Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ದಿಗ್ಗಜರನ್ನು ಗುರುತಿಸಿ ನೀಡಲಾಗುತ್ತಿರುವ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಯು ಬೈಂದೂರಿನ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ದೊರಕಿದೆ. ಪ್ರಸ್ತುತ ಕತಾರಿನಲ್ಲಿ ನೆಲೆಸಿರುವ ಸುಬ್ರಹ್ಮಣ್ಯ ಅವರು ಕನ್ನಡ ನಾಡು ನುಡಿಗಾಗಿ ಸಲ್ಲಿಸಲಾಗುತ್ತಿರುವ ಸೇವೆಯನ್ನು ಗುರುತಿಸಿ ಪ್ರಸಕ್ತ ಸಾಲಿನ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಕತಾರ್‌ನಲ್ಲಿ ಪಸರಿಸುತ್ತಿರುವ ಸುಬ್ರಹ್ಮಣ್ಯ ಅವರು ಕತಾರ್ ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕತಾರ್ ಕರ್ನಾಟಕ ಸಂಘದ ಮೂಲಕ ಹತ್ತಾರು ಕನ್ನಡಪರ, ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2013-15ನೇ ಸಾಲಿನಲ್ಲಿ ಕರ್ನಾಟಕ ಸಂಘ ಕತಾರಿನ ಸದಸ್ಯತ್ವ ನೋಂದಣಿ ಸಂಚಾಲಕರಾಗಿ, ಕಾರ್ಯಕಾರಣಿ ಸಮಿತಿಯ ಖಜಾಂಜಿಯಾಗಿಯೂ ಸೇವೆ ಸಲ್ಲಿಸಿದ್ದರು. ತಮ್ಮ ಕ್ರೀಯಾಶೀಲ ವ್ಯಕ್ತಿತ್ವ, ಸಮಾಜ ಸೇವೆಯಡೆಗಿನ ನಿರಂತರ ತುಡಿತ ಹಾಗೂ ಅತ್ಯುತ್ತಮ ಸಂಘಟನಾ ಕೌಶಲ್ಯದಿಂದ ಸುಬ್ರಹ್ಮಣ್ಯ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ಕತಾರ್ ಕರ್ನಾಟಕ ಸಂಘಕ್ಕೆ ಕನ್ನಡಿಗರನ್ನು ಸದಸ್ಯರನ್ನಾಗಿ ಸೇರಿಸುವಲ್ಲಿ ಹಾಗೂ ಈ ಭಾಗದಲ್ಲಿ ವಿವಿಧ…

Read More

ಹತ್ತು ಹಲವು ಸೌಲಭ್ಯಗಳೊಂದಿಗೆ ಉಚಿತ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಕುಂದಾಪ್ರ ಡಾಟ್ ಕಾಂ ವರದಿ.  ಗಂಗೊಳ್ಳಿ: ಸರಕಾರಿ ಶಾಲೆಗಳಿಂದ ಮಕ್ಕಳು ವಿಮುಖರಾಗಿ ಖಾಸಗಿ ಶಾಲೆಗಳತ್ತ ಮುಖಮಾಡುತ್ತಿರುವ ಕಾಲಘಟ್ಟದಲ್ಲಿ ಹಳೆ ವಿದ್ಯಾರ್ಥಿಗಳು ಮಾತ್ರ ತಾವು ಕಲಿತ ಸರಕಾರಿ ಶಾಲೆಗಳ ಉಳಿವಿಗೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಲೇ ಬಂದಿದ್ದಾರೆ. ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆದು ಸರಕಾರಿ ಶಾಲೆಗಳಲ್ಲಿಯೇ ಗುಣಮಟ್ಟದ ದೊರೆಯುವಂತೆ ಮಾಡುವುದರ ಜೊತೆಗೆ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವಲ್ಲಿ ಸತತವಾಗಿ ಶ್ರಮಿಸುತ್ತ ತಾವು ಕಲಿತ ತಮ್ಮೂರಿನ ಶಾಲೆಯ ಶ್ರೇಯಸ್ಸಿನಲ್ಲಿ ತೊಡಗಿಕೊಂಡಿದ್ದಾರೆ ಎಂಬುದು ಸರಕಾರಿ ಶಾಲೆಗಳ ಉಳಿವಿನ ಬಗೆಗೊಂದು ಆಶಾಭಾವನೆ ಮೂಡಿಸಿದೆ. ಶತಮಾನ ಪೂರೈಸಿರುವ ಗಂಗೊಳ್ಳಿಯ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ಇಂತಹದ್ದೊಂದು ಪ್ರಯತ್ನವನ್ನು ಕಳೆದ ಎರಡು ದಶಕಗಳ ಹಿಂದಿನಿಂದಲೇ ಆರಂಭಿಸಿಕೊಂಡು ಬಂದಿದ್ದು ಶಾಲೆಯ ಸರ್ವತೋಮುಖ ಏಳಿಗೆಯಲ್ಲಿ ಜೊತೆಯಾಗಿದ್ದಾರೆ. ಹಳೆ ವಿದ್ಯಾರ್ಥಿಗಳ ನಿರಂತರ ಪ್ರಯತ್ನದಿಂದಾಗಿ ಪ್ರಸ್ತುತ ವರ್ಷದಿಂದ ಶಾಲೆಗೆ ಮಕ್ಕಳ ದಾಖಲಾತಿಯೂ ಹೆಚ್ಚಿದೆ. ಶತಮಾನ ಕಂಡ ಶಾಲೆ: 1895ರಲ್ಲಿ ದಿ. ಶಾಬುದ್ದೀನ್ ಅಬ್ದುರ್ರಹೀಮ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹೊಸೂರು ಗ್ರಾಮದ ವಿಜಿತ್ ಕುಮಾರ್ ಅವರಿಗೆ ಇಟಲಿಯ ಪ್ರತಿಷ್ಠಿತ ಪಾಲಿಟೆಕ್ನಿಕೋ ಡಿ ಮಿಲಾನ್ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ವಿಜಿತ್ ಕುಮಾರ್ ಅವರ ‘ಹೈಡ್ರೋಜನ್ ಅಂಡ್ ಹ್ಯಾಲೊಜೆನ್ ಬಾಂಡಿಂಗ್; ಟವರ್ಡ್ಸ್ ಮೊಲಿಕ್ಯುಲರ್ ರೆಕೊಗ್ನಿಷನ್ ಅಂಡ್ ಸಪರೇಷನ್’ ಎಂಬ ಮಹಾಪ್ರಭಂದಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇಟಲಿಯ ಗ್ಯುಸೆಪ್ಪಿ ರೆಸ್ನಾಟಿಯವರ ಮಾರ್ಗದರ್ಶನದಲ್ಲಿ ಮತ್ತು ಜಪಾನ್ ನ ಟೋಕಿಯೋ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಪಿಎಚ್‌ಡಿ ಪೂರೈಸಿದ್ದಾರೆ. ವಿಜತ್ ಅವರು ಇಡೂರು-ಕುಂಜ್ಞಾಡಿಯ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಂಡ್ಸೆಯಲ್ಲಿ ಪಡೆದಿರುತ್ತಾರೆ. ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜು, ಮಡಿಕೇರಿಯ ಎಫ್.ಎಂ.ಕಾರ್ಯಪ್ಪ ಕಾಲೇಜು ಮತ್ತು ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಹಳೆ ಪದವಿ ತನಕದ ಶಿಕ್ಷಣ ಪೂರೈಸಿದ್ದರು. ತಾಲೂಕಿನ ಹೊಸೂರು ಗ್ರಾಮದ ಸರೋಜಿನಿ ಮತ್ತು ಮಂಜುನಾಥ ಶೆಟ್ಟಿ ದಂಪತಿಯ ಪುತ್ರರಾಗಿರುವ ವಿಜಿತ್ ಕುಮಾರ್, ಇಟಲಿಯ ಪಾಲಿಟೆಕ್ನಿಕೋ ಡಿ ಮಿಲಾನ್ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟೊರಲ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಹಂಗಳೂರು ಶ್ರೀ ಪ್ರಸನ್ನ ಆಂಜನೇಯ ದೇವಸ್ಥಾನದ 13ನೇ ವರ್ಷದ ವಾರ್ಷಿಕೋತ್ಸವ ಹಾಗೂ ಧಾರ್ಮಿಕ ಸಭೆ ಜರುಗಿತು. ಈ ಸಂದರ್ಭದಲ್ಲಿ ಕುಂದಾಪುರದ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ಮಾತನಾಡಿ, ಆಂಜನೇಯ ಶಕ್ತಿ, ಸ್ವಾಮಿನಿಷ್ಠೆ, ಯುಕ್ತಿಯ ಮೂಲಕ ಪ್ರಸಿದ್ದಿ ಪಡೆದು ನೆಚ್ಚಿನ ದೇವರಾಗಿ ಜನರ ಕಷ್ಟ ನಿವಾರಿಸುತ್ತಾ ಬಂದಿದ್ದಾನೆ. ವಿದ್ಯಾರ್ಥಿಗಳು ತಮ್ಮ ಜೀವನಲ್ಲಿ ಧಾರ್ಮಿಕತೆ ಅಳವಡಿಸಿಕೋಳ್ಳಬೇಕು.ದೇವರ ಮೇಲೆ ನಂಬಿಕೆಯಿಂದ ಮನುಷ್ಯನು ಸಾರ್ಥಕ ಜೀವನ ನಡೆಸಲು ಸಾದ್ಯವಾಗುತ್ತದೆ ಎಂದರು. ಮುಂಬೈ ಉದ್ಯಮಿ ನಾಗರಾಜ ಪಡುಕೋಣೆ ಧಾರ್ಮಿಕ ಸಭೆ ಉದ್ಘಾಟಿಸಿದರು. ಕೋಟೇಶ್ವರ ಜಿಪಂ ಸದಸ್ಯೆ ಲಕ್ಷ್ಮೀ ಎಂ.ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ, ಹಂಗಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಲಜ ಆರ್ ಚಂದನ, ಕರ್ನಾಟಕ ರಾಜ್ಯ ಅರಣ್ಯ ಇಲಾಖಾ ನೌಕರರ ಮಹಾಮಂಡಲ ಅಧ್ಯಕ್ಷ ರಘುರಾಮ ದೇವಾಡಿಗ ಆಲೂರು ಉಪಸ್ಥಿತರಿದ್ದರು. ದೇವಸ್ಥಾನ ಸಂಸ್ಥಾಪಕ ಸುರೇಶ ಡಿ ಪಡುಕೋಣೆ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿದರು. ತಾಲೂಕ್ ದೇವಾಡಿಗರ…

Read More

ತಾಯಿಯ ತಮಾಷೆ ಹೊಸ ಸೂತ್ರಕ್ಕೆ ಪ್ರೇರಣೆ [quote bgcolor=”#ffffff” bcolor=”#dd3333″ arrow=”yes” align=”right”]ಅಮ್ಮಾ ನನ್ನ ಶಿಕ್ಷಕರು ಕೊಟ್ಟಿರುವ ರೇಖಾಗಣಿತದ ಈ ಲೆಕ್ಕದಲ್ಲಿ ಬಾಹುಗಳ ಸಂಖ್ಯೆ ಕಂಡುಹಿಡಿಯಲು 2 ಸೂತ್ರಗಳ ಬದಲು ಒಂದೇ ಸೂತ್ರ ಯಾಕೆ ಕೊಟ್ಟಿಲ್ಲ ಎಂದು ಕೇಳಿದ. ಅದಕ್ಕೆ ಅವನ ತಾಯಿ ತಮಾಷೆಗಾಗಿ ಈ ರೀತಿಯ ಸೂತ್ರ ಇದುವರೆಗೆ ಯಾರೂ ಕಂಡುಹಿಡಿದಿಲ್ಲ. ಬೇಕಾದರೆ ನೀನೇ ಹೊಸ ಸೂತ್ರ ಕಂಡುಹಿಡಿ ಎಂದು ತಮಾಷೆ ಮಾಡಿದರು.  ಹೌದು ನಾನೇಕೆ ಹೊಸ ಸೂತ್ರ ಕಂಡು ಹಿಡಿಯಬಾರದು ಎಂದು ಮನಸ್ಸಿನಲ್ಲಿಯೇ ಸಂಕಲ್ಪ ಮಾಡಿದ ಆತ ಸೂತ್ರ ಕಂಡುಹಿಡಿಯಲು ಮುಂದಾದ. [/quote] ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಗಣಿತ ಎಂದರೆ ಕಬ್ಬಿಣದ ಕಡಲೆ ಎಂದೇ ಭಾವಿಸುವ ವಿದ್ಯಾರ್ಥಿಗಳ ನಡುವೆ ಪಠ್ಯ ಪುಸ್ತಕದ ಲೆಕ್ಕಕ್ಕೆ ಸಡ್ಡು ಹೊಡೆದ ಬಾಲಕನೋರ್ವ ತಾನೇ ಹೊಸ ಗಣಿತ ಸೂತ್ರವೊಂದನ್ನು ಕಂಡುಹಿಡಿದು ಸೈ ಎನಿಸಿಕೊಂಡಿದ್ದಾನೆ. ಕುಂದಾಪುರ ತಾಲೂಕಿನ ಹೆಮ್ಮಾಡಿ ಮೂಲದ ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಪೂರ್ಣಪ್ರಜ್ಞ ಶಾಲೆಯಲ್ಲಿ 10ನೇ ತರಗತಿಯಲ್ಲಿ ಉತ್ತೀರ್ಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ/ಸುಳ್ಯ: ಕುಂದಾಪುರದಿಂದ ವೆಲಂಕಣಿ ಪುಣ್ಯ ಕ್ಷೇತ್ರದ ದರ್ಶನಕ್ಕೆ ತೆರಳಿ ಟೆಂಪೊ ಟ್ರಾವೆಲರ್‌ನಲ್ಲಿ ಹಿಂದಿರುಗುತ್ತಿದ್ದ ವೇಳೆ ಸುಳ್ಯದ ಕನಕಮಜಲು ಬಳಿ ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಗುದ್ದಿದ ಘಟನೆ ವರದಿಯಾಗಿದೆ. ಘಟನೆಯಲ್ಲಿ ಆಸೀಸಿ ಫ್ರಾನ್ಸಿಸ್, ಅನಿತಾ ಹಾಗೂ ಮಗು ಸಾವಿಯನ್ ಗಂಭೀರ ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ವಾಹನ ನುಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಕುಂದಾಪುರ ಚರ್ಚ್ ಉಪಾಧ್ಯಕ್ಷರಾದ ಜೇಕಬ್ ಡಿಸೋಜಾ ಅವರ ಪತ್ನಿ ಆಲಿಸ್ ರೀಟಾ, ಹಿರಿ ಮಗ ಅಂಟೋನಿ ಸಂದೇಶ್, ಮಿತ್ರ ಅಂಟೋನಿ ಆಲ್ಮೇಡಾ ಅವರು ಪ್ರಯಾಣಿಸುತ್ತಿದ್ದು ಎಲ್ಲರಿಗೂ ಗಾಯಗಳಾಗಿವೆ. ವಾಹನ ಚಾಲಕ ಆರ್ಚಿ ಕರ್ವಾಲ್ಲೊ ಮತ್ತು ಸತೀಶ್ ಎಂಬುವವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ‘

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಬಹುಭಾಷಾ ನಟಿ, ಬಾಹುಬಲಿ ಸಿನೆಮಾ ಖ್ಯಾತಿಯ ಅನುಷ್ಕಾ ಶೆಟ್ಟಿ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶುಕ್ರವಾರ ಸಂಜೆಯ ವೇಳೆಗೆ ಕುಟುಂಬಿಕರೊಂದಿಗೆ ಭೇಟಿ ನೀಡಿದ ಅನುಷ್ಕಾ ಶೆಟ್ಟಿ, ಮೂಕಾಂಬಿಕೆ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಜಯಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಮುತ್ತಪ್ಪ ರೈ ಮತ್ತವರ ಕುಟುಂಬಿಕರು ಜೊತೆಗಿದ್ದರು. ದೇವರ ದರ್ಶನ ಪಡೆಯಲು ನಟಿ ಅನುಷ್ಕಾ ಶೆಟ್ಟಿ ಸಾರ್ವಜನಿಕರ ಜೊತೆ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದದ್ದು ವಿಶೇಷವಾಗಿತ್ತು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಹರೀಶ್ ಶೆಟ್ಟಿ, ಇಒ ಕೃಷ್ಣಮೂರ್ತಿ ಅನುಷ್ಠಾ ಶೆಟ್ಟಿ ಹಾಗೂ ಮುತ್ತಪ್ಪ ರೈ ಅವರನ್ನು ಗೌರವಿಸಿದರು.

Read More

ಕುಂದಾಪ್ರ ಡಾಟ್ ಕಾಂ ವರದಿ | ಶಿಕ್ಷಣದ ಮೂಲ ಉದ್ದೇಶ ವಿಕಾಸ. ಪ್ರಸ್ತುತ ಬದಲಾವಣೆಗೆ ತಕ್ಕಂತೆ ಅಗತ್ಯ ಶಿಕ್ಷಣ ಮಾದರಿಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡು ವಿಕಾಸದೆಡೆಗೆ ದೃಷ್ಠಿಕೋನವನ್ನಿರಿಸಿಕೊಂಡು ರೂಪುಗೊಂಡ ಬಾಂಡ್ಯ ಶಿಕ್ಷಣ ಸಂಸ್ಥೆಯ ಗುರುಕುಲ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಕುಂದಾಪುರ ತಾಲೂಕಿನಲ್ಲಿಯೇ ವಿಶಿಷ್ಠವಾಗಿ ಕಂಗೊಳಿಸುತ್ತಿದೆ. ಗುರುಕುಲದಲ್ಲಿ ಸಮಗ್ರ ಅಧ್ಯಯನಕ್ಕೆ ಬೇಕಾಗುವ ಕಲಿಕಾ ಸಾಮಗ್ರಿಗಳ ಪೂರೈಕೆ ಪ್ರತಿ ವಿಷಯಗಳ ಅಧ್ಯಾಯಗಳಿಗೂ ಬೇಕಾಗುವಂತಹ ಸಾರಾಂಶ ಮತ್ತು ಕಲಿಕಾ ಪರಿಸರ ಒದಗಿಸುವುದರ ಮೂಲಕ ವಿದ್ಯಾರ್ಥಿಗಳ ಗುಣಮಟ್ಟದಲ್ಲಿ ಪ್ರಶಂಸನಾರ್ಹ ಬದಲಾವಣೆಯನ್ನು ತರುತ್ತಲಿದೆ. ಅಧ್ಯಯನ ಆಯ್ಕೆಯ ವಿಷಯಗಳು: ಗುರುಕುಲ ಪದವಿಪೂರ್ವ ಮಹಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ವಿಜ್ಞಾನ ಅಥವಾ ವಾಣಿಜ್ಯ ವಿಭಾಗವನ್ನು ಆಯ್ಕೆಮಾಡಲು ಅವಕಾಶವಿದೆ. ವಿಜ್ಞಾನ ವಿಷಯದಲ್ಲಿ ಪಿ.ಸಿ.ಎಮ್.ಬಿ ಅಥವಾ ಪಿ.ಸಿ.ಎಮ್.ಸಿ.ಎಸ್ ಎಂಬ ಕೋರ್ಸ್‌ಗಳನ್ನು ಹೊಂದಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಬ್ಯುಸಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಸ್ಟ್ಯಾಟ್, ಇಕಾನಾಮಿಕ್ಸ್ ಹಾಗೂ ಕಂಪ್ಯೂಟರ್ ಸಾಯನ್ಸ್ ವಿಷಯಗಳಿವೆ. ನಿರಂತರ ಸಿ.ಇ.ಟಿ. (ಜೆ.ಇ.ಇ, ಐ.ಐ.ಟಿ, ಎ.ಐ.ಪಿ.ಎಮ್.ಟಿ ಹಾಗೂ ಸಿ.ಪಿ.ಟಿ ) ತರಬೇತಿ: ಕೇವಲ…

Read More

ಕುಂದಾಪ್ರ ಡಾಟ್ ಕಾಂ ವರದಿ | ಸುತ್ತಲೂ ಗಿಡಮರಗಳಿಂದ ಕಂಗೊಳಿಸುವ ಪ್ರಶಾಂತ ಪರಿಸರದ ನಡುವೆ ಪ್ರಾಚೀನ ಮಾದರಿಯ ಶಿಕ್ಷಣ ಪದ್ದತಿಯನ್ನು ನೆನಪಿಸುವ ಸುಂದರ ವಾತಾವರಣ. ಇದರ ನಡುವೆ ಆಧುನಿಕ ಶಿಕ್ಷಣದ ಎಲ್ಲಾ ಆಯಾಮಗಳನ್ನು ಒಳಗೊಂಡು ರಾಷ್ಟ್ರ ಮಟ್ಟದಲ್ಲಿ ಗುರುತಿಸಬಹುದಾದ ಉತ್ಕೃಷ್ಟ ಶೈಕ್ಷಣಿಕ ಸಂಸ್ಥೆಯಾಗಿ ಖ್ಯಾತಿವೆತ್ತಿರುವ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳು. ಕ್ಯಾಂಪಸ್‌ನ ಹೊರನೋಟದಲ್ಲೇ ಒಂದು ಸಾತ್ವಿಕ ಶೈಕ್ಷಣಿಕ ವಾತಾವರಣ ಮನಸ್ಸಿನ ಒಡಮೂಡುತ್ತದೆ. ನೋಟಕ್ಕೆ ನಿಲುಕಿದಂತೆ ಎಲ್ಲವೂ ಅಚ್ಚುಕಟ್ಟಾಗಿ ಅನುಷ್ಠಾನಗೊಂಡಿದೆ. ಕುಂದಾಪುರ ತಾಲೂಕಿನ ವಕ್ವಾಡಿಯಲ್ಲಿರುವ ಪ್ರತಿಷ್ಠಿತ ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಗುರುಕುಲ ಪಿಯು ಕಾಲೇಜು ತನ್ನದೇ ಆದ ಹತ್ತಾರು ವೈಶಿಷ್ಟ್ಯತೆಗಳಿಂದ ಇಂದು ಮನೆಮಾತಾಗಿದೆ. ಶಿಕ್ಷಣವೂ ಅರಿವು, ಉದ್ಯೋಗವನ್ನು ನೀಡುವುದರ ಜೊತೆಗೆ ಅದು ಪ್ರತಿ ವಿದ್ಯಾರ್ಥಿಯನ್ನು ಒಬ್ಬ ಸಜ್ಜನ ನಾಗರಿಕನನ್ನಾಗಿಸಬೇಕು ಎಂಬ ಮಾತಿಗೆ ಕಟಿಬದ್ಧರಾಗಿ, ವಿಶ್ವಾಸವೇ ನಮ್ಮ ಯಶಸ್ಸೆಂಬ ಧ್ಯೇಯವಾಕ್ಯದೊಂದಿಗೆ ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಮೂಲಕ ಆರಂಭಗೊಂಡ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳು ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯ ಬೆಳಕು ಚಲ್ಲಿ ಆಂತರ್ಯದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಟೀಮ್ ಜಿಎಸ್‌ಬಿ ಕುಂದಾಪುರದ ಆಶ್ರಯದಲ್ಲಿ ಪೇಟೆ ಶ್ರೀ ವೆಂಕಟರಮಣ ಟ್ರೋಫಿ-2017 ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ಸಂಭ್ರಮದಿಂದ ನಡೆಯಿತು. ಪುರುಷರ ವಿಭಾಗದಲ್ಲಿ ಹರಿ ಓಂ ಎಸ್‌ಎಲ್‌ವಿಟಿ ಉಡುಪಿ ಪ್ರಥಮ, ಶ್ರೀ ರಾಮ ಸೂಪರ್‌ಕಿಂಗ್ಸ್ ಕೆಸರಗದ್ದೆ ದ್ವಿತೀಯ, ಸ್ಪಾರ್ಕ್ ಎಸ್‌ಎಲ್‌ವಿಟಿ ಉಡುಪಿ ತೃತೀಯ, ಹರಿ ಓಂ ಗಂಗೊಳ್ಳಿ ಚತುರ್ಥ ಸ್ಥಾನವನ್ನು ಪಡೆದುಕೊಂಡರು. ಉತ್ತಮ ಬ್ಯಾಟ್ಸ್‌ಮೆನ್ ಬಹುಮಾನವನ್ನು ಶ್ರೀ ರಾಮ ಸೂಪರ್‌ಕಿಂಗ್ಸ್ ಕೆಸರಗದ್ದೆ ತಂಡದ ಬಾಲ ನಾಯಕ್, ಉತ್ತಮ ಎಸೆತಗಾರ ಬಹುಮಾನವನ್ನು ಕಟಪಾಡಿಯ ಹರಿ ಓಂ ತಂಡದ ಶರತ್ ಪ್ರಭು, ಉತ್ತಮ ಕೀಪರ್ ಆಗಿ ಸತೀಶ್ ಕಾಮತ್ ಬಹುಮಾನ ಸ್ವೀಕರಿಸಿದರು. ಮ್ಯಾನ್ ಆಫ್ ದಿ ಸೀರಿಸ್‌ನ್ನು ನಾಗೇಶ್ ಪೈ ತನ್ನದಾಗಿಸಿಕೊಂಡರು. ಉದ್ಘಾಟನೆ: ಪಂದ್ಯಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ವೆಂಕಟರಮಣ ದೇವ ಎಜುಕೇಶನಲ್ ಎಂಡ್ ಕಲ್ಚರಲ್ ಟ್ರಸ್ಟ್‌ನ ಕಾರ್ಯದರ್ಶಿ ಕೆ. ರಾಧಕೃಷ್ಣ ಶೆಣೈ ವಹಿಸಿದ್ದು, ಕುಂದಾಪುರದ ಪೇಟೆ…

Read More