Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಪಂಚಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದ್ದು, ಪ್ರಸ್ತುತ ಗೃಹಜ್ಯೋತಿ ಯೋಜನೆಯ ಪರಿಷ್ಕರಣೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಗೃಹಲಕ್ಷ್ಮೀ ಯೋಜನೆಯ ಪರಿಷ್ಕರಣೆಯೂ ಆಗಲಿದ್ದು ಅಧಿಕಾರಿಗಳು ಯಾವುದೇ ಫಲಾನುಭವಿ ತಪ್ಪಿ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು  ಕು೦ದಾಪುರ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌. ಹರಿಪ್ರಸಾದ್‌ ಶೆಟ್ಟಿ ಹೇಳಿದರು. ಅವರು ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೆಚ್ಚು ಅನುಭವ ಇರುವ ಸಿಬ್ಬಂದಿಗಳನ್ನು ಈ ಪರಿಷ್ಕರಣೆ ಕಾರ್ಯದಲ್ಲಿ ನಿಯೋಜನೆ ಮಾಡುವ ಮೂಲಕ ಯಾರಿಗೂ ಸಮಸ್ಯೆಯಾಗದಂತೆ ಪರಿಷ್ಕರಣೆ ಪ್ರಕ್ರಿಯೆ ನಡೆಯಬೇಕು ಎಂದರು. ಗೃಹಜ್ಯೋತಿ ಯೋಜನೆಯ ಪರಿಷ್ಕರಣೆ ನಡೆಯುತ್ತಿದ್ದು, ಈ ಯೋಜನೆಯಡಿ ಒಟ್ಟು 73868 ನೊಂದಣಿಯಾಗಿದ್ದು, 48322 ಪೂರ್ಣ ಪರಿಷ್ಕರಣೆಯಾಗಿದ್ದು, 25546 ಅರ್ಜಿಗಳು ಬಾಕಿ ಇದೆ. ಬಾಕಿ ಇರುವ ಅರ್ಜಿಗಳ ಪೈಕಿ ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಇರುವ ಸಾಧ್ಯತೆಗಳಿರುತ್ತದೆ ಅಲ್ಲದೆ ಮೊಬೈಲ್‌ ಇಲ್ಲದಿರುವವರು ಇರುವ ಸಾಧ್ಯತೆ ಇರುತ್ತದೆ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ಕರಾವೇ ನಿರಂತರವಾಗಿ ಕಾರ್ಯೋನ್ಮುಖವಾಗಿದ್ದು ಈ ನಿಟ್ಟಿನಲ್ಲಿ ವಿವಿಧ ಜಿಲ್ಲೆಗಳಲ್ಲಿ ಈ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಕರಾವೇ ಉಡುಪಿ ಜಿಲ್ಲಾ ಗೌರವಾಧ್ಯಕ್ಷ ಅನ್ಸಾರ್ ಅಹಮದ್ ಹೇಳಿದರು. ಅವರು ಶುಕ್ರವಾರ ಇಲ್ಲಿನ ಹಂಗಾರಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ದೂಳಂಗಡಿ) ಇಲ್ಲಿಗೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ಉಡುಪಿ ಜಿಲ್ಲೆ ಹಾಗೂ ಕರವೇ ಮಹಿಳಾ ಘಟಕದ ವತಿಯಿಂದ ಎಲ್ ಕೆಜಿ ಯುಕೆಜಿ ಮಕ್ಕಳಿಗೆ ಕುರ್ಚಿ, ಟೇಬಲ್, ಆಟಿಕೆ ಪರಿಕರ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರಕಾರಿ ಶಾಲೆ ಎಂಬ ಕೀಳರಿಮೆ ಸಲ್ಲ ಬದಲಾಗಿ ಆಯಾ ಭಾಗಗಳ ಕನ್ನಡ ಮಾಧ್ಯಮ ಶಾಲೆಗಳ ಉಳಿಸುವ ಕಾರ್ಯವನ್ನು ದಾನಿಗಳು ಸಂಘಸಂಸ್ಥೆಗಳ ಮೂಲಕ ಆಗಲಿ ಎಂದರಲ್ಲದೆ ಕರ್ನಾಟಕ ರಕ್ಷಣಾ ವೇದಿಕೆ ಈ ಕಾರ್ಯದಲ್ಲಿ ನಿರತವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕರವೇ ರಾಜ್ಯ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಅವರ ನೇತೃತ್ವ ಹಾಗೂ ರಾಜ್ಯ ಸಂಚಾಲಕರಾದ ಸಿ.ಎಮ್.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಸ್ಥಳೀಯ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ವಿಶ್ರಾಂತಿ ಪಡೆಯುತ್ತಿದ್ದಾಗ ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ಸಾಸ್ತಾನದಲ್ಲಿ ಸಂಭವಿಸಿದೆ. ಕಾವಾಡಿ ಗ್ರಾಮದ ನಿವಾಸಿ ಕರುಣಾಕರ ಪೂಜಾರಿ (60) ಮೃತಪಟ್ಟ ವ್ಯಕ್ತಿ. ಅವರು ಜುಲೈ 23ರಂದು ಬೆಳಿಗ್ಗೆ ಎಂದಿನಂತೆ ಹೋಟೆಲ್‌ನಲ್ಲಿ ತಿಂಡಿ ತಯಾರಿಸಿದ ಬಳಿಕ, ತನಗೆ ಸುಸ್ತಾಗುತ್ತಿದೆ ಎಂದು ಸಹೋದ್ಯೋಗಿ ಬಳಿ ತಿಳಿಸಿ ವಿಶ್ರಾಂತಿ ಕೊಠಡಿಗೆ ತೆರಳಿದ್ದರು. ಬಹಳ ಸಮಯವಾದರೂ ಅವರು ಹೊರಗೆ ಬಾರದಿದ್ದಾಗ ಸಹೋದ್ಯೀಗಿಗಳು ಕರೆಯಲು ತೆರಳಿದ್ದಾರೆ. ಈ ವೇಳೆ ಕರುಣಾಕರ ಅವರು ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ, ತಕ್ಷಣ ಅವರನ್ನು ಬ್ಯಹ್ಮಾವರ ಸರ್ಕಾರಿ ಆಸ್ಪತ್ರಗೆ ಕರೆದೊಯ್ಯಲಾಯಿತು. ಆದರೆ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಲಾರಿಯೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರರೊಬ್ಬರು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಬೈಂದೂರಿನ ಹೊಸ ಬಸ್‌ ನಿಲ್ದಾಣದ ಜಂಕ್ಷನ್‌ ಬಳಿ ಸಂಭವಿಸಿದೆ. ಕಳವಾಡಿ ನಿವಾಸಿ ಸುಧಾಕರ ಶೆಟ್ಟಿ (78) ಮೃತಪಟ್ಟ ವ್ಯಕ್ತಿ . ಅವರು ಒತ್ತಿನೆಣೆ ಕಡೆಯಿಂದ ಬೈಂದೂರು ಕಡೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ, ಹಿಂಬದಿಯಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತೀವ್ರ ಗಾಯಗೊಂಡ ಅವರನ್ನು ತಕ್ಷಣವೇ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ನರೇಂದ್ರ ಅವರ ಸಾಹಿತ್ಯದಲ್ಲಿನ ವೈವಿಧ್ಯತೆ ಮತ್ತು ಆಕರ್ಷಣೆ  ಅಭಿನಂದನೀಯ. ನಮ್ಮ ಹತ್ತಿರದಲ್ಲಿ ಇರುವ ಇಂತಹ ಯುವ ಲೇಖಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಸಮಾಜ ಮಾಡಬೇಕಿದೆ ಎಂದು ಗಂಗೊಳ್ಳಿಯ ಶ್ರೀ ನಾರಾಯಣ ಗುರು ಜನ ಸೇವಾ ಬಳಗದ ಅಧ್ಯಕ್ಷ ಜಿ. ಗೋಪಾಲ ಪೂಜಾರಿ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಎಸ್‌.ವಿ ಕಾಮರ್ಸ್ ಕ್ಲಬ್ ಮತ್ತು ಸಂಜೀವ ಪಾರ್ವತಿ ಪ್ರಕಾಶನ ಗಂಗೊಳ್ಳಿಯ ಆಶ್ರಯದಲ್ಲಿ ನಡೆದ ಲೇಖಕ ನರೇಂದ್ರ ಎಸ್. ಗಂಗೊಳ್ಳಿ ಅವರ ಏಳನೆಯ ಪುಸ್ತಕ ‘ರೂಮಿನೊಳಗಿಂದ’ ಕಥಾ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಸರಸ್ವತಿ ವಿದ್ಯಾಲಯ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ. ಅಧ್ಯಕ್ಷತೆ ವಹಿಸಿದ್ದರು. ಲೇಖಕ ರಾಘವೇಂದ್ರ ಬಿಲ್ಲವ ಪುಸ್ತಕವನ್ನು ಪರಿಚಯಿಸಿದರು.  ಗಂಗೊಳ್ಳಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾಘವೇಂದ್ರ ದೇವಾಡಿಗ ಶುಭ ಹಾರೈಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಸುಗುಣ ಆರ್.ಕೆ ಮತ್ತು ವಿದ್ಯಾರ್ಥಿ ಪ್ರತಿನಿಧಿ ಭಾವನಾ ಉಪಸ್ಥಿತರಿದ್ದರು.  ಲೇಖಕ ನರೇಂದ್ರ ಎಸ್. ಗಂಗೊಳ್ಳಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಸಾನಿಕ ಮತ್ತು ಐಶು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಉಡುಪಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಪ್ರತಿನಿಧಿಗಳ ನೇರ ನೇಮಕಾತಿಗೆ ಸಂದರ್ಶನವು ಆಗಸ್ಟ್ 19 ರಂದು ಬೆಳಗ್ಗೆ 10.15 ಕ್ಕೆ ಉಡುಪಿಯ ಪ್ರಧಾನ ಅಂಚೆ ಕಚೇರಿಯ ಮೊದಲ ಮಹಡಿಯಲ್ಲಿರುವ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನಡೆಯಲಿದ್ದು, ಆಸಕ್ತ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ, 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಅರ್ಜಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ನಿವೃತ್ತ ಸರ್ಕಾರಿ / ಖಾಸಗಿ ನೌಕರರು, ಸ್ವ-ಸಹಾಯ ಸಂಘದ ಸದಸ್ಯರು, ನಿರುದ್ಯೋಗಿಗಳು, ಸ್ವಯಂ ಉದ್ಯೋಗ ನಿರತರು, ಅರೆಕಾಲಿಕ ಉದ್ಯೋಗಿಗಳು, ಮಾಜಿ ವಿಮಾ ಪ್ರತಿನಿಧಿಗಳು/ ಸಲಹೆಗಾರರು, ಮಾಜಿ ಸೈನಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮಂಡಳಿ ಸದಸ್ಯರು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ನಿವೃತ್ತ ಶಿಕ್ಷಕರು, ಪಿ.ಓ.ಎಸ್.ಬಿ ಏಜೆಂಟರು ಮೊದಲಾದವರಿಗೆ ಅವಕಾಶವಿದ್ದು, ಉತ್ತಮ ಸಂವಹನ ಕೌಶಲ್ಯ ಹಾಗೂ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿ ಅಥವಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್‌ಕಟ್ಟೆ ( ಪ್ರೌಢ ಸ್ಕೂಲ್ ) ಇಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಇದರ ಮತ್ತು ಶಿವ ಶಾಂತಿ ಲಯನ್ಸ್ ಕ್ಲಬ್ ಮೊಳಹಳ್ಳಿ ಇದರ ಜಂಟಿ ಆಶ್ರಯದಲ್ಲಿ “ಮಾನವ ಕಳ್ಳ ಸಾಗಣೆ ಜಾಗ್ರತಿ ಶಿಬಿರ “ಕಾರ್ಯಕ್ರಮವು ಶುಕ್ರವಾರ  ಜರುಗಿತು. ಕಾರ್ಯಕ್ರಮದ ಅಧ್ಯಕ್ಷರಾದ ಕಾಲೇಜಿನ ಉಪ ಪ್ರಿನ್ಸಿಪಾಲರಾದ  ಹಾಗೂ ಶಿವಶಾಂತಿ ಲಯನ್ಸ್ ಕ್ಲಬ್ ಮೊಳಹಳ್ಳಿ ಇದರ ಅಧ್ಯಕ್ಷರಾದ  ಎಂ. ಕರುಣಾಕರ ಶೆಟ್ಟಿ ವಹಿಸಿದರು. ಕಾರ್ಯಕ್ರಮ ಉದ್ಘಾಟನೆಯನ್ನು ಎಸ್‌ಡಿಎಮ್‌ಸಿ ಉಪಾಧ್ಯಕ್ಷರಾದ ಗೌತಮ್ ಶೆಟ್ಟಿ ಉದ್ಘಾಟಿಸಿದರು. ನಂತರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಾಘವೇಂದ್ರ ಎಸ್. ವಕೀಲರು ಹಾಗೂ ಕಾನೂನು ನೆರವು ಅಭಿರಕ್ಷಕರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಅವರು ಬಹಳ ಸರಳವಾಗಿ ವಿದ್ಯಾರ್ಥಿಗಳಿಗೆ ಮಾನವ ಕಳ್ಳ ಸಾಗಾಣಿಕೆಯ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಆಮಿಶ ತೋರಿಸಿ ಕದ್ದೋವೈದು ವೇಶ್ಯವಾಟಿಕೆ, ಬಾಲಕಾರ್ಮಿಕ  ಪದ್ಧತಿಗೆ ದೂಡುವಾ ಸ0ಭವ ವಿದ್ದು ಜಾಗ್ರತಿ ವಹಿಸುವಂತೆ ಸಲಹೆ, ವಿದ್ಯಾರ್ಥಿಗಳ  ಹಕ್ಕುಗಳು ಮತ್ತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಲಾ – ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳಲ್ಲಿ ಊರಿನ ಜೀವಂತಿಕೆ ಅಡಗಿದೆ. ಇಂತಹ ಚಟುವಟಿಕೆಗಳ ಮೂಲಕ ಊರು ಭಾಷೆಯ ಚಲನಶೀಲತೆ ಹೆಚ್ಚಿಸುವ ಕಾರ್ಯ ಶ್ಲಾಘನಾರ್ಹ ಎಂದು ಸಾಹಿತಿ, ವಾಗ್ಮಿ ಓಂ ಗಣೇಶ್‌ ಉಪ್ಪುಂದ ಹೇಳಿದರು. ಅವರು ಉಪ್ಪುಂದದ ತಮ್ಮ ನಿವಾಸದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕುಂದಾಪ್ರ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಬೈಂದೂರು ಆಯೋಜನೆಯಲ್ಲಿ ಹಮ್ಮಿಕೊಂಡ ಮೂರನೇ ವರ್ಷದ “ಗಮ್ಮತ್ತ್” ಕಾರ್ಯಕ್ರಮದ ಪೋಸ್ಟರ್ ಅನಾವರಣಗೊಳಿಸಿ ಮಾತನಾಡಿದರು. ಕಳೆದೆರಡು ವರ್ಷಗಳಿಂದ ಗಮ್ಮತ್ತ್‌ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಈ ಭಾರಿಯೂ ಇನ್ನಷ್ಟು ಯಶಸ್ಸು ಕಾಣುವಂತಾಗಲಿ ಎಂದು ಹಾರೈಸಿದರು. ಬೈಂದೂರಿನ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ ಪ್ರಾಸ್ತಾವಿಕ ಮಾತನಾಡಿ, ಕುಂದಾಪ್ರ ಕನ್ನಡ ದಿನದ ಅಂಗವಾಗಿ ಗಮ್ಮತ್ತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಗಸ್ಟ್ 23ರ ಭಾನುವಾರ ಬೆಳಿಗ್ಗೆಯಿಂದ ಸಂಜೆಯ ತನಕ ಯಡ್ತರೆ ನೆಲ್ಯಾಡಿ ಬೈಲ್ ಹಾಗೂ ಜೆ.ಎನ್.ಆರ್ ಹಾಲ್ನಲ್ಲಿ ದಿನವಿಡಿ ಕಾರ್ಯಕ್ರಮಗಳು ಜರುಗಲಿದೆ. ಈ ಭಾರಿ ಇನ್ನಷ್ಟು ಕ್ರೀಡೆ, ಸಾಹಿತ್ತಿಕ ಕಾರ್ಯಕ್ರಮಗಳನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜು.24: ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಅಂಗನವಾಡಿ, ಎಲ್ಲಾ ಶಾಲೆಗಳು, ಪಿಯು ಕಾಲೇಜು, ಐಟಿಐ ಹಾಗೂ ಡಿಪ್ಲೊಮಾ  ವಿದ್ಯಾರ್ಥಿಗಳಿಗೆ ಜುಲೈ 25ರ ಶನಿವಾರ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ. ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯು ಕಾಲೇಜು, ಐಟಿಐ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರ ಅವರು ಆದೇಶಿಸಿದ್ದಾರೆ. ಪದವಿ, ಇಂಜಿನಿಯರಿಂಗ್‌, ಸ್ನಾತಕೋತ್ತರ ಪದವಿ, ವಿದ್ಯಾರ್ಥಿಗಳಿಗೆ ರಜೆ ಘೋಷಿಸಿಲ್ಲ ಆದರೆ ಹಾಜರಾತಿ ಕಡ್ಡಾಯವಲ್ಲ. ಸೂಕ್ತ ಮನ್ನೆಚ್ಚರಿಕೆ ವಹಿಸುವಂತೆ ಅವರು ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ವ್ಯಾಪ್ತಿಯಲ್ಲಿ ಬರುವ ಬನ್ನಾಡಿ, ವಡ್ಡರ್ಸೆ ಸೇರಿದಂತೆ ಕೋಟ ಹದಿನಾಲ್ಕು ಗ್ರಾಮಗಳಲ್ಲಿ ವಾಸವಾಗಿರುವ ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಗತ್ಯ ಇರುವ ಸಮಾಜ ಬಾಂಧವರು ಅಜಿ೯ಗಳನ್ನು ಶ್ರೀ ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ ಇದರ ಕಛೇರಿಯಲ್ಲಿ ಪಡೆದು, ಭತಿ೯ ಮಾಡಿ, ಇದೇ ಆಗಸ್ಟ್ ತಿಂಗಳ 31 ರ ಒಳಗೆ ಶ್ರೀ ದೇವಳದ ಕಛೇರಿಯಲ್ಲಿ ಹಿಂದಿರುಗಿಸುವಂತೆ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ  9880390905 ಇದನ್ನು ಸಂಪರ್ಕಿಸಲು ಕೋರಲಾಗಿದೆ.

Read More