ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯೋಗವು ಬ್ರಹ್ಮಾಂಡ ಮೂಲದಿಂದ ನಮಗೆ ಶಕ್ತಿಯನ್ನು ಒದಗಿಸುವುದರಿಂದ ಯೋಗಾಭ್ಯಾಸವು ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಸ್ತರಗಳಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿ ಯೋಗಾಭ್ಯಾಸಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ, ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳ ಹೇಳಿದರು. ಉಪ್ಪುಂದದ ಶ್ರೀಗುರು ವಿವೇಕ ಯೋಗ ಸಂಘ, ಸುವಿಚಾರ ಬಳಗ, ಜೇಸಿಐ ಘಟಕ, ಟೆಂಪೋ, ಟ್ಯಾಕ್ಸಿ, ರಿಕ್ಷಾ ಚಾಲಕ-ಮಾಲಕರ ಸಂಘ ಶಾಲೆಬಾಗಿಲು ಮತ್ತು ಸೇವಾಸಂಗಮ ಶಿಶುಮಂದಿರ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಶಂಕರ ಕಲಾಮಂದಿರದ ಸಮೃದ್ಧ ಸಭಾಭವನದಲ್ಲಿ ವಿಶ್ವಯೋಗ ದಿನವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯನ ಸುಖ-ದುಖಃಗಳಗೆ ಮನಸ್ಸೇ ಮೂಲ ಕಾರಣ. ಅಂತಹ ಮನಸ್ಸನ್ನು ಸರಿಪಡಿಸುವ ಕಾರ್ಯ ಯೋಗದಿಂದ ಸಾಧ್ಯವಾಗುತ್ತದೆ. ಯೋಗದಿಂದ ಚಿತ್ತಶುದ್ಧಿಯಾಗಿ ಒಳ್ಳೆಯ ಭಾವನೆಗಳು ಮೂಡುತ್ತದೆ. ಯೋಗದಿಂದ ತಕ್ಷಣ ಸಿಗುವ ಲಾಭ-ನಷ್ಟಕ್ಕಿಂತ ದೀರ್ಘಕಾಲದ ಉಪಯೋಗಗಳ ಬಗ್ಗೆ ದೃಷ್ಠೀಕರಿಸಬೇಕು ಎಂದು ಸಲಹೆ ನೀಡಿದರು. ಯೋಗಶಿಕ್ಷಣವು ವಿಶ್ವದಾದ್ಯಂತ ಯುವಜನರನ್ನು ಆಕರ್ಷಿಸುತ್ತಿರುವುದು ಒಳ್ಳೆಯ ವಿಚಾರ.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ತಾಲೂಕಿನ ತ್ರಾಸಿ ಮೊವಾಡಿ ಕ್ರಾಸ್ ಬಳಿ ಭೀಕರ ಅಪಘಾತ ಘಟಿಸಿ ಒಂದು ವರ್ಷ ಸಂದಿದೆ. ಸುರಿಯುತ್ತಿದ್ದ ಮಳೆಯಲ್ಲಿ ಯಮರೂಪಿಯಾಗಿ ಬಂದ ಬಸ್ಸಿಗೆ ಎಂಟು ಶಾಲಾ ಮಕ್ಕಳು ಬಲಿಯಾಗಿ ಕನಸುಗಳೊಂದಿಗೆ ಕಮರಿಹೋಗಿದ್ದರು. ಹೆಮ್ಮಾಡಿ ಕಡೆಯಿಂದ ಮಕ್ಕಳನ್ನು ಹತ್ತಿಸಿಕೊಂಡು ಬಂದ ಓಮ್ನಿ ಮೋವಾಡಿ ಕ್ರಾಸ್‌ನ ಡಾನ್ ಬಾಸ್ಕೋ ಶಾಲೆಗೆ ತಿರುಗುತ್ತಿದ್ದ ಸಂದರ್ಭ ಗಂಗೊಳ್ಳಿ ಕಡೆಯಿಂದ ಬಂದ ಬಸ್ಸು ಡಿಕ್ಕಿ ಹೊಡೆದಿತ್ತು. ಅಪಘಾತದ ಗಂಭೀರತೆಗೆ ಎರಡು ಮಕ್ಕಳು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಆರು ಮಕ್ಕಳು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಇತರರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಎಳೆಯ ಕಂದಮ್ಮಗಳಿಗಾಗಿ ನಾಡು ಮಮ್ಮಲ ಮರುಗಿತ್ತು. ಶಾಲಾ ವಾಹನಗಳ ಸುರಕ್ಷತೆಯ ಬಗ್ಗೆ ದೊಡ್ಡ ಚರ್ಚೆ ನಡೆದಿತ್ತು. ಮಕ್ಕಳನ್ನು ಕಳೆದಕೊಂಡ ಕುಟುಂಬ ಮಾತ್ರ ಇನ್ನು ಆ ಆಘಾತದಿಂದ ಹೊರಗೆ ಬಂದಿಲ್ಲ. ಆದರೆ ಅಪಘಾತದ ಸಮಯದಲ್ಲಿ ಅನುಸರಿಸಲಾದ ಸುರಕ್ಷಾ ಕ್ರಮಗಳು ಕೆಲವು ತಿಂಗಳಿಗಷ್ಟೇ ಸೀಮಿತವಾಗಿ ಮತ್ತ ಯಥಾ ಸ್ಥಿತಿಗೆ ತಲುಪಿರುವುದು ಮಾತ್ರ ದುರಂತ. ಆಘಾತದಿಂದ ಹೊರಬಂದಿಲ್ಲ ಕುಟುಂಬ: ಮೃತ ಮಕ್ಕಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಒತ್ತಿನಣೆಯಲ್ಲಿ ನಡೆದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಪಡುವರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಸ್ತಿಕಟ್ಟೆಯ ಮನೆಯೊಂದಕ್ಕೆ ಜೇಡಿ ಮಣ್ಣು ನುಗ್ಗಿ ವಾಸಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಊಟ ಹಾಗೂ ವಸತಿಯಿಲ್ಲದೇ ಅಂತಂತ್ರರಾಗಿರು ಬಡ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿ, ಸಮಸ್ಯೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಬೈಂದೂರು ವಲಯ ಗಾಣಿಗ ಯುವ ಸಂಘಟನೆಯ ಅಧ್ಯಕ್ಷ ಶ್ರೀಗಣೇಶ್ ಗಾಣಿಗ ಉಪ್ಪುಂದ ಹೇಳಿದರು. ಅವರು ಒತ್ತಿನಣೆಯಲ್ಲಿ ನಡೆದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮನೆಯೊಳಕ್ಕೆ ಜೇಡಿಮಣ್ಣು ನುಗ್ಗಿ ಅಂತಂತ್ರರಾಗಿರುವ ಪಾರ್ವತಿ ಶೇಖರ ಶೆಟ್ಟಿ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಬೈಂದೂರು ವಿಶೇಷ ತಹಶೀಲ್ದಾರರ ಕಛೇರಿ ಎದುರು ನಡೆದ ಸಭೆಯಲ್ಲಿ ಆಗ್ರಹಿಸಿದರು. ಮಳೆಯಿಂದಾಗಿ ಮಣ್ಣು ಮನೆಯೊಳಕ್ಕೆ ಬಂದು ಕುಳಿತಿದ್ದು ಸುಮಾರು ಐದು ಅಡಿಯಷ್ಟು ಮಣ್ಣು ನಿಂತು ವಾಸಿಸಲಾರದ ಸ್ಥಿತಿ ಬಂದೊದಗಿದೆ. ಆಹಾರ ಸಾಮಾಗ್ರಿಗಳು, ಬಟ್ಟೆ, ಮಕ್ಕಳ ಪುಸ್ತಕವೆಲ್ಲ ಕೆಸರು ಮಣ್ಣಿನಲ್ಲಿ ಮುಳುಗಿ ಹೋಗಿದೆ. ಮಳೆಗಾಲದಲ್ಲಿ ಅವರ ಬದುಕು ಕಷ್ಟದಲ್ಲಿದೆ. ಕೂಡಲೇ ಈ ಅವ್ಯವಸ್ಥೆಗೆ ಕಾರಣವಾದ ಕಂಪೆನಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅಲ್ಪಸಂಖ್ಯಾತರನ್ನು ಓಲೈಸುವ ಕಾರಣಕ್ಕೆ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸುವಂತೆ ಹೇಳಿರುವ ಸಚಿವ ರಮಾನಾಥ ರೈ ತುಷ್ಠೀಕರಣದ ರಾಜಕಾರಣ ಮಾಡಿದ್ದಾರೆ. ಹಿಂದೂಗಳು ಬಹಳ ಗೌರವದಿಂದ ಕಾಣುವ ಪ್ರಭಾಕರ ಭಟ್ ಅವರ ಹೆಸರನ್ನು ಗಲಭೆಯೊಂದಿಗೆ ತಳುಕು ಹಾಕಿ ಬಂಧಿಸುವಂತೆ ಒತ್ತಡ ಹೇರಿ ಅಧಿಕಾರ ದುರುಪಯೋಗ ಪಡೆಸಿಕೊಂಡಿದ್ದಾರೆ. ಇಂತವರು ಆಡಳಿತ ಯಂತ್ರದಲ್ಲಿ ಇರುವುದು ಸರಿಯಲ್ಲ. ತಕ್ಷಣವೇ ರಾಜಿನಾಮೆ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಕೆ. ಬಾಬು ಶೆಟ್ಟಿ ಆಗ್ರಹಿಸಿದರು. ಬೈಂದೂರು ಪೇಟೆಯಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿದ ಸಚಿವ ರಮಾನಾಥ ರೈ ವಿರುದ್ಧ ನಡೆದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಮಾತನಾಡಿ ಪ್ರಭಾಕರ ಭಟ್ ಅವರ ಮೇಲೆ ಕೇಸ್ ಹಾಕಬೇಕು ಎಂಬ ರಮಾನಾಥ ರೈ ಅವರು ಕಲ್ಲಡ್ಕದ ಪೇಟೆಯಲ್ಲಿ…
ಕುಂದಾಪ್ರ ಡಾಟ್ ಕಾಂ ವರದಿ. ಆಧುನಿಕ ಬದುಕಿನ ನಡುವೆ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಜನರು ಕೃಷಿಯಿಂದ ವಿಮುಖರಾಗುತ್ತಿರುವ ಕಾಲಘಟ್ಟದಲ್ಲಿ ಭತ್ತದ ಕೃಷಿಯನ್ನು ಕಡಿಮೆ ಪರಿಶ್ರಮ, ಕಡಿಮೆ ಗೊಬ್ಬರ, ಕಡಿಮೆ ಬಿತ್ತನೆ ಬೀಜ, ಕಡಿಮೆ ಕೆಲಸಗಾರರನ್ನು ಬಳಸಿಕೊಂಡು ಹೆಚ್ಚು ಲಾಭದಾಯಕ ಕೃಷಿಯನ್ನಾಗಿ ಪರಿವರ್ತಿಸಿಕೊಳ್ಳಬೇಕೆಂಬ ಕೋಟೇಶ್ವರದ ಕೈಗಾರಿಕೊದ್ಯಮಿಯೊಬ್ಬರ ಅಧ್ಯಯನ ಹಾಗೂ ಚಿಂತನೆ, ಈಗ ಪ್ರಾಯೋಗಿಕ ರೂಪು ಪಡೆದಿದ್ದು ನೂತನ ವಿಧಾನದ ಮೂಲಕ ಕೃಷಿ ಕ್ಷೇತ್ರದಲ್ಲಿ ಹೊಸತನದ ಪ್ರಯೋಗಕ್ಕೆ ಮುಂದಾಗಿದ್ದಾರೆ. ಕೋಟೇಶ್ವರದ ಸುರೇಶ್ ಕಾಮತ್ ಎಂಬವವರು ಯಶಸ್ವಿ ಕೈಗಾರಿಕೋದ್ಯಮಿ. ತಮ್ಮ ರಾಜಾರಾಮ್ ಪಾಲಿಮರ‍್ಸ್ ಸಂಸ್ಥೆಯ ಮೂಲಕ ಭಾರತದಲ್ಲಿ ಪ್ರಥಮ ಬಾರಿಗೆ ಕೇವಲ ನೀರು ಸಂಗ್ರಹಿಸಿಡುವ ಟ್ಯಾಂಕ್‌ಗಳನ್ನು ಬಹುಉಪಯೋಗಿ ಟ್ಯಾಂಕ್‌ಗಳನ್ನಾಗಿ ನಿರ್ಮಿಸಿ ಜನ ಮನ್ನಣೆಗೆ ಪಾತ್ರರಾದವರು. ಇಂತಹ ಪ್ರಯೋಗಗಳಿಗೆ ಅವರು ತೆರೆದುಕೊಂಡ ಇನ್ನೊಂದು ಕ್ಷೇತ್ರವಿದೆ. ಅದುವೇ ಕೃಷಿ ಕ್ಷೇತ್ರ. ಕಳೆದೆರಡು ವರ್ಷಗಳಿಂದ ನಾಟಿ ಯಂತ್ರವನ್ನು ಉಪಯೋಗಿಸಿ ಮ್ಯಾಟ್ ಪದ್ದತಿ ಹಾಗೂ ದೇಶಿ ದನಗಳ ಸಗಣಿ ಹಾಗೂ ಗೋಮೂತ್ರವನ್ನು ಉಪಯೋಗಿಸಿ ಸುಭಾಷ ಪಾಲೇಕರ್ ಅವರ ಶೂನ್ಯ ಭಂಡವಾಳ ಕ್ರಮದಂತೆ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ/ಬೈಂದೂರು: ಮನೆಯಲ್ಲಿ ಹಾವು ಕಚ್ಚಿದ್ದ ಮಹಿಳೆಗೆ ಸೂಕ್ತ ಚಿಕಿತ್ಸೆ ದೊರೆಯದೇ ಮೃತಪಟ್ಟ ಘಟನೆ ವರದಿಯಾಗಿದ್ದು, ಮಹಿಳೆಯ ಸಾವಿಗೆ ಸರಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಕುಟುಂಬಿಕರು ಆರೋಪಿಸಿದ್ದಾರೆ. ಬೈಂದೂರು ಯೋಜನಾನಗರ ನಿವಾಸಿ ಗಜಾನನ ಪೂಜಾರಿ ಎಂಬುವವರ ಪತ್ನಿ ವಿಶಾಲಾಕ್ಷಿ (35 ಎಂಬುವವರು ಮೃತ ದುರ್ದೈವಿ. ಯೋಜನಾನಗರದ ವೀಶಾಲಾಕ್ಷಿ ಎಂಬುವವರು ಮಧ್ಯಾಹ್ನ ಅಡುಗೆ ಮಾಡುತ್ತಿದ್ದ ವೇಳೆ ಮನೆಯಲ್ಲಿ ಹಾವು ಕಚ್ಚಿದ್ದರಿಂದ ಅವರನ್ನು ಕೂಡಲೇ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಹಾವು ಕಚ್ಚಿರುವುದಕ್ಕೆ ಚಿಕಿತ್ಸೆ ಲಭ್ಯವಿಲ್ಲದ ಕಾರಣ ಕೂಡಲೇ ಕುಂದಾಪುರದ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ಆಸ್ಪತ್ರೆಯಲ್ಲಿ ಮಹಿಳೆಯ ರಕ್ತ ಪರೀಕ್ಷೆಗಾಗಿ ಸ್ಪಲ್ವ ಕಾಯುವಂತೆ ಸೂಚಿಸಿದ್ದರು. ಆದರೆ ಆತಂಕಗೊಂಡಿದ್ದ ಮನೆಯವರು ಬೇರೆಡೆಗೆ ಚಿಕಿತ್ಸೆಗೆ ಕರೆದೊಯ್ದಿದ್ದರು. ಅಲ್ಲಿಯೂ ಸರಿಯಾದ ಚಿಕಿತ್ಸೆ ಸ್ಪಂದನೆ ದೊರೆಯದೇ ಮತ್ತೆ ಸರಕಾರಿ ಆಸ್ಪತ್ರೆಗೆ ಮರಳಿ ಬರುವ ವೇಳೆಗಾಗಲೇ ವಿಷವೇರಿ ಮಹಿಳೆ ಮೃತಪಟ್ಟಿದ್ದರು. ವೈದ್ಯರ ನಿರ್ಲಕ್ಷ್ಯ ಆರೋಪ: ಮಹಿಳೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಲ್ಲಡ್ಕದಲ್ಲಿ ನಡೆದ ಘಟನೆ ವ್ಯಕ್ತಿಗತ ಘಟನೆಯಾಗಿದ್ದು ಈ ಘಟನೆಯನ್ನು ಚೆನ್ನಾಗಿ ಸದುಪಯೋಗಪಡಿಸಿಕೊಂಡು ಮುಂಬರುವ ಚುನಾವಣೆಯಲ್ಲಿ ಮತಬ್ಯಾಂಕ್ ಭದ್ರ ಮಾಡಿಕೊಳ್ಳಲು ಕೋಮು ಬಣ್ಣ ಹಚ್ಚಿ ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನಗಳನ್ನು ಕಾಂಗ್ರೇಸ್ ಮಾಡುತ್ತಿದೆ ಎಂದು ಆರೆಸ್ಸಸ್ ವಿಭಾಗೀಯ ಕಾರ್ಯಕಾರಣಿ ಸಮಿತಿ ಸದಸ್ಯ ಸುಬ್ರಹ್ಮಣ್ಯ ಹೊಳ್ಳ ಹೇಳಿದರು. ಅವರು ಅರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರ ಮೇಲೆ ಕೇಸು ದಾಖಲಿಸುವಂತೆ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿದ ಸಚಿವ ರಮಾನಾಥ ರೈ ವಿರುದ್ದ ಸೋಮವಾರ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕುಂದಾಪುರ ಘಟಕದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಯಾವುದೇ ಕೊಲೆಗೆ ಪ್ರಯತ್ನವನ್ನು ಮಾಡದ ಕಲ್ಲಡ್ಕ ಪ್ರಭಾಕರ ಭಟ್ಟರ ಮೇಲೆ 307 ಪ್ರಕರಣ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ತರಿಸಿರುವ ಸಚಿವ ರಮಾನಾಥ ರೈ ಅವರಿಗೆ ಕಲ್ಲಡ್ಕ ಅವರ ಬಂಧನವಲ್ಲ ಅವರ ಕನಿಷ್ಠ ಕೂದಲು ಮುಟ್ಟಲು ಸಾಧ್ಯವಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು. ಈ…
ಮಂಜುನಾಥ ಹಿಲಿಯಾಣ | ಕುಂದಾಪ್ರ ಡಾಟ್ ಕಾಂ ಲೇಖನ | ಜಕಣಿ(ಜಕ್ಣಿ) ಕುಂದಾಪುರ ನೆಲದ ಕೃಷಿ ಸಂಸ್ಕೃತಿಯೊಂದಿಗೆ ಹುಟ್ಟಿ ಬೆಳೆದಿರುವ ವಿಶಿಷ್ಟ-ವಿಭಿನ್ನ ಆಚರಣೆ. ಪ್ರತಿ ವರ್ಷ ಬೆಸಿಗೆಯ ವೃಷಭ ಸಂಕ್ರಮಣದಿಂದ ಮಿಥುನ ಸಂಕ್ರಮಣದವರೆಗೆ ನೆಡೆಯುವ ಗ್ರಾಮ್ಯ ಬದುಕಿನ ಈ ಆಚರಣೆ ಬಹುನಂಬಿಕೆಯ ಬಹು ಆಯಾಮವುಳ್ಳ ಅಪ್ಪಟ ಜನಪದೀಯ ಆಚರಣೆ. ಸ್ವಲ್ಪ ಮಟ್ಟಿಗೆ ವಿಕ್ಷಿಪ್ರತೆ-ವಿಭಿನ್ನತೆಯ ಆಯಾಮವುಳ್ಳ ಈ ಜಕಣಿ ಆಚರಣೆ ತುಳುನಾಡಿನ ಮೂಲ ಜನರ ಬದುಕಿನೊಂದಿಗೆ ಹುಟ್ಟಿಕೊಂಡ ಅತೀ ಪುರಾತನ ಆಚರಣೆಯೂ ಆಗಿದೆ. ಕಾರ್ತೇಲ್ ತಿಂಗಳಿನ ಮೊದಲ ಮಳೆ ನೆಲವನ್ನು ತಾಕಿದ ಕೂಡಲೇ ಕುಂದನಾಡಿನ ಎಲ್ಲರ ಮನೆಗಳಲ್ಲಿ ಜಕಣಿಯ ಗೌಜಿ ಮೆಲ್ಲಗೆ ಆರಂಭಗೊಳ್ಳುತ್ತದೆ. ಇರಿಸಿದ ಶುಭ ಮೂಹೂರ್ತವೊಂದರಲ್ಲಿ ಕುಟುಂಬದ ಹಿರಿ ಮನೆಗಳಲ್ಲಿ ಕುಟುಂಬದ ಸದಸ್ಯರೆಲ್ಲ ಸೇರಿ ಆಚರಿಸುವ ಈ ಜಕಣಿ ಆಚರಣಾ ಪದ್ದತಿ ಮಾತ್ರ ತೀರಾ ವಿಭಿನ್ನ. ಅಷ್ಟೇ ಕೌತುಕಪೂರ್ಣವಾದದ್ದು. ಜಕಣಿ ವಿಧಿ-ವಿಧಾನಗಳ ಬಗ್ಗೆ: ಸಂಜೆಯ ಸೂರ್ಯ ಪಡುವಣದಲ್ಲಿ ಕಂತುವ ವೇಳೆಯಲ್ಲಿ ಪೂಜಾ ಸಾಮಾಗ್ರಿಗಳನ್ನು ತಲೆಯ ಮೇಲೆ ಹೊತ್ತು ಕುಟುಂಬದ ಹಿರಿ ತಲೆಗಳೆಲ್ಲ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾರ್ವಜನಿಕ ಗಣೇಶೋತ್ಸವ ಸಮಿತಿ ವಂಡ್ಸೆ ಇದರ ೧೫ನೇ ವರ್ಷದ ನೂತನ ಅಧ್ಯಕ್ಷರಾಗಿ ಮಹೇಶ ಗಾಣಿಗ ಅಬ್ಬಿ, ಕಾರ್ಯದರ್ಶಿಯಾಗಿ ಸೀತಾರಾಮ ಪೂಜಾರಿ ತೆಂಕೊಡಿಗೆ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ವಿಠಲ ಆಚಾರ್ಯ, ಉಪಾಧ್ಯಕ್ಷರಾಗಿ ಉದಯ ಕೆ.ನಾಯ್ಕ, ಶ್ರೀನಿವಾಸ ಪೂಜಾರಿ ಕಲ್ಮಾಡಿ, ಸಂದೇಶ ಶೆಟ್ಟಿ ಅಡಿಕೆಕೊಡ್ಲು, ವಿ.ಕೆ.ಶಿವರಾಮ ಶೆಟ್ಟಿ, ರುದ್ರಯ್ಯ ಆಚಾರ್ಯ, ಶಶಿಧರ ಶೆಟ್ಟಿ ಕೊರಾಡಿಮನೆ, ಜತೆ ಕಾರ್ಯದರ್ಶಿಯಾಗಿ ವಿಜಯ ಎಚ್.ಪೂಜಾರಿ ತೆಂಕೊಡಿಗೆ, ಖಜಾಂಚಿಯಾಗಿ ಗುಂಡು ಪೂಜಾರಿ ಹರಾವರಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಸಂತರಾಜ ಶೆಟ್ಟಿ, ಶರತ್ ಬಿಲ್ಲಾ, ಕ್ರೀಡಾಕಾರ್ಯದರ್ಶಿಯಾಗಿ ಹನೀಫ್ ಸಾಹೇಬ್ ವಂಡ್ಸೆ, ಅಬಿಜಿತ್ ಶಾರ್ಕೆ, ಲೆಕ್ಕ ಪರಿಶೋಧಕರು-ಉದಯಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಸಂಘಟನಾ ಕಾರ್ಯದರ್ಶಿಗಳಾಗಿ ಸಂಜೀವ ಪೂಜಾರಿ, ಸುಧಾಕರ ಪೂಜಾರಿ, ಎಲ್.ಎನ್.ಆಚಾರ್ ಆತ್ರಾಡಿ, ಶಂಕರ ಆಚಾರ್ಯ ವಂಡ್ಸೆ, ವಾಸು ಜಿ.ನಾಯ್ಕ, ಗಣೇಶ ದೇವಾಡಿಗ ಅಡಿಕೆಕೊಡ್ಲು, ಸತೀಶ ಚಂದನ್, ಗೌರವ ಸಲಹೆಗಾರರು- ಶಶಿಧರ್ ಶೆಟ್ಟಿ ಪಠೇಲರಮನೆ, ಗೋಪಾಲ ಶೆಟ್ಟಿ ಕೊಳ್ತಾ, ಗೋವರ್ಧನ್ ಜೋಗಿ, ಮಂಜುನಾಥ ಗಾಣಿಗ ಅಡಿಕೆಕೊಡ್ಲು, ರಾಜು ಸೀತಾ-ಗೀತಾ, ದಾಮೋದರ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ತೆಂಕುತಿಟ್ಟು ಮತ್ತು ಬಡಗುತಿಟ್ಟಿಗೆ ಸಂಬಂಧಿಸಿದಂತೆ ಆಳ್ವಾಸ್ ಯಕ್ಷಗಾನ ಡಿಪ್ಲೋಮ ಕೋರ್ಸ್‌ನ್ನು ಪ್ರಾರಂಭಿಸಲಿದೆ. ಸಂಪೂರ್ಣ ಎರಡು ವರ್ಷಗಳ ಉಚಿತ ಶಿಕ್ಷಣದ ಪೂರ್ಣಾವಧಿ ಡಿಪ್ಲೋಮ ಕೋರ್ಸ್ ಇದಾಗಿದ್ದು ಎಸ್.ಎಸ್.ಎಲ್.ಸಿ ಉತ್ತೀರ್ಣ ಅಥವಾ ಅನುತ್ತೀರ್ಣರಾದವರು ಅಥವಾ ೧೬ರಿಂದ೨೫ ವರ್ಷದೊಳಗಿನ ವಯೋಮಿತಿಯವರಿಗೆ ಅವಕಾಶ ಕಲ್ಪಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಯಕ್ಷಗಾನ ಡಿಪ್ಲೋಮ ಕೋರ್ಸ್‌ನ್ನು ಮಾಡುತ್ತಾ ಕಾಲೇಜು ಶಿಕ್ಷಣವನ್ನು ಪಡೆಯುವ ಹಂಬಲವಿದ್ದವರಿಗೆ ದೂರ ಶಿಕ್ಷಣದಡಿಯಲ್ಲಿ ಉಚಿತವಾಗಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಡಿಗ್ರಿ ಕೋರ್ಸ್‌ನ್ನು ಮಾಡುವ ಸದವಕಾಶವನ್ನು ತೆರೆದಿಟ್ಟಿದೆ. ಸಂಸ್ಥೆಯಿಂದ ಮಾಸಿಕ ವಿದ್ಯಾರ್ಥಿ ವೇತನವನ್ನು ಪಡೆಯುವುದರ ಜೊತೆಗೆ ತೆಂಕುತಿಟ್ಟು ಮತ್ತು ಬಡಗುತಿಟ್ಟನ್ನು ಪ್ರತ್ಯೇಕವಾಗಿ ಕಲಿಯುವ ಕೋರ್ಸ್ ಇದಾಗಿದೆ. ಪ್ರಸಕ್ತ ಯಕ್ಷಗಾನ ಡಿಪ್ಲೋಮ ಕೋರ್ಸ್‌ನಲ್ಲಿ ಯಕ್ಷಗಾನದ ಹಿಮ್ಮೇಳ-ಮುಮ್ಮೇಳಜ್ಞಾನ, ಯೋಗ-ಪ್ರಾಣಾಯಾಮ,ಪುರಾಣಜ್ಞಾನ ಪರಿಚಯ, ಪ್ರಾತ್ಯಕ್ಷಿಕೆಗಳು, ಕೋರಿಯೋಗ್ರಫಿಯ ಅಧ್ಯಯನ, ಯಕ್ಷಗಾನ ಛಂದಸ್ಸು ಸೇರಿದಂತೆ ಯಕ್ಷಗಾನಕ್ಕೆ ಪೂರಕವಾಗಿ ಕನ್ನಡ…
