ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸೃಜನಶೀಲತೆ ಎಂಬುದು ಯಾರೊಬ್ಬರ ಸೊತ್ತಲ್ಲ. ಮಕ್ಕಳಲ್ಲಿ ಪ್ರತಿಭೆ ಇದ್ದದ್ದಾದರೆ, ತಂದೆ ತಾಯಿಯರಲ್ಲಿ ಪ್ರೋತ್ಸಾಹಿಸುವ ಗುಣವಿದ್ದರೆ ಮಕ್ಕಳು ಶ್ರೇಷ್ಠ ವ್ಯಕ್ತಿಗಳಾಗುತ್ತಾರೆ. ಕಾಳಜಿ ಹಾಗೂ ಪ್ರೀತಿಯಿಂದ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗೆ ಉತ್ತೇಜನ ದೊರೆತಾದ ಮಾತ್ರ ಅವು ಗುಣಾತ್ಮಕವಾಗಿ ಪ್ರಕಟಗೊಳ್ಳುತ್ತದೆ ಎಂದು ಬೈಂದೂರು ರತ್ತುಬಾಯಿ ಜನತಾ ಪ್ರೌಡಶಾಲೆ ಮಖ್ಯೋಪಧ್ಯಾಯ ಮಂಜು ಕಾಳಾವರ ಅವರು ಹೇಳಿದರು. ಅವರು ರೋಟರಿ ಕ್ಲಬ್ ಬೈಂದೂರು, ಶ್ರೀ ಸಿದ್ಧಿವಿನಾಯಕ ಚೆಸ್ ಅಕಾಡೆಮಿ ರಿ. ಬೈಂದೂರು, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಹಾಗೂ ಇನ್ನರ್ವೀಲ್ ಕ್ಲಬ್ ಬೈಂದೂರು ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಮಿಂಚಿನ ಚದುರಂಗ ಸ್ವರ್ಧೆ 2017 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ರೋಟರಿ ಮಾಜಿ ಗವರ್ನರ್ ಬಿ. ಜಗನ್ನಾಥ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕ್ರೀಡೆಯಲ್ಲಿ ಆಸಕ್ತಿಯಿದ್ದರೆ ಮಾತ್ರ ಸಾಧನೆಗೈಯಲು ಸಾಧ್ಯವಿದೆ. ಆಸಕ್ತರಿಗೆ ಸೂಕ್ತ ಸಮಯದಲ್ಲಿ ದೊರೆಯುವ ಅವಕಾಶದಿಂದ ಪ್ರತಿಭೆ ಬೆಳಕಿಗೆ ಬರುತ್ತದೆ ಎಂದರು. ಬೈಂದೂರು ರೋಟರಿ ಅಧ್ಯಕ್ಷ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಕವಿಯಾದವನು ತನ್ನ ಸುತ್ತುಮುತ್ತ ನಡೆಯುವ ವಿದ್ಯಮಾನಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು ಮತ್ತು ಅವುಗಳಿಗೆ ಸ್ಪಂದಿಸು ಸಂವೇದನೆಯನ್ನು ಸದಾ ಬೆಳೆಸಿಕೊಳ್ಳಬೇಕು. ಎಲ್ಲರಿಗೂ ಗೊತ್ತಿರುವ ಭಾಷೆ ಒಂದೇ, ಪದಗಳು ಒಂದೇ, ಅರ್ಥಗಳು ಒಂದೇ ಆದರೂ ಕವಿಯಾದವನು ಅವನ್ನು ಪೋಣಿಸುವ ರೀತಿ ಭಿನ್ನವಾಗಿರುತ್ತದೆ. ಉಪಮೆ, ರೂಪಕ, ಉತ್ಪ್ರೇಕ್ಷೆ ಮೊದಲಾದ ಅಲಂಕಾರಗಳ ಮೂಲಕ ಮತ್ತು ವಿವಿಧ ರೀತಿಯ ಧ್ವನಿಗಳ ಮೂಲಕ ಕಾವ್ಯ ಭಾಷೆಯು ಸಾಮಾನ್ಯ ಭಾಷೆಗಿಂತ ಹೆಚ್ಚು ಹೇಳಲು ಸಾಧ್ಯವಾಗುತ್ತದೆ. ಕಡಿಮೆ ಶಬ್ದಗಳ ಮೂಲಕ ಹೆಚ್ಚು ವಿಚಾರಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹೇಳಲು ಸಾಧ್ಯವಾಗುವುದೇ ಕವಿತೆಯ ಹೆಚ್ಚುಗಾರಿಕೆ ಎಂದು ಖ್ಯಾತ ಲೇಖಕಿ ಪಾರ್ವತಿ ಜಿ.ಐತಾಳ್ ಹೇಳಿದರು. ಅವರು ಇಲ್ಲಿನ ವಿಶ್ವ ಕರ್ಮ ಸಭಾಭವನದಲ್ಲಿ ನಡೆದ ಯುವ ಕವಿ ಶ್ರೀರಾಜ ಎಸ್.ಆಚಾರ್ಯ ರಚಿಸಿದ ’ರಿಕ್ತ ನಕ್ಷತ್ರ’ ಎಂಬ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ರಮೇಶ ವಕ್ವಾಡಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ದಾಮೋದರ ಪುರೋಹಿತ್, ರಂಜಿತ್ ಕುಮಾರ್ ಶೆಟ್ಟಿ , ಸ್ವರಾಜ್ಯಲಕ್ಷ್ಮಿ ಮತ್ತು ಶ್ರೀಮತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಡಾ.ಶಿವರಾಮ ಕಾರಂತರು ಕಾಯಕವನ್ನೇ ಕೈಲಾಸವೆಂದು ನಂಬಿದವರು. ಅದರಲ್ಲೇ ತಮ್ಮ ಜೀವಿತಾವಧಿಯ ಸಾರ್ಥಕ್ಯವನ್ನು ಕಂಡವರು ಎಂದು ಖ್ಯಾತ ಚಿಂತಕ ಜಿ.ರಾಜಶೇಖರ ಅಭಿಪ್ರಾಯಪಟ್ಟರು. ಅವರು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ರೇಖಾ ಬನ್ನಾಡಿ ಅವರ “ಕಾರಂತರ ದುಡಿಮೆಯ ಪ್ರಪಂಚ” – ವಿಮರ್ಶಾ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಕಾರಂತರ ದುಡಿಮೆಯ ಪ್ರಪಂಚ” – ವಿಮರ್ಶಾ ಸಂಕಲನ ಎಂಬ ಶೀರ್ಷಿಕೆಯೇ ವಿಸ್ಮಯವೆನಿಸುವಷ್ಟು ಜೀವನಾನುಭೂತಿಯನ್ನು ಸಮ್ಮಿಳಿಸುತ್ತದೆ. ಬರಹಗಳಲ್ಲಿ ಕಾಳಜಿ, ಸಂವೇದನೆ ಮತ್ತು ಸೂಕ್ಷ್ಮತೆಗಳಿವೆ. ಲೇಖಕರು ಸಮಕಾಲೀನ ವಿದ್ಯಾಮಾನಗಳಿಗೆ ಸ್ಪಂದಿಸಿದ ರೀತಿ ನಿಜಕ್ಕೂ ಕ್ರಾಂತಿ ಎನ್ನಬಹುದು. ಪ್ರತಿ ಬರಹಗಳಲ್ಲಿನ ವಸ್ತುವಿಷಯಗಳು ಒಂದಕ್ಕಿಂತ ಇನ್ನೊಂದು ವಿಶಿಷ್ಟವೆನಿಸುತ್ತಾ ಹೋಗುತ್ತದೆ. ಇದೊಂದು ವಿಮರ್ಶಾ ಕೃತಿಯಲ್ಲ. ಇದೊಂದು ಸಮಕಾಲೀನ ಸಾಹಿತ್ಯದ ದಿಕ್ಸೂಚಿಯಾಗಿದೆ. ಇಲ್ಲಿ ಬರುವಂತಹ ಸಂದರ್ಭೋಚಿತ ಸಂಗತಿಗಳು ಮತ್ತು ಅದರ ನಿರ್ಧಾರ ಮತ್ತು ನಿಯಮಗಳು ಅಂತಿಮವಲ್ಲ ಎಂದು ಹೇಳಿದರು. ಕಾರಂತರ ಮರಳಿಮಣ್ಣಿಗೆ ಕೃತಿಯನ್ನು ಕುರಿತು ಮಾತನಾಡುತ್ತಾ ಕಾರಂತರು ತಮ್ಮ ಈ ಕೃತಿಯಲ್ಲಿ ಕೋಟ ಮತ್ತು ಕುಂದಾಪುರ ವಲಯದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಕಾರ್ಯಕ್ರಮದ ಜರುಗಿತು. ಉಪನ್ಯಾಸರ ಶ್ರೀನಾಥ್ ರಾವ್ ಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬೆಳಕೆಂಬ ಜ್ಞಾನದಿಂದ ಕತ್ತಲೆಂಬ ಅಜ್ಞಾನವನ್ನು ತೊಲಗಿಸಿ ಮುಂದುವರಿಯಬೇಕು. ಈ ವಿದ್ಯಾರ್ಥಿಯ ಜೀವನ ಒತ್ತಡದಿಂದ ಕೂಡಿಲ್ಲ. ಈ ಸಮಯವೇ ಜ್ಞಾನವನ್ನು ಪಡೆಯಲಿಕ್ಕೆ ಸೂಕ್ತವಾಗಿದೆ. ಗುರುಕುಲದಲ್ಲಿ 166 ವಿಜ್ಞಾನ ಮಾದರಿ ಅಚ್ಚುಕಟ್ಟಾಗಿದ್ದು, ಮಕ್ಕಳು ವಿವರಿಸಿದ ರೀತಿ ತುಂಬಾ ಚೆನ್ನಾಗಿತ್ತು. ನನಗೆ ತುಂಬಾ ಸಂತೋಷವಾಯಿತು ಎಂದು ತಿಳಿಸಿದರು. ಜ್ಞಾನ, ಕೌಶಲ್ಯ ಎರಡರಿಂದ ಹೊಸತನ ಬರುತ್ತದೆ. ಈ ಹೊಸತನದ ಸಂಕೇತವೇ ಪ್ರಗತಿ. ಅಲ್ಲದೇ ಗುಣಮಟ್ಟದ ಶಿಕ್ಷಣ ದೇಶವನ್ನು ಬದಲಾಯಿಸಬಲ್ಲದು ಇಂತಹ ಸಂದರ್ಭದಲ್ಲಿ ಈ ಮಕ್ಕಳಿಗೆ ಸಂಶೋಧನೆಯ ವೇದಿಕೆ ಅತ್ಯವಶ್ಯಕ. ಇದರಿಂದ ಮಕ್ಕಳು ಸಂಕುಚಿತ ಮನೋಭಾವನೆಯನ್ನು ಬಿಟ್ಟು ಹೊರಬರಲು ಸಾಧ್ಯ. ಇಂತಹ ಕೆಲಸವನ್ನು ಗುರುಕುಲ ಪಬ್ಲಿಕ್ ಶಾಲೆ ನಿರ್ವಹಿಸಿದೆ. ಹಾಗೆಯೇ ಗುರುವಿಲ್ಲದೇ ಯಾವ ಕೆಲಸವು ಸಾಧ್ಯವಿಲ್ಲ ಈ ಗುರುಕುಲದಲ್ಲಿ ಗುರುವಿನ ಸಹಾಯದಿಂದ ವಿಜ್ಞಾನದ ಪ್ರದರ್ಶನವಾಗುತ್ತಿದೆ. ಎಂಬುವುದು…
ಬೈಂದೂರು ಚಂದ್ರಶೇಖರ ನಾವಡ. ಕುಂದಾಪ್ರ ಡಾಟ್ ಕಾಂ ಲೇಖನ. ನಾಡಿನಾದ್ಯಂತ ಹೆಚ್ಚುತ್ತಿರುವ ಆಂಗ್ಲ ಭಾಷೆಯ ಪ್ರಭಾವ ಮತ್ತು ಪರಭಾಷೆಯ ಪಾರಮ್ಯದ ನಡುವೆ ಅಲ್ಲಲ್ಲಿ ನಡೆಯುವ ಸಾಹಿತ್ಯೋತ್ಸವಗಳು, ವಿಚಾರ ಗೋಷ್ಠಿಗಳು, ಸಾಹಿತ್ಯಿಕ ಸಂವಾದಗಳು ಕನ್ನಡದ ಬೇರುಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತವೆ. ಸಾಹಿತ್ಯಾಸಕ್ತರಿಗೆ ಬರಡು ನೆಲದಲ್ಲಿ ತಂಗಾಳಿ ಬೀಸಿದ ಅನುಭವ ಕೊಡುತ್ತದೆ. ಇಂತಹದೇ ಒಂದು ಮಧುರ ಅನುಭವಕ್ಕೆ ಸಾಕ್ಷಿಯಾದದ್ದು ಕನ್ನಡ ಸಾರಸ್ವತ ಲೋಕಕ್ಕೆ ಅಪೂರ್ವ ಕೊಡುಗೆ ನೀಡಿದ ಮೂರು ಮಹಾನ್ ಸಾಹಿತ್ಯ ರತ್ನಗಳೆನ್ನಿಸಿದ ಮೊಗೇರಿ ಗೋಪಾಲಕೃಷ್ಣ ಅಡಿಗ, ಉಳ್ಳೂರು ಮೂಕಜ್ಜಿ ಮತ್ತು ಬಿ.ಎಚ್.ಶ್ರೀಧರರ ನೂರರ ಸವಿನೆನಪಿಗಾಗಿ ಇತ್ತೀಚೆಗೆ (27-08-2017) ಏರ್ಪಡಿಸಿದ ವೈಶಿಷ್ಟ್ಯಮಯ ಕಾರ್ಯಕ್ರಮ. ಕುಂದಾಪುರ ತಾಲೂಕಿನ ನಾಗೂರಿನ ಒಡೆಯರಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ಆಯೋಜಿಸಿದ ಶತಮಾನದ ಸ್ಮೃತಿ ಹಬ್ಬ, ನುಡಿ ಹಬ್ಬದ ತಂಪೆರೆದು ಸಾಹಿತ್ಯಾಸಕ್ತರನ್ನು ಆಹ್ಲಾದಗೊಳಿಸಿತು. ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಅನಿವಾರ್ಯವೆಂಬಂತೆ ವೇದಿಕೆಯಲ್ಲಿ ರಾರಾಜಿಸಿ ಬೇಸರ ಹುಟ್ಟಿಸುವಷ್ಟು ಮಾತನಾಡುವ ರಾಜಕೀಯ ವ್ಯಕ್ತಿಗಳಿಲ್ಲದ, ಅವರ ಹಂಗಿಲ್ಲದ ಕಾರ್ಯಕ್ರಮವನ್ನು ಹಿಂದೊಮ್ಮೆ ನಾಗೂರಿನ ಸುತ್ತಮುತ್ತಲ ಗ್ರಾಮೀಣ ಪ್ರದೇಶದಲ್ಲಿ ಮನೆಮನೆಗಳಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಕೊಲ್ಲೂರು ೨೦೧೬-೧೭ನೇ ಸಾಲಿನಲ್ಲಿ ಗಮನಾರ್ಹ ಸಾಧನೆ ಮಾಡಿರುವುದನ್ನು ಗುರುತಿಸಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರೋತ್ಸಾಹಕ ಪ್ರಶಸ್ತಿ ನೀಡಿ ಗೌರವಿಸಿದೆ. ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಜರುಗಿದ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಎಂ.ಎನ್. ರಾಜೇಂದ್ರಕುಮಾರ್ ಅವರು ಸಹಕಾರಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ್ ಶ್ಯಾನುಭೋಗ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಚಂದ್ರ ಬಳೆಗಾರ್, ಮಾಜಿ ಅಧ್ಯಕ್ಷರಾದ ವಿಶ್ವೇಶ್ವರ ಅಡಿಗ, ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ನಿದೇಶಕರಾದ ರಘುರಾಮ ಶೆಟ್ಟಿ, ಎಸ್. ರಾಜು ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ನಾವುಂದ ಇದರ ಸಾಧನೆಗೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರೋತ್ಸಾಹಕ ಪ್ರಶಸ್ತಿ ಲಭಿಸಿದೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ವಾರ್ಷಿಕ ಮಹಾಸಭೆಯಲ್ಲಿ ಸಾಗರ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಇದರ ಅಧ್ಯಕ್ಷ ಎಸ್. ರಾಜು ಪೂಜಾರಿ ಅವರು ಬ್ಯಾಂಕಿನ ಅಧ್ಯಕ್ಷ ಡಾ. ಎಂ. ಎನ್ ರಾಜೇಂದ್ರ ಕುಮಾರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಎಂ. ಚಂದ್ರಶೀಲ ಶೆಟ್ಟಿ, ನಿರ್ದೇಶಕರಾದ ಎಂ. ವಿನಾಯಕ ರಾವ್, ರಾಮಕೃಷ್ಣ ಖಾರ್ವಿ, ನಾಗಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ ಮಡಿವಾಳ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ರಘುರಾಮ ಶೆಟ್ಟಿ, ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಶಿವರಾಮ ಯಡ್ತರೆ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾಗರ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ., ಬೈಂದೂರು ಇದರ ಸಾಧನೆಗೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಶಸ್ತಿ ಲಭಿಸಿದೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ವಾರ್ಷಿಕ ಮಹಾಸಭೆಯಲ್ಲಿ ಸಾಗರ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಇದರ ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಅವರು ಬ್ಯಾಂಕಿನ ಅಧ್ಯಕ್ಷ ಡಾ. ಎಂ. ಎನ್ ರಾಜೇಂದ್ರ ಕುಮಾರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಾಗರ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಷ್ಟು ಬಿಲ್ಲವ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ರಘುರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅಪಘಾತದಲ್ಲಿ ಗಾಯಗೊಂಡಿದ್ದ ಗೋವನ್ನು ಕಳೆದೊಂದು ವಾರದಿಂದ ಆರೈಕೆ ಮಾಡುತ್ತಿರುವ ಯಡ್ತರೆಯ ರಿಕ್ಷಾ ಚಾಲಕರು ಮಾನವೀಯತೆ ಮೆರೆದಿದ್ದಾರೆ. ರಿಕ್ಷಾ ಚಾಲಕರು ಆರೈಕೆ, ವೈದ್ಯರ ಚಿಕಿತ್ಸೆಯಿಂದಾಗಿ ನಿತ್ರಾಣ ಸ್ಥಿತಿಯಲ್ಲಿದ್ದ ಗೋವು ಚೇತರಿಸಿಕೊಳ್ಳುತ್ತಿದೆ. ಯಡ್ತರೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾರದ ಹಿಂದೆ ರಸ್ತೆ ದಾಟುತ್ತಿದ್ದ ಗೋವಿಗೆ ವಾಹನವೊಂದು ಡಿಕ್ಕಿ ಹೊಡೆದಿತ್ತು. ಅಫಘಾತದಿಂದ ತೀವ್ರ ಗಾಯಗೊಂಡ ದನವನ್ನು ಯಡ್ತರೆ ಮೂಕಾಂಬಿಕಾ ಹಾರ್ಡ್ವೇರ್ ಹಿಂಭಾಗದ ಜಾಗದಲ್ಲಿ ತಂದು ಹಾಕಿದ ಯಡ್ತರೆಯ ರಿಕ್ಷಾ ಚಾಲಕರು ವೈದ್ಯರನ್ನು ಕರೆಯಿಸಿ ಚಿಕಿತ್ಸೆ ಮಾಡಿದ್ದಾರೆ. ಪ್ರತಿನಿತ್ಯ ಬಾಡಿಗೆಗೆ ತೆರಳುವ ಚಾಲಕರು ತಾವೇ ಹುಲ್ಲು ತಂದು ಹಾಕುತ್ತಿದ್ದಾರೆ. ಆಗಿಂದಾಗ್ಗೆ ಬಾಳೆಹಣ್ಣು, ನೀರು ನೀಡಿ ಆರೈಕೆ ಮಾಡುತ್ತಿದ್ದಾರೆ. ಮಳೆಯಿಂದ ರಕ್ಷಣೆಗಾಗಿ ಅಲ್ಲಿಯೇ ಚಿಕ್ಕದಾಗಿ ಮಾಡೋದನ್ನು ನಿರ್ಮಿಸಿದ್ದಾರೆ. ರಿಕ್ಷಾ ಚಾಲಕರ ನಿರಂತರ ಆರೈಕೆಯಿಂದಾಗಿ ಗೋವು ಚೇತರಿಸಿಕೊಳ್ಳುತ್ತಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಒಟ್ಟಿನಲ್ಲಿ ಅಫಘಾತದಲ್ಲಿ ರಸ್ತೆಯಲ್ಲಿಯೇ ಬಿದ್ದು ಒದ್ದಾಡಬೇಕಿದ್ದ ಗೋವನ್ನು ಪ್ರೀತಿಯಿಂದ ಆರೈಕೆ ಮಾಡಿರುವ ಯಡ್ತರೆ ರಿಕ್ಷಾ ಚಾಲಕರ ಮಾನವೀಯತೆ ಮೆಚ್ಚಲೇಬೇಕಾದ್ದು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕೋಟೇಶ್ವರದಲ್ಲಿ ಸೂರ್ಯನ ಸುತ್ತ ಕಂಡು ಬಂದ ವರ್ತುಲವೊಂದು ಖಗೋಳ ವಿಸ್ಮಯಕ್ಕೆ ಸಾಕ್ಷಿಯಾಗಿದೆ. ಸುಮಾರು 20 ಸಾವಿರ ಅಡಿಗಳ ಎತ್ತರದಲ್ಲಿ ಶೇಖರಣೆಗೊಂಡ ಸಿರ್ರಸ್ ಮೋಡಗಳಲ್ಲಿರುವ ಮಂಜಿನ ತುಣುಕುಗಳ ಮೂಲಕ ಸೂರ್ಯನ ಬೆಳಕಿನ ವಕ್ರೀಭವನದ ಕಾರಣದಿಂದ ಇಂತಹ ವರ್ತುಲ ಮೂಡಿ ನೋಡುಗರನ್ನು ವಿಸ್ಮಯಗೊಳಿಸಿತು.ಭಂಡಾರ್ಕಾರ್ಸ್ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಎಂ. ಬಿ. ನಟರಾಜ್ ಈ ಚಿತ್ರವನ್ನು ಸೆರೆ ಹಿಡಿದಿದ್ದರು.
