ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 2022ನೇ ಸಾಲಿನ ಆಲ್ ಇಂಡಿಯಾ ಮೆಡಿಕಲ್ ಸೂಪರ್ ಸ್ಪೆಷಾಲಿಟಿ ನೀಟ್ (Mch) ಪ್ರವೇಶ ಪರೀಕ್ಷೆ ಸರ್ಜರಿ ವಿಭಾಗದಲ್ಲಿ ಕುಂದಾಪುರದ ಡಾ. ಅತೀಶ್ ಬಿ. ಶೆಟ್ಟಿ ದೇಶದಲ್ಲೇ ಪ್ರಥಮ ರಾಂಕ್ ಪಡೆದುಕೊಂಡಿದ್ದಾರೆ. ಕುಂದಾಪುರ ಚಿನ್ಮಯಿ ಆಸ್ಪತ್ರೆಯ ಸರ್ಜನ್ ಡಾ. ಬಾಲಕೃಷ್ಣ ಶೆಟ್ಟಿ ಹಾಗೂ ಸುನಿತಾ ಶೆಟ್ಟಿ ಕಂದಾವರ ಅವರ ಪುತ್ರರಾದ ಅತೀಶ್ ಬಿ. ಶೆಟ್ಟಿ ಅವರು ಬ್ರಹ್ಮಾವರ ಲಿಟಲ್ ರಾಕ್ ಸ್ಕೂಲಿನಲ್ಲಿ ಪಿಯುಸಿ ತನಕದ ವಿದ್ಯಾಭ್ಯಾಸ ಪೂರೈಸಿ, ಸಿಇಟಿಯಲ್ಲಿ 13ನೇ ರ್ಯಾಂಕ್ ಪಡೆದುಕೊಂಡಿದ್ದರು. ಬಳಿಕ ಕೆಎಂಸಿ ಮಣಿಪಾಲದಲ್ಲಿ ಎಂಬಿಬಿಎಸ್, ಬಿಎಂಸಿ ಮೆಡಿಕಲ್ ಕಾಲೇಜು ಬೆಂಗಳೂರಿನಲ್ಲಿ ಎಂ.ಎಸ್. ಪದವಿಯನ್ನು ಮುಗಿಸಿ ಅಗಸ್ಟ್’ನಲ್ಲಿ ಆಲ್ ಇಂಡಿಯಾ ಮೆಡಿಕಲ್ ಸೂಪರ್ ಸ್ಪೆಷಾಲಿಟಿ ನೀಟ್ ಪರೀಕ್ಷೆ ಬರೆದಿದ್ದರು.
Author: ನ್ಯೂಸ್ ಬ್ಯೂರೋ
ಬೇರೆ ಬೇರೆ ಕಾರಣಗಳಿಂದಾಗಿ ಮನೆ, ಕಛೇರಿಯಲ್ಲಿ ನೆಗೆಟಿವ್ ಶಕ್ತಿಗಳೇ ತುಂಬಿಕೊಂಡಿರುತ್ತವೆ. ಒತ್ತಡದ ಜೀವನದ ಜೊತೆಗೆ ಇನ್ನೊಬ್ಬರ ಮೇಲಿನ ಹೊಟ್ಟೆಕಿಚ್ಚು, ತಾತ್ಸಾರದ ಮನೋಭಾವನೆ ಇದೆಲ್ಲವಕ್ಕೂ ಪ್ರಮುಖ ಕಾರಣವಾಗಿರುತ್ತವೆ. ಆದರೆ ಇವೆಲ್ಲವಿಂದ ದೂರವಿದ್ದು, ಸಕಾರಾತ್ಮಕ ಆಲೋಚನೆ ಬೆಳೆಸಿಕೊಳ್ಳವುದು ಒಂದು ಸವಾಲಿನ ಕೆಲಸ. ಅದಕ್ಕಾಗಿ ಧ್ಯಾನ, ವ್ಯಾಯಾಮದಂತಹ ಚಟುವಟಿಗಳ ಅಗತ್ಯವಿದೆ. ಇವುಗಳ ಜೊತೆಗೆ ಮನೆ ಅಥವಾ ಕಛೇರಿಯ ಅಲಂಕಾರವೂ ಸಹ ನಮ್ಮಲ್ಲಿ ಧನಾತ್ಮಕತೆ ಸೃಷ್ಟಿ ಮಾಡಬಲ್ಲದು. ಮನಸ್ಸಿನ ನೆಗೆಟಿವ್ ಆಲೋಚನೆಗಳನ್ನು ದೂರಮಾಡಿ, ಪಾಸಿಟಿವ್ ಮನಸ್ಥಿತಿ ನಮ್ಮದಾಗಲು ಮನೆ ಹಾಗೂ ಕಛೇರಿಯಲ್ಲಿ ಇಡಬಹುದಾದ ಕೆಲವು ಉತ್ತಮ ವಸ್ತುಗಳ ಮಾಹಿತಿ ಈ ಲೇಖನದಲ್ಲಿದೆ. ಮೀನು: ಮೀನು ಸಮೃದ್ಧಿಯನ್ನು ತರಲು ಬಹಳ ಪ್ರಸಿದ್ಧವಾಗಿದೆ. ಇದು ಸಮೃದ್ಧಿಯ ಜೊತೆಗೆ ಉತ್ತಮ ಆರೋಗ್ಯದ ಸಂಕೇತವಾಗಿದೆ. ನಿಮಗಿಷ್ಟವಾದ ಮಾರುಕಟ್ಟೆಯಲ್ಲಿ ಸಿಗುವ ಮೀನಿನ ಪ್ರತಿಮೆಯನ್ನು ಗೋಡೆಯ ಮೇಲೆ ನೇತುಹಾಕಬಹುದು. ಇದರ ಜೊತೆಗೆ ಅಕ್ವೇರಿಯಂ ಸಹ ಇಟ್ಟುಕೊಳ್ಳಬಹುದು, ಆದರೆ ಮೀನುಗಳನ್ನು ನೋಡಿಕೊಳ್ಳುವ ಮತ್ತು ಟ್ಯಾಂಕ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುವವರಿಗೆ ಮಾತ್ರ ಇದು ಸೂಕ್ತ. ಆನೆ: ವಿವಿಧ ರೂಪಗಳಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ಸರಸ್ವತಿ ವಿದ್ಯಾಲಯದ ಆವರಣದಲ್ಲಿ ಹೊಸದಾಗಿ ನಿರ್ಮಿಸಲಾದ ಕಿಂಡರ್ ಪ್ಲೇ ಗಾರ್ಡನ್ ನ್ನು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಉದ್ಯಮಿ ಆನಂದ ಸಿ ಕುಂದರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾ ಸಂಸ್ಥೆ ಒದಗಿಸುವ ಇಂತಹ ಸೌಲಭ್ಯಗಳು ಮಕ್ಕಳಲ್ಲಿ ಉತ್ಸಾಹ ವನ್ನು ಹೆಚ್ಚಿಸುತ್ತದೆ. ಕಲಿಕೆಯ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಪ್ರೇರಣೆಯನ್ನು ನೀಡುತ್ತವೆ ಎಂದು ಹೇಳಿದರು. ಜಿ ಎಸ್ ವಿ ಎಸ್ ಅಸೋಸಿಯೇಷನ್ ಅಧ್ಯಕ್ಷ ಡಾ ಕಾಶಿನಾಥ್ ಪೈ ಅಧ್ಯಕ್ಷತೆ ವಹಿಸಿದ್ದರು. ಜಿಎಸ್ ವಿ ಎಸ್ ಅಸೋಸಿಯೇಷನ್ ಕಾರ್ಯದರ್ಶಿ ಹೆಚ್ ಗಣೇಶ್ ಕಾಮತ್, ಸದಸ್ಯರಾದ, ರಾಮನಾಥ ನಾಯಕ್ ಅಶ್ವಿನ್ ನಾಯಕ್, ನಾಗೇಂದ್ರ ಪೈ, ಗೋವಿಂದರಾಯ ಆಚಾರ್ಯ, ಚಿನ್ಮಯಿ ಆಸ್ಪತ್ರೆಯ ನಿರ್ದೇಶಕ ಡಾಕ್ಟರ್ ಉಮೇಶ್ ಪುತ್ರನ್, ಸುಮ ಪುತ್ರನ್, ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ ಸಿ, ಸರಸ್ವತಿ ವಿದ್ಯಾಲಯ ಪ್ರೌಢಶಾಲೆಯ ಪ್ರಾಂಶುಪಾಲ ಉಮೇಶ್ ಕರಣಿಕ್, ಆಂಗ್ಲ ಮಾಧ್ಯಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸೆ.18 ರಿಂದ 24ರವರೆಗೆ ಜೆಸಿಐ ಉಪ್ಪುಂದ ನೇತೃತ್ವದಲ್ಲಿ ನಡೆಯಲಿರುವ ಜೇಸಿ ಸಪ್ತಾಹ ಸಮ್ಮಿಲನ – 2022 ಸಾಂಸ್ಕ್ರತಿಕ ಸಂಭ್ರಮದ ಆಮಂತ್ರಣ ಪತ್ರಿಕೆಯನ್ನು ಇತ್ತೀಚಿಗೆ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಜೆಸಿಐ ಉಪ್ಪುಂದದ ಅಧ್ಯಕ್ಷರಾದ ನಾಗರಾಜ್ ಪೂಜಾರಿ ಉಬ್ಜೇರಿ, ನಿಕಟ ಪೂರ್ವಾಧ್ಯಕ್ಷರಾದ ಪುರುಷೋತ್ತಮದಾಸ್, ಪೂರ್ವಾಧ್ಯಕ್ಷರಾದ ಪ್ರಕಾಶ್ ಭಟ್, ಮಂಗೇಶ್ ಶ್ಯಾನುಭಾಗ್, ಸುಬ್ರಮಣ್ಯ ಜಿ, ಉದಯ್ ಡಿ. ಆರ್. ಹಾಗೂ ಪ್ರದೀಪ್ ಕುಮಾರ್ ಶೆಟ್ಟಿ, ಶ್ರೀ ಗಣೇಶ್ ಗಾಣಿಗ, ನರಸಿಂಹ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಉಡುಪಿ ಜಿಲ್ಲೆಯಲ್ಲಿ ಸೇವಾ ಪಾಕ್ಷಿಕದಡಿ ನಡೆಯಲಿರು ವಿವಿಧ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾ ಬಿಜೆಪಿ ವಕ್ತಾರ ರಾಘವೇಂದ್ರ ಕಿಣಿ ಮಾಹಿತಿ ನೀಡಿದರು. ಬೈಂದೂರು ಮಂಡಲದಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಬಗ್ಗೆ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಪ್ರತಾಪ ಶೆಟ್ಟಿ ಚೇರ್ಕಾಡಿ, ಜಿಲ್ಲಾ ಮಾಧ್ಯಮ ವಕ್ತಾರ ಶ್ರೀನಿಧಿ ಹೆಗ್ಡೆ, ಮಂಡಲ ಕಾರ್ಯದರ್ಶಿ ಪ್ರಿಯದರ್ಶಿನಿ ಬೆಸ್ಕೂರು ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗುಜ್ಜಾಡಿ ಗ್ರಾಮದ ಜನತಾ ಕಾಲೋನಿ ನಿವಾಸಿ ಸುಮನ ಖಾರ್ವಿ ಅವರ ಮನೆಯಲ್ಲಿ ಸೆಲ್ಕೋ ಸೋಲಾರ್ ವತಿಯಿಂದ ಅಳವಡಿಸಲಾಗಿರುವ ಹೊಲಿಗೆ ಯಂತ್ರವನ್ನು ಕರ್ಣಾಟಕ ಬ್ಯಾಂಕ್ ತ್ರಾಸಿ ಶಾಖೆಯ ಪ್ರಬಂಧಕ ಅಮರನಾಥ ಪಿ. ಭಂಡಾರಿ ಬುಧವಾರ ಉದ್ಘಾಟಿಸಿದರು. ಹೊಲಿಗೆ ಯಂತ್ರ ಖರೀದಿಗೆ ತ್ರಾಸಿ ಕರ್ಣಾಟಕ ಬ್ಯಾಂಕ್ ಆರ್ಥಿಕ ಸಹಾಯವನ್ನು ನೀಡಿದೆ ಅಲ್ಲದೆ ಜಿ.ಐ.ಝೆಡ್ ಸಂಸ್ಥೆಯು ಶೇ.೨೫ ಸಬ್ಸಿಡಿ ಅನುದಾನ ನೀಡಿದೆ. ಸೆಲ್ಕೋ ಸಂಸ್ಥೆಯ ಏರಿಯಾ ಮ್ಯಾನೇಜರ್ ಶೇಖರ್ ಶೆಟ್ಟಿ, ಶಾಖಾ ಪ್ರಬಂಧಕ ಮಂಜುನಾಥ್, ಎಕ್ಸಿಕ್ಯೂಟಿಯಾದ ಮಂಜುನಾಥ್ ಬಿ. ಶೆಟ್ಟಿ ಮತ್ತು ಶಾಂತ ಖಾರ್ವಿ ಉಪಸ್ಥಿತರಿದ್ದರು.
ಉಪ್ಪುಂದ ಶಾಲೆಯಲ್ಲಿ ಪೋಷಕರಲ್ಲದವರು ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದು ಕಾನೂನು ಬಾಹಿರ – ನವೀನಚಂದ್ರ ಉಪ್ಪುಂದ ಆರೋಪ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೊಳಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ ಶೆಟ್ಟಿ ಬೆಳಗೋಡು ಅನಾರೋಗ್ಯದಿಂದ ಸೋಮವಾರ ನಿಧನರಾದರು. ಕ್ರೀಡಾ ಕಮೆಂಟರಿಗಳ ಮೂಲಕ ಪ್ರಸಿದ್ಧರಾಗಿದ್ದ ಪ್ರಕಾಶ್ ಶೆಟ್ಟಿ ಅವರು ವಾಲಿಬಾಲ್ ಆಟದ ಕಮೆಂಟರಿಗೆ ಕುಳಿತರೆಂದರೆ ಸ್ಟೇಡಿಯಂ ಸ್ಥಭ್ದವಾಗುತ್ತಿತ್ತು. ಅವರು ಹಲವಾರು ಕ್ರೀಡೋತ್ಸವಗಳನ್ನೂ ಸಂಘಟಿಸಿ ಯಶಸ್ವಿಯಾಗಿದ್ದರು. ಸ್ವತಃ ಕಲಾವಿದರಾಗಿದ್ದ ಪ್ರಕಾಶ್ ಶೆಟ್ಟಿ ಹಲವಾರು ಸಂಗೀತ ಕಾರ್ಯಕ್ರಮಗಳನ್ನೂ, ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಿ ಏಕಪಾತ್ರಾಭಿನಯದ ಮೂಲಕ ಪ್ರಸಿದ್ಧರಾಗಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚಿಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಕುಮಟಾ ಮಾತನಾಡಿ ಕನ್ನಡ ಭಾಷೆ ಬಳಕೆ ಹಾಗೂ ಕನ್ನಡ ಸಂಸ್ಕೃತಿ ಉಳಿಸುವ ಅತ್ಯಾದ್ಬುತ ಕೆಲಸ ಯಕ್ಷಗಾನ ರಂಗದಿಂದ ಆಗುತ್ತಿದೆ. ಭಾರತೀಯ ಪಾರಂಪರಿಕ, ಸಂದೇಶ ಯುವಕರಿಗೆ ಯಕ್ಷಗಾನ ಕೊಡುತ್ತಿದೆ. ಯಕ್ಷಗಾನ ಕೇವಲ ಕರಾವಳಿ ಕಲೆಯಲ್ಲ ಇಡೀ ಕರ್ನಾಟಕದ ಕಲೆಯಾಗಿದೆ ಎಂದರು. ಸಾವಿರ ಕುಟುಂಬಗಳಿಗೆ ಯಕ್ಷಗಾನ ಕಲೆ ಅನ್ನ ಕೊಡುವುದಷ್ಟೇ ಅಲ್ಲದೆ ಮಾತು ಕಲಿಸುವ ಕಲೆಯಾಗಿದೆ. ವೇಷಭೂಷಣ, ಭಾಷೆ, ನೃತ್ಯ, ಹಿಮ್ಮಳೆ, ಹಾಡುಗಾರಿಕೆ ಎಲ್ಲಾವನ್ನೂ ಒಳಗೊಂಡ ಕಲೆ ವಿಶ್ವದಲ್ಲಿ ಒಂದಿದೆ ಎಂದರೆ ಅದು ಯಕ್ಷಗಾನ ಕಲೆಯಲ್ಲಿ ಮಾತ್ರ ಎಂದು ಅಭಿಪ್ರಾಯಪಟ್ಟರು. ರಾಜ್ಯ ಹಿಂದುಳಿದ ವರ್ಗಗಗಳ ಆಯೋಗ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಪ್ರಶಸ್ತಿ ಪ್ರಧಾನ ಮಾಡಿದರು. ಪ್ರಶಸ್ತಿ ಪುರಸ್ಕೃತರಾದ ಪಟ್ಲ ಸತೀಶ್ ಶೆಟ್ಟಿ,ಕೃಷ್ಣ…
ಬೈಂದೂರು: ಬೈಂದೂರಿನ ಹೆಸರಾದ ಮೊಬೈಲ್ ಮಾರಾಟ ಸಂಸ್ಥೆಯಾದ ‘ಪ್ರೀತಿ ಮೊಬೈಲ್ಸ್’ನಲ್ಲಿ ಸ್ಮಾರ್ಟ್ ಪೋನ್ ಫೆಸ್ಟ್ ಭಾಗವಾಗಿ ಗ್ರಾಹರಿಗೆ ವಿವಿಧ ಖಚಿತ ಬಹುಮಾನಗಳನ್ನು ನೀಡಲಾಗುತ್ತಿದೆ. ಸೆಪ್ಟಂಬರ್ 10ರಿಂದ ಆರಂಭಗೊಂಡಿರುವ ಸ್ಮಾರ್ಟ್ ಪೋನ್ ಫೆಸ್ಟ್ ಜನವರಿ 10ರ ತನಕ ಮುಂದವರಿಯಲಿದ್ದು ಪ್ರತಿ ಮೊಬೈಲ್ ಖರೀದಿಯ ಮೇಲೆಯೂ ವಿಶೇಷ ಬಹುಮಾನಗಳನ್ನು ಗೆಲ್ಲಬಹುದಾಗಿದೆ. ಟಿವಿಎಸ್ ಜ್ಯೂಪಿಟರ್, ಎಲ್.ಇ.ಡಿ ಟಿವಿ, ಸ್ಮಾರ್ಟ್ ವಾಚ್, ಏರ್ ಪೋಡ್, ಸೇರಿದಂತೆ ಹತ್ತಾರು ಬಹುಮಾನಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿಪ್ರೀತಿ ಮೊಬೈಲ್ಸ್ ಬೈಂದೂರುಪಂಚಾಯತ್ ಕಟ್ಟಡ, ಪೊಲೀಸ್ ಸ್ಟೇಷನ್ ಎದುರುಗಡೆ ಬೈಂದೂರುಮೊಬೈಲ್ – 8861087889
