Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಪ್ಪುಂದ  ಶ್ರೀ ಆನೆಗಣಪತಿ ದೇವಸ್ಥಾನದ ಬಳಿ ಇರುವ ಶ್ರೀ ಆನೆಗಣಪತಿ ಇಲೆಕ್ಟ್ರಿಕಲ್ ಅಂಗಡಿಗೆ ಬೆಳಗಿನ ಜಾವ ಆಕಸ್ಮಕವಾಗಿ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ವರದಿಯಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅಂಗಡಿಗೆ ಬೆಂಕಿ ತಗುಲಿರಬಹುದೆಂದು ಶಂಕಿಸಲಾಗಿದೆ. ಇಲೆಕ್ಟ್ರಿಕಲ್ ಶಾಪ್‌ನಲ್ಲಿರುವ ವಸ್ತುಗಳ ಸಂಪೂರ್ಣ ಸುಟ್ಟು ಕರಕಲಾಗಿವೆ. ಪಕ್ಕದ ಅಂಗಡಿಗಳಿಗೂ ಬೆಂಕಿ ಆವರಿಸಿಕೊಳ್ಳುವುದರಲ್ಲಿತ್ತು. ಅಗ್ನಿಶಾಮಕದಳದ ಸಿಬ್ಬಂಧಿಗಳು ಬೆಂಕಿ ನಂದಿಸಿದ್ದಾರೆ. ಘಟನೆಯ ನಿಖರ ಕಾರಣ ತನಿಕೆಯ ಬಳಿಕ ತಿಳಿದುಬರಲಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ಅಪರಾಧಗಳನ್ನು ಕಡಿಮೆ ಮಾಡುವಲ್ಲಿ ದೇಶಕ್ಕೆ ಮಾದರಿಯಾಗಿ ಪ್ರಥಮ ಸ್ಥಾನದಲ್ಲಿದೆ. ರಾಜ್ಯ ಸರಕಾರ ಇಲಾಖೆಯನ್ನು ಬಲಪಡಿಸಲು ಅನೇಕ ಯೋಜನೆಗಳನ್ನು ರೂಪಿಸಿದ್ದು, ಇತ್ತೀಚಿಗೆ ಜಾರಿಗೆ ತಂದಿರುವ ಜನಸಾಮಾನ್ಯರನ್ನೊಳಗೊಂಡ ಸುಧಾರಿತ ಬೀಟ್ ವ್ಯವಸ್ಥೆ ಯಶಸ್ವಿಯಾಗುತ್ತಿದೆ ಎಂದು ಪೊಲೀಸ್ ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಪಿ.ದಿನೇಶ ಕುಮಾರ್ ಹೇಳಿದರು. ರೋಟರಿ ಕ್ಲಬ್ ಗಂಗೊಳ್ಳಿ ಆಶ್ರಯದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆ ಸಹಕಾರದೊಂದಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ವಾಹನ ಚಾಲಕರು ಹಾಗೂ ಮಾಲಕರಿಗೆ ಶನಿವಾರ ಜರಗಿದ ’ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತೆ ಮಾಹಿತಿ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು. ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಮೂಲ ಉದ್ದೇಶವಾಗಿದ್ದು, ಜನಸಾಮಾನ್ಯರು ಪೊಲೀಸರ ಜೊತೆಗೂಡಿ ಕಾರ್ಯನಿರ್ವಹಿಸಬೇಕಾದ ಅಗತ್ಯತೆ ಇದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು, ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆ ಶಿಕ್ಷಾರ್ಹ ಅಪರಾಧವಾಗಿದೆ. ಪೊಲೀಸ್ ಇಲಾಖೆಯ ಮತ್ತು ಮೋಟಾರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು:ಸದ್ಗುರು ಶ್ರೀ ನಿತ್ಯಾನಂದರ ಭಕ್ತರು ವಿಶ್ವದೆಲ್ಲೆಡೆ ನೆಲೆಸಿದ್ದು, ಕೊಲ್ಲೂರಿನ ನಿತ್ಯಾನಂದಆಶ್ರಮದಲ್ಲಿ ನಡೆಯುವ ವಿವಿಧಧಾರ್ಮಿಕ ಕಾರ್ಯಕ್ರಮಗಳ ಮಾಹಿತಿಯನ್ನುಅಂತರ್ಜಾಲದ ಪಡೆದುಕೊಳ್ಳಲು ಆಶ್ರಮದ ವೆಬ್ಸೈಟ್‌ರೂಪಿಸಲಾಗಿದ್ದುಆಶ್ರಮದ ಭಕ್ತರುಇದರಸದುಪಯೋಗವನ್ನು ಪಡದುಕೊಳ್ಳುವಂತಾಗಲಿಎಂದುಶ್ರೀ ನಿತ್ಯಾನಂದಗುರುದೇವರ ಹಿರಿಯ ಭಕ್ತಮಂಬೈನ ನರೇಂದ್ರದೇಶಪಾಂಡೆ ಹೇಳಿದರು ಅವರು  ಗುರುಪೂರ್ಣಿಮೆ ಅಂಗವಾಗಿ ಕೊಲ್ಲೂರು ಸದ್ಗುರು ಶ್ರೀ ನಿತ್ಯಾನಂದ ಆಶ್ರಯಮದಲ್ಲಿ ಜರುಗಿದ ಸತ್ಯನಾರಾಯಣ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶ್ರಮ ವೆಬ್ಸೈಟ್‌  www.kollurunithyanandaashrama.com ಲೋಕಾರ್ಪಣೆಗೋಳಿಸಿ ಮಾತನಾಡಿದರು. ಶ್ರೀ ನಿತ್ಯಾನಂದ ಗುರುದೇವರ ನೇರ ಶಿಷ್ಯರಾದ ಶ್ರೀ ವಿಮಲಾನಂದ ಸ್ವಾಮೀಜಿಯವರು ನಿತ್ಯಾನಂದರ ಅಣತಿಯಂತೆ ಕೊಲ್ಲೂರಿನಲ್ಲಿ ನೆಲೆಸಿ ತಮ್ಮಸೇವಾಕಾರ್ಯವನ್ನು ನಡೆಸುತ್ತಾ ಬಂದಿದ್ದರು. ಅವರ ಸಮಾಧಿಯ ಬಳಿಕವೂ ಸೇವಾ ಕಾರ್ಯಗಳು ಕೊಲ್ಲೂರು ಶ್ರೀ ನಿತ್ಯಾನಂದ ಆಶ್ರಮದಲ್ಲಿ ನಡೆಯುತ್ತಿದ್ದು ಶ್ರೀ ನಿತ್ಯಾನಂದರ ಭಕ್ತರಿಗೂ ಸಂತೃಪ್ತಿ ತಂದಿದೆ ಎಂದರು. ಕೊಲ್ಲೂರು ಶ್ರೀ ನಿತ್ಯಾನಂದ ಆಶ್ರಮದ ಮುಖ್ಯಸ್ಥ ಜಯಾನಂದ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆಶ್ರಮದ ವೆಬ್ಸೈಟನ್ನು ಸಮಷ್ಠಿ ಮೀಡಿಯಾ ವೆಂಚರ‍್ಸ್ ಸಂಸ್ಥೆ ರೂಪಿಸಿತ್ತು. ಶಿರೂರು ಶ್ರೀ ನಿತ್ಯಾನಂದ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ಜರುಗಿತು. ಆಶ್ರಮದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ ಬೆಂಗಳೂರು ಹಾಗೂ ಆಲ್ ಇಂಡಿಯಾ ಕಲ್ಚರ್ & ಹೆರಿಟೇಜ್ ಡೆವಲಪ್‌ಮೆಂಟ್ ಸೆಂಟರ್ ನ್ಯೂ ಡೆಲ್ಲಿ ಸಹಯೋಗದೊಂದಿಗೆ ಕೊಡಲ್ಪಡುವ ಸಮಾಜ ಸೇವಾ ರತ್ನ ಪ್ರಶಸ್ತಿಗೆ ಬೈಂದೂರಿನ ವಾಸುದೇವ ಬಿ.ದೇವಾಡಿಗ ಆಯ್ಕೆಯಾಗಿದ್ದಾರೆ ಮಾತೃಶ್ರೀ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್, ಮಾತೃಶ್ರೀ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿ ಹಾಗೂ ಮಾತೃಶ್ರೀ ಶೈಕ್ಷಣಿಕ ಸಾಮಾಜಿಕ ಸೇವಾ ಸಂಸ್ಥೆ ಬೈಂದೂರು, ಕುಂದಾಪುರ ಇದರ ಸ್ಥಾಪಕರಾದ ವಾಸುದೇವ ಅವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾಂ, ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿಯೂ ಇವರ ಸೇವಾ ಕಾರ್ಯ ನಿರಂತರವಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕನ್ನಡ ವಿಶ್ವಾವಿದ್ಯಾಲಯ, ಹಂಪಿಯ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ  ವಿಭಾಗದ ಫಲಿತಾಂಶ ಪ್ರಕಟವಾಗಿದ್ದು ಬೈಂದೂರು ತಾಲೂಕು ಯಳಜಿತ್ ಗ್ರಾಮದ ಬಾಬು ಪೂಜಾರಿ ಮತ್ತು ಗುಲಾಬಿ ದಂಪತಿಯ ಮಗ ರೂಪೇಶ್ ಪೂಜಾರಿ ಮೂರನೇ ರ್ಯಾಂಕ್ ಪಡೆದಿದ್ದಾರೆ.ಇವರು ಸರಕಾರಿ ಹಿ.ಪ್ರಾ.ಶಾಲೆ ಯಳಜಿತ್,ಮೂಕಾಂಬಿಕಾ ಪ್ರೌಢಶಾಲೆ ಗೋಳಿಹೊಳೆ ಹಾಗೂ ಭಂಡರ್ಕಾರ್ಸ್ ಕಾಲೇಜು ಕುಂದಾಪುರದಲ್ಲಿ ಬಿ.ಎ ಪದವಿ ಶಿಕ್ಷಣವನ್ನು ಪಡೆದಿದ್ದರು. ಪ್ರಸ್ತುತ ಸುದ್ದಿ ವಾಹಿನಿಯಲ್ಲಿ ವರದಿಗಾರರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಡುಪಿ ಜಿಲ್ಲೆಯಲ್ಲಿ ಅಭಿವೃದ್ಧಿ ನೋಡಿ ಓಟು ನೀಡುತ್ತಾರೆ ಎಂದುಕೊಂಡಿದ್ದೇವು. ಆದರೆ ಬುದ್ಧಿವಂತ ಜಿಲ್ಲೆಯ ಜನರು ಅಪಪ್ರಚಾರಕ್ಕೆ ಮಣೆ ಹಾಕಿರುವುದು ಬೇಸರ ತರಿಸಿದೆ. ಬೈಂದೂರು ವಿಧಾನಸಭಾ ಕ್ಷೇತ್ರವೊಂದಕ್ಕೆ ಸುಮಾರು ೨೦೦೦ ಕೋಟಿ ರೂ ಅನುದಾನವನ್ನು ತಂದು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಆದರೆ ಚುನಾವಣೆಯಲ್ಲಿ ಕ್ಷೇತ್ರದಲ್ಲಾದ ಕೆಲಸವನ್ನು ಜನರಿಗೆ ಮರೆಮಾಚಿ ಹಿಂದೂತ್ವ, ಅಪಪ್ರಚಾರದ ಆಧಾರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಬೈಂದೂರು ರೋಟರಿ ಭವನದಲ್ಲಿ ಜರುಗಿದ ಬೈಂದೂರು ಬ್ಲಾಕ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಬಿಜೆಪಿ ಪಕ್ಷ ಹಿಂದೂತ್ವದ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದೆ. ಆದರೆ ನೈಜವಾಗಿ ಹಿಂದೂತ್ವದ ಕಾರ್ಯವನ್ನು ಕಾಂಗ್ರೆಸ್ ಮಾಡಿದೆ. ರಾಜ್ಯದಲ್ಲಿ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿದ್ದ ಸಂದರ್ಭ ದೇವಸ್ಥಾನಗಳ ಜೀಣೋದ್ಧಾರಕ್ಕೆ ಅತಿ ಹೆಚ್ಚಿನ ಅನುದಾನ ನೀಡಿದೆ. ದೇವಳದಲ್ಲಿ ಪೂಜೆ ಮಾಡುತ್ತಿರುವ ಅರ್ಚಕರಿಗೆ ನೀಡುತ್ತಿದ್ದ ಸಂಬಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈಗಾಗಲೇ ಚಂಡೆ ಶಬ್ದ ಕೇಳಿಸಲು ಪ್ರಾರಂಭವಾಗಿದೆ ಆದರೆ ಬಹು ಜನರ ನಿರೀಕ್ಷೆ ಯಾವಾಗ ಪೇರ್ಡೂರು ಮೇಳದ ಎಂಟ್ರಿ ಎಂಬುದು . ಅನಿಲ್ ಕುಮಾರ್ ಶೆಟ್ಟಿ ಪೇರ್ಡೂರು ಆಯೋಜನೆಯಲ್ಲಿ ಜುಲೈ 20 ಶುಕ್ರವಾರ ಪೇರ್ಡೂರು ಮೇಳದ ಬೆಂಗಳೂರಿನ ಪ್ರಥಮ ಪ್ರದರ್ಶನ “ಅಹಂ ಬ್ರಹ್ಮಾಸ್ಮಿ” . ಊರಿನ ತಿರುಗಾಟದಲ್ಲಿ ನೂರು ಪ್ರದರ್ಶನಗಳನ್ನು ಕಂಡ ಪ್ರೋ. ಪವನ್ ಕಿರಣಕೆರೆ ವಿರಚಿತ ಕೃತಿ ಇದಾಗಿದ್ದು ಜನ್ಸಾಲೆ ಭಾಗವತಿಕೆಯಲ್ಲಿ ಪ್ರದರ್ಶನ ಕಾಣಲಿದೆ. ರಾಘವೇಂದ್ರ ಆಚಾರ್ಯ ಜನ್ಸಾಲೆ ,ಬ್ರಹ್ಮೂರು ಗಾನ ಸಾರಥ್ಯ ನಿರ್ವಹಿಸಿದರೆ ಸುನಿಲ್ ಭಂಡಾರಿ , ಸುಜನ್ ಹಾಲಾಡಿ ಸಾಥ್ ನೀಡಲಿದ್ದಾರೆ . ಥಂಡಿಮನೆ , ಸುಬ್ರಮಣ್ಯ ಯಲಗುಪ್ಪ , ಕಡಬಾಳ್ , ಕಿರಾಡಿ , ಮಾಗೋಡು , ಕೆಕ್ಕಾರು ರಂಗ ವೈಭವಕ್ಕೆ ರಮೇಶ ಭಂಡಾರಿ , ರವೀಂದ್ರ ದೇವಾಡಿಗ , ಪುರಂದರ ಮೂಡ್ಕಣಿ ತ್ರಿವಳಿ ಹಾಸ್ಯ ಸಿಂಚನ ಮಾಡಲಿದ್ದಾರೆ. ಬಹುದಿನಗಳ ನಂತರ ಪೇರ್ಡೂರು ಮೇಳದ ಪ್ರದರ್ಶನಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ವಲಯದ ಬಿದ್ಕಲ್‌ಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ’ಶಾಲೆಗೆ ಬನ್ನಿ ಶನಿವಾರ ಕಲಿಕೆಗೆ ನೀಡಿ ಸಹಕಾರ’ ಕಾರ್ಯಕ್ರಮದಡಿ ತಿಂಗಳ ಕಲಿಕಾ ಪ್ರದರ್ಶನ ಕಾರ್ಯಕ್ರಮದಲ್ಲಿ ದಿಗ್ವಿಜಯ ನ್ಯೂಸ್ ವಾಹಿನಿಯ ವರದಿಗಾರ್ತಿ, ಶಾಲಾ ಹಳೆವಿದ್ಯಾರ್ಥಿ ಕುಮಾರಿ ಪವಿತ್ರ ಅವರೊಂದಿಗೆ ಮಕ್ಕಳು ಮುಕ್ತ ಸಂವಾದ ನಡೆಸಿದರು. ಮಕ್ಕಳು ವಿಭಿನ್ನವಾದ ಪ್ರಶ್ನೆಗಳನ್ನು ಕೇಳುವ ಮೂಲಕ ಟಿ.ವಿ.ವಾಹಿನಿಯ ಕಾರ್ಯಕ್ರಮಗಳು ಹೇಗೆ ರೂಪಿತವಾಗುತ್ತವೆ? ಎಂಬ ಬಗ್ಗೆ ತಮ್ಮ ಮನಸ್ಸಿನಲ್ಲಿ ಮೂಡಿದ ಕುತೂಹಲಕಾರಿ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಡೆದರು. ಕೆಲವರು ತಾವೂ ವರದಿಗಾರರಾಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿ ಸಲಹೆ ಹಾಗೂ ಮಾರ್ಗದರ್ಶನ ಕೇಳಿದರು. ಇನ್ನು ಕೆಲವರು ಇದೇ ಶಾಲೆಯಲ್ಲಿ ಓದಿದ ಪವಿತ್ರಾರವರ ಬಾಲ್ಯದ ದಿನಗಳು, ಬಾಲ್ಯ ಶಿಕ್ಷಣ, ಕಲಿಸಿದ ಗುರುಗಳು, ಆಸಕ್ತಿ ಮೂಡಿದ ಬಗೆ, ಕನಸು ನನಸಾದ ಬಗೆ ಇತ್ಯಾದಿ ವಿಚಾರಗಳಬಗ್ಗೆ ಮುಕ್ತ ಪ್ರಶ್ನೆಗಳನ್ನು ಮುಂದಿಟ್ಟರು. ಮಕ್ಕಳ ತುಂಟ ಪ್ರಶ್ನೆಗಳಿಗೆ ನಗುಮೊಗದಿಂದಲೇ ಉತ್ತರಿಸಿದ ಪವಿತ್ರ ಕೊನೆಗೆ ಮಕ್ಕಳನ್ನು ಬಳಸಿಕೊಂಡು, ಸುದ್ದಿ ನಿರೂಪಣೆ ಮತ್ತು ನೇರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂಭಾಶಿ ಶ್ರೀ ವಿನಾಯಕ ದೇವಸ್ಥಾನದಲ್ಲಿ ಪ್ರಥಮ ಬಾರಿ 21 ಸಾವಿರ ತೆಂಗಿನಕಾಯಿ ಮೂಡುಗಣಪತಿ ಸೇವೆ ನಡೆಯಿತು. ಉಡುಪಿ ಜಿಲ್ಲೆಯ ಅನಿವಾಸಿ ಭಾರತೀಯ ಅಮೆರಿಕಾ ಮೇಜರ್ ಡಾ. ಪ್ರವರ್ಧನ್ ಬಿರ್ತಿ ಹಾಗೂ ವಂದನಾ ಬಿರ್ತಿ ಸೇವೆ ಸಲ್ಲಿಸಿದ ಭಕ್ತರು. ದೇಸ್ಥಾನದ ಅನುವಂಶೀಯ ಮೊಕ್ತೇಸರ ಸೂರ್ಯನಾರಾಯಣ ಉಪಾಧ್ಯಾಯ ಹಾಗೂ ಅರ್ಚಕ ವೃದ್ಧ ಸೇವೆ ಕಾರ‍್ಯ ನೆರವೇರಿಸಿದರು. ಶ್ರೀ ನಿನಾಯಕ ದೇವಸ್ಥಾನದಲ್ಲಿ ೨೧ ಸಾವಿರ ತೆಂಗಿನಕಾಯಿ ಮೂಡು ಗಣಪತಿ ಸೇವೆ ನಡೆಯಿತು.

Read More

ಅಗಸ್ಟ 10ರಂದು ರಾಜ್ಯಾದ್ಯಂತ ‘ ಕತ್ತಲೆಕೋಣೆ’ ಬಿಡುಗಡೆಗೆ ತಯಾರಿ ನಡೆಸಿದೆ ಚಿತ್ರತಂಡ ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕನ್ನಡ ಸಿನೆಮಾ ಮಾಡೊದೆಂದರೆ ಗಾಂಧಿನಗರದಲ್ಲಿ ಚಪ್ಪಲಿ ಸವೆಸಬೇಕು ಎಂಬ ಅಲಿಕಿತ ನಿಯಮವೊಂದಿತ್ತು. ಬೆಂಗಳೂರಿನಲ್ಲಿ ಅಲೆಯದೇ, ಅಲ್ಲಿನ ಅನುಭವ ಪಡೆಯದೇ ಸಿನೆಮಾ ತಯಾರಿಸಲು ಸಾಧ್ಯವೇ ಇಲ್ಲ ಎಂಬ ಮಾತು ಈಗಲೂ ಚಾಲ್ತಿಯಲ್ಲಿದೆ. ಆದರೆ ನಮ್ಮ ಕುಂದಾಪುರದ ಯುವಕ ಅಂತಹ ಯೋಚನೆಯೊಂದನ್ನೂ ಮೀರಿ ತನ್ನದೇ ನಿರ್ದೇಶನದಲ್ಲಿ ಕರಾವಳಿಯ ಕಲಾವಿದರನ್ನು ತೊಡಗಿಸಿಕೊಂಡು ಹೈ ಬಜೆಟ್ ಸಿನೆಮಾವೊಂದನ್ನು ತಯಾರಿಸಿದ್ದಾರೆ. ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ್ದು, ಅಗಸ್ಟ್ ೧೦ ರಾಜ್ಯಾದ್ಯಂತ ಚಿತ್ರ ತೆರೆಕಾಣಲಿದೆ. ಸಿನೆಮಾ ರಂಗದಲ್ಲಿ ಅಂತಹದ್ದೊಂದು ಸಾಹಸಕ್ಕೆ ಮುಂದಾಗಿದ್ದು ಕುಂದಾಪುರ ತಾಲೂಕಿನ ಆಜ್ರಿಯ ಯುವಕ ಸಂದೇಶ್ ಶೆಟ್ಟಿ ಆಜ್ರಿ. ಪತ್ರಕರ್ತನಾಗಿ, ಹೋಟೆಲ್ ಉದ್ಯಮಿಯಾಗಿ ಕುಂದಾಪುರ, ಮುಂಬೈ ಮೊದಲಾದೆಡೆ ಕಾರ್ಯನಿರ್ವಹಿಸಿದ್ದ ಸಂದೇಶ್ ಶೆಟ್ಟಿ ಪ್ರಸ್ತುತ ಸುದ್ದಿ ಟಿವಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿದ್ದಾರೆ. ಸಿನೆಮಾ ಮಾಡಬೇಕು ಎಂಬ ಅವರ ಬಹುಕಾಲದ ಕನಸೊಂದನ್ನು ಕಥೆಯಾಗಿಸಿ, ಚಿತ್ರಕಥೆ ಬರೆದು,…

Read More