ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಶ್ರೀಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿ ಹಾಗೂ ಶ್ರೀ ರಾಮಕ್ಷತ್ರಿಯ ಮಾತೃ ಮಂಡಳಿ ನೇತೃತ್ವದಲ್ಲಿ ಶನಿವಾರ ಆಯೋಜಿಸಲಾಗಿದ್ದ ಶ್ರೀಮದ್ಭಗವದ್ಗೀತಾ ಭೋದನಾ ಕಾರ್ಯಕ್ರಮದಲ್ಲಿ ಗೀತೆಯ ಬಗ್ಗೆ ಪ್ರವಚನ ನೀಡಿದ ಎಳಜಿತ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಈ ಸಂದರ್ಭ ನಿವೃತ್ತ ಉಪನ್ಯಾಸಕ ಶೇಷಪ್ಪಯ್ಯ ಮಾಸ್ಟರ್ ಅವರು ಮಾತನಾಡಿದರು. ಬೈಂದೂರು ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಪರಮೇಶ್ವರ ಹೋಬಳಿದಾರ್, ಯುವಕ ಮಂಡಲದ ಅಧ್ಯಕ್ಷ ಗುರುರಾಜ್, ಶ್ರೀಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿ ಸಂಚಾಲಕ ರಾಮಕೃಷ್ಣ ಶೇರುಗಾರ್ ಬಿಜೂರು, ರಾಮಕ್ಷತ್ರಿಯ ಮಾತೃಮಂಡಳಿ ಗೌರವಾಧ್ಯಕ್ಷೆ ಸುಂದರಿ ಗಣಪತಿ, ಅಧ್ಯಕ್ಷೆ ವನಜಾ ಭಾಸ್ಕರ್ ಇದ್ದರು. ಪ್ರತಿ ಶನಿವಾರ ಒಂದೊಂದು ಅಧ್ಯಾಯವನ್ನು ಭೋದಿಸಲಾಗುತ್ತಿದ್ದು, ೧೮ನೇ ಅಧ್ಯಾಯ ಮುಗಿದ ಬಳಿಕ ಗುರುವಂದನೆ ಸಲ್ಲಿಸಲಾಯಿತು. ಶಿಕ್ಷಕ ಮಂಜುನಾಥ ಸ್ವಾಗತಿಸಿ, ಶಿಕ್ಷಕಿ ಶ್ರೀದೇವಿ ಮಹಾಬಲೇಶ್ವರ್ ವಂದಿಸಿದರು. ಉಪನ್ಯಾಸಕ ಕೇಶವ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ಲೋಕಾಯುಕ್ತ ಉಡುಪಿ ವಿಭಾಗದ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಸಪ್ಟೆಂಬರ್ 7 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2ಗಂಟೆಯವರೆಗೆ ಕುಂದಾಪುರ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಸಲಿರುವರು. ಕುಂದಾಪುರ ತಾಲೂಕಿನ ಇಲಾಖೆಯ ಅಧಿಕಾರಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದಲ್ಲಿ, ಕುಂದಾಪುರ ತಾಲೂಕು ಕಚೇರಿಗೆ ಆಗಮಿಸಿ, ದೂರನ್ನು ಸಲ್ಲಿಸಬಹುದಾಗಿದೆ. ಕಾರ್ಯಕ್ರಮದಲ್ಲಿ ಕುಂದಾಪುರ ತಾಲೂಕಿನ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಾಗಲಿದ್ದು, ಸ್ಥಳದಲ್ಲಿಯೇ ಇತ್ಯರ್ಥಪಡಿಸಬಹುದಾದ ದೂರುಗಳನ್ನು ಅಲ್ಲಿಯೇ ಇತ್ಯರ್ಥಪಡಿಸಲಾಗುವುದು. ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ದೂರು ಅರ್ಜಿಯ ನಮೂನೆ 1 ಮತ್ತು 2 ನ್ನು ಸ್ಥಳದಲ್ಲಿ ವಿತರಿಸಲಾಗುವುದು. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕುಂದಾಪುರ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತೆಕ್ಕಟ್ಟೆಯ ಸೇವಾ ಸಂಗಮ ವಿದ್ಯಾ ಕೇಂದ್ರದಲ್ಲಿ ಮಂಗಳವಾರ ನಡೆದ ಕುಂದಾಪುರ ವಲಯ ಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ ಗಂಗೊಳ್ಳಿ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರ ಕಬಡ್ಡಿ ತಂಡ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಸಂಖ್ಯಾತ ಜೀವಸಂಕುಲಗಳಲ್ಲಿ ಮನುಷ್ಯ ಬುದ್ಧಿ ವಿವೇಕ ಮತ್ತು ಜಾಗ್ರತಿಯನ್ನು ಪಡೆದುಕೊಂಡಿದ್ದಾನೆ. ಕೇವಲ ತಾನು ಬದುಕುದಷ್ಟೆಯಲ್ಲ, ಉಳಿದ ಜೀವಸಂಕುಲಗಳನ್ನು ಉಳಿಸುವ ಗುರುತರವಾದ ಹೊಣೆ ಆತನ ಮೇಲಿದೆ. ಪರಿಸರದ ಎಲ್ಲಾ ವಸ್ತುಗಳೊಂದಿಗೆ ಪ್ರತ್ಯೇಕ್ಷ ಮತ್ತು ಪರೋಕ್ಷವಾದ ಸಂಬಂಧವನ್ನು ಮನುಷ್ಯ ಹೊಂದಿದ್ದಾನೆ. ಮಾನವನ ಅತಿಯಾಸೆ ಉಳಿದ ಜೀವಸಂಕುಲಗಳಿಗೆ ತೊಂದರೆಯಾಗಬಾರದು ಎನ್ನುವುದು ಪ್ರತಿಯೊಬ್ಬ ಮನುಷ್ಯನ ಪರಮ ಧ್ಯೇಯವಾಗಬೇಕು ಎಂದು ಖ್ಯಾತ ರೇಖಾಚಿತ್ರ ಕಲಾವಿದ, ಪರಿಸರ ಪ್ರೇಮಿ ದಿನೇಶ ಹೊಳ್ಳ ಹೇಳಿದರು. ಗುರುಕುಲ ವಿದ್ಯಾಸಂಸ್ಥೆಯ ಆಯೋಜಿಸಿದ ಪರಿಸರ ಜಾಗ್ರತಿ ಅಭಿಯಾನದಲ್ಲಿ ಅವರು ಮಾತನಾಡಿ ಪಶ್ಚಿಮಘಟ್ಟಗಳು ಅನೇಕ ನದಿಗಳಿಗೆ ತವರೂರು. ಆದರೆ ಇಂದು ಮಾನವನ ಮನರಂಜನೆಗಾಗಿ ಇಲ್ಲಿಯ ನಿಸಗ ಸೌಂದರ್ಯ ಕಲುಷಿತವಾಗುತ್ತಿದೆ. ಆಸರೆಯಾಗಬೇಕಾದ ಪಶ್ಚಿಮ ಘಟ್ಟಗಳು ಭಯಾನಕತೆಯನ್ನು ಸೃಷ್ಠಿಸುತ್ತಿವೆ. ಅಲ್ಲದೇ ಇಲ್ಲಿ ಜೀವಿಸುವ ಪ್ರಾಣಿ ವರ್ಗ ನಗರ ಪ್ರದೇಶಕ್ಕೆ ಧಾಳಿಯಿಕ್ಕುತ್ತಿವೆ. ಇದಕ್ಕೆಲ್ಲ ಕಾರಣ ಮಾನವ ಪಶ್ಚಿಮ ಘಟ್ಟದ ಮೇಲಿನ ಅತೀಯಾದ ಆಕ್ರಮಣ. ನದಿಗಳು ನಮ್ಮ ಜೀವನಾಡಿಗಳು. ಇದನ್ನು ರಕ್ಷಿಸುವ ಮತ್ತು ಶುದ್ಧವಾಗಿ ಇಟ್ಟುಕೊಳ್ಳುವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸ್ಪರ್ಧಾತ್ಮಕ ಯುಗದಲ್ಲಿ ಇರುವ ನಾವು ಸಂವಹನ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ವಿಶೇಷವಾಗಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಎದುರಿಸಲಿರುವ ಉದ್ಯೋಗ ಸಂದರ್ಶನ ಮತ್ತಿತರ ಕೆಲಸಗಳಿಗೆ ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿರಬೇಕು, ಜೊತೆಗೆ ವೃತ್ತಿ ಕೌಶಲ್ಯದ ಸೂಕ್ಷ್ಮತೆಯನ್ನು ವಿದ್ಯಾರ್ಥಿಗಳು ಅರಿತಿರಬೇಕೆಂದು ಕುಂದಾಪುರದ ವಕೀಲರು ಹಾಗೂ ತರಬೇತುದಾರರಾದ ರಾಘವೇಂದ್ರ ಚರಣ್ ನಾವಡ ಅವರು ಹೇಳಿದರು. ಅವರು ಕಾಲೇಜಿನ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿ ಘಟಕ, ಯುವ ಸ್ಪಂದನ ಹಾಗೂ ಕೋಸ್ಟಲ್ ಕುಂದಾಪುರ ಲಯನ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ’ಸಂವಹನ ಕಲೆ ಮತ್ತು ಬೆಳವಣಿಗೆ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ಧೇಶಿಸಿ ಮಾತನಾಡಿದರು. ಕೋಸ್ಟಲ್ ಕುಂದಾಪುರ ಲಯನ್ಸ್ ಕ್ಲಬ್ ಇದರ ಅಧ್ಯಕ್ಷರಾಗಿರುವ ಅಶೋಕ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿರು. ಕಾಲೇಜಿನ ಪ್ರಾಂಶುಪಾಲ ಪ್ರೊ| ಕೊತ್ತಾಡಿ ಉಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೋಸ್ಟಲ್ ಕುಂದಾಪುರ ಲಯನ್ಸ್ ಕ್ಲಬ್ ಇದರ ಉಪಾಧ್ಯಕ್ಷರಾದ ರತ್ನಕರ್ ಶೆಟ್ಟಿ, ಕೋಸ್ಟಲ್ ಕುಂದಾಪುರ ಲಯನ್ಸ್ ಕ್ಲಬ್ ಸದಸ್ಯರಾದ ಸುಕುಮಾರ, ಉದಯ್ ಹಾಗೂ ಕಾಲೇಜಿನ ವೃತ್ತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶನಾಲಯದ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದ ಪುರುಷ ಮತ್ತು ಮಹಿಳಾ ಟೇಬಲ್ ಟೆನಿಸ್ ಟೂರ್ನ್ಮೆಂಟ್ 2019-20 ನಲ್ಲಿ ಪೂರ್ಣಪ್ರಜ್ಞ ಸಂಜೆ ಕಾಲೇಜು ಉಡುಪಿ ಅತ್ಯುತ್ತಮ ಪ್ರದರ್ಶನ ನೀಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ರಾಷ್ಟ್ರೀಯ ಟೇಬಲ್ ಟೆನಿಸ್ ಆಟಗಾರ ವಿಪ್ಲವ್ ರಾವ್ ಕುಂದಾಪುರದ ಟೋರ್ಪಡಸ್ ಸ್ಪೋರ್ಟ್ಸ್ ಕ್ಲಬ್ನ ಅಶ್ವಿನ್ ಕುಮಾರ್ ಪಡುಕೋಣೆ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಮ್.ಗೊಂಡ, ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಐಕ ನಿರ್ದೇಶಕರಾದ ಡಾ.ಜೆರಾಲ್ಡ್ ಸಂತೋಷ್ ಡಿಸೋಜಾ, ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ಜೇಮ್ಸ್ ಒಲಿವೆರಾ ಮತ್ತು ಭಂಡಾರ್ಕಾರ್ಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶಂಕರನಾರಾಯಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಫಲಿತಾಂಶದ ವಿವರ ಪುರುಷರ ವಿಭಾಗ; ಪ್ರಥಮ ಪೂರ್ಣಪ್ರಜ್ಞ ಸಂಜೆ ಕಾಲೇಜು ಉಡುಪಿ ದ್ವಿತೀಯ; ಮಿಲಾಗ್ರೀಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಶ್ರೀ ಇಂದುಧರ ದೇವಸ್ಥಾನ ಗಂಗೊಳ್ಳಿ, ಶ್ರೀ ಇಂದುಧರ ಯುವಕ ಮಂಡಲ ಗಂಗೊಳ್ಳಿ, ಶ್ರೀ ಇಂದುಶ್ರೀ ಮಹಿಳಾ ಸಂಘ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಸೋಮವಾರ ಜರಗಿದ ಕಾರ್ಯಕ್ರಮದಲ್ಲಿ ಸ.ವಿ.ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಸುಮನಾ ಪಡಿಯಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಎಚ್.ಗಣೇಶ ಕಾಮತ್ ಮಾತನಾಡಿ, ಸುಮನಾ ಪಡಿಯಾರ್ ಮಕ್ಕಳನ್ನು ಬರೀ ಅಂಗಳಿಗೆ ಮಾತ್ರ ಸೀಮಿತಗೊಳಿಸದೆ ಅವರ ಮನಸ್ಸು ಮತ್ತು ಭಾವನೆಗಳಿಗೆ ಪೂರಕವಾಗಿ ಸ್ಥೈರ್ಯ, ಆತ್ಮವಿಶ್ವಾಸ, ಪ್ರೀತಿ ತುಂಬಿಸಿ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡಿಸಿದ್ದಾರೆ. ಇವರ ಸೇವೆ ಅವಿಸ್ಮರಣೀಯವಾದುದು ಎಂದರು. ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಗಂಗೊಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಸಮಾಜ ಸೇವಕ ಜಿ.ಗಣಪತಿ ಶಿಪಾ, ಮತ್ಸ್ಯೋದ್ಯಮಿ ಮಂಜುನಾಥ ಜಿ.ಟಿ., ಶಾಲೆಯ ಮುಖ್ಯೋಪಾಧ್ಯಾಯ ಜಿ.ವಿಶ್ವನಾಥ ಭಟ್ ಶುಭ ಹಾರೈಸಿದರು. ದೇವಸ್ಥಾನದ ಮುಕ್ತೇಸರ ಸಂಜೀವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸ್ವಾಭಿಮಾನ, ಸ್ವಾತಂತ್ರ್ಯ ಪ್ರಿಯತೆ ಮತ್ತು ಸಾಹಸ ಪ್ರವೃತ್ತಿಯನ್ನು ಮೂಲದ್ರವ್ಯವನ್ನಾಗಿರಿಸಿಕೊಂಡವರು ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ. ಉತ್ತಮ ಶಿಕ್ಷಕರು ವೃತ್ತಿಪರತೆ ಮತ್ತು ವ್ಯಕ್ತಿ ವಿಶಿಷ್ಟತೆಯನ್ನು ಹೊಂದಿದಲ್ಲಿ ಯುವ ಸಮಾಜವನ್ನು ರೂಪಿಸುವಲ್ಲಿ ಸಾರ್ಥಕಭಾವ ಕಾಣುತ್ತಾರೆ. ತೆರೆಮರೆಯಲ್ಲಿ ಶ್ರದ್ಧೆ ಮತ್ತು ಶಿಸ್ತಿನಿಂದ ಕಾಯಕಗೈಯುವ ಶಿಕ್ಷಕರು ವಿಶೇಷ ಗೌರವಾರ್ಹರು ರಾಜ್ಯ ಪ್ರಶಸ್ತಿ ಪುರಸ್ಕೃತ ಲಲಿತಾ ಅಂಬಾಗಿಲು ನುಡಿದರು. ಉಪ್ಪುಂದ ಮಹಿಳಾ ವಿವಿದೋದ್ಧೇಶ ಸಹಕಾರಿ ಸಂಘದ ಇಪ್ಪತ್ತೈದನೆ ಮಹಿಳಾ ಸ್ನೇಹ ಸಮ್ಮಿಲನ-೨೦೧೯ರಲ್ಲಿ ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಉಪ್ಪುಂದ ಮಹಿಳಾ ವಿವಿದೋದ್ಧೇಶ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷೆ ಯು. ವರಮಹಾಲಕ್ಷ್ಮೀ ಹೊಳ್ಳ ಮಾತನಾಡಿ ಸಂಘದ ಸಿದ್ಧಿ-ಸಾಧನೆ ಮತ್ತು ವಿಶಿಷ್ಟ ಸೇವೆಗಳ ವಿವರ ನೀಡಿ ಹೊಸತಲೆಮಾರಿನವರು ಮುಂದೆ ಎಂದು ನಿಸ್ವಾರ್ಥ ಸೇವೆ ಸಲ್ಲಿಸಬೇಕೆಂದು ಕರೆ ನೀಡಿದರು. ವೀಣಾ ಶ್ಯಾನುಭೋಗ್ ಮತ್ತು ರಮಾ ಆಚಾರ್ಯ ಪ್ರಾರ್ಥಿಸಿದರು. ಸಂಘದ ಕಾರ್ಯನಿರ್ವಹಣಾಧಿಕಾರಿ ಯು. ಗಣೇಶ ಪ್ರಸನ್ನ ಮಯ್ಯ ಸ್ವಾಗತಿಸಿದರು. ಯು. ವರಮಹಾಲಕ್ಷ್ಮೀ ಹೊಳ್ಳರು ಸನ್ಮಾನಿಸಿದರು. ಮುಖ್ಯ ಅತಿಥಿ ಲಲಿತಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಪ್ಪುಂದ ಮೂರ್ತೆದಾರರ ಸೇವಾ ಸಹಕಾರಿ ಸಂಘವು 2018-19 ಆರ್ಥಿಕ ವರ್ಷದಲ್ಲಿ 16.20 ಕೋಟಿ ರೂ. ಠೇವಣಿ ಸಂಗ್ರಹಿಸಿ, 13.19 ಕೋಟಿ ರೂ. ಸಾಲ ನೀಡಿ ಉತ್ತಮ ವ್ಯವಹಾರ ನಡೆಸಿ ವಾರ್ಷಿಕ 31.20 ಲಕ್ಷ ರೂ. ಲಾಭ ಗಳಿಸಿದ್ದು ಸಂಘದ ಸದಸ್ಯರಿಗೆ ಶೇ.15ರ ಡಿವಿಡೆಂಟ್ ವಿತರಿಸಲಾಗುತ್ತಿದೆ. ಆಡಿಟ್ ವರ್ಗೀಕರಣದಲ್ಲಿ ’ಎ’ ದರ್ಜೆಯನ್ನು ಪಡೆದುಕೊಂಡಿದೆ ಎಂದು ಸಂಘದ ಅಧ್ಯಕ್ಷ ಮೋಹನ ಪೂಜಾರಿ ಉಪ್ಪುಂದ ಹೇಳಿದರು. ಅವರು ಉಪ್ಪುಂದ ಶಾಲೆಬಾಗಿಲು ಮಾತೃಶ್ರೀ ಸಭಾಭವನದಲ್ಲಿ ಭಾನುವಾರ ಜರುಗಿದ ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ. ಉಪ್ಪುಂದ ಇದರ 28ನೇ ವಾರ್ಷಿಕ ಸಾಲಿನ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮುದಾಯದ ಜನರಿಗೆ ಉತ್ತಮ ಸೇವೆ ಒದಗಿಸಲು ಸಂಸ್ಥೆ ಬದ್ಧವಾಗಿದ್ದು, ಮುಂದಿನ ಆರ್ಥಿಕ ವರ್ಷಗಳಲ್ಲಿ ಸಂಘದ ಪ್ರಧಾನ ಕಛೇರಿಗೆ ನೂತನ ಸಹಕಾರಿ ಕಟ್ಟಡ ನಿರ್ಮಾಣ, ಕಾರ್ಯಕ್ಷೇತ್ರದ ವ್ಯಾಪ್ತಿಯ ಶಿರೂರಿನಲ್ಲಿ ಶಾಖೆ ತೆರೆಯುವುದು, ಸಂಸ್ಥೆಯಲ್ಲಿ ಠೇವಣಿ ಹಾಗೂ ಸಾಲವನ್ನು ಹೆಚ್ಚಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ. ಪರಿಸರ ನಾಶದಿಂದ ಮತ್ತು ಪರಿಸರ ಮಾಲಿನ್ಯದಿಂದ ಪ್ರಾಕೃತಿಕ ವಿಕೋಪ ಸಂಭವಿಸಿ ಸಾವುನೋವು ಮತ್ತು ಅಪಾರ ಆಸ್ತಿಪಾಸ್ತಿಗಳ ನಾಶಕ್ಕೆ ಕಾರಣವಾಗುತ್ತಿದೆ. ಪ್ಲಾಸ್ಟಿಕ್ ಬಳಕೆಯ ಹೆಚ್ಚಳದಿಂದ ಅನಾಹುತಗಳು ಹೆಚ್ಚುತ್ತಿದ್ದು, ಪರಿಸರ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ, ಅರಿವು ಮೂಡಿಸುವ ಕೆಲಸ ನಡೆಯಬೇಕಿದೆ. ಸಮಾಜ ಸೇವಾ ಸಂಸ್ಥೆಗಳು, ಸಂಘ ಸಂಸ್ಥೆಗಳು ಇಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡು ಪರಿಸರವನ್ನು ರಕ್ಷಿಸಲು ಮುಂದಾಗಬೇಕು. ರಾಷ್ಟ್ರೀಯ ಸೇವಾ ಯೋಜನೆ ಈ ನಿಟ್ಟಿನಲ್ಲಿ ತೊಡಗಿಸಿಕೊಂಡು ಪರಿಸರ ಸಂಕರ್ಷಣೆಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಆಚಾರ್ಯ ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯ, ಕುಂದಾಪುರ ಎಜ್ಯುಕೇಶನ್ ಸೊಸೈಟಿ ಕುಂದಾಪುರ, ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಕುಂದಾಪುರ ಮತ್ತು ತ್ರಾಸಿ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದ್ದ ಕಾಲೇಜಿನ…
