ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಪ್ರಧಾನ ಕಛೇರಿಗೆ ಉತ್ತರ ಕನ್ನಡ ಜಿಲ್ಲೆಯ(ಶಿರಸಿ) ಸಿದ್ದಾಪುರ ತಾಲೂಕಿನ ವ್ಯಾಪ್ತಿಯ ಎಲ್ಲಾ ವ್ಯವಸಾಯ ಸೇವಾ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಸಿಬ್ಬಂದಿ ವರ್ಗದವರು ಅಧ್ಯಯನ ಭೇಟಿ ನೀಡಿದರು. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಇವರು ಸಂಘದ ಕಾರ್ಯಚಟುವಟಿಕೆ, ಅಭಿವೃದ್ಧಿ, ಠೇವಣಿಗಳು, ವ್ಯವಹಾರಿಕ ಸಾಲಗಳು, ವಾಹನ ಸಾಲ, ಬೆಳೆಸಾಲಗಳ, ಅಲ್ಪಾವಧಿ ದೀರ್ಘಾವಧಿ ಸಾಲಗಳ ವಿತರಣೆ ಹಾಗೂ ಮರುಪಾವತಿ ಕ್ರಮ ಮುಂತಾದುವುಗಳ ಬಗ್ಗೆ ವಿವರಿಸಿದರು. ಸಂಘದ ಎಲ್ಲಾ ಸದಸ್ಯರನ್ನು, ಗ್ರಾಹಕರನ್ನು ಗೌರವಿಸಿ, ಅತೀ ಶೀರ್ಘದಲ್ಲೇ ಸೇವೆ ನೀಡುವಲ್ಲಿ ಸೇವಾ ಸಹಕಾರಿ ಸಂಘಗಳು ಮುಂದಾಗಬೇಕು ಆಗ ಮಾತ್ರ ಸಂಘವು ಯಶಸ್ವಿಹೊಂದಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಕೆ. ಮೋಹನ ಪೂಜಾರಿ, ಬಿ.ಎಸ್. ಸುರೇಶ ಶೆಟ್ಟಿ, ಗುರುರಾಜ ಹೆಬ್ಬಾರ್ ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸತೀಶ ಪೈ ಸ್ವಾಗತಿಸಿ ಬರಮಾಡಿಕೊಂಡರು. ಸಂಘದ ಪ್ರಧಾನ ವ್ಯವಸ್ಥಾಪಕರಾದ ಕೆ. ಹಾವಳಿ ಬಿಲ್ಲವ…
Author: ನ್ಯೂಸ್ ಬ್ಯೂರೋ
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ. ರಾಜಕಾರಣದಲ್ಲಿ ಸರಳ, ಸಜ್ಜನಿಕೆಗೆ ಅನ್ವರ್ಥ ಎಂಬಂತೆ ತನ್ನನ್ನು ತೊಡಗಿಕೊಂಡು ಎಲ್ಲರೊಂದಿಗೂ ಬೆರತು ವಿಶ್ವಾಸ ಹಾಗೂ ಘನತೆಯನ್ನು ಉಳಿಸಿಕೊಂಡ ಅಪರೂಪದ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿ. ಒಬ್ಬ ಸಾಮಾನ್ಯ ಛಾಯಾಗ್ರಾಹಕನಾಗಿದ್ದ ವ್ಯಕ್ತಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ವಿಧಾನ ಪರಿಷತ್‌ಗೆ ಆಯ್ಕೆಯಾಗಿ, ಮುಜರಾಯಿ ಮಂತ್ರಿಯೂ ಆದ ಪರಿ ಅಚ್ಚರಿ ಮೂಡಿಸುವಂತದ್ದು. ತನ್ನ ಸ್ಪಷ್ಟವಾದ ಮಾತು, ಒಲವು ನಿಲುವುಗಳಿಂದಲೇ ಸಾಧನೆಯ ಉತ್ತುಂಗಕ್ಕೇರಿ, ಬಿಜೆಪಿ ಪಕ್ಷದಲ್ಲಿಯೂ ಪ್ರಭಾವಿ ನಾಯಕನಾಗಿ ಬೆಳೆದರೂ ಜನಸಾಮಾನ್ಯನಿಗೂ ಸುಲಭವಾಗಿ ದೊರಕುವ ಅವರ ಸರಳ ವ್ಯಕ್ತಿತ್ವ ಇಂದಿಗೂ ಬದಲಾಗಿಲ್ಲ. ಮೂರ್ತೆದಾರರ ಹೋರಾಟದಲ್ಲಿ ರಾಜ್ಯದ ಗಮನ ಸೆಳೆದಿದ್ದ ಕೋಟ ಶ್ರೀನಿವಾಸ ಪೂಜಾರಿ, 1993ರಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದರು. ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವಾಗಲೇ 1996ರಲ್ಲಿ ತಾಲೂಕು ಪಂಚಾಯತ್ ಸದಸ್ಯರಾಗಿ ಆಯ್ಕೆಯಾದರು. ಮುಂದೆ 2006ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆರಿಸಿ ಬಂದರು. 2008ರಲ್ಲಿ ನಡೆದ ಉಪಚುನಾವಣೆಯಲ್ಲಿ ವಿಧಾನಪರಿಷತ್‌ಗೆ ಆಯ್ಕೆಯಾದ…
ಸಾಲುಮರದ ತಿಮ್ಮಕ್ಕನಿಗೆ ಕುಸುಮಾಶ್ರೀ ಪ್ರಶಸ್ತಿ. ಗಾಯನ ಸ್ವರ್ಧೆ ವಿಜೇತ ಪ್ರತಿಭೆಗಳಿಗೆ ಗಾನಕುಸುಮ ಪ್ರಶಸ್ತಿ. ಕುಂದಾಪ್ರ ಡಾಟ್ ಕಾಂ ಸುದ್ದಿ. ಕಳೆದ ಒಂದೂವರೆ ದಶಕದ ಹಿಂದೆ ಹುಟ್ಟಿಕೊಂಡ ನಾಗೂರಿನ ಕುಸುಮ ಸಮೂಹ ಸಂಸ್ಥೆಗಳು ಇಂದು ಉದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನ ಪಡೆದಿದೆ. ಉತ್ಕೃಷ್ಟ ಹಾಗೂ ಶಿಸ್ತುಬದ್ಧ ವ್ಯವಹಾರ ಮೌಲ್ಯಗಳನ್ನು ಅಳವಡಿಸಕೊಂಡ ಸಂಸ್ಥೆಯ ಸಾಮಾಜಿಕ ಜವಾಬ್ದಾರಿಯನ್ನೂ ಮರೆಯದೇ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಸಂಗೀತಾಸಕ್ತರಿಗಾಗಿ ವಿನೂತನ ಕಾರ್ಯಕ್ರಮ ಆಯೋಜಿಸುವ ಮೂಲಕ ಸಾಂಸ್ಕೃತಿಕ ಕ್ಷೇತ್ರದಲ್ಲೂ ಛಾಪು ಛಾತಿ ಸಂಸ್ಥೆಯದ್ದು. ಪರಿಸರದ ಪ್ರತಿಭೆಗಳಿಗೆ ಧ್ವನಿಯಾಗಬೇಕು ಎಂಬ ಸದುದ್ದೇಶದಿಂದ ಕುಸುಮ ಸಂಸ್ಥೆಯ ಹದಿನೈದನೇ ವರ್ಷದ ಸಂಭ್ರಮದೊಂದಿಗೆ ಆಯೋಜಿದ ‘ಕುಸುಮಾಂಜಲಿ’ ಸಾಂಸ್ಕೃತಿಕ ಪ್ರೀಯರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದೇ ಸ್ಫೂರ್ತಿಯೊಂದಿಗೆ ಈ ಭಾರಿ ‘ಕುಸುಮಾಂಜಲಿ – 2015’ ಆಯೋಜಿಸಲಾಗಿದೆ. ಡಿ.26ರ ಸಂಜೆ ನಡೆಯಲಿರುವ ಕಾರ್ಯಕ್ರಮಕ್ಕೊಂದು ಗರಿ ಎಂಬಂತೆ ನಾಡಿನ ಶ್ರೇಷ್ಠ ಸಾಧಕರೊಬ್ಬರಿಗೆ ಕುಸುಮಾಶ್ರೀ ಹಾಗೂ ಪರಿಸರದ ವಿಶೇಷ ಗಾನ ಪ್ರತಿಭೆಗೆ ಗಾನ ಕುಸುಮ ಪ್ರಶಸ್ತಿಯನ್ನು ನೀಡಲಾಗುತ್ತಿದೆ. (ಕುಂದಾಪ್ರ…
ಕುಂದಾಪುರ: ಹಟ್ಟಿಯಂಗಡಿ ಪುರಾಣ ಪ್ರಸಿದ್ಧ ಶ್ರೀ ಲೋಕನಾಥೇಶ್ವರ ದೇವಸ್ಥಾನವು ಸುಮಾರು ೩ಕೋಟಿ ವೆಚ್ಚದಲ್ಲಿ ಜೀಣೋದ್ಧಾರಗೊಳ್ಳುತ್ತಿದ್ದು, ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಡೆ ದೇವಳದ ಜಿಣೋದ್ಧಾರ ಕಾರ್ಯಕ್ಕೆ 10ಲಕ್ಷ ರೂ. ಚೆಕ್ ನೀಡಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಅಮರಪ್ರಸಾದ್ ಶೆಟ್ಟಿ ಜೀಣೋದ್ಧಾರ ಸಮಿತಿಯ ಅಧ್ಯಕ್ಷ ಚಂದ್ರರಾಜೇಂದ್ರ ಅರಸ್ ಅವರಿಗೆ ಚೆಕ್ ಹಸ್ತಾಂತರಿಸಿದರು. ಹಟ್ಟಿಯಂಗಡಿ ಶ್ರೀ ಸಿದ್ಧವಿನಾಯಕ ದೇವಸ್ಥಾನ ಬಾಲಚಂದ್ರ ಭಟ್, ವಲಯ ಯೋಜನಾಧಿಕಾರಿ ಸನತ್‌ಕುಮಾರ್ ರೈ, ಒಟ್ಟೂಟ ಅಧ್ಯಕ್ಷ ನಾಗರಾಜ್, ಕನ್ಯಾನ ಒಕ್ಕೂಟ ಅಧ್ಯಕ್ಷ ಜಗದೀಶ್ ಆಚಾರ್ಯ, ವಲಯ ಮೇಲ್ವೀಚಾರಕ ನಾಗರಾಜ್, ಸೇವಾ ಪ್ರತಿನಿಧಿ ಕಲಾವತಿ, ಕರುಣಾಕರ ಇದ್ದರು. 2015 ಮಾರ್ಚ್‌ನಲ್ಲಿ ದೇವಳದ ಜೀಣೋದ್ಧಾರದ ಸಲುವಾಗಿ ದೇವರ ಕಳೆ ಇಳಿಸಲಾಯಿತು. ಜೀರ್ಣೋದ್ಧಾದ್ದುರ ಕಾರ್ಯ ಪ್ರಗತಿಯಲ್ಲಿ 2016ಮಾರ್ಚ್ 23ರಂದು ನಡೆಯುವ ಹಟ್ಟಿಯಂಗಡಿ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಕಳೆ ಏರಿಸಿದ ಬಳಿಕ ಪುನರ್‌ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. (ಕುಂದಾಪ್ರ ಡಾಟ್ ಕಾಂ) ವರಾಹಿ ನದಿಯ ದಡದಲ್ಲಿರುವ ಹಟ್ಟಿಯಂಗಡಿ ಶ್ರೀ…
ಬೈಂದೂರು: ಜೀವನದಲ್ಲಿ ಗೆಲುವು ಉತ್ಸಾಹ ತಂದರೆ ಸೋಲು ಶಕ್ತಿ ತರುತ್ತದೆ. ಶಿಕ್ಷಣದ ಜತೆಗೆ ಕ್ರೀಡೆ, ಸಾಂಸ್ಕೃತಿಕವಾಗಿಯೂ ಮಕ್ಕಳು ಸಾಧನೆ ಮಾಡಬೇಕು. ಚಹ ಮಾರಿದವರು ಪ್ರಧಾನಿಯಾಗಿರುವುದು ನಮ್ಮ ಕಣ್ಣ ಮುಂದಿದೆ ಹಾಗೇಯೇ ಪ್ರತಿಯೊಬ್ಬರಲ್ಲಿಯೂ ಸುಪ್ತಪ್ರತಿಭೆಗಳರುತ್ತದೆ. ಉತ್ತಮ ವೇದಿಕೆಯ ಮೂಲಕ ಅದನ್ನು ಪ್ರಕಟಿಸಿ ಸಾಧನೆಯ ಮಟ್ಟಿಲನ್ನು ನಿರ್ಮಾಣ ಮಾಡಿಕೊಳ್ಳಬಹುದಾಗಿದೆ ಎಂದು ಕುಂದಾಪುರ ಹಿರಿಯ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್ ಹೇಳಿದರು ಮೊರಾರ್ಜಿ ದೇಸಾಯಿ ಅಂಗ್ಲಮಾಧ್ಯಮ ವಸತಿಶಾಲೆ ಹೇರೆಂಜಾಲು ಇಲ್ಲಿ ನಡೆದ ಶಾಲಾ ವಾಷಿಕೋತ್ಸವ ಹಾಗೂ ಚಿಣ್ಣರ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಖಂಬದಕೋಣೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕ ವಿಶ್ವನಾಥ ಶೆಟ್ಟಿ ಮಾತನಾಡಿ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಿ ಸಾಮಾಜಿಕ ಕಳಕಳಿಯುಳ್ಳ ಯುವಜನಾಂಗ ಸೃಷ್ಠಿಯಾಗಬೇಕು ಎಂದು ಹಿಂದೆ ’ಗುರುವೇ ನಮಃ’ ಎನ್ನುತ್ತದ್ದ ಮಕ್ಕಳು ಇಂದಿನ ದಿನಗಳಲ್ಲಿ ’ಗುರು ಏನ್ ಮಹಾ’ ಎನ್ನುವಂತಹ ಮಟ್ಟಕ್ಕೆ ಬಂದಿರುವುದು ಗುರು-ಶಿಷ್ಯರ ಸಂಬಂಧ ಹಾಗೂ ಬಾಂಧವ್ಯಗಳಲ್ಲಿ ಬಿರುಕು ಕಾಣಿಸುತ್ತಿದೆ. ಇದು ಭವಿಷ್ಯದಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ ಎಂದ ಅವರು ಕೇವಲ ಅಂಕ…
ಅಂತರಾಷ್ಟ್ರೀಯ ಮಾದರಿಯ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಕೂಟದ ಸಿದ್ದತೆಗಳು ಪೂರ್ಣ ಕುಂದಾಪ್ರ ಡಾಟ್ ಕಾಂ ಕುಂದಾಪುರ: ಚಕ್ರವರ್ತಿ ಕ್ರಿಕೆಟ್ ಕ್ಲಬ್ ವತಿಯಿಂದ ಕುಂದಾಪುರದ ಗಾಂಧಿ ಮೈದಾನದಲ್ಲಿ ಡಿ. 24ರಿಂದ 27ರವರೆಗೆ ನಡೆಯಲಿರುವ 5ನೇ ರಾಷ್ಟ್ರಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಕೂಟದ ಸಿದ್ಧತೆಗಳು ಪೂರ್ಣಗೊಂಡಿದ್ದು 4 ದಿನಗಳ ಕಾಲ ಕ್ರಿಕೆಟ್ ಪ್ರಿಯರಿಗೆ ರಸದೌತಣ ಸಿಗಲಿದೆ. ಪಂದ್ಯಾಟಕ್ಕಾಗಿ 43 ತಂಡಗಳು ದೇಶದ ಮೂಲೆ ಮೂಲೆಯಿಂದ ಆಗಮಿಸುತ್ತಿದ್ದು ಚಕ್ರವರ್ತಿ ಟ್ರೋಫಿಗಾಗಿ ವೀರಾವೇಶದ ಸೆಣಸಾಟ ನೀಡಲಿದೆ. ಈಗಾಗಲೇ ಕ್ರಿಕೆಟ್ ಆಟಗಾರರು, ಕ್ರಿಕೆಟ್ ಅಭಿಮಾನಿಗಳು ಕುಂದಾಪುರಕ್ಕೆ ದೌಡಾಯಿಸುತ್ತಿದ್ದಾರೆ. ನಾಲ್ಕು ದಿನಗಳ ಕಾಲ ಸುಮಾರು 600 ಆಟಗಾರರು ಭಾಗವಹಿಸುವ ನಿರೀಕ್ಷೆಯಿದ್ದು, ಸುಮಾರು 150 ಚಕ್ರವರ್ತಿ ಕ್ರಿಕೆಟ್ ಕ್ಲಬ್‌ನ ಸ್ವಯಂ ಸೇವಕರ ಪಡೆ ಅವರ ಅನುಕೂಲತೆಗಾಗಿ ಸರ್ವ ಸುಸಜ್ಜಿತ ವ್ಯವಸ್ಥೆಯನ್ನು ನೀಡಲು ಸನ್ನದ್ಧವಾಗಿದೆ. ಕುಂದಾಪುರದ ಇತಿಹಾಸದಲ್ಲಿ ಪ್ರಥಮ: ಉಡುಪಿ ಮಂಗಳೂರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕುಂದಾಪುರದಲ್ಲಿ ಅಂತರಾಷ್ಟ್ರೀಯ ಪಂದ್ಯಕೂಟದ ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿರುವುದು ಕುಂದಾಪುರದ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ ಎಂಬುವುದು…
ಕುಂದಾಪುರ: ಎಲ್ಲವನ್ನೂ ಕಾನೂನಿನಿಂದ ಸರಿಪಡಿಸಲು, ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಜನರು ಇಲಾಖೆಗೆ ನೀಡುವ ಸಹಕಾರ ಹಾಗೂ ಜನರ ಸಹಭಾಗಿತ್ವದ ವ್ಯವಸ್ಥೆಯಿಂದ ಅಪರಾಧಗಳನ್ನು ನಿಯಂತ್ರಿಸಲು, ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯವಿದೆ. ದೇಶದಲ್ಲಿ ಯುವ ಜನರ ಪ್ರೀತಿ ವಿಶ್ವಾಸ, ಬಾಂಧವ್ಯ ಹಾಗೂ ಸಾಮರಸ್ಯದ ಜೀವನ ನಡೆಸಿದಾಗ ದೇಶ ಪ್ರಗತಿಪಥದತ್ತ ಸಾಗಲು ಸಹಾಯಕವಾಗಲಿದೆ ಎಂದು ಕುಂದಾಪುರ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಕಂಚುಗೋಡು ಭಗತ್‌ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೆಹರು ಯುವಕೇಂದ್ರ ಉಡುಪಿ, ಆದರ್ಶ ಯುವಕ ಮಂಡಲ ಭಗತ್ ನಗರ ಕಂಚುಗೋಡು, ಗಂಗೊಳ್ಳಿ ಪೊಲೀಸ್ ಠಾಣೆ ಹಾಗೂ ರೋಟರಿ ಕ್ಲಬ್ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಜರಗಿದ ವಿಷಯಾಧಾರಿತ ಶಿಕ್ಷಣ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮ ಮತ್ತು ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಹಾಗೂ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಸರಕಾರ ಹಾಗೂ ಪೊಲೀಸ್ ಇಲಾಖೆ ಹೆಚ್ಚಿನ ಒತ್ತು ನೀಡಿ ಕೆಲಸ…
ಮರವಂತೆ: ಶಾಲೆಗಳು ಕೇವಲ ಕಲ್ಲು ಮಣ್ಣಿನಿಂದ ಕಟ್ಟಿದ ಕಟ್ಟೋಣವಲ್ಲ. ಇದೊಂದು ಯಜ್ಞಭೂಮಿಯಾಗಿದ್ದು, ಸಮಾಜಕ್ಕೆ ಶಕ್ತಿ ಕೊಡುವ ಕೇಂದ್ರವಾಗಿದೆ. ಇಲ್ಲಿ ಧನಾತ್ಮಕ ಚಿಂತನೆಗಳು ದೊಡ್ಡ ಶಕ್ತಿಯಾಗಬೇಕು. ಇಂತಹ ಸಂಸ್ಥೆಗಳಲ್ಲಿ ಮಕ್ಕಳಿಗೆ ಭಾವನಾತ್ಮಕ ವ್ಯಕ್ತಿತ್ವ ವಿಕಸನದ ಶಿಕ್ಷಣ ಸಿಗುವಂತಾಗಬೇಕು ಎಂದು ಉದ್ಯಾವರ ಮಾಧವ ಆಚಾರ್ಯ ಹೇಳಿದರು. ನಾಗೂರು ಸಂದೀಪನ್ ಆಂಗ್ಲಮಾಧ್ಯಮ ಶಾಲೆಯ 28ನೇ ವಾರ್ಷಿಕೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡಿದರು. ಹಿಂದಿನವರಿಂದ ಬಂದ, ಎಲ್ಲರೂ ಒಂದಾಗಿ ಬಾಳೋಣ ಎಂಬ ಕಲ್ಪನೆಗಳು ಶಾಲೆಯಲ್ಲಿ ಮಾತ್ರ ಸಾಧ್ಯ. ಕಿವಿಯಿಂದ ಕೇಳಿದ ಪಾಠ ಮನಸ್ಸಿನೊಳಗೆ ಹೋಗದಿದ್ದರೆ ಏನೂ ಪ್ರಯೋಜನವಾಗದು. ಭಗವಂತ ಕೊಟ್ಟ ಸೂಕ್ಷ್ಮ ಅಂಗಾಗಗಳಲ್ಲಿ ಸಮರ್ಪಕ ವ್ಯವಸ್ಥೆಯಿದೆ. ಪ್ರತಿಯೊಂದನ್ನು ಸ್ವೀಕರಿಸಿ ಪುನಃ ಜಗತ್ತಿಗೆ ನೀಡುವಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದರು. ವಿಶೇಷ ಅತಿಥಿಯಾಗಿ ಆಗಮಿಸಿದ ಗುಜರಾತ್ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಾಧನಾ ರಾವ್ ಮಾತನಾಡಿ, ಮಗು ದೇವರು ಕೊಟ್ಟ ದೇಣಿಗೆ. ಮಕ್ಕಳಿಗೆ ಶಿಕ್ಷಣ ಶಿಕ್ಷೆಯಾಗಬಾರದು. ನಿಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಆ…
ಕುಂದಾಪ್ರ ಡಾಟ್ ಕಾಂ ವರದಿ. ಕಲೆಗೆ ವಯಸ್ಸಿನ ಹಂಗಿಲ್ಲ. ಸಮಯದ ಪರಿಧಿ ಇಲ್ಲ. ತನ್ನನ್ನು ಆರಾಧಿಸುವ ಯಾರಿಗೇ ಆದರೂ ಒಲಿಯದೇ ಉಳಿಯೊಲ್ಲ. ಏನನ್ನಾದರೂ ಸಾಧಿಸುವನೆಂಬ ಛಲ, ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಯಶಸ್ಸು ಕಷ್ಟವಲ್ಲ. ಹೌದು ಕುಂದಾಪುರ ಬಹುಪರಿಚಿತ ವೈದ್ಯ ಡಾ. ಎಚ್. ಎಸ್. ಮಲ್ಲಿ ಅವರೊಳಗಿನ ಕಲಾಕಾರ ಕೊಂಚದಿಂದ ಹೊರಬಂದು ಕಲಾಕೃತಿಗಳಾಗಿರುವುದನ್ನು ಕಂಡವರಿಗೆ ಹೀಗೆ ಅನ್ನಿಸದಿರದು. ಕುಂದಾಪುರದ ಕಲಾಮಂದಿರದಲ್ಲಿ ಇತ್ತಿಚಿಗೆ ಡಾ. ಸುಭೋಧ್‌ಕುಮಾರ್ ಮಲ್ಲಿ ಅವರ ’ಸೃಜನಾ’ ಚಿತ್ರಕಲಾ ಪ್ರದರ್ಶನ ಮೂರು ದಿನಗಳ ಕಾಲ ಏರ್ಪಡಿಸಲಾಗಿತ್ತು. 76ರ ಹರೆಯದ ಮಲ್ಲಿಯವರು ಪ್ರಥಮ ಬಾರಿಗೆ ತಾವು ರಚಿಸಿದ ಚಿತ್ರಕಲೆ ಪ್ರದರ್ಶನವನ್ನು ಏರ್ಪಡಿಸಿ ಚಿತ್ರಕಲಾ ಪ್ರಿಯರ ಮನ ಸೂರೆಗೊಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಚಿತ್ರ ಪ್ರದರ್ಶನ ಮಾತ್ರವಲ್ಲದೇ ಮಾರಾಟಕ್ಕೂ ಅವಕಾಶ ಕಲ್ಪಿಸಿದ್ದು ಇದರಿಂದ ಸಂಗ್ರಹವಾದ ಹಣವನ್ನು ಕೋಣಿ ಮಾನಸಜ್ಯೋತಿ ವಿಶೇಷ ಮಕ್ಕಳ ಶಾಲೆಗೆ ನೀಡುತ್ತಿದ್ದಾರೆ. (ಕುಂದಾಪ್ರ ಡಾಟ್ ಕಾಂ ವರದಿ) ಬಹಮುಖ ವ್ಯಕ್ತಿತ್ವ: ವೃತ್ತಿಯಲ್ಲಿ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರಾಗಿ ೪೫ ವರ್ಷಗಳ ಕಾಲ ವೈದ್ಯಕೀಯ…
ಬೈಂದೂರು: ಆಧುನಿಕ ಮಾನವ ಸಂಪನ್ಮೂಲ ಕೌಶಲ ವೃದ್ಧಿಯಲ್ಲಿ ಮತ್ತು ಜೀವನದ ವಿವಿಧ ಸನ್ನಿವೇಶಗಳನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಭಗವದ್ಗ್ಭಿತೆಯ ಅಂಟಿಸಿಕೊಳ್ಳದ ಮುಕ್ತ ಕಾರ್ಯವಿಧಾನವನ್ನು ಯಶಸ್ವಿ ನಾಯಕರು ಬಳಸಿಕೊಳ್ಳುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿಯೂ ಭಗವದ್ಗ್ಭಿತೆಯ ವಿಚಾರಗಳು ಉಪಯುಕ್ತತೆಯನ್ನು ಕಂಡಿವೆ. ಗೀತೆಯ ಕುರಿತು ಹಲವು ಅಪವ್ಯಾಖ್ಯಾನಗಳನ್ನು ನಿವಾರಿಸಿ ಅದರ ಉಪಯುಕ್ತತೆಯನ್ನು ಸಾರುವ ಅಭಿಮಾನ ಸಮನ್ವಯ ಸಮಾಜ ನಿರ್ಮಿಸುವಲ್ಲಿ ಸಹಕಾರಿಯಾಗಿದೆ ಎಂದು ಬೆಂಗಳೂರಿನ ಮಾಧ್ಯಮ ಭಾರತೀಯ ನಿರ್ದೇಶಕ ಹಿರಿಯ ಪರ್ತಕರ್ತ ಮೊಗೇರಿ ಜಯರಾಮ ಅಡಿಗರು ಹೇಳಿದರು. ಬೈಂದೂರಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಆವರಣದಲ್ಲಿ ಶ್ರೀ ಸೂರ್ಯ ಸಿದ್ಧಾಂತ ಪೌಂಡೇಶನ್, ಪಂಚಾಂಗ ಮಂದಿರ ಮೊಗೇರಿ ಸಹಕಾರದೊಂದಿಗೆ ಶ್ರೀ ಸೋಂದಾ ಸ್ವರ್ಣವಲ್ಲಿ ಶ್ರೀಗಳ ಶ್ರೀಮದ್‌ಭಗವದ್ಗೀತಾ ಪ್ರಸಾರ ಅಭಿಯಾನದ ಪ್ರವಾಚಕರು ಉಪನ್ಯಾಸಕರುಗಳಿಗೆ ಏರ್ಪಡಿಸಿದ ಶಿಬಿರದ ಉದ್ಘಾಟಿಸಿ ಮಾತನಾಡಿದರು. ಶಿಬಿರದ ನಿರ್ದೇಶಕ ನಾವುಂದ ರಿಚರ್ಡ್ ಅಲ್ಮೇಡಾ ಮೆಮೋರಿಯಲ್ ಕಾಲೇಜು ಪ್ರಾಂಶುಪಾಲ ಪ್ರೋ.ನಾರಾಯಣ ರಾವ್ ಮಾತನಾಡಿ, ವ್ಯಕ್ತಿತ್ವದ ನಿರ್ಮಾಣದಲ್ಲಿ ಸ್ವಭಾವ ಮತ್ತು ಕೆಲಸದಲ್ಲಿನ ಸಂಬಂಧಗಳು ಪ್ರಭಾವ ಬೀರುತ್ತವೆ. ಸ್ವ-ಸ್ವಭಾವ, ಸ್ವಧರ್ಮಗಳನ್ನು ಹೀಗೆಳೆಯದೇ ಕೌಶಲ್ಯ ವೃದ್ಧಿ ಕಡೆ…
