ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಮಾಜಿಕ ಸಮಾನತೆಗೆ ಶಿಕ್ಷಣವೇ ಮೂಲ ವೇದಿಕೆ, ಆಸ್ಪೃಶ್ಯತೆ ಕಾಲಘಟ್ಟದಲ್ಲಿ ಶಿಕ್ಷಣ ಮೂಲಕ ಸಮಾನತೆ ಸಾಧ್ಯ ಎನ್ನುವುದು ಅಂಬೇಡ್ಕರ್ ನಂಬಿಕೆಯಾಗಿತ್ತು. ಮೇಲೂ, ಕೀಳು ಭಾವನೆ ತೊಳೆದ ಹಾಕಲು ಶಿಕ್ಷಣ ಒಂದೇ ಮಾರ್ಗ. ಪ್ರಸಕ್ತ ಕಾಲಘಟ್ಟದಲ್ಲಿ ಅಲ್ಪಸ್ವಲ್ಪ ಅಸ್ಪೃಶ್ಯತೆ ಇದ್ದರೂ, ಅದನ್ನು ಶಿಕ್ಷಣದ ಮೂಲಕ ನಿವಾರಣೆ ಮಾಡಿಕೊಳ್ಳಬೇಕು ಎಂದು ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಸಿ.ಟಿ. ಅಭಿಪ್ರಾಯಪಟ್ಟರು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕುಂದಾಪುರ ಶಾಖೆ ಆಶ್ರಯದಲ್ಲಿ ಡಾ.ಬಾಬಾ ಸಾಹೇಬ್ ಆಂಬೇಡ್ಕರ್ ಜನ್ಮ ದಿನಾಚರಣೆ ನಿಮಿತ್ತ ಶುಕ್ರವಾರ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಹಮ್ಮಿಕೊಂಡ ನಮ್ಮ ಭೂಮಿ, ನಮ್ಮ ಹಕ್ಕು ಜಾಗೃತೆಗಾಗಿ ಹೊರಟ ಜೈ ಭೀಮ್ ರ‍್ಯಾಲಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಅಂಬೇಡ್ಕರ್ ಶ್ರೇಷ್ಠ ಸಂವಿಧಾನದ ಮೂಲಕ ಸಮಾಜಿಕ ಪರಿರ್ವತೆ ಹರಿಕಾರರಾಗಿದ್ದು, ಪರಿಶಷ್ಟ ಜಾತಿ ಮತ್ತು ಪಂಗಡದ ಮೀಸಲು ಭೂಮಿ ಹಕ್ಕು ನೀಡಲು ತಾಲೂಕ್ ಆಡಳಿತ ಬದ್ದವಾಗಿದೆ ಎಂದು ಹೇಳಿದರು. ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ, ನಗರಾಭಿವೃದ್ಧಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇದು ಎಸುವಿನ ಕೊನೆಯ ಭೋಜನದ ದಿನವೂ ಆಗಿದೆ ಅಂದು ಎಸು ಮೂರು ಸಂಸ್ಕಾರ ನೇರವೆರಿಸಿದರು, ಒಂದು ರೊಟ್ಟಿಯ (ಪ್ರಸಾದ) ಸಂಸ್ಕಾರ, ಈ ರೊಟ್ಟಿಯ ಮೂಲಕ ತಾನು ನಮ್ಮ ಜೊತೆಗಿರುತ್ತೇನೆಂದು ವಾಗ್ದಾನ ಮಾಡಿದ ದೀನ, ಎರಡನೆಯದು ತನ್ನ ಶಿಸ್ಯರು, ಅನುಯಾಯಿಗಳು ತಾವು ಸೇವೆ ಮಾಡಿಕೊಳ್ಳುವುದಲ್ಲಾ, ಇತರರ ಸೇವೆ ಮಾಡಬೇಕೆಂದು ಭೋದನೆ ಮಾಡಿದ ದಿನ, ಮೂರನೇಯದು ತನ್ನ ಶಿಸ್ಯರನ್ನು ಯಾಜಕರನ್ನಾಗಿ ಮಾಡಿ ಧರ್ಮಗುರುಗಳ ಸಂಸ್ಕಾರ ಆರಂಭಿಸಿದ ದೀನ, ’ನಾನು ಸೇವೆ ಪಡೆಯಲು ಬಂದಿದ್ದಲ್ಲಾ, ನಾನು ಇತರರ ಸೇವೆ ಮಾಡಲು ಬಂದಿದ್ದು’ ಅಂತಾ ಏಸು ನಮಗೆ ಭೋದನೆ ಮಾಡಿದ್ದಾರೆ, ಅದರಂತೆ ಎಸುವಿನ ಹಿಂಬಾಲಾಕರಾದ ನಾವು ದೀನ ದಲಿತರ, ಅಗತ್ಯ ಇರುವರ ಸೇವೆ ಮಾಡಬೇಕೆನ್ನುತ್ತಾ’ ಕುಂದಾಪುರ ಇಗರ್ಜಿಯ ಪ್ರಧಾನ ಗುರು ವಂ.ಅನಿಲ್ ಡಿಸೋಜಾ ಆರಿಸಲ್ಪಟ್ಟ ಸದಸ್ಯರ ಪಾದ ತೊಳೆಯುವ ಸಂಪ್ರದಾಯವನ್ನು ನೇಡೆಸಿಕೊಟ್ಟರು. ಸಹಾಯಕ ಧರ್ಮಗುರು ವಂ. ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಸಹವರ್ತಿಯಾಗಿ ಈ ಧಾರ್ಮಿಕ ಕ್ರಿಯೆಗಳನ್ನು ನೆಡೆಸಿಕೊಟ್ಟರು
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಡಾ. ಬಿ.ಆರ್. ಅಂಬೇಡ್ಕರ್ ಸಂಘ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಿಳಾ ಘಟಕ ಬೈಂದೂರು ಇದರ ಆಶ್ರಯದಲ್ಲಿ ೨೨ನೇ ವಾರ್ಷಿಕೋತ್ಸವ ಹಾಗೂ ೧೨೬ನೇ ಅಂಬೇಡ್ಕರ್ ಜಯಂತಿ ಇಲ್ಲಿನ ಶಾರದಾ ವೇದಿಕೆಯಲ್ಲಿ ಜರುಗಿತು. ಹಟ್ಟಿಯಂಗಡಿ ನಳಂದಾ ವಿದ್ಯಾಪೀಠದ ಪ್ರಾಂಶುಪಾಲ ಗುರುರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ, ಬೈಂದೂರು ವೃತ್ತ ನೀರೀಕ್ಷಕ ರಾಘವ ಡಿ. ಪಡೀಲ್, ಶಿರೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ ಶೆಟ್ಟಿ, ಸವಿತಾ ಸಮಾಜದ ಜಿಲ್ಲಾ ಸಂಘಟಕ ಮಂಜುನಾಥ ಸಾಲಿಯಾನ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಧರ್ಮದರ್ಶಿ ನರಸಿಂಹ ಹಳಗೇರಿ, ಬೈಂದೂರು ಉಪವಲಯ ಅರಣ್ಯಾಧಿಕಾರಿ ಸದಾಶಿವ ಕೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಕಲಚೇತನ ಕ್ರೀಡಾಪಟುಗಳಾದ ಭುವನಾ ಹಾಗೂ ಮೇಘನಾ ಸಹೋದರಿಯರನ್ನು ಗುರುತಿಸಿ ಗೌರವಿಸಲಾಯಿತು. ಸೇವೆಯಿಂದ ನಿವೃತ್ತರಾದ ಭಾಸ್ಕರ ಪಿ ಹಾಗೂ ಪರಮೇಶ್ವರ ಹಾವಳಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ಯಡ್ತರೆ ಸ್ವಾಗತಿಸಿದರು. ಚೈತ್ರಾ ಯಡ್ತರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಇಲ್ಲಿನ ಗಾಂಧಿ ಮೈದಾನದಲ್ಲಿ ಸ್ಥಳೀಯ ಟಾರ್ಪೆಡೋಸ್ ತಂಡದ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುವ ‘ಟಿಪಿಎಲ್-2017’ ಅಂತರಾಷ್ಟ್ರೀಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಉದ್ಘಾಟನೆಗೊಂಡಿತು. ಮಾಜಿ ಸಚಿವ ಹಾಗೂ ಶಾಸಕ ಕೆ.ಅಭಯಚಂದ್ರ ಜೈನ್ ಉದ್ಘಾಟಿಸಿ ಮಾತನಾಡಿ ವಿದೇಶದಲ್ಲಿ ಹುಟ್ಟಿದ ಕ್ರಿಕೆಟ್ ಇಂದು ವಿಶ್ವ ವ್ಯಾಪಿಯಾಗಿದೆ. ಎಲ್ಲಾ ವರ್ಗದ ಜನರ ಆಕರ್ಷಣೆಯ ಪಂದ್ಯವಾಗಿರುವ ಕ್ರಿಕೆಟ್ ಹಾಗೂ ಇತರ ಕ್ರೀಡೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದರಿಂದಾಗಿ ದೇಹಕ್ಕೆ ವ್ಯಾಯಾಮದೊಂದಿಗೆ ಇತರರಲ್ಲಿ ಪ್ರೀತಿ ಬೆಳೆಯುತ್ತದೆ ಎಂದರು. ಕ್ರಿಕೆಟ್ ಆಟಕ್ಕೆ ಹೆಸರುವಾಸಿಯಾಗಿದ್ದ ಕುಂದಾಪುರದ ಚಕ್ರವರ್ತಿ ಹಾಗೂ ಟಾರ್ಪೆಡೋಸ್ ಸಂಸ್ಥೆಗಳ ಕ್ರೀಡಾ ಪ್ರೋತ್ಸಾಹ ಶ್ಲಾಘನೀಯ. ವಿದೇಶದಲ್ಲಿ ದುಡಿಯುತ್ತಿರುವ ನಮ್ಮ ಊರಿನ ಯುವಕರನ್ನು ಇಲ್ಲಿ ಸೆಳೆಯುವ ಪ್ರಯತ್ನ ಆಗಿದೆ. ದುಡಿಯುಮೆಯ ಜತೆಯಲ್ಲಿ ಕ್ರಿಕೆಟ್ ಬೆಳೆಸುವ ಯುವಕರ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದರು ಕುಂದಾಪುರ ಪುರಸಭೆಯ ಅಧ್ಯಕ್ಷೆ ವಸಂತಿ ಸಾರಂಗ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕುಂದಾಪುರ ಎಜುಕೇಶನ್ ಸೊಸೈಟಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕ್ರೀಯಾಶೀಲ ವ್ಯಕ್ತಿತ್ವದ ಯುವಕರ ತಂಡದಿಂದ ಉತ್ತಮ ಕಾರ್ಯಗಳು ಕೈಗೂಡಲಿದೆ. ಮಾಡುವ ಕೆಲಸದಲ್ಲಿ ಶ್ರದ್ಧೆ ಹಾಗೂ ವಿಶ್ವಾಸವಿದ್ದರೆ ಯಶಸ್ಸು ಸದಾ ಹಿಂಬಾಲಿಸಲಿದೆ ಎಂದು ಕುಂದಾಪುರ ಎಜುಕೇಶನ್ ಸೊಸೈಟಿ ಅಧ್ಯಕ್ಷ ಬಿ. ಎಂ. ಸುಕುಮಾರ್ ಶೆಟ್ಟಿ ಹೇಳಿದರು. ಅವರು ವಂಡ್ಸೆಯ ನಿವಾಸದಲ್ಲಿ ಯುವ ಪ್ರತಿಭೆಗಳಾದ ರವೀಂದ್ರ ಶ್ರೀಯಾನ್ ನಿರ್ದೇಶಿಸಿ ಹಾಡಿರುವ, ದಿವ್ಯಾಧರ ಶೆಟ್ಟಿ ಕೆರಾಡಿ ಸಾಹಿತ್ಯ ನೀಡಿರುವ ’ಯಾರೇ ನೀನು’ ಆಲ್ಬಂ ಸಾಂಗ್ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು ಸಾಂಗ್ ಅಪ್ಲೋಡ್ ಮಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸದಾನಂದ ಬಳ್ಕೂರು, ಶರತ್ ಶೆಟ್ಟಿ ಉಪ್ಪುಂದ, ರಾಘವೇಂದ್ರ ನೆಂಪು, ರವಿ ಗಾಣಿಗ, ಸುಹಾಸ್ ಶೆಟ್ಟಿ ಹಾಡಿನಲ್ಲಿ ನಟಿಸಿರುವ ರಾಘುವೇಂದ್ರ ಹುಲಿಕಲ್, ನಿಧಿ ಶೆಣೈ, ಧೀರಜ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು. ಪ್ರದೀಪ್ ಶೆಟ್ಟಿ ಬೆಳ್ಳಾಲ ಕಾರ್ಯಕ್ರಮ ನಿರೂಪಿಸಿದರು. ಸನ್‌ರೈಸ್ ಪ್ರೊಡಕ್ಷನ್ ಸಂಸ್ಥೆಯಿಂದ ನಿರ್ಮಾಣಗೊಂಡಿರುವ ‘ಯಾರೇ ನೀನು’ ಆಲ್ಬಂ ಸಾಂಗ್‌ನ್ನು ರವೀಂದ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶತಚಂಡಿಕಾಯಾಗ ಮತ್ತು ಅತಿರುದ್ರ ಮಹಾಯಾಗ ಸಾಂಗವಾಗಿ ನೆರವೇರಿತು. ಯಾಗದ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿದಾನಗಳು ಅಚ್ಚುಕಟ್ಟಾಗಿ ನಡೆದು, ಭಕ್ತ ಸಮೂಹದ ನಡುವೆ ದೇವಳದ ಆಡಳಿತ ಧರ್ಮದರ್ಶಿ ಹೆಚ್. ರಾಮಚಂದ್ರ ಭಟ್ ದಂಪತಿಗಳು ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು. ದೇವಳದ ಪ್ರದಾನ ಅರ್ಚಕ ಬಾಲಚಂದ್ರ ಭಟ್, ಶ್ರೀ ಸಿದ್ದಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲ ಶರಣ್‌ಕುಮಾರ್ ಇನ್ನಿತರರು ಉಪಸ್ಥಿತರಿದ್ದರು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತ ಸಮೂಹ ಯಾಗದಲ್ಲಿ ಭಾಗವಹಿಸಿ ಕೃತಾರ್ಥರಾದರು. ಶ್ರೀಗಳ ಆಗಮನ : ಹೊಸನಗರದ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರು ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ದೇವಳಕ್ಕೆ ಆಗಮಿಸಿ, ಯಾಗದಲ್ಲಿ ಪಾಲ್ಗೊಂಡರು. ದೇವಳದ ಆಡಳಿತ ಧರ್ಮದರ್ಶಿ ಹೆಚ್. ರಾಮಚಂದ್ರ ಭಟ್ ದಂಪತಿಗಳು ಶ್ರೀಗಳನ್ನು ವಿದ್ಯುಕ್ತವಾಗಿ ಸ್ವಾಗತಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಗವಂತ ಸರ್ವವ್ಯಾಪಿಯಾದರೂ ಕಣ್ಣಿಗೆ ಕಾಣಲಾರನು. ಆತನಲ್ಲಿ ನಮ್ಮ ಸುಖ-ಕಷ್ಟಗಳನ್ನು ನಿವೇದಿಸಿಕೊಳ್ಳುವ ಉದ್ದೇಶದಿಂದ ಪರ್ಯಾಯವಾಗಿ ದೇವರ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸಿ ಭಜಿಸುವ ನೆಲೆಯಲ್ಲಿ ಶಾಸ್ತ್ರೀಯವಾಗಿ ನಿರ್ಮಾಣ ಮಾಡಿಕೊಂಡ ಧಾರ್ಮಿಕ ಚೌಕಟ್ಟಿನ ಭವ್ಯವಾದ ವ್ಯವಸ್ಥೆಯೇ ದೇವಾಲಯ ಎಂದು ಶೃಂಗೇರಿ ಕಮ್ಮರಡಿಯ ವೇಮೂ ಲಕ್ಷ್ಮೀನಾರಾಯಣ ಸೋಮಯಾಜಿ ಹೇಳಿದರು. ನಾಗೂರು ಶ್ರೀ ವೀರ ಹನುಮಾನ್ ದೇವಸ್ಥಾನದ ಆವರಣದಲ್ಲಿ ನೂತನ ನಿರ್ಮಾಣದ ಶ್ರೀ ಉಮಾಮಹೇಶ್ವರ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇಗುಲಗಳ ಅಷ್ಟಬಂಧ-ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ಧರ್ಮವನ್ನು ತಿಳಿಯುತ್ತಲೇ ಆಚರಣೆಯಲ್ಲಿಯೂ ತರಬೇಕು. ಸಮರ್ಪಣಾ ಮನೋಭಾವದಿಂದ ಕಾರ್ಯತತ್ವರಾಗುವುದು ಧಾರ್ಮಿಕ ಮನೋಭಾವದ ಮೊದಲ ಹೆಜ್ಜೆಯಾಗಿದೆ. ಧರ್ಮವು ಒಬ್ಬೊಬ್ಬ ವ್ಯಕ್ತಿಗೆ ಒಂದೊಂದು ಸನ್ನಿವೇಶದಲ್ಲಿ ಒಂದೊಂದು ರೀತಿಯಲ್ಲಿ ದಾರಿ ದೀಪವಾಗಬಲ್ಲುದು. ಸಂಸ್ಕೃತಿ, ಸಂಸ್ಕಾರಗಳನ್ನು ರಕ್ಷಣೆ ಮಾಡುವುದರ ಜತೆಗೆ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ಪರಮೋನ್ನತಿಗಾಗಿ ಪ್ರಾರ್ಥಿಸಬೇಕು. ಭಗವಂತನ ಆರಾಧನೆ, ನಾಮಸ್ಮರಣೆ ಮಾಡಿದರೆ ಸಮಾಜದಲ್ಲಿ ಶಾಂತಿ ಸಮಾಧಾನ ನೆಲೆಸುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮಹಿಳೆಯರು ಹಾಗೂ ಮಕ್ಕಳ ಆರೋಗ್ಯ ಕಾಳಜಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರಕಾರ ಅವಕಾಶ ನೀಡಿದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಮಹಿಳಾ ಮತ್ತು ಮಕ್ಕಳ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸದಾ ಸಿದ್ಧ. ಸ್ಥಳಾವಕಾಶ ಕಲ್ಪಿಸಿಕೊಟ್ಟಲ್ಲಿ ಈಗಿರುವ ಲಕ್ಷ್ಮೀ ಸೋಮ ಬಂಗೇರ ಹೆರಿಗೆ ವಾರ್ಡನ್ನು ಇನ್ನಷ್ಟು ವಿಸ್ತರಿಸಿ ಇನ್ನೂ ನೂರು ಹಾಸಿಗೆಗಳ ವಾರ್ಡುಗಳ ಕೊಡುಗೆ ನೀಡಲು ಸಿದ್ಧ ಎಂದು ನಾಡೋಜ ಡಾ| ಜಿ. ಶಂಕರ್ ಹೇಳಿದರು. ಅವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಗೆ ಡಾ| ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನಿಂದ ಕೊಡುಗೆಯಾಗಿ ನೀಡಲಾದ ಸುಮಾರು 6 ಲಕ್ಷ ರೂ. ವೆಚ್ಚದ ಡಯಾಲಿಸಿಸ್ ಯಂತ್ರವನ್ನು ಹಸ್ತಾಂತರಿಸಿ ಮಾತನಾಡಿದರು. ಬಹಳಷ್ಟು ಬಡ ಜನರು ಚಿಕಿತ್ಸೆಗೆ ಆಗಮಿಸುವ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಈಗಾಗಲೇ ಡಾ| ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನಿಂದ ಹೆರಿಗೆ ವಾರ್ಡಿನ ಕೊಡುಗೆ ಹಾಗೂ ನಿರ್ವಹಣೆ ಮಾಡುತ್ತಾ ಬಂದಿದ್ದು, ಸೂಕ್ತ ಸ್ಥಳಾವಕಾಶ ನೀಡಿದ್ದಲ್ಲಿ ಹೆರಿಗೆ ವಾರ್ಡನ್ನು ಇನ್ನಷ್ಟು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಆನೆಗುಡ್ಡೆ ಶ್ರೀ ಸಿದ್ಧಿವಿನಾಯಕ ದೇವಸ್ಥಾಣ ಹಾಗೂ ಗುಜ್ಜಾಡಿಯ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿದರು. ಶಿಲ್ಪಾ ಜಗದೀಶ ಶೆಟ್ಟರ್, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ರಘುಪತಿ ಭಟ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ಎಂ.ಸುಕುಮಾರ್ ಶೆಟ್ಟಿ, ಆರೆಸ್ಸೆಸ್ ಮುಖಂಡ ಶಂಭು ಶೆಟ್ಟಿ, ಉದ್ಯಮಿ ರಮೇಶ ಶೆಟ್ಟಿ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ತಾಲೂಕು ಪಂಚಾಯತ್ ಸದಸ್ಯ ನಾರಾಯಣ ಕೆ. ಗುಜ್ಜಾಡಿ, ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ ಮೇಸ್ತ, ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಗಂಗೊಳ್ಳಿ ಗ್ರಾಪಂ ಸದಸ್ಯ ಬಿ.ಗಣೇಶ ಶೆಣೈ, ಜಿ.ರೋಹಿದಾಸ ನಾಯಕ್, ಗಣೇಶ ನಾಯಕ್, ಮೋಹನ ನಾಯ್ಕ್, ಅಶೋಕ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು. ಶ್ರೀದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ ಜಗದೀಶ ಶೆಟ್ಟರ್ ದೇವಸ್ಥಾನದ ಗುಜ್ಜಾಡಿ ನಾಯಕ್ ಕುಟುಂಬಸ್ಥರ ಮೂಲ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ದ.ಕ ಜಿಲ್ಲಾ ಪರಿಷತ್‌ನ ಮಾಜಿ ಅಧ್ಯಕ್ಷ ಕೋಟ ಎಂಬ ಗ್ರಾಮೀಣ ಭಾಗದಲ್ಲಿ ಉದ್ಯಮ ರಂಗವನ್ನು ಸ್ಥಾಪಿಸಿ ಕ್ರಾಂತಿ ಪಸರಿಸಿದ ಕೆ.ಸಿ ಕುಂದರ್ ಇಂದು ಬೆಳಿಗ್ಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. 1930 ಎಪ್ರೀಲ್ ನಾಲ್ಕರಂದು ಕೋಟದ ಸದಿಯಮ್ಮ ಚಿಕ್ಕಯ್ಯ ಸಾಹುಕಾರರ ಪ್ರಥಮ ಪುತ್ರರಾಗಿ ಜನಿಸಿದ ಕೆ.ಸಿ ಯವರು ರಾಜಕೀಯ ಕ್ಷೇತ್ರದಲ್ಲಿ ಗ್ರಾಮೀಣ ಭಾಗವಾದ ಕೋಟ ಪರಿಸರಕ್ಕೆ ಹೊಸ ದಿಕ್ಕನ್ನು ತೋರಿದ ಮೇರು ರಾಜಕಾರಣಿಯಾಗಿ ಉದ್ಯಮ ಲೋಕದಲ್ಲಿ, ಮೀನುಗಾರಿಕಾ ಕ್ಷೇತ್ರದಲ್ಲಿ , ಇತರ ಸಂಘ ಸಂಸ್ಥೆ ಹಾಗೂ ಹಲವು ದೇವಸ್ಥಾನದ ಟ್ರಸ್ಟಿಗಳಲ್ಲಿ ಅತ್ಯತ್ತಮವಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿ ತಮ್ಮ ಜೀವನದ್ದುದ್ದಕ್ಕೂ ಯಶಸ್ಸನ್ನು ಗಳಿಸಿಕೊಂಡವರು. ಆದರೆ ವರ್ಷ 80 ದಾಟಿದರೂ ಕೆಲಸ ಕಾರ್ಯದ ಹುಮ್ಮಸ್ಸು ಕಳೆಗುಂದದ ಜೀವನವೆನ್ನುವಂತ್ತಿತ್ತು ಇತ್ತೀಚಗಿನ ದಿನಗಳಲ್ಲಿ ಆರೋಗ್ಯದಲ್ಲಿ ಅನಾನುಕೂಲತೆ ಅವರನ್ನು ತನ್ನ ಕಾರ್ಯಕ್ಷೇತ್ರದಲ್ಲಿ ಹಿನ್ನಡೆ ಎಳೆಯುವಂತೆ ಮಾಡಿದೆ.ಕೆಲವು ದಿನಗಳಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಗುರುವಾರ ಪೂರ್ವಾಹ್ನ ಹೃದಯಾಘಾತದಿಂದ ಇಹಲೋಕ ತೇಜಿಸಿದರು. ಶಿಕ್ಷಣ ಚಿಕ್ಕಂದಿನಿಂದ ಚುರುಕು…
