Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಗುಜ್ಜಾಡಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ತಮ್ಮಯ್ಯ ದೇವಾಡಿಗ ಅವರನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂದಿಸಿದರು. ಗುಜ್ಜಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನೂತನ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಅವರನ್ನು ಅಭಿನಂದಿಸಿ ಮಾತನಾಡಿದ ಜಿಪಂ ಮಾಜಿ ಅಧ್ಯಕ್ಷ ಅನಂತ ಮೊವಾಡಿ, ಬಿಜೆಪಿ ಬೆಂಬಲಿತ ಸದಸ್ಯರ ಬಹುಮತ ಇರುವ ಗುಜ್ಜಾಡಿ ಗ್ರಾಪಂ.ನಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಬಿಜೆಪಿಗೆ ಶಾಕ್ ನೀಡಿದ್ದಾರೆ. ಸರಕಾರದ ವಿವಿಧ ಯೋಜನೆಗಳನ್ನು ಜನರಿಗೆ ಸಮಪರ್ಕವಾಗಿ ತಲುಪಿಸಿ ಉತ್ತಮ ಆಡಳಿತ ನೀಡುವಲ್ಲಿ ನೂತನ ಅಧ್ಯಕ್ಷರು ಗಮನ ಹರಿಸಬೇಕು. ಸ್ವಚ್ಛ ಹಾಗೂ ಪಾರದರ್ಶಕ ಆಡಳಿತಕ್ಕೆ ಕಾಂಗ್ರೆಸ್ ಪಕ್ಷ ಸದಾ ಬೆಂಬಲ ನೀಡುತ್ತದೆ ಎಂದು ಅವರು ಹೇಳಿದರು. ಕುಂದಾಪುರ ಎಪಿಎಂಸಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಹೊಸಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಶುಭ ಹಾರೈಸಿದರು. ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಪುರಾಣ ಪ್ರಸಿದ್ಧ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ಅಖಂಡ ಭಜನಾ ಸಪ್ತಾಹ ಮಹೋತ್ಸವ ಆ.೧೬ರಂದು ಆರಂಭಗೊಂಡಿದ್ದು ಆ.೨೩ರವರೆಗೆ ನಡೆಯಲಿದೆ. ಬೆಳಿಗ್ಗೆ ದೀಪ ಸ್ಥಾಪನಾಪೂರ್ವಕ ಅಖಂಡ ಭಜನಾ ಸಪ್ತಾಹ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕಟರಮಣ ಆಚಾರ್ಯ ಹಾಗೂ ದೇವಳದ ತಾಂತ್ರಿಕ ವೇದಮೂರ್ತಿ ಜಿ.ವಸಂತ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ವೇದಮೂರ್ತಿ ಎಸ್.ಶ್ರೀಧರ ಆಚಾರ್ಯ, ವೇದಮೂರ್ತಿ ಎಸ್.ರಾಮನಾಥ ಆಚಾರ್ಯ, ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್, ಆಡಳಿತ ಮಂಡಳಿ ಸದಸ್ಯ ಜಿ.ವೆಂಕಟೇಶ ನಾಯಕ್, ಕೆ.ಪದ್ಮನಾಭ ನಾಯಕ್, ಡಾ.ಕಾಶೀನಾಥ ಪೈ, ಜಿ.ನಿತ್ಯಾನಂದ ಶೆಣೈ, ಎಂ.ವಿನೋದ ಪೈ, ಎಂ.ವಾಮನ ಪೈ, ಎನ್. ಕೃಷ್ಣಾನಂದ ನಾಯಕ್, ಬಿ.ಕೃಷ್ಟ್ರಾಯ ಪೈ, ಎಚ್.ಸಂಜೀವ ನಾಯಕ್, ಎನ್.ತಿಮ್ಮಪ್ಪ ನಾಯಕ್, ಎನ್.ಗಜಾನನ ನಾಯಕ್, ಯು.ಸದಾನಂದ ಪೈ, ಯು.ನಾರಾಯಣ ಪೈ, ಮೋಹನದಾಸ ಭಂಡಾರ್‌ಕಾರ್, ಜಿಎಸ್‌ಬಿ ಮಹಿಳಾ ಮಂಡಳಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಅಖಂಡ ಭಜನಾ ಸಪ್ತಾಹ ಮಹೋತ್ಸವವು ಆ.೨೩ರಂದು ದೀಪ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧೆಡೆಗಳಲ್ಲಿ ೭೨ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕುಂದಾಪುರದ ಗಾಂಧಿಮೈದಾನದಲ್ಲಿ ಜರುಗಿದ ತಾಲೂಕು ಮಟ್ಟದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಉಪವಿಭಾಗಾಧಿಕಾರಿ ಭೂಬಾಲನ್ ಧ್ವಜಾರೋಹಣಗೈದರು. ಕೋಟ ರೋಟರಿ ಸಿಟಿ ಸಂಸ್ಥೆಯಿಂದ ಜರುಗಿದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಧ್ವಜಾರೋಹಣಗೈದರು. ಬೈಂದೂರು ಶಾಸಕರ ಕಛೇರಿ ಹಾಗೂ ವಂಡ್ಸೆ ಬಿಜೆಪಿ ಕಛೇರಿಯಲ್ಲಿ ಜರುಗಿದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರು ಧ್ವಜಾರೋಹಣಗೈದರು. ಬೈಂದೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಜರುಗಿದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಧ್ವಜಾರೋಹಣ ನೆರವೇರಿಸಿದರು. ತಾಲೂಕಿನ ವಿವಿಧ ಶಾಲಾ ಕಾಲೇಜುಗಳು ಹಾಗೂ ಸರಕಾರಿ ಕಛೇರಿಗಳಲ್ಲಿ, ಆಟೋ, ಟೆಂಪೋ ನಿಲ್ದಾಣಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿ ಸಿಹಿ ವಿತರಿಸಲಾಯಿತು. ಎಲ್ಲೆಡೆಯೂ ಗಣ್ಯರಿಂದ ರಾಷ್ಟ್ರಭಕ್ತಿಯನ್ನು ಪ್ರೇರೇಪಿಸುವ ಮಾತುಗಳು ಕೇಳಿಬಂದವು.  

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಗರ್ಭಗುಡಿಯೊಳಕ್ಕೆ ಕುಬ್ಜಾ ನದಿ ನೀರು ನುಗ್ಗಿದ್ದು, ಭಕ್ತರು ನೀರಲ್ಲಿ ನಿಂತು ಪೂಜೆ ಸಲ್ಲಿಸಿದರು. ವರ್ಷಂಪ್ರತಿಯೂ ನೈಸರ್ಗಿಕ ನದಿ ನೀರಿನ ಅಭಿಷೇಕ ಇಲ್ಲಿ ಸಾಮಾನ್ಯಾವಾಗಿದ್ದು ಸುತ್ತಲೂ ಜಲಾವೃತವಾಗಿ ನೀರಿನ ಮಧ್ಯೆ ಕುಳಿತಿರುವ ದೇವಿಯನ್ನು ಕಣ್ತುಂಬಿಸಿಕೊಳ್ಳಲು ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ದೇವಳದ ಗರ್ಭಗುಡಿ ಜಲಾವೃತ ಆಗುತ್ತಿದ್ದಂತೆ ದೇವಿಗೆ ಅರ್ಚಕರು ಆರತಿ ಬೆಳಗಿದರು. ವರ್ಷಕ್ಕೊಮ್ಮೆ ದೇವಿಗೆ ನೈಸರ್ಗಿಕ ಅಭಿಷೇಕವಾಗುತ್ತದೆ. ನೀರು ಬಂದ ಹಿನ್ನಲೆ ಭಕ್ತರು ನೀರಿನಲ್ಲೇ ತೆರಳಿ ದೇವಿಯ ದರ್ಶನ ಪಡೆದರು. ಬಳಿಕ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಅಮ್ಮನವರ ತೆಪ್ಪೋತ್ಸವನ್ನು ನಡೆಯಿತು. ವಾಡಿಕೆಯಂತೆ ಗರ್ಭಗುಡಿಗೆ ಬಂದ ನೀರು ಹರಿದು ಬಂದಿದ್ದು, ಇಲ್ಲಿ ವರ್ಷಕ್ಕೊಮ್ಮೆ ದೇವಿಗೆ ನೈಸರ್ಗಿಕ ನದಿ ನೀರಿನ ಅಭಿಷೇಕ ಸಾಮಾನ್ಯ. ನದಿ ನೀರು ಬಂದ ಹಿನ್ನಲೆಯಲ್ಲಿ ಭಕ್ತರು ಪುಳಕಗೊಂಡಿದ್ದರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಚ್ಚಹಸಿರಿನ ಕಾಡಿನ ಮಧ್ಯಭಾಗದಲ್ಲಿರುವ ಕಮಲಶಿಲೆ ಇದೆ. ಅರಣ್ಯದ ತಪ್ಪಲಿನಲ್ಲಿ ಪವಿತ್ರವಾದ ಕುಬ್ಜ ನದಿಯು ಹರಿಯುತ್ತಿದ್ದು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಳೆದ ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಬಿರುಸಿನ ಮಳೆಯಿಂದಾಗಿ ಬೈಂದೂರು, ಶಿರೂರು ವ್ಯಾಪ್ತಿಯ ಕರಾವಳಿ ಪ್ರದೇಶಗಳಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿದೆ. ಇದರಿಂದ ಕಡಲಿನ ರಕ್ಕಸ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಹಲವು ಕಡೆಗಳಲ್ಲಿ ಕಡಲ್ಕೊರೆತ ಉಂಟಾಗಿದೆ. ಶಿರೂರು ಅಳ್ವೆಗದ್ದೆ ಬಂದರಿನಲ್ಲಿ ಲಂಗರೂ ಹಾಕಿದ ಆರು ದೋಣಿ ಮತ್ತು ಎರಡು ಪರ್ಷಿನ್ ಬೋಟ್‌ಗಳು ಅಲೆಗೆ ಕೊಚ್ಚಿಹೋಗಿ ಸಮುದ್ರ ಸೇರಿದೆ. ಅದೃಷ್ಟವಶಾತ್ ಇವುಗಳು ಮಂಗಳವಾರ ಬೆಳಗಿನ ಜಾವ ಇಲ್ಲಿ ಸಮೀಪದ ಕಳಿಹಿತ್ಲು ಕಡಲ ತೀರಕ್ಕೆ ತೇಲಿಬಂದಿದೆ. ಉಪ್ಪುಂದದ ಸಾಗರದೀಪ ಹೆಸರಿನ ಮೂರು ದೋಣಿ, ಬಪ್ರಿಹಿಂಡ್ ಪ್ರಸಾದ ಹೆಸರಿನ ಮೂರು ದೋಣಿ, ಶಿರೂರು ವಕೀಲ ಲಿಂಗಪ್ಪ ಮೆಸ್ತ ಹಾಗೂ ಬೆಳ್ಕೆಯ ಮಾದೇವ ಮೊಗೇರ ಇವರ ತಲಾ ಒಂದು ಬೋಟ್‌ಗಳನ್ನು ಸ್ಥಳೀಯ ಮೀನುಗಾರರು ಸಾರ್ವಜನಿಕರ ನೆರವಿನಿಂದ ಹಗ್ಗದ ಮೂಲಕ ರಕ್ಷಣೆ ಮಾಡಿದ್ದರೂ ಎರಡೂ ಬೋಟ್‌ಗಳ ಇಂಜಿನ್ ವಿಭಾಗ ಸಂಪೂರ್ಣ ಹಾನಿಯಾಗಿದ್ದು, ಸುಮಾರು ಮೂರು ಕೋಟಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸಾಲಮಾಡಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ ಇದರ ಸಹಯೋಗದಲ್ಲಿ ’ನನ್ನ ಮೆಚ್ಚಿನ ಪುಸ್ತಕ’ ಸ್ವರ್ಧೆ ನಡೆಯಿತು. ಅತಿಥಿಯಾಗಿದ್ದ ಲೇಖಕ ನರೇಂದ್ರ ಗಂಗೊಳ್ಳಿ ಮಾತನಾಡಿ ನಾವು ಯಾರದೋ ಒತ್ತಾಯಕ್ಕೆ ಮಣಿದು ಪುಸ್ತಕ ಓದದೇ, ನಮ್ಮ ಸ್ವಂತ ಆಸಕ್ತಿಯ ನೆಲೆಯಲ್ಲಿ ಓದಿ ತಿಳಿದುಕೊಳ್ಳಬೇಕು. ಇದರಿಂದ ನಮಗೆ ಇನ್ನೂ ಓದಬೇಕು, ತಿಳಿದುಕೊಳ್ಳಬೇಕು ಎನ್ನುವ ಹವ್ಯಾಸ ಬೆಳೆಯುತ್ತದೆ. ಆಗ ಸ್ವತಃ ಹೊಸತನದ ಹುಡುಕಾಟಕ್ಕೂ ನಾವೇ ತಯಾರಾಗುತ್ತೇವೆ ಎಂದು ಅಭಿಪ್ರಾಯಪಟ್ಟರು. ಯಾವುದೇ ಪುಸ್ತಕ, ವಿಷಯ, ವಸ್ತು ಅಥವಾ ಮನುಷ್ಯನೇ ಆಗಲಿ ಅವರನ್ನು ಒಂದೇ ಬಾರಿಗೆ ನೋಡಿ ನಿರ್ಧರಿಸದೇ ಮತ್ತೆ ಮತ್ತೆ ಅದರ ತಿರುಳನ್ನು ತಿಳಿದುಕೊಂಡು ಅದರ ಬಗ್ಗೆ ಅರ್ಥೈಸಿಕೊಳ್ಳಬೇಕು. ಅಲ್ಲದೇ ಸಾಹಿತ್ಯ ಅಥವಾ ಯಾವುದೇ ಪುಸ್ತಕವಾಗಲಿ ಅದನ್ನು ಓದಿದಷ್ಟು ನಮ್ಮ ಜ್ಞಾನ ಮತ್ತು ಆತ್ಮವಿಶ್ವಾಸ ಬೆಳೆಯುತ್ತದೆ. ವಯಸ್ಸಿಗನುಸಾರವಾದ ಪುಸ್ತಕವನ್ನು ಓದಬೇಕೆ ಹೊರತು ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುವ ಅಥವಾ ಪಕ್ಷ, ಧರ‍್ಮ, ಜಾತಿ ಪರವಾಗಿರುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕರಾವಳಿ ಯಕ್ಷ ಮಿತ್ರರು (ವಾಟ್ಸಾಪ್ ಬಳಗ ) ಇವರ ಆಶ್ರಯದಲ್ಲಿ 2ನೇ ವರ್ಷದ ಸವಿನೆನಪಿಗಾಗಿ ಅಶಕ್ತ ಹಾಗೂ ಪ್ರತಿಭಾನ್ವಿತ ಯಕ್ಷ ಕಲಾವಿದರಿಗೆ ಸಹಾಯ ಹಸ್ತ ಮತ್ತು ಸನ್ಮಾನ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಐ.ಟಿ ಕಾಲೇಜಿನ ಪ್ರೋಪೆಸರ್, ಯಕ್ಷ ಚಿಂತಕರು, ಹವ್ಯಾಸಿ ಭಾಗವತರಾಂದತಹ ಎಸ್.ವಿ ಉದಯ ಕುಮಾರ್ ಶೆಟ್ಟಿಯವರು ವಹಿಸಿದ್ದರು ಸೇವಾ ಸಹಕಾರಿ ಬ್ಯಾಂಕ್ ಮಂದಾರ್ತಿ ಇದರ ಅಧ್ಯಕ್ಷರಾದ ಗಂಗಾಧರ ಶೆಟ್ಟಿಯವರು, ಮೊಗವೀರ ಯುವ ಸಂಘಟನೆ ಮಂದಾರ್ತಿ ಇದರ ಸ್ಥಾಪಕಾಧ್ಯಕ್ಷರಾದಂತಹ ಅಶೋಕ ಕುಂದರ್, ಸಮಾಜ ಸೇವಕರು ಆದಂತಹ ಪ್ರಶಾಂತ್ ಯಡಾಡಿ, ಕರಾವಳಿ ಯಕ್ಷಮಿತ್ರರು (ವಾಟ್ಸಾಪ್ ಬಳಗ)ದ ಸ್ಥಾಪಕಾಧ್ಯಕ್ಷರಾದಂತಹ ಧನುಷ್ ಶೆಟ್ಟಿ ಹೊಳೆಬಾಗಿಲು ಹಾಗೂ ಮಹೇಶ್ ಪೂಜಾರಿ ಹೂಡೆಯವರು ಉಪಸ್ಥಿತರಿದ್ದರು. ಅಶಕ್ತ ಕಲಾವಿದ ಪ್ರವೀಣ. ಪಿ ಆಚಾರ್ಯರವರಿಗೆ ಧನ ಸಹಾಯ ಹಾಗೂ ಸನ್ಮಾನ ಮಾಡಲಾಯಿತ್ತು, ಯಕ್ಷ ಭಾಗವತ ಗಣೇಶ್ ಆಚಾರ್ಯ ಹಾಗೂ ಯಕ್ಷ ಸಂಘಟಕರಾದ ಅಶೋಕ ಕುಂದರ್ ಅವರಿಗೂ ಸನ್ಮಾನ ಮಾಡಲಾಯಿತ್ತು. ಕಾರ್ಯಕ್ರಮದ ನಿರೂಪಣೆ ಧನುಷ್ ಶೆಟ್ಟಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಶ್ರೀ ವ್ಯಾಸರಾಜ ಮಹಾ ಸಂಸ್ಥಾನ ಪರಮ ಪೂಜ್ಯರಾದ ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀಪಾದಂಗಳರವರ ಚಾತುರ್ಮಾಸ್ಯ ವೃತಾಚರಣೆ ಅಂಗವಾಗಿ ಕುಂದಾಪುರಕ್ಕೆ ಆಗಮಿಸಿದ ಈ ಸಂದರ್ಭದಲ್ಲಿ ಅವರಿಗೆ ಅತಿಥ್ಯ ನೀಡಿ ಚಾತುರ್ಮಾಸ್ಯದ ವಸ್ತ್ರಭಿಕ್ಷೆ ನೀಡಲಾಯಿತು. ಈ ಚಾತುರ್ಮಾಸ್ಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುದಾಗಿ ಗಾಣಿಗ ಸಮಾಜ ಭಾಂದವರ ಪರವಾಗಿ ವಾಗ್ದಾನವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೊಗ್ಗ ಗಾಣಿಗ, ಪ್ರಧಾನ ಕಾರ್ಯದರ್ಶಿ ಕೆ. ಭಾಸ್ಕರ್, ಕೋಶಾಧಿಕಾರಿ ಪರಮೇಶ್ವರ್ ಜಿ.ಬಿ, ಶ್ರೀ ವ್ಯಾಸರಾಜ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಗಾಣಿಗ, ಕೋಶಾಧಿಕಾರಿ ಗಣಪಯ್ಯ ಗಾಣಿಗ, ಮಾಜಿ ಕೋಶಾಧಿಕಾರಿ ಶಂಕರನಾರಾಯಣ ಗಾಣಿಗ ಬೀಜಾಡಿ, ಸಮಾಜದ ಹಿರಿಯರಾದ ಸುಧೀರ್ ಪಂಡಿತ್, ಗೋಪಾಲ ಚೆಲ್ಲಿಮಕ್ಕಿ ಮತ್ತು ರಾಜ್ಯದ ಎಲ್ಲಾ ಭಾಗದ ಗಾಣಿಗ ಸಮಾಜದ ಅಧ್ಯಕ್ಷರು ಹಾಗೂ ಮುಖಂಡರು ಮತ್ತು ಗಾಣಿಗ ಸಮಾಜ ಬಾಂಧವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದಲ್ಲಿ ನೂರಾರು ಯುವ ಹಾಗೂ ಸೃಜನಶೀಲ ಮನಸ್ಸುಗಳಿದ್ದು, ಸಿನೆಮಾ ರಂಗದಲ್ಲಿಯೂ ಖ್ಯಾತಿ ಪಡೆದಿದ್ದಾರೆ. ಇತ್ತಿಚಿನ ದಿನಗಳಲ್ಲಿ ಕುಂದಾಪುರ ಹಾಗೂ ಕರಾವಳಿಗರ ಸಿನೆಮಾಗಳು ಹೆಚ್ಚು ಸದ್ದು ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಹಿರಿಯ ಸಾಹಿತಿ, ನ್ಯಾಯವಾದಿ ಎಎಸ್‌ಎನ್ ಹೆಬ್ಬಾರ್ ಹೇಳಿದರು. ಅವರು ಶುಕ್ರವಾರ ಕುಂದಾಪುರದ ವಿನಾಯಕ ಚಿತ್ರಮಂದಿರದಲ್ಲಿ ತೆರೆಕಂಡ ಕತ್ತಲೆಕೋಣೆ ಸಿನೆಮಾ ಬಿಡುಗಡೆಗೂ ಮುನ್ನ ಚಿತ್ರತಂಡಕ್ಕೆ ಶುಭ ಹಾರೈಸಿ ಮಾತನಾಡಿದರು. ಕುಂದಾಪುರದ ಕ್ರೀಯಾಶೀಲ ಯುವಕರ ತಂಡ ನಿರ್ಮಿಸಿರುವ ಕತ್ತಲೆಕೋಣೆ ಇಂದು ರಾಜ್ಯದ 120 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಚಿತ್ರದ ಕಥಾವಸ್ತು ಹಾಗೂ ಭಿನ್ನ ಶೈಲಿಯ ನಿರ್ದೇಶಕ ಚಿತ್ರರಸಿಕರ ಮನಗೆಲ್ಲಲಿದೆ ಎಂದರು. ಈ ಸಂದರ್ಭ ಕತ್ತಲೆಕೋಣೆ ಚಿತ್ರದ ನಿರ್ದೇಶಕ, ನಟ ಸಂದೇಶ್ ಶೆಟ್ಟಿ ಆಜ್ರಿ, ನಿರ್ಮಾಪಕರಾದ ಪಿ.ಆರ್ ಅಮೀನ್ ಮುಂಬೈ, ನಟರಾದ ಓಂಗುರು ಬಸ್ರೂರು, ಚಂದ್ರಶೇಖರ ಬಸ್ರೂರು, ಚಿತ್ರತಂಡದ ಅಶ್ವಥ್ ಆಚಾರ್ಯ, ಮಂಜುನಾಥ ಸಾಲ್ಯಾನ್, ರಿತಿಕ್ ಮುರ್ಡೇಶ್ವರ್, ರೋಹಿತ್ ಅಂಪಾರು, ಶ್ರೀನಿವಾಸ್ ಪೈ, ಭಾಸ್ಕರ್ ಶೆಟ್ಟಿ ನೇರಳಕಟ್ಟೆ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಧ್ಯೇಯಘೋಷದೊಂದಿಗೆ ಮಹಾತ್ಮಾ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ದೇಶದಾದ್ಯಂತ ಚಳುವಳಿ ನಡೆಸಿದಂತೆ ಇಂದು ಅಪಪ್ರಚಾರವನ್ನೇ ಬಂಡವಾಳವಾಗಿಟ್ಟುಕೊಂಡು ಗೊಂದಲ ಸೃಷ್ಟಿಸುವ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ವಿರುದ್ದ ಆಡಳಿತ ಬಿಟ್ಟು ತೊಲಗಿ ಎಂಬ ಆಂದೋಲನ ಆರಂಭಿಸಬೇಕಾಗಿದೆ ಎಂದು ಬೈಂದೂರು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಬೈಂದೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯ 75ನೇ ವರ್ಚಾಚರಣೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದೆ. ಕಾಂಗ್ರೇಸ್ ಪಕ್ಷ ಯಾರನ್ನೂ ಕಡೆಗಣಿಸಿಲ್ಲ. ಸರ್ವ ಸಮಾನತೆಗಾಗಿ ಒಂದು ಸಿದ್ಧಾಂತದ ಜತೆಗೆ ಹಿಂದಿನಿಂದಲೂ ಹೋರಾಟ ಮಾಡುತ್ತಾ ಬಂದಿದೆ. ಇಂದಿನ ಯುವ ಪೀಳಿಗೆಗೆ ಕಾಂಗ್ರೆಸ್ ಸಾಧನೆ ನೆನಪಿಲ್ಲ, ಕಾಂಗ್ರೆಸ್ ಕಾರ್ಯಕರ್ತರು ಯುವ ಪೀಳಿಗೆಗೆ ಪಕ್ಷದ ಸಾಧನೆಯನ್ನು ನೆನಪಿಸುವಂತಹ ಕಾರ್ಯ ಮಾಡಬೇಕಾಗಿದೆ ಎಂದರು. ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಮೋದಿ…

Read More