ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಳೆದ ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಮುಸ್ಲಿಂ ಯುವತಿ ಹಾಗೂ ಹಿಂದೂ ಯುವಕನಿಗೆ ಮಂಗಳವಾರ ಮಂಗಳಕರವಾಗಿತ್ತು. ಪ್ರೇಮಿಗಳು ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿ ಸತಿ-ಪತಿಗಳಾದರು. ಮಹಿಳಾ ಸಾಂತ್ವಾನ ಕೇಂದ್ರ ಅಂತರ್ ಧರ್ಮೀಯ ವಿವಾಹಕ್ಕೆ ಕಲ್ಯಾಣ ಮಂಟಪವಾದರೆ, ಸಾಂತಾನ್ವ ಕೇಂದ್ರದ ಅಧ್ಯಕ್ಷರದ್ದೇ ಪೌರೋಹಿತ್ಯ! ತಾಲೂಕಿನ ಕುಂಭಾಶಿ ವಿನಾಯಕ ನಗರ ಜನತಾ ಕಾಲನಿ ನಿವಾಸಿ ವಿವೇಕ ಹಾಗೂ ಅದೇ ಕಾಲನಿ ನಿವಾಸಿ ಸಲ್ಮಾ ಗೃಹಸ್ಥಾಶ್ರಮಕ್ಕೆ ಕಾಲಿಟ್ಟವರು. ಅವರಿಬ್ಬರೂ ಅಕ್ಕಪಕ್ಕದ ಮನೆಯವರು. ಎರಡು ವರ್ಷದ ಹಿಂದೆ ಮದುವೆಯಲ್ಲಿ ಹುಟ್ಟಿದ ಪ್ರೇಮಾ ಮದುವೆಯಲ್ಲಿ ಮುಕ್ತಾಯಗೊಂಡಿದೆ. ಕುಂದಾಪುರ ಮೂಕಾಂಬಿಕಾ ಮಹಿಳಾ ಮಂಡಳಿ ಅಧ್ಯಕ್ಷೆ ರಾಧಾದಾಸ್ ಪೌರೋಹಿತ್ಯದಲ್ಲಿ ಹುಡುಗನ ತಂದೆ ತಾಯಿ, ಸಂಬಂಧಿಕರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಹಾರ ಬದಲಾಯಿಸಿ, ತಾಳಿಕಟ್ಟಿ ಸರಳ ವಿವಾಹ ಮೂಲಕ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ಕುಂಭಾಸಿ ವಿನಾಯಕ ನಗರದ ನಿವಾಸಿ ಬಾಬು ಮತ್ತು ಶಾರದಾ ಮೂವರು ಮಕ್ಕಳಲ್ಲಿ ವಿವೇಕ್ ಕುಂದಾಪುರ ವುಡ್‌ಶ್ಯಾಪ್‌ನಲ್ಲಿ ಕೆಲಸ ಮಾಡುತ್ತಿದ್ದು, ಅಬ್ದುಲ್ ಖಲೀಲ್ ಮತು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾತಾ ಮಾಂಟೆಸ್ಸೊರಿಯ ಸಪ್ತ ವಾರ್ಷಿಕ ಸಂಭ್ರಮ ಮತ್ತು ಎಂಡಿಆರ್‌ಟಿ ಸತತ ೪ನೇ ಬಾರಿ ಸದಸ್ಯತ್ವದ ಸಂತಸದೊಂದಿಗೆ ಬಾಲ ಕಲಾವಿದ ಪ್ರಭಾವ್ ಶೆಟ್ಟಿಯ ಏಕವ್ಯಕ್ತಿ ’ಪ್ರಕೃತಿ’ ಚಿತ್ರಕಲಾಕೃತಿ ಪ್ರದರ್ಶನವನ್ನು ಅಂಪಾರಿನ ಹಿಲ್ಕೋಡಿನಲ್ಲಿ ನೂತನವಾಗಿ ನಿರ್ಮಿಸಿರುವ ಗೃಹ ’ಶ್ರೀ’ಯಲ್ಲಿ ನೆರವೇರಿತು. ಬೆಂಗಳೂರಿನ ಎನ್ಸೈನ್ ಇಕ್ಯುಪ್‌ಮೆಂಟ್ಸ್ ಪ್ರೈ. ಲಿ.ನ ಸಂಸ್ಥಾಪಕರು, ಆಡಳಿತ ನಿರ್ದೇಶಕರಾದ ದಿನೇಶ್ ವೈದ್ಯ ಅಂಪಾರು ಉದ್ಘಾಟನೆಗೈದು ಕಲಾಕ್ಷೇತ್ರದ ಅಗಾಧತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಸವ ಜಯಂತಿಯಂದು ನಡೆಯುತ್ತಿರುವ ಗುರುವಂದನಾ ಕಾರ‍್ಯಕ್ರಮವು ಬಸವಣ್ಣನವರ ಅನುಭವ ಮಂಟಪದ ಸಾಕ್ಷಾಯತ್ಕಾರದಂತಿದೆ, ಗೃಹ ಪ್ರವೇಶೋತ್ಸವದಲ್ಲಿ ವಿಭಿನ್ನ ಚಿಂತನೆಯೋದಿಗೆ ಗುರುಸ್ಮರಣೆ ಮಾಡುವ, ತನ್ನ ವಿಮಾ ಗ್ರಾಹಕರನ್ನು ಸತ್ಕರಿಸುವ, ಪ್ರಕೃತಿ ಚಿತ್ರಕಲಾ ಪ್ರದರ್ಶನದೊಂದಿಗೆ ಬಾಲ ಪ್ರತಿಭೆಯನ್ನು ಪ್ರೋತ್ಸಾಹಿಸುವ ಅಭೂತಪೂರ್ವ ಪೋಷಕತ್ವದ ತತ್ವ ಸಾರಿದ್ದು ಪ್ರಕಾಶ್ಚಂದ್ರ ಶೆಟ್ಟಿ ಯವರ ಅನುಭವ ಮಂಟಪವೆಂದು ಕುಂದಾಪುರದ ಖ್ಯಾತ ಪತ್ರಕರ್ತರಾದ ಜಾನ್ ಡಿ’ಸೋಜಾ ನುಡಿದರು. ಮಾತಾ ಮಾಂಟೆಸ್ಸೊರಿಯ ಸಪ್ತ ವಾರ್ಷಿಕ ಸಂಭ್ರಮ ಮತ್ತು ಎಂಡಿಆರ್‌ಟಿ ಸತತ ೪ನೇ ಬಾರಿ ಸದಸ್ಯತ್ವದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದೇಕೆ ಎನ್ನುವುದನ್ನು ತಿಳಿಯಲು ಕುಂದಾಪುರದ ವಿನಾಯಕ ಚಿತ್ರಮಂದಿರಕ್ಕೆ ಹೋಗುತ್ತಿದ್ದು, ಒಂದು ದಿನದ ರಜೆ ನೀಡಬೇಕು ಎಂದು ಪದವಿ ವಿದ್ಯಾರ್ಥಿಯೊಬ್ಬ ರಜೆ ಅರ್ಜಿ ಬರೆದಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿದ್ಯಾರ್ಥಿಗೆ ರಜೆ ಸಿಕ್ಕಿದೆಯೋ ಇಲ್ಲವೋ ಎಂಬ ಕುತೂಹಲ ಮೂಡಿತ್ತು! ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಾಂಶುಪಾಲರು ಗೈರು ಹಾಜರಿಗೆ ರಜೆ ಕೇಳಬೇಕೆಂದೇನೂ ಇಲ್ಲ. ಏ.12ಕ್ಕೆ ಶೈಕ್ಷ ಣಿಕ ವರ್ಷದ ವರ್ಕಿಂಗ್ ಡೇ ಕೊನೆಗೊಂಡಿದೆ. ವ್ಯಾಟ್ಸ್ಯಾಪ್ನಲ್ಲಿ ತಮಾಷೆಗೆ ಈ ಸಂದೇಶ ಹರಿಬಿಟ್ಟಿರಬಹುದು ಎಂದಿದ್ದಾರೆ. ಈ ವಿಚಾರ ನನ್ನ ಗಮನಕ್ಕೂ ಬಂದಿಲ್ಲ ಎಂದಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಭಾರತೀಯ ಜೀವವಿಮಾ ನಿಗಮ ಕುಂದಾಪುರ ಶಾಖೆಯ ಏಕೈಕ ಗ್ಯಾಲಕ್ಸಿ ಕ್ಲಬ್ ಸದಸ್ಯರಾಗಿರುವ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಸತತ ೪ನೇ ಬಾರಿಗೆ ಎಂಡಿಆರ್‌ಟಿ ಪ್ರತಿನಿಧಿಯಾಗಿ ಆಯ್ಕೆಯಾಗಿರುವುದು ಸಂತಸ ತಂದಿದ್ದು, ಶಾಖೆಯ ಗೌರವನ್ನು ವಿಭಾಗ ಮಟ್ಟದಲ್ಲಿ ಎತ್ತರಕ್ಕೇರಿಸಿದ್ದಾರೆ ಹಾಗೂ ಅಮೇರಿಕಾದ ಲಾಸ್‌ಎಂಜಲಿಸ್‌ನಲ್ಲಿ ನಡೆಯಲಿರುವ 2018ರ ಎಂಡಿಆರ್‌ಟಿ ಸಮ್ಮೇಳನದಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದಿದ್ದಾರೆ ಎಂದು ಭಾರತೀಯ ಜೀವವಿಮಾ ನಿಗಮ ಕುಂದಾಪುರ ಶಾಖೆಯ ಹಿರಿಯ ಶಾಖಾಧಿಕಾರಿ ಕೃಷ್ಣ ಕುಲಕರ್ಣಿ ಅವರು ಶಾಖೆಯಲ್ಲಿ ನಡೆದ ವಿಮಾಪ್ರತಿನಿಧಿಗಳ ಸಭೆಯಲ್ಲಿ ಅಭಿನಂದಿಸಿದ್ದಾರೆ. ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಮಾತಾ ಮಾಂಟೆಸ್ಸೋರಿ ಮಕ್ಕಳ ಶಾಲೆ ಕೋಣಿಯ ವ್ಯವಸ್ಥಾಪಕ ನಿರ್ದೇಶಕರಾಗಿ, ಪ್ರತಿಷ್ಠಿತ ರೋಟರಿ ಕ್ಲಬ್ ಕುಂದಾಪುರದ ನಿಕಟಪೂರ್ವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಉಪಶಾಖಾಧಿಕಾರಿ ಗಿರೀಶ್, ವಿಮಾಪ್ರತಿನಿಧಿಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ : ಜೇಸಿಐ ಕುಂದಾಪುರ ಚರೀಷ್ಮಾ ಘಟಕಕ್ಕೆ ಭಾರತೀಯ ಜೇಸಿಸ್ ರಾಷ್ಟ್ರಾಧ್ಯಕ್ಷ ರಾಮ್‌ಕುಮಾರ್ ಮೆನನ್ ಇತ್ತೀಚಿಗೆ ಅಧೀಕೃತ ಭೇಟಿ ನೀಡಿದರು. ಜೇಸಿಐ ಕುಂದಾಪುರ ಚರೀಷ್ಮಾ ಅಧ್ಯಕ್ಷೆ ಗೀತಾಂಜಲಿ ಆರ್. ನಾಯಕ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ರಾಷ್ಟ್ರಾಧ್ಯಕ್ಷರ ಶಾಶ್ವತ ಯೋಜನೆಯಾದ ಶುದ್ಧ ಕುಡಿಯುವ ನೀರಿನ ಘಟಕ ಸುಜಲಾ ಉದ್ಘ್ಘಾಟಿಸಲಾಯಿತು. ಶಾಲೆಗೆ ಕ್ರೀಡಾ ಪರಿಕರಗಳನ್ನು ವಿತರಿಸಲಾಯಿತು. ವಲಯಾಧ್ಯಕ್ಷ ಸಂತೋಷ್ ಜಿ., ವಿದ್ಯುತ್ ಗುತ್ತಿಗೆದಾರ ಕೆ. ಆರ್. ನಾಯಕ್, ವಲಯ ಉಪಾಧ್ಯಕ್ಷ ಮರಿಯಪ್ಪ, ಜೇಸಿಐ ಕುಂದಾಪುರದ ಅಧ್ಯಕ್ಷೆ ಅಕ್ಷತಾ ಗಿರೀಶ್, ಜ್ಯೂನಿಯರ್ ಜೇಸಿ ವಿಭಾಗದ ಪೂರ್ವಾಧ್ಯಕ್ಷ ಚೇತನ್, ಜೇಸಿಐ ಕುಂದಾಪುರ ಚರೀಷ್ಮಾ ಕೋಶಾಧಿಕಾರಿ ರೋಶನಿ, ಶರ್ಮಿಳಾ ಕಾರಂತ್, ಸರೋಜ ಉಪಸ್ಥಿತರಿದ್ದರು. ಜೇಸಿಐ ಕುಂದಾಪುರ ಚರೀಷ್ಮಾ ಕಾರ್ಯದರ್ಶಿ ಸರೋಜ ಅರುಣ್ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಅಶ್ರಯದಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ಕಾಲೇಜ್ ಹಾಗೂ ಇತರ ಯುವ ಕ್ರೀಡಾಪಟುಗಳಿಗೆ ಕಾಲೇಜಿನ ಆವರಣದಲ್ಲಿ ನಡೆದ ಉಚಿತ ಬೇಸಿಗೆ ಕ್ರೀಡಾ ತರಬೇತಿ ಶಿಬಿರ(ನೆಟ್‌ಬಾಲ್) ಸಮಾರೋಪ ಕಾಲೇಜ್ ಆವರಣದಲ್ಲಿ ನಡೆಯಿತು. ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ. ಪ್ರಸನ ಪ್ರಾಂಶುಪಾಲ ಪ್ರೊ. ದೋಮ ಚಂದ್ರಶೇಖರ್, ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ್ ಟಿ.ಎನ್., ಕನ್ನಡ ವಿಭಾಗದ ಮುಖ್ಯಸ್ಥ ಚೇತನ್ ಶೆಟ್ಟಿ ಕೋವಾಡಿ, ವಾಣಿಜ್ಯ ಉಪನ್ಯಾಸಕ ಅನಂತ ಪ್ರಭು, ತರಬೇತುದಾರರಾದ ಅವಿನಾಶ್, ಅನಿಲ್ ಮತ್ತು ಕ್ರೀಡಾಪಟುಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ | ಬೈಂದೂರು: ಬೈಂದೂರಿನ ಅಧಿದೇವ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದ ಶ್ರೀ ಮನ್ಮಹಾ ರಥೋತ್ಸವಕ್ಕೆ ಇಂದು ಮಧ್ಯಾಹ್ನ ಸಾಂಕೇತಿಕ ಚಾಲನೆ ದೊರೆಯಿತು. ಚಾರಿತ್ರಿಕ ಹಿನ್ನೆಲೆಯುಳ್ಳ ಬೈಂದೂರು ರಥೋತ್ಸವದಲ್ಲಿ ಊರ ಪರವೂರ ಸಾವಿರಾರು ಭಕ್ತಸಮೂಹ ಪಾಲ್ಗೊಂಡು ಪುನೀತರಾಗುತ್ತಾರೆ. ಕಲಾವೈಭವಗಳಿಂದ ಕಂಗೊಳಿಸುವ ದೇವಾಲಯಕ್ಕೆ ವಾರ್ಷಿಕ ರಥೋತ್ಸವ ಇನ್ನಷ್ಟು ಮೆರಗನ್ನು ನೀಡುತ್ತದೆ. ಹಬ್ಬದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಇಡಿ ನಗರವೇ ಸಜ್ಜಾಗಿದೆ. ಸಂಜೆಯ ವೇಳೆಗೆ ನಗರದ ರಥವನ್ನು ಬೈಂದೂರು ಬೈಪಾಸ್ ವರೆಗೆ ಏಳೆಯಲಾಗುತ್ತದೆ. ರಥಕ್ಕೆ ಗರ್ನಪಟ್ಟೆ ಕಟ್ಟಿದ ಹನ್ನೊಂದು ದಿನಗಳಿಗೆ ರಥೋತ್ಸವ ನಡೆಯುವುದೆಂಬ ಸೂಚನೆ ದೊರೆಯುತ್ತದೆ. ಒಟ್ಟು ಏಳು ದಿನಗಳ ಕಾಲ ನಡೆಯುವ ಉತ್ಸವವು ಧಾರ್ಮಿಕ ಕಾರ್ಯಗಳಿಂದ ಆರಂಭಗೊಳ್ಳುತ್ತದೆ. ಈ ಮಧ್ಯೆ ನಾಕಟ್ಟೆ ಉತ್ಸವ, ಪಡುವರಿ ಕಟ್ಟೆ ಉತ್ಸವ, ಬಂಕೇಶ್ವರ ಕಟ್ಟೆ ಉತ್ಸವ ನಡೆದ ಬಳಿಕ ರಥೋತ್ಸವ, ಅವಭೃಥೋತ್ಸವ ಕೊನೆಯಲ್ಲಿ ನಗರೋತ್ಸವ ನಡೆಯುತ್ತದೆ. ರಥೋತ್ಸವದ ಪೂರ್ವದಲ್ಲಿ ಮುಸ್ಲಿಂ ಭಾಂದವರನ್ನು ಆಹ್ವಾನಿಸುವ, ರಥೋತ್ಸವದ ಆರಂಭದಲ್ಲಿ ಬೈಂದೂರಿನ ಪೊಲೀಸ್ ಠಾಣಾಧಿಕಾರಿಯನ್ನು ಕರೆತಂದು ಚಾಲನೆ ದೊರಕಿಸುವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ತೆಕ್ಕಟ್ಟೆ: ಈ ದೇಶದಲ್ಲಿ ಹೊಟ್ಟೆ ಹಸಿದವನಿಗೆ ಊಟ ಹಾಕುವ ಪದ್ಧತಿಯ ಬದಲು ಹೊಟ್ಟೆ ತುಂಬಿದವರಿಗೆ ಊಟ ಹಾಕುವ ಪ್ರವೃತ್ತಿ ಈ ಸಮಾಜದಲ್ಲಿದೆ. ಹೊಟ್ಟೆ ಹಸಿದವನಿಗೆ ಊಟ ಹಾಕುವ ಪದ್ಧತಿಯಂತೆ ಇಲ್ಲಿನ ಯುವ ಸಮುದಾಯ ನಿಜವಾಗಿಯೂ ಒಂದು ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಗ್ರಾಮದ ಯೋಧರನ್ನು ಭಾರತ ಸೇವೆಗಾಗಿ ಈ ಭೂಮಿ ಕೊಟ್ಟಿದೆ ಅದು ಈ ಭೂಮಿಯ ಧನ್ಯತೆ ಎಂದು ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್. ಹೇಳಿದರು. ಅವರು ಕೊರವಡಿ ಹೆಗ್ಗೂರುಬೆಟ್ಟು ಶ್ರೀ ನಂದಿಕೇಶ್ವರ ಮತ್ತು ಪರಿವಾರ ದೈವಗಳ ದೈವಸ್ಥಾನ ಇದರ ದಶಮಾನೋತ್ಸವದ ಪ್ರಯುಕ್ತ ಹಮ್ಮಿಕೊಂಡ ದೇಶಸೇವೆಯಲ್ಲಿರುವ ಯೋಧರನ್ನು ಗುರುತಿಸುವ ಸಲುವಾಗಿ ನಡೆದ ಸೇನಾ ಸತ್ಕಾರ -2017 ಉದ್ದೇಶಿಸಿ ಮಾತನಾಡಿದರು. ಸೈನಿಕರಿಗೆ ಸಮ್ಮಾನ ಮಾಡುವ ಸುಯೋಗ ಒದಗಿ ಬಂದಿರುವುದೇ ತನ್ನ ಭಾಗ್ಯ. ಇಲ್ಲಿನ ಯುವಕರು ಬಹಳ ವಿಚಾರವಂತರಾಗಿದ್ದು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷವಾದ ಗೌರವವನ್ನು ತಂದುಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಿ ಸ್ವತ್ಛ ಪರಿಸರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆಯ ಅಪೂರ್ವ ಹೊಟೇಲ್ ಬಳಿ ಮಾರುತಿ ಆಲ್ಟೋ ಹಾಗೂ ಸ್ವಿಫ್ಟ್ ಕಾರುಗಳ ನಡುವೆ ಸೋಮವಾರ ಮಧ್ಯಾಹ್ನ ಸಂಭವಿಸಿದ ಮುಖಾಮುಖೀ ಢಿಕ್ಕಿಯಲ್ಲಿ ಆಲ್ಟೋ ಕಾರಿನ ಚಾಲಕ ಮೂಲತಃ ತಮಿಳುನಾಡು ಮೂಲದ ಪ್ರಸ್ತುತ ಬೆಂಗಳೂರಿನ ಎಂ.ಜಿ. ರಸ್ತೆಯ ನಿವಾಸಿ ಧನ ಪಾಂಡ್ಯನ್ (36) ಮೃತಪಟ್ಟಿದ್ದು, ಓರ್ವ ಬಾಲಕ ಸಹಿತ ಮೂವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳೂರಿನಿಂದ ಪಣಜಿಗೆ ತೆರಳುತ್ತಿದ್ದ ಕುಟುಂಬವಿದ್ದ ಸ್ವಿಫ್ಟ್ ಕಾರು ಹಾಗೂ ಮುರುಡೇಶÌರ ಯಾತ್ರೆ ಮುಗಿಸಿ ಧರ್ಮಸ್ಥಳದ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಕುಟುಂಬವಿದ್ದ ಆಲ್ಟೋ ಕಾರು ನಡುವೆ ಢಿಕ್ಕಿ ಸಂಭವಿಸಿತ್ತು. ಢಿಕ್ಕಿಯಾದ ರಭಸಕ್ಕೆ ಆಲ್ಟೋ ಕಾರು ನುಜ್ಜು ಗುಜ್ಜಾಗಿದ್ದು, ಅದೇ ಕಾರಿನಲ್ಲಿದ್ದ ಧನ ಪಾಂಡ್ಯನ್ ಅವರ ಪುತ್ರ ಕಮಲಿ (4), ತಂದೆ ಕಾಮಾಟಿ (65), ತಾಯಿ ಸರೋಜಾ (55) ಗಂಭೀರವಾಗಿ ಗಾಯಗೊಂಡಿದ್ದಾರೆ. ಪುತ್ರ ನಿದರ್ಶನ (8) ಹಾಗೂ ಪತ್ನಿ ವಾಸುಕಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ವಿಫ್ಟ್ ಕಾರಿನ ಚಾಲಕ ಸಚಿನ್,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಸಿದ್ದಾಪುರ: ಅಮಾಸೆಬೈಲು ಗ್ರಾಮ ಪಂಚಾಯತ್, ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್ (ರಿ.), ಕರ್ಣಾಟಕ ಬ್ಯಾಂಕ್ (ಲಿ.) ಮಂಗಳೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲೆ, ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಕುಂದಾಪುರ ಇವರ ಆಶ್ರಯದಲ್ಲಿ ಅಮಾಸೆಬೈಲು ಗ್ರಾಮ ಪಂಚಾಯತ್‌ನಲ್ಲಿ ಅನುಷ್ಠಾನಗೊಂಡಿರುವ ಸೋಲಾರ್ ಗ್ರಾಮ ಘೋಷಣೆಯು ಗಣ್ಯರ ಉಪಸ್ಥಿತಿಯಲ್ಲಿ ಎ. 27ರಂದು ಅಮಾಸೆಬೈಲು ಸರಕಾರಿ ಪ್ರೌಢಶಾಲಾ ವಠಾರದಲ್ಲಿ ಜರಗಿತು. ಮೀನುಗಾರಿಕಾ ಹಾಗೂ ಯುವಜನಸೇವೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಅಮಾಸೆಬೈಲು ಗ್ರಾ. ಪಂ.ನ್ನು ಸೋಲಾರ್ ಗ್ರಾಮವನ್ನು ಉದ್ಘಾಟಿಸಿ, ಶುಭಹಾರೈಸಿದರು. ದೇವಸ್ಥಾನಗಳಿಗೆ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಕೊಡಮಾಡಿದ ಸೋಲಾರ್ ದೀಪವನ್ನು ಕರ್ಣಾಟಕ ಬ್ಯಾಂಕ್ ಜನರಲ್ ಮೆನೇಜರ್ ಚಂದ್ರಶೇಖರ ರಾವ್ ಅವರು ಉದ್ಘಾಟಿಸಿದರು. ಮನೆಗಳಿಗೆ ಸೋಲಾರ್ ದೀಪಗಳನ್ನು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಉದ್ಘಾಟಿಸಿದರು. ಅಮಾಸೆಬೈಲು ಗ್ರಾಮದ…
