ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸರಕಾರಿ ನಿವೇಶನ ಸ್ಥಳ ಜನತಾ ಕಾಲೋನಿಯಲ್ಲಿ ಭೂಮಿ ಪಡೆದುಕೊಂಡು ಇನ್ನು ಮನೆ ಕಟ್ಟದೆ ಸ್ಥಳ ಖಾಲಿ ಬಿಟ್ಟು ಅಥವಾ ಇತರರಿಗೆ ವಹಿಸಿಕೊಟ್ಟ ಪ್ರಕರಣ ಇದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪರಿಶೀಲನೆ ನಡೆಸಿ ವಾಸ ಇರುವವರಿಗೆ ಭೂಮಿಯನ್ನು ಹಸ್ತಾಂತರಿಸಲು ಕ್ರಮವಹಿಸಬೇಕು. ಭೂಮಿ ನೀಡಿದ ಎರಡು ವರ್ಷದೊಳಗೆ ಮನೆ ಕಟ್ಟಿಕೊಳ್ಳಬೇಕು ಎಂಬ ಷರತ್ತು ಇದೆ. ಅದನ್ನು ಮೀರಿ ಇತರರಿಗೆ ವಹಿಸಿಕೊಟ್ಟಿಲ್ಲ. ಅವರಿಗೆ ಹಸ್ತಾಂತರಿಸಬೇಕು ಎಂದು ಶಿರೂರಿನ ನಿವೇಶನ ರಹಿತರ ಹೋರಾಟ ಸಮಿತಿಯ ಮುಖಂಡ ಶೋಯೆಬ್ ಅರೆಹೊಳೆ ಹೇಳಿದರು. ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತ ಹಾಗೂ 94ಸಿ ಅರ್ಜಿದಾರರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಮಾತನಾಡುತ್ತಾ ಶಿರೂರು ಗ್ರಾಮದ ಮೊದೀನತಾರ ಮತ್ತು ನ್ಯೂಕಾಲಿನಿಯಲ್ಲಿ ಸರಕಾರಿ ಜಾಗದ ನಿವಾಸಿಗಳಿಗೆ ಹಕ್ಕು ಪತ್ರ ಮಂಜೂರು ಮಾಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು. ಏಪ್ರಿಲ್ 18 ರಂದು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸೌಹಾರ್ದ ಸಹಕಾರಿಗಳ ಅಭಿವೃದ್ಧಿಗೆ ಪೂರಕವಾಗುವ ಹಾಗೂ ಪ್ರತಿನಿಧಿಗಳ ದಕ್ಷತೆ ಹೆಚ್ಚಿಸುವ, ಸೌಹಾರ್ದ ಸಹಕಾರಿಗಳಲ್ಲಿ ವೃತ್ತಿಪರತೆ, ಶಾಖಾವಾರು ಲಾಭದಾಯಕವಾಗಿ ಕಾರ್ಯನಿರ್ವಹಣೆ, ಬದಲಾಗುತ್ತಿರುವ ಜಗತ್ತಿನಲ್ಲಿ ನಗದು ರಹಿತ ವ್ಯವಹಾರದ ತಂತ್ರಜ್ಞಾನದ ತಿಳುವಳಿಕೆಯ ಕೌಶಲ್ಯ ವೃದ್ಧಿ ವಿಷಯಗಳ ಕುರಿತಾದ ಕಾರ್ಯಾಗಾರವು ಅತ್ಯವಶ್ಯಕವಾಗಿದೆ ಎಂದು ಸಹಕಾರಿ ಧುರೀಣ ರಾಜು ಪೂಜಾರಿ ಹೇಳಿದರು. ಅವರು ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿ. ಕಚೇರಿಯಲ್ಲಿ ನಡೆದ ಜಿಲ್ಲಾ ಸೌಹಾರ್ದ ಸಹಕಾರಿಗಳ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಮಯುಕ್ತ ಸಹಕಾರಿ ನಿ. ಬೆಂಗಳೂರಿನ ನಿರ್ದೇಶಕ ಬಿ. ಭಾಸ್ಕರ ಕಾಮತ್, ಸಂಪನ್ಮೂಲ ವ್ಯಕ್ತಿ, ಶಿವಮೊಗ್ಗದ ಸನ್ಮತಿ ಪ್ರತಿಷ್ಠಾನದ ಬಿ. ಎ. ಮಹದೇವಪ್ಪ, ಗಂಗೊಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆನಂದ ಬಿಲ್ಲವ, ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ (ನಿ)ಯ ಉಪಾಧ್ಯಕ್ಷ ಸುಧಾಕರ ಖಾರ್ವಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಇನ್ನಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ನಮ್ಮ ದೇಶದಲ್ಲಿ ನಾವು ಸುರಕ್ಷಿತವಾಗಿವಾಗಿರಬೇಕಿದ್ದರೆ ನಮ್ಮ ದೇಶದ ಗಡಿಯನ್ನು ಕಾಯುತ್ತಿರುವ ಯೋಧರು ಮುಖ್ಯ ಕಾರಣ. ಕೊರೆವ ಚಳಿ, ಮೈಸುಡುವ ಬಿಸಿಲನ್ನು ಲೆಕ್ಕಿಸದೆ ದೇಶದ ಗಡಿಯಲ್ಲಿ ನಿಂತು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿರುವ ಯೋಧರನ್ನು ನಾವು ಪ್ರತಿನಿತ್ಯ ಸ್ಮರಿಸಿಕೊಳ್ಳಬೇಕು. ದೇಶದ ಆಂತರಿಕ ಹಾಗೂ ಹೊರಗಿನ ದೇಶವಿರೋಧಿ ಶಕ್ತಿಯನ್ನು ದಮನಿಸುತ್ತಾ ದೇಶವನ್ನು ಕಾಯುವ ನಮ್ಮ ದೇಶದ ಯೋಧರ ಕಾರ್ಯ ಪ್ರಶಂಸನೀಯ. ಇತ್ತೀಚಿಗೆ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ದೇಶ ಸೇವೆಯನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ ಎಂದು ಉಡುಪಿ ಜಿಲ್ಲಾ ಹಿಂದು ಜಾಗರಣ ವೇದಿಕೆ ಸಂಚಾಲಕ ಅರವಿಂದ ಕೋಟೇಶ್ವರ ಹೇಳಿದರು. ಅವರು ಗಂಗೊಳ್ಳಿಯ ಸ್ಫೂರ್ತಿ ಮಹಿಳಾ ಘಟಕದ ಆಶ್ರಯದಲ್ಲಿ ಗಂಗೊಳ್ಳಿ ದೊಡ್ಡಹಿತ್ಲು ವಠಾರದಲ್ಲಿ ಜರಗಿದ ಸಂದೀಪ್ ಉನ್ನಿಕೃಷ್ಣನ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಭಾರತೀಯ ಸಂಸ್ಕೃತಿ ಸಂಸ್ಕಾರವನ್ನು ಉಳಿಸಲು ಮಾತೆಯರು ಮುಂದಾಗಬೇಕು. ಹೆಣ್ಣು ಮಕ್ಕಳಿಗೆ ಬಾಲ್ಯದಲ್ಲಿ ನಮ್ಮ ಹಿಂದು ಸಂಸ್ಕೃತಿ, ಆಚಾರ ವಿಚಾರಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಲಿಯುಗದಲ್ಲಿ ಭಜನೆಗೆ ಬಹಳ ಮಹತ್ವವಿದೆ. ಭಜನೆ,ಸಂಕೀರ್ತನೆ ದೇವರ ಸೇವೆಯ ಒಂದು ಭಾಗ.ಕನ್ನಡದ ದಾಸರ ಪದಗಳು ಅರ್ಥಗರ್ಭಿತವಾಗಿದ್ದು ಆಡು ಬಾಷೆಯ ಮಾದರಿಯಲ್ಲಿ ಸರ್ವರಿಗೂ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ರಚಿಸಲಾಗಿದೆ. ವೇದಗಳಲ್ಲಿ ಉಲ್ಲೇಖವಾಗಿರುವ ಜೀವನ ಸಂದೇಶವನ್ನು ಈ ಪದ್ಯಗಳಲ್ಲಿ ಕಾಣಬಹುದು. ಇಂತಹ ಭಜನೆಗಳನ್ನು ಹಾಡುವುದರಿಂದ ದೇವರ ಸೇವೆಯ ಜೊತೆಯಲ್ಲಿ ಜೀವನ ಪಾವನವಾಗುತ್ತದೆ, ಇದರಲ್ಲಿ ಬಣ್ಣಿಸಿರುವ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಾಶೀ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ತೆಕ್ಕಟ್ಟೆಯಲ್ಲಿ ಶ್ರೀ ಸುಧೀಂದ್ರ ಸಭಾಭವನ ಮತ್ತು ಶ್ರೀ ಸುಧೀಂದ್ರ ತೀರ್ಥ ಭಜನಾ ಮಂದಿರವನ್ನು ಉದ್ಘಾಟಿಸಿ ಆಶೀರ್ವಚಿಸಿದರು. ದಾಸರ ಭಜನೆಯಲ್ಲಿ ತಿಳಿಸಿದಂತೆ ಮಾನವರು ಅಹಂಕಾರವನ್ನು ತೊಡೆದು ಹಾಕಬೇಕು. ಇಲ್ಲವಾದಲ್ಲಿ ಸರ್ವನಾಶಕ್ಕೆ ನಾಂದಿಯಾಗುತ್ತದೆ. ಇಂದಿನ ಕಾಲಘಟ್ಟದಲ್ಲಿ ಜೀವನೋಪಾಯ ಅತ್ಯಂತ ಜಟಿಲವಾಗಿದೆ. ಇಂತಹ ಸಮಯದಲ್ಲಿ ಸಮಾಜ ಬಾಂಧವರು ಭಜನೆಯ ಮೂಲಕ ನೆಮ್ಮದಿಯನ್ನು ಕಂಡುಕೊಳ್ಳಬೇಕು ಎಂದರು. ಇದಕ್ಕೂ ಮೊದಲು ಸ್ವಾಮೀಜಿಯವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಮುಂದೆ ಪುರಮೆರವಣಿಗೆಯ ಮೂಲಕ ಮಂದಿರದಲ್ಲಿ ಸ್ಥಾಪಿಸಲಿರುವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಲಾಲ ಸಮುದಾಯ ಈ ನೆಲದ ನಾಗರಿಕತೆಯ ಹುಟ್ಟಿನೊಂದಿಗೆ ಜನ್ಮ ತಾಳಿದ ಶ್ರೇಷ್ಠ ಸಮುದಾಯ. ಕುಂಬಾರ, ಮೂಲ್ಯ, ಹಾಂಡ, ಗುನುಗ ಹೀಗೆ ಬೇರೆ ಬೇರೆ ಹೆಸರುಗಳಿಂದ ಈ ನಾಡಿನ ಮೂಲೆ ಮೂಲೆಯಲ್ಲೂ ಸಾಕಷ್ಟು ಸಂಖ್ಯೆಯಲ್ಲಿರುವ ಕುಂಬಾರ ಸಮುದಾಯ ಇಂದು ಬಲಿಷ್ಠ ಸಂಘಟನೆಯಲ್ಲಿ ಒಗ್ಗೂಡುತ್ತಿವೆ. ಈ ಕುಂಬಾರ ಸಮುದಾಯಕ್ಕೆ ಮುಂಬರುವ ಚುನಾವಣೆಯಲ್ಲಿ ರಾಜಕೀಯ ಸ್ಥಾನಮಾನ ಕೊಡುವ ಕೆಲಸವನ್ನು ಎಲ್ಲ ರಾಜಕೀಯ ಪಕ್ಷಗಳು ಮಾಡಬೇಕು ಎಂದು ಕರಾವಳಿ ಕುಲಾಲಧಿ ಕುಂಬಾರರ ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್ ಅವರು ಹೇಳಿದರು. ಅವರು ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಕುಂದಾಪುರ ಕುಂಬಾರರ ಯುವ ವೇದಿಕೆ ಹೆಂಗವಳ್ಳಿ ಘಟಕದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿ ಅಭಿಮತ ವ್ಯಕ್ತಪಡಿಸಿದರು. ಕುಂಬಾರ ಸಮುದಾಯದ ಸಂಘಟನೆಗೆ ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ ರಾಜ್ಯಕ್ಕೆ ಮಾದರಿಯಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಮುಂಚೂಣಿಯಲ್ಲಿವೆ. ಕುಂದಾಪುರ, ಕಾರ್ಕಳ, ಕಾಪು, ಸುರತ್ಕಲ್, ಕುಳಾಯಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಾರಾಹಿ ಎಡದಂಡೆ ಕಾಲುವೆಯಲ್ಲಿ ನೀರಿನ ಒತ್ತಡ ಹೆಚ್ಚಿದ ಕಾರಣ ಎಡದಂಡೆಯ 26ನೇ ಕಿಲೋ ಮೀಟರ್‌ನಲ್ಲಿ ಕೊಯ್ಕಡಿ ಕೆಳಹೆಬ್ಟಾಗಿಲು ಎಂಬಲ್ಲಿ ನಾಲೆಯ ಕೆಳಭಾಗದ ಟರ್ಫ್ ಒಡೆದು ನೂರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿದೆ. ಈ ಪ್ರದೇಶದಲ್ಲಿ ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಕಾಲುವೆ ಅಡಿಭಾಗ ಕುಸಿಯಿತು. ರಭಸದಿಂದ ಹರಿಯುತ್ತಿದ್ದ ನೀರು ಕಾಲುವೆಯ ಅಡಿಯಿಂದ ತಿರುವು ಪಡೆದು ಸಮೀಪದ ನೈಸರ್ಗಿಕ ತೋಡುಗಳ ಮೂಲಕ ಹರಿದು ಕೃಷಿಭೂಮಿಗೆ ನುಗ್ಗಿದೆ. ಪರಿಸರದ ನೂರಾರು ಎಕರೆ ಪ್ರದೇಶದ ಜಮೀನುಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ತುಂಬಿ ನಿಂತಿದೆ. ಕೆಳಹೆಬ್ಟಾಗಿಲು ಮನೆಯ ಕೊಯ್ಕಡಿ ಬೇಬಿ ಶೆಟ್ಟಿ ಅವರ ಮನೆಗೂ ನೀರು ನುಗ್ಗಿದೆ. ಕಳೆದ ನಾಲ್ಕು ದಿನಗಳಿಂದ ಸಣ್ಣ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಬಗ್ಗೆ ವಾರಾಹಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಇದುವರೆಗೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕುಲಾಲ್, ಜಿಲ್ಲಾ ಪಂಚಾಯತ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡಬಿದಿರೆ: ಆಳ್ವಾಸ್ ಸ್ನಾತ್ತಕೋತ್ತರ ಪತ್ರಿಕೋದ್ಯಮ ವಿಭಾಗದ ಅಂತಿಮ ಎಂಸಿಜೆ ವಿದ್ಯಾರ್ಥಿನಿ ಶ್ರೀಗೌರಿ ಎಸ್ ಜೋಶಿ ‘ಯುವ ಚೇತನಾ ಪ್ರಶಸ್ತಿ-2017’ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಬೆಂಗಳೂರು ಮೂಲದ ‘ಯೂತ್ ಫಾರ್ ಸೇವಾ’ ಎನ್.ಜಿ.ಓ ಸಂಘಟನೆ ‘ಬದಲಾವಣೆಯ ಸೈನಿಕರು’ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಸ್ಪರ್ಧೆಯನ್ನು ಏರ್ಪಡಿಸಿತ್ತು. ಧನಾತ್ಮಕ ಪತ್ರಿಕೋದ್ಯಮ, ಪರಿಣಾಮಕಾರಿ ಬರಹ, ಕ್ರಿಯಾತ್ಮಕ ಬರಹ ವಿಭಾಗದಲ್ಲಿ ನಡೆದ ವಿವಿಧ ಸ್ಪರ್ಧೆಯಲ್ಲಿ, ಧನಾತ್ಮಕ ಪತ್ರಿಕೋದ್ಯಮ ವಿಭಾಗದಿಂದ ಇವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೊದಲ ಹಂತದ ದೂರವಾಣಿ ಸಂದರ್ಶನದ ನಂತರ ಮುಖಾಮುಖಿ ಸಂದರ್ಶನ ಹಾಗೂ ಸ್ಕೈಪ್ ಸಂದರ್ಶನದ ಸಾಮಾರ್ಥ್ಯದ ಆಧಾರದ ಮೇಲೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಫ್ರಶಸ್ತಿಗೆ ದಕ್ಷಿಣ ಭಾರತದಿಂದ 30 ವಿದ್ಯಾರ್ಥಿಗಳನ್ನು ಆಯ್ಕೆಮಾಡಲಾಗಿದ್ದು, ಕೊನೆಯ ಹಂತದ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಾರ್ಚ 26ರಂದು ನವದೆಹಲಿಯಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು. ಶ್ರೀಗೌರಿ ಅವರನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ವಿಭಾಗದ ಮುಖ್ಯಸ್ಥೆ ಡಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಸಮಾರಂಭ ಹಾಗೂ ಅಂತರ ಕಾಲೇಜು ಪ್ರತಿಭಾ ಸ್ಪರ್ಧೆ ಸಂದರ್ಭದಲ್ಲಿ ದೇಶ ವಿದೇಶಗಳಲ್ಲಿ ಸಾವಿರಾರು ನಾಟಕ ಪ್ರದರ್ಶನ ನೀಡಿರುವ ಕುಂದಾಪುರ ರೂಪಕಲಾ ನಾಟಕ ತಂಡದ ಖ್ಯಾತ ನಾಟಕ ಕಲಾವಿದರಾದ ಸತೀಶ್ ಪೈ(ಕುಳ್ಳಪ್ಪು), ಅಶೋಕ್ ಶ್ಯಾನುಭಾಗ್, ಸಂತೋಷ ಪೈ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ| ಎನ್. ಪಿ. ನಾರಾಯಣ ಶೆಟ್ಟಿ, ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ (ನಿ)ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ, ಕರ್ಣಾಟಕ ಬ್ಯಾಂಕ್ ಕುಂದಾಪುರ ಶಾಖೆಯ ಮುಖ್ಯ ಪ್ರಬಂಧಕ ರಮೇಶ್ ವೈದ್ಯ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ಕಾರ್ತೀಕೇಯ ಮಧ್ಯಸ್ಥ, ಪೂರ್ವಾಧ್ಯಕ್ಷ ರಾಘವೇಂದ್ರಚರಣ ನಾವಡ, ಕಾರ್ಯದರ್ಶಿ ರಂಜಿತ್‌ಕುಮಾರ್ ಶೆಟ್ಟಿ ವಕ್ವಾಡಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮರವಂತೆಯಲ್ಲಿ ನಿರ್ಮಾಣವಾಗುತ್ತಿರುವ ಮೀನುಗಾರಿಕಾ ಹೊರಬಂದರು ಪ್ರದೇಶದಲ್ಲಿ ಆಗುತ್ತಿರುವ ಕಡಲ್ಕೊರೆತ ಅಪಾಯಕಾರಿ ಹಂತ ತಲಪಿದೆ. ಒಂದೆಡೆ ಬಂದರು ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದರೆ, ಇನ್ನೊಂದೆಡೆ ಕಡಲ್ಕೊರೆತ ತಡೆಗೆ ಕ್ಷಿಪ್ರ ಕ್ರಮ ಕೈಗೊಳ್ಳುತ್ತಿಲ್ಲ. ಇದೇ ಸ್ಥಿತಿ ಮಳೆಗಾಲದ ವರೆಗೆ ಮುಂದುವರಿದರೆ ಇಲ್ಲಿ ತೀವ್ರ ಸ್ವರೂಪದ ಜೀವ ಮತ್ತು ಆಸ್ತಿಪಾಸ್ತಿ ಹಾನಿ ಸಂಭವಿಸಲಿದೆ ಎಂದು ಮೀನುಗಾರರು ದೂರಿದರು. ಸ್ಥಳ ಪರಿಶೀಲನೆಗೆ ಬರಬೇಕಾಗಿದ್ದ ಜಿಲ್ಲಾಧಿಕಾರಿಗಳ ಬದಲಾಗಿ ಬಂದಿದ್ದ ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಅವರೆದುರು ಅಳಲು ತೋಡಿಕೊಂಡ ಮೀನುಗಾರರು ಇದಕ್ಕೆ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಇಂಜಿನಿಯರ್ ಹಾಗೂ ಬಂದರು ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರ ಕಾರಣ ಎಂದು ಅವರ ವಿರುದ್ಧ ಹರಿಹಾಯ್ದರು. ಇಲ್ಲಿ ಬೇಸಿಗೆಯಲ್ಲೂ ಕಡಲ್ಕೊರೆತ ನಡೆಯುತ್ತಿರುವುದಕ್ಕೆ ಬಂದರು ಕಾಮಗಾರಿಯ ನಿಧಾನಗತಿಯ ನಿರ್ವಹಣೆ ಕಾರಣ. ಅದು ಈ ವರ್ಷವೂ ಪೂರ್ಣಗೊಳ್ಳುವ ಲಕ್ಷಣ ಇಲ್ಲವಾಗಿರುವುದರಿಂದ ಕೊರೆತ ತಡೆಗೆ ತಾತ್ಕಾಲಿಕ ತಡೆಯನ್ನಾದರೂ ಹಾಕಬೇಕು ಎಂದು ಅವರು ಆಗ್ರಹಿಸಿದರು. ವಾರದ ಹಿಂದೆ ಶಾಸಕರು ಭೇಟಿನೀಡಿ ತಾತ್ಕಾಲಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ವೈದ್ಯರು ಹಾಗೂ ಸಿಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಅಲ್ಲದೇ ರೋಗಿಗಳಿಗೆ ಸರಿಯಾದ ಚಿಕಿತ್ಸೆಯನ್ನು ನೀಡುವ ಬಗ್ಗೆ ನಿಗಾ ವಹಿಸುತ್ತಿಲ್ಲ ಎನ್ನುವ ದೂರಿನ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಮಿಕ ವೇದಿಕೆಯ ಸದಸ್ಯರು ಮಂಗಳವಾರ ಕುಂದಾಪುರದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಆಸ್ಪತ್ರೆಗೆ ಧಾವಿಸಿದ ವೇದಿಕೆಯ ಅಧ್ಯಕ್ಷ ರವಿ ಶೆಟ್ಟಿ ನೇತೃತ್ವದ ವೇದಿಕೆಯ ಸದಸ್ಯರು ಭೇಟಿ ನೀಡಿ ಅಲ್ಲಿ ರೋಗಿಗಳಿಗೆ ನೀಡುತ್ತಿರುವ ಔಷಧೋಪಚಾರಗಳ ಬಗ್ಗೆ ಮಾಹಿತಿ ಪಡೆದು ಕೆಲವು ರೋಗಿಗಳಿಂದ ಬಂದ ದೂರಿನ ವಿಚಾರವನ್ನು ತೆಗೆದುಕೊಂಡು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯ ಎಲ್ಲ ವಿಭಾಗವನ್ನು ಭೇಟಿ ಮಾಡಿದ ಸದಸ್ಯರು ಅಲ್ಲಿನ ಮೂಲ ಸೌಕರ್ಯದ ಬಗ್ಗೆ ಮಾಹಿತಿಯನ್ನು ಪಡೆದರಲ್ಲದೇ ಕುಡಿಯುವ ನೀರಿನ ಯಂತ್ರವನ್ನು ಪರಿಶೀಲಿಸಿ ಅದು ಅಶುದ್ಧವಾಗಿರುವ ಬಗ್ಗೆ ಆಕ್ರೊಶ ವ್ಯಕ್ತಪಡಿಸಿದರಲ್ಲದೇ ಅದನ್ನು ವೈದ್ಯಾಧಿಕಾರಿಗಳಿಗೆ ತೋರಿಸಿದರು. ಅಲ್ಲದೇ ಆಸ್ಪತ್ರೆಯ ಆವರಣದಲ್ಲಿ ಕೊಳಚೆ ನೀರು ಹರಿಯುತ್ತಿರುವ ಬಗ್ಗೆ ಆಕ್ರೋಶ…
