಕ ದುಬೈ ಬಹರೈನ್ ಮಸ್ಕತ್‌ಗಳಲ್ಲಿ ಪುನಃ ಬಿಡುಗಡೆಯಾಗಿತ್ತು. ಇದೀಗ ಖ್ಯಾತ ಲೇಖಕಿ ವೈದೇಹಿಯವರ ಮುನ್ನುಡಿ ಹಾಗೂ ಸುಧಾಕರ ದರ್ಬೆಯವರ ಮುಖಪುಟ ಹೊಂದಿದ ಇದು ನನ್ನ 6 ನೇ ಕೃತಿಯಾಗಿದ್ದು ಇಲ್ಲಿಂದು ಬಿಡುಗಡೆ ಕಾಣುತ್ತಿರುವುದು ನನ್ನ ಯೋಗ ಎಂದು ಕೃತಿಕಾರ ತಮ್ಮ ಪುಸ್ತಕದ ಬಗ್ಗೆ ವಿವರಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಅಗಲಿದ ಗೆಳೆಯರ ಸವಿನೆನಪಿಗಾಗಿ ವಕ್ವಾಡಿ 8ಸ್ಟಾರ್ ಕ್ರಿಕೆಟರ‍್ಸ್ ಇವರ ಆಶ್ರಯದಲ್ಲಿ ವಕ್ವಾಡಿ ತೆಂಕಬೆಟ್ಟು ದೇವರಾಡಿ ದೇವಸ್ಥಾನದ ಮೈದಾನದಲ್ಲಿ ತಾಲೂಕು ಮಟ್ಟದ 30 ಗಜಗಳ ಕ್ರಿಕೆಟ್ ಪಂದ್ಯಾಟದ ಅಂತಿಮ ಹಣಾಹಣಿಯಲ್ಲಿ ಈಗಲ್ಸ್ ಕುಂಭಾಶಿ ಪ್ರಥಮ ಸ್ಥಾನ ಪಡೆದು ನೆನಪು ಟ್ರೋಪಿಯನ್ನು ತನ್ನ ಮುಡಿಗೇರಿಸಿಗೊಂಡಿದೆ. 8 ಸ್ಟಾರ್ ಕ್ರಿಕೆಟರ್ಸ್ ವಕ್ವಾಡಿ ದ್ವಿತೀಯ ಸ್ಥಾನ ಪಡೆದುಕೊಂಡರು. ಸಮಾರೋಪ ಸಮಾರಂಭದ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ರಾಜ್ಯ ಶಾಸ್ತ್ರ ಉಪನ್ಯಾಸಕ ಸುಧಾಕರ ವಕ್ವಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರಿಡೆಯಿಂದ ಶರೀರ ಮತ್ತು ಮನಸ್ಸಿನ ಕೊಳೆಯನ್ನು ಹೋಗಲಾಡಿಸಿ ಜ್ಞಾನಾವಸ್ಥೆಯಿಂದ ಮನೋಬಲ ವೃಧ್ದಿಸಿ ಅಂತರಂಗ ಬಹಿರಂಗ ಶುಧ್ಧಿಯಾಗಿ ಶೃಧ್ದೆ, ಭಕ್ತಿ, ನಿಷ್ಥೆಯಿಂದ ನಲಿವು ಮತ್ತು ಗೆಲುವು ಸಾದ್ಯ, ಹೀಗೆ ಕಠಿಣ ಪರಿಶ್ರಮ ಮತ್ತು ಇಚ್ಚಾಶಕ್ತಿಯಿಂದ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಬಹುದು ಎಂದರು. ಮುಖ್ಯ ಅತಿಥಿ ನಿವೃತ್ತ ಅಬಕಾರಿ ನಿರೀಕ್ಷಕರಾದ ಜನ್ಸಾಲಿ ಶಿವರಾಮ ಶೆಟ್ಟಿ ಮಾತನಾಡಿ, ಸದೃಢವಾದ ದೇಹದಲ್ಲಿ ಉತ್ತಮವಾದ ಮನಸ್ಸನ್ನು ಬೆಳೆಸಿಕೊಂಡು ಸುಸಂಸ್ಕೃತವಾದ ಸಮಾಜ ನಿರ್ಮಿಸುವಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಶಾಲೆ ಸಮುದಾಯದ ಅವಿಭಾಜ್ಯ ಅಂಗ. ಶಾಲಾ ಚಟುವಟಿಕೆಗಳು ವೈವಿದ್ಯಪೂರ್ಣವಾದಷ್ಟೂ ಸಮುದಾಯದ ಬೆಂಬಲ ಹೆಚ್ಚುತ್ತಾ ಸಾಗುತ್ತದೆ. ಈ ದಿಸೆಯಲ್ಲಿ ಬಿದ್ಕಲ್‌ಕಟ್ಟೆ ಶಾಲೆಯಲ್ಲಿ ಪ್ರತಿ ತಿಂಗಳೂ ಅನಾವರಣಗೊಳಿಸುತ್ತಿರುವ ಚಾರಣ ಮಾಸಪತ್ರಿಕೆಯ ಅನಾವರಣ, ತಿಂಗಳ ಕಲಿಕಾ ಪ್ರದರ್ಶನ ಹಾಗೂ ಸರ್ವ ಪೋಷಕರ ಸಭೆ ಒಂದು ಅತ್ಯುತ್ತಮ ಸೃಷ್ಟಿಶೀಲ ಚಟುವಟಿಕೆ. ಸರಕಾರಿ ಶಾಲೆಗಳ ಸಬಲೀಕರಣ ಮತ್ತು ದಾಖಲಾತಿಯ ಹೆಚ್ಚಳಕ್ಕೆ ಶಾಲಾ ಶಿಕ್ಷಕರ ಈ ಬಗೆಯ ಉನ್ನತ ಚಿಂತನೆಯ ವಿನೂತನ ಚಟುವಟಿಕೆಗಳು ಸಹಕಾರಿ.’ ಎಂದು ಕರಾವಳಿ ಬಂಟರ ಬಳಗ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ರವೀಂದ್ರ ಶೆಟ್ಟಿ ಹಟ್ಟಿಯಂಗಡಿ ಅಭಿಪ್ರಾಯ ಪಟ್ಟರು. ಅವರು ಕುಂದಾಪುರ ವಲಯದ ಬಿದ್ಕಲ್‌ಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಮಾಧ್ಯಮ ವರದಿಗಾರರಾದ ಶ್ರೀ ಕೆ. ಸಂತೋಷ ಶೆಟ್ಟಿ ಮೊಳಹಳ್ಳಿ, ಕರಾವಳಿ ಬಂಟರ ಬಳಗ ಮಾಸಪತ್ರಿಕೆ ಮತ್ತು ಅಮ್ಮಾ ಪಬ್ಲಿಕೇಷನ್ಸ್ ಇವರು ಪ್ರಾಯೋಜಿಸಿದ ಚಾರಣ ಮಾಸ ಪತ್ರಿಕೆಯ 14 , 15ನೇ ಸಂಚಿಕೆಗಳನ್ನು ಅನಾವರಣಗೊಳಿಸಿ ಬಳಿಕ ಸರ್ವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಜನರು ಶಿಕ್ಷಣ ಮತ್ತು ಆರೋಗ್ಯ ಕಡೆ ಹೆಚ್ಚಿನ ಗಮನ ಹರಿಸಬೇಕು. ಶಿಕ್ಷಣ ಮತ್ತು ಆರೋಗ್ಯ ಉತ್ತಮವಾಗಿದ್ದರೆ ಸದೃಢ ಸಮಾಜ, ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಜನರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ಯಾವುದೇ ರೋಗ ಬರುವ ಮೊದಲೇ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಉಡುಪಿ ಡಾ.ಟಿ.ಎಂ.ಎ.ಪೈ ಆಸ್ಪತ್ರೆಯ ವೈದ್ಯ ಡಾ.ವಿನಾಯಕ ಶೆಣೈ ಕೆ. ಹೇಳಿದರು. ಗಂಗೊಳ್ಳಿಯ ನಿನಾದ ಸಂಸ್ಥೆಯ ವತಿಯಿಂದ ಗಂಗಾಮೃತ ಯೋಜನೆಯ ಭಾಗವಾಗಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಜರಗಿದ ಉಚಿತ ಸಮಗ್ರ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ರೋಗ ಗುಣಪಡಿಸಲು ಸಾಧ್ಯವಾಗುತ್ತದೆ ಆರೋಗ್ಯದ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ನಿರಂತರ ತಪಾಸಣೆ, ಚಿಕಿತ್ಸೆಗಳನ್ನು ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು. ಜಿಎಸ್‌ವಿಎಸ್ ಅಸೋಸಿಯೇಶನ್…

Read More