ಕುಂದಾಪ್ರ ಡಾಟ್ ಕಂ ಸುದ್ದಿ ಮೂಡುಬಿದಿರೆ: `ನಮಗೆ ನಮ್ಮದೇ ಆದ ಒಂದು ಅಂತರ್‌ಧ್ವನಿಯಿರುತ್ತದೆ. ಆ ಅಂತರ್‌ಧ್ವನಿಯನ್ನು ಅರಿತುಕೊಂಡು ಅದರಂತೆ ಮುಂದೆ ಸಾಗಿದಾಗ ಮಾತ್ರ ಜೀವನದಲ್ಲಿ ನಿಜವಾದ ಯಶಸ್ಸು, ಉನ್ನತಿ ದೊರೆಯಲು ಸಾಧ್ಯ. ಶ್ರೀನಿವಾಸ ರಾಮಾನುಜಂ, ಸಚಿನ್ ತೆಂಡೂಲ್ಕರ್, ಸಂತ ಕಬೀರರು ಮಹಾನ್ ಸಾಧಕರಾಗಿದ್ದು ತಮ್ಮ ಆಂತರ್ಯದ ಧ್ವನಿಯನ್ನು ಗುರುತಿಸಿಕೊಂಡಾಗಲೇ. ನಮ್ಮ ಶೈಕ್ಷಣಿಕ ವ್ಯವಸ್ಥೆಯು ತನ್ನ ಸೀಮಿತ ಚೌಕಟ್ಟನ್ನು ದಾಟಿ ವಿಸ್ತಾರವಾದ ಹರವಿಗೆ ತೆರೆದುಕೊಂಡಾಗ ಮಾತ್ರ ಶಿಕ್ಷಣದ ನಿಜ ಉದ್ದೇಶ ಸಾಧನೆಯಾಗುತ್ತದೆ’ ಎಂದು ಗಣಿತಜ್ಞ, ದೆಹಲಿ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ದಿನೇಶ್ ಸಿಂಗ್ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ಅಡಿ ಆಯೋಜನೆಗೊಂಡ `ರೀ-ಡಿಫೈನಿಂಗ್ ಏಜ್ಯಕೇಶನ್ ಟು ಎನೇಬಲ್ ದ ಯಂಗ್’ ವಿಶೇಷ ಉಪನ್ಯಾಸದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಸೃಜನಾತ್ಮಕ ಸಾಮಥ್ರ್ಯ ಹೆಚ್ಚಿದಾಗ ಮಾತ್ರ ಸಮಾಜ, ದೇಶ ಉನ್ನತಿಯನ್ನು ಕಾಣಲು ಸಾಧ್ಯ; ಆದ್ದರಿಂದ ಶಿಕ್ಷಣ ವ್ಯವಸ್ಥೆಯು ಪಠ್ಯ ಕೇಂದ್ರಿತ ಹಾಗೂ ಕಪ್ಪು ಹಲಗೆ ಶಿಕ್ಷಣದಿಂದ ಹೊರ ಬಂದು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಈ ಭಾರಿ ಚುನಾವಣೆಯಲ್ಲಿ ಅಪಪ್ರಚಾರ, ಜಾತಿಯ ನಡುವೆ ವಿಷಬೀಜ ಭಿತ್ತುವ ತಂತ್ರ, ಹಿಂದೂತ್ವ ಹಾಗೂ ಮೋದಿಯ ಹೆಸರನ್ನಷ್ಟೇ ಬಂಡವಾಳವಾಗಿಸಿಕೊಂಡಿದ್ದರಿಂದ ಬೈಂದೂರಿನಲ್ಲಿ ಬಿಜೆಪಿ ಗೆದ್ದಿದೆ. ಅಪಪ್ರಚಾರದ ಮುಂದೆ ಕ್ಷೇತ್ರಾದ್ಯಂತ ಮಾಡಿರುವ ಅಭಿವೃದ್ಧಿ ಕಾರ್ಯಗಳು ಗೌಣವಾಗಿ ಉಳಿದವು. ಆದರೆ ನಾವು ಸೋಲನ್ನು ಸವಾಲಾಗಿ ಸ್ವೀಕರಿಸಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಗೊಳಿಸುತ್ತೇವೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಪರಾಜಿತ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಲ್ಲಾ ವರ್ಗದವರನ್ನೂ ಸಮಭಾವದಿಂದ ಕಂಡು ಅಭಿವೃದ್ಧಿಗೆ ಮತನೀಡಿ ಎಂದಿದ್ದೇವು. ಎಲ್ಲಿಯೂ ಅಪಪ್ರಚಾರಕ್ಕೆ ಹೋಗಲಿಲ್ಲ. ಅಪಪ್ರಚಾರ ಹೆಚ್ಚಿಗೆ ದಿನ ಉಳಿಯದು. ಜನ ಮತ್ತೆ ನಮ್ಮ ಕಾರ್ಯವನ್ನು ನೋಡಿ ಬೆಂಬಲಿಸಲಿದ್ದಾರೆಂಬ ಎಂದವರು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಪಲಾಯಾನ ಬದ್ಧಿಯಿಲ್ಲ. ಎಂತಹ ಸೋಲನ್ನಾದರೂ ಎದುರಿಸಿ ಸಮರ್ಥವಾಗಿ ಮತ್ತೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಕಂಚಿಕಾನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಹಳೆವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಶಾಲೆಯ ಶಾರದಾ ಮಂಟಪದಲ್ಲಿ ಜರುಗಿತು. ಸಮಾರಂಭವನ್ನು ಉದ್ದೇಶಿಸಿ ಡಾ. ಮಾಲತಿ ನಾರಂಬಳ್ಳಿ ಮಾತನಾಡಿ ಮಕ್ಕಳಿಗೆ ಪ್ರಾಥಮಿಕ ಹಂತದ ಶಿಕ್ಷಣವೇ ಭವಿಷ್ಯದ ಸಂಸ್ಕಾರಯುತ ಬುದುಕಿನ ಭದ್ರ ಬುನಾದಿ. ಇಂದಿನ ಕಾಲಘಟ್ಟದಲ್ಲಿ ಹೆತ್ತವರು ಮಕ್ಕಳಿಗಾಗಿ ಆಸ್ತಿ ಮಾಡಿಡದೇ ಸುಶಿಕ್ಷಿತ ಮಕ್ಕಳನ್ನು ಆಸ್ತಿಯನ್ನಾಗಿ ಪರಿವರ್ತಿಸಿ ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಎಂದು ಕಂಚಿಕಾನ್ ಶಾಲಾ ಹಳೆವಿದ್ಯಾರ್ಥಿ ಪೋಷಕರಿಗೆ ಕರೆ ನೀಡಿದರು. ಶಿಕ್ಷಣ ಸಂಸ್ಥೆ ಪರಿಣಾಮಕಾರಿಯಾಗಿ ಹೊಣೆ ನಿರ್ವಹಿಸಲು ಕರ್ತವ್ಯಶೀಲ ಶಿಕ್ಷಕರ, ಪ್ರೋತ್ಸಾಹಕ ಪಾಲಕರ, ಹೊಣೆಗಾರರಾದ ಜನಪ್ರತಿನಿಧಿಗಳ ಮತ್ತು ಶಿಕ್ಷಣ ಪ್ರೇಮಿ ಸಾರ್ವಜನಿಕರ ಬೆಂಬಲ ಬೇಕು. ಇದರ ಜತೆಗೆ ಹಳೆವಿದ್ಯಾರ್ಥಿ ಸಂಘವೂ ಕೂಡಾ ನೂತನ ಯೋಜನೆಗಳನ್ನು ರೂಪಿಸಬೇಕಾಗಿದೆ. ಶಿಕ್ಷಣದ ಮೂಲಕ ಬದುಕಿನ ಬೆಳಕು ಪಡೆದ ಸಂಸ್ಥೆಗಳನ್ನು ಬೆಂಬಲಿಸಬೇಕಾದ ಹೊಣೆ ಹಳೆವಿದ್ಯಾರ್ಥಿಗಳಿಗೆ ಇದೆ. ಶಾಲೆ ಮತ್ತು ಆ ಶಾಲೆಯ ಹಳೆವಿದ್ಯಾರ್ಥಿಗಳ ಪೂರಕ ಸಂಘಟನೆ ಅತ್ಯಂತ ಮಹತ್ವದಾಗಿದ್ದು, ಅಭಿವೃದ್ಧಿ ದೃಷ್ಠಿಯಿಂದ ಇದೊಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ವಿಶ್ವದಲ್ಲಿ ಅತಿಹೆಚ್ಚು ಯುವಶಕ್ತಿ ಹೊಂದಿದ ದೇಶ ಭಾರತ. ಇಲ್ಲಿನ ಸೈನಿಕರ ಕಾರ್ಯವೈಖರಿ ಪ್ರಪಂಚವೇ ಹುಬ್ಬೇರಿಸುವಂತೆ ಮಾಡಿದೆ. ಆದರೆ ಇತ್ತೀಚಿನ ದಿನಗಳಲ್ಲ್ಲಿ ಹೆಚ್ಚಿನ ಯುವಕರು ಸೈನ್ಯಕ್ಕೆ ಸೇರುವ ಆಸಕ್ತಿ ತೋರದೇ ಜಡತ್ವ ಹೊಂದಿದ್ದು, ಇದು ಭವಿಷ್ಯಕ್ಕೆ ಮಾರಕ. ಇದರಿಂದ ಹೊರಗೆ ಬಂದು ಇಂದಿನ ಸ್ಥಿ-ಗತಿಗಳ ಬಗ್ಗೆ ಚಿಂತನೆ ಮಾಡಬೇಕು ಎಂದು ಭಾರತೀಯ ಭೂಸೇನಾ ನಿವೃತ್ತ ಯೋಧ ಬೈಂದೂರು ಚಂದ್ರಶೇಖರ ನಾವಡ ಹೇಳಿದರು. ಬೈಂದೂರು ತೊಂಡೆಮಕ್ಕಿಯಲ್ಲಿ ನಡೆದ ಜೈ ಜವಾನ್ ವೀರ ಯೋಧರ ಸ್ಮರಣಾ ಸಮಿತಿಯ ಐದನೇ ವರ್ಷದ ವಾರ್ಷಿಕೋತವ ಹಾಗೂ ಯೋಧರಿಗೆ ನಮನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು. ಮೂರು ವರ್ಷಗಳ ಹಿಂದೆ ಜಮ್ಮು-ಕಾಶ್ಮೀರದಲ್ಲಿ ಉಂಟಾದ ಭೀಕರ ಚಂಡಮಾರುತ, ನೆರೆಹಾವಳಿಯಿಂದ ಕಂಗೆಟ್ಟ ಅಲ್ಲಿನ ನಾಗರಿಕರಿಗೆ ಭಾರತೀಯ ಸೈನಿಕರು ತಮ್ಮ ಜೀವದ ಹಂಗುತೊರೆದು ಅವರನ್ನು ರಕ್ಷಿಸಿದರು. ನಂತರದ ದಿನಗಳಲ್ಲಿ ಈ ಜನರು ರಾಜಕೀಯ ಹಾಗೂ ಧರ್ಮದ ಭಾವನೆಯಲ್ಲಿ ಕೊಚ್ಚಿಹೋಗಿ ನಮ್ಮ ಸೈನಿಕರನ್ನು ತುಚ್ಛವಾಗಿ ನಡೆಸಿಕೊಂಡರಲ್ಲದೇ ಅವರ ಮೇಲೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ರುಚಿಯಿಲ್ಲದ ಭೋಜನ, ಶೃತಿ, ಲಯ, ತಾಳವಿಲ್ಲದ ಸಂಗೀತ ನಮ್ಮ ಶರೀರ ಹಾಗೂ ಮನಸ್ಸಿಗೆ ಹೇಗೆ ಅಪಥ್ಯವಾಗುವುದೋ ಹಾಗೆಯೇ ಸಂಸ್ಕಾರವಿಲ್ಲದ ಜೀವನವೂ ಕೂಡಾ. ಮುಖ್ಯವಾಗಿ ಸಂಸ್ಕಾರವೇ ಮನುಷ್ಯನ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಗುತ್ತದೆ. ಆ ನೆಲೆಯಲ್ಲಿ ಗುರು-ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನ ನಮಗೆ ಜೀವನದಲ್ಲಿ ಸ್ಪೂರ್ತಿದಾಯಕವಾಗಿರುತ್ತದೆ ಎಂದು ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜತೀರ್ಥ ವಡೇರ ಸ್ವಾಮೀಜಿ ಹೇಳಿದರು. ನಾಯ್ಕನಕಟ್ಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಬುಧವಾರ ನಡೆದ ಶತಕಲಾಭಿಷೇಕ ಹಾಗೂ ಲಘುವಿಷ್ಣು ಹವನದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಯಾವುದೇ ಸಮಾಜ ಉದ್ದಾರವಾಗಬೇಕಾದರೆ ಅಲ್ಲಿ ಆಚಾರ-ವಿಚಾರ, ದೇವರು, ಧರ್ಮವಿರಬೇಕು. ಅಗ ಮಾತ್ರ ಸಮಾಜದ ಸಮೃದ್ಧಿಯಾಗಿರಲು ಸಾಧ್ಯ ಎನ್ನುವುದು ತತ್ವಸಿದ್ಧಾಂತ. ಅದರಂತೆ ಲೋಕಕಲ್ಯಾಣಕ್ಕಾಗಿ ದೇವತಾರಾಧನೆ, ಯಜ್ಞ, ಯಗಾದಿಗಳನ್ನು ಮಾಡಲು ಪರಶುರಾಮ ದೇವರು ತ್ರಿಹೋತ್ರದಿಂದ ಸಾರಸ್ವತರನ್ನು ಗೋವಾಕ್ಕೆ ಕರೆತಂದರು ಎಂಬ ಉಲ್ಲೆಖವಿದೆ. ನಾಲ್ಕೂ ಕಡೆಗಳಲ್ಲಿನ ಪರ್ವತಶ್ರೇಣಿಯ ಮಧ್ಯದಲ್ಲಿ ನೆಲೆನಿಂತಂತಹ ಸಾರಸ್ವತರು ಅಷ್ಟ ಅಗ್ರಹಾರ ನಿರ್ಮಿಸಿ ಅಲ್ಲಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಮನಸ್ಸನ್ನು ಮುದಗೊಳಿಸುತ್ತ ಅಲೌಕಿಕ ಆನಂದವನ್ನು ಅನುಭವಿಸುವಲ್ಲಿ ಸಂಗೀತ ಕಲೆಯ ಅನುಸಂಧಾನ ಅಪೇಕ್ಷಣೀಯ. ಪರಂಪರೆಯಿಂದ ಈ ನಾದಾನುಸಂಧಾನ ವೇದ ಕಾಲದಿಂದಲೂ ನಡೆದು ಬಂದಿದೆ. ಅನೇಕ ಮಹಾಮಹಿಮರು ಜೀವ ಮಾನ ಸಾಧನೆಯಿಂದ ಅನೇಕ ಕೃತಿಗಳನ್ನು ರಚಿಸಿ ಮಾರ್ಗದರ್ಶಕರಾಗಿದ್ದಾರೆ. ಶಾಸ್ತ್ರೀಯ ನೆಲೆಗಟ್ಟಿನ ಈ ವಿದ್ಯೆಯನ್ನು ಸರಳವಾಗಿ – ಸುಲಭವಾಗಿ ಅಭ್ಯಸಿಸಿಕೊಳ್ಳಲು ಅನುವಾಗುವಂತೆ ಸಂಗೀತ ವಿದ್ವಾನ್ ಮದೂರು ಬಾಲಸುಬ್ರಹ್ಮಣ್ಯಂ ರವರು ರಚಿಸಿದ ಪುಸ್ತಕ ’ಸಂಗೀತ ಪ್ರಬೋಧೀನಿ’ ಉತ್ತಮ ಕೊಡುಗೆಯಾಗಿದೆ. ಎಂದು ಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರು ಉಡುಪಿ ಪೇಜಾವರ ಮಠದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಆಶೀರ್ವದಿಸುತ್ತ ನುಡಿದರು. ಪುಸ್ತಕವನ್ನು ಪ್ರಕಟಿಸಿದ ಕುಂದ ಅಧ್ಯಯನ ಕೇಂದ್ರದ ಯು.ವರಮಹಾಲಕ್ಷೀ ಹೊಳ್ಳರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ|| ಪಾದೇಕಲ್ಲು ವಿಷ್ಣು ಭಟ್ಟರು ಶುಭಾಶಂಸನೆ ಗೈದರು. ಗಣಪತಿ ಜ್ಯೋಸ, ವಿದುಷಿ ಹೆಚ್.ಉಷಾ ಜೊಯಿಸ, ಉಮಾ ಮಹೇಶ್ವರಿ, ರಮಾದೇವಿ ಆಚಾರ್ಯ, ಸುಮಾ ಬಾಲಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಮದೂರು ಬಾಲಸುಬ್ರಹ್ಮಣ್ಯಂ ಸ್ವಾಗತಿಸಿದ್ದರು. ಯು. ಗಣೇಶ್ ಪ್ರಸನ್ನ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಜೇಸಿಐ ಕುಂದಾಪುರ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಜೇಸಿಐ ರಾಷ್ಟ್ರೀಯ ಅಧ್ಯಕ್ಷ ಅರ್ಪಿತ್ ಹಾಥಿ ಅವರ ಹುಟ್ಟುಹಬ್ಬದ ದಿನದಂದು ರೆಡ್ ಕ್ರಾಸ್ ಸಂಸ್ಥೆಯಲ್ಲಿ ಜರುಗಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಕುಂದಾಪುರದ ಅಧ್ಯಕ್ಷರಾದ ಶ್ರೀನಾಥ್ ಗಾಣಿಗ ಇವರು ವಹಿಸಿದ್ದರು.ಜೇಸಿಐ ನ ಪೂರ್ವ ರಾಷ್ಟ್ರೀಯ ಕಾನೂನು ಸಲಹೆಗಾರ ಶ್ರೀಧರ್ ಪಿ.ಎಸ್. ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕದ ಚೇರ್ಮನ್ ಶ್ರೀ ಜಯಕರ್ ಶೆಟ್ಟಿ ಹಾಗೂ ಜೇಸಿಐನ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ರಾದ ಸದಾನಂದ ನಾವಡ ಉಪಸ್ಥಿತರಿದ್ದರು. ಸುಮಾರು17 ಯೂನಿಟ್ ಗಳಷ್ಟು ರಕ್ತವನ್ನು ಜೇಸಿಐ ಸದಸ್ಯರಿಂದ ಸಂಗ್ರಹಿಸಲಾಯಿತು. ಜೇಸಿಐ ಕುಂದಾಪುರದ ಅಧ್ಯಕ್ಷರಾದ ಶ್ರೀನಾಥ್ ಗಾಣಿಗ ಇವರು ಸ್ವಾಗತಿಸಿದರು.ಜೇಸಿಐ ಕುಂದಾಪುರದ ಕಾರ್ಯದರ್ಶಿ ಚೇತನ್ ದೇವಾಡಿಗ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಮರವಂತೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕ್ ಹಾಗೂ ಕಾರು ನಡುವಿನ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಖೇದಕರ ಘಟನೆ ವರದಿಯಾಗಿದೆ. ಬೈಂದೂರು ತಗ್ಗರ್ಸೆ ಮುತ್ತಯ್ಯ ಪೂಜಾರಿ ಎಂಬುವವರ ಪುತ್ರ ಪುನಿತ್ ಪೂಜಾರಿ (22) ಮೃತ ದುರ್ದೈವಿ. ಬೈಕ್ ಹಿಂಬದಿಯ ಸವಾರ ಆಕಾಶ್ ಪೂಜಾರಿ ಗಾಯಗೊಂಡಿದ್ದಾನೆ. ಮರವಂತೆ ಬಸ್ ನಿಲ್ದಾಣ ಬಳಿ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಡಸ್ಕರ್ ಕಾರು ಹಾಗೂ ಬೈಂದೂರು ಕಡೆಗೆ ತೆರಳುತ್ತಿದ್ದ ಪಲ್ಸರ್ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಭ ನುಗ್ಗುಗುಜ್ಜಾಗಿದ್ದರೇ, ಬೈಕಿಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ. ಬೈಕ್ ಸವಾರನ ಪುನಿತ್ ಪೂಜಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದರೇ, ಹಿಂಬದಿಯ ಸವಾರ ಆಕಾಶ್ ಪೂಜಾರಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಪುನಿತ್ ಬೈಂದೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಹೊಸ ಬೈಕು ಖರೀದಿಸಿ ಮೂರು ದಿನವಷ್ಟೇ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸಮುದಾಯ, ಕುಂದಾಪುರ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ರಾಜ್ಯ ಬಾಲವಿಕಾಸ ಟ್ರಸ್ಟ್ ಜೊತೆಯಾಗಿ ಸಂಘಟಿಸಿರುವ ರಂಗರಂಗು ರಜಾಮೇಳವನ್ನು ಸೂಪರ್ ಗ್ರೇಡ್ ವಿದ್ಯುತ್ ಗುತ್ತಿಗೆದಾರರೂ ಮತ್ತು ಸಾಮಾಜಿಕ ಚಿಂತಕರೂ ಆಗಿರುವ ಕೆ.ಆರ್ ನಾಯ್ಕ್ ಉದ್ಘಾಟಿಸಿದರು. ಕುಟುಂಬಗಳು ಚಿಕ್ಕದಾಗುತ್ತಾ ಹೋದಂತೆ ಒಡನಾಟದ ಒಡಮೂಡುವ ಸಮಷ್ಟಿಪ್ರಜ್ಞೆಯು ಮಕ್ಕಳಿಗೆ ದುರ್ಲಭವಾಗುತ್ತವೆ. ರಜಾಮೇಳಗಳು ಈ ಕೊರತೆಯನ್ನು ನೀಗಿಸಬೇಕು ಎಂದು ಅವರು ತಮ್ಮ ಉದ್ಘಾಟನಾ ಮಾತುಗಳಲ್ಲಿ ಆಶಿಸಿದರು. ಮೇಳದ ನಿರ್ದೇಶಕ ಶ್ರೀ ವಾಸುದೇವ ಗಂಗೇರ ಮಾತನಾಡಿ ಈ ರಜಾಮೇಳದಲ್ಲಿ ನೆಲಮೂಲದ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸಲಾಗುವುದು ಮತ್ತು ಜಾತಿ-ಮತ-ಭಾಷೆಗಳ ಹೆಸರಿನಲ್ಲಿ ನಾವು ನಿರ್ಮಿಸಿಕೊಂಡಿರುವ ಗೋಡೆಗಳನ್ನು ಮೀರಿ ಮನುಷ್ಯತ್ವದ ವಿಶಾಲ ಕುಟುಂಬದೊಳಗೆ ಬದುಕುವದನ್ನು ಕಲಿಯಲು ಈ ಮೇಳದಲ್ಲಿ ಒತ್ತು ನೀಡಲಾಗುವುದು ಎಂದರು. ಮೇಳದ ಭಾಗವಾಗಿ ಮಕ್ಕಳು ಹೊರಸಂಚಾರ, ಮಕ್ಕಳ ಸಂತೆ, ಕಛೇರಿ ಭೇಟಿಗಳನ್ನು ಮಾಡುವರು. ಪ್ರತಿ ವರ್ಷದಂತೆ ಮೇಳದ ಮಕ್ಕಳು ಈ ವರ್ಷವೂ ಮೇಳದ ಸಮಾರೋಪ ಸಮಾರಂಭದಲ್ಲಿ ನಾಟಕ ಪ್ರದರ್ಶನವನ್ನು ನೀಡಲಿರುವರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಬಿ. ಎಂ. ಸುಕುಮಾರ ಶೆಟ್ಟಿ ಅವರಿಗೆ ಯಡ್ತರೆಯ ಗ್ರಾಮಸ್ಥ ಪ್ರಸಾದ್ ಬೈಂದೂರು ಅವರು ಮೊದಲ ಮನವಿ ಸಲ್ಲಿಸಲಿದ್ದಾರೆ. ಬೈಂದೂರಿನಾದ್ಯಂತ ಇರುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಸಕರು ಶ್ರಮಿಸಬೇಕಿದ್ದು, ಶಾಶ್ವತ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಅವರು ಮನವಿಯಲ್ಲಿ ತಿಳಿಸಿದ್ದಾರೆ. ಮನವಿಗೆ ಪ್ರತಿಕ್ರಿಯಿಸಿದ ನೂತನ ಶಾಸಕರು, ಬೈಂದೂರು ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಎಂದು ಭರವಸೆ ನೀಡಿದ್ದಾರೆ.
