ಕುಂದಾಪುರ: ಶ್ರೀ ಮಾತಾ ಆಸ್ಪತ್ರೆಯಲ್ಲಿ ಜನರಲ್ ಮೆಡಿಸಿನ್ ವಿಭಾಗ ಆರಂಭ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಶ್ರೀ ಮಾತಾ ಆಸ್ಪತ್ರಯಲ್ಲಿ ಜನರಲ್ ಮೆಡಿಸಿನ್ ವಿಭಾಗವನ್ನು  ಕೋಟದ ಉದ್ಯಮಿ ಆನಂದ ಸಿ. ಕುಂದರ್ ಉದ್ಘಾಟಿಸಿದರು. ಬಳಿಕ ಮಾತನಾಡಿ ಸತತ 16 ವರ್ಷಗಳಿಂದ ವೈದ್ಯಕೀಯ ಸೇವೆಯನ್ನು ನೀಡುತ್ತಾ ಜನ ಸಾಮಾನ್ಯರ ವಿಶ್ವಾಸಸ ಪ್ರಶಂಸೆಗೆ ಪಾತ್ರರಾದ ಡಾ. ನಾಗೇಶ್ ಅವರು ಸ್ನಾತಕೋತ್ತರ ಪದವಿಯನ್ನು ಮುಗಿಸಿ ಕುಂದಾಪುರದ ಜನರ ಸೇವೆಗೆ ನಿರತರಾಗಿರುವುದು ಸಂತಸದ ಸಂಗತಿ ಎಂದು ಹೇಳಿದರು.

Call us

Click Here

ಹೃದ್ರೋಗ ಮತ್ತು ಮಧುಮೇಹ ತಜ್ಞ ಡಾ. ನಾಗೇಶ್ ಅವರು ಮಾತನಾಡಿ ಹುಟ್ಟೂರಿನಲ್ಲಿ ಸೇವೆ ಸಲ್ಲಿಸಬೇಕೆಂಬ ಇಚ್ಚೆಯಿಂದ ಕುಂದಾಪುರದ ಶ್ರೀ ಮಾತಾ ಆಸ್ಪತ್ರೆಯಲ್ಲಿ ಸೇವೆಯನ್ನು ಆರಂಭಿಸಿದ್ದು, ಉತ್ತಮ ಸೇವೆಯನ್ನು ನೀಡುವ ಉದ್ದೇಶದಿಂದ ಜನರಲ್ ಮೆಡಿಸಿನ್ ವಿಭಾಗವನ್ನು ತೆರೆಯಲಾಗಿದೆ ಎಂದರು.

ಈ ಸಂದರ್ಭದಲ್ಲಿ ಡಾ.ಉಮೇಶ್ ನಾಯಕ್, ಡಾ. ಸನ್ಮಾನ ಶೆಟ್ಟಿ, ಡಾ. ಸುಮಂಗಲ ನಾಯಕ್, ಡಾ. ಸುಷ್ಮಾ, ಡಾ. ಪ್ರತಾಪ, ರಾಮ ಪುತ್ರನ್, ರತ್ನಾಕರ ನಾಯಕ್, ಸುಭಾಶ್ ಶೇಟ್, ರಾಮಚಂದ್ರ ಶೇಟ್, ಗಣೇಶ ಕಾಮತ್, ರತ್ನಾಕರ ಶೇಟ್, ಸುರೇಶ್ ಸಾಲಿಯಾನ್ ಇನ್ನಿತರರು ಉಪಸ್ಥಿತರಿದ್ದರು. ಶ್ರೀ ಮಾತಾ ಆಸ್ಪತ್ರಯ ವೈದ್ಯಕೀಯ ನಿರ್ದೇಶಕ ಡಾ. ಸತೀಶ್ ಪೂಜಾರಿ ಸ್ವಾಗತಿಸಿದರು. ಖ್ಯಾತ ಮನೋ ವೈದ್ಯ ಡಾ. ಪ್ರಕಾಶ್ ಸಿ. ತೋಳಾರ್ ವಂದಿಸಿದರು.

Leave a Reply