ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನೆಂಪು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯೋರ್ವ ತನ್ನ ಮನೆಯಲ್ಲಿಯೇ ನೆಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ. ಹಟ್ಟಿಯಂಗಡಿ ಗ್ರಾಪಂ ಕೆಂಚನೂರು ನಿವಾಸಿ ಸೀನ ಎಂಬುವವರ ಪುತ್ರ ರಾಜೇಶ್ (16) ಮೃತ ದುರ್ದೈವಿ. ನೆಂಪು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿದ್ಯಾರ್ಥಿಯಾಗಿದ್ದ ರಾಜೇಶ್ ತನ್ನ ಮನೆಯವರ ಬಳಿ ಓದಿನಲ್ಲಿ ಆಸಕ್ತಿ ಇಲ್ಲ ಎಂದು ಹೇಳುತ್ತಿದ್ದ ಎನ್ನಲಾಗಿದೆ. ಕಳೆದ ನಾಲ್ಕು ದಿನಗಳಿಂದ ಮನೆಯಲ್ಲಿಯೇ ಇದ್ದ ಆತ ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ರಾಜೇಶ್, ತಂದೆ ತಾಯಿ, ಓರ್ವ ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: ನ್ಯೂಸ್ ಬ್ಯೂರೋ
ಗ್ರಾಮೀಣ ಪರಿಸರದ ಮಕ್ಕಳ ಸಂಗೀತಾಸಕ್ತಿ ಪ್ರೋತ್ಸಾಹ ಶ್ಲಾಘನಾರ್ಯ: ಪ್ರಕಾಶ್ಚಂದ್ರ ಶೆಟ್ಟಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕುಸುಮಾ ಫೌಂಡೇಶನ್ ಸಂಸ್ಥೆಯ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿನ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿದೆ ಹಮ್ಮಿಕೊಂಡಿರುವ ಪ್ರತಿವರ್ಷದಂತೆ ಈ ಭಾರಿಯೂ ಆಯೋಜಿಸಲಾಗುತ್ತಿರುವ ಕುಸುಮಾಂಜಲಿ 2016 ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಆಯೋಜಿಸಲಾಗುತ್ತಿರುವ ಗಾನಕುಸುಮದ ಎರಡನೇ ಆವೃತ್ತಿಯ ಮೊದಲ ಸುತ್ತಿನ ಆಯ್ಕೆಗೆ ಗಾಯನ ಸ್ವರ್ಧೆ ನಾಗೂರಿನ ಲಲಿತಾಕಲಾ ಮಂದಿರದಲ್ಲಿ ಜರುಗಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಕಲಿಸುವ ಪರಿಣತಿ ಹೊಂದಿರುವ ಗುರು, ಕಲಿಕೆಗೆ ಬದ್ಧನಾದ ಶಿಷ್ಯ ಮತ್ತು ಪ್ರಾಮಾಣಿಕ ಆಸಕ್ತಿ ಇರುವ ಶ್ರೋತೃಗಳೆಂಬ ತ್ರಿವೇಣಿ ಸಂಗಮವಾದರೆ ಅಲ್ಲಿ ಸಂಗೀತ ಔನ್ನತ್ಯ ಸಾಧಿಸುತ್ತದೆ. ಈ ತ್ರಿವೇಣಿ ಸಂಗಮಕ್ಕೆ ಪರಸ್ಪರ ಪ್ರಭಾವಿಸುವ ಮತ್ತು ಪ್ರಭಾವಿತವಾಗುವ ಗುಣವಿದೆ ಎಂದರು. ತಾಲೂಕಿನ ಮಕ್ಕಳಲ್ಲಿನ ಸಂಗೀತ ಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕೆಂಬ ತುಡಿತದೊಂದಿಗೆ ಕುಸುಮ ಫೌಂಡೇಶನ್ ಕಳೆದ ಮೂರು ವರ್ಷಗಳಿಂದ ಪ್ರತಿಭಾನ್ವೇಷಣೆ ತೊಡಗಿ ಕುಸುಮಾಂಜಲಿ ಹಾಗೂ ಗಾನಕುಸುಮ ಸ್ಪರ್ಧೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣಗಳಲ್ಲಿ ರಾಜಿಯಾಗಬಹುದಂತ ಪ್ರಕರಣಗಳಲ್ಲಿ ವಾದಿ ಹಾಗೂ ಪ್ರತಿವಾದಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದಲ್ಲಿ ಅಂತಹ ಪ್ರಕರಣಗಳನ್ನು ಕುಂದಾಪುರದ ನ್ಯಾಯಾಲಯದಲ್ಲಿ ನ.7 ರಿಂದ ನ.12 ರವರೆಗೆ ನಡೆಯುವ ಬೃಹತ್ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಇತ್ಯರ್ಥಪಡಿಸಿ ಆದೇಶ ನೀಡಲಾಗುವುದು ಎಂದು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಜಶೇಖರ ವಿ. ಪಾಟೀಲ್ ತಿಳಿಸಿದ್ದಾರೆ. ಕುಂದಾಪುರದ ನ್ಯಾಯಾಲಯ ಸಂಕೀರ್ಣದ ಬಾರ್ ಅಸೋಸೀಯೇಶನ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಬಹುದಾದ ಕೆಲವೊಂದು ಕ್ರಿಮಿನಲ್ ಪ್ರಕರಣ, ಚೆಕ್ ಬೌನ್ಸ್ ಪ್ರಕರಣ, ವಾಹನ ಅಪಘಾತ ಪ್ರಕರಣ, ಪತಿ-ಪತ್ನಿ ಪ್ರಕರಣ, ಕಂದಾಯ, ಕಾರ್ಮಿಕ ಹಾಗೂ ಅರಣ್ಯ ಇಲಾಖಾ ವ್ಯಾಪ್ತಿಯ ಕೆಲವೊಂದು ಆಯ್ದ ಪ್ರಕರಣಗಳಲ್ಲಿ ರಾಜಿ ಸಂಧಾನದ ಮೂಲಕ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಅವಕಾಶ ನೀಡಲಾಗುವುದು. ಮೇಲ್ಮನವಿ ಹಂತದಲ್ಲಿ ಇರುವ ಇಂತಹ ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಹೇಳಿದ ಅವರು ಕಾನೂನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ, ಸಾಹಿತಿಗಳಿಗೆ ಮಾತ್ರ ಸೀಮಿತವಾಗಿರದೇ ನಾಡು ನುಡಿ ಸಂಸ್ಕೃತಿ ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ತೊಡಗಿಸಿಕೊಳ್ಳುವ ಮೂಲಕ ಕನ್ನಡ ಮನಸ್ಸುಗಳನ್ನು ಅರಳಿಸುವ ಉದ್ದೇಶವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು. ಅವರು ಕನ್ನಡ ಸಾಹಿತ್ಯ ಪರಿಷತ್ ವಂಡ್ಸೆ ಹೋಬಳಿ ಘಟಕ, ಗೀತಾನಂದ ಫೌಂಡೇಶನ್ ಮಣೂರು ಪಡುಕೆರೆ ಆಶ್ರಯದಲ್ಲಿ ಕಸಾಪ ತಿಂಗಳ ಸಡಗರದ ಅಂಗವಾಗಿ ಚಿತ್ತೂರು ಚಿತ್ರಕೂಟ ಆಯುರ್ವೇದ ಆರೋಗ್ಯಧಾಮದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಪ್ರಗತಿಪರ ಸಾವಯವ ಕೃಷಿಕ ಮಹಾಬಲ ಬಾಯರಿ ಕಳಿ ದಂಪತಿಗಳನ್ನು ಸನ್ಮಾನಿಸಲಾಯಿತು. ಯುವ ಕವಿಗಳಿಂದ ಕವನ ವಾಚನ ನಡೆಯಿತು. ಕುಂದಾಪುರ ತಾಪಂ ಸದಸ್ಯ ಉದಯ ಜಿ. ಪೂಜಾರಿ, ಕಸಾಪ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ನಾರಾಯಣ ಮಡಿ, ತಾಲೂಕು ಗೌರವ ಕಾರ್ಯದರ್ಶಿ ಡಾ. ಕಿಶೋರ್‌ಕುಮಾರ್ ಶೆಟ್ಟಿ, ಚಿತ್ರಕೂಟ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಶ್ರೀ ಮಾತಾ ಆಸ್ಪತ್ರಯಲ್ಲಿ ಜನರಲ್ ಮೆಡಿಸಿನ್ ವಿಭಾಗವನ್ನು ಕೋಟದ ಉದ್ಯಮಿ ಆನಂದ ಸಿ. ಕುಂದರ್ ಉದ್ಘಾಟಿಸಿದರು. ಬಳಿಕ ಮಾತನಾಡಿ ಸತತ 16 ವರ್ಷಗಳಿಂದ ವೈದ್ಯಕೀಯ ಸೇವೆಯನ್ನು ನೀಡುತ್ತಾ ಜನ ಸಾಮಾನ್ಯರ ವಿಶ್ವಾಸಸ ಪ್ರಶಂಸೆಗೆ ಪಾತ್ರರಾದ ಡಾ. ನಾಗೇಶ್ ಅವರು ಸ್ನಾತಕೋತ್ತರ ಪದವಿಯನ್ನು ಮುಗಿಸಿ ಕುಂದಾಪುರದ ಜನರ ಸೇವೆಗೆ ನಿರತರಾಗಿರುವುದು ಸಂತಸದ ಸಂಗತಿ ಎಂದು ಹೇಳಿದರು. ಹೃದ್ರೋಗ ಮತ್ತು ಮಧುಮೇಹ ತಜ್ಞ ಡಾ. ನಾಗೇಶ್ ಅವರು ಮಾತನಾಡಿ ಹುಟ್ಟೂರಿನಲ್ಲಿ ಸೇವೆ ಸಲ್ಲಿಸಬೇಕೆಂಬ ಇಚ್ಚೆಯಿಂದ ಕುಂದಾಪುರದ ಶ್ರೀ ಮಾತಾ ಆಸ್ಪತ್ರೆಯಲ್ಲಿ ಸೇವೆಯನ್ನು ಆರಂಭಿಸಿದ್ದು, ಉತ್ತಮ ಸೇವೆಯನ್ನು ನೀಡುವ ಉದ್ದೇಶದಿಂದ ಜನರಲ್ ಮೆಡಿಸಿನ್ ವಿಭಾಗವನ್ನು ತೆರೆಯಲಾಗಿದೆ ಎಂದರು. ಈ ಸಂದರ್ಭದಲ್ಲಿ ಡಾ.ಉಮೇಶ್ ನಾಯಕ್, ಡಾ. ಸನ್ಮಾನ ಶೆಟ್ಟಿ, ಡಾ. ಸುಮಂಗಲ ನಾಯಕ್, ಡಾ. ಸುಷ್ಮಾ, ಡಾ. ಪ್ರತಾಪ, ರಾಮ ಪುತ್ರನ್, ರತ್ನಾಕರ ನಾಯಕ್, ಸುಭಾಶ್ ಶೇಟ್, ರಾಮಚಂದ್ರ ಶೇಟ್, ಗಣೇಶ ಕಾಮತ್, ರತ್ನಾಕರ ಶೇಟ್, ಸುರೇಶ್ ಸಾಲಿಯಾನ್ ಇನ್ನಿತರರು ಉಪಸ್ಥಿತರಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ಘಟಕ ಏರ್ಪಡಿಸಿದ್ದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ವಾರ್ಷಿಕ ಸಂಚಿಕೆ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸಂಚಿಕೆ ‘ದೃಷ್ಟಿ’ ಅತ್ಯುತ್ತಮ ವಾರ್ಷಿಕಾಂಕ ಗೌರವವನ್ನು ಪಡೆದುಕೊಂಡಿದೆ.ನವೆಂಬರ್ ೧೯ ರಂದು ಕುಂದಾಪುರದ ಭಂಡಾರ್‌ಕರ್ಸ್ ಕಾಲೇಜಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪುರಸ್ಕಾರ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ವಿಶ್ವಕೋಶ ಎಂದೇ ಖ್ಯಾತರಾದ ನಿವೃತ್ತ ಪೋಸ್ಟ್ ಮಾಸ್ಟರ್ ಕೆ. ರಾಮಚಂದ್ರ ಕೊತ್ವಾಲ್ ದಂಪತಿಗಳನ್ನು ಅವರ ಸ್ವಗೃಹದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳ ಮತ್ತು ರೋಟರಿ ಸದಸ್ಯರು ಶಾಲು ಹೊದಿಸಿ, ಸನ್ಮಾನ ಪತ್ರ ನೀಡಿ ಗೌರವಿಸಿದರು. ಕುಂದಾಪುರದ ಧಾರ್ಮಿಕ, ಸಾಹಿತ್ಯಿಕ, ಐತಿಹಾಸಿಕ, ವ್ಯವಹಾರಿಕ ಇತರ ಎಲ್ಲಾ ಚಟುವಟಿಕೆಗಳನ್ನು ಹತ್ತಿರದಿಂದ ಅಧ್ಯಯನ ಮಾಡಿ ತಮ್ಮ ಅನುಭವಗಳನ್ನು ಲೇಖನಗಳ ಮೂಲಕ ಸಮಾಜಕ್ಕೆ ಧಾರೆ ಎರೆದ ಕೆ. ಆರ್. ಕೊತ್ವಾಲ್‌ರು ಇಂದಿನ ರಾಜ್ಯೋತ್ಸವ ಗೌರವಕ್ಕೆ ಅರ್ಹರು ಎಂದು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅದ್ಯಕ್ಷರಾದ ಕೆ. ನರಸಿಂಹ ಹೊಳ್ಳ ಅವರು ಹೇಳಿದರು. ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಪೂರ್ವಾಧ್ಯಕ್ಷರಾದ ಕೆ. ದಿನಕರ ಪಟೇಲ್, ಸದಸ್ಯರಾದ ಉಲ್ಲಾಸ್ ಕ್ರಾಸ್ತಾ, ಸೀತಾರಾಮ, ಸದಾನಂದ ಉಡುಪ, ಭಾಸ್ಕರ ಬಾಣ, ಸಿ.ಹೆಚ್. ಗಣೇಶ, ಮಂಜುನಾಥ ಕೆ.ಎಸ್., ಅರುಣಚಂದ್ರ ಕೊತ್ವಾಲ್, ಅರವಿಂದ ಕೊತ್ವಾಲ್ ಇನ್ನಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರೋಟರಿ ಸಮುದಾಯ ಭವನದಲ್ಲಿ ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಜರುಗಿತು. ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಕೆ. ಗೋಪಾಲ ಪೂಜಾರಿ, ದೇಶದ ಯುವಶಕ್ತಿಗೆ ತಮ್ಮದೇ ಆದ ಗುರುತರ ಜವಾಬ್ದಾರಿ ಇದೆ. ಈ ನಿಟ್ಟಿನಲ್ಲಿ ಯುವ ಕಾಂಗ್ರೆಸ್‌ನ ಸದಸ್ಯತ್ವವನ್ನು ಇಂದೇ ನೋಂದಣಿ ಮಾಡಿಕೊಂಡು ರಾಜ್ಯ ಹಾಗೂ ದೇಶದಲ್ಲಿ ಪಕ್ಷವನ್ನು ಬಲಿಷ್ಟಗೊಳಿಸುವುದರ ಮೂಲಕ ಅಧಿಕಾರಕ್ಕೆ ತರುವಲ್ಲಿ ಸತತ ಪ್ರಯತ್ನ ನಡೆಸಬೇಕು ಎಂದರು. ಕಾಂಗ್ರೆಸ್ ತನ್ನ ವಿರೋಧಿಗಳಿಗೆ ಸಂಘಟನಾತ್ಮಕ ಹೋರಾಟದ ಮೂಲಕ ಈಗ ಉತ್ತರ ನೀಡಬೇಕಾಗಿದೆ. ಆ ನೆಲೆಯಲ್ಲಿ ಪಕ್ಷದ ಹಿರಿಯರು ಯುವ ನೊಂದಣಿ ಅಭಿಯನದಡಿ ಪ್ರತಿಯೊಂದು ಬೂತ್ ಮಟ್ಟದಲ್ಲಿ ಭೇಟಿ ನೀಡಿ ಆ ಭಾಗದ ಹೆಚ್ಚು ಯುವಕರನ್ನು ಪಕ್ಷದ ಸದಸ್ಯರಾಗುವಲ್ಲಿ ಪ್ರಯತ್ನಿಸಬೇಕು. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ ಮೂರು ವರ್ಷಗಳುದ್ದಕ್ಕೆ ಮಾಡಿದ ಉತ್ತಮ ಕೆಲಸ, ಮೂಲ ಸೌಲಭ್ಯ ಹೆಚ್ಚಿಸಿ ಹಲವು ಜನಪರ ಯೋಜನೆಗಳನ್ನು ಕಾರ್ಯಗತಗೊಳಿಸಿ ಸಾಮಾಜಿಕ ನ್ಯಾಯಕ್ಕೆ ಒತ್ತುನೀಡಿದ ಕುರಿತಾಗಿ ಯುವಜನತೆಗೆ ಮನವರಿಕೆ ಮಾಡಬೇಕು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಂಡಾರ್‌ಕಾರ್ಸ್ ಕಾಲೇಜಿನ ಇಂಗ್ಲೀಷ್ ವಿಭಾಗ ಮುಖ್ಯಸ್ಥೆ, ಲೇಖಕಿ ಪಾರ್ವತಿ ಜಿ ಐತಾಳ್ ಅವರ ‘ಒಡಲ ಬೆಂಕಿ’ ಕಾದಂಬರಿಗೆ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್‌ನ ಸಾಹಿತ್ಯ ಪ್ರಶಸ್ತಿ ದೊರೆತಿದೆ. ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾ ಗ್ರಾಮದ ಪುಲಕೇಶಿ ರಂಗಮಂದಿರದಲ್ಲಿ ಡಿ.೮ ರಿಂದ ೧೨ರ ತನಕ ೫ ದಿನಗಳ ಕಾಲ ನಡೆಯಲಿರುವ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ೮ನೇ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಕನ್ನಡ ಬರಹಗಾರ್ತಿಯರ ಪೈಕಿ ಪ್ರಮುಖರೆನಿಸಿಕೊಂಡಿರುವ ಪಾರ್ವತಿ ಜಿ. ಐತಾಳ ಅವರು ಈವರೆಗೆ ಕಥೆ, ಕವಿತೆ, ಕಾದಂಬರಿಗಳನ್ನು ಪ್ರಕಟಿಸಿರಲ್ಲದೇ, ಮಲಯಾಳಂ ಭಾಷೆಯ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ೨ ಎಕ್ರೆ ಜಾಗ ಲಭ್ಯವಿದ್ದು, ಈ ಜಾಗದಲ್ಲಿರುವ ದೊಡ್ಡ ಗಾತ್ರದ ಮರಗಳನ್ನು ಅರಣ್ಯ ಇಲಾಖೆಯವರಿಂದ ಅಭಿಪ್ರಾಯ ಪಡೆದು ನಂತರ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಕುಂದಾಪುರ ತಾಲೂಕು ಪಂಚಾಯತ್ ಪ್ರಗತಿ ಪರಿಶೀಲನಾ ಸಭೆಯ ಅನುಪಾಲನಾ ವರದಿ ಗುರುತಿಸಿದ್ದನ್ನು ನಿವೇಶನ ರಹಿತರಿಗೆ ಭೂಮಿ ಹಕ್ಕು ಪತ್ರ ಮಂಜೂರು ಮಡಲು ಸರಕಾರ ಕ್ರಮವಹಿಸಬೇಕು ಎಂದು ಸಿಐಟಿಯು ಕುಂದಾಪುರ ತಾಲೂಕು ಅಧ್ಯಕ್ಷ ಎಚ್. ನರಸಿಂಹ ಹೇಳಿದರು. ಅವರು ತಲ್ಲೂರು, ಉಪ್ಪಿನಕುದ್ರು, ಗ್ರಾಮಗಳ ಮನೆ, ನಿವೇಶನ ರಹಿತರ- ಬೃಹತ್ ಸಮಾವೆಶ ಉದ್ಘಾಟಿಸಿ ಮಾತನಾಡಿದರು. ಕೃಷಿ ಕೂಲಿಕಾರರ ಸಂಘದ ಕುಂದಾಪುರ ತಾಲೂಕು ಕಾರ್ಯದರ್ಶಿ ವೆಂಕಟೇಶ ಕೋಣಿ ಮಾತನಾಡುತ್ತಾ ತಲ್ಲೂರು ಗ್ರಾಮದಲ್ಲಿ – ಕಂದಾಯ ಇಲಾಖೆ- ಸರಕಾರಿ ಜಾಗ ೬.೦೦ ಎಕ್ರೆ ಅತಿಕ್ರಮಣ ಸ್ಥಳವನ್ನು ಸ್ಥಳೀಯ ಗ್ರಾಮ ಪಂಚಾಯತ್‌ಗೆ ಹಸ್ತಾಂತರ ಮಾಡಲಾಗಿದ್ದು, ಕೂಡಲೇ ಹಕ್ಕು ಪತ್ರ ಮಂಜೂರು ಮಾಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು. ತಲ್ಲೂರು ಗ್ರಾಮದ ಸ.ನಂ. ೧೬೮…
