ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕಾಲೇಜಿನ ಯುಥ್ ರೆಡ್ಕ್ರಾಸ್ ವಿಂಗ್, ಎನ್.ಎಸ್.ಎಸ್, ಎನ್.ಸಿ.ಸಿ ರೆಡ್ ರಿಬ್ಬನ್ ಕ್ಲಬ್, ರೆಡ್ಕ್ರಾಸ್, ಕುಂದಾಪುರ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ರೆಡ್ಕ್ರಾಸ್, ಕುಂದಾಪುರ ಇದರ ಸಬಾಪತಿಗಳಾದ ಜಯಕರ ಶೆಟ್ಟಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ| ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಸುಮಾರು 371 ಯುನಿಟ್ ರಕ್ತವನ್ನು ರಕ್ತದಾನಿಗಳಿಂದ ಸಂಗ್ರಹಿಸಲಾಯಿತು. ಮುಖ್ಯವಾಗಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಯುಥ್ ರೆಡ್ಕ್ರಾಸ್ ವಿಂಗ್ ಅಧಿಕಾರಿ ಪ್ರೊ.ಸತ್ಯನಾರಾಯಣ, ಮತ್ತು ವಿದ್ಯಾರಾಣಿ ಮತ್ತು ಎನ್.ಎಸ್.ಎಸ್ ಅಧಿಕಾರಿ ಅರುಣ ಎ.ಎಸ್. ಮತ್ತು ರಾಮಚಂದ್ರ ಆಚಾರಿ, ಎನ್.ಸಿ.ಸಿ ಅಧಿಕಾರಿಗಳಾದ ಶರಣ್ ಎಸ್.ಜೆ, ಮತ್ತು ಅಂಜನ್ ಕುಮಾರ್, ಮಣಿಪಾಲದ ರಕ್ತಬ್ಯಾಂಕ್ ಇದರ ವೈಧ್ಯಾಧಿಕಾರಿ ಡಾ| ಶೀತಲ್ ಭಾಗವಹಿಸಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಮೇಲ್ಗಂಗೊಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ (ಹವೇ) ಶಾಲೆಯ ಪೂರ್ವ ಪ್ರಾಥಮಿಕ ಶಾಲೆಯ ವತಿಯಿಂದ ತಾಯಂದಿರಿಂದ ಮಕ್ಕಳಿಗೆ ಕೈತುತ್ತು ನೀಡುವ ಕಾರ್ಯಕ್ರಮ ಗುರುವಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರಥಬೀದಿ ಗಂಗೊಳ್ಳಿಯ ಮುಖ್ಯಶಿಕ್ಷಕಿ ಚಂದ್ರಕಲಾ ಮಾತನಾಡಿ ಭಾರತೀಯ ಪರಂಪರೆಯಲ್ಲಿ ತಾಯಿ-ಮಗುವಿನ ಸಂಬಂಧ ಶ್ರೇಷ್ಠವಾದುದು. ಇದು ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ಶಾಲೆಯ ಮುಖ್ಯ ಶಿಕ್ಷಕ ರಮೇಶ ಮಹಾಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರ ಕೆ., ಗೌರವ ಶಿಕ್ಷಕಿ ಸುನೀತಾ ದಿನೇಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಈಶ್ವರ ಜಿ., ಕಿರಣ್ ಎಂ.ಜಿ., ನಟರಾಜ್ ಎಂ.ಜಿ., ಜಗದೀಶ ಮೇಲ್ಗಂಗೊಳ್ಳಿ, ಸಂದೀಪ ಮೇಲ್ಗಂಗೊಳ್ಳಿ, ಎಸ್ಡಿಎಂಸಿ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು. ರಮೇಶ ಮಹಾಲೆ ಸ್ವಾಗತಿಸಿದರು. ಸಹಶಿಕ್ಷಕಿ ಲಲಿತಾ ಕಾರ್ಯಕ್ರಮ ನಿರ್ವಹಿಸಿದರು. ಸುನೀತಾ ದಿನೇಶ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸಹಯೋಗದಲ್ಲಿ ಮಾನವಿಕ ಶಾಸ್ತ್ರದಲ್ಲಿ ಸಾಹಿತ್ಯದ ಹೂರಣ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸುರೇಂದ್ರ ಶೆಟ್ಟಿ ಮಾತನಾಡಿ ಮಾನವಿಕ ಶಾಸ್ತ್ರ ಎನ್ನುವುದು ಒಂದು ಅಧ್ಯಯನವಾಗಿರದೇ ಅದು ಕಲಿಯುವಿಕೆಯ ಆಸಕ್ತಿಯನ್ನು ಮೂಡಿಸಬೇಕು. ಇದರಲ್ಲಿ ಸಾಹಿತ್ಯದ ಮೇಳೈಸುವಿಕೆ ಇದ್ದಾಗ ಒಬ್ಬ ವಿದ್ಯಾರ್ಥಿಗೆ ಓದಿನ ರುಚಿಯನ್ನು ಅರ್ಥೈಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮಾನವಿಕ ಶಾಸ್ತ್ರದ ಕಲಿಯುವಿಕೆ ಜಟಿಲವಾಗದಂತೆ ಮತ್ತು ತಿಳಿದುಕೊಳ್ಳಲು ಸಾಹಿತ್ಯವೆನ್ನುವುದು ಬೇಕೆಬೇಕು. ಅದನ್ನು ನಾವು ಅಳವಡಿಸಿಕೊಳ್ಳಬೇಕು. ಸಾಹಿತ್ಯಕ್ಕೆ ಯಾವುದೇ ದೇಶ ಭಾಷೆ, ಸಂಸ್ಕೃತಿ, ಶಾಸ್ತ್ರಗಳ ಮೇರೆ ಇಲ್ಲ. ಎಲ್ಲೆಂದರಲ್ಲಿ ಸಾಹಿತ್ಯ ಸ್ಪುರಿಸುತ್ತದೆ. ಅದನ್ನು ನಾವು ಮೊದಲು ತಿಳಿದುಕೊಳ್ಳಬೇಕು. ಅಲ್ಲದೇ ಒಳ್ಳೆಯ ಸಾಹಿತ್ಯದ ಓದುಗರಾಗಬೇಕು. ಯಾಕೆಂದರೆ ನಮ್ಮ ಆಲೋಚನಾಲಹರಿ ಅದು ಚುರುಕನ್ನು ಮುಟ್ಟಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ| ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಬಿ.ಬಿ.ಹೆಗ್ಡೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಗಂಗೊಳ್ಳಿಯ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯ ಇಕೋ ಕ್ಲಬ್ನ ವಿದ್ಯಾರ್ಥಿಗಳು ಗಂಗೊಳ್ಳಿ ಗ್ರಾಮದ ಎಸ್.ಎಲ್.ಆರ್.ಎಂ. ಘಟಕಕ್ಕೆ ಗುರುವಾರ ಭೇಟಿ ನೀಡಿದರು. ಎಸ್.ಎಲ್.ಆರ್.ಎಂ. ಘಟಕದಲ್ಲಿ ಘನ ಮತ್ತು ದ್ರವ ತ್ಯಾಜ್ಯಗಳನ್ನು ವಿಂಗಡಿಸಿ, ಸ್ವಚ್ಛಗೊಳಿಸುವ ವಿಧಾನ, ಘಟಕದ ಕಾರ್ಯನಿರ್ವಹಣೆ, ತ್ಯಾಜ್ಯ ಸಂಗ್ರಹ ಮತ್ತಿತರ ಚಟುವಟಿಕೆಗಳನ್ನು ವೀಕ್ಷಿಸಿ, ಇದರ ಸಮಗ್ರ ಮಾಹಿತಿ ಪಡೆದುಕೊಂಡರು. ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಗ್ರಾಪಂ ಸಿಬ್ಬಂದಿ ಉದಯಕುಮಾರ್, ಸ್ವಚ್ಛ ಸುಂದರ ಪರಿಸರ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ನಾವು ಮನೆಯಲ್ಲಿರುವ ತ್ಯಾಜ್ಯಗಳನ್ನು ನದಿ, ಸಮುದ್ರಕ್ಕೆ ಎಸೆಯುವುದರಿಂದ ಜಲಚರಗಳಿಗೆ ಹಾನಿಯಾಗುತ್ತದೆ. ನೀರು ಮಲಿನವಾಗಿ ಕಾಯಿಲೆ ಬರುವ ಸಾಧ್ಯತೆ ಇದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದ ಅವರು, ಎಸ್.ಎಲ್.ಆರ್.ಎಂ ಘಟಕದ ಕಾರ್ಯ ನಿರ್ವಹಣೆ, ತ್ಯಾಜ್ಯಗಳನ್ನು ಬೇರ್ಪಡಿಸಿ ಸ್ವಚ್ಛಗೊಳಿಸುವುದು, ತ್ಯಾಜ್ಯ ಸಂಗ್ರಹಣೆ ವಿಧಾನ ಮತ್ತಿತರ ವಿಷಯಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ಶಾಲೆಯ ಮುಖ್ಯ ಶಿಕ್ಷಕಿ ಝೀಟಾ ರೆಬೆರೊ, ನೋಡೆಲ್ ಶಿಕ್ಷಕ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಆಂತರಿಕ ಗುಣಮಟ್ಟ ಕೋಶ ಹಾಗೂ ಕರಿಯರ್ ಗೈಡನ್ಸ ಹಾಗೂ ಪ್ಲೇಸ್ಮೆಂಟ್ ಸೆಲ್ ವತಿಯಿಂದ How to Plan your Preparation for Civil Service Examination ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರ ಡಿವಿಸನ್ ಉಪ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ ಐ.ಪಿ.ಎಸ್ ಆಗಮಿಸಿ ನಾಗರಿಕ ಸೇವಾ ಪರೀಕ್ಷಾ ತಯಾರಿ ಕುರಿತು, ತಾವು ಪರೀಕ್ಷಾ ತಯಾರಿಯ ವೇಳೆ ಓದಿರುವ ಪುಸ್ತಕಗಳ ವಿವರ ಮತ್ತು ಸಂದರ್ಶನದ ಸಮಗ್ರ ಮಾಹಿತಿ ನೀಡಿದರು. ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಹುದ್ದೆ ಏರಬೇಕೆಂಬ ಆಶಾ ಭಾವನೆಯನ್ನು ವ್ಯಕ್ತಪಡಿಸಿದರು. ಪ್ರಾಂಶುಪಾಲರಾದ ಡಾ| ರಘು ನಾಯ್ಕ ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಆಂತರಿಕ ಗುಣಮಟ್ಟ ಕೋಶ ಸಂಚಾಲಕ ಡಾ| ಅಶ್ವತ್ಥ ಡಿ ನಾಯ್ಕ ಹಾಗೂ ಕರಿಯರ್ ಗೈಡನ್ಸ ಹಾಗೂ ಪ್ಲೇಸ್ಮೆಂಟ್ ಸೆಲ್ ನ ಸಂಚಾಲಕ ವಿನೋದ ಬಸುಪಟ್ಟದ ಕನ್ನಡ ವಿಭಾಗದ…
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಎಲ್ಲಾ ಆದ್ಯತಾ (ಬಿಪಿಎಲ್) ಪಡಿತರ ಚೀಟಿ ಹೊಂದಿರುವವರ ಗಮನಕ್ಕೆ ತರುವುದೇನೆಂದರೆ, ಸರ್ಕಾರಿ ನೌಕರರು/ವೇತನವನ್ನು ಗಣನೆಗೆ ತೆಗೆದುಕೊಳ್ಳದೇ , ಎಲ್ಲಾ ಖಾಸಗಿ ನೌಕರರು/ಸರ್ಕಾರಿ ಅನುದಾನಿತ ನೌಕರರು/ನಿಗಮಗಳು/ ಮಂಡಳಿಗಳು/ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ/ ಸೇವಾ ತೆರಿಗೆ/ವ್ಯಾಟ್/ ವೃತ್ತಿ ತೆರಿಗೆ ಪಾವತಿಸುವ ಎಲ್ಲ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು, ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು, ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಕುಟುಂಬಗಳು, ಕುಟುಂಬದ ವಾರ್ಷಿಕ ಆದಾಯವು 1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು, ಒಂದೇ ಕುಟುಂಬದಲ್ಲಿದ್ದರೂ/ ಒಟ್ಟಿಗೆ ವಾಸಿಸುತ್ತಿದ್ದರೂ ಪ್ರತ್ಯೇಕ ಪ್ರತ್ಯೇಕ ಪಡಿತರ ಚೀಟಿ ಹೊಂದಿರುವುದು, ಮೇಲ್ಕಂಡ…
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿನ ಖಾಸಗಿ ವಾಹನಗಳ ಮೇಲೆ, ಸರ್ಕಾರಿ ಸಂಸ್ಥೆಗಳ ಹೆಸರುಗಳನ್ನು, ಅದರಲ್ಲೂ ಮುಖ್ಯವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಇನ್ನಿತರ ಸರ್ಕಾರಿ ಸಂಸ್ಥೆಗಳ ಹೆಸರನ್ನು ಅನಧಿಕೃತವಾಗಿ ಅಳವಡಿಸಿಕೊಂಡ ಪ್ರಕರಣಗಳು ಕಂಡುಬಂದಲ್ಲಿ, ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಉಡುಪಿ ರಾಮಕ್ಷತ್ರಿಯ ಯುವ ಸಂಫದ ಶತ ಕಾರ್ಯಕ್ರಮ ಸಂಭ್ರಮ ಸಾಂಸ್ಕ್ರತಿಕ ವೈಭವ 2020 ಪ್ರಯುಕ್ತ ಉಡುಪಿ ಪುರಭವನದಲ್ಲಿ ಏರ್ಪಡಿಸಿದ ರಾಮಕ್ಷತ್ರಿಯರ ಸಂಸ್ಕ್ರತಿ ಸಂಪ್ರದಾಯ ಬಿಂಬಿಸುವ ರಾಜ್ಯ ಮಟ್ಟದ ಕಿರುನಾಟಕ ಸ್ಪರ್ಧೆಯಲ್ಲಿ ಬೈಂದೂರಿನ ರಾಮಕ್ಷತ್ರಿಯರು ಅಭಿನಯಿಸಿದ ನಮ್ಮವರ ಸಂಸ್ಕ್ರತಿ ಪ್ರಥಮ ಸ್ಥಾನ ಪಡೆದು ಶಾಶ್ವತ ಫಲಕ ನಗದು ಬಹುಮಾನ ವಿಜೇತರಾದರು. ನಾಟಕವನ್ನು ನೀನಾಸಂ ಪದವೀಧರ ಶಿಕ್ಷಕ ಗಣಪತಿ ಹೋಬಳಿದಾರ್ ನಿರ್ದೇಶಿಸಿದರು, ಕಲಾವಿದರಾಗಿ ಜಿ ತಿಮ್ಮಪ್ಪಯ್ಯ, ಮಾತೃ ಮಂಡಳಿಯ ಅಧ್ಯಕ್ಷರಾದ ವನಜಾ ಭಾಸ್ಕರ್, ಗಾಯತ್ರಿ ರಾಮ ಸೋಡಿತಾರ್, ಸಾವಿತ್ರಿ ಹನುಮಂತ, ಆಶಾ ದಿನೇಶ್, ಸ್ವಾತಿ ಸತೀಶ ಹೋಬಳಿದಾರ್, ಸುಮಲತಾ ಶ್ರೀಧರ ವಸ್ರೆ, ರಮ್ಯ ಮಹಾಬಲ ಹೋಬಳಿದಾರ್, ಅಮ್ರತಾ ಎನ್, ಅಕ್ಷರಾ ಪಟವಾಲ್ ಅಭಿನಯಿಸಿದರು. ರಂಗ ತಾಲೀಮಿಗೆ ರಾಮಕ್ಷತ್ರಿಯ ಸಮಾಜ ಬೈಂದೂರಿನ ಅಧ್ಯಕ್ಷರಾದ ಪರಮೇಶ್ವರ ಹೋಬಳಿದಾರ್, ಯುವಕ ಸಮಾಜದ ಅಧ್ಯಕ್ಷರಾದ ಗುರುರಾಜ ಹೋಬಳಿದಾರ್, ವಸಂತಿ ನಾರಾಯಣ ಮದ್ದೋಡಿ ಸಹಕರಿಸಿದರು ರಂಗಸಜ್ಜಿಕೆಯನ್ನು ಶ್ರೀಧರ ಎಂ. ಪಿ , ಸುಧಾಕರ ಪಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಯಾವುದೇ ಕಾರ್ಯ ಸಫಲವಾಗಬೇಕಾದರೆ, ಕಾರ್ಯದಲ್ಲಿ ಯಶಸ್ಸು ಸಿಗಬೇಕಾದರೆ ಆತ್ಮವಿಶ್ವಾಸ, ಶ್ರದ್ಧೆ, ಛಲ ಮುಖ್ಯ. ಸಮಾಜಮುಖಿ ಕಾರ್ಯಗಳನ್ನು ಮಾಡುವಾಗ ಟೀಕೆ ಟಿಪ್ಪಣಿಗಳು ಕೇಳಿ ಬರುವುದು ಸಹಜ. ಆದರೆ ಇದರಿಂದ ಕುಗ್ಗದೆ ತಮ್ಮ ಕಾರ್ಯದಿಂದ ವಿಮುಖರಾಗದೆ ನಿರಂತರವಾಗಿ ಸಮಾಜ ಸೇವೆಯನ್ನು ಮಾಡಬೇಕು. ಇದರಿಂದ ಅದೆಷ್ಟೋ ಜನರಿಗೆ ಉಪಯೋಗವಾಗುತ್ತದೆ. ಈ ನಿಟ್ಟಿನಲ್ಲಿ ಗಂಗೊಳ್ಳಿಯ ಶ್ರೀ ಗುರುಜ್ಯೋತಿ ಸ್ಪೋಟ್ಸ್ ಕ್ಲಬ್ ಕಳೆದ ಮೂರು ದಶಕಗಳಿಂದ ಸಮಾಜಮುಖಿ, ಜನರಿಗೆ ಉಪಯೋಗವಾಗುವ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಪ್ರಾಧ್ಯಾಪಕಿ ಡಾ.ರೇಖಾ ವಿ.ಬನ್ನಾಡಿ ಹೇಳಿದರು. ಗಂಗೊಳ್ಳಿ ಗಂಗೊಳ್ಳಿಯ ಕೆಎಫ್ಡಿಸಿ ವಠಾರದಲ್ಲಿ ಜರಗಿದ ಗಂಗೊಳ್ಳಿಯ ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್ನ 36ನೇ ವಾರ್ಷಿಕೋತ್ಸವ ಮತ್ತು ಗುರುಜ್ಯೋತಿ ಶಿಕ್ಷಣ ನಿಧಿ ಯೋಜನೆಯ 19ನೇ ವರ್ಷದ ವಿದ್ಯಾರ್ಥಿವೇತನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಂಗೊಳ್ಳಿ ಸ.ವಿ.ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಉಮೇಶ ಕರ್ಣಿಕ್, ಪ್ರಗತಿ ಮಹಿಳಾ ವಿವಿಧೋದ್ದೇಶ ಸಂಘದ ಪ್ರಧಾನ ವ್ಯವಸ್ಥಾಪಕ ರಾಘವೇಂದ್ರ ಕುಲಾಲ್…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಆಧುನಿಕ ಜೀವನ ಶೈಲಿ, ಒತ್ತಡದ ಬದುಕು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಯುವ ಜನತೆ ಒತ್ತಡದ ಬದುಕಿನಿಂದ ಮುಕ್ತಿ ಪಡೆಯಲು ಪರಿಹಾರ ಮಾರ್ಗಗಳನ್ನು ಸೂಕ್ತ ಸಮಯದಲ್ಲಿ ಕಂಡುಕೊಳ್ಳಬೇಕು ಎಂದು ನಿಮಾನ್ಸ್ ಆಸ್ಪತ್ರೆ ಬೆಂಗಳೂರು ಇದರ ಕ್ಷೇತ್ರ ಸಂಪರ್ಕಾಧಿಕಾರಿ ದಿವಾಕರ್ ಹೇಳಿದರು. ಇವರು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ, ನಿಮಾನ್ಸ್ ಆಸ್ಪತ್ರೆ ಬೆಂಗಳೂರು, ಜನ-ಆರೋಗ್ಯ ಕೇಂದ್ರ, ಯುವ ಸ್ಪಂದನ ಕೇಂದ್ರ ಉಡುಪಿ, ಜೇಸಿಐ ಕುಂದಾಪುರ ಸಿಟಿ ಆಯೋಜಿಸಿದ ಬಿಕ್ಕಟ್ಟು ನಿರ್ವಹಣೆ ಮತ್ತು ಆರೋಗ್ಯ ಜೀವನ ಶೈಲಿ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಆರೋಗ್ಯ ಜೀವನ ಶೈಲಿಯ ಮಾಹಿತಿದಾರರಾದ ಗುರುರಾಜ ಕೊತ್ವಾಲ್ರವರು ಹೃದಯ ಸಂಬಂಧಿ ಕಾಯಿಲೆಗಳಿಗೆ ಪ್ರಾಥಮಿಕ ಚಿಕಿತ್ಸೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಜೇಸಿಯ ಕುಂದಾಪುರ ಸಿಟಿಯ…
