ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸೋಮವಾರ ತಾಲೂಕು ಪಂಚಾಯತ್ ಅನುದಾನದಡಿಯಲ್ಲಿ ಬೈಂದೂರು ತಾಲೂಕು ಪಂಚಾಯತ್ ಸದಸ್ಯೆ ಮಾಲಿನಿ ಕೆ. ಅವರ ಕಾರ್ಯವ್ಯಾಪ್ತಿಯ ಬೈಂದೂರು ಗ್ರಾಮ ಪಂಚಾಯತ್ನ ವಿವಿಧೆಡೆಗಳಲ್ಲಿ ಅಳವಡಿಸಲಾದ ಸೋಲಾರ್ ದೀಪಗಳಿಗೆ ಚಾಲನೆ ನೀಡಲಾಯಿತು. ಈ ಸಂದರ್ಭ ಬೈಂದೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಭಾಸ್ಕರ ನಾಯ್ಕ್, ಬಾಲಕೃಷ್ಣ ಶೆಟ್ಟಿ, ಭಾಗೀರಥಿ ಮೊದಲಾದವರು ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಡಾ. ಪಾರ್ವತಿ ಜಿ.ಐತಾಳ್ | ಕುಂದಾಪ್ರ ಡಾಟ್ ಕಾಂ ಲೇಖನ ಭಾರತೀಯ ಸಂಗೀತ ಕಲಾ ಪರಂಪರೆಗೆ ಜಗತ್ತಿನಲ್ಲಿ ಅದರದ್ದೇ ಆದ ಅನನ್ಯತೆಯಿದೆ. ಭಾವಪೂರ್ಣ ಸೊಬಗನ್ನು ಹೊಂದಿದ ಅದು ಕೇಳುಗನನ್ನು ದೈವೀಕವಾದ ಆತ್ಮಾನಂದದತ್ತ ಕರೆದೊಯ್ಯುವ ಶಕ್ತಿಯನ್ನು ಹೊಂದಿದೆ. ಅದನ್ನು ಕೇಳಿ ಆನಂದಿಸಬೇಕಾದರೆ ಸುಸಂಸ್ಕೃತವಾದ ಒಂದು ಮನಸ್ಸು ಬೇಕು. ಆದರೆ ಇಂದಿನ ವೇಗದ ಯುಗದಲ್ಲಿ ನಮ್ಮ ಈ ಶ್ರೀಮಂತ ಪರಂಪರೆಯ ಬಗ್ಗೆ ಗಮನ ಹರಿಸದೆ, ಮನಸ್ಸನ್ನು ಉದ್ರೇಕಗೊಳಿಸುವ ಉನ್ಮಾದಪೂರ್ಣ ಪಾಶ್ಚಾತ್ಯ ಜನಪ್ರಿಯ ಸಂಗೀತವನ್ನು ಅಳವಡಿಸಿಕೊಂಡ ಗೀತೆಗಳನ್ನು ಕೇಳುವ ಹುಚ್ಚನ್ನು ಬೆಳೆಸಿಕೊಂಡ ಜನರನ್ನು ನಾವು ನೋಡುತ್ತೇವೆ. ಕುಂದಾಪುರದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತದ ಬಗ್ಗೆ ಒಲವುಳ್ಳ ವಾತಾವರಣ ಇಲ್ಲದಿರುವುದನ್ನು ಮನಗಂಡ ಅನೇಕ ಸಂಸ್ಥೆಗಳು ಅದನ್ನು ಪ್ರೋತ್ಸಾಹಿಸಲು ಈ ಹಿಂದೆಯೂ ಪ್ರಯತ್ನಿಸಿದ್ದಿದೆಯಾದರೂ ಇನ್ನೂ ಅದು ಸಾಕಷ್ಟು ಪುಷ್ಟಿಗೊಂಡಿಲ್ಲವೆಂಬ ಕಾರಣಕ್ಕೆ ಕೋಟೇಶ್ವರದ ಶಾಂತಿಧಾಮ ಟ್ರಸ್ಟ್(ರಿ) ಇವರು ಕುಂದಾಪುರದ ಸಂಗೀತ ಭಾರತಿ ಟ್ರಸ್ಟ್,(ರಿ), ಸಾಧನಾ ಕಲಾ ಸಂಗಮ (ರಿ), ಕಲಾಕ್ಷೇತ್ರ ಮತ್ತು ನಾಟ್ಯಚಂದ್ರಿಕಾ ಎಂಬ ಇತರ ನಾಲ್ಕು ಸಂಸ್ಥೆಗಳ ಸಹಯೋಗದೊಂದಿಗೆ ಶಾಂತಿಧಾಮ…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಉಡುಪಿ ಜಿಲ್ಲಾ ಉತ್ತಮ ಆಶಾ ಕಾರ್ಯಕರ್ತೆ ಪ್ರಶಸ್ತಿ ವಿಜೇತ ಗಂಗೊಳ್ಳಿಯ ಕಲ್ಪನಾ ಯಾನೆ ಜ್ಯೋತಿ ಶೇರುಗಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಂಗೊಳ್ಳಿಯ ಶ್ರೀ ವೀರೇಶ್ವರ ಮಾಂಗಲ್ಯ ಮಂದಿರದಲ್ಲಿ ಗುರುವಾರ ಜರಗಿದ ಗಂಗೊಳ್ಳಿ ಗ್ರಾಮ ಪಂಚಾಯತ್ನ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆಯಲ್ಲಿ ಅವರನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್ ಸನ್ಮಾನಿಸಿ ಗೌರವಿಸಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೀತಾರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಅಂಜಲಿ ಹುಂಡೇಕರ್, ಗ್ರಾಪಂ ಸದಸ್ಯ, ಮಕ್ಕಳ ಮಿತ್ರ ಬಿ.ಲಕ್ಷ್ಮೀಕಾಂತ ಮಡಿವಾಳ, ಅಂಗನವಾಡಿ ಕಾರ್ಯಕರ್ತೆ ಹಾಗೂ ಮಹಿಳಾ ಮಿತ್ರ ಫಿಲೋಮಿನಾ ಫೆರ್ನಾಂಡಿಸ್, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸವಿತಾ ಶೆಟ್ಟಿ, ಆರೋಗ್ಯ ಇಲಾಖೆಯ ಕಿರಿಯ ಸಹಾಯಕಿ ಅರ್ಪಿತಾ, ಗ್ರಾಪಂ ಸದಸ್ಯರಾದ ಅಬ್ದುಲ್ ಹಾದಿ, ಸರೋಜಿನಿ ಕೋಡಿಕಾರ್, ಶಾರದಾ ಶೇರುಗಾರ್, ರೋಜಿ ಫೆರ್ನಾಂಡಿಸ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ.ಮಾಧವ, ನಮ್ಮ ಭೂಮಿ ಸಂಸ್ಥೆಯ ಶಾರದಾ,…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸರ್ವರಿಗೂ ಸಮಬಾಳು, ಸಮಪಾಲು ಸಿದ್ದಾಂತದ ಸಂವಿಧಾನವನ್ನು ನೀಡುವ ಮೂಲಕ ದೇಶದ ಜನರ ಜೀವನಮಟ್ಟವನ್ನು ಉನ್ನತಿಗೇರಿಸಿದ ಕೀರ್ತಿ ಕಾಂಗ್ರೆಸ್ ಪಕ್ಷದ್ದಾಗಿದೆ. ಇಂದಿರಾಜಿಯವರ ೨೦ ಅಂಶದ ಕಾರ್ಯಕ್ರಮದ ಮೂಲಕ ಶಿಕ್ಷಣ, ಆರೋಗ್ಯ, ವಿಜ್ಞಾನ, ಬ್ಯಾಂಕಿಂಗ್, ಕೃಷಿ ಮುಂತಾದ ಕ್ಷೇತ್ರಗಳಿಗೆ ಪ್ರಾಧಾನ್ಯತೆ ನೀಡುವ ಮೂಲಕ ವಿಶ್ವದ ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ನಮ್ಮ ಭಾರತ ದೇಶವು ಮುಂಚೂಣಿಯ ಸ್ಥಾನಕ್ಕೇರಲು ಸಾಧ್ಯವಾಯಿತು. ಕಾಂಗ್ರೆಸ್ ಎಂದರೆ ಅದು ಕೇವಲ ಪಕ್ಷವಲ್ಲ. ಅದು ಅಭಿವೃದ್ಧಿಯ ಸಂಕೇತವಾಗಿದೆ ಎಂದು ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ ಹೇಳಿದ್ದಾರೆ. ಅವರು ಶನಿವಾರ ಸಂಜೆ ಬಳ್ಕೂರಿನಲ್ಲಿ ನಡೆದ ಬಸ್ರೂರು ತಾ.ಪಂ.ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ನಾನು ಕುಂದಾಪುರ ವಿಧಾನಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾಗಿದ್ದು ಪಕ್ಷದ ನಾಯಕರುಗಳ ನಿರ್ದೇಶನದ ಮೇರೆಗೆ ಕ್ಷೇತ್ರದಾದ್ಯಂತ ಪಕ್ಷದ ಕಾರ್ಯಕರ್ತರ ಸಭೆಗಳಲ್ಲಿ ಭಾಗವಹಿಸುತ್ತಿದ್ದೇನೆ. ಆ ಮೂಲಕ ಈ ಕ್ಷೇತ್ರದ ರೈತರ ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಅರಿತಿದ್ದೇನೆ. ದಯವಿಟ್ಟು ಈ ಬಾರಿ ನನ್ನನ್ನು ಬೆಂಬಲಿಸುವ ಮೂಲಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಧುಮೇಹದಂತಹ ರೋಗ ಉಲ್ಬಣದಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಎಸ್ಸಿಡಿ ಚಿಕಿತ್ಸಾಲಯವು ಕಾರ್ಯೋನ್ಮಕವಾಗಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಮುಂದಾಗಬಹುದಾದ ಅಪಾಯದಿಂದ ಪಾರಾಗಬಹುದಾಗಿದೆ ಎಂದು ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ಪ್ರಶಾಂತ್ ಭಟ್ ಹೇಳಿದರು. ಶನಿವಾರ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಸರ್ವೇಕ್ಷಣ ಘಟಕ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಬೈಂದೂರು, ಎಸ್.ಸಿ.ಡಿ ಚಿಕಿತ್ಸಾಲಯ ಬೈಂದೂರು, ವಿಶ್ವ ಮಧುಮೇಹ ಪ್ರತಿಷ್ಠಾನ ಹಾಗೂ ರೋಟರಿ ಕ್ಲಬ್ ಬೈಂದೂರು ಇವರ ಜಂಟಿ ಆಶ್ರಯದಲ್ಲಿ ಜರುಗಿದ ಮಧುಮೇಹ ರಕ್ತ ಪರೀಕ್ಷೆ, ರಕ್ತದೋತ್ತಡ ಮತ್ತು ಮಧುಮೇಹಿಗಳಿಗೆ ಪಾದಗಳ ತಪಾಸಣಾ ಶಿಬಿರದಲ್ಲಿ ಮಾಹಿತಿ ನೀಡಿದರು. ಸಾಂಕ್ರಾಮಿಕವಲ್ಲದ ಕಾಯಿಲೆಯನ್ನು ಶೀಘ್ರ ಪತ್ತೆಮಾಡಿ ಸೂಕ್ತ ಚಿಕಿತ್ಸೆಯ ಮೂಲಕ ಗುಣಮುಖರನ್ನಾಗಿಸುವ ಉದ್ದೇಶದಿಂದ ಬೈಂದೂರು ಭಾಗದಲ್ಲಿ ಎರಡನೇ ಭಾರಿಗೆ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದರು. ಬೈಂದೂರು ರೋಟರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಡೊಂಬಿವಲಿ: ಕೇವಲ 30, 40 ವರ್ಷಗಳ ಹಿಂದೆ ಮನೆಯಲ್ಲಿ ಉಪಯೋಗಿಸುತ್ತಿದ್ದ ಪಾತ್ರೆಗಳಾದ ಕೊಡಪಾನ , ತಂಬಿಗೆ, ಹರಿವಾಣ ತಟ್ಟೆ , ಚಮಚ , ದೀಪ, ಮೂರ್ತಿ ಇತ್ಯಾದಿಗಳು ಈಗ ಕಣ್ಮರೆ ಆಗುತ್ತಿದೆ. ಆ ಜಾಗದಲ್ಲಿ ಅಲ್ಯೂಮಿನಿಯಂ, ಸ್ಟೀಲ್ ಪಾತ್ರೆ , ಮಿಕ್ಸರ್, ಹೀಟರ್, ಕುಕ್ಕರ್ ಮೊದಲಾದ ಉಪಕರಣಗಳು ಹೆಚ್ಚಾಗುತ್ತಿದೆ. ಹಳೆಯ ಪರಿಕರಗಳಿಗೆ ಜಾಗವಿಲ್ಲವೆಂದು ಅವುಗಳನ್ನು ಅತ್ಯಲ್ಪ ಕಡಿಮೆ ಕ್ರಯಕ್ಕೆ ಮಾರಾಟ ಮಾಡುತ್ತಿದ್ದೇವೆ. ಆದರೆ ಅವುಗಳು ನಮ್ಮ ಜೀವನ ರೀತಿ , ಸಂಸ್ಕೃತಿ , ಜಾನಪದವನ್ನು ಎತ್ತಿ ತೋರಿಸುತ್ತದೆ ಎಂಬುದನ್ನು ಮರೆತಿದ್ದೇವೆ. ಆದರೂ ಕಾಲ ಮಿಂಚಿಲ್ಲ. ಇನ್ನಾದರೂ ಇಂತಹ ವಸ್ತುಗಳನ್ನು ಉಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಾಧ್ಯಾಪಕರಾದ ವೆಂಕಟೇಶ ಪೈ ಡೊಂಬಿವಲಿಯ ಗೆಳೆಯರ ಸ್ವಾವಲಂಬನಾ ಕೇಂದ್ರದ ಕಚೇರಿಯಲ್ಲಿ ಇಂತಹ ವಸ್ತುಗಳನ್ನು ಸಂಗ್ರಹ ಮಾಡಲು ಪ್ರಾರಂಭಿಸಿದ್ದಾರೆ. ಚಿಕ್ಕಂದಿನಲ್ಲಿಯೇ ಹಳೆಯ ನಾಣ್ಯ, ಸ್ಟಾಂಪ್, ವಿವಿಧ ಪ್ರಕಾರದ ಡಬ್ಬಿ, ಮಾಪನ ಮಾಡುವ ಸೇರು ಹಾಗೂ ಅಚ್ಚೇರುಗಳು ಇವರ ಸಂಗ್ರಹದಲ್ಲಿವೆ. ಎಲ್ಲರೂ ತಮ್ಮ ತಮ್ಮ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ಯಡ್ತರೆ ಗ್ರಾ. ಪಂ. ನ ಹೊಸೂರು ವ್ಯಾಪ್ತಿಯ ಮುಲ್ಲಿಬಾರು ಸ.ಹಿಪ್ರಾಶಾಲೆಯಲ್ಲಿ ಜ್ಞಾನ ಸಂವಹನ ಕಾರ್ಯಕ್ರಮ ಜರುಗಿತು. ಈ ಸಂದರ್ಭ ವಿಶೇಷ ಆಹ್ವಾನಿತರಾಗಿ ರೀಡ್ ಸಂಸ್ಥೆಯ ಸಂಸ್ಥಾಪಕ ಮಂಜುನಾಥ ಗಾಣಿಗರವರು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದು, ಪ್ರಸ್ತುತ ಗ್ರಾಮೀಣ ಭಾಗದ ಪ್ರತಿಭಾನ್ವಿತ ಮಕ್ಕಳ ಪ್ರತಿಭೆಯು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಪ್ರಚುರಪಡಿಸಬೇಕು ಹಾಗೂ ಅದರ ಹಿಂದಿನ ಶ್ರಮ ಮತ್ತು ಕಾರ್ಯ ವೈಖರಿಯ ಬಗ್ಗೆ ತಿಳಿಸುತ್ತಾ ಆ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಮುಲ್ಲಿಬಾರು ಶಾಲೆಯ ವಿದ್ಯಾರ್ಥಿಗಳು ಕಾರ್ಯ ಪ್ರವೃತ್ತರಾಗಬೇಕು, ಆದಿಸೆಯಲ್ಲಿ ಉಪಗ್ರಹ ಆಧಾರಿತ ಕಲಿಕೆಗೆ ಸಂಬಂಧಿಸಿದಂತೆ ತಮ್ಮ ರೀಡ್ ಸಂಸ್ಥೆಯ ಮೂಲಕ ಹೆಚ್ಚಿನ ಸೌಕರ್ಯ ನೀಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಸ್ವಾಮೀ ವಿವೇಕಾನಂದರ ವಿದ್ಯುತ್ ವಾಣಿ ಯನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದರು. ಈ ಸಂದರ್ಭದಲ್ಲಿ ಪಾಲಕರ ಪ್ರತಿನಿಧಿ ಸರಸ್ವತಿ ಮರಾಠಿ ಎಸ್ಡಿಎಮ್ಸಿ ಉಪಾಧ್ಯಕ್ಷೆ ಸಾವಿತ್ರಿ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಅಧ್ಯಕ್ಷೆ ಚಂದ್ರ ಪೂಜಾರಿ ಅಧ್ಯಕ್ಷತೆಯನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೇಸ್- ಬಿಜೆಪಿ ಒಂದು ನಾಣ್ಯದ ಎರಡು ಮೂಖಗಳಿದ್ದಂತೆ ಅವರು ಆರೋಪ ಪ್ರತ್ಯಾರೋಪದಲ್ಲಿಯೂ ದಿನಕಳೆಯುತ್ತಿದೆ. ಜನರ ಬಗ್ಗೆ ಕಾಳಜಿ ಇಲ್ಲ ರಾಜ್ಯದ ಹಿತಕ್ಕಿಂತ ಪಕ್ಷಗಳ ಅಸ್ಥಿತ್ವವೇ ಅವರಿಗೆ ಮುಖ್ಯವಾಗಿದ್ದು ರಾಜ್ಯದ ಜನತೆಯ ಕಣ್ಣೋರಿಸುವ ಕೆಲಸವಾಗುತ್ತಿದ್ದು ಜನತೆ ಭ್ರಮೆ ನಿರಸನಗೊಂಡಿದ್ದಾರೆ. ಎಂದು ಜೆಡಿಎಸ್ ಪಕ್ಷದ ಜಿಲಾಧ್ಯಕ್ಷ ಯೋಗೀಶ್ ಶೆಟ್ಟಿ ಹೇಳಿದರು. ಅವರು ಉಪ್ಪುಂದ ಶಂಕರಕಲಾಮಂದಿರ ಸಮೃಧ್ಧಿ ಸಭಾ ಭವನ ಬೈಂದೂರು ಬ್ಲಾಕ್ ಜೆಡಿಎಸ್ ಪಕ್ಷದ ಪದಾಧಿಕಾರಿಗಳ ಮತ್ತು ಪ್ರಮುಖ ಕಾರ್ಯಕರ್ತರ ವಿಧಾನ ಸಭಾ ಚುನಾವಣೆಯ ಪೂರ್ವ ಸಿದ್ದತಾ ಸಭೆಯಲ್ಲಿ ಮಾತನಾಡಿ ಜೆಡಿಎಸ್ ಪಕ್ಷವು ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದೆ. ಅದಕ್ಕಾಗಿಯೇ ಪ್ರಣಾಳಿಕೆಯಲ್ಲಿ ರೈತರ, ಮೀನುಗಾರರ, ನೌಕರರ ಸಂಪೂರ್ಣ ಸಾಲ ಮನ್ನಾ ಮಾಡುವ ಘೋಷಣೆಯೊಂದಿಗೆ ಹಲವಾರು ಜನಪರ ಯೋಜನೆಗಳನ್ನು ಪೋಷಿಸಿದ್ದಾರೆ. ಅದಕ್ಕಾಗಿ ೨ ರಾಷ್ಟ್ರೀಯ ಪಕ್ಷಗಳನ್ನು ಅಧಿಕಾರದಿಂದ ದೂರವಿಡಲು ಇಂದು ಸಕಾಲವೆಂದು ಹೇಳಿದರು. ವೇದಿಕೆಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ ಅಲ್ಪಸಂಖ್ಯಾತರ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಮೆಸ್ಕಾಂ ಉಪವಿಭಾಗ ವ್ಯಾಪ್ತಿಯಲ್ಲಿ ಸುಮಾರು 9 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕೊಲ್ಲೂರು ಶಾಖೆಯ 33/11 ಕೆವಿ ಉಪಕೇಂದ್ರ ರಚನೆಗೆ ಗೋಳಿಹೊಳೆ ಗ್ರಾಪಂ ವ್ಯಾಪ್ತಿಯ ಎಲ್ಲೂರಿನಲ್ಲಿ ಶುಕ್ರವಾರ ಕೆಎಸ್ಆರ್ಟಿಸಿ ನಿಗಮದ ಅಧ್ಯಕ್ಷ, ಶಾಸಕ ಕೆ. ಗೋಪಾಲ ಪೂಜಾರಿ ಶಿಲಾನ್ಯಾಸ ಮಾಡಿದರು. ನಂತರ ಮಾತನಾಡಿದ ಅವರು, ರಾಜ್ಯದ ಇಂಧನ ಸಚಿವ ಡಿ.ಕೆ. ಶಿವಕುಮಾರ ಗ್ರಾಮೀಣ ಭಾಗದ ಕೃಷಿಕರಿಗೆ ಗುಣಮಟ್ಟದ ವಿದ್ಯುತ್ ನೀಡಲು ಅಗತ್ಯ ಕ್ರಮ ಕೈಗೊಂಡಿದ್ದು, ಒಣಭೂಮಿಗಳಲ್ಲಿ ಸೋಲಾರ್ ಪಾರ್ಕ್ಗಳನ್ನು ನಿರ್ಮಿಸುವ ಮೂಲಕ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಿದ್ದಾರೆ. ಬೈಂದೂರಿಗೆ ಹೆಚ್ಚುವರಿ 110/11 ಕೆ.ವಿ. ಉಪಕೇಂದ್ರ ಮಂಜೂರು ಮಾಡಿಸಿದ್ದು, ಉದ್ದೇಶಿತ ಕಾಮಗಾರಿಗೆ ಈಗಾಗಲೇ ಸ್ಥಳ ಪರಿಶೀಲನಾ ಕಾರ್ಯ ನಡೆಯುತ್ತಿದೆ, ಅಲ್ಲದೆ ಸಿಬ್ಬಂದಿಗಳ ವಸತಿಗಹ ನಿರ್ಮಾಣಕ್ಕೆ ಒಂದು ಕೋಟಿ ರೂ, ಹಾಗೂ ಅತಿಥಿಗೃಹ ನಿರ್ಮಾಣಕ್ಕೆ 80 ಲಕ್ಷ ರೂ. ಮಂಜೂರಾಗಿದೆ. ಮಲೆನಾಡು ಭಾಗದ ಮಾವಿನಕಾರು, ಹಳ್ಳಿಬೇರು, ಬಸ್ರಿಬೇರು, ಗೋಳಿಗುಡ್ಡೆ, ಬಾವಡಿ, ಹೊಸೂರು, ಬೆಳಿಕೊಡ್ಲು, ಮಣ್ವ್ಮಣ್ಹರ, ಚಾರ್ಸಾಲು, ದೊಡ್ಡಹರ, ಮೇಘ್ನಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಲೋಕಕಲ್ಯಾಣಾರ್ಥವಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ಅಮ್ಮನವರಿಗೆ ಶುಕ್ರವಾರ ಗಜಾನನ ಜೋಶಿ ನೇತೃತ್ವದಲ್ಲಿ ಸಾಮೂಹಿಕ ಸಿಯಾಳಾಭಿಷೇಕ ನಡೆಯಿತು. ರಾಷ್ಟ್ರದ ಪ್ರಜೆಗಳು ಸದಾ ಸುಖ, ಸಂತೋಷ, ನೆಮ್ಮದಿ ಹಾಗೂ ಪರಸ್ಪರ ಸಹಬಾಳ್ವೆಯೊಂದಿಗೆ ಬಾಳುವಂತಾಗಬೇಕು. ಕಾಲಕ್ಕೆ ತಕ್ಕಂತೆ ಮಳೆ-ಬೆಳೆಯಾಗಬೇಕು. ದೇಶ ಇನ್ನಷ್ಟು ಸಧೃಡವಾಗಬೇಕೆಂಬ ಸಂಕಲ್ಪದೊಂದಿಗೆ ಬೆಳಿಗ್ಗೆ ಶ್ರೀ ಮೂಕಾಂಬಿಯಲ್ಲಿ ಪ್ರಾರ್ಥಿಸಿ ಎರಡನೇ ವರ್ಷದ ವಿಶೇಷ ಸೇವಾ ಕಾರ್ಯಕ್ರಮ ಆರಂಭಗೊಂಡಿತು. ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಸಿಯಾಳಗಳ ಅಭಿಷೇಕ ಜತೆಗೆ ಕ್ಷೀರ, ಪಂಚಾಮೃತ ಅಭಿಷೇಕಗಳನ್ನು ಮಾಡಲಾಯಿತು. ಅಲ್ಲದೇ ಗುಡಾನ್ನ, ಕ್ಷೀರಾನ್ನ ನೈವೇದ್ಯ, ಶತರುದ್ರಾಭಿಷೇಕ, ವಸ್ತ್ರ, ಫಲ-ಪುಷ್ಪಗಳ ಸಮರ್ಪಣೆಯೂ ಜರುಗಿತು. ದೇವರಿಗೆ ಮಲ್ಲಿಗೆ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಊರ, ಪರವೂರ ಅನೇಕ ಭಕ್ತರು ಈ ವಿಶೇಷ ದಿನವನ್ನು ಕಣ್ತುಂಬಿಕೊಂಡು ಕೃತಾರ್ತರಾದರು.
