Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: 2020-21ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತಿಮ ಪರೀಕ್ಷೆಗಳ ರ್ಯಾಂಕ್‍ಪಟ್ಟಿ ಪ್ರಕಟಗೊಂಡಿದ್ದು, ಈ ಬಾರಿ ಒಟ್ಟು 26 ರ್ಯಾಂಕ್‍ಗಳನ್ನು ಗಳಿಸಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅತೀ ಹೆಚ್ಚು ರ್ಯಾಂಕ್ ಗಳಿಸಿದ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿದೆ. ಕಳೆದ 12 ವರ್ಷಗಳಿಂದ ಸರಾಸರಿ 25ಕ್ಕಿಂತಲೂ ಅಧಿಕ ರ್ಯಾಂಕ್‍ಗಳನ್ನು ಪಡೆಯುತ್ತಾ ವಿವಿ ಮಟ್ಟದಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ. ಪದವಿ, ಸ್ನಾತಕೋತ್ತರ ಹಾಗೂ ಬಿಪಿಎಡ್ ವಿಭಾಗದಲ್ಲಿ ಒಟ್ಟು 11 ಪ್ರಥಮ ರ್ಯಾಂಕ್, ಪದವಿ ಹಾಗೂ ಬಿಪಿಎಡ್ ವಿಭಾಗದಲ್ಲಿ 4 ದ್ವಿತೀಯ ರ್ಯಾಂಕ್, 5 ತೃತೀಯ ರ್ಯಾಂಕ್, 1 ಚತುರ್ಥ ರ್ಯಾಂಕ್, ಪದವಿ ಹಾಗೂ ಬಿ.ಎಡ್‍ನಲ್ಲಿ ಎರಡು 6ನೇ ರ್ಯಾಂಕ್, ಪದವಿ ವಿಭಾಗದಲ್ಲಿ ಎರಡು 8ನೇ ರ್ಯಾಂಕ್, ಒಂದು 10ನೇ ರ್ಯಾಂಕ್ ಗಳಿಸಿದೆ. ಪದವಿ ವಿಭಾಗ:ಬಿ.ಎ ವಿಭಾಗದಲ್ಲಿ ವಿದ್ಯಾರ್ಥಿನಿ ವೈಷ್ಣವಿ ಗೋಪಾಲ್ (89.19% ) ಪ್ರಥಮ ರ್ಯಾಂಕ್, ಚುಮ್ತಾಂಗ್ (88.33%) ದ್ವಿತೀಯ ರ್ಯಾಂಕ್, ಫಾತಿಮ ಮುಸ್ಕಾನ್ ಜಿ ಡಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಮದ್ಯದ ನಶೆಯಲ್ಲಿದ್ದ ಚಾಲಕನೋರ್ವ ಮುಳ್ಳಿಕಟ್ಟೆಯಿಂದ ಯದ್ವಾ-ತದ್ವಾ ಗ್ಯಾಸ್ ಟ್ಯಾಂಕರ್ ಚಲಾಯಿಸಿ ಕೆಲಹೊತ್ತು ಆತಂಕ ಸೃಷ್ಟಿಸಿದ ಘಟನೆ ಶುಕ್ರವಾರ ನಡೆದಿದೆ. ಮಂಗಳೂರಿಗೆ ಸಾಗುತ್ತಿದ್ದ ಗ್ಯಾಸ್ ಟ್ಯಾಂಕರ್ ಮಧ್ಯಾಹ್ನ ಸುಮಾರಿಗೆ ಮುಳ್ಳಿಕಟ್ಟೆ ಸಮೀಪದ ಅರಾಟೆಯಲ್ಲಿ ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆದಿದೆ. ಈ ವೇಳೆ ಉಡುಪಿಗೆ ತೆರಳುತ್ತಿದ್ದ ಸ್ಥಳೀಯರಾದ ಪ್ರದೀಪ್ ಮುಳ್ಳಿಕಟ್ಟೆ, ತನ್ನ ಕಾರಿನಲ್ಲಿ ಟ್ಯಾಂಕರ್ ಒವರ್ ಟೇಕ್ ಮಾಡಿ ನಿಲ್ಲಿಸಲು ಸೂಚಿಸಿದ್ದರೂ ಮದ್ಯದ ನಶೆಯಲ್ಲಿದ್ದ ಟ್ಯಾಂಕರ್ ಚಾಲಕ ಸೀದಾ ಟ್ಯಾಂಕರ್ ಚಲಾಯಿಸಿಕೊಂಡು ಮುಂದೆ ಸಾಗಿದ್ದಾನೆ. ರಾ.ಹೆ. 66 ರ ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆಯುತ್ತಾ ಸಾಗುತ್ತಿದ್ದ ಟ್ಯಾಂಕರನ್ನು ಹೆಮ್ಮಾಡಿ ಸರ್ಕಲ್ ಸಮೀಪ ನಿಲ್ಲಿಸಲು ಯತ್ನಿಸಿದಾಗ ಮತ್ತೆ ಮುಂದೆ ಸಾಗಿದ್ದು, ಬಳಿಕ ತಲ್ಲೂರು ಸರ್ಕಲ್ ಬಳಿ ಬೈಕ್ ಸವಾರರ ನೆರವಿನೊಂದಿಗೆ ಟ್ಯಾಂಕರನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಕ್ಷಣವೇ ಪ್ರದೀಪ್ ಮುಳ್ಳಿಕಟ್ಟೆ ಪೊಲೀಸರಿಗೆ ಕರೆಮಾಡಿದ್ದು, ಕುಂದಾಪುರ ಸಂಚಾರಿ ಠಾಣೆಯ ಉಪನಿರೀಕ್ಷಕಿ ಸುಧಾ ಪ್ರಭು ಸ್ಥಳಕ್ಕೆ ಆಗಮಿಸಿ ಗ್ಯಾಸ್ ಟ್ಯಾಂಕರನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಯಶಸ್ವಿ ಛಾಯಗ್ರಾಹಕನು ತಾನು ಸೆರೆಹಿಡಿಯುವ ಚಿತ್ರದಲ್ಲಿ ಅಗತ್ಯವಿರುವ ಅಂಶವನ್ನು ಅಳವಡಿಸಿ, ಅನಗತ್ಯ ಅಂಶಗಳನ್ನು ಉಪೇಕ್ಷಿಸಿದರೆ ಚಂದದ ಛಾಯಾಚಿತ್ರ ಮೂಡಲು ಸಾಧ್ಯ. ಉತ್ತಮ ಛಾಯಾಚಿತ್ರ, ಬೆಳಕು, ಬಣ್ಣ ಹಾಗೂ ವಸ್ತುಗಳ ವ್ಯವಸ್ಥಿತ ಸಂಯೋಜನೆ ಎಂದು ಅಂತರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಹೆಚ್. ಸತೀಶ್ ತಿಳಿಸಿದರು. ಅವರು ಆಳ್ವಾಸ್ ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ‘ಅಭಿವ್ಯಕ್ತಿ’ ಫೋರಂ ವತಿಯಿಂದ ಆಯೋಜಿಸಿದ್ದ ‘ಫೊಟೋಗ್ರಫಿ’ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಛಾಯಾಗ್ರಾಹಣ ಒಂದು ನಿಪುಣ ಕಲೆ. ಕ್ಯಾಮರಾ ಸೆರೆಹಿಡಿಯುವ ಪ್ರತಿಯೊಂದು ಫೋಟೋವು ಒಂದೊಂದು ಸಂದೇಶವನ್ನು ನೀಡುವಂತಿರಬೇಕು. ಉತ್ತಮ ಛಾಯಗ್ರಾಹಕ ಬಣ್ಣ ಹಾಗೂ ಬೆಳಕಿನ ಸಂಯೋಜನೆಯ ಕೌಶಲ್ಯವನ್ನು ಅರಿತಿರಬೇಕು. ಕ್ರಿಯಾತ್ಮಕವಾಗಿ ಚಿತ್ರಗಳನ್ನು ತೆಗೆಯದೇ ಹೋದರೆ ಅವುಗಳನ್ನು ಅಂದಗೊಳಿಸಲು ತಾಂತ್ರಿಕವಾಗಿ ಹೆಣಗಾಡಬೇಕಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಪೊರ್ಲು ಸ್ಟುಡಿಯೋದ ಮಾಲಕ ಜಿನೇಶ್ ಪ್ರಸಾದ್ ಹಾಗೂ ವಿಭಾಗ ಸಂಯೋಜಕ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಹನಾ ಫಾತಿಮಾ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಎ.22: ಬ್ರಹ್ಮಾವರ ಪಶುವೈದ್ಯಕೀಯ ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಡಾ. ಅವರು ಕುಮಾರ್ ಶೆಟ್ಟಿ ಎನ್. ಅವರು ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದು, ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಸೇವೆಗೈದ ರಾಜ್ಯ ಸರಕಾರಿ ನೌಕರರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಲು ಸರಕಾರ ಆದೇಶಿಸಿದ್ದು, ಅದರಂತೆ ಡಾ. ಅರುಣ್ ಕುಮಾರ್ ಶೆಟ್ಟಿ ಅವರ ಗುಣಮಟ್ಟದ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಡಾ. ಅರುಣ್ ಕುಮಾರ್ ಶೆಟ್ಟಿಯವರು ಗುಲ್ವಾಡಿ ಗ್ರಾಮದ ಕರ್ಕಿಯವರಾಗಿದ್ದು, ಪಶುವೈದ್ಯಕೀಯ ವಿಜ್ಞಾನದಲ್ಲಿ ಪದವಿ ಪಡೆದು ವಂಡ್ಸೆ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಸೇವೆ ಆರಂಭಿಸಿದವರು. ಬಳಿಕ ವಿವಿಧೆಡೆ ಸೇವೆ ಸಲ್ಲಿಸಿ ಕೋಟ ಆಸ್ಪತ್ರೆಗೆ ಮುಖ್ಯ ಪಶುವೈದ್ಯಾಧಿಕಾರಿಯಾಗಿ ಭಡ್ತಿ ಪಡೆದರು. ಪ್ರಸ್ತುತ ಬ್ರಹ್ಮಾವರ ತಾಲೂಕಿನ ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) ಆಗಿ ಮುಂಭಡ್ತಿ ಹೊಂದಿ ಸೇವೆ ಸಲ್ಲಿಸುತ್ತಿದ್ದು, ಸತತ 20 ವರ್ಷಗಳಿಂದ ಸರಕಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಸೆಪ್ಟೆಂಬರ್ / ಅಕ್ಟೋಬರ್ 2021ರಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಮೂವರು ವಿದ್ಯಾರ್ಥಿಗಳಿಗೆ ದೊರಕಿವೆ. ಕಂಪ್ಯೂಟರ್ ಸೈನ್ಸ್ ಪದವಿಯಲ್ಲಿ ಯಡ್ತರೆ ಗ್ರಾಮದ ಹೆನ್ರಿ ರೊಡ್ರಿಗಸ್ ಮತ್ತು ಗ್ರೆಟಾ ರೊಡ್ರಿಗಸ್ ಅವರ ಪುತ್ರಿ ಸೊಲಿಟಾ ರೊಡ್ರಿಗಸ್ ಅವರಿಗೆ ಮೂರನೇ ರ‍್ಯಾಂಕ್ ದೊರೆತಿದೆ. ವಾಣಿಜ್ಯ ಪದವಿಯಲ್ಲಿ ಕುಂದಾಪುರದ ಪ್ರದೀಪ ಸಿ. ಶಾನಭಾಗ್ ಮತ್ತು ರಾಜೇಶ್ವರಿ ಅವರ ಪುತ್ರಿ ವೈಷ್ಣವಿ ಪಿ. ಶಾನಭಾಗ್‌ಗೆ ಏಳನೇ ರ‍್ಯಾಂಕ್ ಮತ್ತು ಕಂಪ್ಯೂಟರ್ ಸೈನ್ಸ್ ಪದವಿಯಲ್ಲಿ ಕುಂದಾಪುರ ತಾಲೂಕಿನ ಹಾಲಾಡಿಯ ಸುಕುಮಾರ ಶೆಟ್ಟಿ ಮತ್ತು ಸುಜಾತ ಅವರ ಪುತ್ರಿ ಸೌಜನ್ಯ ಅವರಿಗೆ ಹತ್ತನೇ ರ‍್ಯಾಂಕ್ ದೊರೆತಿದೆ. ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಮತ್ತು ವಿಶ್ವಸ್ಥ ಮಂಡಳಿಯವರು ಅಭಿನಂದಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಂಗಳೂರು ವಿ.ವಿ.ಯ 2020-21ನೇ ಸಾಲಿನ ಅಂತಿಮ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಕಾವ್ಯ ದೇವಾಡಿಗ ಬಿ.ಸಿ.ಎ. ಪದವಿಯಲ್ಲಿ ಪ್ರಥಮ ರ‍್ಯಾಂಕ್ ಹಾಗೂ ಸುಮಧುರ ಶೆಟ್ಟಿ ನಾಲ್ಕನೇ ರ‍್ಯಾಂಕ್ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಬಿ. ಎಮ್. ಸುಕುಮಾರ್ ಶೆಟ್ಟಿ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು ಹಾಗೂ ಬೋಧಕ-ಬೋಧಕೇತರರು ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಎ.21: ಮಂಗಳೂರು ವಿಶ್ವವಿದ್ಯಾನಿಲಯದ 2020-21ನೇ ಸಾಲಿನ ಪರೀಕ್ಷೆಯಲ್ಲಿ ಮೂಡಬಿದರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಗಂಗೊಳ್ಳಿಯ ವೈಷ್ಣವಿ ಗೋಪಾಲ ಚಂದನ್ ಬಿಎ ಪದವಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿರುವ ಇವರು ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಈಕೆ ಗಂಗೊಳ್ಳಿಯ ಗೋಪಾಲ ಚಂದನ್ ಮತ್ತು ಆಯುರ್ವೇದ ವೈದ್ಯೆ ಡಾ. ವೀಣಾ ಕಾರಂತ್ ದಂಪತಿಯ ಪುತ್ರಿ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳ್ತೂರು ಗ್ರಾಮದ ಸರ್ವೆ ನಂ.207 ರಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ನೇತೃತ್ವದಲ್ಲಿ 2 ಎಕ್ರೆ ಖಾಲಿ ನಿವೇಶನವನ್ನು 2012ರಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಖರೀದಿ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಸಾಕಷ್ಟು ಬಾರೀ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಂದಿನ ಯೋಜನೆಗಳನ್ನು ಜಾರಿಗೆ ತರುವಲ್ಲಿ ಮುಂದದಾಗ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಕುರಿತು ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಮಂಗಳವಾರ ದಿಢೀರ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಸ್ಥಳ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿಯವರು ಮಾದ್ಯಮದವರೊಂದಿಗೆ ಮಾತನಾಡಿ, ಯಾವುದೇ ನಗರ ಇರಬಹುದು. ಪಟ್ಟಣ ಇರಬಹುದು. ಅಥವಾ ಗ್ರಾಮ ಪ್ರದೇಶಗಳು ಇರಬಹುದು. ಅಲ್ಲಿ ಸ್ವಚ್ಛತೆ ಇರಬೇಕೆಂದರೆ ಅಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಅತ್ಯಗತ್ಯ. ಪಟ್ಟಣ ಪಂಚಾಯತ್‌ನವರು ಜನ ವಸತಿ ಪ್ರದೇಶದಲ್ಲಿ ಜಾಗ ಖರೀದಿ ಮಾಡಿದ್ದಾರೆ. ಇಲ್ಲಿ ಸ್ಥಳೀಯವಾಗಿ ಸಮಸ್ಯೆ ಇದೆಯೆಂದು ಗೊತ್ತಾಗಿದೆ. ಇದಕ್ಕಾಗಿ ಸ್ಥಳ ವೀಕ್ಷಣೆಗೆ ಬಂದಿದ್ದೇನೆ. ಮುಂದಿನ ದಿನಗಲ್ಲಿ ಯಾವ ರೀತಿಯಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯದ 2019-20ನೇ ಸಾಲಿನ ಬಿ.ಎಡ್ ಪದವಿಯ ಅಂತಿಮ ಪರೀಕ್ಷೆಯಲ್ಲಿ ಕೋಡಿ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿ ದಿವ್ಯಶ್ರೀ ಕೆ. ಶೇ.85.75 ಅಂಕಗಳೊಂದಿಗೆ ೮ನೇ ರ‍್ಯಾಂಕ್‌ಗಳಿಸಿದ್ದಾರೆ. ಇವರಿಗೆ ಕಾಲೇಜು ಬೋದಕವರ್ಗ ಹಾಗೂ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೆಂಗಳೂರಿನ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಬಿಸಿನೆಸ್ ಅಂಡ್ ರಿಸರ್ಚ್ ವಿದ್ಯಾರ್ಥಿನಿ ಶ್ವೇತಾ ಪೂಜಾರಿ ಬೆಂಗಳೂರು ವಿಶ್ವವಿದ್ಯಾನಿಲಯದ 2019- 21ರ ಎಂಬಿಎ ಪರೀಕ್ಷೆಯ ಮಾರ್ಕೆಟಿಂಗ್ ಮತ್ತು ಫೈನಾನ್ಸ್ ವಿಭಾಗದ ಪರೀಕ್ಷೆಯಲ್ಲಿ ಕಾಲೇಜಿಗೆ ಅತ್ಯಧಿಕ ಅಂಕ ಗಳಿಸುವ ಮೂಲಕ ಚಿನ್ನದ ಪದಕವನ್ನು ಗಳಿಸಿರುತ್ತಾರೆ. ಶ್ವೇತಾ ಐ.ಎಸ್.ಬಿ.ಆರ್ ಕಾಲೇಜಿನ ಜೆಮ್ಸ್ ಮತ್ತು ಶ್ರೀಮತಿ ರಸಿಲಾ ಕೊಠಾರಿ ಪುರಸ್ಕಾರವನ್ನು ಸಹ ಪಡೆದುಕೊಂಡಿದ್ದಾರೆ. ಐಸಿಐಸಿಐ ಬ್ಯಾಂಕ್ ಇನ್ಫೋಸಿಸ್ ಬ್ರಾಂಚನಲ್ಲಿ ಉದ್ಯೋಗಿಯಾಗಿರುವ ಇವರು ಕೊಡಪಾಡಿ ಹೊಸ್ಮನೆಯ ಮಹಾಬಲ ಪೂಜಾರಿ ಮತ್ತು ಸುಶೀಲ ಪೂಜಾರಿಯವರ ಪುತ್ರಿ.

Read More