Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೇಸಿಐ ವಲಯ ೧೫ರ ಜೇಸಿಐ ಕುಂದಾಪುರ ಘಟಕ ಹಾಗೂ ಜೇಸಿಐ ಕುಂದಾಪುರ ಚರಿಷ್ಮಾ ಘಟಕ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ.) ಕುಂದಾಪುರ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಬಲೀಕರಣ ಮಾಹಿತಿ ಕಾರ್ಯಗಾರ ಆಯೋಜಿಸಲಾಯಿತು. ರಾಷ್ಟ್ರೀಯ ನಿರ್ದೇಶಕರು ಜೆಸಿರೇಟ್ ಹಾಗೂ ಲೇಡಿಲೋಮ್ ಜೇಸಿ ವಿಭಾಗ ಜೇಸಿ ರೂಪಶ್ರೀ ರತ್ನಾಕರ ಇಂದ್ರಾಳಿ ಮಹಿಳಾ ಸಬಲೀಕರಣ ಮಾಹಿತಿ ಕಾರ್ಯಗಾರ ಉದ್ಘಾಟಿಸಿದರು. ಜೇಸಿಐ ಕುಂದಾಪುರದ ಅಧ್ಯಕ್ಷರಾದ ಜೆ.ಎಫ್.ಪಿ ಅಕ್ಷತಾ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಲಯ ಅದಿಕಾರಿ ನಿಕಟ ಪೂರ್ವ ಅಧ್ಯಕ್ಷ ಜೆ.ಎಫ್.ಪಿ ವಿಷ್ಣು ಕೆ. ಬಿ, ಜೇಸಿಐ ಕುಂದಾಪುರ ಚರೀಷ್ಮಾ ಇದರ ಅಧ್ಯಕ್ಷೆ ಗೀತಾಂಜಲಿ ಆರ್ ನಾಯಕ್ ಉಪಸ್ಥಿತರಿದ್ದರು ಸಭೆಯಲ್ಲಿ ಜೇಸಿರೇಟ್ ಅಧ್ಯಕ್ಷೆ ಜೇಸಿ ನಾಗರತ್ನ ಹೇರ್ಳೆ ಜೇಸಿರೇಟ್ ಸಂಯೋಜಕಿ ನಾಗರತ್ನ ಚಂದ್ರಶೇಖರ್, ಜೇಸಿರೇಟ್ ನ ನಿಕಟ ಪೂರ್ವಧ್ಯಕ್ಷೆ ಮಾಲತಿ ವಿಷ್ಣು ಜೇಸಿರೇಟ್ ಪೂರ್ವಧ್ಯಕ್ಷೆ ಗುಣರತ್ನ ಮಾಲಿನಿ ಸತೀಶ್ ಜೇಸಿಐ ಜ್ಯೂನಿಯರ್ ಜೇಸಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿಯ ನಿನಾದ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಜ್ಞಾನಗಂಗಾ ಕಾರ್ಯಕ್ರಮದ ಅಂಗವಾಗಿ ಶ್ರೀಮದ್ ಭಗವದ್ಗೀತಾ ಬೋಧನೆ ಕಾರ್ಯಕ್ರಮ ಗಂಗೊಳ್ಳಿಯ ಪೇಟೆ ಶ್ರೀ ವಿಠಲ ರಖುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ ಮಾತನಾಡಿದ ಧಾರ್ಮಿಕ ಮುಖಂಡ ಮಂಗೇಶ ಶೆಣೈ ಅವರು ಭಗವದ್ಗೀತೆಯ ಪರಿಚಯ, ಶ್ಲೋಕಗಳ ಉಚ್ಛಾರ, ವ್ಯಾಕರಣ, ಪದಗಳ ಅರ್ಥ, ಭಾವಾರ್ಥ ಮುಂತಾದವುಗಳನ್ನು ತಿಳಿಸಿದರು. ಭಗವದ್ಗೀತೆಯ ಪ್ರಥಮ ಎರಡು ಅಧ್ಯಾಯಗಳನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ವಿವರಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ನಿನಾದ ಸಂಸ್ಥೆಯ ಅಧ್ಯಕ್ಷ ಎಂ.ಮುಕುಂದ ಪೈ ಅವರು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಸಂಸ್ಮರಣೆ ಹಾಗೂ ಗುರುವಂದನ ಕಾರ್ಯಕ್ರಮದ ಭಾಗವಾಗಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಮುಂದಿನ ಒಂದು ವರ್ಷ ಪರ್ಯಂತ ಭಗವದ್ಗೀತೆಯ ಬೋಧನೆ ಹಾಗೂ ಮಕ್ಕಳಿಗೆ ಧಾರ್ಮಿಕ, ಬೌದ್ಧಿಕ ವ್ಯಕ್ತಿತ್ವ ವಿಕಸನದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.  ಸುದರ್ಶನ ಆಚಾರ್ಯ, ಬಿ.ಪ್ರಕಾಶ ಪಡಿಯಾರ್, ನಿನಾದ ಸಂಸ್ಥೆಯ ಪದಾಧಿಕಾರಿಗಳು, ಸಮಾಜ ಬಾಂಧವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ನೂತನವಾಗಿ ಯುವ ಘಟಕ ರಚಿಸಲಾಗಿದ್ದು ರಾಜ್ಯ ಯುವ ಘಟಕದ ಉಪಾಧ್ಯಕ್ಷರನ್ನಾಗಿ ಕುಂದಾಪುರ ಕೋಟೇಶ್ವರ ಹಳೆಅಳಿವೆಯ ಮಹೇಶ್ ಕುಮಾರ್ ಪೂಜಾರಿ ಅವರನ್ನು ರಾಯಣ್ಣ ಬ್ರಿಗೇಡ್ ರಾಜ್ಯಾಧ್ಯಕ್ಷ ಕೆ. ವಿರುಪಾಕ್ಷ ನೇಮಿಸಿದ್ದಾರೆ. ಮಹೇಶ್ ಪೂಜಾರಿ ಅವರು ಸದ್ಯ ಬಿಜೆಪಿ ಯುವಮೋರ್ಚಾದ ರಾಜ್ಯ ಕಾರ‍್ಯಕಾರಿಣಿ ಸದಸ್ಯರಾಗಿದ್ದು ರೋಟರಿ ಸನ್ ರೈಸ್ ಕುಂದಾಪುರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಇತ್ತೀಚಿಗೆ ನೂತನವಾಗಿ ರಚನೆಯಾದ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಕೊಲ್ಲೂರು ರಮೇಶ ಗಾಣಿಗರನ್ನು ಅವರ ಕೊಲ್ಲೂರು ನಿವಾಸ ’ಸನ್ನಿಧಿ’ಯಲ್ಲಿ ಗಂಗೊಳ್ಳಿ ಉದ್ಯಮಿ ಜಿ. ಡಿ. ಕೇಶವ ಶೇರುಗಾರ್ ಗೌರವಿಸಿ ಸನ್ಮಾನಿಸಿದರು. ಕೊಲ್ಲೂರು ಶ್ರೀ ಮಹಾಲಕ್ಷ್ಮೀ ರೆಸಿಡೆನ್ಸಿ ಮಾಲಕ ವಿಕ್ರಮ್ ಶೇರುಗಾರ್ ಇದ್ದರು. ಬಹುಮುಖ ವ್ಯಕ್ತಿತ್ವದ ರಮೇಶ ಗಾಣಿಗ ಇವರು ಪ್ರಮುಖವಾಗಿ ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಈ ಭಾಗದಲ್ಲಿ ಜನಪ್ರೀಯತೆ ಗಳಿಸಿದ್ದಾರೆ. ತಾಲೂಕು ಪಂಚಾಯತ್ ಸದಸ್ಯರಾಗಿ ಕೊಲ್ಲೂರು ಗ್ರಾಮದ ಅಭಿವೃದ್ದಿಗೆ ಅನುದಾನ ಒದಗಿಸುವ ಮೂಲಕ ಮೂಲಸೌಕರ್ಯಕ್ಕೆ ಒತ್ತು ನೀಡಿದ್ದಾರೆ. ಕುಂದಾಪುರ ತಾಲೂಕು ಗಾಣಿಗರ ಸೇವಾ ಸಮಿತಿ ಅಧ್ಯಕ್ಷರಾಗಿ ಸಮುದಾಯದ ಪ್ರಗತಿಗೆ ದುಡಿದಿದ್ದಾರೆ. ತಾಲೂಕು ಅರಣ್ಯ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿಷ್ಠಿತ ಕೊಲ್ಲೂರು ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘದ ನಾಮ ನಿರ್ದೇಶಿತ ಸದಸ್ಯರಾಗಿದ್ದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಂಯೋಗದಲ್ಲಿ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರದ ಆಶ್ರಯದಲ್ಲಿ ಪುರುಷರ ನೆಟ್‌ಬಾಲ್ ಉಚಿತ ಬೇಸಿಗೆ ಕ್ರೀಡಾ ತರಬೇತಿ ಶಿಬಿರವನ್ನು ಎಪ್ರಿಲ್ ಉದ್ಘಾಟಿಸಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಟಿ.ಎನ್., ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ರಾಜೇಶ್ ಶೆಟ್ಟಿ ವಕ್ವಾಡಿ, ಅರ್ಥಸಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುಧಾಕರ್ ಪಾರಂಪಳ್ಳಿಯವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಕುಂದಾಪುರ ತಾಲೂಕಿನ ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೆ ಒಟ್ಟು 513.33 ಲಕ್ಷ ಅನುದಾನ ದೊರೆತಿದ್ದು, ಮೊದಲ ಹಂತದಲ್ಲಿ 2 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ಬೈಂದೂರು ಸೋಮೇಶ್ವರ, ತ್ರಾಸಿ ಮರವಂತೆ ಬೀಚ್ ಅಭಿವೃದ್ಧಿ ನಡೆಯಲಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ತಿಳಿದ್ದಾರೆ. ಅವರು ಬೈಂದೂರು ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾಹಿತಿ ನೀಡಿದರು. ಬೈಂದೂರು ಒತ್ತಿನಣೆ ಸೋಮೇಶ್ವರ ಅಭಿವೃದ್ಧಿಗೆ 243.85 ಲಕ್ಷ, ಮರವಂತೆ ಬೀಚ್ ಅಭಿವೃದ್ಧಿಗೆ 136.18 ಲಕ್ಷ, ತ್ರಾಸಿ ಬೀಚ್ ಅಭಿವೃದ್ಧಿಗೆ 133.57 ಲಕ್ಷ ಹಣ ಬಿಡುಗಡೆಗೊಡಿದೆ ಎಂದರು. ಈ ಸಂದರ್ಭ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಅನಿತಾ ಬಿ. ಆರ್, ಇಂಜಿನಿಯರ್ ಗಂಗಾಧರ್, ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ಮೂಕಾಂಬಿಕಾ ರೈಲ್ವೆ ಯಾತ್ರಿಕರ ಸಂಘದ ಅಧ್ಯಕ್ಷ ವೆಂಕಟೇಶ ಕಿಣಿ, ಪಡುವರಿ ಗ್ರಾಪಂ ಸದಸ್ಯ ಮಾಣಿಕ್ಯ ಹೋಬಳಿದಾರ್, ಎಪಿಎಂಸಿ ಸದಸ್ಯ ಸುರೇಶ್ ಹೋಬಳಿದಾರ್,  ಕಾಂಗ್ರೆಸ್ ಪಕ್ಷದ ಪ್ರಮುಖರಾದ ನಾಗರಾಜ ಗಾಣಿಗ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ:  ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರವಾದ ಕೊಲ್ಲೂರಿಗೆ ಬೆಂಗಳೂರಿನಿಂದ ಕೆಎಸ್‌ಆರ್‌ಟಿಸಿಯು ವೋಲ್ವೊ ಬಸ್‌ ಸೇವೆಯನ್ನು ಆರಂಭಿಸಿದೆ. ಪ್ರತಿದಿನ ಬೆಂಗಳೂರಿನಿಂದ ಶಿವಮೊಗ್ಗ, ಹೊಸನಗರ ಮಾರ್ಗವಾಗಿ ರಾಜಹಂಸ ಬಸ್‌ ಓಡಿಸಲಾಗುತ್ತಿದೆ. ಇದಲ್ಲದೇ ಮೂರ್ನಾಲ್ಕು ಕರ್ನಾಟಕ ಸಾರಿಗೆ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಹವಾನಿಯಂತ್ರಿತ ರಹಿತ ಸ್ಲೀಪರ್‌ ಬಸ್‌ಗೆ ಬೇಡಿಕೆ ಇಲ್ಲದ ಕಾರಣ, ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರಿನಿಂದ ಕೊಲ್ಲೂರಿಗೆ ಇದೇ ಮೊದಲ ಬಾರಿಗೆ ಕಾರ್ಯಾಚರಣೆಗೊಳಿಸುತ್ತಿರುವ ವೋಲ್ವೊ ಬಸ್‌ ಧರ್ಮಸ್ಥಳ, ಮೂಡಬಿದರೆ, ಕಾರ್ಕಳ, ಹೆಬ್ರಿ, ಹಾಲಾಡಿ ಮಾರ್ಗವಾಗಿ ಸಂಚರಿಸಲಿದೆ. ಬೆಂಗಳೂರಿನಿಂದ ರಾತ್ರಿ 11ಕ್ಕೆ ಹೊರಡುವ ಬಸ್‌ ಮರುದಿನ ಬೆಳಗ್ಗೆ 9.15ಕ್ಕೆ ಕೊಲ್ಲೂರು ತಲುಪಲಿದೆ. ಹಾಗೆಯೇ, ಅಲ್ಲಿಂದ ರಾತ್ರಿ 7.45ಕ್ಕೆ ಹೊರಟು ಮುಂಜಾನೆ 5.30ಕ್ಕೆ ಬೆಂಗಳೂರಿಗೆ ಬರಲಿದೆ. ಪ್ರಯಾಣ ದರವು 850 ರೂ. ಎಂದು ನಿಗದಿಪಡಿಸಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗುರು ಫ್ರೆಂಡ್ಸ್ ರಿ. ಮಯ್ಯಾಡಿ ಸಂಸ್ಥೆಯ ಆಶ್ರಯದಲ್ಲಿ 12ನೇ ಬಾರಿಗೆ ಹೊನಲು ಬೆಳಕಿನ ಪುರುಷರ ಹಾಗೂ ಮಹಿಳೆಯರ ಪ್ರೋ ಮಾದರಿಯ ಅಂತರ್ ಜಿಲ್ಲಾ ಮಟ್ಟದ ಕಬ್ಬಡ್ಡಿ ಪಂದ್ಯಾಟ ’ಸುರ್‌ಗುದ್ದ್ 2017’ ಎಪ್ರಿಲ್ 22ರ ಶನಿವಾರ ಸಂಜೆ ಮಯ್ಯಾಡಿ ಮಹಾಸತಿ ವಠಾರದಲ್ಲಿ ಜರುಗಲಿದೆ. ತಿರುಮಲ ಟ್ರೋಫಿ: ಗುರು ಫ್ರೆಂಡ್ಸ್ ಆಶ್ರಯದಲ್ಲಿ ಜರುಗುವ ಸುರ್‌ಗುದ್ದ್ 2017 – ತಿರುಮಲ ಟ್ರೋಫಿ ವಿಜೇತರಿಗೆ ಭಾರಿ ಬಹುಮಾನ ಕಾದಿದೆ. ಮ್ಯಾಟ್ ಪಿಚ್‌ನಲ್ಲಿ ಜರುಗಲಿರುವ ಪುರುಷ ಹಾಗೂ ಮಹಿಳೆಯರ ಪ್ರತ್ಯೇಕ ತಂಡದ ಕಬ್ಬಡ್ಡಿ ಪಂದ್ಯಾಟದಲ್ಲಿ ವಿಶೇಷ ಆಕರ್ಷಣೆಗಳಿವೆ. ಪುರುಷರ ವಿಭಾಗದಲ್ಲಿ ಪ್ರಥಮ 25,001 ಹಾಗೂ 5 ಅಡಿ ಎತ್ತರದ ಶಾಶ್ವತ ಫಲಕ, ದ್ವೀತಿಯ 15,001 ಹಾಗೂ 4 ಅಡಿ ಎತ್ತರದ ಶಾಶ್ವತ ಫಲಕ, ತೃತೀಯ 8,001 ಹಾಗೂ 3 ಅಡಿ ಎತ್ತರದ ಶಾಶ್ವತ ಫಲಕ ಬಹುಮಾನ ಹಾಗೂ ಎಲ್ಲರಿಗೂ, ಅತಿ ಶಿಸ್ತಿನ ತಂಡ, ಉತ್ತಮ ಹಿಡಿತಗಾರ, ದಾಳಿಗಾರ, ಸವ್ಯಸಾಚಿ ತಂಡ ಸೇರಿದಂತೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ಬೊಬ್ಬರ್ಯ ಮತ್ತು ಶ್ರೀ ನಾಗದೇವರ ದೇವಸ್ಥಾನ, ಹಟ್ಟಿಕುದ್ರು ಇದರ ೧೧ನೇ ವರ್ಷದ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಉತ್ಸವವು ಸಕಲ ಧಾರ್ಮಿಕ ವಿಧಿವಿದಾನಗಳೋಂದಿಗೆ ಸಂಭ್ರಮ ಸಡಗರದಲ್ಲಿ ಜರುಗಿತು. ಶ್ರೀ ನಾಗ ದೇವರ ಸಂದರ್ಶನ ಸೇವೆ, ಶ್ರೀ ಬೊಬ್ಬರ್ಯ ದೇವರ ಸನ್ನಿಧಿಯಲ್ಲಿ ಮಹಾಪೂಜೆ, ಅನ್ನಸಂತರ್ಪಣೆಯಲ್ಲಿ ಭಕ್ತರು ಪಾಲ್ಗೊಂಡು ವರ್ಷಂಪ್ರತಿಯಂತೆ ಸೇವೆ ಸಲ್ಲಿಸಿದರು. ಸನ್ಮಾನ : ದೇವಳದ ಪ್ರತಿಷ್ಠಾ ವರ್ಧಂತಿಯ ಅಂಗವಾಗಿ ನಡೆದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಯಕ್ಷವೇದಿಕೆಯಲ್ಲಿ ಯಕ್ಷ ಧ್ರುವ ಬಿರುದಾಂಕಿತ ಖ್ಯಾತ ಯಕ್ಷಗಾನ ಭಾಗವತ ಸತೀಶ್ ಶೆಟ್ಟಿ ಪಟ್ಲ ಅವರನ್ನು ಬಸ್ರೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಿ. ಅಪ್ಪಣ್ಣ ಹೆಗ್ಡೆಯವರು ದೇವಳ ಹಾಗೂ ಹಟ್ಟಿಕುದ್ರು ಊರಿನ ಹತ್ತು ಸಮಸ್ತರ ವತಿಯಿಂದ ಸನ್ಮಾನಿಸಿದರು. ಸನ್ಮಾನವನ್ನು ನೆರವೇರಿಸಿದ ಅಪ್ಪಣ್ಣ ಹೆಗ್ಡೆಯವರು ಮಾತನಾಡಿ ಹಟ್ಟಿಕುದ್ರುವಿನ ಶ್ರೀ ಬೊಬ್ಬರ್ಯ ಮತ್ತು ಶ್ರೀ ನಾಗದೇವರ ದೇವಸ್ಥಾನದಲ್ಲಿ ಯಕ್ಷರಂಗದಲ್ಲಿ ಅಪ್ರತಿಮ ಸಾಧನೆ ಮಾಡಿರುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಮೇಲ್‌ಗಂಗೊಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಲದ ೩೦ನೇ ವಾರ್ಷಿಕೋತ್ಸವ ಮತ್ತು ಅಮೃತ ಯುವತಿ ಮಂಡಲ ಹಾಗೂ ಅರ್ಚನಾ ಮಹಿಳಾ ಮಂಡಲ ಮೇಲ್‌ಗಂಗೊಳ್ಳಿ ಇವುಗಳ ೨೪ನೇ ವಾರ್ಷಿಕೋತ್ಸವ, ಡಾ.ಬಿ.ಆರ್.ಅಂಬೇಡ್ಕರ್‌ರವರ ೧೨೬ನೇ ಜನ್ಮದಿನಾಚರಣೆ ಕಾರ್ಯಕ್ರಮ ಮೇಲ್‌ಗಂಗೊಳ್ಳಿಯ ಪೋರ್ಟ್ ಬಂಗ್ಲೆ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ಮಾತನಾಡಿ ,ಯುವಕ ಮಂಡಲವು ೩೦ ವರ್ಷಗಳಲ್ಲಿ ಸಾಧಿಸಿದ ಸಾಧನೆ ಅಪಾರವಾದುದು. ಈ ಭಾಗದ ಜನರಿಗೆ ಸಾಕಷ್ಟು ಸವಲತ್ತು ಒದಗಿಸುವಲ್ಲಿ ಶ್ರಮಿಸಿದ್ದಾರೆ ಎಂದರು. ಜಿಪಂ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಗ್ರಾಪಂ ಸದಸ್ಯೆ ಚಂದು ಶುಭ ಹಾರೈಸಿದರು. ಗಂಗೊಳ್ಳಿಯ ಮತ್ಸ್ಯೋದ್ಯಮಿ ಸಂದೇಶ ಬಹುಮಾನ ವಿತರಿಸಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ.ಮಾಧವ ಧ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿರುವ ಶಾಸಕ ಕೆ.ಗೋಪಾಲ ಪೂಜಾರಿ,…

Read More