Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಬೈಂದೂರು ಭಾಗದ ಜನರು ಪ್ರಾಮಾಣಿಕರಾಗಿದ್ದು, ಶಾಂತಿ ಸಹಬಾಳ್ವೆ ಜೀವನ ನಡೆಸುತ್ತಿದ್ದಾರೆ. ಸರ್ವಜ್ಞನು ಕೂಡಾ ಎಲ್ಲರೊಂದಿಗೆ ಕಲಿತು ತಾನು ಸರ್ವಜ್ಞನಾದಂತೆ, ಇಲ್ಲಿನ ಜನತೆಯಿಂದ ಸಾಕಷ್ಟು ಅನುಭವ ಪಡೆದುಕೊಂಡಿದ್ದೇನೆ ಎಂದು ನಿರ್ಗಮಿತ ತಹಶೀಲ್ದಾರ್ ಕಿರಣ್ ಜಿ. ಗೊರಯ್ಯ ಹೇಳಿದರು. ಬೈಂದೂರು ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಕಚೇರಿ ಸಿಬ್ಬಂದಿಗಳು, ಸಾರ್ವಜನಿಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಎಲ್ಲಾ ಕಾಲದಲ್ಲಿ ಎಲ್ಲರೂ ಎಲ್ಲರಿಗೂ ಒಳ್ಳೆಯವರಾಗಲು ಸಾಧ್ಯವಿಲ್ಲ. ಯಾವ ಅಧಿಕಾರಿಯಾಗಿದ್ದರೂ ಸೃಷ್ಠಿಯ ನಿಯಮ ಮೀರಲು ಸಾಧ್ಯವಾಗದು. ಅನುಭವ ಜೀವನದ ಪಾಠ ಕಲಿಸುತ್ತದೆ. ಆ ನೆಲೆಯಲ್ಲಿ ಕಳೆದ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ಇಲಾಖೆಯ ಸೇವೆ ಪಡೆಯಲು ಬಂದ ಹಿರಿಯರಿಗೆ, ಮಹಿಳೆಯರಿಗೆ ಹಾಗೂ ಪ್ರತಿಯೊಬ್ಬರಿಗೂ ಸಮಾನ ನ್ಯಾಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ ತೃಪ್ತಿಯಿದೆ. ನಮ್ಮ ಕೆಳಗಿವರನ್ನು ಕೂಡಾ ಕೀಳಾಗಿ ಕಾಣುವುದು ಮೇಲಾಧಿಕಾರಿಗಳ ವ್ಯಕ್ತಿತ್ವಕ್ಕೆ ಶೋಭೆತರದು ಎಂದ ಅವರು ಇಂದಿನ ವ್ಯವಸ್ಥೆಯಲ್ಲಿ ಜನಸ್ನೇಹಿಯಾಗಿ ಕರ್ತವ್ಯ ಪಾಲಿಸಬೇಕಾಗುತ್ತದೆ ಎಂದು ಸಹಪಾಠಿಗಳಿಗೆ ಕಿವಿಮಾತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಶಿರೂರು ಗ್ರಾಪಂನ ಪಂಚಾಯತ್ ಸಭಾಭವನದಲ್ಲಿ ನಡೆದ ೨೦೧೭-೧೮ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆ ಅಕ್ಷರಷಃ ಗದ್ದಲ, ಚೀರಾಟ, ಕೂಗಾಟಕ್ಕೆ ಮೀಸಲಾಗಿ ಒಟ್ಟಾರೆ ಗೊಂದಲಗಳ ಗೂಡಾಯಿತು. ಸಭೆಯ ಆರಂಭದಲ್ಲಿ ಕೇವಲ ಮೂರು ಇಲಾಖೆಯ ಅಧಿಕಾರಿಗಳನ್ನು ಹೊತುಪಡಿಸಿ ಉಳಿದ ಅಧಿಕಾರಿಗಳು ಗೈರುಹಾಜರಾದ ಬಗ್ಗೆ ಸಭೆಯಲ್ಲಿ ಆರಂಭಗೊಂಡ ಗದ್ದಲ ಮುಂದುವರಿದು ಕರಾವಳಿ-ದೊಂಬೆ ರಸ್ತೆ ಒತ್ತುವರಿ ತೆರವಿನ ಬಗ್ಗೆ, ಹಡವಿನಕೋಣೆ, ಅಳ್ವೆಗದ್ದೆ, ಕೆಸರಕೊಡಿ ಸಂಪರ್ಕ ರಸ್ತೆ ಅಸಮರ್ಪಕ ಕಾಮಗಾರಿಗಳ ಕುರಿತು, ಅಕ್ರಮವಾಗಿ ನಿರ್ಮಿಣಗೊಂಡ ರಿಕ್ಷಾ ನಿಲ್ದಾಣದ ಶೆಡ್ಡುಗಳ ತೆರವು ಇವೇ ಮೊದಲಾದ ವಿಷಂiiಗಳ ಬಗ್ಗೆ ವಿಶೇಷ ಚರ್ಚೆಯಾಯಿತು. ಕರಾವಳಿ ರಸ್ತೆ ಇಕ್ಕೆಡೆಗಳಲ್ಲಿ ಒತ್ತುವರಿಯಾದ ಬಗ್ಗೆ ಗಮನ ಸೆಳೆದ ನಾಗಪ್ಪ ಮೊಗೇರ, ಈ ಭಾಗದಲ್ಲಿ ಕೃಷಿ ಚಟುವಟಿಕೆ ಮಾಡಲು ಕಷ್ಟವಾಗುತ್ತಿದೆ. ಮಳೆಗಾಲದಲ್ಲಿ ಸೂಕ್ತ ಚರಂಡಿ ಇಲ್ಲದ ಕಾರಣ ಮಳೆನೀರು ಕೃಷಿ ಭೂಮಿಗೆ ನುಗ್ಗುತ್ತಿದೆ. ಹಿಂದೆ ೧೨ ಮೀ. ಅಗಲದ ರಸ್ತೆ ನಿರ್ಮಾಕ್ಕೆ ಭೂಸ್ವಾಧೀನ ಮಾಡಿಕೊಂಡಿದ್ದು, ಈಗ ಕೇಲ ೬ ಮೀ. ಮಾತ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: 2013 ರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿಲ್ಪಟ್ಟ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸುವುದರ ಜೊತೆಗೆ ಹಸಿದವರಿಗಾಗಿ ಅನ್ನಭಾಗ್ಯ, ರೈತರ ಅಭ್ಯುದಯಕ್ಕಾಗಿ ಕೃಷಿ ಭಾಗ್ಯ, ಪಶುಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಸೌರಭಾಗ್ಯ, ವಸತಿಭಾಗ್ಯ, ವಿದ್ಯಾಸಿರಿ, ನಿರ್ಮಲಭಾಗ್ಯ, ಕೃಷಿ ಸಾಲ ಮನ್ನಾ, ಮುಂತಾದ ಜನಪರ ಯೋಜನೆಗಳನ್ನು ನೀಡಿರುವ ಸರಕಾರ ಸಿದ್ಧರಾಮಯ್ಯನವರ ಕಾಂಗ್ರೇಸ್ ಸರಕಾರವಾಗಿದೆ. ಇಂತಹ ಜನಪರ ಕಾಳಜಿಯ ಸರಕಾರ ಮತ್ತೆ ಅಧಿಕಾರಕ್ಕೆ ಬರಬೇಕು. ಆ ಮೂಲಕ ಕೃಷಿಕರ ಮತ್ತು ಕಾರ್ಮಿಕರ ಉದ್ಧಾರ ಸಾಧ್ಯ ಎಂದು ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಹೇಳಿದ್ದಾರೆ. ಅವರು ಇಂದು ಸಂಜೆ ಹಂಗಳೂರಿನಲ್ಲಿ ನಡೆದ ಕಾಂಗ್ರೇಸ್ ಕಾರ್ಯಕರ್ತರ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಧರ್ಮಾಧಾರಿತ ರಾಜಕಾರಣ ಮಾಡುತ್ತಿದೆ. ಅದು ತನ್ನ ಅಧಿಕಾರದ ಹಪಾಹಪಿಗೆ ಹಿಂದುಳಿದ ವರ್ಗದ ಯುವಕರನ್ನು ಬಲಿಕೊಡುತ್ತಿದೆ. ಉತ್ತಮ ವಿದ್ಯೆ ಪಡೆದು ಉನ್ನತ ಉದ್ಯೋಗ ಪಡೆಯಬೇಕಿದ್ದ ಯುವಕರು ಬಿಜೆಪಿಗರ ಬ್ರೈನ್‌ವಾಷ್‌ಗೊಳಗಾಗಿ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಹೊಡೆದಾಟ, ಬಡಿದಾಟ ಪ್ರಕರಣಗಳಲ್ಲಿ ಪಾಲ್ಗೊಂಡು ಒಂದಷ್ಟು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ದೇವಾಲಯಗಳು ಸಾಂಸ್ಕೃತಿಕ, ಧಾರ್ಮಿಕ ಪ್ರಜ್ಞೆಯ ಪ್ರತೀಕವಾಗಿದೆ. ಊರಿನಲ್ಲಿರುವ ದೇವಾಲಯಗಳು ಜನಸಮುದಾಯ ಅಭಿವೃದ್ಧಿಗೆ ಕಾರಣವಾಗುವುದಲ್ಲದೆ ಸಮಾಜ ಶಕ್ತಿಯುತವಾಗಿ ವಿಸ್ತಾರಗೊಳ್ಳಲು ಸಹಕಾರಿಯಾಗುತ್ತದೆ ಎಂದು ಕೇಮಾರು ಸಾಂದೀಪನಿ ಮಠಾಧೀಶ ಈಶವಿಠಲದಾಸ ಸ್ವಾಮೀಜಿ ಹೇಳಿದರು. ಬುಧವಾರ ಯಡ್ತರೆ ಗ್ರಾಪಂ ವ್ಯಾಪ್ತಿಯ ಹೊಸೂರು ಶ್ರೀ ದುರ್ಗಾಪರಮೇಶ್ವರಿ ನೂತನ ಶಿಲಾಮಯ ದೇವಸ್ಥಾನದ ಪ್ರತಿಷ್ಟಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಮುಗ್ಧತೆ ಮತ್ತು ಪರಿಶುದ್ಧ ಹೃದಯ ಶ್ರೀಮಂತಿಕೆಯಿಂದ ಕೂಡಿದ ಬಡವರು ದೇವರಿಗೆ ಅತ್ಯಂತ ಪ್ರಿಯನಾಗುತ್ತಾನೆ ಅಲ್ಲದೇ ಅವರು ಕಷ್ಟದಿಂದ ನಿರ್ಮಿಸಿದ ದೇಗುಲ ದೇವರಿಗೆ ಇಷ್ಟವಾಗುತ್ತದೆ. ಕೇವಲ ಹಣ, ಅಂತಸ್ತು, ಶ್ರೀಮಂತಿಕೆಯಿಂದ ದೇವರ ಅನುಗ್ರಹ ಪ್ರಾಪ್ತಿಯಾಗದು. ನಿಷ್ಕಲ್ಮಷ ಭಕ್ತಿಯಿಂದ ಮಾತ್ರ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಧರ್ಮಗಳು ಕೆವಲ ಭಾಷಣಕ್ಕೆ ಮಾತ್ರ ಸೀಮಿತವಾಗಬಾರದ. ಬದಲಾಗಿ ಪ್ರತಿಯೊಬ್ಬರೂ ಕೂಡಾ ನಮ್ಮ ಸಂಸ್ಕೃತಿಯ ಜ್ಞಾನ ಹೊಂದಿರಬೇಕು. ದೇವಾಲಯಗಳ ಮೂಲಕ ಜೀವನದಲ್ಲಿ ಶಾಂತಿ ಸಮಾಧಾನ ನೆಮ್ಮದಿ, ತೃಪ್ತಿ ಪ್ರಾಪ್ತಿಯಾಗಿ ಜೀವನ ಮಂಗಲಮಯವಾಗುತ್ತದೆ ಎಂದರು. ಬೈಂದೂರು ಶಾಸಕ, ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಮಕ್ಕಳಿಗೆ ಬಾಲ್ಯದಲ್ಲೇ ಅವರ ಪ್ರತಿಭೆಗಳಿಗೆ ತಕ್ಕ ಪ್ರೋತ್ಸಾಹ ಕೊಡಬೇಕು. ಪ್ರತಿಭಾ ಪೋಷಕರಾದ ಶೇಖರ ಅಜೆಕಾರು ಒಂದು ಹೆಜ್ಜೆ ಮುಂದೆ ಹೋಗಿ ಅಂಗನವಾಡಿ ಮಕ್ಕಳಿಗೆ ಪ್ರೋತ್ಸಾಹ ನೀಡುವ ಯೋಚನೆ ಮಾಡಿ ೧೭ ಶಾಲೆಯ ೨೦೦ ಕ್ಕೂ ಮಿಕ್ಕ ಪುಟಾಣಿಗಳಿಗೆ ವೇದಿಕೆ ನೀಡಿದ್ದಾರೆ. ಇದೊಂದು ವಿಭಿನ್ನ ಯೋಚನೆ,ಅವರಿಗೆ ನಾವು ಸದಾ ಋಣಿಗಳು ಎಂದು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ದಾಖಲೆಯ ನಿರೀಕ್ಷೆಯಲ್ಲಿರುವ ಮಂಗಳೂರಿನ ರೆಮೊನಾ ಇವೆಟ್ ಪಿರೇರಾ ಅಭಿಪ್ರಾಯ ಪಟ್ಟರು.ಅವರು ಮೂಡುಬಿದಿರೆಯ ಸಮಾಜಮಂದಿರದಲ್ಲಿ ಸೋಮವಾರ ನಡೆದ ದ.ಕ.ಜಿಲ್ಲೆ೩ಯ ಪ್ರಥಮ ಅಂಗನವಾಡಿ ಮಕ್ಕಳ ಮೇಳವನ್ನು ಪುಗ್ಗೆಗಳನ್ನು ಪುಟಾಣಿಗೆ ವಿತರಿಸುವ ಮೂಲಕ ಉದ್ಘಾಟಿಸಿದರು. ಮಕ್ಕಳೇ ವೇದಿಕೆಯಲ್ಲಿ ಹೀಗೆ ಅತಿಥಿಗಳಾಗಿರುವುದು, ಇನ್ನೂ ಶಾಲೆಗೆ ಹೋಗುತ್ತಿರುವ ನಾನೇ ಉದ್ಘಾಟಕಿಯಾಗಿರುವುದು ವಿಶಿಷ್ಟ ಅನುಭವ ನೀಡಿದೆ ಎಂದು ಅವರು ಹೇಳಿದರು. ನೂರಾರು ಪುಟಾಣಿಗಳ ನಡುವೆ ನಡೆದ ಪುಟಾಣಿಲೋಕದ ವೇದಿಕೆಯಲ್ಲಿರುವುದೇ ಬದುಕಿನಲ್ಲಿ ಒಂದು ಮರೆಯಲಾಗದ ಘಟನೆ ಎಂದು ಅಧ್ಯಕ್ಷತೆ ವಹಿಸಿದ್ದ ಮಜಾಭಾರತ ಖ್ಯಾತಿಯ ಬಹುಮುಖ ಪ್ರತಿಭೆ ಆರಾಧನಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೆಎಸ್‌ಆರ್‌ಟಿಸಿ ಸಂಸ್ಥೆಯಲ್ಲಿ ಹಲವಾರು ಗುಣಾತ್ಮಕ ಬದಲಾವಣೆಗಳನ್ನು ತರಲಾಗಿದ್ದು, ಇದರ ಪರಿಣಾಮವಾಗಿ ೨೫೦ಕೋಟಿ ನಷ್ಟದ ನಿರೀಕ್ಷೆ ಮೀರಿ ಫೆಬ್ರವರಿ ಅಂತ್ಯಕ್ಕೆ ೧೦ ಕೋಟಿ ಲಾಭ ಗಳಿಸುವಂತಾಗಿದೆ. ಕಳೆದೊಂದು ವರ್ಷದಲ್ಲಿ ಸಂಸ್ಥೆಯ ೨೦೮ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ೨ನೇ ಅತ್ಯುತ್ತಮ ಸಾರಿಗೆ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್. ಆರ್. ಉಮಾಶಂಕರ್ ಹೇಳಿದರು. ಅವರು ಬೈಂದೂರು ಯಡ್ತರೆಯಲ್ಲಿ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆಗೈದು ಬಳಿಕ ಮಾತನಾಡಿ ಸಂಸ್ಥೆಯಲ್ಲಿ ಅನಗತ್ಯ ವೆಚ್ಚ ಕಡಿತಗೊಳಿಸಿ ಆದಾಯ ಹೆಚ್ಚಿಸುವ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ. ಕೆಎಸ್‌ಆರ್‌ಟಿಸಿಯ ಪ್ರತಿ ಡಿಪೋ ಬಸ್ ನಿಲ್ದಾಣಗಳಿಗೆ ನಿಗಮದ ಅಧ್ಯಕ್ಷರು ಹಾಗೂ ತಾನು ಭೇಟಿ ನೀಡಿ ಖುದ್ದಾಗಿ ಅಲ್ಲಿನ ಸಮಸ್ಯೆಗಳನ್ನು ಅರಿತು ಬಗೆಹರಿಸಲು ಕೆಲಸ ಮಾಡಲಾಗಿದೆ. ಪರಿಣಾಮವಾಗಿ ಸಂಸ್ಥೆ ಲಾಭದ ಹಾದಿಯಲ್ಲಿದೆ ಎಂದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ, ಶಾಸಕ ಕೆ. ಗೋಪಾಲ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹುಲಿಕುಣಿತದ ಮೂಲಕ ಮನೆಮಾತಾಗಿ ಹುಲಿ ನಾಗೇಶ್ ಅಣ್ಣ ಎಂದೇ ಖ್ಯಾತರಾದ ನಾಗೇಶ್ (75) ಅಸೌಖ್ಯದಿಂದ ಕುಂದಾಪುರ ಸ್ವಗೃಹದಲ್ಲಿ ನಿಧನರಾದರು. ಚಾಲಕ ವೃತ್ತಿಮಾಡಿಕೊಂಡಿದ್ದ ಅವರು ಹವ್ಯಾಸವಾಗಿ ನವರಾತ್ರಿ ಸಮಯದಲ್ಲಿ ಹುಲಿ ಕುಣಿತ ನಡೆಸುತ್ತಿದ್ದರು. ಕುಂದಾಪುರ ಶ್ರೀ ಕುಂದೇಶ್ವರ ದೇವಸ್ಥಾನ ಎದುರು ಮುಖ್ಯರಸ್ತೆ ಪಕ್ಕದಲ್ಲಿ ಕಳೆದ ಮೂರು ದಶಕಕ್ಕೂ ಮಿಕ್ಕ ನವರಾತ್ರಿಯಲ್ಲಿ ಶಾರದಾಮೂರ್ತಿ ಕೂರಿಸಿ ಪೂಜೆ ನೆರವೇರಿಸಿಕೊಂಡು ಬರುತ್ತಿದ್ದರು. ಇವರ ಹುಲಿ ವೇಷಕ್ಕೆ ವಿಶೇಷ ಆಕರ್ಷಣೆಯಿದ್ದು, ಕಳೆದ ನವರಾತ್ರಿ ಸಮಯದಲ್ಲಿ ಕಲಾಕ್ಷೇತ್ರ ಕುಂದಾಪುರ ವೇಷರಹಿತ ಹುಲಿ ಕುಣಿತ ನಡೆಸಿ ಸನ್ಮಾನಿಸಿದ್ದರು.ಮೃತರು ಪತ್ನಿ, ಮೂವರು ಗಂಡು ಹಾಗೂ ನಾಲ್ವರು ಹೆಣ್ಣು ಮಕ್ಕಳ ಅಗಲಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು : ಗ್ರಾಮಸಭೆಯಲ್ಲಿ ಸಾರ್ವಜನಿಕರು ಮಂಡಿಸುವ ನಿರ್ಣಯ ಮತ್ತು ಕೇಳುವ ಪ್ರಶ್ನೆಗಳನ್ನು ಏಳು ದಿನ ಮೊದಲು ಲಿಖಿತವಾಗಿ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಕರಪತ್ರದಲ್ಲಿ ಮುದ್ರಿಸಿದ ಸೂಚನೆಗೆ ಮಂಗಳವಾರ ನಡೆದ ಮರವಂತೆ ಗ್ರಾಮ ಪಂಚಾಯಿತಿಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಮಾಜಿ ಅಧ್ಯಕ್ಷ ಎಸ್. ಜನಾರ್ದನ ಈ ವಿಷಯ ಎತ್ತಿದಾಗ ಶೇಖರ ಕುಂದರ್ ಇದು ಜನರ ಬಾಯಿ ಮುಚ್ಚಿಸುವ ಯತ್ನ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ನಿಯಮದಂತೆ ವಸತಿ, ವಾರ್ಡ್‌ಸಭೆಗಳನ್ನು ಗ್ರಾಮಸಭೆಗಿಂತ ತಿಂಗಳು ಮೊದಲು ನಡೆಸಬೇಕು, ವಿಶೇಷ ಆಯವ್ಯಯ ಗ್ರಾಮಸಭೆ ನಡೆಸಬೇಕು, ಎಲ್ಲ ವಾಣಿಜ್ಯ ಸ್ಥಾವರಗಳು ಅನುಮತಿ ಪಡೆದುಕೊಳ್ಳಬೇಕು, ನಿಯಮದಂತೆ ತೆರಿಗೆ ದರ ಹೊರಿಸಬೇಕು, ಫ್ಲೆಕ್ಸ್‌ಗಳ ಬಳಕೆ ತಡೆಗಟ್ಟಬೇಕು, ಪ್ರಚಾರ ಫಲಕಗಳ ಮೇಲೆ ಶುಲ್ಕ ವಿಧಿಸಬೇಕು, ಗ್ರಾಮವನ್ನು ಪ್ಲಾಸ್ಟಿಕ್‌ಮುಕ್ತಗೊಳಿಸಬೇಕು ಎಂಬ ಸಲಹೆಗಳಿಗೆ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳಿಂದ ಮೌನ ಪ್ರತಿಕ್ರಿಯೆ ವ್ಯಕ್ತವಾಯಿತು. ಎರಡು ವರ್ಷಗಳ ಹಿಂದೆ ಅಳವಡಿಸಿದ್ದ ಶುದ್ಧ ಕುಡಿಯುವ ನೀರು ಘಟಕ ಎಂದೋ ಕೆಟ್ಟು ಹೋಗಿದ್ದರೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯದ ಆಶ್ರಯದಲ್ಲಿ ನಾಗೂರು ಶ್ರೀ ಕೃಷ್ಣ ಲಲಿತಾ ಕಲಾಮಂದಿರದಲ್ಲಿ ಪಂಚಾಂಗ ಪಠಣ ಮತ್ತು ಉಪನ್ಯಾಸ ಕಾರ್ಯಕ್ರಮ ಆದಿತ್ಯವಾರ ದಿನ ಜರಗಿತು. ಪಂಚಾಂಗ ಪಠಣ ಮಾಡಿ ಧಾರ್ಮಿಕ ಉಪನ್ಯಾಸ ನೀಡಿದ ವೇದಮೂರ್ತಿ ವಾಸುದೇವ ಐತಾಳ್ ಕೆಳಮಠ ಮಾತನಾಡಿ ಜ್ಯೋತಿಷ್ಯ ಶಾಸ್ತ್ರವು ವೈಜ್ಞಾನಿಕತೆಯಿಂದ ಕೂಡಿದು ಸತ್ಯವಾಗಿರುತ್ತದೆ. ಜ್ಯೋತಿಷಿ ಶಾಸ್ತ್ರ ಹೆಚ್ಚಿನ ವಿಜ್ಞಾನಿಗಳು ಸಹ ಸಹಮತವನ್ನು ವ್ಯಕ್ತಪಡಿಸಿದ್ದಾರೆ. ಅದರಂತೆ ಪಂಚಾಗವು ಸಹ ಸಂಪೂರ್ಣ ಗಣಿತದ ಲೆಕ್ಕ ಚಾರದಿಂದ ರಚಿತವಾಗಿರುತ್ತದೆ. ಧಾರ್ಮಿಕವಾಗಿ ಪಂಚಾಂಗ ಶೃವಣ ಮಾಡುವುದರಿಂದ ಪುಣ್ಯಾಂಶ ಲಭಿಸುತ್ತದೆ. ಎಂದು ಶಾಸ್ತ್ರಕಾರರು ಉಲ್ಲೇಖಿಸಿದ್ದಾರೆ ಎಂದು ಹೇಳಿದ್ದರು. ಉಪ್ಪುಂದ ವಲಯದ ಅಧ್ಯಕ್ಷರಾದ ಬಿ. ವಿಶ್ವೇಶ್ವರ ಅಡಿಗ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಘದ ಪ್ರಮುಖರಾದ ಉದ್ಯಮಿ ಉಮೇಶ ಶ್ಯಾನುಬೋಗ್ ಗೌರವಧ್ಯಕ್ಷ ಮಂಜುನಾಥ್ ಉಡುಪ, ದೀಟಿ ಸೀತರಾಮ ಮಯ್ಯ, ವಾಸು ದೇವ ನಾವುಡ, ಪ್ರಕಾಶ ಐತಾಳ್, ವಾಸುದೇವ ಕಾರಂತ, ರಮೇಶ ವೈದ್ಯ, ಗಣೇಶ ಕಾರಂತ, ಕಾರ್ಯದರ್ಶಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಹೊಸಾಡು ಗ್ರಾಪಂ ವ್ಯಾಪ್ತಿಯ ಹೊಸಾಡು-ಬಂಟ್ವಾಡಿ ಸಂಪರ್ಕ ಸೇತುವೆ ಸಮೀಪ ಕೆಲವರು ಚಟ್ಲಿಕೆರೆ ನಿರ್ಮಾಣಕ್ಕಾಗಿ ಹೊಳೆ ಪರಂಬೋಕು ಜಾಗ ಅತಿಕ್ರಮಿಸಿ ರಸ್ತೆ ನಿರ್ಮಿಸುತ್ತಿದ್ದು, ಹೊಳೆಬದಿಯಲ್ಲಿನ ಅಪಾರ ಕಾಂಡ್ಲಾ ವೃಕ್ಷಗಳನ್ನು ನಾಶಪಡಿಸಿದ್ದಾರೆ. ಸಾರ್ವಜನಿಕರ ದೂರಿಗೆ ಸ್ಪಂದಿಸಿ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿದ್ದರೂ ರಸ್ತೆ ನಿರ್ಮಾಣ ಮತ್ತು ಕಾಂಡ್ಲಾ ಗಿಡಗಳ ಮಾರಣಹೋಮ ಮುಂದುವರಿದಿದೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂಟ್ವಾಡಿ ಸೇತುವೆ ಪೂರ್ವಭಾಗದಲ್ಲಿ ಸೌಪರ್ಣಿಕಾ ನದಿ ತೀರದಲ್ಲಿ ಚಟ್ಲಿ ಉದ್ಯಮಕ್ಕಾಗಿ ಖಾಸಗಿ ವ್ಯಕ್ತಿಗಳು ನದಿತೀರ ಬಗೆದು ರಸ್ತೆ ನಿರ್ಮಿಸುತ್ತಿದ್ದು, ನದಿತೀರದಲ್ಲಿ ತೀರ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಬೆಳೆಸಿದ್ದ ನೂರಾರು ಕಾಂಡ್ಲಾ ವೃಕ್ಷಗಳನ್ನು ನಾಶ ಪಡಿಸಲಾಗಿದೆ. ನದಿತೀರ ಬಗೆದು ಮಣ್ಣು ತುಂಬಿಸುವ ಸಂದರ್ಭದಲ್ಲಿ ಇಲ್ಲಿನ ಕಾಂಡ್ಲಾ ವೃಕ್ಷಗಳು ಸಮಾಧಿಯಾಗಿರುವುದು ಕಂಡುಬಂದಿದೆ. ಈ ಹಿಂದೆ ಇದೇ ತೀರದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸಲಾಗಿದ್ದು, ನಿರಂತರವಾಗಿ ಕಾಂಡ್ಲಾ ನಾಶ ನಡೆದಿದೆ. ಹೊಸಾಡು-ಬಂಟ್ವಾಡಿ ನದಿಯ ಇಕ್ಕೆಲದಲ್ಲಿ ಸೊಂಪಾಗಿ ಬೆಳೆದಿದ್ದ ಕಾಂಡ್ಲಾ…

Read More