Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾಲೇಜಿನ ಹಿರಿಯ ಪ್ರಾಧ್ಯಾಪಕಿ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿ ಸೇವಾ ನಿವೃತ್ತಿ ಹೊಂದಿದ ಡಾ.ಪಾರ್ವತಿ.ಜಿ.ಐತಾಳ್ ಇವರನ್ನು ಕಾಲೇಜಿನ ಅಧ್ಯಾಪಕರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಣಿಪಾಲದ ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿ ಡಾ. ಹೆಚ್.ಶಾಂತಾರಾಮ್ ವಹಿಸಿದ್ದರು. ಇಂಗ್ಲೀಷ್ ವಿಭಾಗದ ಡಾ.ಹಯವದನ ಉಪಾಧ್ಯಾಯ ಡಾ.ಪಾರ್ವತಿ .ಜಿ.ಐತಾಳ್ ಅವರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಪದವಿ ಪೂರ್ವ ಕಾಲಾಜಿನ ಪ್ರಾಂಶುಪಾಲರಾದ ಜಿ.ಎಂ.ಗೊಂಡ,ಅಧ್ಯಾಪಕರ ಸಂಘದ ಪದಾಧಿಕಾರಿಗಳಾದ ರಾಜ್ಯಶಾಸ್ತ್ರ್ ವಿಭಾದದ ಮುಖ್ಯಸ್ಥರಾದ ಡಾ.ಶುಭಕರಾಚಾರಿ ಪ್ರಾಣಿಶಾಸ್ತ್ರ ವಿಭಾಗದ ಡಾ.ಕೆ.ಎಮ್.ವಿಜಯಕುಮಾರ್ಮತ್ತು ವಾಣಿಜ್ಯ ವಿಭಾಗದ ರಿತಿನ್ವೇದಿಕೆಯಲ್ಲಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ., ಕುಂದಾಪುರ: ಜೆಡಿಎಸ್ ಕುಂದಾಪುರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತೆಕ್ಕಟ್ಟೆ ಘಟಕದ ಉದ್ಘಾಟನೆ ಮತ್ತು ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮವು ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪ ತೆಕ್ಕಟ್ಟೆಯಲ್ಲಿ ಕುಂದಾಪುರ ಬ್ಲಾಕ್ ಅಧ್ಯಕ್ಷ ತೆಕ್ಕಟ್ಟೆ ಪ್ರಕಾಶ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಉದ್ಘಾಟನೆ ಗೊಂಡಿತು. ನಂತರ ಮಾತನಾಡಿದ ಅವರು ಯಾವಗ ಕುಂದಾಪುರ ದಲ್ಲಿ ಜೆಡಿಎಸ್ ಪಕ್ಷ ಕಟ್ಟುತ್ತೆವೆ ಎಂದು ಹೊರಡ್ತೆವೆಯೊ ಆವಾಗ್ಲೆ ನಮಗೆ ಹಲಾವಾರು ರೀತಿಯ ಅವಮಾನಗಳು,ಎನು ಇಲ್ಲದೆ ಇರುವ ಪಕ್ಷವನ್ನ ಹೇಗೆ ಕಟ್ಲಿಕ್ಕೆ ಸಾದ್ಯ ಆಗ್ತದೆ ಅನ್ನುವ ಮಾತಿನಿಂದ ನಮ್ಮ ಒಂದು ಕನಸನ್ನ ಕುಗ್ಗಿಸುವಂತ ಕೆಲಸಕ್ಕೆ ಕೆಲವೊಂದು ಜನ ಪ್ರಯತ್ನಿಸ್ಲಿಕ್ಕೆ ಶುರು ಮಾಡಿದ್ರು ನಮ್ಮೊಂದಿಗೆ ಬರುವವರ ದಿಕ್ಕನ್ನ ತಪ್ಪಿಸಿದ್ರು ಆದರೆ ಎರಡು ರಾಷ್ಟ್ರೀಯ ಪಕ್ಷಗಳಿಂದ ಬೇಸತ್ತ ಜನ,ಕುಮಾರಸ್ವಾಮಿ ಯವರ 20 ತಿಂಗಳ ಅವದಿಯಲ್ಲಿ ಹಲವಾರು ಅಬಿವ್ರದ್ದಿ ಕೆಲಸಗಳಿಂದ ಪ್ರೇರಿತರಾಗಿ ನಮ್ಮೊಂದಿಗೆ ಕೈ ಜೊಡಿಸಿದ್ರು ನಮಗೆ ನಮ್ಮ ಕ್ಷೇತ್ರದ ಎಲ್ಲಾ ಬಾಗದಿಂದಲು ಕರೆ ಬರುತ್ತಿದೆ ಕೆಲವೆ ಸಮಯದಲ್ಲಿ ನಾವು ಎಲ್ಲಾ ಬಾಗದಲ್ಲು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಯುವ ಸಾಹಿತಿ, ಪತ್ರಕರ್ತ ಸಂದೀಪ್ ಶೆಟ್ಟಿ ಹೆಗ್ಗದ್ದೆ ಅವರ ದುಬೈ ಪ್ರವಾಸಕಥನ ’ಕಿಂಗ್ ಕ್ಲೀನ್’ ಕೃತಿ ನಗರದ ಕನ್ನಡ ಸಾಹಿತ್ಯ ಪರಿಷತ್ ವೇದಿಕೆಯಲ್ಲಿ ಶನಿವಾರ ಸಂಜೆ ಲೋಕಾರ್ಪಣೆಗೊಂಡಿತು. ಇದೇ ಸಂದರ್ಭ ಸಂದೀಪ್‌ರವರ ಅಕ್ಷರ ಪ್ರೀತಿಯ ದ್ಯೋತಕವಾಗಿ ’ಹೆಗ್ಗದ್ದೆ ಪ್ರಕಾಶನ’ ಎನ್ನುವ ಪ್ರಕಾಶನ ಸಂಸ್ಥೆಯನ್ನು ಲೋಕಾರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತಿ ಪತ್ರಕರ್ತ ಜೋಗಿ, ಇಂದಿನ ಆಧುನಿಕತೆಯ ಓಡಾಟದಲ್ಲಿ ಎಲ್ಲವನ್ನು ಬಿಟ್ಟು ಸಂದೀಪ ಸಾಹಿತ್ಯ ಬದುಕನ್ನು ಆರಿಸಿಕೊಂಡಿರುವುದು ಅಭಿನಂದಿಸಬೇಕಾದ ವಿಚಾರ, ಬಹಳ ಸಣ್ಣ ವಯಸ್ಸಿನಲ್ಲೇ ಪ್ರಕಾಶನವನ್ನು ಲೋಕಾರ್ಪಿಸಿರುವುದು ಬರವಣಿಗೆಗಾರರಿಗೆ ಸದಾವಕಾಶವಾಗಿದೆ, ಇಲ್ಲಿ ಹಣ ಹೂಡಿ, ಹಣ ತೆಗೆಯಬೇಕು. ಬಹಳ ಒಳ್ಳೆಯ ಪುಸ್ತಕಗಳನ್ನು ಸಮಾಜಕ್ಕೆ ನೀಡುವ, ಹೊರತರುವ ಅಭಿಲಾಷೆಯೂ ಪ್ರಕಾಶಕರಿಗಿರಬೇಕು, ಒಂದು ಪ್ರಕಾಶನ ಎದ್ದು ನಿಲ್ಲಬೇಕಾದರೆ ಪ್ರತಿಯೊಂದು ಪ್ರಕಾಶನಕ್ಕೂ ಒಬ್ಬೊಬ್ಬ ಒಳ್ಳೆಯ ಲೇಖಕ ಬೇಕು, ಆ ಲೇಖಕ ಅನುಭವವನ್ನು ಕಾಪಿಟ್ಟುಕೊಂಡು ಅಚ್ಚರಿಯ ಮೂಟೆಯಂತಿರಬೇಕು. ವ್ಯಕ್ತಿ ವಿಶಿಷ್ಟವಾದ ಸಮಸ್ಯೆ, ವ್ಯಕ್ತಿ ವಿಶಿಷ್ಟವಾದ ಪ್ರತಿಭೆ ಪ್ರಕಾಶನ ಸಂಸ್ಥೆಗೆ ತಾಕಿದರೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶತಮಾನೋತ್ಸವದ ಸಂಭ್ರಮದಲ್ಲಿರುವ ಜಿಲ್ಲಾ ಅತ್ಯುತ್ತಮ ಶಾಲೆ ಪ್ರಶಸ್ತಿ ಪಡೆದುಕೊಂಡಿದ್ದ ಹೆಮ್ಮಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಹಳೆ ವಿದ್ಯಾರ್ಥಿ ಸಂಘವನ್ನು ಆದಿತ್ಯವಾರ ರಚಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾಗಿ ಧಾರ್ಮಿಕ ಮುಂದಾಳು ಅಶೋಕ್ ಭಟ್, ಅಧ್ಯಕ್ಷರಾಗಿ ಸಾಮಾಜಿಕ ಮುಂದಾಳು ಹರೀಶ್ ಭಂಡಾರಿ, ಉಪಾಧ್ಯಕ್ಷರಾಗಿ ಸುಮತಿ ಆಚಾರ್ಯ, ಕಾರ್ಯದರ್ಶಿಯಾಗಿ ಶ್ರೀಕಾಂತ ಹೆಮ್ಮಾಡಿ, ಜೊತೆ ಕಾರ್ಯದರ್ಶಿಯಾಗಿ ರಾಘವೇಂದ್ರ ಕುಲಾಲ್ ಹಾಗೂ ಚಂದ್ರ ಭಟ್, ಖಜಾಂಚಿ ರಾಘವೇಂದ್ರ ಪೂಜಾರಿ ಹೆದ್ದಾರಿಮನೆ, ಲೆಕ್ಕ ಪರಿಶೋಧಕರಾಗಿ ಲೂವಿಸ್ ಪ್ರಶಾಂತ್, ಕ್ರೀಡಾ ಕಾರ್ಯದರ್ಶಿಯಾಗಿ ಕೃಷ್ಣ ಕೋಟ್ಯಾನ್, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ರವಿ ಮೊಗವೀರ, ಸಾಂಸ್ಕೃತಿಕ ಕಾರ್ಯದರ್ಶಿ ಶಶಿಕಾಂತ, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಹೇಂದ್ರ ದೇವಾಡಿಗ ಹಾಗೂ ವಿನಯ್ ಮೂವತ್ತುಮುಡಿ, ಸಂಘಟನಾ ಕಾರ್ಯದರ್ಶಿಗಳಾಗಿ ಚಂದ್ರ ಪೂಜಾರಿ, ಸುಕುಮಾರ್ ಪೂಜಾರಿ, ಸಂತೋಷ ಹೆಮ್ಮಾಡಿ, ಶ್ರೀಲತಾ ಹೆಮ್ಮಾಡಿ ಹಾಗೂ ಜಯಲಕ್ಷ್ಮೀ ಆಯ್ಕೆಯಾದರು. ಈ ಸಂದರ್ಭದಲ್ಲಿ ಹೆಮ್ಮಾಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಹರೀಶ್ ಭಂಡಾರಿ, ಉಪಾಧ್ಯಕ್ಷರಾದ ಅಂತೋನಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಣಿಯ ಮಾತಾ ಮಾಂಟೆಸ್ಸೋರಿಯ ಪುಟಾಣಿಗಳಿಂದ ’ಕಲಾಂ’ರಿಗೊಂದು ’ಸಲಾಂ’ ಕಾರ್ಯಕ್ರಮ ಜರುಗಿತು. ದೇಶ ಕಂಡ ಅಪ್ರತಿಮ ವಿಜ್ಞಾನಿ, ಸರಳ ಸಜ್ಜನಿಕೆಯ ಸರದಾರ, ಜನರ ರಾಷ್ಟ್ರಪತಿ ಎಂದು ಖ್ಯಾತರಾದ ಎ.ಪಿ.ಜೆ ಅಬ್ದುಲ್ ಕಲಾಂರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ನಮಿಸುವುದರ ಮೂಲಕ ಮಾತಾ ಮಂಟೊಸೊರಿಯ ಚಿಣ್ಣರು ಕಲಾಂರಿಗೆ ಗೌರವ ಸಲ್ಲಿಸಿದರು. ಆ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್‌ಚಂದ್ರ ಶೆಟ್ಟಿ ಚಿತ್ತೂರು ಇವರು ಮಾತನಾಡಿ, ಕಲಾಂ ಜಿಯವರ ಬದುಕಿನ ಆದರ್ಶಗಳು ನಮಗೆ ದಾರಿ ದೀಪವಾಗಬೇಕು. ಅವರ ಹೆಜ್ಜೆಯ ಗುರುತುಗಳು ನಮ್ಮ ಯಶಸ್ಸಿನ ಪಥವಾಗಬೇಕು ಎಂದರು. ಕಲಾಂ ರ ಬಾಲ್ಯದ ಕಥೆಗಳನ್ನು ಪುಟಾಣಿಗಳಿಗೆ ವಿವರಿಸಿದ ಅವರು ನೀವೂ ಕೂಡ ಕಲಾಂ ರಂತಾಗಬೇಕು ಎಂದು ಕರೆ ನೀಡಿದರು. ಆ ಸಂದರ್ಭದಲ್ಲಿ ಮಾತಾ ಮೊಂಟೆಸರಿಯ ಪ್ರಾಶುಂಪಾಲರು, ಶಿಕ್ಷಕಿಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಪ್ಪುಂದದಲ್ಲಿರುವ ಮಂತ್ರಾಲಯ ಶಾಖಾ ಮಠದದಲ್ಲಿ ಶ್ರಿಗುರು ಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳ ೩೪೬ನೇ ಆರಾಧನ ಮಹೋತ್ಸವ ವೈಭವದಿಂದ ನಡೆಯಿತು. ಬೆಳಿಗ್ಗೆಯಿಂದ ಪಂಚಾಮೃತ ಅಭಿಷೇಕ, ಅರ್ಚನೆ, ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಿತು. ಸುಮಾರು ಎರಡು ಸಾವಿರಕ್ಕೂ ಅಧಿಕ ಭಕ್ತಾದಿಗಳು ಮಠಕ್ಕೆ ಆಗಮಿಸಿ ಗುರುಗಳ ಪಾದಪೂಜೆಗೈದು ಸಂತೃಪ್ತರಾದರು. ಮಧ್ಯಾಹ್ನ ಮಹಾಅನ್ನಸಂತರ್ಪಣೆ ಹಾಗೂ ರಾತ್ರಿ ವಿಶೇಷ ಹೂವಿನ ಪೂಜೆ, ಪಲ್ಲಕ್ಕಿ ಸೇವೆ ನಡೆಯಿತು

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ನಾವುಂದ ಗ್ರಾಮದ ಪಡುವಾಯಿನ ಮನೆ ಎಂಬಲ್ಲಿ ಒಬ್ಬಂಟಿಯಾಗಿ ನೆಲೆಸಿದ್ದ ಮಾಧವ ಪೂಜಾರಿ (62) ಎಂಬುವವರನ್ನು ಹಣ ಹಾಗೂ ಚಿನ್ನದ ಆಸೆಗೆ ಕಡಿದು ಕೊಲೆಗೈದು ಬಂಧಿತನಾಗಿದ್ದ ನರಸಿಂಹ ನಾಯ್ಕ್ (47) ಎಂಬಾತನಿಗೆ ಇಂದು ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಪ್ರಕಾಶ್ ಕೆ. ಅವರು ಕೊಲೆ ಆರೋಪಿಗೆ ಕೊನೆಯುಸಿರಿರುವ ತನಕ ಜೀವಾವಧಿ ಶಿಕ್ಷೆ ಹಾಗೂ 80 ಸಾವಿರ ರೂ. ದಂಡ ವಿಧಿಸಿದೆ. 2016 ಮಾಚ್ 19ರಂದು ಒಬ್ಬಂಟಿಯಾಗಿ ವಾಸಿಸುತ್ತಿದ್ದ ಮಾಧವ ಪೂಜಾರಿ ಅವರನ್ನು ಕೊಲೆಗೈದಿದ್ದ ನರಸಿಂಹ ನಾಯ್ಕ್ ಎಂಬುವವನನ್ನು ಪೊಲೀಸರು ಮೂರು ದಿನದಲ್ಲಿ ಬಂಧಿಸಿದ್ದರು. ಕೊಲೆ ಮಾಡಲು ಬಳಸಿದ್ದ ಕತ್ತಿ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಆತನ ಮುಖದ ಮೇಲಿದ್ದ ಗಾಯದ ಗುರುತು, ಕತ್ತಿನಲ್ಲಿದ್ದ ರಕ್ತದ ಕಲೆ ಮಾದರಿ ಹಾಗೂ ಬನಿಯಾನ್‌ನಲ್ಲಿದ್ದ ಮೃತ ವ್ಯಕ್ತಿಯ ರಕ್ತದ ಕಲೆ ಪ್ರಕರಣಕ್ಕೆ ಪೂರಕ ಸಾಕ್ಷ್ಯ ಒದಗಿಸಿದ್ದವು. ಈ ಹಿಂದೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಮನುಷ್ಯನಲ್ಲಿನ ಅನುಭವದ ಹೂರಣವನ್ನು ಹೊರತರುವಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆಗಳು ಬಹಳ ಸಹಕಾರಿ. ವ್ಯವಹಾರಿಕ ಬದುಕಿನಲ್ಲಿ ಉದ್ಯಮಶೀಲತೆಯ ಜೊತೆಗೆ ಕ್ರಿಯಾಶೀಲತೆ ಮತ್ತು ಸೃಜನ ಶೀಲತೆಯನ್ನು ಬೆಳೆಸಿಕೊಳ್ಳಲು ಅವು ಸಹಾಯ ಮಾಡುತ್ತವೆ ಎಮದು ಕೋಟೇಶ್ವರ ವರದರಾಜ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ನಾಯಕ್ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಕಳೆದ ಸೋಮವಾರ ನಡೆದ ಸಮಾರಂಭದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ದೃಷ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳು ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮುಖೇನ ತಮ್ಮ ಜ್ಞಾನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕು ಎಂದು ಅವರು ಹೇಳಿದರು. ಮುಖ್ಯ ಅತಿಥಿಗಳಾಗಿ ಜಿ.ಎಸ್.ವಿ.ಎಸ್ ಅಸೋಷಿಯೇಶನ್ ಅಧ್ಯಕ್ಷ ಡಾ. ಕಾಶೀನಾಥ ಪೈ , ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್ ಉಪಸ್ಥಿತರಿದ್ದರು.ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಮ್ ಸಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಉಪನ್ಯಾಸಕ ಸುಜಯೀಂದ್ರ ಹಂದೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಆಂಗ್ಲ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ., ಬೈಂದೂರು: ಧರ್ಮಶ್ರೀ ರಿಲೀಫ್ ಫೌಂಡೇಶನ್ ಮಟ್ನಕಟ್ಟೆ ಕೆರ್ಗಾಲ್ ಇವರಿಂದ ನಾಯ್ಕನಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಿಂಟರ್ ಕೊಡುಗೆಯಾಗಿ ನೀಡಲಾಯಿತು. ಆ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಈಶ್ವರ ಶೇರೆಗಾರ್, ಗ್ರಾಮಪಂಚಾಯತ್ ಅಧ್ಯಕ್ಷರಾದ ಸೋಮು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಾಜು ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರಾದ ರಾಘವೇಂದ್ರ ಪೂಜಾರಿ, ದೈಹಿಕ ಶಿಕ್ಷಕರಾದ ವಿಷ್ಣು ಕೆ.ಬಿ., ಹಳೆವಿದ್ಯಾರ್ಥಿ ಸಂಘದವರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.

Read More

ಮಾತು ಕಥೆ ಖಾದ್ಯದೊಂದಿಗೆ ಜರುಗಿತು ಸಸ್ಯಾಮೃತ ಸಂಭ್ರಮ. ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ತಾಲೂಕಿನ ವಕ್ವಾಡಿ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ತುಂಬೆಲ್ಲಾ ಭಾನುವಾರ ವಿವಿಧ ಖಾದ್ಯಗಳ ಘಮ. ಸಾಂಪ್ರದಾಯಿಕ ಹಾಗೂ ಔಷಧಿಯ ಗುಣಗಳುಳ್ಳ ಸಸ್ಯಗಳಿಂದ ತಯಾರಾದ ವಿವಿಧ ಬಗೆಯ ಸವಿಯಾದ ಶುಚಿರುಚಿಯಾದ ತಿನಿಸುಗಳು ಬಾಯಲ್ಲಿ ನೀರುರಿಸುತ್ತಿದ್ದವು. ಗುಣಮಟ್ಟದ ಶಿಕ್ಷಣದೊಂದಿಗೆ ಸದಾ ಹೊಸತನ ಆಲೋಚನೆಗಳನ್ನು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸುವ ಬಾಂಡ್ಯ ಎಜ್ಯುಕೇಶನ್ ಟ್ರಸ್ಟ್‌ನ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆ ಪಠ್ಯದ ಜತೆಗೆ ಆಹಾರ, ಕ್ರೀಡೆ, ಸಂಸ್ಕ್ರತಿ, ಕಲೆ, ಸಾಹಿತ್ಯ, ಆರೋಗ್ಯ ಮೊದಲಾದ ಪಠ್ಯೇತರ ಕಾರ‍್ಯಕ್ರಮಗಳನ್ನೂ ನಿಯಮಿತವಾಗಿ ಆಯೋಜಿಸಿ ವಿದ್ಯಾರ್ಥಿಗಳಲ್ಲೊಂದು ನಾವಿನ್ಯತೆಯನ್ನು ತುಂಬುತ್ತಾ ಬದುಕಿನ ಪಾಠ ಕಲಿಸುತ್ತಿದೆ. ಆಷಾಢ ಮಾಸದ ಆಸುಪಾಸಿನಲ್ಲಿ ದೇಸಿ ಶೈಲಿಯ ಆಹಾರ ಕ್ರಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ’ಸಸ್ಯಾಮೃತ’ ಆಯೋಜಿಸಿದ್ದ ಕಾರ್ಯಕ್ರಮ ಸಂಸ್ಥೆಯ ಕ್ರೀಯಾಶೀಲ ಪ್ರಯೋಗಗಳಲ್ಲೊಂದು. ಸಸ್ಯ ಪದಾರ್ಥಗಳ ಸವಿ: ಶುಂಠಿ ಲಿಂಬು ಕಷಾಯ, ಕಣಲೆ – ಧಾರೆಹುಳಿ, ಉಪ್ಪಿನಕಾಯಿ, ಈರುಳ್ಳಿ ಸೊಪ್ಪಿನ ಕೋಸಂಬರಿ, ಸಾಂಬಾರ್ ಸೊಪ್ಪಿನ ಚಟ್ನಿ, ಕೆಸುವಿನ…

Read More