ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ತ್ರಾಸಿ-ಮರವಂತೆ ಹಾಗೂ ಸೋಮೇಶ್ವರ ಬೀಚ್ ಅಭಿವೃದ್ಧಿ ಬಗ್ಗೆ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಸಂಸದ ಬಿ. ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ ಗುರುವಾರ ತ್ರಾಸಿ ಕೊಂಕಣ ಖಾರ್ವಿ ಸಭಾಭವನದಲ್ಲಿ ಪ್ರವಾಸೋದ್ಯಮ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಯಿತು. ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ ಮರವಂತೆ ತ್ರಾಸಿ ಬೀಚ್ ಹಾಗೂ ಒತ್ತಿನಣೆಗೆ ಬೀಚ್ ಅಭಿವೃದ್ಧಿಗೆ ಒಟ್ಟು25 ಕೋಟಿ ರೂ ಯೋಜನೆ ಸಿದ್ಧವಾಗುತ್ತಿದೆ. ಮರವಂತೆ ಬೀಚ್ಗೆ ಈ ಮೊದಲೇ 5 ಕೋಟಿ ಯೋಜನೆ ಸಿದ್ಧಗೊಂಡಿದ್ದು ಬಜೆಟ್ನಲ್ಲಿ 10 ಕೋಟಿ ಹಾಗೂ ಸೋಮೇಶ್ವರ ಬೀಚ್ಗೆ10 ಕೋಟಿಗೆ ಅನುಮೋದನೆ ದೊರೆತಿದೆ. ಶೀಘ್ರವೇ ಎರಡೂ ಬೀಚ್ಗಳು ಮಾದರಿ ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆ ಎಂದರು. ಸಂಸದರಾದ ಬಿ. ವೈ. ರಾಘವೇಂದ್ರ ಅವರು ಮಾತನಾಡಿ ಪ್ರವಾಸೋದ್ಯಮಕ್ಕಾಗಿ ರಾಜ್ಯ ಸರಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ಮೂಲಕ ಪ್ರವಾಸಿ ತಾಣ ಅಭಿವೃದ್ಧಿ ಜೊತೆಗೆ ಯುವಶಕ್ತಿಗೆ ಉದ್ಯೋಗವು ದೊರೆಯಲಿದೆ. ಸೋಮೇಶ್ವರ ಬೀಚ್ ಹಾಗೂ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಓಕ್ ವುಡ್ ಶಾಲೆಯಲ್ಲಿ ‘ಮಳೆ ನೀರಿನೊಂದಿಗೆ ಅನುಸಂಧಾನ’ ವಿಶೇಷ ಕಾರ್ಯಾಗಾರ ಜರುಗಿತು. ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರತ್ನಶ್ರೀ ಜೋಸೆಫ್ ಜಿ ಎಮ್ ರೆಬೆಲ್ಲೊ ಕುಡಿಯುವ ನೀರಿನ ಸಮಸ್ಯೆ “ಮಳೆ ನೀರಿನೊಂದಿಗೆ ಅನುಸಂಧಾನ” ಎಂಬ ವಿಚಾರದ ಬಗ್ಗೆ ವಿಧ್ಯಾರ್ಥಿಗಳಿಗೆ ವಿವರಿಸಿದರು ಮತ್ತು ಅದರಲ್ಲೂ ವಿಶೇಷವಾಗಿ ನೀರಿನ ಹಾಗೂ ಸ್ವಚ್ಚತೆಯ ವಿಚಾರದಲ್ಲಿ ಮಾಹಿತಿ ನೀಡಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮಾಹಿತಿಯನ್ನು ನೀಡಿದರು. ಪೋಟ್೯ ಗೇಟ್ ಎಜ್ಯುಕೇಶನ್ ಕಾರ್ಯದರ್ಶಿ ನೀತ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ವಿನೋದ ಸುವರ್ಣ ವ್ಯಕ್ತಿ ಪರಿಚಯವನ್ನು ಮಾಡಿದರು ಅವಿಲಾ ಡಿಸೋಜ ಕಾರ್ಯಕ್ರಮದ ಸಾರಾಂಶವನ್ನು ತಿಳಿಸಿದರು. ವಂದನಾರ್ಪಣೆಯನ್ನು ಸಹನಾ ಶೆಟ್ಟಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳು ಮತ್ತು ಮುಖ್ಯಶಿಕ್ಷಕರು ಸಹಶಿಕ್ಷಕರು ಶಾಲೆಯ ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಲಾ ಸಂಸ್ಥೆಯಾದ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ‘ತ್ರಿದಿನ ನಾಟಕೋತ್ಸವ’ ರಂಗ ಸುರಭಿ 2021ಎ.3 ರಿಂದ 5ರವರೆಗೆ ಪ್ರತಿದಿನ ಸಂಜೆ 6ಕ್ಕೆ ಬೈಂದೂರಿನ ಶಾರದಾ ವೇದಿಕೆಯಲ್ಲಿ ಜರುಗಲಿದೆ ಎಂದು ಸುರಭಿ ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಹೇಳಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎ.೩ರಂದು ಬೈಂದೂರು ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ ಅವರು ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ನಾಟಕಕರ್ತ ವಿಠ್ಠಲ ಭಂಡಾರಿ ದಿನದ ನುಡಿಗಳನ್ನಾಡಲಿದ್ದಾರೆ. ಅಂದು ಉಪನ್ಯಾಸಕಿ, ಸಾಹಿತಿ ಸುಧಾ ಆಡುಕಳ ಗೌರವ ಸನ್ಮಾನವಿರಲಿದೆ. ಏ.4ರಂದು ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ಅವರು ದಿನದ ನುಡಿಗಳನ್ನಾಡಲಿದ್ದು, ರಂಗಭೂಮಿ ಹಾಗೂ ಕಿರುತೆರೆ ನಟ ಪ್ರದೀಪಚಂದ್ರ ಕುತ್ಪಾಡಿ ಅವರಿಗೆ ಗೌರವ ಸನ್ಮಾನಿವಿರಲಿದೆ. ಎ.೫ಂದು ಪ್ರಾಧ್ಯಾಪಕ ಸುಜಯೀಂದ್ರ ಹಂದೆ ದಿನದ ನುಡಿಗಳನ್ನಾಡಲಿದ್ದು, ಚಿತ್ರಕಲಾವಿದ ಎಂ.ಎಲ್. ಸೋಮವಾರದ ಅವರಿಗೆ ಗೌರವ ಸನ್ಮಾನವಿರಲಿದೆ ಎಂದು ಹೇಳಿದರು. ಮೂರು ನಾಟಕಗಳು ಎ.3ರ ಶನಿವಾರ ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕೃತಿಯಾಧಾರಿದ ಸುರಭಿ ರಿ.…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ/ಸೌದಿ ಅರೇಬಿಯಾ: ಕಳೆದ 3 ತಿಂಗಳಿನಿಂದ ಪಾರ್ಶ್ವವಾಯು ಪೀಡಿತರಾಗಿ ಸೌದಿ ಅರೇಬಿಯಾದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಎಸಿ ಟೆಕ್ನೀಷಿಯನ್, ಕುಂದಾಪುರದ ಖಾರ್ವಿಕೇರಿ ನಿವಾಸಿ ಚಂದ್ರಶೇಖರ ಪಾಂಡುರಂಗ ಸಾರಂಗ ಅವರನ್ನು ಸುರೇಶ್ ರಾವ್ ನೇರಂಬಳ್ಳಿ ಹಾಗೂ ಗಲ್ಫ್ ಕನ್ನಡಿಗರ ಒಕ್ಕೂಟದಿಂದ ಮಾನವೀಯತೆಯ ಕಾರ್ಯಾಚರಣೆಯಿಂದಾಗಿ ಹುಟ್ಟೂರಿಗೆ ಕರೆತರಲು ಸಾಧ್ಯವಾಗಿದೆ. ಕಳೆದ 30 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಎಸ್ ಟೆಕ್ನೀಷಿಯನ್ ಆಗಿ ದುಡಿಯುತ್ತಿರುವ ನಿವಾಸಿ ಚಂದ್ರಶೇಖರ ಪಾಂಡುರಂಗ ಸಾರಂಗ ಅವರು ರಿಯಾದ್’ನ ಆಸ್ಪತ್ರೆಯಲ್ಲಿ ಪಾರ್ಶ್ವವಾಯುವಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಭಾರತೀಯ ಸ್ನೇಹಿತರ ಸಹಕಾರದಿಂದ ಕುಂದಾಪುರದಲ್ಲಿರುವ ಕುಟುಂಬಿಕರಿಗೆ ವಿಷಯ ತಲುಪಿಸಲಾಗಿತ್ತು. ಕೊರೋನಾ ಮಹಾಮಾರಿ ಕಾರಣದಿಂದ ಆಸ್ಪತ್ರೆಗೆ ಸಂದರ್ಶಕರನ್ನು ಬಿಡುತ್ತಿರಲ್ಲಿಲ್ಲ ಅವರ ಆರೋಗ್ಯ ಸ್ಥಿತಿಯನ್ನು ತಿಳಿಯದೇ ಆತಂಕಗೊಂಡು ಅವರ ಮಗನು ಮೂಲತ: ಕೋಟೇಶ್ವರದವರಾದ ಪ್ರಸ್ತುತ ಕುವೈತ್ ನಲ್ಲಿರುವ ಸುರೇಶ್ ರಾವ್ ನೇರಂಬಳ್ಳಿಯವರನ್ನು ಸಂಪರ್ಕಿಸಿ ಅವರನ್ನು ಭಾರತಕ್ಕೆ ಕರೆತರುವ ಬಗ್ಗೆ ಸಹಾಯಕ್ಕಾಗಿ ಕೇಳಿಕೊಂಡಿದ್ದರು. ಸುರೇಶ್ ರಾವ್ ಅವರು ಚಂದ್ರಶೇಖರ್ ಅವರ ಕಂಪೆನಿ ಮತ್ತು ಮಾಲೀಕರ ಬಗ್ಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಬದುಕಿನಲ್ಲಿ ಏನಾದರೂ ಸಾಧಿಸುವ ಛಲವಿದ್ದು, ಅದರ ಕಡೆ ಹೆಚ್ಚು ಗಮನ ಹರಿಸಿ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಸಾಧನೆ ಸಾಧ್ಯ ಎಂದು ಶ್ರೀಕ್ಷೇತ್ರ ಅಮೃತೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಆನಂದ್ ಸಿ ಕುಂದರ್ ತಿಳಿಸಿದರು. ಅವರು ಡಾ. ಶಿವರಾಮ ಕಾರಂತ ಪ್ರತಿಷ್ಠಾನ ರಿ. ಕೋಟ ಡಾ. ಕಾರಂತ ಟ್ರಸ್ಟ್ ರಿ. ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲೆಯ ಮೊದಲ ಯುವ ಸಾಹಿತ್ಯ-ಸಂಸ್ಕೃತಿ ಸಮ್ಮೆಳನ ತಿಂಗಳ ಪುರಸ್ಕಾರ ಪ್ರದಾನ, ಅಭಿನಂದನಾ ಸಮಾರಂಭ ಅನರ್ಘ್ಯ-2021(ಚಮತ್ಕಾರದ ಬೆರಗು) ಕಾರ್ಯಕ್ರಮ ಸಮಾರೋಪ ಸಮಾರಂಭ ಹಾಗೂ ಸಾಧಕರಿಗೆ ತಿಂಗಳ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಸುರೇಂದ್ರ ಶೆಟ್ಟಿ ಸ್ಮಾರಕ ಕುಂದಕನ್ನಡ ಶ್ರೀ ಪುರಸ್ಕಾರ ಸ್ವರಾಜ್ಯ ಲಕ್ಷ್ಮೀ, ಮಂಜುನಾಥ ಕೋಟ ರಂಗಭೂಮಿ ಪುರಸ್ಕಾರ ರವಿ ಎಸ್ ಬೈಕಾಡಿ, ಕೆ.ಸಿ ಕುಂದರ್ ಉದ್ಯಮಿ ಪುರಸ್ಕಾರ ಶಿವರಾಮ ಕೊಠಾರಿ, ರಾಘವೇಂದ್ರ ಉರಾಳ ಸಾಂಸ್ಕೃತಿಕ ಪುರಸ್ಕಾರ ಅವಿನಾಶ್ ಕಾಮತ್, ಪಿ. ಕಾಳಿಂಗ…
ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡಿದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇನೆ ಸೇರುತ್ತಿದ್ದು, ಬೈಂದೂರು ತಾಲೂಕಿನ ಯುವತಿಯೂರ್ವಳು ಇದೀಗ ಭಾರತೀಯ ಗಡಿ ಭದ್ರತಾ ಪಡೆಗೆ (BSF) ಸೇರಲು ಸಿದ್ಧಳಾಗಿದ್ದಾಳೆ. ಬೈಂದೂರು ತಾಲೂಕಿನ ಏಳಜಿತ ಗ್ರಾಮದ ಹುಣ್ಸೆಮಕ್ಕಿ ನಿವಾಸಿಯಾದ ವಿದ್ಯಾ ಗೌಡ ಪ್ರಸಕ್ತ ಸಾಲಿನಲ್ಲಿ ಸೇನೆಗೆ ಸೇರುತ್ತಿರುವ ಉಡುಪಿ ಜಿಲ್ಲೆಯ ಏಕೈಕ ಅಭ್ಯರ್ಥಿಯೆನಿಸಿಕೊಂಡಿದ್ದು ಏಪ್ರಿಲ್ 1ರಿಂದ ತರಬೇತಿಗೆ ಹಾಜರಾಗಲಿದ್ದಾರೆ. ಏಳಜಿತದ ಗ್ರಾಮದ ಹುಣ್ಸೆಮಕ್ಕಿ ರಮೇಶ್ ಗೌಡ ಹಾಗೂ ಪಾರ್ವತಿ ದಂಪತಿಗಳ ಇಬ್ಬರು ಮಕ್ಕಳಲ್ಲಿ ಕಿರಿಯವಳಾದ ವಿದ್ಯಾ ಹೆಚ್. ಗೌಡ ಅವರು ಕ್ರೀಡೆ ಹಾಗೂ ಕಲಿಕೆಯಲ್ಲಿ ಬಾಲ್ಯದಿಂದಲೂ ಚುರುಕು. ವಿದ್ಯಾ ಪ್ರಾಥಮಿಕ ಶಿಕ್ಷಣವನ್ನು ಏಳಜಿತ ಶಾಲೆ, ಹೈಸ್ಕೂಲ್ ಶಿಕ್ಷಣವನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ಪ್ರೌಢಶಾಲೆ, ಪಿಯುಸಿ ಶಿಕ್ಷಣವನ್ನು ಕುಂದಾಪುರ ಜ್ಯೂನಿಯರ್ ಕಾಲೇಜು, ಬಿಎಸ್ಸಿ ಪದವಿಯನ್ನು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ಹಾಗೂ ಬಿ.ಎಡ್ ಪದವಿಯನ್ನು ಕೋಡಿ ಬ್ಯಾರೀಸ್ ಕಾಲೇಜಿನಲ್ಲಿ ಪೂರೈಸಿದ್ದಾರೆ. ಬಿ.ಎಡ್ ಪದವಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದರೆ: ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಸ್ನಾತಕೋತ್ತರ ವಿಭಾಗದ ವತಿಯಿಂದ ‘ಕ್ಲಾಸ್ರೂಮ್ ಟು ನ್ಯೂಸ್ರೂಮ್ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಹವ್ಯಾಸಿ ಪತ್ರಕರ್ತ ಚೈತನ್ಯ ಕುಡಿನಲ್ಲಿ ಪತ್ರಿಕಾ ಬರವಣಿಗೆ ಹಾಗೂ ಪುಟವಿನ್ಯಾಸದ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮಾಹಿತಿ ನೀಡಿದರು. ವಿದ್ಯಾರ್ಥಿಜೀವನದಲ್ಲಿ ಎಲ್ಲರೀತಿಯ ಕೌಶಲ್ಯಗಳನ್ನು ಬೆಳೆಸಿಕೊಂಡಾಗ ವೃತ್ತಿಜೀವನದಲ್ಲಿ ಸುಲಲಿತವಾಗಿ ಕೆಲಸ ಮಾಡಬಹುದು. ಪತ್ರಿಕೋದ್ಯಮ ತರಗತಿಗಳಿಂದ ವೃತ್ತಿಪರ ಮಾಧ್ಯಮದೆಡೆಗಿನ ಪಯಣದಲ್ಲಿ ಎಲ್ಲ ರೀತಿಯ ಕೌಶಲ್ಯವನ್ನು ಕಲಿತುಕೊಂಡಾಗ ಉತ್ತಮ ಪತ್ರಕರ್ತರಾಗಲು ಸಾಧ್ಯ. ಒಬ್ಬ ಪತ್ರಕರ್ತನಿಗೆ ವಿವಿಧ ವಿಷಯಗಳ ಅನುಭವ ಇರಬೇಕಾಗುತ್ತದೆ ಎಂದು ಅವರು ಸಲಹೆ ನೀಡಿದರು. ಸೃಜನಶೀಲ ಹಾಗೂ ಸೃಜನೇತರ ಬರವಣಿಗೆ ಕುರಿತು ಮಾಹಿತಿ ನೀಡಿದ ಅವರು ಏನನ್ನೇ ವರದಿ ಮಾಡುವ ಮೊದಲು ಪೂರ್ವತಯಾರಿ ಮಾಡಿಕೊಳ್ಳಬೇಕು. ಯಾವುದೇ ಘಟನೆ ಸಂಭವಿಸಿದಾಗ ಅದನ್ನು ಯಥಾವತ್ತಾಗಿ ವರದಿ ಮಾಡುವ, ಓದುಗರಿಗೆ ಅದು ತಲುಪುವಂತೆ ಮಾಡುವ ಸಾಮರ್ಥ್ಯ ಒಬ್ಬ ಪತ್ರಕರ್ತನಿಗಿರಬೇಕು ಎಂದು ತಿಳಿಸಿದರು. ಪತ್ರಿಕಾ ಪುಟ ವಿನ್ಯಾಸದ ಬಗ್ಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕರ್ನಾಟಕ ಸರ್ಕಾರ, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ದೂರದರ್ಶನ ಕೇಂದ್ರ ಬೆಂಗಳೂರು ಇವರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ರಾಜ್ಯಮಟ್ಟದ ಸರ್ ಸಿವಿ ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಮಾ.27 , 28, ಮತ್ತು 29ರಂದು ದೂರದರ್ಶನ ಕೇಂದ್ರ ಬೆಂಗಳೂರಿನಲ್ಲಿ ನಡೆದ ‘ಥಟ್ ಅಂತ ಹೇಳಿ’ ಕಾರ್ಯಕ್ರಮದಲ್ಲಿ ಆಯೋಜಿಸಲಾಯಿತು. ಈ ಸ್ಪರ್ಧೆಯಲ್ಲಿ ಪ್ರಜ್ಞಾನ್ ಪಿ ಶೆಟ್ಟಿ ಮತ್ತು ಅನಿಕೇತ್ ಆರ್ ಇವರು ಲಿಟಲ್ ರಾಕ್ ಇಂಡಿಯನ್ ಶಾಲೆ , ಬ್ರಹ್ಮಾವರ , ಉಡುಪಿ ಜಿಲ್ಲೆಯಿಂದ ಭಾಗವಹಿಸಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿ ಪ್ರಶಸ್ತಿ ಪತ್ರದೊಂದಿಗೆ ನಗದು ಪುರಸ್ಕಾರ ಪಡೆದುಕೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನ್ಯಾನಲ್ ಕೆಡೆಟ್ ಕೋರ್ (ಎನ್ಸಿಸಿ) ನಮ್ಮ ದೇಶದ ಒಂದು ಪ್ರಮುಖ ಯುವ ಸಂಘಟನೆ. ಇದನ್ನು ಸೆಕೆಂಡ್ ಲೈನ್ ಆಫ್ ಡಿಫೆನ್ಸ್ ಎಂದೇ ಪರಿಗಣಿಸಲಾಗಿದೆ. ಇಂದು ದೇಶಾದ್ಯಂತ ಅಸ್ತಿತ್ವದಲ್ಲಿರುವ ಈ ಸಂಘಟನೆಗೆ ಆರು ದಶಕಗಳಿಗೂ ಹೆಚ್ಚಿನ ಇತಿಹಾಸವಿದೆ ಎಂದು ನಿವೃತ್ತ ಸೈನಿಕರು ಬೈಂದೂರು ಚಂದ್ರಶೇಖರ ನಾವಡರವರು ನುಡಿದರು ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರಿನಲ್ಲಿ ಪ್ರಪ್ರಥಮ ಬಾರಿಗೆ ಆರಂಭಗೊಳ್ಳುತ್ತಿರುವ 6/8 ಎನ್ಸಿಸಿ ನೇವಿ ಕರ್ನಾಟಕ ಉಡುಪಿ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಭಾರತೀಯ ಸೇನೆಯ ವಿವಿಧ ಕ್ಷೇತ್ರದಲ್ಲಿ ಯುವ ಪೀಳಿಗೆಗೆ ವಿಪುಲ ಅವಕಾಶಗಳಿದ್ದು ಎನ್ಸಿಸಿಯಲ್ಲಿ ಸಿ ಸರ್ಟಿಫಿಕೇಟ್ ಪಡೆಯುವ ಮೂಲಕ ಸೇನೆಯಲ್ಲಿ ನೇರ ಪ್ರವೇಶ ಗಳಿಸಬಹುದು ಎಂದು ವಿವರಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾದ ದೀಪಕ್ ಕುಮಾರ ಶೆಟ್ಟಿ ಮಾತನಾಡಿ, ಕಾಲೇಜಿನ ಮೊಟ್ಟಮೊದಲ ಬಾರಿಗೆ ಆರಂಭಗೊಳ್ಳುತ್ತಿರುವ ಎನ್ಸಿಸಿ ನೇವಿ ಘಟಕಕ್ಕೆ ಶುಭಾಶಯವನ್ನು ಕೋರಿ, ವಿದ್ಯಾರ್ಥಿಗಳಿಗೆ ಜೀವನವನ್ನು ರೂಪಿಸುವಲ್ಲಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಇದು ಸುವರ್ಣ ಅವಕಾಶ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಎಂ.ಕಾಂ. ಹೆಚ್ಆರ್ಡಿ ವಿಭಾಗದ ವತಿಯಿಂದ ‘ಸೈಕ್ಲಿಂಗ್ ಫಾರ್ ಹ್ಯುಮಾನಿಟಿ’ ವಿಶೇಷ ಕಾರ್ಯಕ್ರಮ ನಡೆಯಿತು. ಸೈಕಲ್ ಸವಾರಿಯ ಮೂಲಕ ಸಾಮಾಜಿಕ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಮಣಿಪುರ ಮೂಲದ ಸೈಕಲ್ ಸವಾರ ಫಿಲೆಮ್ ರೋಹನ್ ಸಿಂಗ್ ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಭಾಗವಹಿಸಿದ್ದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಫಿಲೆಮ್ ರೋಹನ್ ಸಿಂಗ್, ನಾವು ಮಾಡುವ ಕೆಲಸಗಳು ಇತರರ ಮೇಲೆ ಪ್ರಭಾವ ಬೀರುವಂತಿರಬೇಕು. ಯಾವುದೇ ನಿರೀಕ್ಷೆ ಇಲ್ಲದೆ ಇತತರಿಗೆ ಸಹಾಯ ಮಾಡಬೇಕು ಎಂದರು. ತಮ್ಮ ಜೀವನಾನುಭವಗಳನ್ನು ಹಂಚಿಕೊಂಡ ರೋಹನ್ ಜೀವನದಲ್ಲಿ ಎದುರಾಗುವ ಸವಾಲುಗಳು ಹಾಗೂ ಅವುಗಳನ್ನು ಎದುರಿಸಬಹುದಾದ ವಿವಿಧ ಸಾಧ್ಯತೆಗಳನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ನಾಳೆ ಏನು ಆಗಬಹುದು ಎಂಬ ಭಯದಲ್ಲಿ ಯಾರು ಇರುತ್ತರೋ ಅವರು ಯಾವುದೇ ಸಾಧನೆ ಮಾಡಲಾರರು. ಆದ್ದರಿಂದ ಪ್ರತಿಯೊಬ್ಬರು ಆ ಚೌಕಟ್ಟಿನಿಂದ ಹೊರಗೆ ಬರಬೇಕು ಸಣ್ಣ ಪುಟ್ಟ ಸಹಾಯ ಮಾಡುವುದರ ಮೂಲಕ ಕೆಲಸ ಪ್ರಾರಂಭಿಸಬೇಕು…
