Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ:  ತಾಲೂಕು ಆಲೂರು ಸಮೀಪದ ಗುಂಡೂರು ಹೊಳೆಗೆ ನಿರ್ಮಿಸಲಾದ ಡ್ಯಾಂನ ಸಾಧಕ – ಬಾಧಕಗಳ ವೀಕ್ಷಣೆಗೆ ಉಡುಪಿ ಜಿಲ್ಲಾ ರೈತ ಸಂಘ ಭೇಟಿ ನೀಡಿ ಪರಿಶೀಲಿಸಿತು. ಆಲೂರು ಎದ್ರುಬೈಲುವಿನಲ್ಲಿ ಹರಿಯುವ ಹೊಳೆಗೆ ಅಡ್ಡವಾಗಿ ಡ್ಯಾಂ ನಿರ್ಮಿಸಿ, ನೀರನ್ನು ಶೇಖರಿಸಿ ಕೆಳಭಾಗಕ್ಕೆ ಕಿಂಡಿ ಅಣೆಕಟ್ಟುಗಳ ಮೂಲಕ ನೀರು ನೀಡುವ ಯೋಜನೆ ಇದಾಗಿದ್ದು, ಈ ಯೋಜನೆ ರೈತರಿಗೆ ಎಷ್ಟರಮಟ್ಟಿಗೆ ತಲುಪುತ್ತದೆ ಎನ್ನುವುದನ್ನು ರೈತ ಸಂಘ ವೀಕ್ಷಿಸಿತು. ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಪ್ರತಾಪಚಂದ್ರ ಶೆಟ್ಟಿ ಅವರ ನೇತೃತ್ವದಲ್ಲಿ ರೈತರ ನಿಯೋಗ ಗುಂಡೂರು ಡ್ಯಾಂ, ಆಲೂರಿನಲ್ಲಿ ಕಿಂಡಿ ಅಣೆಕಟ್ಟು, ನೀರು ಹರಿದು ಹೋಗುವ ಅಚ್ಚುಕಟ್ಟು ಪ್ರದೇಶಗಳ ವೀಕ್ಷಣೆ ನಡೆಸಿತು. ಈ ಸಂದರ್ಭದಲ್ಲಿ ಪ್ರತಾಪಚಂದ್ರ ಶೆಟ್ಟಿ ಅವರು ವಾರಾಹಿ ನೀರಾವರಿ ಯೋಜನೆಯ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು. ಸರಕಾರದ ಯೋಜನೆ ವ್ಯರ್ಥವಾಗಬಾರದು. ರೈತರಿಗೆ ನಿರಂತರ ನೀರು ಸಿಗುವಂತಾಗಬೇಕು. ಆ ನಿಟ್ಟಿನಲ್ಲಿ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಬಸ್ರೂರು ಮೂರು ಕೈಯಲ್ಲಿರುವ ಕರ್ನಾಟಕ-ರಸ್ತೆ ಸಾರಿಗೆ ಇಲಾಖೆಯ ಕುಂದಾಪುರ ಡಿಪೋದಲ್ಲಿ ಕೆಎಸ್‌ಆರ್‌ಟಿಸಿ ಸಾರ್ವಜನಿಕ ಜನ ಸಂಪರ್ಕ ಸಭೆ ಜರಗಿತು. ಸಭೆಯಲ್ಲಿ ಸಾರ್ವಜನಿಕರಿಂದ ಅನೇಕ ಬೇಡಿಕೆಗಳು ಹಾಗೂ ಆಗ್ರಹ ಗಳು ಕೇಳಿಬಂದವು. ಕಾವ್ರಾಡಿ – ಕುಂದಾಪುರ ಕರ್ಕುಂಜೆ ಮಾರ್ಗವಾಗಿ ಕೊಲ್ಲೂರಿಗೆ ಗ್ರಾಮಾಂತರ ಸಾರಿಗೆ, ಕುಂದಾಪುರ-ತೀರ್ಥಹಳ್ಳಿ ಮಾರ್ಗವಾಗಿ ಶೃಂಗೇರಿಗೆ ಬಸ್‌ ಓಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು. ಅಲ್ಲದೇ ಸರಕಾರಿ ಬಸ್ಸುಗಳ ದರ ಹೆಚ್ಚಾಗಿದೆ ಖಾಸಗಿ ಬಸ್ಸುಗಳಿಗಿಂತ ಹೆಚ್ಚು ದರ ನಿಗದಿ ಪಡಿಸುವುದು ಸರಿಯಲ್ಲ ತತ್‌ಕ್ಷಣ ದರವನ್ನು ಪರಿಷ್ಕರಿಸಬೇಕು, ಕುಂದಾಪುರದಿಂದ ಈಗಾಗಲೇ ಓಡುತ್ತಿದ್ದ ವೋಲ್ವೋ ಬಸ್ಸುಗಳು ಬೇರೆ ಕಡೆಗೆ ವರ್ಗಾವಣೆಯಾಗಿದ್ದು ಕೂಡಲೇ ಅವುಗಳನ್ನು ಕುಂದಾಪುರಕ್ಕೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು. ಕುಂದಾಪುರ ರೈಲು ನಿಲ್ದಾಣಕ್ಕೆ ಸರಕಾರಿ ಬಸ್ಸು ಸಂಚಾರ ಕಲ್ಪಿಸಬೇಕು ಎನ್ನುವ ಬೇಡಿಕೆ ಇಡಲಾಯಿತು. ಸಾರ್ವಜನಿಕರ ಬೇಡಿಕೆಗಳ ಆಗ್ರಹಕ್ಕೆ ಉತ್ತರಿಸಿದ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ಅಧಿಕಾರಿ ಜೈಶಾಂತ್‌ ಕುಮಾರ್‌ ಈ ಭಾಗದ ಹಲವಾರು ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ. ಸಿದ್ದಾಪುರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾಂಸ್ಕೃತಿಕ ಪ್ರೀತಿ ಮಾನವೀಯ ಮೌಲ್ಯ ವೃದ್ಧಿಸಿ ಸಮಾಜಮುಖಿ ಚಿಂತನೆಗಳನ್ನು ಕಲ್ಪಿಸುತ್ತದೆ. ಹಾಗೆಯೇ ಕೇವಲ ಪುಸ್ತಕದ ಜ್ಞಾನ ಜೀವನಕ್ಕೆ ಸಾಕಾಗುವುದಿಲ್ಲ. ಶಿಕ್ಷಣೇತರ ಚಟುವಟಿಕೆಗಳು ಜೀವನದದ್ದುಕ್ಕಕ್ಕೂ ನೆನಪಿನಲ್ಲಿ ಉಳಿದು ಸಾಂಸ್ಕೃತಿಕವಾಗಿ ಎಲ್ಲವನ್ನು ಎದುರಿಸುವ ಧೈರ್ಯ ಮಕ್ಕಳಲ್ಲಿ ತುಂಬಲು ರಂಗ ಶಿಬಿರಗಳು ಸಹಕಾರಿಯಾಗುತ್ತದೆ ಎಂದು ಮುಂಬೈ ಉದ್ಯಮಿ ಗೋವಿಂದ ಬಾಬು ಪೂಜಾರಿ ಹೇಳಿದರು. ಇಲ್ಲಿನ ಶ್ರೀ ಶಾರದಾ ವೇದಿಕೆಯಲ್ಲಿ ಲಾವಣ್ಯ ಮಕ್ಕಳ ರಂಗ ತರಬೇತಿ ಶಿಬಿರದಲ್ಲಿ ರೂಪುಗೊಂಡ ಎರಡು ನಾಟಕ ಪ್ರದರ್ಶನಗಳನ್ನು ಉದ್ಘಾಟಿಸಿ ಮಾತನಾಡಿದರು. ಸ್ವಕೇಂದ್ರಿತ ಸಮಾಜ ನಿರ್ಮಾಣವಾಗುತ್ತಿರುವ ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ರಂಗ ಚಟುವಟಿಕೆಗಳು ಮುಖ್ಯ ಎಂದೆನಿಸಿಕೊಳ್ಳುತ್ತವೆ. ರಂಗಭೂಮಿಗಳು ಸಮಾಜಕ್ಕೆ ಹೊಸ ಸಂದೇಶ ನೀಡಿ, ಮನುಷ್ಯನ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುವುದಲ್ಲದೇ, ಜೀವನದಲ್ಲಿನ ಲೋಪದೋಷಗಳನ್ನು ತಿದ್ದಿಕೊಳ್ಳಲು ಸಹಕಾರಿಯಾಗುತ್ತದೆ. ಬೈಂದೂರಿನ ಲಾವಣ್ಯ ಸಂಸ್ಥೆ ಕಳೆದ ನಾಲ್ಕು ದಶಕಗಳಿಂದ ತಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೇ, ಪರಸ್ಪರ ವಿಶ್ವಾಸದಿಂದ ಮುನ್ನೆಡೆದುಕೊಂಡು ಹೋಗುತ್ತಿರುವುದಲ್ಲದೇ, ಈ ಭಾಗದ ಜನರಿಗೆ ಮನೋರಂಜನೆಯೊಂದಿಗೆ ಉತ್ತಮ ಸಂದೇಶ ನೀಡುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರೇರಣಾ ಯುವ ವೇದಿಕೆ ನೈಕಂಬ್ಳಿ ಇದರ ನೂತನ ಅಧ್ಯಕ್ಷರಾಗಿ ಉದಯ ಆಚಾರ್ಯ ಮತ್ತು ಉಪಾಧ್ಯಕ್ಷರಾಗಿ ದಿನೇಶ ಶೆಟ್ಟಿ ಅವರನ್ನು ಆಯ್ಕೆ ಆಗಿದ್ದಾರೆ. ಸಾಮಾಜಿಕ ಕಳಕಳಿಯ ಮೂಲಕ ಜನಮನ್ನಣೆಗಳಿಸಿದ ಹೆಮ್ಮೆಯ ಪ್ರೇರಣಾ ಯುವ ವೇದಿಕೆ ನೈಕಂಬ್ಳಿ ಚಿತ್ತೂರು ನಾಲ್ಕು ವರ್ಷಗಳನ್ನು ಪೂರೈಸಿದ್ದು ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಪದಾಧಿಕಾರಿಗಳು: ಗೌರವ ಅಧ್ಯಕ್ಷರು : ರಾಮಚಂದ್ರ ಮಂಜರು ಅಧ್ಯಕ್ಷರು: ಉದಯ ಆಚಾರ್ಯ ಉಪಾಧ್ಯಕ್ಷರು ದಿನೇಶ್ ಶೆಟ್ಟಿ ಕಾರ್ಯದರ್ಶಿ : ನಾಗರಾಜ ಶೆಟ್ಟಿ ಖಜಾಂಚಿ : ಪ್ರತಾಪ ಶೆಟ್ಟಿ ಗಾಂದಾಡಿ ಜೊತೆ ಕಾರ್ಯದರ್ಶಿ : ಅಣ್ಣಪ್ಪ ಶೆಟ್ಟಿ ಸಂಘಟನಾ ಉಸ್ತುವಾರಿ : ರಾಘು ಶೆಟ್ಟಿ ಮುಲ್ಲಿಮನೆ – ಪ್ರಶಾಂತ ಶೆಟ್ಟಿ ನಿರ್ಕೋಡ್ಲ – ಸುಚೇಂದ್ರ ಶೆಟ್ಟಿ ಸಾಂಸ್ಕೃತಿಕ ಉಸ್ತುವಾರಿ : ಪ್ರದೀಪ ಶೆಟ್ಟಿ – ಚೇತನಾ ಮಲ್ಲೋಡ್ ಕ್ರೀಡಾ ಉಸ್ತುವಾರಿ : ಸಂತೋಷ ಶೆಟ್ಟಿ ಮುಲ್ಲಿಮನೆ – ಮಂಜುನಾಥ ಪೂಜಾರಿ. ಪತ್ರಿಕಾ ಮತ್ತು ಪ್ರಚಾರ ಉಸ್ತುವಾರಿ : ಸುಪ್ರತಾ…

Read More

ಗಂಗನಾಡು, ಮದ್ದೋಡಿ, ತೂದಳ್ಳಿ, ದೊಂಬೆ ಮಾರ್ಗಕ್ಕೆ ನಾಲ್ಕು ಬಸ್ಸುಗಳು ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿರೂರು, ಆಲಂದೂರು, ತೂದಳ್ಳಿ, ಮದ್ದೋಡಿ, ಗಂಗನಾಡು, ಕರಾವಳಿ, ದೊಂಬೆ ಮುಂತಾದ ಊರುಗಳಿಂದ ಸಾರ್ವಜನಿಕರು ಸರಕಾರಿ ಬಸ್ಸುಗಳನ್ನು ಪ್ರಾರಂಭಿಸುವ ಕುರಿತು ಕ.ರಾ.ರ.ಸಾ.ಸಂಸ್ಥೆಯ ಅಧ್ಯಕ್ಷರಾದ ಕೆ.ಗೋಪಾಲ ಪೂಜಾರಿಯವರಿಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸಂದಿಸಿದ ಶಾಸಕರು ಅತೀ ಶೀಘ್ರದಲ್ಲಿ ನಾಲ್ಕು ಹೊಸ ಬಸ್ಸುಗಳನ್ನು ಗ್ರಾಮಾಂತರ ಸಾರಿಗೆ ಸೇವೆ ಮೂಲಕ ನೀಡಿರುವುದು ಶ್ಲಾಘನೀಯ ಎಂದು ಶಿರೂರು ಜೆ.ಸಿ.ಐ ಅಧ್ಯಕ್ಷ ಅರುಣ ಕುಮಾರ್ ಶಿರೂರು ಹೇಳಿದರು. ಅವರು ದೊಂಬೆ, ಕರಾವಳಿ, ತೂದಳ್ಳಿ, ಮದ್ದೋಡಿ, ಗಂಗನಾಡು ಮುಂತಾದ ಊರುಗಳಿಗೆ ನೂತನ ಸರಕಾರಿ ಬಸ್ಸುಗಳ ಓಡಾಟಕ್ಕೆ ಶಿರೂರಿನಲ್ಲಿ ಚಾಲನೆ ನೀಡಿ ಮಾತನಾಡಿ ನೂತನ ಬಸ್ಸು ಸೇವೆ ಆರಂಭಿಸಿದ್ದರಿಂದ ಪ್ರತಿದಿನ ಹತ್ತಾರು ಕಿ.ಮೀ ನಡೆದುಕೊಂಡು ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಇಂತಹ ಜನಪರ ಕಾರ್ಯಗಳು ಸದಾ ಜನಮಾನಸದಲ್ಲಿ ಉಳಿಯುತ್ತದೆ ಎಂದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಕೆ.ಡಿ.ಪಿ ಸದಸ್ಯ ಎಸ್.ರಾಜು ಪೂಜಾರಿ ಮಾತನಾಡಿ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿಯವರು ಕರ್ನಾಟಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಸ್ಪೋರ್ಟ್ಸ್ ಕ್ಲಬ್ ರಿ. ಬೈಂದೂರು ಆಶ್ರಯದಲ್ಲಿ ರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ‘ಬೈಂದೂರು ಟ್ರೋಪಿ 2017’ ಎಪ್ರಿಲ್ 28, 29, 30ರಂದು ಬೈಂದೂರಿನ ಗಾಂಧಿ ಮೈದಾನದಲ್ಲಿ ಜರುಗಲಿದೆ. ಬೈಂದೂರು ಟ್ರೋಫಿ ವಿಜೇತರಿಗೆ ಪ್ರಥಮ ಬಹುಮಾನವಾಗಿ 2,00,001 ಹಾಗೂ ಆಕರ್ಷಕ ಟ್ರೋಫಿ ದೊರೆಯಲಿದ್ದು ದ್ವಿತೀಯ ಬಹುಮಾನ 1,00,001 ಹಾಗೂ ಆಕರ್ಷಕ ಟ್ರೋಫಿ ಇರಲಿದೆ. ಸರಣಿ ಶ್ರೇಷ್ಠ, ಪಂದ್ಯ ಪುರುಷೋತ್ತಮ, ಉತ್ತಮ ಎಸೆತಗಾರ, ಉತ್ತಮ ಕ್ಷೇತ್ರ ರಕ್ಷಕ ಉತ್ತಮ ಗೂಟ ರಕ್ಷಕ, ಉತ್ತಮ ದಾಂಡಿಗ ಮೊದಲಾದ ಬಹುಮಾನಗಳೊಂದಿಗೆ ಟ್ರೋಫಿ ಆಟಗಾರರಿಗೆ ದೊರೆಯಲಿದೆ. ಎ.28ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ರಿದಂ ನೃತ್ಯ ಶಾಲೆ ಬೈಂದೂರು ಇವರಿಂದ ನೃತ್ಯ ವೈಭವ, ರಾಜಾಯದು ಉಡುಪಿ ಹಾಗೂ ಜ್ಯೂನಿಯರ್ ರಾಜಕುಮಾರ್ ಖ್ಯಾತಿಯ ಶ್ರೀರಾಮ ಬೈಂದೂರು ಇವರಿಂದ ಸಂಗೀತ ರಸಸಂಜೆ ಜರುಗಲಿದೆ. ಎ.30ರಂದು ಸಮಾರೋಪ ಸಮಾರಂಭ ಅದ್ದೂರಿಯಾಗಿ ಜರುಗಲಿದ್ದು ಸಾಧಕರಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಕ್ರಮವಾಗಿ ಜಾನುವಾರುಗಳನ್ನು ವಧೆ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಗಂಗೊಳ್ಳಿ ಪೊಲೀಸರು ಮೂವರನ್ನು ಬಂಧಿಸಿದ ಘಟನೆ ತ್ರಾಸಿಯ ಮೊವಾಡಿಯ ಆನ್‌ಗೊàಡು ಗಾಣದಮಕ್ಕಿ ಕೊರಗರ ಕಾಲೋನಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಮೊವಾಡಿ ಗಾಣದ ಮಕ್ಕಿ ಕೊರಗರ ಕಾಲನಿಯಲ್ಲಿರುವ ಮನೆಯೊಂದರ ಹಿಂಭಾಗದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಮಾಂಸಕ್ಕಾಗಿ ಕಡಿಯಲಾ ಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗಂಗೊಳ್ಳಿ ಪೊಲೀಸರು ಅಕ್ರಮವಾಗಿ ಜಾನುವಾರುಗಳನ್ನು ಕಡಿಯುತ್ತಿದ್ದ ಹರೀಶ, ಹರೀಶ್‌ ಹಾಗೂ ಬಿದ್ಕಲ್‌ಕಟ್ಟೆಯ ಶ್ರೀಕಾಂತ ಅವರ‌ನ್ನು ಬಂಧಿಸಿದ್ದಾರೆ. ಸ್ಥಳದಲ್ಲಿದ್ದ ಜಾನುವಾರು ಮಾಂಸವನ್ನು ಠಾಣೆಗೆ ಸಾಗಿಸಿ ಜಾನುವಾರುಗಳನ್ನು ವಧೆ ಮಾಡಲು ಉಪಯೋಗಿಸಿದ್ದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ಸ್ಥಳದಲ್ಲಿ ಒಂದು ಜಾನುವಾರುವನ್ನು ಕಡಿದು ಇಡಲಾಗಿದ್ದು, ಇನ್ನೊಂದು ಜಾನುವಾರಿನ ಕುತ್ತಿಗೆಯನ್ನು ಕತ್ತರಿಸಿ ಇಟ್ಟಿರುವುದು ಕಂಡುಬಂದಿತ್ತು. ಜಾನುವಾರು ಪರಿರಕ್ಷಣೆ ಮತ್ತು ಗೋ ವಧೆ ಪ್ರತಿಬಂಧಕ ಕಾಯ್ದೆಯ ಪ್ರಕಾರ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಕೀಲರ ವೃತ್ತಿಗೆ ಹಾಗೂ ವಕೀಲರ ಹಕ್ಕುಗಳಿಗೆ ಚ್ಯುತಿ ತರುವಂತಹ ಅಸಂವಿಧಾನಿಕ ಅಂಶಗಳನ್ನು ವಕೀಲರ ಅಧಿನಿಯಮದಡಿ ತಿದ್ದುಪಡಿ ಮಾಡಲು ಕೇಂದ್ರ ಕಾನೂನು ಆಯೋಗ ಕೇಂದ್ರ ಸರಕಾರಕ್ಕೆ ಶಿಪಾರಸ್ಸು ಮಾಡಿರುವುದನ್ನು ವಿರೋಧಿಸಿ, ಕುಂದಾಪುರ ವಕೀಲರ ಸಂಘದ ಆಶ್ರಯದಲ್ಲಿ ವಕೀಲರು ಪ್ರತಿಭಟನೆ ನಡೆಸಿ ತಿದ್ದುಪಡಿ ವಿಧೇಯಕ ಕರಡುಪ್ರತಿಯನ್ನು ಸುಟ್ಟು ಹಾಕಿದರು. ಭಾರತೀಯ ವಕೀಲರ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಪ್ರತಿಭಟನೆ ನಡೆಸಲು ಕೋರಿಕೊಂಡ ಮೇರೆಗೆ ಕುಂದಾಪುರ ವಕೀಲರ ಸಂಘದ ಸದಸ್ಯರು ವಕೀಲರ ಸಂಘದ ಎದುರುಗಡೆ ಕಾನೂನು ಸೇವಾ ಆಯೋಗದ ಅಧ್ಯಕ್ಷರ ವಿರುದ್ಧ ಘೋಷಣೆಯನ್ನು ಕೂಗಿ ವಿಧೇಯಕವನ್ನು ತಕ್ಷಣ ಕೈಬಿಡುವಂತೆ ಆಗ್ರಹಿಸಿದರು. ಭಾರತೀಯ ವಕೀಲರ ಪರಿಷತ್ತು ಎಪ್ರಿಲ್ ೮ ರಂದು ನಡೆಸಿದ ಸಭೆಯಲ್ಲಿ ಕರಡು ಪ್ರತಿಯನ್ನು ಸುಡುವುದರ ಮುಖಾಂತರ ಎಲ್ಲಾ ವಕೀಲರ ಪರಿಷತ್ತುಗಳಿಗೆ ಮನವಿಯನ್ನು ಮಾಡಿದ್ದು, ಆ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮೇ ೧ ರೊಳಗೆ ವಕೀಲರ ತಿದ್ದುಪಡಿ ವಿಧೇಯಕವನ್ನು ಕೈಬಿಡದಿದ್ದರೆ ದೇಶಾದ್ಯಂತ ಎಲ್ಲಾ ವಕೀಲರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೇಸಿಐ ವಲಯ ೧೫ರ ಜೇಸಿಐ ಕುಂದಾಪುರ ಘಟಕ ಹಾಗೂ ಜೇಸಿಐ ಕುಂದಾಪುರ ಚರಿಷ್ಮಾ ಘಟಕ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ.) ಕುಂದಾಪುರ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಬಲೀಕರಣ ಮಾಹಿತಿ ಕಾರ್ಯಗಾರ ಆಯೋಜಿಸಲಾಯಿತು. ರಾಷ್ಟ್ರೀಯ ನಿರ್ದೇಶಕರು ಜೆಸಿರೇಟ್ ಹಾಗೂ ಲೇಡಿಲೋಮ್ ಜೇಸಿ ವಿಭಾಗ ಜೇಸಿ ರೂಪಶ್ರೀ ರತ್ನಾಕರ ಇಂದ್ರಾಳಿ ಮಹಿಳಾ ಸಬಲೀಕರಣ ಮಾಹಿತಿ ಕಾರ್ಯಗಾರ ಉದ್ಘಾಟಿಸಿದರು. ಜೇಸಿಐ ಕುಂದಾಪುರದ ಅಧ್ಯಕ್ಷರಾದ ಜೆ.ಎಫ್.ಪಿ ಅಕ್ಷತಾ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಲಯ ಅದಿಕಾರಿ ನಿಕಟ ಪೂರ್ವ ಅಧ್ಯಕ್ಷ ಜೆ.ಎಫ್.ಪಿ ವಿಷ್ಣು ಕೆ. ಬಿ, ಜೇಸಿಐ ಕುಂದಾಪುರ ಚರೀಷ್ಮಾ ಇದರ ಅಧ್ಯಕ್ಷೆ ಗೀತಾಂಜಲಿ ಆರ್ ನಾಯಕ್ ಉಪಸ್ಥಿತರಿದ್ದರು ಸಭೆಯಲ್ಲಿ ಜೇಸಿರೇಟ್ ಅಧ್ಯಕ್ಷೆ ಜೇಸಿ ನಾಗರತ್ನ ಹೇರ್ಳೆ ಜೇಸಿರೇಟ್ ಸಂಯೋಜಕಿ ನಾಗರತ್ನ ಚಂದ್ರಶೇಖರ್, ಜೇಸಿರೇಟ್ ನ ನಿಕಟ ಪೂರ್ವಧ್ಯಕ್ಷೆ ಮಾಲತಿ ವಿಷ್ಣು ಜೇಸಿರೇಟ್ ಪೂರ್ವಧ್ಯಕ್ಷೆ ಗುಣರತ್ನ ಮಾಲಿನಿ ಸತೀಶ್ ಜೇಸಿಐ ಜ್ಯೂನಿಯರ್ ಜೇಸಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿಯ ನಿನಾದ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಜ್ಞಾನಗಂಗಾ ಕಾರ್ಯಕ್ರಮದ ಅಂಗವಾಗಿ ಶ್ರೀಮದ್ ಭಗವದ್ಗೀತಾ ಬೋಧನೆ ಕಾರ್ಯಕ್ರಮ ಗಂಗೊಳ್ಳಿಯ ಪೇಟೆ ಶ್ರೀ ವಿಠಲ ರಖುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ ಮಾತನಾಡಿದ ಧಾರ್ಮಿಕ ಮುಖಂಡ ಮಂಗೇಶ ಶೆಣೈ ಅವರು ಭಗವದ್ಗೀತೆಯ ಪರಿಚಯ, ಶ್ಲೋಕಗಳ ಉಚ್ಛಾರ, ವ್ಯಾಕರಣ, ಪದಗಳ ಅರ್ಥ, ಭಾವಾರ್ಥ ಮುಂತಾದವುಗಳನ್ನು ತಿಳಿಸಿದರು. ಭಗವದ್ಗೀತೆಯ ಪ್ರಥಮ ಎರಡು ಅಧ್ಯಾಯಗಳನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ವಿವರಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ನಿನಾದ ಸಂಸ್ಥೆಯ ಅಧ್ಯಕ್ಷ ಎಂ.ಮುಕುಂದ ಪೈ ಅವರು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಸಂಸ್ಮರಣೆ ಹಾಗೂ ಗುರುವಂದನ ಕಾರ್ಯಕ್ರಮದ ಭಾಗವಾಗಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಮುಂದಿನ ಒಂದು ವರ್ಷ ಪರ್ಯಂತ ಭಗವದ್ಗೀತೆಯ ಬೋಧನೆ ಹಾಗೂ ಮಕ್ಕಳಿಗೆ ಧಾರ್ಮಿಕ, ಬೌದ್ಧಿಕ ವ್ಯಕ್ತಿತ್ವ ವಿಕಸನದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.  ಸುದರ್ಶನ ಆಚಾರ್ಯ, ಬಿ.ಪ್ರಕಾಶ ಪಡಿಯಾರ್, ನಿನಾದ ಸಂಸ್ಥೆಯ ಪದಾಧಿಕಾರಿಗಳು, ಸಮಾಜ ಬಾಂಧವರು ಉಪಸ್ಥಿತರಿದ್ದರು.

Read More