ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗ್ರಾಮ ಪಂಚಾಯತಿನ ಸದಸ್ಯರು ಸಕ್ರೀಯರಾದಾಗ ಮಾತ್ರ ಗ್ರಾಮದ ಅಭಿವೃದ್ಧಿ ಕಾರ್ಯ ಚುರುಕುಗೊಳಿಸಲು ಸಾಧ್ಯವಾಗುತ್ತದೆ. ಈ ಬಾರಿ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ಬಳಿಕ ಕ್ಷೇತ್ರದ ರಸ್ತೆ, ಸೇತುವೆ ನಿರ್ಮಾಣಕ್ಕೆ ಸಾಕಷ್ಟು ಅನುದಾನ ಒದಗಿಸಿ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದ ತೃಪ್ತಿಯಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಆರ್.ಐ.ಡಿ.ಎಫ್ -೧೭ ಯೋಜನೆಯಡಿ ಕೆ.ಆರ್.ಐ. ಡಿ.ಎಲ್ ಸಂಸ್ಥೆಯಿಂದ ನಿರ್ಮಿಸಿದ ಕೆರ್ಗಾಲ್ ಗ್ರಾಮ ಪಂಚಾಯಿತಿನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸರ್ಕಾರ ಮೀಸಲಾತಿ ಪದ್ದತಿ ಜಾರಿಗೊಳಿಸಿರುವುದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿ ಅಧಿಕಾರ ನಡೆಸುವಂತಾಗಿದೆ. ಗ್ರಾಮ ಪಂಚಾಯತ್ ಗ್ರಾಮಸ್ಥರ ಮನೆಯಾಗಿದ್ದು, ಗ್ರಾಮಸಭೆಯಲ್ಲಿ ಗ್ರಾಮದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಂಡಾಗ ಗ್ರಾಮದ ಅಭಿವೃದ್ದಿ ಸಾಧ್ಯ ಎಂದು ಹೇಳಿದರು. ಗ್ರಾಪಂ ಅಧ್ಯಕ್ಷೆ ಸೋಮು ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಗೌರಿ ದೇವಾಡಿಗ, ತಾಪಂ ಸದಸ್ಯರಾದ ಜಗದೀಶ ದೇವಾಡಿಗ, ತ್ರಾಸಿ ರಾಜು ದೇವಾಡಿಗ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಾನವೀಯ ಹಾಗೂ ಭಾವನಾತ್ಮಕ ಸಂಬಂಧಗಳ ಕೊರತೆಯ ನಡುವೆ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಕೌಟುಂಬಿಕ ವ್ಯವಸ್ಥೆಗಳ ಅರಿವು ಮೂಡಿಸುವ ಜತೆಗೆ ಸಂಘಟನೆಯನ್ನು ಬಲಪಡಿಸುವ ಅನಿವಾರ್ಯತೆಯಿದೆ. ಕ್ರೀಯಾತ್ಮಕ ಚಟುವಟಿಕೆಗಳಿಂದ ಸಂಘಟನೆಯ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯ ಎಂದು ಲಾವಣ್ಯ ಕಲಾಕುಟುಂಬದ ಹಿರಿಯ ಕಲಾವಿದ ಬಿ. ಮಾಧವ ರಾವ್ ಹೇಳಿದರು. ಬೈಂದೂರು ದೇವಾಡಿಗರ ಒಕ್ಕೂಟ ಇವರ ವತಿಯಿಂದ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ನಡೆದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘಟನೆ ಅತೀ ಮುಖ್ಯವಾಗಿದ್ದು, ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಆಚರಣೆ, ಅನುಭವ, ಸಮೂಹ ಜೀವನ ಹಾಗೂ ಸಂಸ್ಕಾರ ನಮ್ಮ ಸಮಾಜದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು. ಸಂಘದ ಅಧ್ಯಕ್ಷ ಕೆ. ಜೆ. ಸುಬ್ಬ ದೇವಾಡಿಗ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ವತಿಯಿಂದ ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ನಿದೇರ್ಶಕ ಮಂಜು ದೇವಾಡಿಗ, ನಾರಾಯಣ ದೇವಾಡಿಗ ಕೂಡ್ಲು, ದುರ್ಗಾ ದೇವಾಡಿಗ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ಇದರ ಶ್ರೀರಾಮ ಗೃಹ ನಿರ್ಮಾಣ ಯೋಜನೆಯ ಐದನೇ ಮನೆಯನ್ನು ಬೈಂದೂರು-ಬಾಡ ನಿವಾಸಿ ಗಿರಿಜಾ ಸುಬ್ರಾಯ ಶೇರೆಗಾರ್ ಇವರಿಗೆ ಆಡಳಿತ ಟ್ರಸ್ಟಿ ಬಿ ರಾಮಕೃಷ್ಣ ಶೇರೆಗಾರ್ ಭಾನುವಾರ ಹಸ್ತಾಂತರಿಸಿದರು. ಈ ಸಂದರ್ಭ ಬೈಂದೂರು ರಾಮಕ್ಷತ್ರಿಯ ಸಮಾಜದ ಅಧ್ಯಕ್ಷ ಬಿ. ಗೋಪಾಲ ನಾಯ್ಕ್, ಟ್ರಸ್ಟಿಗಳಾದ ಜಯಾನಂದ ಹೋಬಳಿದಾರ್, ಕೆ. ಜಿ. ನಾಗಪ್ಪ ಶೇರುಗಾರ್, ಅಶೋಕ ಕುಮಾರ್ ಬಾಡ, ಬಿ. ಶ್ರೀಧರ್, ಶಶಿಧರ ನಾಯಕ್, ವೆಂಕಟರಮಣ ಬಿಜೂರು, ನಾಗರಾಜ ಬಿ., ಸೀತಾ ಶ್ರೀನಿವಾಸ, ಬಿ. ಶ್ರೀನಿವಾಸ ಶೇರುಗಾರ್, ಎನ್. ವಿಶ್ವೇಶ್ವರ, ಸುಧಾಕರ ಹೊಸಾಡು, ಸಂಚಾಲಕರಾದ ಆನಂದ ಮದ್ದೋಡಿ, ಕೇಶವ ನಾಯಕ್ ಬಿಜೂರು, ವೆಂಕಟರಮಣ ಟಿ., ಕುಂದಾಪುರ ಶ್ರೀರಕ್ಷಾ ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿ ರಾಧಾಕೃಷ್ಣ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಕ್ವಾಡಿ ಗುರುಕುಲ ಶಾಲೆಯಲ್ಲಿ ಪೂರ್ವ ಪ್ರಾರ್ಥಮಿಕ ಮಕ್ಕಳ ಮೊದಲ ದಿನದ ಸಂಭ್ರಮವನ್ನು ವಿಶೇಷವಾಗಿ ಆಚರಿಸಲಾಯಿತು. ಪುಟಾಣಿಗಳೆಲ್ಲರೂ ಬೇಸಿಗೆಯ ರಜೆಯನ್ನು ಕಳೆದು ತಮ್ಮ ಪುಟ್ಟ-ಪುಟ್ಟ ಹೆಜ್ಜೆಯೊಂದಿಗೆ ಶಾಲೆಯತ್ತಾ ಬರಲಾರಂಭಿಸಿದ್ದರು. ಆದರೆ ಕೆಲವು ಮಕ್ಕಳು ನಗುತ್ತಿದ್ದರೆ, ಇನ್ನು ಕೆಲವರು ತಮ್ಮ ಅಮ್ಮನ ತೋಳಿನಿಂದ ಕೆಳಗಿಳಿಯಲು ಅಳುತ್ತಿದ್ದರು. ಅವರನೆಲ್ಲ ಸಮಾಧಾನಿಸಿ ಮೊಂಟೆಸ್ಸರಿ ಬಳಿ ಕರೆತಂದಾಗ ಒಮ್ಮಗೆ ಎಲ್ಲರೂ ಸ್ತಬ್ಧರಾಗಿ ನಿಂತುಕೊಂಡು ಶಾಲಾ ಕಟ್ಟಡವನ್ನು ನೋಡಲಾರಂಭಿಸಿದರು. ಕಾರಣ ಇಷ್ಟೇ, ಅವರೆಲ್ಲರನ್ನು ಸ್ವಾಗತಿಸಲು ಶಾಲಾ ಕಟ್ಟಡವನ್ನು ರಂಗು-ರಂಗಿನ ಬಣ್ಣಗಳಿಂದ ಅಲಂಕೃತಗೊಳಿಸಲಾಗಿತ್ತು. ನಗುಮುಖದ ಶಿಕ್ಷಕಿಯರು ಪುಟಾಣಿಗಳನ್ನು ಪ್ರೀತಿಯಿಂದ ಒಳಗಡೆ ಬರಮಾಡಿಕೊಡರು. ಪುಟಾಣಿಗಳು ಒಳಾವರಣ ಪ್ರವೇಶಿಸುತ್ತಿದ್ದಂತೆ ಸುಮಧುರ ಶಿಶುಗೀತೆಗಳ ಸಂಗೀತದ ಸಿಂಚನದ ಜೊತೆಗೆ ಸುಂದರವಾಗಿ ಜೋಡಿಸಲಾಗಿದ್ದ ಆಟಿಕೆಗಳನ್ನು ನೋಡುತ್ತಿದ್ದಂತೆ ತಮ್ಮ ಅಳುವನ್ನು ನಿಲ್ಲಿಸಿ ಆಟದಲ್ಲಿ ತಲ್ಲೀನರಾದರು. ಅದೇ ಸಮಯಕ್ಕೆ ಶಾಲಾ ವತಿಯಿಂದ ಪುಟಾಣಿಗಳಿಗೆ ಸಿಹಿತಿನಿಸು ಹಂಚಲಾಯಿತು, ಹಾಗೂ ಶಿಕ್ಷಕಿಯರು ಮಕ್ಕಳೊಂದಿಗೆ ಸೇರಿ ಹಾಡುತ್ತಾ, ನೃತ್ಯ ಮಾಡುತ್ತಾ ಮೊದಲ ದಿನದ ಸಂಭ್ರಮವನ್ನು ಆಚರಿಸಿದರು. ಈ ಸಂದರ್ಭದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿವಾಹವೆಂಬುದು ಧರ್ಮ, ಅರ್ಥ, ಕಾಮಗಳನ್ನು ಅತಿಕ್ರಮಿಸಿ ಹೊಗುವುದಿಲ್ಲ ಎಂಬ ನೆಲೆಯಲ್ಲಿ ಸಂದೇಶ ಸಾರುವ ಪವಿತ್ರಬಂಧನವಾಗಿದೆ. ಪತಿ-ಪತ್ನಿಯರ ಸಂಬಂಧ ಪಾವಿತ್ರತೆಯ ಭಾವವಿದ್ದು, ಮೌಲ್ಯಾಧಾರಿತವಾಗಿದೆ. ವಿವಾಹ ಇಲ್ಲದಿದ್ದರೆ ಕುಟುಂಬ ಕಳಚುವ ಸಾಧ್ಯತೆಗಳಿದೆ ಎಂದು ಸ್ವರ್ಣವಲ್ಲಿ ಮಠಾಧೀಶ ಶ್ರೀ ಗಂಗಾಧರೇಂದ್ರ ಸ್ವಾಮೀಜಿ ಹೇಳಿದರು. ಬೈಂದೂರು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಬೈಂದೂರು ರಾಮಕ್ಷತ್ರಿಯ ಸಮಾಜದ ೧೨ನೇ ವರ್ಷದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ, ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಧರ್ಮದ ಕೇಂದ್ರವಾದ ಕುಟುಂಬವು ನಿಜವಾದ ವ್ಯವಸ್ಥೆಯ ಹೆಬ್ಬಾಗಿಲು. ಗ್ರಹಸ್ಥ ಜೀವನದಲ್ಲಿ ಧರ್ಮದ ಮೂಲಕ ಸಾಗಿದಾಗ ಸುಖ, ಶಾಂತಿ ಹಾಗೂ ನೆಮ್ಮದಿ ಶಾಶ್ವತವಾಗಿರುತ್ತದೆ. ಶ್ರೀರಾಮನ ಆದರ್ಶ ಅನುಕರಣೀಯವಾಗಿದ್ದು, ರಾಮದೇವರ ಕಲ್ಯಾಣೋತ್ಸದಲ್ಲಿ ಹಲವಾರು ರೀತಿಯ ಪ್ರಯೋಜನಗಳಿದ್ದರೂ, ಸಮಾಜ ಸುಭೀಕ್ಷೆಯಾಗುತ್ತದೆ. ಇದರಿಂದ ನಾವು ನಮ್ಮ ಜೀವನದಲ್ಲಿ ಆದರ್ಶ, ತತ್ವ ಹಾಗೂ ಉತ್ತಮ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಇತ್ತೀಚಿಗೆ ಸಮಸ್ತ ಹಿಂದು ಸಮಾಜ ನಾಲ್ಕು ಅಂಶಗಳಲ್ಲಿ ತಪ್ಪು ಹೆಜ್ಜೆ ಇಡುತ್ತಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗುರುಕುಲ ಪಬ್ಲಿಕ್ ಸ್ಕೂಲ್ನಲ್ಲಿ ಮಳೆ ನೀರಿನ ಸಂರಕ್ಷಣೆ ಬಗ್ಗೆ ಕಾರ್ಯಕ್ರಮ ಮಂಗಳವಾರ ಜರುಗಿತು. ’ಅಡಿಕೆ’ ಪತ್ರಿಕೆ ಸಂಪಾದಕರಾದ ಶ್ರೀ ಪಡ್ರೆರವರು ’ಮಳೆ ನೀರಿನ ಸಂರಕ್ಷಣೆ ’ ಹೇಗೆ ಸಾಧ್ಯ ಅದರ ವಿಧಿ ವಿಧಾನವನ್ನು ’ಮುತ್ತಿನ ಸರದ ಪೋಣಿಕೆ’ಯಂತೆ ವಿವರಿಸಿದರು. ಪ್ರತಿಯೊಂದು ಮನೆಯ ಮೇಲೆ ಚಾವಣಿಯಿಂದ ಬಂದ ನೀರಿನ ಸಂರಕ್ಷಣೆ ಹೇಗೆ ಮಾಡಬೇಕು. ಇದರಿಂದ ಕೆಲವು ವರ್ಷಗಳ ವರೆಗೆ ಬಳಸಲು ಸಾಧ್ಯ ಎಂದು ತಿಳಿಸಿದರು. ಸಿಮೆಂಟ್ ರೋಡ್ನಿಂದ ಆಗುವ ಅನಾನುಕೂಲಕೂಲಗಳೊಂದಿಗೆ ಅಲ್ಲಿಯೇ ನೀರಿನ ಇಂಗುವಿಕೆಯ ಮಾರ್ಗವನ್ನು ಕಂಡುಕೊಳ್ಳುವ ಸಲಹೆಯನ್ನು ಕೊಟ್ಟು ಪ್ರತಿಯೊಂದು ಸ್ಥಳದಲ್ಲಿ ಇಂಗು ಗುಂಡಿಯನ್ನು ಅಳವಡಿಸಿದರೆ ನೀರಿನ ಸಂರಕ್ಷಣೆ ಸಾಧ್ಯ. ಹಾಗೆಯೇ ನಿಮ್ಮ ಮನೆಗಳಲ್ಲಿಯ ನೀರಿನ ಸಂರಕ್ಷಣೆಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ಕಿವಿ ಮಾತನ್ನು ಹೇಳಿದರು. ಮಕ್ಕಳ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿ. ಮಕ್ಕಳಲ್ಲಿರುವ ಮಳೆ ನೀರಿನ ಸಂರಕ್ಷಣೆ ಬಗ್ಗೆ ಇರುವ ಗೊಂದಲವನ್ನು ನಿವಾರಿಸಿದರು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮಳೆ ನೀರಿನ ಸಂರಕ್ಷಣೆ ಅತ್ಯಮೂಲ್ಯವಾದುದು, ಇದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೇಸಿಐ ಕುಂದಾಪುರ ಸಿಟಿ ವತಿಯಿಂದ ಕೋಡಿಯ ಶ್ರೀರಾಮ ವಿದ್ಯಾಕೇಂದ್ರಕ್ಕೆ ಕ್ರೀಡಾ ಸಾಮಾಗ್ರಿಯನ್ನು ವಿತರಿಸಲಾಯಿತು. ಶಾಲಾ ಮುಖ್ಯೋಪಧ್ಯಾಯಿನಿ ಮಮತಾ ಅವರಿಗೆ ಜೇಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ಶ್ರೀಧರ ಸುವರ್ಣ ಅವರು ಕ್ರೀಡಾ ಸಾಮಾಗ್ರಿಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜೇಸಿಐ ಕುಂದಾಪುರ ಸಿಟಿಯ ಪೂರ್ವಾಧ್ಯಕ್ಷ ಗಿರೀಶ್ ಹೆಬ್ಬಾರ್, ಕಾರ್ಯದರ್ಶಿ ಪ್ರಶಾಂತ ಹವಾಲ್ದಾರ್ ಇನ್ನಿತರರು ಉಪಸ್ಥಿತರಿದ್ದರು.
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಮನೆಯ ತುಂಬೆಲ್ಲಾ ಪಟ ಪಟನೆ ಮಾತನಾಡುತ್ತಾ, ಓದಿನೊಂದಿಗೆ ಕೃಷಿ, ಹೈನುಗಾರಿಕೆಯಲ್ಲಿ ಅತ್ಯುತ್ಸಾಹದಿಂದ ತೊಡಗಿಕೊಂಡು ಕುಟುಂಬಕ್ಕೆ ಒತ್ತಾಸೆಯಾಗಿ ನಿಂತಿದ್ದ ಆ ಯುವತಿಯರೀರ್ವರೂ ಸಾವಿನಲ್ಲೂ ತನ್ನ ತಾಯಿಗೆ ಜೊತೆಯಾಗಿ ನಡೆದಿದ್ದಾರೆ. ಆ ಯುವತಿಯರೇ ಉಳುಮೆ ಮಾಡುತ್ತಿದ್ದ ಟಿಲ್ಲರ್, ದಿನವೂ ಹಾಲು ಕರೆಯುತ್ತಿದ್ದ ಆಕಳು ಮಾತ್ರ ಅವರು ಬಾರದ ಲೋಕಕ್ಕೆ ತೆರಳಿದ್ದಾರೆಂಬ ಅರಿವಿಲ್ಲದೇ ಮನೆಯ ಎದುರು ಕಾದು ಕುಳಿತಿವೆ. ಬೇಳೂರು ಗ್ರಾಮ ಪಂಚಾಯತ್ ದೇಲಟ್ಟು ನರಸಿಂಹ ಶೆಟ್ಟಿ ಅವರ ಕುಟುಂಬದಲ್ಲೀಗ ಅಕ್ಷರಶಃ ಸ್ಮಶಾನಮೌನ ಆವರಿಸಿಕೊಂಡಿದೆ. ಮಂಗಳವಾರ ಸಂಜೆಯ ತನಕವೂ ಮನೆಯಲ್ಲಿದ್ದ ಭಾರತಿ ಶೆಟ್ಟಿ ಹಾಗೂ ಅವರ ಇಬ್ಬರು ಮಕ್ಕಳಾದ ಪ್ರಥ್ವಿ ಹಾಗೂ ಪ್ರಜ್ಞಾ, ತಾವು ಪ್ರೀತಿಯಿಂದ ಮಾಡುತ್ತಿದ್ದ ಕಾಯಕದೊಂದಿಗೆ ವಿಧಿಯ ಕ್ರೂರಲೀಲೆಗೆ ಬಲಿಯಾದಂತಾಗಿದೆ. ಗದ್ದೆಗೆ ಬಿತ್ತನೆ ಮಾಡಲೆಂದು ಕೃಷಿ ಹೊಂಡದಲ್ಲಿ ನೆನೆ ಹಾಕಿದ್ದ ಬೀಜವನ್ನು ಮೇಲೆತ್ತಲು ತಾಯಿಯೊಂದಿಗೆ ತೆರಳಿದ್ದ ಮಕ್ಕಳು 5 ಚೀಲಗಳನ್ನು ಮೇಲೆತ್ತಿ ಕೊನೆಯ ಚೀಲವನ್ನು ಎಳೆದು ತರುವಾಗ ಅವಘಡ ಸಂಭವಿಸಿತ್ತು. ಮೂವರೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೆರೆಯಲ್ಲಿ ನೆನೆಹಾಕಿದ್ದ ಭತ್ತದ ಚೀಲಗಳನ್ನು ಮೇಲೆತ್ತುವ ವೇಳೆ ಆಯತಪ್ಪಿ ಬಿದ್ದ ತಾಯಿ ಹಾಗೂ ಅವರ ರಕ್ಷಣೆಗೆ ಧಾಮಿಸಿದ ಇಬ್ಬರು ಮಕ್ಕಳು ನೀರಿಗೆ ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ತಾಲೂಕಿನ ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೇಲಟ್ಟು ಎಂಬಲ್ಲಿ ನಡೆದಿದೆ. ದೇಲಟ್ಟು ದೇವಸ್ಥಾನ ಸಮೀಪದ ನರಸಿಂಹ ಶೆಟ್ಟಿ ಎಂಬುವವರ ಪುತ್ರಿ ಭಾರತಿ (45) ಹಾಗೂ ಅವರ ಇಬ್ಬರು ಮಕ್ಕಳಾದ ಪ್ರಥ್ವಿ ಶೆಟ್ಟಿ(21) ಹಾಗೂ ಪ್ರಜ್ಞಾ ಶೆಟ್ಟಿ (19) ಮೃತ ದುರ್ದೈವಿಗಳು. ಕೃಷಿಕರಾದ ಭಾರತಿ ಅವರ ಕುಟುಂಬ ಮಳೆಗಾಲ ಸನ್ನಿಹಿತವಾದ ಬೆನ್ನಲ್ಲೇ ಬಿತ್ತನೆ ಮಾಡುವ ಉದ್ದೇಶದಿಂದ ಬೀಜದ ಭತ್ತವನ್ನು ಮೊಳಕೆ ಬರಿಸುವ ಸಲುವಾಗಿ ಮನೆಯ ಸಮೀಪದ ಕೆರೆಯಲ್ಲಿ ನೆನೆಹಾಕಿದ್ದರು. ಸಂಜೆ ವೇಳೆಗೆ ಮಳೆಯಾಗಿದ್ದರಿಂದ ಬೀಜಗಳು ಹಾಳಗಬಹುದು ಎಂಬ ಕಾರಣಕ್ಕೆ ಕೆರೆಯಲ್ಲಿ ಹಾಕಲಾಗಿದ್ದ ಚೀಲಗಳನ್ನು ಮೇಲೆತ್ತಲು ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಕಾಲು ಜಾರಿ ಬಿದ್ದ ತಾಯಿ ಹಾಗೂ ಅವರನ್ನು ರಕ್ಷಿಸಲೆಂದು ತೆರಳಿದ್ದ ಮಕ್ಕಳಿಬ್ಬರೂ ಕೆರೆಯಲ್ಲಿ ಬಿದ್ದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಹಟ್ಟಿಯಂಗಡಿಯ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು ೨೦೧೬-೧೭ನೇ ಶೈಕ್ಷಣಿಕ ವರ್ಷದಲ್ಲೂ ನೂರಕ್ಕೆ ನೂರು ಫಲಿತಾಂಶವನ್ನು ಪಡೆಯುವುದರ ಮೂಲಕ ಶೈಕ್ಷಣಿಕವಾಗಿ ಯಶಸ್ಸನ್ನು ಗಳಿಸಿದೆ. ಕೇಂದ್ರಿಯ ಪಠ್ಯಕ್ರಮ ಆಧಾರಿತ ಶಿಕ್ಷಣದಲ್ಲಿ ಸತತವಾಗಿ ಹದಿನಾಲ್ಕನೆಯ ಬಾರಿಗೆ ಶೇ. ೧೦೦ ಫಲಿತಾಂಶವನ್ನು ದಾಖಲಿಸಿದ ಕುಂದಾಪುರ ತಾಲ್ಲೂಕಿನ ಏಕೈಕ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತಾಲ್ಲೂಕಿನ ರಾಜ್ಯ, ಸಿಬಿಎಸ್ಸಿ ಮತ್ತು ಐಸಿಎಸ್ಸಿ ಈ ಮೂರು ಪಠ್ಯಕ್ರಮಗಳ ಶಾಲೆಗಳ ಪೈಕಿ ಇಂತಹ ಸಾಧನೆಗೆ ಕೇವಲ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಭಾಜನವಾಗಿದೆ. ಪ್ರಸ್ತುತ ಬದಲಾಗುತ್ತಿರುವ ಶೈಕ್ಷಣಿಕ ಕಾಲಘಟ್ಟದಲ್ಲಿ ಯಾವುದೇ ರಾಜಿಯಿಲ್ಲದೇ ಮೂಲ ಪರಂಪರೆಯನ್ನು ಉಳಿಸಿಕೊಂಡು ಆಧುನಿಕ ಶಿಕ್ಷಣದಲ್ಲಿ ತನ್ನದೇ ಆದ ಅದ್ವಿತೀಯ ಛಾಪನ್ನು ಮೂಡಿಸಿಕೊಂಡು ಕಳೆದ ಇಪ್ಪತ್ತು ವರ್ಷಗಳಿಂದ ಕರ್ನಾಟಕ ರಾಜ್ಯದ ಅಗ್ರಪಂಕ್ತಿಯ ವಿದ್ಯಾಲಯವಾಗಿ ಬೆಳೆದು ಬಂದಿದೆ. ರಾಜ್ಯದ ಹಾಗೂ ಹೊರರಾಜ್ಯದ ಸುಮಾರು ೧೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿರುವ ಈ ಶಾಲೆಯು ಸತತವಾಗಿ…
