ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್, ದ.ಕ ಮತ್ತು ಉಡುಪಿ ಜಿಲ್ಲೆ ಹಾಗೂ ಕುಂದಾಪುರ – ಬೈಂದೂರು ವಲಯ ಇವರ ನೇತೃತ್ವದಲ್ಲಿ ಬೀಜಾಡಿಯ ಐಶ್ವರ್ಯ ಮೀಡಿಯಾ ಮತ್ತು ಸ್ಟುಡಿಯೋ ಪ್ರಾಯೋಜಕತ್ವದಲ್ಲಿ ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆ, ಅಗ್ನಿಶಾಮಕ ಠಾಣೆ ಕುಂದಾಪುರ, ಕೋಟೇಶ್ವರದ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಘಟಕ ಇವರ ಸಹಯೋಗದೊಂದಿಗೆ ಕಾಲೇಜಿನಲ್ಲಿ ವಿಶ್ವ ಪ್ರಕೃತಿ ವಿಕೋಪ ನಿಯಂತ್ರಣ ದಿನಾಚರಣೆ ಕಾರ್ಯಕ್ರಮ ಜರುಗಿತು. ಕುಂದಾಪುರದ ಡಿ.ವೈ.ಎಸ್.ಪಿ ಕೆ. ಶ್ರೀಕಾಂತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪ್ರಾಕೃತಿಕ ವಿಕೋಪಗಳು ಜಾಸ್ತಿಯಾಗುತ್ತಿವೆ. ಮನುಷ್ಯ ಮತ್ತು ಪ್ರಕೃತಿಯ ಒಡನಾಟದಲ್ಲಿ ಸಾಮರಸ್ಯ ತಪ್ಪಿರುವುದೇ ಇದಕ್ಕೆ ಕಾರಣ. ಅತಿವೃಷ್ಟಿ, ನೆರೆ ಹಾವಳಿ, ಭೂ ಕುಸಿತ, ಮೇಘ ಸ್ಪೋಟ ಇತ್ಯಾದಿಗಳು ಒಂದಿಲ್ಲೊಂಡೆದೆ ದಿನನಿತ್ಯ ಎಂಬಂತಾಗಿದೆ. ಪ್ರಾಕೃತಿಕ ವಿಕೋಪಗಳನ್ನು ತಡೆಯುವುದು ಅಸಾಧ್ಯವಾದರೂ, ಅವುಗಳ ಬಗ್ಗೆ ಅರಿವು ಹೊಂದಿದ್ದರೆ, ಜೀವ ಮತ್ತು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸದ್ಯಕ್ಕಂತೂ ಸಿನಿಮಾ ಅಂದ್ರೆ ಕಾಂತಾರ ಎಂಬಂತಾಗಿದೆ. ಎರಡನೇ ವಾರದ ಅಂತ್ಯದ ವೇಳೆಗೆ ರಾಜ್ಯದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಹೊಸ ಪ್ರೇಕ್ಷಕ ವರ್ಗವನ್ನೂ ಟಾಕೀಸುಗಳತ್ತ ಸೆಳೆಯುತ್ತಿದೆ. ಹಿಂದಿ ಹಾಗೂ ಇನ್ನಿತರ ಭಾಷೆಯಲ್ಲಿಯೂ ಬಿಡುಗಡೆಗೆ ತಯಾರಾಗಿ ಮುನ್ನಡೆಯುತ್ತಿದೆ. ಕರಾವಳಿ ಸಂಸ್ಕೃತಿ, ಸಂಪ್ರದಾಯವನ್ನು ಬೆಳ್ಳಿತೆರೆಯ ಮೇಲೆ ತೋರಿಸುತ್ತಾ, ಅಭಿನಯ, ಸಂಗೀತ, ಮೇಕಿಂಗ್ ಎಲ್ಲದರ ಬಗ್ಗೆಯೂ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸುತ್ತಾ ಗೆದ್ದಿರುವ ಕಾಂತಾರ ಸಿನಿಮಾ, ಉತ್ತರ ಕರ್ನಾಟಕದಲ್ಲಿಯೂ ಸಖತ್ ಕ್ರೇಜ್ ಹುಟ್ಟುಹಾಕಿದೆ. ಬಾಗಲಕೋಟೆ ಜಿಲ್ಲೆಯ ಲೋಕಾಪುರದ ಉದ್ಯಮಿ, ಹೋಟೆಲ್ ಶಾಂತಿ ಗ್ರ್ಯಾಂಡ್ ಮಾಲಿಕ ಗುಣಕರ ಶೇಖರ ಶೆಟ್ಟಿ ಅವರು ಗುರುವಾರ ಒಂದು ದಿನ ಲೋಕಾಪುರದ ಟಾಕೀಸ್ ಸಂಪೂರ್ಣ ಬುಕ್ ಮಾಡಿ ಅಲ್ಲಿನ ಜನತೆಗೆ ಕಾಂತಾರ ಸಿನಿಮಾ ಸಂಪೂರ್ಣ ಉಚಿತ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದರು. ಕನ್ನಡದ ಸ್ಟಾರ್ ನಟರ ಸಿನಿಮಾಗಳಷ್ಟೇ ಓಡುತ್ತಿದ್ದ ಲೋಕಾಪುರದ ಟಾಕೀಸಿನಲ್ಲಿ ಕಾಂತಾರದ ಕ್ರೇಜ್ ಮಾತ್ರ ಜೋರಾಗಿಯೇ ಇದೆ. ಗುರುವಾರ ಆಯೋಜಿಸಲಾಗಿದ್ದ ಒಟ್ಟು 5 ಉಚಿತ ಪ್ರದರ್ಶನಗಳು ಹೌಸ್ ಪುಲ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಆತಿಥ್ಯ ಉದ್ಯಮ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಂಡಿರುವ ಕೋಟೇಶ್ವರದ ಯುವ ಮೆರಿಡಿಯನ್ ಗ್ರೂಪ್ಸ್, ಪ್ರಸಕ್ತ ಸಾಲಿನಲ್ಲಿ ಎರಡು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿದೆ. ದಿ ಟೈಮ್ಸ್ ಗ್ರೂಪ್‌ನಿಂದ ಇಟಿ ಅಜೀವರ್ಸ್ ಅವಾರ್ಡ್ ಹಾಗೂ ಎಐಸಿ ನಿಟ್ಟೆ – ಕೆಬಿಎಲ್ ವತಿಯಿಂದ ಬೆಸ್ಟ್ ಇನೋವೇಟಿವ್ ಎಂಟರ್ಪ್ರೈಸಸ್ ಅವಾರ್ಡ್‌ಗೆ ಭಾಜನರಾಗಿದ್ದು, ಯುವ ಮೆರಿಡಿಯನ್ ಹಿರಿಮೆಗೊಂದು ಗರಿ ಮೂಡಿದಂತಾಗಿದೆ. ಈ ಬಗ್ಗೆ ಯುವ ಮೆರಿಡಿಯನ್‌ನಲ್ಲಿ ಬುಧವಾರ ಆಯೋಜಿಸಲಾದ ಮಾಧ್ಯಮಗೋಷ್ಠಿಯಲ್ಲಿ ಯುವ ಮೆರಿಡಿಯನ್ ಗ್ರೂಪ್ ಆಡಳಿತ ಪಾಲುದಾರರಾದ ಬಿ. ಉದಯ ಕುಮಾರ್ ಹಾಗೂ ಬಿ. ವಿನಯ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು. ಪ್ರಶಸ್ತಿ ಲಭಿಸಿರುವ ಬಗ್ಗೆ ಸಂತಸ ಹಂಚಿಕೊಂಡ ಸಹೋದರರು, ಗ್ರಾಮೀಣ ಪ್ರದೇಶದಲ್ಲಿ ದಶಕದಿಂದ ಅಂತರಾಷ್ಟ್ರೀಯ ಗುಣಮಟ್ಟದ ಸೇವೆ ನೀಡುತ್ತಿರುವ ಯುವ ಮೆರಿಡಿಯ ನ್‌ನ ಯುವ ಮೆರಿಡಿಯನ್ ಬೇ ರೆಸಾರ್ಟ್ & ಸ್ಪಾ ವಿಭಾಗವು ಅಂತರಾಷ್ಟ್ರೀಯ ಮನ್ನಣೆ, ಗೌರವಕ್ಕೆ ಪಾತ್ರವಾಗಿದ್ದಲ್ಲದೆ ರಾಜ್ಯದ ಪ್ರತಿಷ್ಠಿತ ಹಾಗೂ ಮುಂಚೂಣಿಯ ಹೋಟೆಲ್‌ಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟೇಶ್ವರ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಹೊಂದಿಕೊಂಡಿದ್ದ ಅನುಪಯುಕ್ತ ನೀರಿನ ಟ್ಯಾಂಕ್‌ನ್ನು ಗ್ರಾಪಂ ಕೆಡವಿಹಾಕಿದೆ. ರಾಷ್ಟ್ರೀಯ ಹೆದ್ದಾರಿಗೆ ತಾಕಿಕೊಂಡಿದ್ದ 30 ವರ್ಷಗಳಷ್ಟು ಹಳೆಯದಾದ 10 ವರ್ಷಗಳಿಂದ ಅನುಪಯುಕ್ತವಾಗಿದ್ದ ನೀರಿನ ಟ್ಯಾಂಕನ್ನು ಜೆಸಿಬಿ ಬಳಸಿ ಕೆಡವಲಾಯಿತು. ಈ ಸಂದರ್ಭ ಸರ್ವಿಸ್ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಪ್ಲೈಓವರ್ ಒಂದು ಬದಿಯಲ್ಲಿ ಬಂದ್ ಮಾಡಿ, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಮುಂಜಾಗೃತೆ ಕೈಗೊಳ್ಳಲಾಗಿತ್ತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಸಮಾಜವು ಎಲ್ಲ ವಿಧದ ದುಷ್ಚಟಗಳಿಂದ ಮುಕ್ತವಾದಾಗ ಗಾಂಧೀಜಿಯವರ ಕನಸಿನ ರಾಮರಾಜ್ಯ ಉದಯವಾಗುತ್ತದೆ. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಕಾರ್ಯವನ್ನು ಎಲ್ಲ ಪ್ರಜ್ಞಾವಂತ ನಾಗರಿಕರು ಬೆಂಬಲಿಸಬೇಕು ಎಂದು ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ಸಭಾಭವನದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೈಂದೂರು ತಾಲೂಕು ಬಿ.ಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಉಡುಪಿ ಜಿಲ್ಲಾ ಹಾಗೂ ಬೈಂದೂರು ತಾಲೂಕು ಜನಜಾಗೃತಿ ವೇದಿಕೆ, ನವಜೀವನ ಸಮಿತಿಗಳು, ತಾಲೂಕು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಗಾಂಧಿ ಜಯಂತಿ ಆಚರಣೆ ಪ್ರಯುಕ್ತ ನಡೆದ ಜನಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಭವಿಷ್ಯದಲ್ಲಿ ಸಮಾಜದ ಎಲ್ಲರೊಂದಿಗೆ ಬೆರೆತು ಬಾಳಲು ಸಹಕಾರಿಯಾಗುವುದರ ಜತೆಗೆ ಸಂಸ್ಕಾರಯುತ ಜೀವನಕ್ಕೆ ನಾಂದಿಯಾಗುವ ಮೂಲಕ ವ್ಯಸನ ಮುಕ್ತ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಂಗೀತವು ಸಂಸ್ಕಾರದಿಂದ ಒಲಿಯುವ ಕಲೆ. ಯಾವುದೇ ಪ್ರಕಾರದ ಸಂಗೀತವೇ ಆದರೂ ಅದರ ಮೇಲೆ ಪ್ರಭುತ್ವ ಸಾಧಿಸಲು ಅದನ್ನು ಶ್ರದ್ಧೆಯಿಂದ ಕಲಿಯಬೇಕು ಮತ್ತು ಆರಾಧಿಸಬೇಕು ಎಂದು ಸಂಗೀತ ಗುರು, ವಿದ್ವಾನ್ ಅನಂತ ಹೆಬ್ಬಾರ್ ಭಟ್ಕಳ ಹೇಳಿದರು. ನಾವುಂದ-ಮಸ್ಕಿ ಶ್ರೀದುರ್ಗಾಪರಮೇಶ್ವರಿ ಕಲಾನಿಕೇತನ ಸಂಗೀತ ಶಾಯ ಆಶ್ರಯದಲ್ಲಿ ಇಲ್ಲಿನ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ನಡೆದ ರಾಜ್ಯ ಮಟ್ಟದ ’ಗಾನ ಸ್ವರ-೨೦೨೨’ ಕರೋಕೆ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿಂದುಸ್ಥಾನಿ ಸಂಗೀತ ಗುರು ವಿದ್ವಾನ್ ಶರತ್ ನಾಡ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಿ ಮೊಗವೀರ, ಬಡಾಕೆರೆ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಹಾಬಲ. ಕೆ, ಹಿಂದು ಅಭ್ಯುದಯ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ, ಗಾಯಕ ಮಂಜುನಾಥ ಸಾಲಿಯಾನ್ ತ್ರಾಸಿ ಅತಿಥಿಗಳಾಗಿದ್ದರು. ದಿನೇಶ್ ನಾಯಕವಾಡಿ ವಂದಿಸಿದರು. ನಾಗರಾಜ ದೇವಳಿ ನಿರೂಪಿಸಿದರು. ಶಂಭು ಗುಡ್ಡಮ್ಮಾಡಿ ಸಹಕರಿಸಿದರು ರಾಜ್ಯದ ವಿವಿಧೆಡೆಯ ಹಾಡುಗಾರರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಉಪ್ಪುಂದದಲ್ಲಿ ಪ್ರಧಾನ ಕಛೇರಿ ಹೊಂದಿರುವ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು 18,000ಕ್ಕೂ ಮಿಕ್ಕಿ ಸದಸ್ಯರು, 1,000 ಕೋಟಿ ರೂ. ವ್ಯವಹಾರ ಹೊಂದಿರುವ ಪಾರದರ್ಶಕ ಸಹಕಾರಿ ಸಂಸ್ಥೆಯಾಗಿದೆ. ಸಂಸ್ಥೆಯಿಂದ ಸಾಲಪಡೆದ ವ್ಯಕ್ತಿಯೂರ್ವರು ಮರುಪಾವತಿಯಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕ ವಲಯದಲ್ಲಿ ಸಂಸ್ಥೆಯ ಬಗ್ಗೆಯೇ ಗೊಂದಲ ಸೃಷ್ಟಿಸುವ ವಿಫಲ ಪ್ರಯತ್ನ ಮಾಡುತ್ತಿದ್ದಾರೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದ್ದಾರೆ. ಅವರು ಸಂಸ್ಥೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹರಡುತ್ತಿರುವ ಸುಳ್ಳು ಆರೋಪಗಳ ಬಗ್ಗೆ ಸ್ಪಷ್ಟೀಕರಣ ನೀಡಿ, 6 ವರ್ಷಗಳ ಹಿಂದೆ ನಾಗರಾಜ ಪೂಜಾರಿ ಎಂಬ ವ್ಯಕ್ತಿ ತನ್ನ ಕುಟುಂಬದ ಆಸ್ತಿಯನ್ನು ಅಡಮಾನವಿರಿಸಿ 25 ಲಕ್ಷ ರೂ. ಸಾಲ ಪಡೆದು ಸ್ಪಲ್ಪ ಹಣವನ್ನಷ್ಟೇ ಮರುಪಾವತಿಯನ್ನೂ ಮಾಡಿದ್ದಾರೆ. ಸಾಲ ಮರುಪಾವತಿಗೆ ಸಾಕಷ್ಟು ಸಮಯಾವಕಾಶ ನೀಡಲಾಗಿತ್ತು. ಆದಾಗ್ಯೂ ಮರುಪಾವತಿಯಿಂದ ತಪ್ಪಿಸಿಕೊಳ್ಳಲು ಸಂಸ್ಥೆಯ ವಿರುದ್ಧವೇ ಇಲಾಖೆಗಳಿಗೆ ದೂರು ನೀಡಿದ್ದರು. ಸಹಕಾರಿ ಇಲಾಖೆಯ ಎಲ್ಲಾ ಹಂತದ ತನಿಕೆಯಲ್ಲಿಯೂ ತನಿಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರದ ನೆಲದಲ್ಲಿ ಚಿತ್ರೀಕರಣಗೊಂಡ ಸಿನಿಮಾ ‘ಕಾಂತಾರ’ ಎಲ್ಲೆಡೆಯೂ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆಯೇ ವ್ಯಕ್ತವಾಗುತ್ತಿದೆ. ಭಾರತೀಯ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರು ಕುಂದಾಪುರದ ಭಾರತ್ ಸಿನಿಮಾಸ್’ನಲ್ಲಿ ಒಂದು ಶೋ ಸಂಪೂರ್ಣ ಬುಕ್ ಮಾಡಿ ತನ್ನ ಹುಟ್ಟೂರಿನ ಹಿರಿಯ ನಾಗರಿಕರಿಗೆ ಉಚಿತವಾಗಿ ಸಿನಿಮಾ ತೋರಿಸಿದ್ದಾರೆ. ಕುಂದಾಪುರದ ರಿಷಬ್ ಶೆಟ್ಟಿ ಅವರ ನಿರ್ದೇಶನ ಹಾಗೂ ನಟನೆಯ ಕಾಂತಾರ ಸಿನಿಮಾವನ್ನು ತನ್ನೂರಿನ ಹಿರಿಯ ನಾಗರಿಕರೂ ನೋಡಲಿ ಎಂಬ ಮಹದಾಸೆಯಿಂದ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರು ಕೋಟೇಶ್ವರದ ಭಾರತ್ ಸಿನಿಮಾಸ್’ನಲ್ಲಿ ಒಂದು ಸ್ಕ್ರೀನ್ ವೆಚ್ಚವನ್ನು ಸಂಪೂರ್ಣವಾಗಿ ತಾವೇ ಭರಿಸಿ ಮಂಗಳವಾರ ಬೆಳಿಗ್ಗೆ 11:30ಕ್ಕೆ ಉಚಿತ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ದುಬೈನಲ್ಲಿ ಸಿನಿಮಾ ನೋಡಿದ್ದ ಅವರು ಕುಂದಾಪುರದಲ್ಲಿಯೂ ತನ್ನೂರಿನ ಜನತೆಗೆ ಸಿನಿಮಾ ತೋರಿಸುವ ಉದ್ದೇಶಕ್ಕಾಗಿ ಊರಿಗೆ ಬಂದು ಹಿರಿಯರೊಂದಿಗೆ ಬೆರೆತು ಸಂತೋಷಪಟ್ಟರು. ಸಿನಿಮಾಸ್’ನ 2ನೇ ಸ್ಕೀನ್ ಹೌಸ್ಪುಲ್ ಆಗಿತ್ತು. ಈ ಸಂದರ್ಭ ಮಾಧ್ಯಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹಕ್ಲಾಡಿ ಗ್ರಾಮದ ಕುಂದಬಾರಂದಾಡಿ ಕೋಳೂರು ಬಳಿ ಮಾಸ್ತಿ ಎಂಬುವವರ ಮನೆಯ ಆವರಣವಿಲ್ಲದ ಬಾವಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸೋಮವಾರ ರಕ್ಷಿಸಿದ್ದಾರೆ. ಹಿಂದಿನ ದಿನ ರಾತ್ರಿಯೇ ಚಿರತೆ ಬಾವಿಗೆ ಬಿದ್ದಿದ್ದು, ಸೋಮವಾರ ಬೆಳಗ್ಗೆ ಮನೆಯವರ ಗಮನಕ್ಕೆ ಬಂದಿದೆ. ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಬಾವಿಗೆ ಬೋನು ಇಳಿಬಿಟ್ಟು ಕಾರ್ಯಾಚರಣೆ ನಡೆಸಿ ಮೇಲೆತ್ತಿದ್ದಾರೆ. 4ರಿಂದ 5 ವರ್ಷದ ಹೆಣ್ಣು ಚಿರತೆ ಇದಾಗಿದೆ. ಕಾರ್ಯಾಚರಣೆಯಲ್ಲಿ ಕುಂದಾಪುರ ವಲಯ ಅರಣ್ಯಾಧಿಕಾರಿ ಟಿ. ಕಿರಣ್ಬಾಬು, ಆಲೂರು ಉಪ ವಲಯ ಅರಣ್ಯಾಧಿಕಾರಿ ದಿಲೀಪ್ ಕುಮಾರ್, ಜಡ್ಕಲ್ ಶಾಖೆ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಕುಮಾರ್, ಅರಣ್ಯ ರಕ್ಷಕ ಆನಂದ ಬಳೆಗಾರ, ರಮೇಶ, ಮಂಜುನಾಥ ಗಾಣಿಗ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು. ಕುಂದಬಾರಂದಾಡಿಯಲ್ಲಿ ಚಿರತೆ ಕಾಟದ ಬಗ್ಗೆ ಮಾಧ್ಯಮಗಳಲ್ಲಿ ಸರಣಿ ವರದಿಯಾಗಿತ್ತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ದಸರಾ ಕಲಾ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆಯಿತು. ಗುಜ್ಜಾಡಿಯ ಉದ್ಯಮಿ ಗಣಪತಿ ಮೇಸ್ತ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮನಾಥ ಚಿತ್ತಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಮುನಾ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಕೆ.ಗುಜ್ಜಾಡಿ, ಶಾಲಾ ಮುಖ್ಯೋಪಾಧ್ಯಾಯ ಆನಂದ ಜಿ. ಶುಭಾಶಂಸನೆಗೈದರು. ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ ಮೇಸ್ತ, ತುಂಗಾ ಪೂಜಾರ‍್ತಿ, ಸಂಪನ್ಮೂಲ ವ್ಯಕ್ತಿ ಸಿ.ಎನ್.ಬಿಲ್ಲವ, ಹಳೆ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷ ಎ.ಆರ್.ವಲಿವುಲ್ಲಾ ಮತ್ತಿತರರು ಉಪಸ್ಥಿತರಿದ್ದರು. ಪೂರ್ವ ಪ್ರಾಥಮಿಕ ಶಾಲೆ ಶಿಕ್ಷಕಿ ಶಯನಾ ಪ್ರಾರ್ಥನೆ ಹಾಡಿದರು. ಜೊತೆ ಕಾರ್ಯದರ್ಶಿ ರಾಘವೇಂದ್ರ ಡಿ. ಸ್ವಾಗತಿಸಿದರು. ಶ್ರೀಧರ ಮೇಸ್ತ ಕಾರ್ಯಕ್ರಮ ನಿರ್ವಹಿಸಿದರು.
