ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಐ.ಸಿ.ಎಸ್.ಸಿ.ಇ. ಕೇಂದ್ರೀಯ ಪಠ್ಯಕ್ರಮದ 10ನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು ಸತತ 17ನೇ ಬಾರಿಗೆ ದಾಖಲೆಯ 100% ಫಲಿತಾಂಶವನ್ನು ಸಾಧಿಸಿದೆ. ಪರೀಕ್ಷೆಗೆ ಕುಳಿತ 130 ವಿದ್ಯಾರ್ಥಿಗಳು ಅಮೋಘ ಸಾಧನೆಯೊಂದಿಗೆ ಶಾಲೆಗೆ ಕೀರ್ತಿ ತಂದಿದ್ದಾರೆ. ಪ್ರತಿಶತ 97.4 ಅಂಕಗಳೊಂದಿಗೆ ಕನ್ನಿಕಾ ಜಿ. ಭಟ್ ಮತ್ತು ಆರ್ಯ ಯಡಿಯಾಳ ಪ್ರಥಮ ಸ್ಥಾನವನ್ನು, ಯುವನ್ ಮತ್ತು ಸುಜನ್ ವಿ.ಎಸ್. ಪ್ರತಿಶತ 96.0 ಅಂಕದೊಂದಿಗೆ ದ್ವಿತೀಯ ಸ್ಥಾನವನ್ನು ವಸುಂಧರಾ ಮತ್ತು ಪವನ್ ಎಸ್. ಶೆಟ್ಟಿ ಪ್ರತಿಶತ 95.4 ಅಂಕದೊಂದಿಗೆ ತೃತೀಯ ಸ್ಥಾನವನ್ನು ಪಡೆದರು. ಪರೀಕ್ಷೆಗೆ ಕುಳಿತ 130 ವಿದ್ಯಾರ್ಥಿಗಳಲ್ಲಿ 86 ವಿದ್ಯಾರ್ಥಿಗಳು ಡಿಸ್ಟಿಂಗ್ಕ್ಷನ್ ಪಡೆಯುವುದರ ಮೂಲಕ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಲ್. ಟಿ. ತಿಮ್ಮಪ್ಪ ಹೆಗಡೆ, ಉಪಾಧ್ಯಕ್ಷರಾದ ಡಾ. ಹೆಚ್. ಶಾಂತಾರಾಮ್, ಕಾರ್ಯದರ್ಶಿಗಳಾದ ವೇ. ಹೆಚ್. ಬಾಲಚಂದ್ರ ಭಟ್ ಪ್ರಾಂಶುಪಾಲ ಶರಣ ಕುಮಾರ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿ ಶೇ. 94.37 ಫಲಿತಾಂಶ ಪಡೆದುಕೊಂಡಿದ್ದಾರೆ. 24 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಹಾಗೂ 82 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶ್ರೇಯಾ ಭಟ್ 588 ಅಂಕ ಪಡೆದು ರಾಜ್ಯಕ್ಕೆ ಹತ್ತನೇ ರ್ಯಾಂಕ್, ಜಿಲ್ಲೆಗೆ 5ನೇ ರ್ಯಾಂಕ್ ಪಡೆದಿದ್ದು, ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಕೆ.ಕಿರಣ್ ಕಾಮತ್ (572) ದ್ವಿತೀಯ, ಪಲ್ಲವಿ (544) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಕೀರ್ತಿ ಕೆ 574 ಪ್ರಥಮ, ಕೇಶವ ಪೂಜಾರಿ (568) ದ್ವಿತೀಯ, ಸಾಗರಿಕಾ ಎನ್ (559) ಹಾಗೂ ಸೃಜನ್ ಆರ್. ಕುಲಾಲ್ (559) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಭ್ರಮರ ಕೆ (552) ಪ್ರಥಮ , ಸುನಿಲ್ ನಾಯಕ್ (503) ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಉಪ್ಪುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ 88.65% ಫಲಿತಾಂಶ ದಾಖಲಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಕಾಲೇಜು ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ, ವಾಣಿಜ್ಯ ವಿಭಾಗದಲ್ಲಿ ಶೇ.96 ಫಲಿತಾಂಶ ದಾಖಲಿಸಿದೆ. 19 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶ್ವೇತಾ (512), ವಾಣಿಜ್ಯ ವಿಭಾಗದಲ್ಲಿ (567), ಕಲಾ ವಿಭಾಗದಲ್ಲಿ ಸುಶ್ಮಿತಾ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜು.16ರ ಗುರುವಾರ 109 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 62, ಉಡುಪಿ ತಾಲೂಕಿನ 36 ಹಾಗೂ ಕಾರ್ಕಳ ತಾಲೂಕಿನ 11 ಮಂದಿಗೆ ಪಾಸಿಟಿವ್ ಬಂದಿದೆ. ಒಟ್ಟು ಪ್ರಕರಣಗಳಲ್ಲಿ 61 ಪುರುಷರು, 40 ಮಹಿಳೆಯರು, 8 ಮಕ್ಕಳು ಸೇರಿದ್ದಾರೆ. ಇಂದು 80 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಮರವಂತೆಯ 54 ವರ್ಷದ ವ್ಯಕ್ತಿ ಇಂದು ಮೃತಪಟ್ಟಿದ್ದು ಅವರಿಗೆ ಕೊರೋನಾ ಪಾಸಿಟಿವ್ ಇರುವುದು ದೃಢವಾಗಿದೆ. ಮೃತ ವ್ಯಕ್ತಿ ಅಸ್ತಮಾದಿಂದ ಬಳಲುತ್ತಿದ್ದು ಬುಧವಾರ ಸಂಜೆ ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮದ್ಯೆ ಅವರು ಮೃತಪಟ್ಟಿದ್ದರು. ಮೃತದೇಹವನ್ನು ಕುಂದಾಪುರಕ್ಕೆ ತಂದು ಸರಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಕೊರೋನಾ ರ್ಯಾಪಿಡ್ ಟೆಸ್ಟ್ ವರದಿಯಲ್ಲಿ ಕೊರೋನಾ ಪಾಸಿಟಿವ್ ಇರುವುದು ತಿಳಿದುಬಂದಿದೆ. ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆ ಇಬ್ಬರು ವೈದ್ಯರು, ಓರ್ವ ನರ್ಸ್ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಹರ್ಷ ಜೆ. ಆಚಾರ್ಯ ವಾಣಿಜ್ಯ ವಿಭಾಗದಲ್ಲಿ 593 (98.33) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾನೆ. ರಾಜ್ಯದಲ್ಲಿ ಟಾಪ್ ಟೆನ್ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ, ಈತ ಕಾಲ್ತೋಡು ಗ್ರಾಮದ ಅಲ್ಸಡಿ ಜಗದೀಶ್ ಆಚಾರ್ ಹಾಗೂ ಹೇಮಾ ದಂಪತಿಗಳ ಪುತ್ರ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ವೆಂಕಟರಮಣ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಆದಿತ್ಯ ವಿ. ದೇವಾಡಿಗ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 576 (96%) ಅಂಕ ಪಡೆದುಕೊಂಡಿದ್ದಾನೆ. ಈತ ಅನಿವಾಸಿ ಕನ್ನಡಿಗ ವಾಸು ದೇವಾಡಿಗ ಹಾಗೂ ಜಯಂತಿ ವಿ. ದೇವಾಡಿಗ ಅವರ ಪುತ್ರ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಬೈಂದೂರು ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ. ಮತ್ತೊಮ್ಮೆ ಠಾಣೆಯನ್ನು ಸೀಲ್’ಡೌನ್ ಮಾಡುವಂತಾಗಿದೆ. ಠಾಣೆಯ ಎ.ಎಸ್.ಐ, ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಹೋಂ ಗಾರ್ಡ್ ಓರ್ವರಿಗೆ ಪಾಸಿಟಿವ್ ಬಂದಿದ್ದು, ಅವರನ್ನು ಕುಂದಾಪುರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಪಾಸಿಟಿವ್ ಬಂದಿರುವ ಸಿಬ್ಬಂದಿಯ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ ಅವರನ್ನು ಹೋಂ ಕ್ವಾರಂಟೈನ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಕುಂದಾಪ್ರ ಡಾಟ್ ಕಾಂ. ಜೂನ್ 21ರಂದು ಬೈಂದೂರು ಪೊಲೀಸ್ ಸಿಬ್ಬಂದಿ ಓರ್ವರಿಗೆ ಪಾಸಿಟಿವ್ ಬಂದಿತ್ತು. ಜೂನ್ 22ರಂದು ಅದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದ ಈರ್ವರಿಗೆ ಪಾಸಿಟಿವ್ ದೃಡವಾಗಿತ್ತು. ಸದ್ಯ ಅವರು ಗುಣಮುಖದಾಗಿದ್ದರು. ಕುಂದಾಪ್ರ ಡಾಟ್ ಕಾಂ. ಠಾಣೆ ಸೀಲ್ ಡೌನ್? ಪೊಲೀಸ್ ಸಿಬ್ಬಂದಿಗೆ ಪಾಸಿಟಿವ್ ಬಂದಿರುವುದು ದೃಢವಾದಲ್ಲಿ ಠಾಣೆಯನ್ನು ತಾತ್ಕಾಲಿಕವಾಗಿ ಮುಚ್ಚಿ ಸ್ಯಾನಿಟೈಜೇಷನ್ ಮಾಡಿದ ಬಳಿಕ ಒಂದೆರಡು ದಿನಗಳಲ್ಲಿ ಮತ್ತೆ ಪುನರಾರಂಭಿಸಲಾಗುತ್ತದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜು.15ರ ಬುಧವಾರ 53 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 29, ಉಡುಪಿ ತಾಲೂಕಿನ 18 ಹಾಗೂ ಕಾರ್ಕಳ ತಾಲೂಕಿನ 6 ಮಂದಿಗೆ ಪಾಸಿಟಿವ್ ಬಂದಿದೆ. ಒಟ್ಟು ಪ್ರಕರಣಗಳಲ್ಲಿ 24 ಪುರುಷರು, 22 ಮಹಿಳೆಯರು, 7 ಮಕ್ಕಳು ಸೇರಿದ್ದಾರೆ. ಇವರಲ್ಲಿ 2 ಮಂದಿ ಮಂಬೈ ಪ್ರಯಾಣದ ಹಿನ್ನೆಲೆ, 2 ಮಂದಿ ಬೆಂಗಳೂರು ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಪ್ರಾಥಮಿಕ ಸಂಪರ್ಕದಿಂದ 33 ಮಂದಿಗೆ ಹಾಗೂ ILI (influenza-like illness) ಇರುವ 16 ಮಂದಿಗೆ ಪಾಸಿಟಿವ್ ಬಂದಿದೆ. ಇಂದು 22 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 832 ನೆಗೆಟಿವ್: ಈ ತನಕ ಒಟ್ಟು 23,108 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 20,667 ನೆಗೆಟಿವ್, 1,786 ಪಾಸಿಟಿವ್ ಬಂದಿದ್ದು, 655 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 832 ನೆಗೆಟಿವ್, 53 ಪಾಸಿಟಿವ್ ಬಂದಿದೆ. ಒಟ್ಟು 1,766 ಮಂದಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಂಗಳೂರು ವಿಕಾಸ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆಶ್ರಿತಾ ಮದ್ದೋಡಿ ವಿಜ್ಞಾನ ವಿಭಾಗದಲ್ಲಿ ಶೆ.97.8 (587) ಅಂಕ ಪಡೆದು ರಾಜ್ಯದಲ್ಲಿ 10ನೇ ಸ್ಥಾನ ಪಡೆದುಕೊಂಡಿದ್ದಾಳೆ. ವಿಜ್ಞಾನ ವಿಭಾಗದಲ್ಲಿ ದ.ಕ ಜಿಲ್ಲೆಗೆ 6ನೇ ಸ್ಥಾನ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಆಶ್ರಿತಾ ಪಿಜಿಕ್ಸ್ನಲ್ಲಿ – 99, ಕೆಮಿಸ್ಟ್ರೀ – 99, ಮ್ಯಾಥ್ಸ್-99, ಬಯಾಲಜಿ – 100, ಕನ್ನಡ-98, ಇಂಗ್ಲೀಷ್ನಲ್ಲಿ 92 ಅಂಕ ಪಡೆದಿದ್ದಾಳೆ. ಈಕೆ ಬೈಂದೂರು ರತ್ತೂಬಾಯಿ ಜನತಾ ಪ್ರೌಢಶಾಲೆಯ ಅಧ್ಯಾಪಕ ಆನಂದ ಮದ್ದೋಡಿ ಹಾಗೂ ಲತಾ ಆನಂದ ಅವರ ಪುತ್ರಿ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ರೋಹಿತ್ ದೇವಾಡಿಗ ದ್ವಿತೀಯ ಪಿಯುಸಿ ಪರೀಕ್ಷೆಯಲಿ ಶೇ.91 (546) ಅಂಕ ಪಡೆದು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗಿದ್ದಾನೆ. ಈತ ಉಪ್ಪುಂದ ಹೊಳೆಬಾಗಿಲು ಯೋಗೀಶ್ವರ ದೇವಾಡಿಗ ಮತ್ತು ರಾಜಶ್ರೀ ದೇವಾಡಿಗ ದಂಪತಿಯ ಪುತ್ರ.
