ದಿಲೀಪ್ ಕುಮಾರ್ ಶೆಟ್ಟಿ. ಊರ ಬದಿ ಹಬ್ಬ ಅಂದ್ರೆ ಹಾಂಗೆ, ಗಡ್ಜು-ಗಮ್ಮತ್ತು. ಅಂತೂ ಗೆಂಡದ ಹಬ್ಬ ಗಮ್ಮತಂಗೆ ಪೂರೈಸಿ ಶಾಲಿಗೆ ಹ್ವಾಪು ದಾರೆಗೆ, ಹಬ್ಬದ ರಾತ್ರಿ ಆಟಕ್ಕೆ ಹ್ವಾಪು plan ಮಾಡ್ಕಂತಾ ಶಾಲೀ ತಲುಪ್ತ್. ರಾತ್ರಿಗೆ ಒಂದು ಒಳ್ಳೆ ಆಟ ಕಾಂಬು ಕನಸಿನಗೆ, ಶಾಲಿ ಎಷ್ಟೋತಿಗ್ ಮುಗಿತ್ತ್ ಅಂದೇಳಿ ಕಾಯ್ತಾ ಕೂಕಂತ್. ಇನ್ನೆನ್ last bell ಹೊಡಿತ್, ಚೀಲ ಹಿಡ್ಕಂಡ್ ಓಡುಕ್ ಶುರು ಮಾಡ್ತ್. ಇವತ್ತ್ ಬೇಗ ಗುಡ್ಡೆಗ್ ಆಡ್ಕಂಡ್, ಬೇಗೆ ಮೈಗೆ ನೀರ್ ಹೈಕಂಡ್, ಅಜ್ಜಯ್ಯಂಗೆ ಗೊತ್ತಯ್ದೆ ಅಮ್ಮನ ಹತ್ರ separate ಆಯಿ ದುಡ್ಡ್ ಕೆಂಡ್, ಅಜ್ಜಯ್ಯನ ಹತ್ತಿರ, ಅಮ್ಮನ ಹತ್ರ ದುಡ್ಡ್ ಕೆಂಡದ್ದ್ ಗೊತ್ತಯ್ದೆ ಇದ್ದ ಹಾಂಗೆ ಇನ್ನೊಂದ್ ಸಲ ಕೆಂಡ್, ಹ್ಯಾಂಗಾರೂ ಮಾಡಿ ಒಂದ್ 20 ರೂಪಾಯಿ ಒಟ್ಟ್ ಮಾಡ್ಕಂಡ್ ಗಮ್ಮತ್ ಮಾಡ್ಕ್ ಅಂದೇಳಿ plan ಶುರು ಮಾಡ್ದಿ. ಮನಿಗ್ ಬಂದ್ ಅಮ್ಮನ ಹತ್ರ “ಅಮ್ಮ, ನಾನ್ ಗೆದ್ದಿಗ್ ಬತ್ತಿ, ಕಳೆ ಹುಲ್ಲ್ ಹೊತ್ಕಬತ್ತಿ ಅಕ್ಕಾ??, ನೀನ್…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಿಂದೆ ಪ್ರತಿ ಮನೆಯಲ್ಲಿಯೂ ಆಯುರ್ವೇದ ಪದ್ಧತಿ ಬಳಕೆಯಲ್ಲಿತ್ತು. ಸಣ್ಣ ಪುಟ್ಟ ಕಾಯಿಲೆಯಿಂದ ಹಿಡಿದು ಎಲ್ಲದಕ್ಕೂ ಗಿಡಮೂಲಿಕೆಗಳಿಂದ ಔಷಧಿ ತಯಾರಿ ನೀಡುವ ಕ್ರಮವಿತ್ತು. ಆಧುನಿಕರಾದಂತೆ ವೈದ್ಯಕೀಯ ಕ್ಷೇತ್ರದಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿದ್ದರೂ ಆಯುರ್ವೇದ ಹಾಗೂ ಯುನಾನಿ ಪದ್ದತಿ ಇಂದಿಗೂ ತನ್ನ ಮಹತ್ವನ್ನು ಉಳಿಸಿಕೊಂಡಿದೆ ಎಂದು ಕುಂದಾಪುರ ಡಿಎಸ್ಪಿ ಮಂಜುನಾಥ ಶೆಟ್ಟಿ ಹೇಳಿದರು. ಬೆಂಗಳೂರು ಆಯುರ್ವೇದ ಹಾಗೂ ಯುನಾನಿ ವೈದ್ಯ ಮಂಡಳಿ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಧನ್ವಂತರಿ ಆಯುರ್ ಜ್ಯೋತಿ ರಥಯಾತ್ರೆಯನ್ನು ಕುಂದಾಪುರ ತಾಲೂಕು ವೈದ್ಯ ಮಂಡಳಿಯು ಕುಂದಾಪುರ ತಾಲೂಕು ಪಂಚಾಯತ್ ಆವರಣಕ್ಕೆ ಬರಮಾಡಿಕೊಂಡ ಬಳಿಕ ನಡೆದ ಕಾರ್ಯಕ್ರಮದಲ್ಲಿ ಆಯುರ್ ಜ್ಯೋತಿ ಬೆಳಗಿ ಮಾತನಾಡಿದರು. ತಾ.ಪಂ ಅಧ್ಯಕ್ಷ ಭಾಸ್ಕರ್ ಬಿಲ್ಲವ, ಉಡುಪಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಅಲಕಾನಂದ ರಾವ್, ಲಯನ್ಸ್ ಕ್ಲಬ್ ಕುಂದಾಪುರ ಅಧ್ಯಕ್ಷ ಅಶೋಕ್ ಬೆಟ್ಟಿನ್, ಪತ್ರಕರ್ತ ಕೆ. ಜಿ. ವೈದ್ಯ ಉಪಸ್ಥಿತರಿದ್ದರು. ಆಯುರ್ವೇದ ಹಾಗೂ ಯುನಾನಿ ವೈದ್ಯ ಮಂಡಳಿ ಸದಸ್ಯ ಡಾ. ಎಂ.…
ಕುಂದಾಪರ: ಜೆಸಿ ಕುಂದಾಪುರ ಸಿಟಿ ಇದರ ಪದಪ್ರದಾನ ಸಮರಂಭ ಕೋಕ್ಯರೀಸ್ ಓಪನ್ ಏರ್ ಬೀಚ್ ವೇದಿಕೆಯಲ್ಲಿ ನಡೆಯಿತು. ವಲಯ 15ರ ವಲಯ ಅಧ್ಯಕ್ಷರಾದ ಸಂದೀಪ್ ಕುಮಾರ್ ನೂತನ ಸದ್ಯಸರಿಗೆ ಪ್ರಮಾಣ ವಚನ ನೀಡಿದರು ವೇದಿಕೆಯಲ್ಲಿ ಪೂರ್ವ ವಲಯಧ್ಯ ವೈ ಸುಕುಮಾರ್, ಉದ್ಯಮಿ ವಿಠ್ಠಲ್ ಶೆಟ್ಟಿ, ವಲಯ ಉಪಾಧ್ಯಕ್ಷ ನಿತಿನ್ ಅವಭ್ರತ, ಕಾರ್ಯಕ್ರಮ ಸಂಘಟಕರಾದ ನಾಗೇಂದ್ರ ಪೈ, ಶೇಷಾದ್ರಿ ಉಪಾಧ್ಯಾಯ, ಜೂನಿಯರ್ ಜೆ ಸಿ ಅಧ್ಯಕ್ಷ ಸನತ್ ಶೆಟ್, ಸ್ವಪ್ನಿಲ್ ತಂಗಪನ್, ಜೆಸಿರೆಟ್ ಅಧ್ಯಕ್ಷೆ ಸುನೀತಾ ಶ್ರೀಧರ್, ಪುಷ್ಪ ಶೆಟ್ ಉಪಸ್ಥಿತಿತರಿದ್ದರು. ಚಾಪ್ಟರ್ ಅಧ್ಯಕ್ಶರದ ಚಂದ್ರಕಾಂತ ಸ್ವಾಗತಿಸಿದರು, ಬಿಂದು ತಂಕಪನ್, ಕೆ ಕಾರ್ತಿಕೇಯ ಮಧ್ಯಸ್ತ, ನಾಗೇಶ್ ನವದ , ವಿಜಯ ಭಂಡಾರಿ ,ರಾಘವೇಂದ್ರ ನಾವಡ, ರಾಘವೇಂದ್ರ ಭಟ್ ಅತಿಥಿಗಳನ್ನು ಪರಿಚಯಿಸಿದರು, ನೂತನ ಅಧ್ಯಕ್ಷ ಮಂಜುನಾಥ ಕಾಮತ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಗೌತಮ್ ನಾವಡ ಸ್ವಾಗತಿಸಿದರು.
ಕುಂದಾಪುರ: ರಾಷ್ಟ್ರೀಯ ಯುವ ಸಾಪ್ತಾಹದ ಅಂಗವಾಗಿ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಸ್ವಾಮಿ ವಿವೇಕಾನಂದರ ಸಂದೇಶ ಜಾಥಾ ಜರುಗಿತು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ. ನಾರಾಯಣ ಶೆಟ್ಟಿ ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಶುಪಾಲ ಜಿ.ಎಂ ಗೊಂಡ ಅವರ ನೇತೃತ್ವದಲ್ಲಿ ಸಾವಿರಾರು ವಿಧ್ಯಾರ್ಥಿಗಳು ಜಾಥಾದಲ್ಲಿ ಭಾವಹಿಸಿದ್ದರು. ಕಾಲೇಜು ಆವರಣದಿಂದ ಹೊರಟ ಜಾಥಾ ಕುಂದಾಪುರ ಮಾಸ್ತಿ ಕಟ್ಟೆಯವರೆಗೆ ಸಾಗಿ ಪುರಸಭೆ ರಸ್ತೆ ಮೂಲಕ ಮತ್ತೆ ಸ್ವಸ್ಥಾನಕ್ಕೆ ತೆರಳುವ ಮೂಲಕ ಸಮಾಪನಗೊಂಡಿತು.
ಕುಂದಾಪುರ: ಜನಪ್ರತಿನಿಧಿ ಎಂದೆನಿಸಿಕೊಂಡವರಿಗೆ ಊರಿನ ಪ್ರತಿ ಮನೆಯ ಮಾತು ಹಾಗೂ ಮನೆಯ ಪ್ರತಿಯೊಬ್ಬರ ಮನಸ್ಸಿನ ಮಾತು ತಿಳಿದಿರಬೇಕು. ಅದರೊಂದಿಗೆ ಜನಸಾಮಾನ್ಯರ ಬದುಕು ಹಸನಾಗಿಸಲು ಬೇಕಾದ ಯೋಚನೆ ಹಾಗೂ ಯೋಜನೆಯನ್ನು ಅನುಷ್ಠಾನಗೊಳಿಸುವ ಬದ್ಧತೆ ಇರುಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಪುರಸಭೆಯ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಉಚಿತ ಗ್ಯಾಸ್ ಸಂಪರ್ಕ ವಿತರಣೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿದ ಬಳಿಕ ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಅವರು ಮಾತನಾಡಿದರು. ಸಂಸದರು ಹಾಗೂ ಶಾಸಕರ ಕ್ಷೇತ್ರ ವ್ಯಾಪ್ತಿ ದೊಡ್ಡದಿರುವುದರಿಂದ ಎಲ್ಲಾ ಜನರನ್ನು ತಲುಪಲು ಸಾಧ್ಯವಿಲ್ಲ. ಆದರೆ ಸ್ಥಳೀಯಾಡಳಿತ ಪ್ರತಿನಿಧಿಗಳಿಗೆ ಆ ಅವಕಾಶವಿದೆ. ತಮ್ಮ ಕ್ಷೇತ್ರದ ಪ್ರತಿ ಮನೆಯ ವ್ಯಕ್ತಿಯನ್ನೂ ಸಂಪರ್ಕಿಸಿ ಅಲ್ಲಿನ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಕೆಲಸವಾಗಬೇಕು ಎಂದರು. ಪುರಸಭೆ ಅಧ್ಯಕ್ಷೆ ಕಲಾವತಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಪುರಸಭಾ ಸದಸ್ಯರ ಪರವಾಗಿ ಗುಣರತ್ನ ಅಭಿನಂದಿಸಿದರು. ಶಲಿತಾ ಫನಾನುಭವಿಗಳ ಪಟ್ಟಿ ವಾಚಿಸಿದರು. ಜ್ಯೋತಿ ನಿರೂಪಿಸಿದರು.
ಕುಂದಾಪುರ: ತಲ್ಲೂರಿನಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ವ್ಯಕ್ತಿಯೋರ್ವರಿಗೆ ಹಿಂದಿನಿಂದ ಬಂದ ಗೂಡ್ಸ್ ರಿಕ್ಷಾವೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ವರದಿಯಾಗಿದೆ. ಬೋನಿಪಾಸ್ ಲೇವಿಸ್(52) ಮೃತ ದುರ್ದೈವಿ. ಬೋನಿಪಾಸ್ ಕುಂದಾಪುರಕ್ಕೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಗೂಡ್ಸ್ ರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಬಿದ್ದು ಮೃತಪಟ್ಟಿದ್ದಾರೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗೊಳ್ಳಿ : ಸ್ವಾಮಿ ವಿವೇಕಾನಂದರು ಇಡೀ ಜಗತ್ತಿಗೆ ಬೆಳಕು ನೀಡಿದ ದಾರ್ಶನಿಕ. ಅವರ ವಿಚಾರಧಾರೆಗಳ ಬಗೆಗೆ ನಮ್ಮ ಯುವಕರ ನಡುವೆ ವಿಚಾರ ಮಂಥನಗಳು ನಡೆಯಬೇಕು ಎಂದು ಸರಸ್ವತಿ ವಿದ್ಯಾಲಯದ ಪ್ರಭಾರ ಪ್ರಾಂಶುಪಾಲೆ ಕವಿತಾ ಎಮ್ .ಸಿ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ವಿವೇಕ ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಲ್ಲಿ ವಿವೇಕಾನಂದರ ತತ್ವಗಳ ಕುರಿತಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಡೆದ ವಿದ್ಯಾರ್ಥಿ ವಿವೇಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಇಂದು ಸಮಾಜದ ಯುವಶಕ್ತಿ ಒಂದು ನಿರ್ದಿಷ್ಠ ಗುರಿಯಿಲ್ಲದೆ ಮುಂದೆ ಸಾಗುತ್ತಿರುವುದು ತಮ್ಮ ಜವಾಬ್ದಾರಿಗಳನ್ನು ಮರೆತಿರುವುದು ವಿಷಾದಕರ.ವಿವೇಕಾನಂದರ ಬದುಕು ಮತ್ತು ಸಾಧನೆಗಳು ಅವರಿಗೆ ಉತ್ತಮ ಬದುಕು ಕಟ್ಟಿಕೊಳ್ಳುವಲ್ಲಿ ಪ್ರೇರೆಪಣೆ ನೀಡುತ್ತವೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳಾದ ವಿನ್‌ಸ್ಟ್‌ನ್ ಪಿಂಟೋ,ತಿರುಮಲೇಶ ಭಟ್, ಹೃತಿಕ್ ಖಾನೋಜಿ,ನಾಗರಾಜ ನಾಯಕ್, ಸುನೈನಾ ಬಾನು, ಆಶ್ಮಿತಾ, ಅನುಷಾ ಪೂಜಾರಿ,ನಿಶ್ಮಿತಾ ಮತ್ತು ರಕ್ಷಿತಾ ಕೊತ್ವಾಲ್ ವಿವೇಕಾನಂದರ ಬದುಕು ಮತ್ತು ಅವರು ಪ್ರತಿಪಾದಿಸಿದ ವಿಚಾರಗಳ ಬಗೆಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ವಿದ್ಯಾರ್ಥಿನಿ ಆಶಾ ಪ್ರಾರ್ಥಿಸಿದರು.…
: ಭಾನುವಾರ ಮುಂಜಾನೆ ಹರಿದ್ವಾರದಲ್ಲಿ ಅಸ್ತಂಗತರಾಗಿರುವ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರಿಗೆ ಗಂಗೊಳ್ಳಿಯ ಜಿಎಸ್‌ಬಿ ಸಮಾಜಬಾಂಧವರು ಭಕ್ತಿಪೂರ್ವಕ ಶ್ರದ್ಧಾಂಜಲಿ ಅರ್ಪಿಸಿದರು. ಗಂಗೊಳ್ಳಿಯ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದ ದೇವ ಸನ್ನಿಧಿಯಲ್ಲಿ ಗೌರ ಸಾರಸ್ವತ ಸಮಾಜದ ಭಕ್ತಾದಿಗಳು ಹಾಗೂ ಸಮಾಜ ಬಾಂಧವರು ಶ್ರೀದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಶ್ರೀಗಳ ಆತ್ಮಕ್ಕೆ ದೇವರು ಚಿರಶಾಂತಿ ಸದ್ಗತಿ ಕರುಣಿಸಲಿ ಎಂದು ಪ್ರಾರ್ಥನೆ ಸಲ್ಲಿಸಿ ಭಕ್ತಿಪೂರ್ವಕ ಶ್ರದ್ಧಾಂಜಲಿ ಅರ್ಪಿಸಿದರು. ವೇದಮೂರ್ತಿ ಕೆ.ರಾಮದಾಸ ಭಟ್, ವೇದಮೂರ್ತಿ ಜಿ.ನಾರಾಯಣ ವಿಶ್ವನಾಥ ಆಚಾರ್ಯ, ವೇದಮೂರ್ತಿ ಜಿ.ವೇದವ್ಯಾಸ ಕೃಷ್ಣಾನಂದ ಆಚಾರ್ಯ, ಎಚ್.ರಂಗನಾಥ ಕಾಮತ್ ಹಾಗೂ ಎಂ.ಜಿ.ಪ್ರಕಾಶ ಪೈ ಶ್ರೀಗಳಿಗೆ ಗಂಗೊಳ್ಳಿಯ ಮೇಲಿದ್ದ ಅಭಿಮಾನ ಪ್ರೀತಿ ವಿಶ್ವಾಸ ಬಗ್ಗೆ ಮಾತನಾಡಿ ನುಡಿ ನಮನ ಸಲ್ಲಿಸಿದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಜಿ.ಮೋಹನದಾಸ ಭಟ್, ಶ್ರೀ ಅಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಜಿ.ಅನಂತಕೃಷ್ಣ ಭಟ್, ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕಟರಮಣ…
ಬೈಂದೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಿತು. ಜಿಪಂ ಸದಸ್ಯೆ ಗೌರಿ ದೇವಾಡಿಗ ಮತ್ತು ತಾಪಂ ಸದಸ್ಯ ಎಸ್.ರಾಜು ಪೂಜಾರಿ ಜಂಟಿಯಾಗಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮಹೇಂದ್ರ ಕುಮಾರ್ ಶೆಟ್ಟಿ, ರೋಟರಿ ಅಧ್ಯಕ್ಷ ರಘುರಾಮ ಶೆಟ್ಟಿ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಗಂಗೊಳ್ಳಿ: ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವಠಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ ಹಾಗೂ ರೋಟರಿ ಕ್ಲಬ್ ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಹಮಿಕೊಳ್ಳಲಾಗಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ – 2016ಕ್ಕೆ ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ ಚಾಲನೆ ನೀಡಿದರು. ತಾಲೂಕು ಪಂಚಾಯತ್ ಸದಸ್ಯೆ ಪೂರ್ಣಿಮಾ…
ಬೈಂದೂರು: ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ರಾಜ್ಯದ ಬರಗಾಲ, ಬತ್ತಿರುವ ಜಲಾಶಯ ಹಾಗೂ ರೈತ ಆತ್ಮಹತ್ಯೆಯ ಕಾರಣವೊಡ್ಡಿ ವಿಶೇಷ ಅನುದಾನ ನೀಡುವಂತೆ ವಿನಂತಿ ಮಾಡಿಕೊಂಡಿದ್ದೆವು. ಅದರಂತೆ ಕರ್ನಾಟಕ ರಾಜ್ಯಕ್ಕೆ 1540ಕೋಟಿ ಅನುದಾನ ಬಿಡುಗಡೆಯಾಗಿದೆ. ಪ್ರಧಾನಮಂತ್ರಿಗಳಿಗೆ ಸದಾ ಬೆಟ್ಟು ತೋರಿಸಿ ಟೀಕೆ ಮಾಡುವ ಸಿದ್ಧರಾಮಯ್ಯನವರು ಇನ್ನಾದರೂ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ರಾಜ್ಯದ ಜನರ ನೋವಿಗೆ ಸ್ಪಂದಿಸಲಿ ಎಂದು ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಿ. ಎಸ್. ಯಡಿಯೂರಪ್ಪ ಸಲಹೆಯಿತ್ತರು. ಭಾನುವಾರ ಬೈಂದೂರು ಬೈಪಾಸ್ ಬಳಿ ಬಿಜೆಪಿ ಬೈಂದೂರು ಘಟಕ ಆಯೋಜಿಸಿದ್ದ ಕಾರ್ಯಕರ್ತರ ಸಾರ್ವಜನಿಕ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅಭಿನಂದಿಸಿ ಬಳಿಕ ಮಾತನಾಡಿದರು. ಕರ್ನಾಟಕದ ಕಾಂಗ್ರೆಸ್ ಸರಕಾರ ಬದುಕಿದೆಯೋ ಸತ್ತಿದೆಯೋ ಎಂಬ ಅನುಮಾನ ಕಾಡುತ್ತಿದೆ. ಆಡಳಿತ ಯಂತ್ರ ನಿಧಾನಗತಿಯಲ್ಲಿ ಸಾಗುತ್ತಿದೆ. ಅಹಿಂದ್ ಸರಕಾರ ಎಂದು ಹೇಳಿಕೊಳ್ಳುತ್ತಿದ್ದ ಮುಖ್ಯಮಂತ್ರಿಗಳು ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ಸೇರಬೇಕಾದ ಹಣವನ್ನು ಇಲಾಖೆಯಲ್ಲಿಯೇ ಉಳಿಸಿಕೊಂಡು ಅಧಿಕಾರಿಗಳ ಮೇಲೆ ರೇಗಾಡುತ್ತಿರುವುದು ಮತ್ತೆ ಅಹಿಂದ್ ಜನರ…
