Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಅಮಾಸೆಬೈಲು: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಕುಂದಾಪುರ ಬಾರ್ ಅಸೋಸಿಯೇಷನ್ ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಕುಂದಾಪುರ ಇವರ ಸಂಯಕ್ತ ಆಶ್ರಯದಲ್ಲಿ ಕಾನೂನು ಮಾಹಿತಿ ಶಿಬಿರ ಅಮವಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತದ ಸಭಾಂಗಣದಲ್ಲಿ ಜರುಗಿತು. ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಡಿ.ಪಿ ಕುಮಾರ ಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಸಿ, ಒಂದು ನ್ಯಾಯ ವ್ಯವಸ್ಥೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಲಾಗಿರುತ್ತದೆ. ಕಾನೂನು ಮತ್ತು ಆಡಳಿತ ವ್ಯವಸ್ಥೆ ಸುಗಮವಾಗಿ ಸಾಗಲು ಪ್ರತಿಯೊಬ್ಬರು ಕೂಡಾ ಹಕ್ಕುಗಳನ್ನು ಉಪಯೋಗಿಸಿ ಕರ್ತವ್ಯಗಳನ್ನು ಪಾಲಿಸಬೇಕಾಗುತ್ತದೆ ಎಂದರು. ಕುಂದಾಪುರ ಬಾರ್ ಅಸೋಸಿಯೇಷನ್ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಸ್ವಸ್ಥ ಜೀವನಕ್ಕೆ ಮೂಲಭೂತ ಹಕ್ಕುಗಳು ಎಷ್ಟು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಎಂ. ಎನ್. ರಾಜೇಂದ್ರಕುಮಾರ್ ಅವರು ಟ್ರಸ್ಟ್ ಮೂಲಕ ಇತ್ತಿಚಿಗೆ ಬೈಕ್ ಅಪಘಾತದಲ್ಲಿ ಮರಣ ಹೊಂದಿದ ಗಂಗೊಳ್ಳಿ ಸೀತಾರಾಮ ನವೋದಯ ಸ್ವಸಹಾಯ ಗುಂಪಿನ ಸದಸ್ಯೆ ಮಂಗಳ ಖಾರ್ವಿ ಅವರ ಕುಟುಂಬಕ್ಕೆ ಕೊಡಮಾಡಿದ ಒಂದು ಲಕ್ಷ ರೂ. ಚೆಕ್ನ್ನು ಡಿಸಿಸಿ ಬ್ಯಾಂಕಿನ ನಿರ್ದೇಶಕ ಎಸ್. ರಾಜು ಪೂಜಾರಿ ಅವರು ಕುಟುಂಬಿಕರಿಗೆ ಹಸ್ತಾಂತರಿಸಿದರು. ಈ ಸಂದರ್ಭ ತಾಲೂಕು ನವೋದಯ ಸಂಘಗಳ ಮೇಲ್ವಿಚಾರಕ ಮನೋಹರ ಶೆಟ್ಟಿ, ಬೈಂದೂರು ವಲಯ ನವೋದಯ ಸಂಘಗಳ ಮೇಲ್ವಿಚಾರಕ ಶಿವರಾಮ ಪೂಜಾರಿ ಯಡ್ತರೆ, ತ್ರಾಸಿ ಡಿಸಿಸಿ ಬ್ಯಾಂಕ್ ಮ್ಯಾನೆಜರ್ ನಾಗ ಹಾಗೂ ಪ್ರೇರಕ ವಾಸುದೇವ ಖಾರ್ವಿ, ಜ್ಯೋತಿಕೃಷ್ಣ ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನೃತ್ಯ, ನಾಟಕ, ಸಂಗೀತ, ಯಕ್ಷಗಾನ, ಚಿತ್ರಕಲೆ ಹಾಗೂ ಯಕ್ಷಿಣಿ ಕಲಾ ತರಬೇತಿಗೆ ಮೀಸಲಾಗಿರುವ ಸಂಸ್ಥೆ ಸುರಭಿ ಬೈಂದೂರು ಇದರ ವಿದ್ಯಾರ್ಥಿಗಳು ಕರ್ನಾಟಕ ಸರಕಾರದ ಪ್ರೌಢ ಶಿಕ್ಷಣ ಮಂಡಳಿಯಿಂದ ಪ್ರಸ್ತುತ ಸಾಲಿನಲ್ಲಿ ನಡೆಸಲಾದ ಭರತನಾಟ್ಯ ಪರೀಕ್ಷೆಯಲ್ಲಿ ಇಬ್ಬರು ವಿಶಿಷ್ಟ ದರ್ಜೆಯಲ್ಲಿ ಹಾಗೂ ಇತರರು ಪ್ರಥಮ ಶ್ರೇಣಿಯೊಂದಿಗೆ ಉತ್ತೀರ್ಣಗೊಂಡಿದ್ದು ಸಂಸ್ಥೆಯು ಶೇ. 100 ಫಲಿತಾಂಶ ಪಡಿದಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ವಿದ್ಯಾರ್ಥಿಗಳು ವಿಶಿಷ್ಟ ದರ್ಜೆಯೊಂದಿಗೆ ಉತ್ತೀರ್ಣರಾಗಿದ್ದು ಸಂಸ್ಥೆಯು ಶೇ.೮೦ ಫಲಿತಾಂಶ ಪಡೆದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿಯ ಮನೆ, ಅಂಗಡಿ, ಹೊಟೇಲ್ ಇತ್ಯಾದಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಸಮಸ್ಯೆಗೆ ಜಿಲ್ಲಾಡಳಿತ ಪರಿಹಾರ ಕಂಡು ಕೊಂಡಿದ್ದು, ಗಂಗೊಳ್ಳಿ ಗ್ರಾಮದಲ್ಲಿ ತ್ಯಾಜ್ಯ ನಿರ್ಮೂಲನೆ ಮಾಡಲು ಜನರ ಸಹಕಾರ ಅತ್ಯಗತ್ಯವಾಗಿದೆ. ಜಿಲ್ಲಾಡಳಿತ ಸ್ವಸಹಾಯ ಸಂಘಗಳ ಸಹಕಾರದೊಂದಿಗೆ ಮನೆ ಮನೆಯಿಂದ ಕಸ ಸಂಗ್ರಹಿಸುವ ಯೋಜನೆ ಹಾಕಿಕೊಂಡಿದ್ದು, ಇದಕ್ಕೆ ಪೂರ್ವಭಾವಿಯಾಗಿ ಗ್ರಾಮದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳ ಮತ್ತು ಅದರ ನಿರ್ವಹಣೆ ಬಗ್ಗೆ ಸಮೀಕ್ಷೆ ನಡೆಸಲು ಉದ್ದೇಶಿಸಿದೆ ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ.ಮಾಧವ ಹೇಳಿದರು. ಅವರು ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ ಬಗ್ಗೆ ಮಾಹಿತಿ ಸಂಗ್ರಹ ಸಮೀಕ್ಷೆ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ ಬಗ್ಗೆ ಮಾಹಿತಿ ಸಂಗ್ರಹ ಸಂಬಂಧ ಸ್ವಸಹಾಯ ಸಂಘಗಳ ಸ್ವಯಂಸೇವಕರು ಮನೆ ಮನೆಗೆ ಬಂದಾಗ ಸರಿಯಾದ ಮಾಹಿನಿ ನೀಡಿ ಸಹಕರಿಸಬೇಕು. ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಸಂಗ್ರಹಿಸಲು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಶ್ವಿ ಚೆಸ ಸ್ಕೂಲ್ನ ಮೊದಲ ವಾರ್ಷಿಕೋತ್ಸವ ಹಾಗೂ ಅಂತರಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆ ಆರ್. ಎನ್ ಶೆಟ್ಟಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಅರ್ಜುನ ಪ್ರಶಸ್ತಿ ವಿಜೇತ ಪ್ರವೀಣ್ ತಿಪ್ಸೆ ಚೆಸ್ನ ಬಗ್ಗೆ ಮಾಹಿತಿ ನೀಡಿ ಹುಮಾನವನ್ನು ವಿತರಿಸಿದರು ಪ್ರೆಸಿಡೆಂಟ್ ಗ್ರೂಫ್ನ ಇಸ್ಮಾಯಿಲ್ ಸಾಹೇಬ್, ಬಸ್ರೂರು ಶಾರದಾ ಆಂಗ್ಲ ಮಾಧ್ಯಮ ಸ್ಕೂಲ್ನ ಸಂಚಾಲಕರು ಅರುಣ್ ಕುಮಾರ್ ಶೆಟ್ಟಿ, ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿಯ ಸಂಚಾಲಕರು ಅನುಪಮ ಶೆಟ್ಟಿ, ಬಸ್ರೂರು ಶಾರಾದಾ ಕಾಲೇಜಿನ ಮಾಜಿ ಪ್ರಾಂಶುಪಾಲರು ಚಂದ್ರಪ್ರಭಾ ಹೆಗ್ಡೆ , ಸುಬ್ರಮಣ್ಯ ಶೆಟ್ಟಿಗಾರ್ ಕೋಟೇಶ್ವರ ಕುಂದಾಪುರ ಆರಕ್ಷಕ ಠಾಣೆಯ ಸಬ್ಇನ್ಸ್ಪೆಕ್ಟರ್ ನಾಸಿರ್ ಹುಸೇನ್, ಡೇರಿಕ್ ಚೆಸ್ ಸೂಕ್ಕಲ್ನ ಡೇರಿಕ್ ಫಿಂಟೋ, ಪ್ರಸನ್ನ ರಾವ್ ಅಂತರಾಷ್ಟ್ರೀಯ ಚೆಸ್ ಆಟಗಾರ್ತಿ ಆಂಡ್ರಿಯಾ ಡಿಸೋಜಾ ಕಶ್ವಿ ಚೆಸ್ ತರಬೇತುದಾರ ಗುರುರಾಜ್ ಶೆಟ್ಟಿ. ಕಶ್ವಿ ಸ್ಕೂಲ್ ಚೆಸ್ನ ವ್ಯವಸ್ಥಾಪಕರು ನರೇಶ್ ಬಿ. ಕಾರ್ಯಕ್ರಮಗಳಲ್ಲಿ ಉಪಸ್ಥಿತರಿದ್ದರು. ಈ ಪಂದ್ಯಾಟ ಕೂಟದಲ್ಲಿ ೩೩೧ ಸ್ಪರ್ಧಾಳುಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಘನತೆಯ ಬದುಕಿಗೆ ಎಲ್ಲಾ ಅಂಗವಿಕಲರಿಗೂ ಶಿಕ್ಷಣ, ಉದ್ಯೋಗ, ಸಿಗಬೇಕು. ಖಾಸಗಿ ಸಂಸ್ಥೆಗಳಲ್ಲೂ ಅಂಗವಿಕಲರಿಗೆ ಶೇಕಡಾ ೫% ಮೀಸಲಾತಿ ನೀಡಬೇಕು. ಅಂಗವಿಕಲರ ಪಾಲಕರ ದೊಂದೆಕುಲ ನಮ್ಮಲ್ಲದೆ ಒಗ್ಗಟ್ಟಿನ ಬಲ ಅಥವಾ ನಮ್ಮಲ್ಲಿರಲಿ ಒಗ್ಗಟ್ಟಿನ ಬಲ, ಸರಕಾರ ಎಲ್ಲಾ ಅಂಗವಿಕಲರಿಗೂ ಉಚಿತ ಮನೆ, ನಿವೇಶನ ಹಾಗೂ ವಿಶೇಷ ಶೌಚಾಲಯ ನೀಡಲಿ, ಅಂಗವಿಕಲರು ಸಮಾಜದ ಅವಿಭಾಜ್ಯ ಅಂಗ, ಬದುಕಲು ಬಿಡಿ. ಅಂಗವಿಕಲರ ಯೋಜನೆಗಳು ಸಮರ್ಪಕವಾಗಿ ಜ್ಯಾರಿಯಾಗಲಿ, ಇದು ಬಿಕ್ಷೆಯಲ್ಲ ಅದು ನಮ್ಮ ಹಕ್ಕು ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ರಾಜ್ಯ ಅಧ್ಯಕ್ಷ ಜಿ.ಎನ್. ನಾಗರಾಜ ಹೇಳಿದರು. ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ನವದೆಹಲಿಗೆ ಸಂಯೋಜಿಸಲ್ಪಟ್ಟ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಉಡುಪಿ ಜಿಲ್ಲಾ ಸಮ್ಮೇಳನವು ಕುಂದಾಪುರ ಕಾರ್ಮಿಕ ಭವನದಲ್ಲಿ ಜರಗಿದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ವರ್ಷದಿಂದ ಇಲ್ಲಿಯವರೆಗೆ ರಾಜ್ಯ-ಕೇಂದ್ರ ಸರಕಾರಗಳು ಅಂಗವಿಕಲರಿಗಾಗಿ ಯಾವುದೇ ಯೋಜನೆಗಳನ್ನು ರೂಪಿಸದೇ ಇದ್ದುದರಿಂದಾಗಿ ರಾಜ್ಯದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜು, ಪದವಿಪೂರ್ವ ಕಾಲೇಜು, ಉಡುಪಿಯ ಅಂಬಲಪಾಡಿಯ ಶ್ರೀ ಜನಾರ್ದನ ಮಹಾಕಾಳೀ ದೇವಸ್ಥಾನ ಹಾಗೂ ಕುಂದಾಪುರದ ಶ್ರೀ ಕುಂದೇಶ್ವರ ದೇವಸ್ಥಾನಗಳ ಸಹಯೀಗದಲ್ಲಿ ಒಂದು ದಿನದ ಜೀವನ ಮೌಲ್ಯ – ನೈತಿಕ ಶಿಕ್ಷಣ ಶಿಬಿರ” ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಂಬೈ ವಿಶ್ವವಿದ್ಯಾನಿಲಯದ ಡಾ. ತಾಳ್ತಜೆ ವಸಂತಕುಮಾರ್ ಅವರು ಭಾರತೀಯ ಧರ್ಮಗಳು ಮತ್ತು ಜೀವನಮೌಲ್ಯ ಎಂಬ ವಿಷಯದ ಕುರಿತು ಮಾತನಾಡಿ, ಇಂತಹ ಶಿಬಿರಗಳ ಅವಶ್ಯಕತೆ ಪ್ರಸ್ತುತದ ವಿದ್ಯಾಮಾನದಲ್ಲಿ ಹೆಚ್ಚಿದೆ. ನಮ್ಮನ್ನು ನಾವು ಅರ್ಥೈಸಿಕೊಳ್ಳುವುದು ಮತ್ತು ತೂಗಿಸಿಕೊಳ್ಳುವುದನ್ನು ಕಲಿತಾಗ ಶಿಬಿರದ ಆಶಯ ಸಾರ್ಥಕವಾಗುವುದು. ನಮ್ಮನ್ನು ಅರಿಯುವುದನ್ನೇ ಭಾರತೀಯ ಸಂಸ್ಕೃತಿ ಸಾರವಾಗಿದೆ. ವೈವಿಧ್ಯಮಯ ನೆಲ, ಸಾರವನ್ನು ಹೊಂದಿರುವಂತಹ ಈ ನಮ್ಮ ಭರತಖಂಡ ವೈಶಿಷ್ಟ್ಯಗಳ ಹೂರಣಗಳಿಂದ ಸಮ್ಮಿಳಿತವಾಗಿದೆ. ಅನೇಕ ಸಂಪ್ರದಾಯ, ಮನೋಭೂಮಿಕೆ, ಆರಾಧನೆ ಮತ್ತು ಆಚಾರಗಳಿಂದಲೇ ಇಲ್ಲಿ ಸಾಂಸ್ಕೃತಿಕ ಐಕ್ಯತೆ ಎನ್ನುವುದು ಹುಟ್ಟಿದೆ ಎಂದು ಅಭಿಪ್ರಾಯಪಟ್ಟರು. ಹಾಲು ಸಕ್ಕರೆ ಬೆರೆಸಿ ತಯಾರಿಸಿದ ಪಾಕಕ್ಕೆ ಭಾರತೀಯ…
ಕುಂದಾಪ್ರಡಾಟ್ ಕಾಂ ಸುದ್ದಿ. ಬೈಂದೂರು: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ನಾವುಂದದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಬುಧವಾರ ನಡೆಯಿತು. ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಂಘವು ಕಳೆದ ಆರ್ಥಿಕ ವರ್ಷದಲ್ಲಿ ಠೇವಣಿ ಸಂಗ್ರಹ, ಸಾಲ ನೀಡಿಕೆ, ವಸೂಲಿ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಸಂಸ್ಥೆ ವರ್ಷದ ಅಂತ್ಯಕ್ಕೆ ಹೊಂದಿರುವ ಠೇವಣಿಯ ಮೊತ್ತರೂ. ೨೭.೦೨ ಕೋಟಿಯಾಗಿದ್ದು ಪ್ರಸಕ್ತ ವರ್ಷ ಅದನ್ನು ಏರಿಸುವ ಗುರಿ ಹೊಂದಲಾಗಿದೆ. ರೂ ೩೩ ಕೋಟಿ ಸಾಲ ವಿತರಿಸಿ, ರೂ ೩೨ ಕೋಟಿ ವಸೂಲಾತಿ ಮಾಡಲಾಗಿದೆ. ಸಂಘ ರೂ ೧ ಕೋಟಿ ೪ ಸಾವಿರದಷ್ಟು ಲಾಭ ಗಳಿಸಿದೆ.ಸದಸ್ಯರ ಬೇಡಿಕೆಯಂತೆ ಶೇ.೧೩ ಡಿವಿಡೆಂಡ್ ನೀಡಲಾಗುವುದು ಎಂದು ಅವರು ಹೇಳಿದರು. ಸಂಘವು ಗ್ರಾಹಕರಿಗೆ ಹೆಚ್ಚಿನ ಸೇವೆ ಒದಗಿಸುವ ದೃಷ್ಠಿಯಿಂದ ಬಡಾಕೆರೆಯಲ್ಲಿ ಪ್ರತ್ಯೇಕ ಶಾಖೆ ತೆರೆಯುವ ಯೋಜನೆ ಹೊಂದಿದೆ. ಕೃಷಿಕರಿಗೆ ಬೀಜದ ಭತ್ತ ಹಾಗೂ ಸಾವಯವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಕಿರಿಮಂಜೇಶ್ವರ ಶುಭದಾ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದೊಂದಿಗೆ ಕಿರಿಮಂಜೇಶ್ವರದಲ್ಲಿ ಆಯೋಜಿಸಲಾಗಿದ್ದ ಬೈಂದೂರು ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕ ದೇವಳದ ಪ್ರೌಢಶಾಲೆ ಬಾಲಕಿಯರ ಕಬಡ್ಡಿ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳೊಂದಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಸಚಿನ್ ಕುಮಾರ್ ಶೆಟ್ಟಿ, ಸಹ ಶಿಕ್ಷಕಿ ಅಭಿನೇತ್ರಿ ಶೆಟ್ಟಿ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಪುಜಾರಿ ಮತ್ತು ಹಳೆ ವಿದ್ಯಾರ್ಥಿ ಪ್ರದೀಪ್ ಭಟ್ ಪ್ರಶಸ್ತಿ ಸ್ವೀಕರಿಸಿದರು.
