Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ತೆಕ್ಕಟ್ಟೆ : ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ ಸಮೀಪ ಆ್ಯಂಬುಲೆನ್ಸ್‌ ಢಿಕ್ಕಿಯಾಗಿ ಪಾಏಚಾರಿ ಸಾವಿಗೀಡಾದ ಘಟನೆ ಶನಿವಾರ ರಾತ್ರಿ ಗಂಟೆ 7.20ರ ಸುಮಾರಿಗೆ ಸಂಭವಿಸಿದೆ. ಗುಳ್ವಾಡಿ ಹಂಚಿನ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕ ಗುಳ್ವಾಡಿಯ ನಿವಾಸಿ ಬಾಬು ನಾಯ್ಕ (52) ಮೃತಪಟ್ಟವರು. ಗುಳ್ವಾಡಿ ಹಂಚಿನ ಕಾರ್ಖಾನೆಯಿಂದ ಕೆಲಸ ಮುಗಿಸಿ ತೆಕ್ಕಟ್ಟೆ ಪಟೇಲರ ಬೆಟ್ಟಿನಲ್ಲಿರುವ ಪತ್ನಿಯ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ಮಂಗಳೂರಿನಿಂದ ಕುಂದಾಪುರದ ಕಡೆಗೆ ಅತೀ ವೇಗದಿಂದ ತೆರಳುತ್ತಿದ್ದ 407 ಆ್ಯಂಬುಲೆನ್ಸ್‌ ವಾಹನ ನೇರವಾಗಿ ಬಂದು ಪಾದಚಾರಿಗೆ ಢಿಕ್ಕಿ ಹೊಡೆಯಿತು. ಅಪಘಾತದ ತೀವ್ರತೆಗೆ ಪಾದಚಾರಿಯ ತಲೆಯ ಭಾಗ ಸಂಪೂರ್ಣ ಛಿದ್ರಗೊಂಡಿದ್ದು ರಕ್ತದ ಮಡುವಿನಲ್ಲಿ ಆತ ಸ್ಥಳದಲ್ಲೇ ಸಾವಿಗೀಡಾದರು. ಹಲವು ವರ್ಷಗಳಿಂದಲೂ ಗುಳ್ವಾಡಿ ಹಂಚಿನ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕ ಗುಳ್ವಾಡಿಯ ನಿವಾಸಿ ಬಾಬು ನಾಯ್ಕ ಅವರು ವಾರದ ಕೊನೆಯ ದಿನವಾದ ಶನಿವಾರ ಪತ್ನಿಯ ಮನೆಗೆ ತೆರಳುತ್ತಿದ್ದರು. ಅವರು ತನ್ನ ಹಿರಿಯ ಮಗಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಸವದ ರಜೆಯ ಮೇಲೆ ತೆರಳಿದ್ದ ಕುಂದಾಪುರ ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಸೌಮ್ಯಾ ಹೆರಿಕುದ್ರು ಅವರನ್ನು ಗೈರು ಹಾಜರಿಯ ಕಾರಣಕ್ಕೆ ಸೇವೆಯಿಂದ ಅಮಾನತುಗೊಳಿಸಿದ ಘಟನೆ ನಡೆದಿದ್ದು, ತನಗೆ ನ್ಯಾಯ ಒದಗಿಸಿಕೊಡುವಂತೆ  ಅವರು ರಾಜ್ಯ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿಗೆ ದೂರು ನೀಡಿದ್ದಾರೆ. ಘಟನೆಯ ವಿವರ: ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜುಲೈ 2016ರರಿಂದ 11 ತಿಂಗಳ ಅವಧಿಗೆ ತಾತ್ಕಾಲಿಕ ನೆಲೆಯಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಸೌಮ್ಯ, ಏಳು ತಿಂಗಳ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಜನವರಿ 31ರಂದು ಅವರಿಗೆ ಪೂರ್ವ ಪ್ರಸವ ವೇದನೆ ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಫೆ.6ರಂದು ಸಿಸೆರಿಯನ್ ಮೂಲಕ ಮಗುವಿಗೆ ಜನನ ನೀಡಿದ್ದರು. ಅವಧಿಪೂರ್ವ ಪ್ರಸವವಾಗಿದ್ದ ಕಾರಣ ಮಾಚ್ 2ರ ವರೆಗೂ ಮಗುವನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಲಾಗಿತ್ತು. ಈತನ್ಮಧ್ಯೆ ಪತ್ನಿಯ ಅನಾರೋಗ್ಯದ ಬಗ್ಗೆ ಒಂದು ವಾರದ ಬಳಿಕ ಕಾಲೇಜು ಪ್ರಾಂಶುಪಾಲರಿಗೆ ದೂರವಾಣಿಯ ಮೂಲಕ ಅವರ ಪತಿ ಪ್ರದೀಪ್ ಶೆಟ್ಟಿ ಅವರು…

Read More

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಐದು ತಲೆಮಾರು ಕಂಡ ಹಿರಿಯ ಜೀವಿ. ಶತಾಯುಷಿ ಅಜ್ಜಿ ಸವೆಸಿದ ಬದುಕಿನ ಹಾದಿಯಲ್ಲಿ ಸಿಹಿಗಿಂತ ಕಹಿಯೇ ಹೆಚ್ಚು. ಬ್ರಿಟಿಷರ ದರ್ಬಾರ್ ಹಾಗೂ ಪ್ರಜಾಪ್ರಭುತ್ವ ಆಡಳಿತದ ಪರಿಕಂಡಿದ್ದ ಪಣಿಯಜ್ಜಿ ವಯಸ್ಸು ನೂರೂ.. ಮತ್ತೆಂಟು ಒಟ್ಟಿಗೆ ನೂರಾಎಂಟು! ಕುಂದಾಪುರ ತಾಲೂಕು, ತೆಕ್ಕಟ್ಟೆ ಗ್ರಾಮ ಕಣ್ಣುಕೆರೆ ಸಮೀಪ ಕಾಡ್ತಿಮನೆ ನಿವಾಸಿ ಪಣಿಯಾ ಹೆಂಗಸಿಗೆ ಈಗ ಬರೋಬ್ಬರಿ ೧೦೮ ವರ್ಷ. ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಮಿಮ್ಮಕ್ಕಳ ಕೂಡಾ ಕಂಡಿದ್ದಾರೆ. ಮಿಮ್ಮಕ್ಕ ಮದುವೆಯನ್ನೂ ಕಂಡಿದ್ದಾರೆ. ಆದರೆ ಅವರ ಕನಸಿನ ಮನೆ ನೋಡುವ ಭಾಗ್ಯ ಅಜ್ಜಿಗೆ ಸಿಕ್ಕಿಲ್ಲ ಎಂಬುದು ಮಾತ್ರ ಜೆಡ್ಡುಗಟ್ಟಿದ ನಮ್ಮ ಆಡಳಿತ ವ್ಯವಸ್ಥೆಯ ಕಾರ್ಯವೈಖರಿಗೆ ಹಿಡಿದ ಕನ್ನಡಿ. ವಯಸ್ಸಿನ ಲೆಕ್ಕಾಚಾರ ಹೇಗೆ : ಪಣಿಯ ಹೆಂಗಸಿನ ವಯಸ್ಸಿನ ಲೆಕ್ಕಾಚಾರಕ್ಕೆ ಜಾತಕ ಇಲ್ಲ. ಆದರೆ ವಯಸ್ಸಿನ ಲೆಕ್ಕಾಚಾರದಲ್ಲಿ ಮತ್ತೊಬ್ಬ ಮಹಿಳೆ ಜಾತಕ ಬರುತ್ತದೆ. ಪಣಿಯ ಹೆಂಗಸು ಹಾಗೂ ಚಾತ್ರಮನೆ ಸೀತಮ್ಮ ಸಮ ವಯಸ್ಕರು. ಪಣಿಯ ಹೆಂಗಸಿಗಿಂತ ಸೀತಮ್ಮ ಒಂದು ವರ್ಷದೊಡ್ಡವರಾಗಿದ್ದು, ಅವರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಜಮ್ಮುವಿನಲ್ಲಿ ಮಾರ್ಚ್ ೨೦ರಿಂದ ೨೪ರವರೆಗೆ ನಡೆದ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಎಂ-೨ ವಿಭಾಗದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಜಿ.ವಿ.ಅಶೋಕ್ ಅವರು ಒಂದು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕವನ್ನು ಪಡೆದಿದ್ದಾರೆ. ಇವರು ಕೆನರಾ ಬ್ಯಾಂಕಿನ ಗಂಗೊಳ್ಳಿ ಶಾಖೆಯ ಉದ್ಯೋಗಿಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ದುಬೈ: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಘ್ ಇದರ ಉದ್ಘಾಟನಾ ಸಮಾರಂಭ ಹಾಗೂ ವ್ಯಾಪಾರ ಮತ್ತು ಕಾರ್ಯನಿರ್ವಾಹಕರ ಸಮಾವೇಶವು ಯುಎಐ ಬರ್‌ದುಬಾಯಿ ರೀಜೆಂಟ್ ಪ್ಯಾಲೇಸ್ ಹೋಟೆಲ್‌ನಲ್ಲಿ ಜರುಗಿತು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ನಮ್ಮ ಕುಂದಾಪ್ರ ಕನ್ನಡ ಬಳಗ ಸಂಘಟನೆಯನ್ನು ದೀಪ ಬೆಳಗಿ ಉದ್ಘಾಟಿಸಿದರು. ರಾಮೀ ಗ್ರೂಫ್ ಆಫ್ ಹೋಟೆಲ್ಸ್ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾದ ವರದರಾಜ ಶೆಟ್ಟಿ, ಫಾರ್ಚೂನ್ ಗ್ರೂಫ್ ಆಫ್ ಹೋಟೆಲ್ಸ್ ಅಧ್ಯಕ್ಷ ಪ್ರವೀಣ್ ಶೆಟ್ಟಿ ವಕ್ವಾಡಿ, ಚಿತ್ತಾರಿ ಗ್ರೂಫ್ ಆಫ್ ಕಂಪೆನಿ ಆಡಳಿತ ಪಾಲುದಾರ ಪಿ. ಸುಖಾನಂದ ಶೆಟ್ಟಿ ಕುಂದಾಪುರ ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ, ಉದ್ಯಮಿ ಹಮೀದ್, ಮುಂಬೈ ಉದ್ಯಮಿ ವೆಂಕಟೇಶ ಕಿಣಿ, ಮಂಜುನಾಥ ಬಿಲ್ಲವ, ಉದ್ಯಮಿ ಇಬ್ರಾಹಿಂ ಗಂಗೊಳ್ಳಿ, ಬಾಸುಮ ಕೊಡಗು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಸಾಧನಾ ದಾಸ್ ಸ್ವಾಗತಿಸಿ ಪ್ರಸಾವಿಕ ನುಡಿಗಳನ್ನಾಡಿದರು. ವಾಗ್ಮಿ ಪತ್ರಕರ್ತ ಅರುಣ್‌ಕುಮಾರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗೋಗ್ರಾಸ ನೀಡುವುದರಿಂದ ಕರ್ಮ ಕ್ಷಯಿಸಿ ಬದುಕಿನಲ್ಲಿ ಆನಂದ ನೆಲೆಸುವುದು ಆದುದರಿಂದ ಗೋವಿನ ಸೇವೆ ಆತ್ಮೋನ್ನತಿಗೆ ಪರಮ ಪವಿತ್ರ ಕಾರ್ಯವಾಗಿದೆ ಎಂದು ಹಂಗಾರಕಟ್ಟೆಯ ಶ್ರೀ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದರು. ಅವರು ಯುಗಾದಿಯ ಶುಭ ಸಂದರ್ಭದಲ್ಲಿ ಕೋಟೇಶ್ವರದ ಹರಿಹರ ಸೇವಾ ಬಳಗದವರು ಹೊರ ತಂದ ಗಾವೋ ವಿಶ್ವಸ್ಯ ಮಾತರಃ ಎನ್ನುವ ಜ್ಞಾನಪ್ರದ ಗೋಡೆ ಫಲಕವನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಜಗತ್ತಿನಲ್ಲಿ ಕಾಮಧೇನುವಿಗೆ ಮಹತ್ವದ ಸ್ಥಾನವಿದೆ. ಗೋವಿನ ಪಾಲನೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಸಮಾಜದಲ್ಲಿ ಸತ್ಯ, ಪ್ರಾಮಾಣಿಕತೆ, ನೆಮ್ಮದಿ, ನೆಲಸಲು ಸಹಕಾರಿಯಾಗಿದೆ. ಗೋ ಉತ್ಪನ್ನಗಳು ಪೂಜೆಯ ಶ್ರೇಷ್ಠತೆಯನ್ನು ಹೆಚ್ಚಿಸುವ ಜೊತೆಗೆ ಸಮಗ್ರ ಕುಟುಂಬದ ಆರೋಗ್ಯವಂತ ಜೀವನಕ್ಕೆ ಭದ್ರ ತಳಹದಿಯನ್ನು ನೀಡುತ್ತದೆ. ಹಾಗಾಗಿ ಮನೆಮನೆಯಲ್ಲಿ ಗೋವಿನ ಪಾಲನೆಯಾಗಬೇಕಿದೆ ಎಂದರು. ಈ ಸಂದರ್ಭದಲ್ಲಿ ಹರಿಹರ ಸೇವಾ ಬಳಗದ ಅಧ್ಯಕ್ಷರಾದ ಕೆ. ಮೋಹನ ಆಚಾರ್ಯ, ಸುದ್ದಿಮನೆ ಸಂಪಾದಕ ಸಂತೋಷ ಕೋಣಿ, ಪುಷ್ಪರಾಜ್, ಹರೀಶ್ ಜೆ. ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿಯ ಆಟೋ ರಿಕ್ಷಾ ಚಾಲಕರ ಬೇಡಿಕೆಗೆ ಅನುಗುಣವಾಗಿ ಮ್ಯಾಂಗೀಸ್ ರಸ್ತೆಯ ವಠಾರದಲ್ಲಿ ತಾಲೂಕು ಪಂಚಾಯತ್ ನಿಧಿಯಿಂದ ಸುಸಜ್ಜಿತವಾದ ಆಟೋ ರಿಕ್ಷಾ ನಿಲ್ದಾಣವನ್ನು ನಿರ್ಮಿಸಲಾಗಿದೆ. ಆಟೋ ರಿಕ್ಷಾ ಚಾಲಕ ಮಾಲಕರು ಈ ತಂಗುದಾಣದ ಸದುಪಯೋಗ ಪಡೆದುಕೊಂಡು ಗಂಗೊಳ್ಳಿ ಜನರಿಗೆ ಉತ್ತಮ ಸೇವೆ ನೀಡುವಂತಾಗಬೇಕು ಎಂದು ತಾಲೂಕು ಪಂಚಾಯತ್ ಸದಸ್ಯ ಸುರೇಂದ್ರ ಖಾರ್ವಿ ಹೇಳಿದರು. ಅವರು ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯ ವಠಾರದಲ್ಲಿ ತಾಲೂಕು ಪಂಚಾಯತ್ ನಿಧಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಆಟೋ ರಿಕ್ಷಾ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿಕ ಎಂ.ರಾಮಕೃಷ್ಣ ಪೈ ಮುಳ್ಳಿಕಟ್ಟೆ ಮಾತನಾಡಿ, ಆಟೋ ಚಾಲಕರು ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಾಹನ ಚಲಾಯಿಸಬೇಕು. ಅತಿ ವೇಗದಿಂದ ಚಲಾಯಿಸುವುದು, ಡ್ರೈವಿಂಗ್ ಲೈಸನ್ಸ್ ಇಲ್ಲದೆ ವಾಹನ ಚಲಾಯಿಸುವುದನ್ನು ಮಾಡದೇ ತಮ್ಮ ವಾಹನವನ್ನು ಅತ್ಯಂತ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಚಾಲನೆ ಸಂದರ್ಭ ಎಲ್ಲಾ ವಾಹನಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆ ಪತ್ರಗಳನ್ನು ತಮ್ಮೊಟ್ಟಿಗೆ ಇಟ್ಟುಕೊಳ್ಳಬೇಕು ಎಂದರು. ಪತ್ರಕರ್ತ ಬಿ.ರಾಘವೇಂದ್ರ ಪೈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತಿಹಾಸ ಪ್ರಸಿದ್ಧ ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದಲ್ಲಿ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಆದೇಶಾನುಸಾರ ಪ್ರಾಯ:ಶ್ಚಿತ್ತ ಶ್ರೀ ಲಘು ವಿಷ್ಣು ಹವನ, ಶ್ರೀದೇವರಿಗೆ ದ್ವಾದಶ ಕಲಶಾಭಿಷೇಕ ಹಾಗೂ ಕುಳಾವಿ ಬಾಂಧವರಿಂದ ಮುಷ್ಠಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಶ್ರೀದೇವರಿಗೆ ಪಂಚಾಮೃತ ಅಭಿಷೇಕ, ದ್ವಾದಶ ಕಲಶಾಭಿಷೇಕ, ಮಧ್ಯಾಹ್ನ ಗಂಟೆಗೆ ಶ್ರೀ ಲಘು ವಿಷ್ಣು ಹವನ ಪೂರ್ಣಾಹುತಿ, ೧ ಗಂಟೆಗೆ ಮಹಾಪ್ರಾರ್ಥನೆ ನಡೆದು ಶ್ರೀ ದೇವರಿಗೆ ಮುಷ್ಠಿ ಕಾಣಿಕೆ ಸಮರ್ಪಣೆ ಮಾಡಲಾಯಿತು. ಮಧ್ಯಾಹ್ನ ಮಹಾ ಮಂಗಳಾರತಿ ಹಾಗೂ ಸಂತರ್ಪಣೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ವಿಜೃಂಭಣೆಯಿಂದ ಯಶಸ್ವಿಯಾಗಿ ಜರಗಿದವು. ದೇವಳದ ಧರ್ಮದರ್ಶಿ ಮಂಡಳಿ ಸದಸ್ಯರು, ಊರ ಪರವೂರ ಸಮಾಜ ಬಾಂಧವರು, ಕುಳಾವಿ ಬಾಂಧವರು, ಭಜಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀದೇವರ ಪ್ರಸಾದ ಸ್ವೀಕರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಸಿದ್ದಾಪುರ: ಏಕಾಗ್ರತೆ ಹಾಗೂ ಆತ್ಮ ಶುದ್ಧಿಯಿಂದ ದೇವರ ಧ್ಯಾನ ಮಾಡಿದಾಗ ಪುಣ್ಯ ಪ್ರಾಪ್ತಿಯಾಗುತ್ತದೆ. ದೇವರ ಧ್ಯಾನದಿಂದ ಸಾರ್ಥಕ ಜೀವನ ಹೊಂದಲು ಸಾಧ್ಯ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಹೇಳಿದರು. ಅವರು ಬೆಳ್ವೆ ಹೊನ್ಕಲ್ಲು ಚಿತ್ತೇರಿ ಶ್ರೀ ವನದುರ್ಗಾ ದೇವಸ್ಥಾನದ ಪುನಃ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರದ್ಧೆ ಭಕ್ತಿಯ ಧಾರ್ಮಿಕ ಆಚರಣೆಗಳಿಂದ ಧರ್ಮ ಸಂಸ್ಕೃತಿಯ ಉಳಿವಿಗೆ ಸಾಧ್ಯ. ದೇವರ ಭಯವೇ ಜ್ಞಾನದ ಆರಂಭ. ಯುವ ಜನತೆ ಹಿರಿಯರನ್ನು ಗೌರವಿಸುವ ಸೇವಾ ಮನೋಭಾವನೆಗಳನ್ನು ಮೈಗೂಡಿಸಿ ಕೊಳ್ಳಬೇಕು. ದೂರದರ್ಶನ ಕಾರ್ಯ ಕ್ರಮಗಳಿಂದ ಧಾರ್ಮಿಕ ಆಚರಣೆಗಳು ವ್ಯತಿರಿಕ್ತ ಸ್ವರೂಪವನ್ನು ಹೊಂದಿ ಕೊಳ್ಳುತ್ತಿರುವುದು ದುರದೃಷ್ಟಕರ. ಧಾರ್ಮಿಕ ಆಚರಣೆಗಳಲ್ಲಿ ಜನರ ಆಸಕ್ತಿ ಒಗ್ಗೂಡುವಿಕೆಯಿಂದ ಊರಿನ ಅಭಿವೃದ್ಧಿ ಹಾಗೂ ಗೌರವ ಹೆಚ್ಚುತ್ತದೆ. ವ್ಯಕ್ತಿಯ ಉತ್ತಮ ಸೇವಾ ಮನೋಭಾವನೆಯಿಂದ ಸಮಾಜದಲ್ಲಿ ಗೌರವಕ್ಕೆ ಅರ್ಹರಾಗುತ್ತಾರೆ ಎಂದರು. ನಿವೃತ್ತ ಶಿಕ್ಷಕ ಶೇಖರ್‌ ಶೆಟ್ಟಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಯಕ್ಷಗಾನ ಹಾಸ್ಯ ಕಲಾವಿದ ಹಳ್ಳಾಡಿ ಜಯರಾಮ್‌ ಶೆಟ್ಟಿಯವರು ಯಕ್ಷರಂಗದಲ್ಲಿ 50 ವರ್ಷಗಳ ಕಾಲ ಸೇವೆ ಸಲ್ಲಿಸಿ ವೃತ್ತಿ ಮೇಳದ ತಿರುಗಾಟದಿಂದ ನಿವೃತ್ತರಾದ ಪ್ರಯುಕ್ತ “ಹಳ್ಳಾಡಿಗೆ 60, ರಂಗಕ್ಕೆ 50′ ಕಾರ್ಯಕ್ರಮ ಕುಂದಾಪುರ ಆರ್‌.ಎನ್‌.ಶೆಟ್ಟಿ ಸಭಾಭವನದ ಆವರಣದಲ್ಲಿ ನಡೆಯಿತು. ಈ ಸಂದರ್ಭ ಯುವ ಬಂಟರ ಸಂಘಟನೆ ಕುಂದಾಪುರ ನೇತೃತ್ವದಲ್ಲಿ, ಹಳ್ಳಾಡಿ ಅಭಿಮಾನಿ ಬಳಗ ಸಾೖಬ್ರಕಟ್ಟೆ, ಅಭಿಮಾನಿ ಬಳಗ ಗಾವಳಿ ಹಾಗೂ ಹಟ್ಟಿಯಂಗಡಿ ಯಕ್ಷಗಾನ ಮೇಳ ಮತ್ತು ಅಭಿಮಾನಿಗಳು, ಹಿತೈಷಿಗಳ ವತಿಯಿಂದ ಹಳ್ಳಾಡಿಯವರನ್ನು ಸಮ್ಮಾನಿಸಿ, ಗೌರವಿಸಲಾಯಿತು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಹಳ್ಳಾಡಿಯವರು, ಯಕ್ಷರಂಗ ತನಗೆ ಎಲ್ಲವನ್ನು ಕೊಟ್ಟಿದೆ. ಜಾತಿ-ಮತ ಭೇದವಿಲ್ಲದೆ ತನಗೆ ಅಭಿಮಾನಿಗಳಿದ್ದಾರೆ. ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಸಮರ್ಪಿಸುವುದಾಗಿ ತಿಳಿಸಿದರು. ಯಕ್ಷಗಾನ ವಿಮರ್ಶಕ ಎಸ್‌. ವಿ. ಉದಯ ಕುಮಾರ್‌ ಶೆಟ್ಟಿ ಮಾತನಾಡಿ, ಯಕ್ಷರಂಗದಲ್ಲಿ 50 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಳ್ಳಾಡಿಯವರಿಗೆ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಲಭಿಸಬೇಕಿದೆ ಎಂದರು. ಕುಂದಾಪುರ ಯುವಬಂಟರ…

Read More