ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕುಂದಾಪುರ, ಬೈಂದೂರು ತಾಲೂಕು ಹವ್ಯಕ ಸಭಾ ರಿ. ಇದರ ಕಾರ್ಯಕಾರಿಣಿ ಸಭೆ ಮತ್ತು ನುಡಿನಮನ ಕಾರ್ಯಕ್ರಮ ಉಪ್ಪುಂದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಜರುಗಿತು. ಹವ್ಯಕ ಸಭಾ ಅಧ್ಯಕ್ಷರಾದ ನಾಗರಾಜ ಭಟ್ ಮಕ್ಕಿ ದೇವಸ್ಥಾನ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ 21ನೇ ಮಹಾಸಭೆಯನ್ನು ನಡೆಸುವ ಬಗ್ಗೆ ನಿರ್ಧರಿಸಲಾಯಿತು. ಇತ್ತೀಚಿಗೆ ನಿಧನರಾದ ಆನಗಳ್ಳಿ ವೇದಮೂರ್ತಿ ವೆಂಕಟರಮಣ ಭಟ್ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭ ಮೃತರ ಕುರಿತು ಸಂಸ್ಕೃತ ವಿದ್ವಾನ್ ಉಪ್ಪುಂದ ಶಂಕರನಾರಾಯಣ ಭಟ್ಟರು ಮಾತನಾಡಿ ಮೃತರಾದ ವೆಂಕಟರಮಣ ಭಟ್ಟರು ಪಾರಂಪರಿಕ ವೈದಿಕ ವೃತ್ತಿಯನ್ನು ಬಹಳ ಕಷ್ಟದಿಂದ ಮತ್ತು ಶ್ರದ್ಧೆಯಿಂದ ನಡೆಸಿಕೊಂಡು ಬಂದಿದ್ದರು. ಇವರು ಶ್ರಮಜೀವಿ ಮತ್ತು ಸರಳ ಜೀವ ಶೈಲಿಯನ್ನು ಅನುಸರಿಸಿದ್ದರು, ಅಪಾರ ಶಿಷ್ಯ ವರ್ಗ ಹೊಂದಿರುವ ಇವರ ಅಗಲುವಿಕೆ ಸಮಾಜಕ್ಕೆ ತುಂಲಾರದ ನಷ್ಟ ತಂದಿದೆ ಎಂದು ಹೇಳಿದರು. ವೇದಮೂರ್ತಿ ಕೃಷ್ಣಭಟ್ ಯರುಕೋಣೆ ಮೃತರ ಬಾವಚಿತ್ರಕ್ಕೆ ಪುಪ್ಪಾರ್ಚನೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಭೆಯಲ್ಲಿ ಸಮಿತಿ ಸದಸ್ಯರಾದ ಕೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ವಿವಿಧ ಕಾರಣಗಳಿಂದ ಕಳೆದ ಮೂರು ವರ್ಷಗಳಿಂದ ಮನೆಗಳನ್ನು ನೀಡಲು ಸಾಧ್ಯವಾಗಿರಲಿಲ್ಲ. ಕಳೆದ ವಿಧಾನಸಭಾ ಅಧಿವೇಶನದಲ್ಲಿ ಗ್ರಾಮೀಣ ಭಾಗದ ಜನರ ಸಮಸ್ಯೆ ಹಾಗೂ ವಸತಿ ರಹಿತರಿಗೆ ವಸತಿ ನೀಡುವಂತೆ ಇಲಾಖೆಯ ಸಚಿವರ ಗಮನ ಸೆಳೆದು ಒತ್ತಾಯಿಸಲಾಗಿತ್ತು. ಇದಕ್ಕೆ ಸ್ಪಂದಿಸಿರುವ ರಾಜ್ಯ ಸರಕಾರ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ವಸತಿ ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 9 ಸಾವಿರ ಮಂದಿ ಮನೆಗೆ ಅರ್ಜಿ ಸಲ್ಲಿಸಿದ್ದು ಆದ್ಯತೆ ಮೇರೆಗೆ ಅರ್ಹರಿಗೆ ವಸತಿ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಹೇಳಿದರು. 2021-22ನೇ ಸಾಲಿಗೆ ವಸತಿ ಯೋಜನೆಯಡಿ ಸರಕಾರದಿಂದ ನಿಗದಿಪಡಿಸಿದ ಗುರಿಗೆ ಫಲಾನುಭವಿಗಳ ಆಯ್ಕೆ ಕುರಿತು ಹೆಮ್ಮಾಡಿಯ ಜಯಶ್ರೀ ಸಭಾಭವನದಲ್ಲಿ ಜರಗಿದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಮುಂದಿನ ಒಂದು ವರ್ಷದೊಳಗೆ ಪ್ರತಿಯೊಂದು ಮನೆ ಮನೆಗೂ…
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ತಾಲ್ಲೂಕಿನ ಹೊಸಾಡು ಮತ್ತು ಬೈಂದೂರು ತಾಲ್ಲೂಕಿನ ಮರವಂತೆ ಗ್ರಾಮ ಪಂಚಾಯಿತಿಗಳು ರಾಜ್ಯ ಸರ್ಕಾರ ಪ್ರತಿವರ್ಷ ತಾಲ್ಲೂಕಿಗೊಂದರಂತೆ ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ 2020-21ರಲ್ಲೂ ಅರ್ಹತೆ ಪಡೆದು ದಾಖಲೆ ಬರೆದಿವೆ. ವರ್ಷದ ಸಮಗ್ರ ನಿರ್ವಹಣೆ ಮತ್ತು ನಾವೀನ್ಯತಾ ಕಾರ್ಯಕ್ರಮಗಳನ್ನು ಪರಿಗಣಿಸಿ ನೀಡುವ ಈ ಪ್ರಶಸ್ತಿ ರೂ 5 ಲಕ್ಷ ಮೊತ್ತದ ಬಹುಮಾನ ಒಳಗೊಂಡಿದೆ. ಈ ಹಿಂದೆ ಮರವಂತೆ 2013-14, 2019-20ರಲ್ಲಿ, ಹೊಸಾಡು 2016-17, 2017-18ರಲ್ಲಿ ಈ ಪ್ರಶಸ್ತಿ ಗಳಿಸಿದ್ದುವು. ನಿರ್ಮಲ ಗ್ರಾಮ ರಾಷ್ಟ್ರೀಯ ಪುರಸ್ಕಾರ, ಪಂಚಾಯತ್ ರಾಜ್ ಸಶಕ್ತೀಕರಣ ರಾಷ್ಟೀಯ ಪುರಸ್ಕಾರ, ರಜತ ನೈರ್ಮಲ್ಯ ಪುರಸ್ಕಾರ ಪಡೆದ ಹಿರಿಮೆ ಮರವಂತೆಯದಾದರೆ (ಬಹುಮಾನದ ಒಟ್ಟು ಮೊತ್ತ ರೂ 20 ಲಕ್ಷ), ಹೊಸಾಡು ‘ನಮ್ಮ ಗ್ರಾಮ ನಮ್ಮ ಯೋಜನೆ’ಯ ರಾಷ್ಟೀಯ ಪುರಸ್ಕಾರದ ಜತೆಗೆ ರೂ 10 ಲಕ್ಷ ಬಹುಮಾನ ಗಳಿಸಿತ್ತು. ಈ ಪಂಚಾಯಿತಿಗಳು ತಮ್ಮ ನಿಗದಿತ ಪ್ರಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಜತೆಗೆ ಮುಂದಿನ ವಿಶೇಷ ಸಾಧನೆ ಮಾಡಿರುವುದು ಅವುಗಳಿಗೆ ಪ್ರಶಸ್ತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಹೊಸಾಡಿನ ಡಾನ್ ಬಾಸ್ಕೊ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಶಾಲೆಯ ಮನೋವಿಜ್ಞಾನ ವಿಭಾಗದ ‘ಕ್ಲಬ್ ಆಫ್ ಲೈಫ್’ ಆಶ್ರಯದಲ್ಲಿ ಆತ್ಮಹತ್ಯೆ ತಡೆ ಅರಿವು ಸಪ್ತಾಹ ಆಚರಿಸಲಾಯಿತು. ಆರೊಗ್ಯ ಕ್ಷಮತೆ ಶಿಕ್ಷಕಿ ರಕ್ಷಿತಾ ಮಾತನಾಡಿ, ಸೆ.10ರಂದು ಆತ್ಮಹತ್ಯೆ ಕುರಿತು ಅರಿವು ಮೂಡಿಸಲು ವಿಶ್ವ ಆತ್ಮಹತ್ಯೆ ತಡೆ ದಿನ ಆಚರಿಸಲಾಗುತ್ತದೆ. ಸೆಂಪ್ಟಂಬರ್ನ್ನು ಆತ್ಮಹತ್ಯೆ ತಡೆ ಅರಿವು ಮಾಸ ಎಂದು ಪರಿಗಣಿಸಲಾಗುತ್ತಿದೆ. ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗದ 2015ರ ವರದಿಯಲ್ಲಿ ಭಾರತದಲ್ಲಿ ಪ್ರತಿ ಒಂದು ಗಂಟೆಗೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದು ಹೇಳಿದೆ. ಆದುದರಿಂದ ಆತ್ಮಹತ್ಯೆ ತಡೆ ಅರಿವು ಮೂಡಿಸುವ ಕೆಲಸ ಶಾಲೆಗಳಲ್ಲಿ ಆಗಬೇಕಾಗಿದೆ ಎಂದರು. ಅವರ ಮಾರ್ಗದರ್ಶನದಲ್ಲಿ 11ನೆ ತರಗತಿಯ ಮನೋವಿಜ್ಞಾನ ವಿದ್ಯಾರ್ಥಿಗಳು 6ರಿಂದ 11ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಿದರು. ಕಾರ್ಯಕ್ರಮ ಸಂಯೋಜನಾ ತಂಡ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಧನಾತ್ಮಕ ಮನೋಧರ್ಮ ಉತ್ತೇಜಿಸುವಂತಹ ಚಿತ್ರ ರಚನಾ ಸ್ಪರ್ಧೆ, 10 ಮತ್ತು 11ನೇ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆಗಳು ಜನ ಸಾಮಾನ್ಯರ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ತಿಳಿಸಿದರು. ಅವರು ನಗರದ ತಮ್ಮ ಕಛೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ 66 ಮತ್ತು 169ಎ ಗೆ ಸಂಬಂಧಿಸಿದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ವಾಹನಗಳ ಹಾಗೂ ಜನಸಾಮಾನ್ಯರು ಸುರಕ್ಷಿತ ಹಾಗೂ ಸುಗಮವಾಗಿ ಸಂಚಾರಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ರಸ್ತೆ ಕಾಮಗಾರಿಗಳನ್ನು ಕೈಗೊಂಡಾಗ ಮಾತ್ರ ಅಪಘಾತ ಮುಕ್ತವಾಗುದರ ಜೊತೆಗೆ ಜನರು ಯಾವುದೇ ತೊಂದರೆ ಇಲ್ಲದೆ ಸಂಚರಿಸಬಹುದು ಇದಕ್ಕೆ ಒತ್ತು ನೀಡಬೇಕು ಎಂದರು. ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರದ ಸಂಗಂ ಹತ್ತಿರ ಮಳೆಯ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ, ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆಯನ್ನು ಸ್ಥಳೀಯ ಹಾಗೂ ರಾಷ್ಟ್ರೀಯ ಹೆದ್ದಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಯುಜಿಡಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದರೆ ನನ್ನ ತನಿಖೆಗೆ ಬೆಂಬಲವಿದೆ. ತನಿಖೆ ಯಾರಿಂದ ಆಗಬೇಕು ಅನ್ನೊದನ್ನ ಸಭೆ ನಿರ್ಧರಿಸಲಿ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು. ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಅವರು ಯುಜಿಡಿ ಕಾಮಗಾರಿ ನಿಮಿತ್ತ ಭೂಮಿ ವಿಕ್ರಯದಲ್ಲಿ ಅವ್ಯವಹಾರ ಆಗಿದೆ ಎಂದು ಸದಸ್ಯ ಗಿರೀಶ್ ದೇವಾಡಿಗ ಮಾಡಿದ ಆರೋಪದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರಿಗೆ ನೀವು ಏನೇ ಹೇಳುವುದಿದ್ದರೂ ಬರವಣಿಗೆ ಮೂಲಕ ಕೊಡಿ ಎಂದು ಸೂಚಿಸಿದರು. ಭೂಮಿ ವಿಕ್ರಯ ಬಗ್ಗೆ ಹಿಂದಿನ ಸಭೆಯಲ್ಲಿ ತನಿಖೆಗೆ ಸರ್ವಾನುಮತದ ನಿರ್ಣಯ ಮಾಡಲಾಗಿದೆ ಎಂದು ಬರೆಯಲಾಗಿದ್ದು, ಅದಕ್ಕೆ ವಿರೋಧವಿದೆ ಎಂದು ಹೇಳಿದರು ಸರ್ವಾನುಮತ ನಿರ್ಣಯ ಸರಿಯಲ್ಲ. ವಿರೋಧದ ಬಗ್ಗೆ ಪತ್ರ ಕೊಟ್ಟಿದ್ದು, ಸರ್ವಾನು ಮತ ಬದಲು ಬಹುಮತ ನಿರ್ಣಯ ಎಂದು ತಿದ್ದುಪಡಿ ಮಾಡುವಂತೆ ಸದಸ್ಯ ಚಂದ್ರಶೇಖರ ಖಾರ್ವಿ ಒತ್ತಾಯಿಸಿದ್ದು, ಇದಕ್ಕೆ ಕೋಡಿ ಸದಸ್ಯ ಅಶ್ಪಕ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಡುಪಿ ಜಿ.ಪಂ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಡುಪಿ ಜಿಲ್ಲೆ, ಪಶು ಆಸ್ಪತ್ರೆ ಬಂದೂರು ಹಾಗೂ ಪಟ್ಟಣ ಪಂಚಾಯತ್ ಬಂದೂರು, ಆಜಾದಿ ಕಾ ಅಮೃತ ಮಹೋತ್ಸವ ಇದರ ವತಿಯಿಂದ ವಿಶ್ವ ರೇಬಿಸ್ ದಿನಾಚರಣೆಯ ಅಂಗವಾಗಿ ಉಚಿತ ಹುಚ್ಚುನಾಯಿ ರೋಗ (ರೇಬಿಸ್)ನಿರೋಧಕ ಲಸಿಕಾ ಶಿಬಿರ ಉದ್ಘಾಟನೆ ಕಾರ್ಯಕ್ರಮ ಪಶು ಆಸ್ಪತ್ರೆ ಬಂದೂರು ಆವರಣದಲ್ಲಿ ನಡೆಯಿತು. ಬೈಂದೂರು ತಹಶೀಲ್ದಾರ ಶೋಭಾಲಕ್ಷ್ಮಿ ಎಚ್. ಎಸ್. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೆಲವು ರೋಗ ತಡೆಗಟ್ಟುವುದು ಅತ್ಯಗತ್ಯ. ರೇಬಿಸ್ ಹಾಗೂ ಕೊರೋನಾದಂತಹ ರೋಗಗಳ ವಿರುದ್ದ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಇಂತಹ ಅಭಿಯಾನಗಳು ಇಲಾಖೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದು ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ. ಪಶುಸಂಗೋಪನಾ ಇಲಾಖೆ ತಾಲೂಕಿನ ವಿವಿಧ ಕಡೆಗಳಲ್ಲಿ ಉಚಿತ ಹುಚ್ಚುನಾಯಿ ರೋಗ ನಿರೋಧಕ ಶಿಬಿರಗಳನ್ನು ನಡೆಸುತ್ತಿದೆ ಎಂದರು. ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ್ ಅಧಿಕಾರಿ ನವೀನ್ ಕುಮಾರ್, ಹಿರಿಯ ಪಶು ವೈದ್ಯ ಪರೀಕ್ಷಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಾಮಾಕ್ಷಿ ಸೌಹಾರ್ದ ಕ್ರೆಡಿಟ್ ಸಹಕಾರಿ ನಿ. ಬೈಂದೂರು ಇದರ 2020-21ನೇ ಸಾಲಿನ ವಾರ್ಷಿಕ ಮಹಾಸಭೆ ಸಹಕಾರಿಯ ಕಛೇರಿ ಆವರಣದಲ್ಲಿ ನಡೆಯಿತು. ಸಹಕಾರಿ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ವಹಿಸಿ ಮಾತನಾಡಿ ಸಂಸ್ಥೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೋವಿಡ್ ಸಮಸ್ಯೆಯ ನಡುವೆಯೂ ಉತ್ತಮ ಸಾಧನೆ ಮಾಡಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಯುತ್ತಿರುವುದು ಸದಸ್ಯರ ಪ್ರೋತ್ಸಾಹದಿಂದ ಸಾಧ್ಯವಾಗಿದೆ. ಈ ವರ್ಷದಲ್ಲಿ ಸದಸ್ಯರಿಗೆ ಶೇ. 8% ಡಿವಿಡೆಂಡ್ ಘೋಷಿಸಲಾಗಿದೆ ಎಂದರು. ಉಪಾಧ್ಯಕ್ಷ ಗೋಪಾಲಕೃಷ್ಣ ಕೆ, ನಿರ್ದೇಶಕರಾದ ಭೀಮೇಶ ಕುಮಾರ್ ಎಸ್. ಜಿ, ಪ್ರಸಾದ ಪ್ರಭು, ಅರುಣ ಕುಮಾರ, ಯು. ಪ್ರಕಾಶ ಭಟ್ ಉಪ್ಪುಂದ, ರಾಜೇಶ ಪೈ, ಬಾಲಕೃಷ್ಣ ಪ್ರಭು, ಗೌರಿ ಮಂಗೇಶ್, ಮೋಹಿನಿ ಜಿ. ಶೆಟ್ಟಿ, ಗಣೇಶ ಗಾಣಿಗ ಹಾಜರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ ಎಂ. ಸ್ವಾಗತಿಸಿ ವಾರ್ಷಿಕ ವರದಿ ವಾಚಿಸಿದರು.
ಬೈಂದೂರು: ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಇಂದು ನಿನ್ನೆಯದಲ್ಲ! ಚತುಷ್ಪಥ ರಸ್ತೆ ನಿರ್ಮಾಣವಾಗುವುದಕ್ಕೂ ಮುಂಚೆಯೇ ಇಲ್ಲಿನ ತಿರುವು ಅಪಘಾತದ ಹೆದ್ದಾರಿಯಾಗಿ ಮಾರ್ಪಟ್ಟಿತ್ತು. ಪ್ರಪಾತ ಹಾಗೂ ಗುಡ್ಡದ ನಡುವಿನ ತಿರುವಿನ ಭೂ ಪ್ರದೇಶದಲ್ಲಿ ರಸ್ತೆ ಹಾದು ಹೋಗಿದ್ದು, ಆಗಾಗ ಭೀಕರ ಅಪಘಾತಗಳು ಸಂಭವಿಸಿ ರಾಷ್ಟ್ರೀಯ ಹೆದ್ದಾರಿ ಸಾವಿನ ಹೆದ್ದಾರಿಯಾಗಿ ಮಾರ್ಪಟ್ಟಿದೆ ಇಲ್ಲಿ ಟ್ಯಾಂಕರ್ ಅಪಘಾತದಲ್ಲಿ ಹೊತ್ತಿ ಉರಿದು ಚಾಲಕ ಸಜೀವ ದಹನವಾದ ಘಟನೆ, ಶಾಲಾ ವಾಹನ ಪಲ್ಟಿಯಾಗಿ ಇನ್ನೇನು ಪ್ರಪಾತಕ್ಕೆ ಬೀಳುವಲ್ಲಿ ತಪ್ಪಿದ ಅನಾಹುತ ಇಂತಹ ಹಲವಾರು ಗಂಭೀರ ಘಟನೆಗಳು ನಡೆಯುತ್ತಲೇ ಇದೆ. ಚತುಷ್ಪಥ ಹೆದ್ದಾರಿಯಾದ ನಂತರವು ತಪ್ಪದ ಗೋಳು:ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆಗೆ ಚಾಲನೆ ಸಿಕ್ಕ ನಂತರ ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ ತಿರುವಿನ ದಿಕ್ಕನ್ನೆ ಬದಲಾಯಿಸಿ ಒತ್ತಿನೆಣೆ ರಾಘವೇಂದ್ರ ಮಠದ ಎದುರಿನಿಂದ ಗುಡ್ಡದ ಮೇಲೆ ಹಾದು ಹೋಗುತ್ತಿದ್ದ ರಾಷ್ಟ್ರೀಯ ಹೆದ್ದಾರಿಯನ್ನು ಗುಡ್ಡವನ್ನು ಮದ್ಯ ಭಾಗದಲ್ಲಿ ಕೊರೆದು ಸಮತಟ್ಟಾದ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವಂತೆ ಮಾಡಲಾಯಿತು. ಈ ಕಾಮಗಾರಿ ಅವೈಜ್ಞಾನಿಕ ಎಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿಜಯ ಸೇವಾ ಟ್ರಸ್ಟ್ – ಯಕ್ಷಶ್ರೀ ಸಾಗರ ಸಂಯೋಜನೆಯಲ್ಲಿ ಯಕ್ಷಗಾನದ ವಿನೂತನ ಹೊಸ ಪ್ರಯೋಗ ಅನಿಲಾನಲ ಸಂಯೋಗ ಅ.1ರಂದು ನಾದಾಂಜಲಿ -ಫೇಸ್ಬುಕ್ ಪೇಜ್ನಲ್ಲಿ, ಅ.3ರಂದು ಧಾರೇಶ್ವರ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರವಾಗಲಿದೆ. ಹೊಸ ಪರಿಕಲ್ಪನೆಯಲ್ಲಿ ಹೊಸ ಪ್ರಸಂಗವನ್ನು ವಿನ್ಯಾಸಗೊಳಿಸಲಾಗಿದ್ದು ಭೀಮ – ದ್ರೌಪದಿಯರ ಕಥಾನಕವು ಮಹಾಭಾರತ ಯಾನದ ಕಲ್ಪನೆಯಲ್ಲಿ ಸುದೀರ್ಘ ಆಖ್ಯಾನವಾಗಿ 3 ಭಾಗದಲ್ಲಿ ಪ್ರಸಾರವಾಗಲಿದೆ. ಅ.1 ಶುಕ್ರವಾರ ಸಂಜೆ 6.30 ರಿಂದ ಭಾಗ 1 ನಾದಾಂಜಲಿ ಫೇಸ್ ಬುಕ್ ಪೇಜ್ನಲ್ಲಿ ಪ್ರಸಾರವಾಗಿ, ಅ.3ರಂದು ಸಂಜೆ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರವಾಗಲಿದೆ. ಇದರ ಪರಿಕಲ್ಪನೆ, ಸಂಯೋಜನೆ ಸಂಘಟಕ ಡಾ. ಎಚ್. ಎಸ್. ಮೋಹನ್, ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರದ್ದಾಗಿದ್ದು ಪ್ರಸಂಗ ಜೋಡಣೆ, ನಿರ್ವಹಣೆ ಮತ್ತು ನಿರ್ದೇಶನದಲ್ಲಿ ಸುಬ್ರಹ್ಮಣ್ಯ ಧಾರೇಶ್ವರ ಅವರ ಪಾತ್ರ ಪ್ರಧಾನವಾಗಿದೆ. ಸಂಯೋಜನೆ ವೇಳೆ ಕುಮಾರವ್ಯಾಸ, ಹೊಸ್ತೋಟ ಮಂಜುನಾಥ ಭಾಗವತರು, ವಿಷ್ಣು ಭಾಗವತರು ಬ್ರಹ್ಮಾವರ, ದೇವಿದಾಸ, ತಿಮ್ಮಣ್ಣ ಕವಿ ಅವರ ಪ್ರಸಂಗದ…
