ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಐದು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು ಪ್ರತಿ ಗ್ರಾಮದಲ್ಲಿಯೂ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಸೇತುವೆ, ರಸ್ತೆ, ಬಂದರು, ಸಮುದ್ರ ತಡೆಗೋಡೆ, ಬ್ರೇಕ್ ವಾಟರ್ ಕಾಮಗಾರಿ, ಶಾಲಾ ಕಾಲೇಜು ಅಭಿವೃದ್ಧಿ, ನೀರಾವರಿ ಯೋಜನೆಗಳು ಸೇರಿದಂತೆ ಎಲ್ಲಾ ವಿಭಾಗದಲ್ಲಿಯೂ ಸುಮಾರು ೨,೦೦೦ ಕೋಟಿ ರೂ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಬೈಂದೂರನ್ನು ತಾಲೂಕನ್ನಾಗಿಸಿದ್ದು ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಅಭಿವೃದ್ಧಿಯ ದಾಖಲೆಯ ಜನರು ಅಭಿವೃದ್ಧಿ ಕಾರ್ಯವನ್ನು ಗುರುತಿಸಿ ಬೆಂಬಲಿಸಲಿದ್ದಾರೆ ಭರವಸೆಯಿದ್ದು, ಈ ಭಾರಿಯ ಚುನಾವಣೆಯಲ್ಲಿ ದಾಖಲೆಯ ಅಂತರದಿಂದ ಗೆಲುವ ಸಾಧಿಸುವ ವಿಶ್ವಾಸವಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಬೈಂದೂರು ಕಾಂಗ್ರೆಸ್ ಕಛೇರಿಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮೀನುಗಾರಿಕೆಗೆ ಅನುಕೂಲವಾಗುವಂತೆ ಗಂಗೊಳ್ಳಿ, ಶಿರೂರು ಕೊಡೇರಿ ಬ್ರೇಕ್ವಾಟರ್ ಕಾಮಗಾರಿ, ಸಮುದ್ರ ಕೊರೆತ ತಡೆಗಾಗಿ ಬಹುಪಾಲು ಕರಾವಳಿ ಭಾಗಗಳಲ್ಲಿ ಸಮುದ್ರ ಕೊರೆತ ಪ್ರತಿಬಂಧಕ ತಡೆಗೋಡೆ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಶೇ. 96.6 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 147 ವಿದ್ಯಾರ್ಥಿಗಳ ಪೈಕಿ 142 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಪೈಕಿ 26 ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ, 85 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 22 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಹಾಗೂ 9 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಯು.ಚೈತ್ರಾ ಶ್ಯಾನುಭಾಗ್ (588) ಅಂಕ ಗಳಿಸುವ ಮೂಲಕ ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಸ್ನೇಹಾ (579), ಸುಜನ್ (577), ಮಲಿಕ್ ನಾಯಕ್ (575), ಪ್ರಕಾಶ ಪೈ (568), ಶರತ್ ಎಲ್.ಪಿ.(೫೬೮), ಸುಪ್ರೀತಾ ಜಿ. (567), ಟಿ.ಅಶ್ಮಿತಾ ಶೆಣೈ (566), ಮನಿಲಾ (561), ಹೃತಿಕ್ (559), ಎಚ್.ಮಹಮ್ಮದ್ ಶಾದಾಬ್ (556), ಸಂಜಯ್ ಖಾರ್ವಿ (553), ನಿಖಿಲ್ ಖಾರ್ವಿ (547), ಧನುಶ್ರೀ (546), ಪ್ರೀತಿ ಖಾರ್ವಿ (539), ಮನೋಜ್ ಖಾರ್ವಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ದ್ವಿತೀಯ ಪಿಯುಸಿ ಪರೀಕ್ಷೆಗೆ ಆಳ್ವಾಸ್ ಪದವಿಪೂರ್ವ ಕಾಲೇಜಿನ 5825 ಮಂದಿ ಪರೀಕ್ಷೆ ಬರೆದಿದ್ದು 5764 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.98.95 ಫಲಿತಾಂಶ ದಾಖಲಾಗಿದೆ. ಶುಭಾಂಕರ್ ಚೌಗಲೆ 594 ಅಂಕಗಳೊಂದಿಗೆ ದ್ವಿತೀಯ ಸ್ಥಾನ, ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ನ ಚೇತನ್ ಪೈ 593 ಅಂಕದೊಂದಿಗೆ ರಾಜ್ಯಕ್ಕೆ ತೃತೀಯ ಸ್ಥಾನ ಹಾಗೂ ಲಕ್ಷ್ಮೀ ನಾರಾಯಣ ರೆಡ್ಡಿ 592 ಅಂಕದೊಂದಿಗೆ ರಾಜ್ಯಕ್ಕೆ ಚತುರ್ಥ ಸ್ಥಾನ ಮತ್ತು ಭರತ್ ಗಜಾನನ ಹೆಗಡೆ ಹಾಗೂ ಪೃಥ್ವೀ ಗಣಪತಿ ಹೆಗಡೆ 591 ಅಂಕ ಗಳಿಸಿ ರಾಜ್ಯಕ್ಕೆ 5ನೇ ಸ್ಥಾನವನ್ನು ಗಳಿಸಿಕೊಳ್ಳುವ ಜೊತೆಗೆ ಆಳ್ವಾಸ್ ರಾಜ್ಯದಲ್ಲಿಯೇ ವಾಣಿಜ್ಯ ವಿಭಾಗದಲ್ಲಿ ಒಟ್ಟು 5 ಸ್ಥಾನವನ್ನು ಪಡೆದುಕೊಂಡಿದೆ. ವಿಜ್ಞಾನ ವಿಭಾಗದಲ್ಲಿ ಮಿಲಿಷಾ ರೋಡ್ರಿಗಸ್ 593 ಅಂಕದೊಂದಿಗೆ ರಾಜ್ಯಕ್ಕೆ ಚತುರ್ಥ ಸ್ಥಾನ ಹಾಗೂ ವರ್ಷಿನಿ ಕೆ.ಎಸ್, ಹರೀಶ್ ಡಿ.ಜಿ, ಶ್ವೇತಾ ಹೆಗಡೆ ತಲಾ 592 ಅಂಕ ಗಳಿಸಿ ರಾಜ್ಯಕ್ಕೆ 5ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಟಾಪ್ ಹತ್ತರ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರ ತಾಲೂಕು ಕೋಟೇಶ್ವರದ ಬಾಂಡ್ಯಾ ಎಜ್ಯುಕೇಶನ್ ಟ್ರಸ್ಟ್ನ ಗುರುಕುಲ ಪದವಿ ಪೂರ್ವ ಕಾಲೇಜು 2017-18 ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದಿದೆ. 11 ಮಂದಿ ಉನ್ನತ ಶ್ರೇಣಿಯಲ್ಲಿ, 19 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಗುರುಕುಲ ಪದವಿ ಪೂರ್ವ ಕಾಲೇಜು ಈ ಬಾರಿ ವಾಣಿಜ್ಯ ವಿಭಾಗ ಶೇ.100 ಫಲಿತಾಂಶವನ್ನು ಹೊಂದಿದ್ದು, ವಿಜ್ಞಾನ ವಿಭಾಗವು ಶೇ.92 ಫಲಿತಾಂಶ ದಾಖಲಿಸಿದ್ದಾರೆ. ಹಾಗೆಯೇ ಗುರುಕುಲ ಪದವಿ ಪೂರ್ವ ಕಾಲೇಜು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಿದ್ದು, ಈ ತರಬೇತಿ ಪಡೆದ ವಿದ್ಯಾರ್ಥಿಗಳಲ್ಲಿ 5 ಮಂದಿ ‘JEE MAIN’ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಉತ್ತಮ ಸಾಧನೆ ಮಾಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಗುಜ್ಜಾಡಿ ಗ್ರಾಮದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರನ್ನು ಗ್ರಾಮದ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿಕೊಂಡದ್ದು ವಿಶೇಷವಾಗಿತ್ತು. ಗುಜ್ಜಾಡಿ ಭಾಗದಲ್ಲಿ ಪ್ರಚಾರ ಸಂದರ್ಭ ತಾಪಂ ಸದಸ್ಯ ರಾಜು ದೇವಾಡಿಗ, ರಾಜು ಪೂಜಾರಿ, ತಮ್ಮಯ್ಯ ದೇವಾಡಿಗ, ಯುತ್ ಕಾಂಗ್ರೆಸ್ನ ಸತೀಶ್ ದೇವಾಡಿಗ ಮೊದಲಾದವರು ಜೊತೆಗಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜೀವನದಲ್ಲಿ ನಿರಂತರ ಉತ್ಸಾಹ, ಧನತ್ಮಕವಾದ ಚಿಂತನೆಗಳಿದ್ದರೆ. ಅಂತಹವರಿಗೆ ದೇವರ ಸಹಾಯವಿರುತ್ತದೆ. ಆದ್ದರಿಂದ ಯುವಜನತೆ ಸಮಾಜದ ಹಾಗೂ ಊರಿನ ಅಭಿವೃದ್ಧಿಯ ಪರ ದಿಕ್ಕು ಬದಲಾಯಿಸುವ ಉದ್ದೇಶದಿಂದ ಯಾವುದೇ ಉದ್ಯಮ, ವ್ಯವಹಾರ ಮಾಡುವಂತಾಗಲು ಧೈರ್ಯದಿಂದ ಮುಂದುವರಿದಾಗ ಮಾತ್ರ ಖಂಡಿತವಾಗಿಯೂ ಯಶಸ್ಸು ದೊರಕುವುದು ಎಂದು ನಿವೃತ್ತ ಬ್ರಿಗೇಡಿಯರ್ ಮಂಗಳೂರಿನ ಐ. ಎನ್. ರೈ ಹೇಳಿದರು. ಬೈಂದೂರು ಶ್ರೀ ಮೂಕಾಂಬಿಕಾ ರೈಲ್ವೆ ನಿಲ್ದಾಣದ ಬಳಿ ನೂತನವಾಗಿ ನಿರ್ಮಾಣಗೊಂಡ ಹೊಟೇಲ್ ಅಂಬಿಕಾ ಇಂಟರ್ನ್ಯಾಶನಲ್ ಹೋಟೆಲನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ೩೪ವರ್ಷಗಳ ಕಾಲ ನನ್ನನ್ನು ದೇಶಕ್ಕಾಗಿ ಸಮರ್ಪಣೆ ಮಾಡಿಕೊಂಡಿದ್ದೇನೆ. ಸಮಾಜದಲ್ಲಿ ಉತ್ತಮ ಕೆಲಸ ಮಾಡಿದವರಿಗೆ ಮನ್ನಣೆ ದೊರೆಯುತ್ತದೆ ಎನ್ನುವುದಕ್ಕೆ ಇದು ಉತ್ತಮ ನಿದರ್ಶನವಾಗಿದೆ. ದೇಶದ ಲಕ್ಷಾಂತರ ಸೈನಿಕರ ಆಶೀರ್ವಾದ ಈ ಹೊಟೇಲ್ ಮೇಲಿರಲಿದೆ ಎಂದು ಶುಭಹಾರೈಸಿದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ಹೋಟೆಲ್ನ ಸಂಪೂರ್ಣ ಹವಾನಿಯಂತ್ರಿತ ಶಾರದಾ ಕನ್ವೆನ್ಸನ್ ಹಾಲ್ ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ವೆಂಕಟರಮಣ ಪಿಯು ಕಾಲೇಜ್ ಪಿಸಿಎಂಸಿ ವಿದ್ಯಾರ್ಥಿನಿ ಸತ್ಯಶ್ರೀ ರಾವ್ ವಿಜ್ಞಾನ ವಿಭಾಗದಲ್ಲಿ ಒಟ್ಟು 593ಅಂಕ ಪಡೆದ ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದು ಉತ್ತೀರ್ಣಳಾಗಿದ್ದಾಳೆ. ಇಂಗ್ಲೀಷ್ನಲ್ಲಿ 93 ಅಂಕ ಬಿಟ್ಟರೆ ಉಳಿದಿದ್ದರಲ್ಲಿ ನೂರರ ಸಾಧನೆ. ವಿಶೇಷವೆಂದರೆ ಯಾವ ಶಾಲೆಯಲ್ಲಿ ತಂದೆ ಚಾಲಕರಾಗಿ ದುಡ್ಡಿಯುತ್ತಿದ್ದರೋ ಅದೇ ಶಾಲೆಯಲ್ಲಿ ಕಲಿತ ಮಗಳು ರಾಜ್ಯಕ್ಕೆ ನಾಲ್ಕನೇ ಟಾಪರ್ ಆಗಿದ್ದಾರೆ. ಕುಂದಾಪುರ ಅಂಕದಕಟ್ಟೆ ನಾಗೇಶ್ ರಾವ್ ಹಾಗೂ ಲಲಿತಾ ಎನ್.ರಾವ್ ಇಬ್ಬರು ಹೆಣ್ಣು ಮಕ್ಕಳಲ್ಲಿ ಸತ್ಯಾಶ್ರೀ ಎರಡನೆಯವಳು. ಪ್ರತಿಭಾವಂತ ವಿದ್ಯಾರ್ಥಿನಿ ಅಕ್ಕ ಶೈಲಶ್ರೀ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜ್ ಬಿಎಸ್ಸಿ ವಿದ್ಯಾರ್ಥಿನಿ. ಕುಂದಾಪ್ರ ಡಾಟ್ ಕಾಂಗೆ ಸತ್ಯಾಶ್ರೀ ಪ್ರತಿಯಿಸಿ ದಿನಕ್ಕೆ ಮೂರು ಗಂಟೆ ಓದುತ್ತಿದ್ದು, ಓದಲಿಕ್ಕಾಗಿಯೇ ಸಮಯ ನಿಗಧಿ ಮಾಡಿಕೊಳ್ಳುತ್ತಿರಲಿಲ್ಲ. ಮನೆಯಲ್ಲಿ ಕೂಡಾ ಓದುವಂತೆ ಒತ್ತಡ ಹೇರುತ್ತಿರಲಿಲ್ಲ. ಓದಿನೊಟ್ಟಿಗೆ ತ್ರೋ ಬಾಲ್ ಹಾಗೂ ಡಾನ್ಸ್ ಬಗ್ಗೆಯೂ ಗಮನ ಹರಿಸುತ್ತಿದ್ದೆ. ಇನ್ನೂ ಒಂದೆರಡು ಹೆಚ್ಚು ಅಂಕ ನೀರೀಕ್ಷಿಸಿದ್ದು, ಅಂಗ್ಲಾ ಭಾಷೆಯಲ್ಲಿ ನಾನು ಎಣಿಸಿದ್ದಕ್ಕಿಂತ ಕಡಿಮೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಆರ್.ಎನ್.ಶೆಟ್ಟಿ ಪಿಯು ಕಾಲೇಜಿನ ವಿದ್ಯಾರ್ಥಿ ವೆಂಕಟೇಶ್ ಪುರಾಣಿಕ್ ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದಲ್ಲಿ 600ಕ್ಕೆ 593 ಅಂಕ ಪಡೆದು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿದ್ದಾನೆ. ಸ್ಟ್ಯಾಟ್-100, ಎಕನಾಮಿಕ್ಸ್-99, ಬಿಜಿನೆಸ್-100, ಅಕೌಂಟೆನ್ಸಿ-100, ಸಂಸ್ಕೃತ100 ಹಾಗೂ ಇಂಗ್ಲೀಷ್ 96 ರಷ್ಟು ಅಂಕ ಪಡೆದುಕೊಂಡಿದ್ದಾನೆ. ಕುಂದಾಪುರ ತಾಲೂಕು ಬಸ್ರೂರು ಮಾರ್ಗೋಳಿ ಸುಬ್ರಹ್ಮಣ್ಯ ಪುರಾಣಿಕ ಹಾಗೂ ಅನ್ನಪೂರ್ಣ ಪುರಾಣಿಕ್ ಇಬ್ಬರು ಮಕ್ಕಳಲ್ಲಿ ವೆಂಕಟೇಶ್ ಹಿರಿಯ ಮಗ. ತಂಗಿ ವೈಷ್ಣವಿ ಬಸ್ರೂರು ಸರ್ಕಾರಿ ಪ್ರೌಢಶಾಲೆಯಲ್ಲಿ ೮ನೇ ತರಗತಿ ವಿದ್ಯಾರ್ಥಿ. ಬಸ್ರೂರು ಸರ್ಕಾರಿ ಪೌಢಶಾಲೆಯಲ್ಲಿ ಎಸ್ಎಸ್ಎಲ್ಸಿಯಲ್ಲಿ 625ಕ್ಕೆ 622 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಪಾಸಾಗಿದ್ದು ವೆಂಕಟೇಶ್ ಹಿಂದಿನ ಸಾಧನೆ. ಕುಂದಾಪ್ರ ಡಾಟ್ ಕಾಂಗೆ ವೆಂಕಟೇಶ್ ಪ್ರತಿಕ್ರಿಯಿಸಿ ದಿನಕ್ಕೆ ಮೂರು ಗಂಟೆ ಓದ್ತೆ. ಮನೆಯಲ್ಲಿ ಪೂಜೆ ಪುನಸ್ಕಾರ ಮಾಡಿ ಶಾಲೆಗೆ ಹೋತೆ. ಪ್ರಬಂಧ, ಕ್ವಿಜ್ ನಂಗೆ ತುಂಬಾ ಇಷ್ಟ ಆತ್ತೂ.. ಓದೂಕೆ ಅಂತ ಹಟಕ್ಕೆ ಬಿದ್ ಓತ್ತಿಲ್ಲೆ.. ಶಾಲೀಲಿ ಮಾಸ್ತರು ಹೇಳಿದ್ದೇ ಸಾಕಾತ್ತು..…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಆರ್.ಎನ್.ಶೆಟ್ಟಿ ಪಿಯು ಕಾಲೇಜ್ ವಿದ್ಯಾರ್ಥಿ ವಿವೇಕ್ ಗಿರಿಧರ ಪೈ ಹೆಚ್. ವಿಜ್ಞಾನ ವಿಭಾಗದಲ್ಲಿ ಒಟ್ಟು 590 ಅಂಕ ಪಡೆದ ಪಾಸಾಗಿದ್ದಾರೆ. ಮಂಗಳೂರು ಕೆಎಸ್ಸಾಆರ್ಟಿಸಿ ಡಿಪೋದಲ್ಲಿ ಅಧಿಕಾರಿಯಾಗಿರುವ ಗಿರಿಧರ ಪೈ ಹೆಚ್. ಹಾಗೂ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜ್ ಹೆಚ್ಒಡಿ ಹೆಡ್ ಗಾಯತ್ರಿ ಪೈ ಏಕೈಕ ಪುತ್ರ ಗಿರಿಧರ್ ಒಟ್ಟು 595ರಷ್ಟು ಅಂಕ ನೀರೀಕ್ಷಿಸಿದ್ದು, ನಿರೀಕ್ಷಿತ ಅಂಕ ಬಾರದ ಬಗ್ಗೆ ನಿರಾಸೆಯೇನು ಇಲ್ಲ. ಮುಂದೆ ಎಂಬಿಬಿಎಸ್ ಮಾಡಿ ಡಾಕ್ಟರ್ ಆಗಬೇಕು ಎನ್ನೋದು ನನ್ನ ಗುರು ಎಂದು ವಿಜಯವಾಣಿ ತಿಳಿಸಿದ್ದಾನೆ. ಓದಿನೊಟ್ಟಿಗೆ ಕ್ರಿಕೆಟ್ ಹಾಗೂ ಫುಟ್ಬಾಲ್ ಕ್ರೀಡೆ ಬಗ್ಗೆ ಆಸಕ್ತಿ ಇರುವ ವಿವೇಕ್ ಎಸ್ಸೆಸ್ಎಲ್ಸಿಯಲ್ಲಿ ಒಟ್ಟು 622 ಅಂಕ ಪಡೆದು ಉತ್ತೀರ್ಣರಾಗಿದ್ದ. ಮಗನ ಸಾಧನೆ ಬಗ್ಗೆ ತಂದೆ ಗಿರಿಧರ್ ಹಾಗೂ ತಾಯಿ ಗಾಯತ್ರಿ ಅವರಿಗೆ ತೃಪ್ತಿಯಿದ್ದು, ಮುಂದಿನ ಆಯ್ಕೆ ಅವನಿಗೆ ಬಿಟ್ಟಿದ್ದು ಎಂದು ಅವರು ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಂದಿನ ತಂತ್ರಜ್ಞಾನ ಯುಗದಲ್ಲಿ ಶಾಂತಿಯುತವಾದ ಹಾಗೂ ಅಹಿಂಸಾ ನೀತಿಯ ಮೌಲ್ಯಾಧಾರಿತ ಜೀವನಶೈಲಿ ವಿರಳವಾಗಿದ್ದು, ಯುವಜನತೆ ಸೋಷಿಯಲ್ ಮೀಡಿಯಾದ ಹೆಚ್ಚು ಉಪಯೋಗದಿಂದ ಸಾಮಾಜಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿವಂದನೀಯ ಲಾರೆನ್ಸ್ ಮುಕ್ಕುಯಿ ಹೇಳಿದರು. ಬೈಂದೂರು ಗ್ರಾಪಂ ವ್ಯಾಪ್ತಿಯ ಕಲ್ಮಕ್ಕಿಯಲ್ಲಿ ನೂತನ ನಿರ್ಮಾಣದ ಸಂತ ಸೆಬಾಸ್ಟಿಯನ್ ಸಮದಾಯ ಭವನವನ್ನು ಭಾನುವಾರ ಸಂಜೆ ಉದ್ಘಾಟಿಸಿ ಆಶೀರ್ವಚನ ನೀಡಿದರು. ಸಮಾಜದಲ್ಲಿ ತಮ್ಮ ಮಕ್ಕಳಿಗೆ ಕೇವಲ ಶಿಕ್ಷಣ ಹಾಗೂ ಉತ್ತಮ ಉದ್ಯೋಗದ ಬಗ್ಗೆ ಮಾತ್ರ ಹೆತ್ತವರು ಕಾಳಜಿವಹಿಸುತ್ತಾರೆ. ಆದರೆ ಜೀವನದ ಸಾರ್ಥಕತೆ ಕುರಿತು ಯಾರಲ್ಲೂ ಚಿಂತನೆ ಇಲ್ಲ. ನಿರ್ದಿಷ್ಟವಾದ ಗುರಿ, ಚೌಕಟ್ಟು ಬದುಕಿಗೆ ಇಲ್ಲವಾದರೆ ಜೀವನದ ಅರ್ಥವೇ ಕೆಟ್ಟು ಹೋಗುತ್ತದೆ. ಯೇಸುಕ್ರಿಸ್ತರ ಭೋಧನೆಯಂತೆ ಮನುಷ್ಯ ಮನುಷ್ಯರ ನಡುವೆ ಬಾಂದ್ಯವ ವೃದ್ಧಿಸಬೇಕು. ಪ್ರೀತಿ ವಿಶ್ವಾಸಗಳಿಂದ ಬಾಳಬೇಕು. ಇಂತಹ ಸೌಹಾರ್ದತೆ ಪರಿಸರ ನಿರ್ಮಾಣವಾದಾಗ ಮಾತ್ರ ಮಕ್ಕಳು ಕೂಡಾ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಾಧ್ಯವಿದೆ ಎಂದರು. ರೆ. ಫಾ. ಜೋಜಿ…
