Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಇಲ್ಲಿಯ ರೋಟರಿ ಸಭಾಂಗಣದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ತರಗತಿಗಳ ಆರಂಭೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿ.ಎಸ್.ವಿ.ಎಸ್ ಅಸೋಷಿಯೇಶನ್ ಅಧ್ಯಕ್ಷ ಡಾ. ಕಾಶೀನಾಥ ಪೈ ವಿದ್ಯಾರ್ಥಿ ಜೀವನ ಎನ್ನುವುದು ಮನುಷ್ಯನ ವ್ಯಕ್ತಿತ್ವ ರೂಪಿಸುವಲ್ಲಿ ಬಹಳ ಪ್ರಾಮುಖ್ಯತೆಯನ್ನು ವಹಿಸುತ್ತದೆ. ಶಿಸ್ತು ಸಂಯಮ ಗೌರವ ಛಲ ಇತ್ಯಾದಿಗಳ ಮೂಲಕ ನಾವು ಗುರಿಯನ್ನು ತಲುಪಲು ನಿರಂತರ ಪರಿಶ್ರಮ ಪಟ್ಟರೆ ಗೆಲುವು ನಮ್ಮದಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸರಸ್ವತಿ ವಿದ್ಯಾಲಯ ಕಾಲೇಜಿನ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್ ಕಾರ‍್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಉಪನ್ಯಾಸಕ ಭಾಸ್ಕರ್ ಶೆಟ್ಟಿ ವಿದ್ಯಾಲಯ ಬಳಗವನ್ನು ಪರಿಚಯಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ ಶಿಸ್ತು ಪಾಲನೆ ನೀತಿ ನಿಯಮಗಳ ಬಗೆಗೆ ಮಾಹಿತಿ ನೀಡಿದರು.ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ದೊರೆಯುವ ವಿವಿಧ ಸೌಲಭ್ಯಗಳ ಬಗೆಗೆ ಉಪನ್ಯಾಸಕರಾದ ಸುಜಯೀಂದ್ರ ಹಂದೆ. ಪ್ರವೀಣ್ ಕಾಮತ್, ನರೇಂದ್ರ ಎಸ್ ಗಂಗೊಳ್ಳಿ ಮತ್ತು ಕಛೇರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಕ್ಷೇತ್ರದ ಅಭಿವೃದ್ಧಿ ಕುರಿತು ಹಲವು ಚಿಂತನೆಗಳಿವೆ. ಜನರ ಸೇವಕನಾಗಿ ಕ್ಷೇತ್ರದ ಅಭಿವೃದ್ದಿಗೆ ಹಗಲಿರುಳು ಶ್ರಮಿಸುತ್ತೇನೆ ಮತ್ತು ಯಾವುದೇ ಸಮಸ್ಯೆಗಳಿದ್ದರೂ ಕೂಡ ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ನನ್ನನು ಸಂಪರ್ಕಿಸಬಹುದಾಗಿದೆ ಮತ್ತು ಕ್ಷೇತ್ರದ ಜನರ ಸೇವೆಗೆ ಸದಾ ಬದ್ದನಾಗಿದ್ದೇನೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಹೇಳಿದರು. ಬೈಂದೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕರ ಕಛೇರಿಯನ್ನು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕ್ಷೇತ್ರ ರಸ್ತೆ, ಆಸ್ಪತ್ರೆ, ಕುಡಿಯುವ ನೀರಿನ ಸಮರ್ಪಕ ಪೂರೈಕೆ ಬಗ್ಗೆ ಯೋಜನೆ ರೂಪಿಸುತ್ತೇನೆ. ಮಳೆಗಾಲದಲ್ಲಿ ಐ.ಆರ್.ಬಿ ಕಾಮಗಾರಿಯಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಇದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಜಿ.ಪಂ ಸದಸ್ಯರಾದ ಬಾಬು ಶೆಟ್ಟಿ, ಶಂಕರ ಪೂಜಾರಿ, ಸುರೇಶ್ ಬಟ್ವಾಡಿ,…

Read More

ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಕುಂದಾಪುರದ ಹೆಮ್ಮೆಯ ಸಂಸ್ಥೆಯಾದ ಸಾಧನ ಕಲಾ ಸಂಗಮ ರಿ, 2009 ಪ್ರಾರಂಭವಾಗಿ, ಈ ವರ್ಷ ತನ್ನ ದಶಮಾನ ವರ್ಷ ಆಚರಣೆಯ ಸಂಭ್ರಮದಲ್ಲಿದೆ. ಕರಾವಳಿಯಲ್ಲೆ ವಿಶಿಷ್ಟ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಸಂಸ್ಥೆ ಒಂದೇ ಸೂರಿನಡಿ ಭಾರತೀಯ ಲಲಿತ ಕಲೆಗಳ ವಿವಿಧ ಪ್ರಕಾರವನ್ನು ಆಸಕ್ತ ಸಾಧಕರಿಗೆ ಉಣಬಡಿಸುತ್ತಿದೆ. ಈ ದಶಮಾನ ವರ್ಷಾಚರಣೆಯನ್ನು ಅರ್ಥ ಪೂರ್ಣವಾಗಿಸಲು, ಈ ವರ್ಷ ಪೂರ್ತಿ ನಿರಂತರ ಲಲಿತಕಲೆಗಳಿಗೆ ಸಂಭಂದಪಟ್ಟ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ. ನಮ್ಮ ಹೆಮ್ಮೆಯ ಕಾರ್ಯಕ್ರಮಗಳಾದ ಗಜವರ್ಣ, ಸಂಕಲನ ಹಾಗೂ ತ್ರಿಮಧುರದ ಜೊತೆಯಲ್ಲಿ ನಿಮ್ಮ ವೇದಿಕೆ – ನಮ್ಮ ಪ್ರತಿಭೆಗಳು, ನಿಮ್ಮಂಗಳದಲ್ಲಿ ಚಿತ್ರಕಲೆ, ನವಸಾಹಿತ್ಯ ವೇದಿಕೆ ಕಥಾ ಕಮ್ಮಟ, ಉಡುಪಿ ಜಿಲ್ಲಾ ಮಟ್ಟದ ಭಾವಗಾನ ಸ್ಪರ್ಧೆ, ಹೀಗೆ ಹಲವಾರು ಸರಣಿ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ. ಹಲವಾರು ಕಲಾವಿದರ ಕೊಡುಗೆಯಿಂದ ಈ ಸಂಸ್ಥೆಯು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಮುಖ್ಯವಾಗಿ ಹಿಂದುಸ್ಥಾನಿ ಸಂಗೀತದಲ್ಲಿ ವಿದ್ವಾನ್ ಗಜಾನನ ಹೆಬ್ಬಾರ್, ಹಿನ್ನೆಲೆ ಗಾಯನದಲ್ಲಿ ಶ್ರೀಮತಿ ಕೆ. ಎಸ್. ಸುರೇಖಾ, ಬೆಂಗಳೂರೂ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಹಟ್ಟಿಕುದ್ರುವಿನಲ್ಲಿ ಶ್ರೀ ಪಂಜುರ್ಲಿ ಚಿಕ್ಕಮ್ಮ ಹೈಗುಳಿ ಸಪರಿವಾರ ದೈವಸ್ಥಾನದ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವದಲ್ಲಿ ಆಶೀರ್ವಚನ ನೀಡಿದ ಶ್ರೀ ಮಠ ಬಾಳೆಕುದ್ರು ಹಂಗಾರಕಟ್ಟೆ ಪರಮಪೂಜ್ಯ ಸ್ವಾಮೀಜಿಯವರಾದ ನೃಸಿಂಹಾಶ್ರಮ ಸ್ವಾಮಿಜಿಯವರು ಶ್ರದ್ಧಾ ಕೇಂದ್ರಗಳಾದ ಮಠ ಮಂದಿರ ದೇವಸ್ಥಾನಗಳ ಮೂಲಕ ಆದ್ಯಾತ್ಮಿಕ ಚಿಂತನೆಗಳನ್ನು ಹೆಚ್ಚಿಸಿಕೊಂಡಲ್ಲಿ ಜೀವನದಲ್ಲಿ ಉನ್ನತಿ ಹೊಂದಲು ಸಾಧ್ಯ. ಭಾರತದಲ್ಲಿ ಹಲವಾರು ದೇವರುಗಳು ಅವತಾರ ಎತ್ತಿದ್ದು ವಿದೇಶಿಯರು ಕೂಡ ಸಾಧನೆಗೋಸ್ಕರ ನಮ್ಮಲ್ಲಿ ಬರುತ್ತಿರುವುದು ಭಾರತದ ವೈಶಿಷ್ಠ್ಯ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಬಸ್ರೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಬಿ.ಅಪ್ಪಣ್ಣ ಹೆಗ್ಡೆ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್‌ನ ದಕ್ಷಿಣ ಪ್ರಾಂತ ಮಠ ಮಂದಿರಗಳ ಸಂಪರ್ಕ ಪ್ರಮುಖರಾದ ಕೆ.ಪ್ರೇಮಾನಂದ ಶೆಟ್ಟಿ ಧಾರ್ಮಿಕ ಪ್ರವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಹಟ್ಟಿಯಂಗಡಿ ಸಿದ್ದಿವಿನಾಯಕ ದೇವಸ್ಥಾನದ ಬಾಲಚಂದ್ರ ಭಟ್, ಬಾರ್ಕೂರು ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ನರಸಿಂಹ ದೇವಾಡಿಗ ,ಬಸ್ರೂರು ವ್ಯವಸಾಯ ಸೇವಾ ಸಂಘದ ಅಧ್ಯಕ್ಷರಾದ ಗೋಪಾಲ ಪೂಜಾರಿ, ಶ್ರೀ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಮುದ್ರತೀರ ನಿಯಂತ್ರಣ ವಲಯಗಳಿಗೆ ಸಂಬಂಧಿಸಿದ 2011ರ ಅಧಿಸೂಚನೆಯನ್ನು ತಿದ್ದುಪಡಿ ಮಾಡಲು ಉದ್ದೇಶಿಸಿ ಕೇಂದ್ರ ಸರ್ಕಾರ ಸಿದ್ಧಪಡಿಸಿದ ಕರಡಿನಲ್ಲಿ 3ನೆ ವಲಯದಲ್ಲಿ ಅಭಿವೃದ್ಧಿ ನಿಷೇಧಿತ ಪ್ರದೇಶವನ್ನು ಈಗಿನ 200 ಮೀಟರಿನಿಂದ 50 ಮೀಟರಿಗೆ ಇಳಿಸಲಾಗಿದೆ. ಆದರೆ ಅಲ್ಲಿನ ಜನಸಾಂದ್ರತೆ ಚದರ ಕಿಲೋಮೀಟರಿಗೆ 2161ಕ್ಕಿಂತ ಅಧಿಕ ಇದ್ದರಷ್ಟೆ ಈ ರಿಯಾಯಿತಿ ಅನ್ವಯವಾಗುತ್ತದೆ ಎಂಬ ಶರ್ತ ವಿಧಿಸಲಾಗಿದೆ. ಇದರಿಂದ ಜಿಲ್ಲೆಯ ಯಾವುದೇ ಗ್ರಾಮೀಣ ಪ್ರದೇಶಕ್ಕೆ ಲಾಭವಾಗುವುದಿಲ್ಲ ಮಾತ್ರವಲ್ಲ ಕಡಲತೀರ ಪ್ರವಾಸೋದ್ಯಮಕ್ಕೂ ಇದು ಅನುಕೂಲವೆನಿಸದು ಎನ್ನುತ್ತಾರೆ ಬೈಂದೂರಿನ ಬೆಸುಗೆ ಫೌಂಡೇಶನ್ ಅಧ್ಯಕ್ಷ ಕೆ. ವೆಂಕಟೇಶ ಕಿಣಿ. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯವು ಕಡಲತೀರಗಳನ್ನು ಹೊಂದಿರುವ ದೇಶದ ರಾಜ್ಯಗಳ ಮತ್ತು ಕೇಂದ್ರಾಧೀನ ಪ್ರದೇಶಗಳ ಮನವಿ ಹಾಗೂ ಡಾ. ಶೈಲೇಶ್ ನಾಯಕ್ ಸಮಿತಿಯ ವರದಿ ಅನುಸರಿಸಿ ಏಪ್ರಿಲ್ 18ರಂದು ಕರಡು ತಿದ್ದುಪಡಿ ಪ್ರಕಟಿಸಿದೆ. ಇದಕ್ಕೆ ಈ ತಿಂಗಳ 18ರ ಮುನ್ನ ಆಕ್ಷೇಪಣೆ, ಸಲಹೆ ಸಲ್ಲಿಸಬಹುದಾಗಿದೆ. ಕರಡು ಅಧಿಸೂಚನೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ತೀರಪ್ರದೇಶದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಡಾ.ಬಿ.ಆರ್.ಅಂಬೇಡ್ಕರ್‌ಯುವಕ ಮಂಡಲ ಮೇಲ್‌ಗಂಗೊಳ್ಳಿ ಇದರ 21ನೇ ವಾರ್ಷಿಕೋತ್ಸವ , ಅಮೃತಾ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಲ ಮೇಲ್‌ಗಂಗೊಳ್ಳಿ ಇವರ 25ನೇ ವಾರ್ಷಿಕೋತ್ಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್‌ರವರ 127ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಗಂಗೊಳ್ಳಿಯ ಮೇಲ್‌ಗಂಗೊಳ್ಳಿ ಸರಕಾರಿ ಕಿರಿಯ ಪ್ರಾಥಮಿಕ (ಹವೇ) ಶಾಲಾ ವಠಾರದಲ್ಲಿ ಜರಗಿತು. ತ್ರಾಸಿ ಯುವಕ ಮಂಡಲದ ಅಧ್ಯಕ್ಷ ಮಿಥುನ್ ಎಂ.ಡಿ.ಬಿಜೂರು ಧ್ವಜಾರೋಹಣ ನೆರವೇರಿಸಿದರು. ಗಂಗೊಳ್ಳಿ ಪತ್ರಕರ್ತ ಗಣೇಶ ಪಿ. ಛದ್ಮವೇಷ ಸ್ಪರ್ಧೆಯನ್ನು ಉದ್ಘಾಟಿಸಿದರು. ಸಂಜೆ ಜರಗಿದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಗಂಗೊಳ್ಳಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಸೀತಾರಾಮ ಶೆಟ್ಟಿ ವಹಿಸಿದ್ದರು. ಕುಂದಾಪುರದ ವಕೀಲೆ ಅಂಜಲಿ ಹುಂಡೇಕರ್, ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸಂಸ್ಥೆಯ ಸಿಇಒ ಶಿವಾನಂದ ಪೂಜಾರಿ ಶುಭ ಹಾರೈಸಿದರು. ರಾಜೇಶ ತ್ರಾಸಿ ಬಹುಮಾನ ವಿತರಿಸಿದರು. ಇದೇ ಸಂದರ್ಭ ವ್ಯಂಗ್ಯ ಚಿತ್ರಕಾರ ಜಿ.ಭಾಸ್ಕರ ಕಲೈಕಾರ್, ಸಾಹಿತ್ಯ ರತ್ನ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ರತ್ನಾ, ಉರಗ ಸಾಧಕ ಗುರುರಾಜ್ ಗಂಗೊಳ್ಳಿ ಇವರನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಯಕ್ಷಗಾನ ಎನ್ನುವುದೇ ಒಂದು ಹಬ್ಬ. ಅಲ್ಲಿ ಆಟ ನೋಡುವುದು ಒಂದು ವಿಶಿಷ್ಟ ರಸಾನುಭವ. ಕೆಲಸದ ಜಂಜಾಟದ ನಡುವೆ ದಣಿದ ಮನವನು ತಣಿಸುವ ಯಕ್ಷಗಾನ ನೋಡುವುದೇ ಸೊಬಗು. ಊರಿನಿಂದ ದೂರವಿರುವ ಕಲಾಭಿಮಾನಿಗಳಿಗೆ ಯಕ್ಷ ಕಲೆಯ ಸವಿಯನ್ನು ಉಣಬಡಿಸುವ ಪ್ರಯತ್ನಗಳು ಬೆಂಗಳೂರಿನಂತಹ ಮಹಾನಗರಿಗಳಲ್ಲಿ ಯಕ್ಷಸಂಘಟಕರು ಹಾಗೂ ಕಲಾವಿದರಿಂದ ಯಶಸ್ವಿಯಾಗಿ ನಡೆಯುತ್ತಿದೆ. ಯಕ್ಷಾಭಿಮಾನಿಗಳ ಕಾತರ ತಣಿಸಲು ಜೂನ್ ತಿಂಗಳಿನಿಂದಲೇ ಬೆಂಗಳೂರಿನ ಪ್ರಪ್ರಥಮ ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧತೆಗಳು ನಡೆದಿವೆ. ಜೂನ್ 1 ರ ಶುಕ್ರವಾರ ರಾತ್ರಿ 10 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಘು ಶೆಟ್ಟಿ ನೈಕಂಬ್ಳಿ ಮತ್ತು ಪ್ರದೀಪ ಆಜ್ರಿ ಸಂಯೋಜನೆಯಲ್ಲಿ ಯಕ್ಷ ಸಿಂಧೂರ.- ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ “ಅಗ್ನಿ ವರ್ಷ” ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ರಾಮಕೃಷ್ಣ ಹೆಗಡೆ ಹಿಲ್ಲೂರು , ಪ್ರಸನ್ ಭಟ್ ಭಾಳ್ಕಲ್ , ರಾಘು ನಿಟ್ಟೂರು, ಗಣೇಶ್ ಗಾಂವ್ಕರ್ , ರಾಮ ಭಂಡಾರಿ , ಎನ್ ಜಿ ಹೆಗಡೆ , ಬೊಳ್ಗೇರೆ , ಕೃಷ್ಣ ಯಾಜಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಪುರಸಭೆ ವತಿಯಿಂದ ಹಮ್ಮಿಕೊಂಡ ಸ್ವಚ್ಚತಾ ಸಪ್ತಾಹ ಕಾರ್ಯಕ್ರಮಕ್ಕೆ ಕುಂದಾಪುರ ಪುರಸಭೆ ಅಧ್ಯಕ್ಷರಾದ ವಸಂತಿ ಮೋಹನ ಸಾರಂಗ ಸಿದ್ದಿನಾಯಕನ ರಸ್ತೆ ಬೀರಿಕೇರಿಯಲ್ಲಿ ಚಾಲನೆ ನೀಡಿದರು. ಈ ಸಂದರ್ಭ ಉಪಾಧ್ಯಕ್ಷರಾದ ರಾಜೇಶ ಕಾವೇರಿ , ಮುಖ್ಯಾಧಿಕಾರಿ ವಾಣಿ ಶೆಟ್ಟಿ , ಪುರಸಭೆ ಸದಸ್ಯರಾದ ಶಕುಂತಲಾ ಶೇರೆಗಾರ, ಪುರಸಭಾ ಪರಿಸರ ಇಂಜಿನಿಯರ್ ಮಂಜುನಾಥ ಶೆಟ್ಟಿ , ಆರೋಗ್ಯ ಅಧಿಕಾರಿ ಶರತ ಖಾರ್ವಿ ಮತ್ತು ಪುರಸಭಾ ಸಿಬ್ಬಂದಿಗಳು ಭಾಗವಹಿಸಿದರು. ಒಂದು ತಿಂಗಳ ಕಾಲ ಸ್ವಚ್ಚತಾ ಕಾರ್ಯಕ್ರಮ ಕುಂದಾಪುರದ ಎಲ್ಲಾ ವಾರ್ಡಗಳಲ್ಲಿ ನಡೆಯಲಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಜೆಸಿಐ ಮಂಗಳೂರು ಸಾಮ್ರಾಟ ಇದರ ವತಿಯಿಂದ ಕರ್ನಾಟಕದಾದಂತ್ಯ ಸುಮಾರು ಮೂರು ಸಾವಿರ ಕಿಲೋಮಿಟರ ಪ್ರಯಾಣ ಕ್ರಮಿಸಿ, ದಾರಿಯುದ್ದಕ್ಕೂ ಆ ಮೂಲಕ ಶಾಂತಿ ಸಂದೇಶದ ಜಾಗ್ರತಿ ಮೂಡಿಸುವ ವಿನೂತನ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನಿಂದ ಹೊರಟ ಕಾರ್ ರ‍್ಯಾಲಿ ಶಿರೂರಿಗೆ ಆಗಮಿಸಿದಾಗ ಜೆಸಿಐ ಶಿರೂರು ಘಟಕವು ಆತ್ಮೀಯವಾಗಿ ಸ್ವಾಗತಿಸಿಕೊಂಡು ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಜೆಸಿಐ ರಾಘವೇಂದ್ರ ಹೊಳ್ಳರವರಿಗೆ ಹಾಗೂ ಅವರ ತಂಡದವರಿಗೆ ಫಲಪುಷ್ಪ ಹಾಗೂ ತಾಂಬೂಲ ನೀಡಿ ಸನ್ಮಾನಿಸಲಾಯಿತು. ಕಾರ‍್ಯಕ್ರಮದಲ್ಲಿ ಜೆಸಿಐ ಶಿರೂರಿನ ಅಧ್ಯಕ್ಷ ಪಾಂಡುರಂಗ ಅಳ್ವೆಗದ್ದೆ, ಜೆಸಿ ಪ್ರಸಾದ ಪ್ರಭು, ಜೆಸಿ ಹರೀಶ ಶೇಟ್, ಜೆಸಿ ಕೃಷ್ಣಮೂರ್ತಿ ಶೇಟ್, ಜೆಸಿ ಗುರುನಾಥ ಶೇಟ್, ಜೆಸಿ ನಾಗೇಶ ಕೆ, ಜೆಜೆಸಿ ಆದರ್ಶ ಶೇಟ್, ವಿನೋದ ಮೇಸ್ತ, ಜೆಸಿ ಕೃಷ್ಣ ಪೂಜಾರಿ ಚಂದ್ರ ಬಿಲ್ಲವ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಉಳ್ಳೂರು ಗ್ರಾಮದ ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನದಲ್ಲಿ ವಿಶ್ವಕರ್ಮ ಸಮುದಾಯ ನೀಡಿದ ಸನ್ಮಾನ ಸ್ವೀಕರಿಸಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿಯವರು  ವಿಶ್ವಕರ್ಮರು ನಮ್ಮ ಸಮಾಜದ ಅತ್ಯಂತ ಕ್ರಿಯಾಶೀಲ ಸಮುದಾಯ. ಎಲ್ಲ ವಿಧದ ನಿರ್ಮಾಣ ಕಾರ್ಯಗಳಲ್ಲಿ ಅದರ ಸದಸ್ಯರು ಸಿದ್ಧಹಸ್ತರು. ಈಚಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ನನ್ನ ಗೆಲುವಿಗೆ ಕೊಡುಗೆ ನೀಡಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸುವುದಲ್ಲದೆ ಅವರ ಬೇಡಿಕೆಯಾದ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ಗರಿಷ್ಠ ಸಾಧ್ಯ ನೆರವು ದೊರಕಿಸಿಕೊಡಲಾಗುವುದು ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ದೇವಸ್ಥಾನದ ಮೊಕ್ತೇಸರರಾದ ಮಂಜುನಾಥ ಆಚಾರ್ಯ, ಬಾಬು ಆಚಾರ್ಯ, ಪ್ರಭಾಕರ ಆಚಾರ್ಯ, ಇತರರು ಇದ್ದರು.

Read More