ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿದ್ಯಾರ್ಥಿದೆಸೆಯಲ್ಲೇ ಹಣ ಉಳಿತಾಯ ಮಾಡುವ ಮನೋ ಪ್ರವೃತ್ತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಹಾಗೂ ಉಳಿತಾಯದ ಹಣವನ್ನು ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕು. ಬಂಡವಾಳ ಹೂಡಿಕೆಯ ಸಮಯದಲ್ಲಿ ಮಾರುಕಟ್ಟೆಯ ಏರುಪೇರುಗಳ ಸೂಕ್ಷ್ಮತೆಯನ್ನು ಗ್ರಹಿಸಬೇಕು. ಇದರಿಂದ ವ್ಯಕ್ತಿಯ ಹಣಕಾಸಿನ ಅಭಿವೃದ್ಧಿ, ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಉಪನ್ಯಾಸಕ ರಾಮಚಂದ್ರ ಭಟ್ ಹೇಳಿದರು. ಅವರುಡಾ. ಬಿ.ಬಿ. ಹೆಗ್ಡೆ ಪ್ರಥಮದರ್ಜೆಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ಸಂಘ ಹಾಗೂ ಬಾಂಬೆ ಸ್ಟಾಕ್‌ಎಕ್ಸ್‌ಚೆಂಜ್ ವತಿಯಿಂದನಡೆದಕಾರ್ಯಕ್ರಮದಲ್ಲಿ ಶೇರು ಮಾರುಕಟ್ಟೆಯ ವಿದ್ಯಾಮಾನಗಳ ಕುರಿತು ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮಚಂದ್ರಶೇಖರ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದರಾಜೇಶ್ ಶೆಟ್ಟಿ, ವಾಣಿಜ್ಯ ಮತ್ತು ನಿರ್ವಹಣಾ ಸಂಘದ ಸಂಯೋಜಕಿತಿಲಕಲಕ್ಷ್ಮಿ ಮತ್ತು ಸಹ ಸಂಯೋಜಕಿ ನಿಶಾ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಬ್ರೀಟಾಕಾರ್ಯಕ್ರಮ ನಿರೂಪಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಶೆಟ್ರಕಟ್ಟೆಯ ಎಫ್ಎಸ್ಎಲ್ ಇಂಡಿಯಾ ಸಂಸ್ಥೆ ಭಾರತಕ್ಕೆ ಅಧ್ಯಯನಕ್ಕಾಗಿ ಬಂದ ವಿದೇಶಿ ವಿದ್ಯಾರ್ಥಿಗಳನ್ನು ನೇಜಿ ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಈ ಸಂಸ್ಥೆಯಲ್ಲಿ ಭಾರತದ ಗ್ರಾಮೀಣ ಬದುಕು ಹಾಗೂ ಸಂಸ್ಕೃತಿಯ ಅಧ್ಯಯನಕ್ಕೆ ಬಂದ ಹಾಲೆಂಡ್, ಜರ್ಮನಿ, ಸ್ಪೈನ್ ಮೊದಲಾದ ದೇಶಗಳ ವಿದ್ಯಾರ್ಥಿಗಳು ತಲ್ಲೂರು ಬಳಿಯ ಶೆಟ್ರಕಟ್ಟೆಯ ದಾಸರಬೈಲು ಎಂಬಲ್ಲಿ ರೈತರೊಬ್ಬರಿಗೆ ಸೇರಿದ ಗದ್ದೆಯಲ್ಲಿ ನೇಜಿ ನೆಡುವ ಮೂಲಕ ತಾವೇನು ರೈತರಿಗೆ ಕಡಿಮೆಯಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಈ ಗದ್ದೆಯಲ್ಲಿ ಈಗಾಗಲೇ ಬೀಜ ಬಿತ್ತುವ ಮೂಲಕ ನೇಜಿ ಕಾರ್ಯ ನಡೆಸಲಾಗಿದ್ದು, ಆದರೆ ಈ ನಾಟಿಯಲ್ಲಿ ಅಲ್ಲಲ್ಲಿ ಭತ್ತದವ ಸಸಿ ಹುಟ್ಟದೇ ಇರುವ ಖಾಲಿ ಜಾಗದಲ್ಲಿ ನೇಜಿ ಕಾರ್ಯವನ್ನು ಈ ವಿದ್ಯಾರ್ಥಿಗಳು ನಡೆಸಿದರು. ಎಫ್.ಎಸ್ಎಲ್ನ ಸುಮಾರು ಇಪ್ಪತ್ತೆರಡು ವಿದೇಶಿ ವಿದ್ಯಾರ್ಥಿಗಳು ಗದ್ದೆಗಳಲ್ಲಿ ಬೆಳಗ್ಗಿನಿಂದ ನೇಜಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಆರಂಭಗೊಂಡು ಸರಿಸುಮಾರು ಒಂದೂವರೆ ತಿಂಗಳಾದರೂ ಕೆಲವು ಶಾಲೆಗಳಿಗೆ ಪಠ್ಯ ಪುಸ್ತಕ ಪೂರೈಕೆಯಾಗಿಲ್ಲ. ಶಾಲೆಗಳಲ್ಲಿ ನಾಲ್ಕೈದು ಪಾಠಗಳು ಮುಗಿದು ಕಿರುಪರೀಕ್ಷೆಗಳು ಹತ್ತಿರ ಬಂದರೂ ಮಕ್ಕಳಿಗಿನ್ನೂ ಪುಸ್ತಕ ದೊರೆತಿಲ್ಲ. ಒಂದರಿಂದ ಹತ್ತನೇ ತರಗತಿಯ ತನಕ ಪಠ್ಯಪುಸ್ತಕ ದೊರೆತಿಲ್ಲ. ಎಸೆಸೆಲ್ಸಿ ವಿದ್ಯಾರ್ಥಿಗಳ ಕನ್ನಡ ಪಠ್ಯ ಪುಸ್ತಕ ದೊರೆತಿಲ್ಲ. ಕೆಲವು ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕದ ಝೆರಾಕ್ಸ್ ಪ್ರತಿಗಳನ್ನು ಕೊಟ್ಟು ಪಾಠ ಮಾಡುತ್ತಿದ್ದಾರೆ. ಈ ಬಗ್ಗೆ ಇಲಾಖೆಯನ್ನು ಪ್ರಶ್ನಿಸಿದರೇ ಒಂದು ವಾರದಲ್ಲಿ ಎಲ್ಲಾ ಶಾಲೆಗಳಿಗೂ ಪಠ್ಯ ಪುಸ್ತಕ ಪೂರೈಕೆ ಆಗಲಿದೆ ಎಂಬ ಭರವಸೆ ನೀಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಭಾರತ ಸರ್ಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ನೆರವಿನೊಂದಿಗೆ ಭಾರತೀಯ ಉದ್ಯಮಶೀಲತೆ ಸಂಸ್ಥೆಯ ವತಿಯಿಂದ ಪ್ರಾಧ್ಯಾಪಕರಿಗಾಗಿ 12 ದಿನಗಳು ನಡೆಯಲಿರುವ ಉದ್ಯಮಶೀಲತಾ ವಿಕಸನ ರಾಷ್ಟ್ರಮಟ್ಟದ ಕಾರ್ಯಾಗಾರಕ್ಕೆ ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಚಾಲನೆ ನೀಡಲಾಯಿತು. ಭಾರತೀಯ ಉದ್ಯಮಶೀಲತೆ ಸಂಸ್ಥೆಯ ಪ್ರೋಗ್ರಾಂ ನಿರ್ದೇಶಕ ಯಶಸ್ವಿನಿ ನಾಗ್ ಕಾರ್ಯಾಗಾರಕ್ಕೆ ಚಾಲನೆ ನೀಡಿ, ಭಾರತ ಸರ್ಕಾರವು ಸ್ಟಾರ್ಟ್ ಅಪ್ ಹಾಗೂ ಸ್ಟಾಂಡ್‍ಅಪ್ ಯೋಜನೆಗಳಿಗೆ ಬಳಸುವ ಅನುದಾನದಲ್ಲಿ ಹೆಚ್ಚಿನ ಭಾಗವನ್ನು ಉದ್ಯಮಶೀಲತೆ ಉತ್ತೇಜನಕ್ಕೆ ಬಳಸಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಅನ್ವೇಷಣಾ ಗುಣವನ್ನು ಹೆಚ್ಚಿಸಲು ಪ್ರಮುಖ ಪಾತ್ರವಹಿಸುವ ಶಿಕ್ಷಕರಲ್ಲೂ ಪರಿಪಕ್ವತೆ ಇರುವುದು ಅವಶ್ಯಕ. ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಶಿಕ್ಷಕರ ನೀಡುವ ತರಬೇತು ಅತ್ಯಂತ ಪರಿಣಾಮಕಾರಿಯಾಗುತ್ತದೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಉದ್ಯಮದಲ್ಲಿ ಗುರುತರವಾದ ಬದಲಾವಣೆಗಳಾಗುತ್ತಿವೆ. ಅದಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಪರಿವರ್ತಿಸುವ ಜವಾಬ್ದಾರಿ ಪ್ರಾಧ್ಯಾಪಕರ ಮೇಲಿದೆ. ಬೋಧಕರು ಗಂಟೆಗಳ ಲೆಕ್ಕದಲ್ಲಿ ವಿದ್ಯಾರ್ಥಿಗಳಿ ಪಾಠ ಮಾಡಿದರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ತೆಕ್ಕಟ್ಟೆ ದಬ್ಬೆಕಟ್ಟೆ ಪ್ರಮುಖ ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್ನ ಸ್ಟೇರಿಂಗ್ ಎಂಡ್ ಜಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಮೂರು ದ್ವಿಚಕ್ರ ವಾಹನಗಳು ಹಾಗೂ ಸೈಕಲ್ ಜಖಂಗೊಂಡ ಘಟನೆ ನಡೆದಿದೆ. ಕೊರ್ಗಿಯಿಂದ ಕುಂದಾಪುರದೆಡೆಗೆ ಸಾಗುತ್ತಿದ್ದ ಶ್ರೀ ಮಹಾದೇವಿ ಸರ್ವೀಸ್ ಬಸ್ನ ಸ್ಟೇರಿಂಗ್ ಎಂಡ್ ಜಾರಿ ಹೋಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಏಕಾಏಕಿ ಇಲ್ಲಿನ ತೆಕ್ಕಟ್ಟೆ ವಿನಯ ಬಾರ್ ಎದುರಿನಲ್ಲಿ ನಿಲ್ಲಿಸಿದ್ದ 2 ಸೈಕಲ್, ಟಿವಿಎಸ್ ಎಕ್ಸೆಲ್, ಟಿವಿಎಸ್ ಅಪಾಚಿ ಹಾಗೂ ಯಮಹಾ ಲಿಬೆರೋ ಸಹಿತ ಒಟ್ಟು ಮೂರು ದ್ವಿ ಚಕ್ರವಾಹನಗಳು ಬಸ್ನ ಅಡಿಭಾಗದಲ್ಲಿ ಸಿಲುಕಿ ಜಖಂಗೊಳಿಸಿ ಸಮೀಪದಲ್ಲಿರುವ ತೆಂಗಿನ ಮರಕ್ಕೆ ಢಿಕ್ಕಿ ಹೊಡೆದಿತ್ತು. ಬಸ್ನಲ್ಲಿದ್ದ ಮೂವರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಕೋಟ ಪೊಲೀಸ್ ಠಾಣಾಧಿಕಾರಿ ರಾಜಗೋಪಾಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ರೋಟರಿ ಕ್ಲಬ್ ಇದರ 2017-18ನೇ ಸಾಲಿನ ಅಧ್ಯಕ್ಷರಾಗಿ ಹುಂಚನಿ ಕೃಷ್ಣಪ್ಪ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಡಾ. ಯು. ಪ್ರವೀಣ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಜುಲೈ 19ರಂದು ರೋಟರಿ ಭವನದಲ್ಲಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಸಮಾರಂಭ ನಡೆಯಲಿದ್ದು, ರೋಟರಿ ಜಿಲ್ಲಾ ಮಾಜಿ ಗವರ್ನರ್ ಎಚ್. ಎಲ್. ರವಿ ಪದಗ್ರಹಣ ಅಧಿಕಾರಿಯಾಗಿ ಪ್ರಮಾಣವಚನ ಬೋಧಿಸಲಿದ್ದಾರೆ. ರೋಟರಿ ಸಹಾಯಕ ಗವರ್ನರ್ ಕೃಷ್ಣ ಕಾಂಚನ್, ವಲಯ ಪ್ರತಿನಿಧಿ ಜಯಪ್ರಕಾಶ್ ಶೆಟ್ಟಿ ವೈ. ಉಪಸ್ಥಿತರಿರುವರು. ವೃತ್ತಿಯಲ್ಲಿ ಶಿಕ್ಷಕರಾಗಿ ಸುದೀರ್ಘ ಅವಧಿಯ ಸೇವೆಸಲ್ಲಿಸಿ ನಿವೃತ್ತರಾದ ಕೃಷ್ಣಪ್ಪ ಶೆಟ್ಟಿ (ಅಪ್ಪು ಮಾಸ್ಟರ್), ಅವಕಾಶ ಹಾಗೂ ಸಾಧ್ಯತೆಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದೇ ನಿಜವಾದ ಜೀವನ ಎಂಬ ನೆಲೆಯಲ್ಲಿ ಹಲವಾರು ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬೈಂದೂರು ರೋಟರಿಯ ಈ ವರ್ಷದ ಅಧ್ಯಕ್ಷರಾಗಿ ಹಲವಾರು ಜನಪರ ಯೋಜನೆಗಳನ್ನು ಈಗಾಗಲೇ ಹಾಕಿಕೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೀಟ್ ವ್ಯವಸ್ಥೆಯನ್ನು ರಾಜ್ಯ ಸರಕಾರ ಶಾಸನಬದ್ಧಗೊಳಿಸಿ ಆದೇಶ ಹೊರಡಿಸಿದ್ದು, ಗಸ್ತು ಅಧಿಕಾರಿಗಳ ಮೂಲಕ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಲಿಕೊಳ್ಳಲು, ಪೊಲೀಸರು ಹಾಗೂ ಜನಸಾಮಾನ್ಯರ ನಡುವೆ ಉತ್ತಮ ಬಾಂಧವ್ಯ ಬೆಳೆಯಲು ಸಾಧ್ಯವಾಗಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಟಿ. ಬಾಲಕೃಷ್ಣ ಹೇಳಿದರು. ಅವರು ಬೈಂದೂರು ವೃತ್ತ ಪೊಲೀಸ್ ಠಾಣೆಗಳ ಉಪಗಸ್ತು ನಾಗರಿಕ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕರ ಸಹಕಾರವಿಲ್ಲದೇ ಬೀಟ್ ವ್ಯವಸ್ಥೆಯನ್ನು ನಡೆಸಲು ಸಾಧ್ಯವಿಲ್ಲ. ಪ್ರತಿ ಠಾಣಾ ವ್ಯಾಪ್ತಿಯಲ್ಲಿಯೂ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿ ನಾಗರಿಕರು ಹಾಗೂ ಇಲಾಖೆಯ ನಡುವಿನ ಅಂತರವನ್ನು ದೂರ ಮಾಡಲಾಗುತ್ತಿದೆ ಎಂದರು. ಬೀಟ್ ವ್ಯವಸ್ಥೆಯ ಕುರಿತಾಗಿ ಪೊಲೀಸ್ ಪೇದೆಗಳಾದ ಮೋಹನ್, ಸರೋಜಾ, ಹಾಗೂ ನಂದಯ್ಯ ಮಾತನಾಡಿದರು. ಸಂಘಟನೆಗಳ ಪರವಾಗಿ ಸತೀಶ್ ನಾಯಕ್, ನಾರಾಯಣ ಶೆಟ್ಟಿ ಜಡ್ಕಲ್, ಶರತ್ ಶೆಟ್ಟಿ ಉಪ್ಪುಂದ, ಸುಕುಮಾರ ಶೆಟ್ಟಿ ಮಾತನಾಡಿದರು. ಠಾಣೆಗಳ ಉಪಗಸ್ತು ನಾಗರಿಕ ಸದಸ್ಯರಿಗೆ ಐಡಿಕಾರ್ಡ್ ನೀಡಲಾಯಿತು. ಕುಂದಾಪುರ ಉಪವಿಭಾಗ ಡಿವೈಎಸ್ಪಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಕಂಡ್ಲೂರು ಬಸ್ ನಿಲ್ದಾಣದ ಬಳಿ ಜಯರಾಮ್ ಪೂಜಾರಿ ಅವರಿಗೆ ಸೇರಿದ ದಿನಸಿ ಸಾಮಗ್ರಿಗಳ ಅಂಗಡಿಗೆ ಬೆಳಗ್ಗಿನ ಜಾವ ಅಕಸ್ಮಿಕವಾಗಿ ಬೆಂಕಿ ಅನಾಹುತವಾಗಿ ಸುಮಾರು ರೂ. 3 ಲಕ್ಷಕ್ಕೂ ಅಧಿಕ ನಷ್ಠ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು ಕಾವ್ರಾಡಿ ಗ್ರಾ.ಪಂ. ಮತ್ತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ದೂರು ನೀಡಲಾಗಿದೆ. ಅಂಗಡಿಯಲ್ಲಿ ದಿನಸಿ, ಕಾಸ್ಮೆಟಿಕ್ ಹಾಗೂ ಇತರೆ ಗೃಹ ಬಳಕೆ ವಸ್ತುಗಳಿದ್ದು ಬೆಂಕಿ ಅಕಸ್ಮಿಕದಿಂದ ಸಂಪೂರ್ಣ ನಾಶವಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಅಂತರಾಷ್ಟ್ರೀಯ ಮಟ್ಟದಲ್ಲಿ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿರುವ ೧೨೨ ವರ್ಷಗಳ ಇತಿಹಾಸ ಹೊಂದಿರುವ ರೋಟರಿ ಸಂಸ್ಥೆಯು ವಿಶ್ವದ ೨೦ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸುಮಾರು ೧೨ ಲಕ್ಷಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿರುವ ರೋಟರಿ ಸಂಸ್ಥೆಯು ಪೊಲೀಯೋ ನಿರ್ಮೂಲನೆಯಲ್ಲಿ ಮಹತ್ತರವಾದ ಕಾರ್ಯನಿರ್ವಹಿಸಿದೆ ಎಂದು ರೋಟರಿ ವಲಯ ೩ರ ಮಾಜಿ ಅಸಿಸ್ಟೆಂಟ್ ಗವರ್ನರ್ ಬಿ.ರಾಜಾರಾಮ ಭಟ್ ಹೇಳಿದರು. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ಜರಗಿದ ಗಂಗೊಳ್ಳಿ ರೋಟರಿ ಕ್ಲಬ್‌ನ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿ ಅವರು ಮಾತನಾಡಿದರು. ರೋಟರಿ ಮ್ಯಾಚಿಂಗ್ ಗ್ರಾಂಟ್ ಮೂಲಕ ಅನೇಕ ಶಾಲೆಗಳ ಅಭಿವೃದ್ಧಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ರೋಟರಿ ಸಂಸ್ಥೆ ಶ್ರಮಿಸಿದೆ. ರೋಟರಿ ಮೂಲಕ ಸ್ನೇಹ ಸಂಬಂಧಗಳು ಬೆಳೆದು ಸಮಾಜದಲ್ಲಿ ಸೌಹಾರ್ದ ವಾತಾವರಣ ನಿರ್ಮಾಣ ಮಾಡಲು ಸಹಾಯಕವಾಗುತ್ತದೆ. ಯಾವುದೇ ಜಾತಿ ಮತ ಬೇಧವಿಲ್ಲದೆ ಲಿಂಗ ತಾರತಮ್ಯವಿಲ್ಲದೆ ವಿಶ್ವದ ಎಲ್ಲೆಡೆ ಸೇವೆ ಸಲ್ಲಿಸಲು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರಿನ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀರಾಮ ವಿವಿಧೋದ್ದೇಶ ಟ್ರಸ್ಟ್‌ನ 5ನೇ ವರ್ಷದ ಟ್ರಸ್ಟ್ ದಿನಾಚರಣೆಯನ್ನು ಮಾಜಿ ಶಾಸಕ ಹಾಗೂ ವಿಶ್ವ ರಾಮ್ಷತ್ರಿಯ ಸಂಘದ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಈಗಿನ ತಲೆಮಾರಿನ ಮಕ್ಕಳು ಅದೃಷ್ಟಶಾಲಿಗಳು. ಹಿಂದಿನವರು ಅನುಭವಿಸಿದ್ದ ಕಷ್ಟ ಅವರಿಗಿಲ್ಲ. ಅವರಲ್ಲಿ ಅರ್ಹತೆ ಇರುವವರಿಗೆ ವಿವಿಧ ಮೂಲಗಳಿಂದ ನೆರವು ಬರುತ್ತಿದೆ. ಶ್ರೀರಾಮ ವಿವಿಧೋದ್ದೇಶ ಟ್ರಸ್ಟ್ ಕಷ್ಟದಲ್ಲಿರುವವವರಿಗೆ ನೀಡುತ್ತಿರುವ ಸಹಾಯ ಅದಕ್ಕೆ ಉದಾಹರಣೆ. ಅದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳೂ ಸೇರಿದಂತೆ ನೆರವು ಪಡೆದ ಎಲ್ಲರೂ ಸಮಾಜ ಮೆಚ್ಚುವಂತೆ ಬದುಕಬೇಕು ಎಂದು ಹೇಳಿದರು. ಟ್ರಸ್ಟ್‌ನ ಆಡಳಿತ ಟ್ರಸ್ಟಿ ಬಿ. ರಾಮಕೃಷ್ಣ ಶೇರೆಗಾರ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಉದ್ಯಮಿ ಸದಾನಂದ ಸೇರ್ವೇಗಾರ್, ಮುಂಬೈ ಉದ್ಯಮಿ ಪ್ರಕಾಶ್ ಮಲ್ಲಯ್ಯ, ಕುಂದಾಪುರ ರಕ್ಷಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ. ಚಂದ್ರಶೇಖರ, ಕುಂದಾಪುರ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ರವೀಂದ್ರ ಕಾವೇರಿ, ಬೈಂದೂರು ರಾಮಕ್ಷತ್ರಿಯ ಸಂಘದ ಅಧ್ಯಕ್ಷ…
