Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಸಿದ್ದಾಪುರ: ಬೈಂದೂರು ಕ್ಷೇತ್ರದಲ್ಲಿ ತನ್ನ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ನಡೆದಿವೆ. ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿದ್ದೇನೆ. ಬೈಂದೂರು ಕ್ಷೇತ್ರದಲ್ಲಿ ಈಗಾಗಲೇ 1664 ಫಲಾನುಭವಿಗಳಿಗೆ ಮನೆಗಳು ಮಂಜೂರು ಮಾಡಲಾಗಿದೆ. ಆಕ್ರಮ ಸಕ್ರಮ ಮತ್ತು 94ಸಿ ಹಾಗೂ 94ಸಿಸಿಯಲ್ಲಿ ಜಾಗ ಮಂಜೂರು ಮಾಡಲಾಗಿದೆ. ಪಶು ಭಾಗ್ಯ ಯೋಜನೆಯಲ್ಲಿ 27 ಗುಂಪುಗಳಿಗೆ ಹಸುಗಳನ್ನು ನೀಡಲಾಗಿದೆ. ಕ್ಷೇತ್ರದಲ್ಲಿ ಸುಮಾರು ರೂ.33 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ, ಯಡಮೊಗೆ ಗ್ರಾಮವನ್ನು ಗ್ರಾಮ ವಿಕಾಸ ಯೋಜನೆಯಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ಬೈಂದೂರು ಕ್ಷೇತ್ರ ಶಾಸಕ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಅವರು ಹೇಳಿದರು. ಅವರು ಸಿದ್ದಾಪುರ ಶ್ರೀ ರಂಗನಾಥ ಸಭಾ ಭವನದಲ್ಲಿ ನಡೆದ ಸಿದ್ದಾಪುರ, ಉಳ್ಳೂರು 74, ಶಂಕರನಾರಾಯಣ, ಯಡಮೊಗೆ, ಹೊಸಂಗಡಿ, ಮಚ್ಚಟ್ಟು ಗ್ರಾಮ ಪಂಚಾಯತ್‌ ಮಟ್ಟದ ಜನಸ್ಪಂದನ ಸಭೆಯನ್ನು ಉದ್ಘಾಟಿಸಿ, ಫಲಾನುಭವಿಗಳಿಗೆ ವಿವಿಧ ಸವಲತ್ತು ಮತ್ತು ಹಕ್ಕುಪತ್ರವನ್ನು ವಿತರಿಸಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯಾಂತ್ಯದ ಕಳೆದ ನಾಲ್ಕು ವರ್ಷಗಳಲ್ಲಿ ನಡೆಯುತ್ತಿರುವ ಹಿಂದೂ ಮುಖಂಡರು ಹಾಗೂ ಯುವಕರ ಹತ್ಯೆ ಖಂಡಿಸಿ, ಕೆಎಫ್‌ಡಿ ಹಾಗೂ ಪಿಎಫ್‌ಐ ಸಂಘಟನೆ ನಿಷೇಧ ಹಾಗೂ ಸಚಿವ ರಮಾನಾಥ ರೈ ಅವರ ರಾಜಿನಾಮೆಗೆ ಆಗ್ರಹಿಸಿ ರಾಜ್ಯ ಬಿಜೆಪಿ ಯುವ ಮೋರ್ಚಾ ಮಂಗಳೂರು ಚಲೋ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದು ಕುಂದಾಪುರ ಹಾಗೂ ಹೆಮ್ಮಾಡಿಯಿಂದ ಬೈಕ್ ರ‍್ಯಾಲಿಯಲ್ಲಿ ಹೊರಟ ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರಿಗೆ ಪೊಲೀಸರು ತಡೆಯೊಡ್ಡಿ ಬಂಧಿಸಿ ಬಿಡುಗಡೆಗೊಳಿಸಿದ ಘಟನೆ ನಡೆಯಿತು. ಕುಂದಾಪುರದಲ್ಲಿ ಜರುಗಿದ ಬೈಕ್ ರ‍್ಯಾಲಿಯಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಜಿಲ್ಲಾ ಬಿಜೆಪಿ ಹಿಂದೂಳಿದ ಮೋರ್ಚಾಗಳ ಅಧ್ಯಕ್ಷ ರಾಜೇಶ್ ಕಾವೇರಿ, ಮುಖಂಡರುಗಳಾದ ದಿನಕರ್ ಬಾಬು, ಕಿರಣಕುಮಾರ್ ಕೊಡ್ಗಿ, ಮಹೇಶ್ ಕುಮಾರ್, ವಿಠಲ ಪೂಜಾರಿ, ಸದಾನಂದ ಬಳ್ಕೂರು ಸತೀಶ್ ಪೂಜಾರಿ ವಕ್ವಾಡಿ ಮೊದಲಾದವರು ಭಾಗವಹಿಸಿದ್ದರು. ಹೆಮ್ಮಾಡಿಯಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಹಳೆ ವಿದ್ಯಾರ್ಥಿಗಳ ವತಿಯಿಂದ ಗುರುಗಳನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳಾದ ಪವನ್ ಗಾಣಿಗ, ಸಂತು ಕೋಟ್ಯಾನ್, ರಾಘವೇಂದ್ರ ಬಳೆಗಾರ್, ಸಂದೀಪ್ ಕಾಂಚನ್, ಪ್ರಸಾದ್ ಚಂದನ್, ನಾಗರಾಜ್ ಪೂಜಾರಿ, ಗಣೇಶ್, ರಾಘವೇಂದ್ರ, ಪ್ರಸಾದ್, ಆಶಾ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ನಾರಾಯಣ ಗುರುಗಳ ಒಂದೇ ಜಾತಿ, ಓಂದೇ ಧರ್ಮ ಎನ್ನುವ ಸಂದೇಶವನ್ನು ಜೀವನದಲ್ಲಿ ಅನುಷ್ಟಾನ ಮಾಡಿದರೆ ಈ ಆಚರಣೆಗಳಿಗೆ ನಿಜವಾದ ಅರ್ಥ ಬರುತ್ತದೆ. ಗುರುಗಳ ತತ್ವ, ಸಿದ್ಧಾಂತಗಳು ಇಂದಿಗೂ ಪ್ರಸ್ತುತ ಎಂದು  ಕುಂದಾಪುರ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಜರಗಿದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು ದೀಪಬೆಳಗಿಸಿ, ನಾರಾಯಣ ಗುರುಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಉಡುಪಿಯ ಸರಕಾರಿ ಬಾಲಕಿಯರ ಪ.ಪೂ. ಕಾಲೇಜಿನ ಉಪನ್ಯಾಸಕ ದಯಾನಂದ್‌ ಮಾತನಾಡಿ, ವಿದ್ಯೆ, ಸ್ವತಂತ್ರ, ಸಂಘಟನೆ, ಹೋರಾಟದಿಂದ ಸಮಸ್ಯೆಗಳ ಪರಿಹಾರ ಸಾಧ್ಯ ಎಂದು ಕಂಡುಕೊಂಡ ನಾರಾಯಣಗುರುಗಳು ಸಮಾಜವನ್ನು ಶೈಕ್ಷಣಿಕವಾಗಿ ಮೇಲೆತ್ತುವ ಚಿಂತನೆಯನ್ನು ಕಂಡುಕೊಂಡರು. ಶಿಕ್ಷಣ ಹಾಗೂ ಜ್ಞಾನದ ಕೊರತೆಯಿಂದಾಗಿ ಜನರಿಗೆ ಸಮಸ್ಯೆಗಳು ಎದುರಾಗುತ್ತಿರುವುದನ್ನು ಮನಗಂಡ ಅವರು ಶಿಕ್ಷಣದಿಂದ ಎಲ್ಲಾ ಸಮಸ್ಯೆಗಳ ನಿರ್ಮೂಲನೆ ಸಾಧ್ಯ ಎಂದು ಅರಿತು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಕಾರ್ಯಕ್ಕೆ ಕೈ ಹಾಕಿದರು. ಒಟ್ಟಿನಲ್ಲಿ ಅವರ ತತ್ವ ಸಿದ್ಧಾಂತಗಳ ದಾರಿಯಲ್ಲಿ ನಡೆದ್ದಲ್ಲಿ ಸಮಸ್ಯೆಗಳಿಗೆ ಪರಿಹಾರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಶ್ರೀ ಅನಂತ ಚತುರ್ದಶಿ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ೮ ಗಂಟೆಗೆ ದೇವತಾ ಪ್ರಾರ್ಥನೆಯಿಂದ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡಿತು. ನಂತರ ಕೋಟಿ ತೀರ್ಥಕ್ಕೆ ತೆರಳಿ ಗಂಗಾಪೂಜೆ, ಶೇಷ ಪೂಜೆ ನಡೆದು ಅನಂತ ಕಲಶವನ್ನು ಪುರಮೆರವಣಿಗೆಯೊಂದಿಗೆ ತಂದು ಶ್ರೀ ದೇವಳದಲ್ಲಿ ಸ್ಥಾಪಿಸಲಾಯಿತು. ದೇವಳದಲ್ಲಿ ಕಲ್ಪೋಕ್ತ ಪೂಜೆ, ಗ್ರಂಥಿ ಪೂಜೆ ನಡೆದವು. ಮಧ್ಯಾಹ್ನ ಭಜನೆ, ಶ್ರೀ ಪಟ್ಟಾಭಿ ರಾಮಚಂದ್ರ ದೇವರಿಗೆ ಮಧ್ಯಾಹ್ನ ಪೂಜೆ, ಶ್ರೀ ಅನಂತ ದೇವರಿಗೆ ಮಹಾಪೂಜೆ, ಚತುರ್ದಶ ನಮಸ್ಕಾರಗಳು ನಡೆದವು. ರಾತ್ರಿ ದೇವರಿಗೆ ರಾತ್ರಿ ಪೂಜೆ, ವಸಂತ ಪೂಜೆ, ಅಷ್ಟಾವಧಾನ ಸೇವೆ ಜರುಗಿತು. ದೇವಳವನ್ನು ಪಲ ಪುಷ್ಪದೊಂದಿಗೆ ವಿಶೇಷವಾಗಿ ಸಿಂಗರಿಸಲಾಗಿತ್ತು. ಧಾರ್ಮಿಕ ಕಾರ್ಯಕ್ರಮ ವೇ.ಮೂ. ಶ್ರೀನಿವಾಸ ಭಟ್, ವೇ.ಮೂ ಪ್ರಶಾಂತ ಭಟ್ ಅವರ ನೇತೃತ್ವದಲ್ಲಿ ನಡೆದವು. ಈ ಎಲ್ಲಾ ಕಾರ್ಯಕ್ರಮಕ್ಕೆ ದೇವಳದ ಮೊಕ್ತೇಸರರು,ರಾಮ ಸೇವಾ ಸಂಘದ ಸದಸ್ಯರು, ಸಮಾಜ ಬಾಂಧವರು ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯ ಯುವ ಚಿತ್ರಕಲಾ ಶಿಕ್ಷಕ ಗಿರೀಶ್ ಗಾಣಿಗ ತಗ್ಗರ್ಸೆ ಅವರಿಗೆ ಪ್ರಸಕ್ತ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಪ್ರತಿವರ್ಷ ಅನುದಾನ ರಹಿತ ಶಾಲಾ ಶಿಕ್ಷರಿಗೆ ನೀಡಲಾಗುತ್ತಿರುವ ಪ್ರಶಸ್ತಿಗೆ ಅವರು ಭಾಜನರಾಗಿದ್ದು, ಉಡುಪಿಯಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಪ್ರತಿಭಾನ್ವಿತ ಚಿತ್ರಕಲಾ ಶಿಕ್ಷಕ ಗಿರೀಶ್ ಗಾಣಿಗ ತಗ್ಗರ್ಸೆ: ಬೈಂದೂರು ತಗ್ಗರ್ಸೆಯ ಪ್ರತಿಭಾವಂತ ಯುವ ಕಲಾವಿದ, ಚಿತ್ರಕಲಾ ಶಿಕ್ಷಕ ಗಿರೀಶ್ ತನ್ನ ಕಲಾಪ್ರೌಡಿಮೆಯನ್ನೇ ವೃತ್ತಿಯನ್ನಾಗಿಸಿಕೊಂಡು ಬದುಕು ಕಟ್ಟಿಕೊಂಡ ಪರಿ ಮೆಚ್ಚುವಂತದ್ದು. ಚಿತ್ರಕಲೆಯಿಂದ ಆರಂಭಿಸಿ, ಮಣ್ಣಿನ ಕಲಾಕೃತಿಗಳನ್ನು ರಚಿಸುವುದರಲ್ಲಿ ಪ್ರಾವಿಣ್ಯತೆ ಹೊಂದಿದ ಗಿರೀಶ್ ತನ್ನ ಶಾಲಾ ದಿನಗಳಲ್ಲಿಯೇ ಹಲವು ಸ್ವರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯುತ್ತಿದ್ದರು. ಆ ಬಳಿಕ ವಿಜುವಲ್ ಆಟ್ಸ್ ನಲ್ಲಿ ಪದವಿ ಪಡೆದು ಸಂಪೂರ್ಣವಾಗಿ ಚಿತ್ರಕಲೆಯಲ್ಲಿಯೇ ತೊಡಗಿಕೊಂಡರು. ಚಿತ್ರಕಲೆ, ಮರಳು ಶಿಲ್ಪ, ಮಣ್ಣಿನ ಕಲಾಕೃತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸೃಜನಶೀಲತೆ ಎಂಬುದು ಯಾರೊಬ್ಬರ ಸೊತ್ತಲ್ಲ. ಮಕ್ಕಳಲ್ಲಿ ಪ್ರತಿಭೆ ಇದ್ದದ್ದಾದರೆ, ತಂದೆ ತಾಯಿಯರಲ್ಲಿ ಪ್ರೋತ್ಸಾಹಿಸುವ ಗುಣವಿದ್ದರೆ ಮಕ್ಕಳು ಶ್ರೇಷ್ಠ ವ್ಯಕ್ತಿಗಳಾಗುತ್ತಾರೆ. ಕಾಳಜಿ ಹಾಗೂ ಪ್ರೀತಿಯಿಂದ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗೆ ಉತ್ತೇಜನ ದೊರೆತಾದ ಮಾತ್ರ ಅವು ಗುಣಾತ್ಮಕವಾಗಿ ಪ್ರಕಟಗೊಳ್ಳುತ್ತದೆ ಎಂದು ಬೈಂದೂರು ರತ್ತುಬಾಯಿ ಜನತಾ ಪ್ರೌಡಶಾಲೆ ಮಖ್ಯೋಪಧ್ಯಾಯ ಮಂಜು ಕಾಳಾವರ ಅವರು ಹೇಳಿದರು. ಅವರು ರೋಟರಿ ಕ್ಲಬ್ ಬೈಂದೂರು, ಶ್ರೀ ಸಿದ್ಧಿವಿನಾಯಕ ಚೆಸ್ ಅಕಾಡೆಮಿ ರಿ. ಬೈಂದೂರು, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಹಾಗೂ ಇನ್ನರ್‌ವೀಲ್ ಕ್ಲಬ್ ಬೈಂದೂರು ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಮಿಂಚಿನ ಚದುರಂಗ ಸ್ವರ್ಧೆ 2017 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ರೋಟರಿ ಮಾಜಿ ಗವರ್ನರ್ ಬಿ. ಜಗನ್ನಾಥ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕ್ರೀಡೆಯಲ್ಲಿ ಆಸಕ್ತಿಯಿದ್ದರೆ ಮಾತ್ರ ಸಾಧನೆಗೈಯಲು ಸಾಧ್ಯವಿದೆ. ಆಸಕ್ತರಿಗೆ ಸೂಕ್ತ ಸಮಯದಲ್ಲಿ ದೊರೆಯುವ ಅವಕಾಶದಿಂದ ಪ್ರತಿಭೆ ಬೆಳಕಿಗೆ ಬರುತ್ತದೆ ಎಂದರು. ಬೈಂದೂರು ರೋಟರಿ ಅಧ್ಯಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಕವಿಯಾದವನು ತನ್ನ ಸುತ್ತುಮುತ್ತ ನಡೆಯುವ ವಿದ್ಯಮಾನಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು ಮತ್ತು ಅವುಗಳಿಗೆ ಸ್ಪಂದಿಸು ಸಂವೇದನೆಯನ್ನು ಸದಾ ಬೆಳೆಸಿಕೊಳ್ಳಬೇಕು. ಎಲ್ಲರಿಗೂ ಗೊತ್ತಿರುವ ಭಾಷೆ ಒಂದೇ, ಪದಗಳು ಒಂದೇ, ಅರ್ಥಗಳು ಒಂದೇ ಆದರೂ ಕವಿಯಾದವನು ಅವನ್ನು ಪೋಣಿಸುವ ರೀತಿ ಭಿನ್ನವಾಗಿರುತ್ತದೆ. ಉಪಮೆ, ರೂಪಕ, ಉತ್ಪ್ರೇಕ್ಷೆ ಮೊದಲಾದ ಅಲಂಕಾರಗಳ ಮೂಲಕ ಮತ್ತು ವಿವಿಧ ರೀತಿಯ ಧ್ವನಿಗಳ ಮೂಲಕ ಕಾವ್ಯ ಭಾಷೆಯು ಸಾಮಾನ್ಯ ಭಾಷೆಗಿಂತ ಹೆಚ್ಚು ಹೇಳಲು ಸಾಧ್ಯವಾಗುತ್ತದೆ. ಕಡಿಮೆ ಶಬ್ದಗಳ ಮೂಲಕ ಹೆಚ್ಚು ವಿಚಾರಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹೇಳಲು ಸಾಧ್ಯವಾಗುವುದೇ ಕವಿತೆಯ ಹೆಚ್ಚುಗಾರಿಕೆ ಎಂದು ಖ್ಯಾತ ಲೇಖಕಿ ಪಾರ್ವತಿ ಜಿ.ಐತಾಳ್ ಹೇಳಿದರು. ಅವರು ಇಲ್ಲಿನ ವಿಶ್ವ ಕರ್ಮ ಸಭಾಭವನದಲ್ಲಿ ನಡೆದ ಯುವ ಕವಿ ಶ್ರೀರಾಜ ಎಸ್.ಆಚಾರ್ಯ ರಚಿಸಿದ ’ರಿಕ್ತ ನಕ್ಷತ್ರ’ ಎಂಬ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ರಮೇಶ ವಕ್ವಾಡಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ದಾಮೋದರ ಪುರೋಹಿತ್, ರಂಜಿತ್ ಕುಮಾರ್ ಶೆಟ್ಟಿ , ಸ್ವರಾಜ್ಯಲಕ್ಷ್ಮಿ ಮತ್ತು ಶ್ರೀಮತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಡಾ.ಶಿವರಾಮ ಕಾರಂತರು ಕಾಯಕವನ್ನೇ ಕೈಲಾಸವೆಂದು ನಂಬಿದವರು. ಅದರಲ್ಲೇ ತಮ್ಮ ಜೀವಿತಾವಧಿಯ ಸಾರ್ಥಕ್ಯವನ್ನು ಕಂಡವರು ಎಂದು ಖ್ಯಾತ ಚಿಂತಕ ಜಿ.ರಾಜಶೇಖರ ಅಭಿಪ್ರಾಯಪಟ್ಟರು. ಅವರು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ರೇಖಾ ಬನ್ನಾಡಿ ಅವರ “ಕಾರಂತರ ದುಡಿಮೆಯ ಪ್ರಪಂಚ” – ವಿಮರ್ಶಾ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಕಾರಂತರ ದುಡಿಮೆಯ ಪ್ರಪಂಚ” – ವಿಮರ್ಶಾ ಸಂಕಲನ ಎಂಬ ಶೀರ್ಷಿಕೆಯೇ ವಿಸ್ಮಯವೆನಿಸುವಷ್ಟು ಜೀವನಾನುಭೂತಿಯನ್ನು ಸಮ್ಮಿಳಿಸುತ್ತದೆ. ಬರಹಗಳಲ್ಲಿ ಕಾಳಜಿ, ಸಂವೇದನೆ ಮತ್ತು ಸೂಕ್ಷ್ಮತೆಗಳಿವೆ. ಲೇಖಕರು ಸಮಕಾಲೀನ ವಿದ್ಯಾಮಾನಗಳಿಗೆ ಸ್ಪಂದಿಸಿದ ರೀತಿ ನಿಜಕ್ಕೂ ಕ್ರಾಂತಿ ಎನ್ನಬಹುದು. ಪ್ರತಿ ಬರಹಗಳಲ್ಲಿನ ವಸ್ತುವಿಷಯಗಳು ಒಂದಕ್ಕಿಂತ ಇನ್ನೊಂದು ವಿಶಿಷ್ಟವೆನಿಸುತ್ತಾ ಹೋಗುತ್ತದೆ. ಇದೊಂದು ವಿಮರ್ಶಾ ಕೃತಿಯಲ್ಲ. ಇದೊಂದು ಸಮಕಾಲೀನ ಸಾಹಿತ್ಯದ ದಿಕ್ಸೂಚಿಯಾಗಿದೆ. ಇಲ್ಲಿ ಬರುವಂತಹ ಸಂದರ್ಭೋಚಿತ ಸಂಗತಿಗಳು ಮತ್ತು ಅದರ ನಿರ್ಧಾರ ಮತ್ತು ನಿಯಮಗಳು ಅಂತಿಮವಲ್ಲ ಎಂದು ಹೇಳಿದರು. ಕಾರಂತರ ಮರಳಿಮಣ್ಣಿಗೆ ಕೃತಿಯನ್ನು ಕುರಿತು ಮಾತನಾಡುತ್ತಾ ಕಾರಂತರು ತಮ್ಮ ಈ ಕೃತಿಯಲ್ಲಿ ಕೋಟ ಮತ್ತು ಕುಂದಾಪುರ ವಲಯದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಕಾರ್ಯಕ್ರಮದ ಜರುಗಿತು. ಉಪನ್ಯಾಸರ ಶ್ರೀನಾಥ್ ರಾವ್ ಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬೆಳಕೆಂಬ ಜ್ಞಾನದಿಂದ ಕತ್ತಲೆಂಬ ಅಜ್ಞಾನವನ್ನು ತೊಲಗಿಸಿ ಮುಂದುವರಿಯಬೇಕು. ಈ ವಿದ್ಯಾರ್ಥಿಯ ಜೀವನ ಒತ್ತಡದಿಂದ ಕೂಡಿಲ್ಲ. ಈ ಸಮಯವೇ ಜ್ಞಾನವನ್ನು ಪಡೆಯಲಿಕ್ಕೆ ಸೂಕ್ತವಾಗಿದೆ. ಗುರುಕುಲದಲ್ಲಿ 166 ವಿಜ್ಞಾನ ಮಾದರಿ ಅಚ್ಚುಕಟ್ಟಾಗಿದ್ದು, ಮಕ್ಕಳು ವಿವರಿಸಿದ ರೀತಿ ತುಂಬಾ ಚೆನ್ನಾಗಿತ್ತು. ನನಗೆ ತುಂಬಾ ಸಂತೋಷವಾಯಿತು ಎಂದು ತಿಳಿಸಿದರು. ಜ್ಞಾನ, ಕೌಶಲ್ಯ ಎರಡರಿಂದ ಹೊಸತನ ಬರುತ್ತದೆ. ಈ ಹೊಸತನದ ಸಂಕೇತವೇ ಪ್ರಗತಿ. ಅಲ್ಲದೇ ಗುಣಮಟ್ಟದ ಶಿಕ್ಷಣ ದೇಶವನ್ನು ಬದಲಾಯಿಸಬಲ್ಲದು ಇಂತಹ ಸಂದರ್ಭದಲ್ಲಿ ಈ ಮಕ್ಕಳಿಗೆ ಸಂಶೋಧನೆಯ ವೇದಿಕೆ ಅತ್ಯವಶ್ಯಕ. ಇದರಿಂದ ಮಕ್ಕಳು ಸಂಕುಚಿತ ಮನೋಭಾವನೆಯನ್ನು ಬಿಟ್ಟು ಹೊರಬರಲು ಸಾಧ್ಯ. ಇಂತಹ ಕೆಲಸವನ್ನು ಗುರುಕುಲ ಪಬ್ಲಿಕ್ ಶಾಲೆ ನಿರ್ವಹಿಸಿದೆ. ಹಾಗೆಯೇ ಗುರುವಿಲ್ಲದೇ ಯಾವ ಕೆಲಸವು ಸಾಧ್ಯವಿಲ್ಲ ಈ ಗುರುಕುಲದಲ್ಲಿ ಗುರುವಿನ ಸಹಾಯದಿಂದ ವಿಜ್ಞಾನದ ಪ್ರದರ್ಶನವಾಗುತ್ತಿದೆ. ಎಂಬುವುದು…

Read More