Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೆಹಲಿ ತಲಕೊತ್ತರಾ ಇಂಡೋರ್ ಸ್ಟೇಡಿಯಂನಲ್ಲಿ ನಡೆ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಕುಂದಾಪುರದ ಕಿರಣ್ಸ್ ಡ್ರ್ಯಾಗನ್ ಫಿಸ್ಟ್ ಮಾರ್ಷಲ್ ಆಫ್ ಇಂಡಿಯಾ ವಿದ್ಯಾರ್ಥಿಗಳಾದ ಅಕ್ಷಯ್, ಗಣೇಶ್, ವೈಭವ್ ಬೋಸ್ಲೆ, ವಿನಯ್ ಕುಮಾರ್, ಚರಣ್ ಶ್ಯಾನ್‌ಬೋಗ್ ಇವರು ಕಂಚಿನ ಪದಕ ಪಡೆದಿರುತ್ತಾರೆ. ಇವರಿಗೆ ಶಿಹಾನ್ ಕಿರಣ್ ಕುಂದಾಪುರ, ಸಂದೀಪ್ ವಿ.ಕೆ., ಕೀರ್ತಿ ಜಿ.ಕೆ. ತರಬೇತಿ ನೀಡಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಮಾಜ ಜೀವನದಲ್ಲಿ ಪ್ರಧಾನವಾದ ಎರಡು ಘಟಕಗಳು ಮದುವೆ ಮತ್ತು ಕುಟುಂಬ. ದುರಂತವೆಂದರೆ ಮದುವೆ ಮತ್ತು ಕುಟುಂಬ ಎಂಬ ಈ ಎರಡು ಅಪೂರ್ವ ಘಟಕಗಳ ನಡುವೆಯೇ ಹೆಣ್ಣು ಹಲವು ತೆರೆನಾದ ದೌರ್ಜನ್ಯಗಳು ಕಣ್ಣಿಗೆ ಕಾಣಿಸುವಂತಿದ್ದರೆ ಹಲವು ಅನುಭವಕ್ಕೆ ಮಾತ್ರ ಗೋಚರವಾಗುತ್ತದೆ. ಇಂತಹ ದೌರ್ಜನ್ಯ ಕಾನೂನಿನಿಂದ ನಿಯಂತ್ರಿಸಬಹುದೇ ಹೊರತು ಪೂರ್ಣಪ್ರಮಾಣದಲ್ಲಿ ತೊಡೆದು ಹಾಕಲು ಸಾಧ್ಯವಿಲ್ಲ ಎಂದು ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜ್ ಕನ್ನಡ ವಿಭಾಗ ಮುಖ್ಯಸ್ಥೆ ರೇಖಾ ಬನ್ನಾಡಿ ಹೇಳಿದರು. ಬೆಂಗಳೂರು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಕಾಲೇಜ್ ಸಭಾಂಗಣದಲ್ಲಿ ಆಯೋಜಿಸಿದ ಮಹಿಳೆಯರ ಮೇಲಿನ ದೌರ್ಜನ್ಯಗಳು :ತಡೆಗಟ್ಟುವಿಕೆ ಮತ್ತು ಪರಿಹಾರ’ ಎಂಬ ವಿಷಯದ ಮೇಲೆ ನಡೆಸಿದ ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ತವರು ಮನೆಯ ಆಸ್ತಿಯಲ್ಲಿ ಹೆಣ್ಣು ಸಮಾನ ಹಕ್ಕುದಾರಳಾದುದುರಿಂದ ವೈವಾಹಿಕ ಬದುಕು ಅಸಹನೀಯವೆನಿಸಿದಾಗ ಸಾವಿಗೆ ಶರಣಾಗದೆ ತವರು ಮೆನೆಯನ್ನು ಸೇರಿಕೊಂಡು ಬದುಕನ್ನು ಕಟ್ಟಿಸಿಕೊಳ್ಳುತ್ತಾರೆ ಎಂದರು.…

Read More

ಬೈಂದೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಮರ್ಸ್ ಲ್ಯಾಬ್ ಉದ್ಘಾಟನೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪಠ್ಯವಸ್ತುವಿನ ಹೊರತಾದ ಮಾಹಿತಿ ಸಂಗ್ರಹಿಸಿ ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಪೂರಕವಾಗುವ ಒಂದು ವಿನೂತನ ಪ್ರಯತ್ನ ಅವನ್ನು ಬೈಂದೂರು ಪದವಿ ಕಾಲೇಜಿನಲ್ಲಿ ಮಾಡಲಾಗಿದ್ದು ಅವು ವಿದ್ಯಾರ್ಥಿಗಳ ಜ್ಞಾನ ವಿಸ್ತಾರ ಮತ್ತು ಉದ್ಯೋಗ ಗಳಿಕೆಗೆ ಸಹಕಾರಿಯಾಗುತ್ತವೆ ಎಂದು ಕಾಲೇಜು ಅಭಿವೃದ್ಧಿ ಮಂಡಳಿಯ ಸದಸ್ಯ ಎಸ್. ರಾಜು ಪೂಜಾರಿ ಹೇಳಿದರು. ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರಂಭವಾದ ಕಾಮರ್ಸ್ ಲ್ಯಾಬರೇಟರಿಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾಂಶುಪಾಲ ಬಿ. ಎ. ಮೇಳಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಾಮರ್ಸ್ ವಿಭಾಗ ಮುಖ್ಯಸ್ಥ ಡಾ. ಉಮೇಶ ಮಯ್ಯ ಕಾಮರ್ಸ್ ಲ್ಯಾಬ್ ವಿದ್ಯಾರ್ಥಿಗಳ ಪಠ್ಯವಸ್ತು ಕಲಿಕೆ ಮತ್ತು ಪ್ರಾಯೋಗಿಕ ಕಲಿಕೆಯ ನಡುವಿನ ಕೊಂಡಿಯಾಗಿರುತ್ತದೆ. ದೇಶದ ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹತ್ತಾರು ಮಹತ್ವದ ವಿಷಯಗಳನ್ನು ಇಲ್ಲಿ ಸಂಗ್ರಹಿಸಿ ಇಡಲಾಗಿದೆ. ಬ್ಯಾಂಕ್, ವಿಮೆ, ಶೇರು ಮಾರುಕಟ್ಟೆ, ಕಂಪನಿ ವ್ಯವಹಾರಗಳು, ನಿರ್ವಹಣಾ ವಿಜ್ಞಾನ ಇತ್ಯಾದಿ ವಿಚಾರಗಳನ್ನು ಇಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಮಾಜದ ಯುವಕರ ಪಡೆ ಸಂಘಟನೆಯಲ್ಲಿ ಒಂದು ನಂಬಿಕೆ ಇಟ್ಟುಕೊಂಡು ಮುಂದೆ ಬಂದಾಗ ಎನೂ ಬೇಕಾದರೂ ಸಾಧಿಸಿ ತೋರಿಸುವ ಛಲ ಇಂದಿನ ಯವಕರಲ್ಲಿ ಇದೆ. ಅದಕ್ಷಾಗಿ ಸರಕಾರದಿಂದ ದೊರೆಯುವ ಸೌಲಭ್ಯಗಳು ಹಾಗೂ ಸಮಾಜದ ದಾನಿಗಳಿಂದ ಸಹಾಯ ಪಡೆದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹಾಯ ಮಾಡುವುದರದೊಂದಿಗೆ ಸಮಾಜಮುಖಿ ಕೆಲಸವನ್ನು ಮಾಡಿಕೊಂಡು ಬಂದಾಗ ಮಾತ್ರ ನಮ್ಮ ಸಮಾಜವು ಏಳಿಗೆಯಾಗಲು ಸಾಧ್ಯ ಎಂದು ಉಡುಪಿ ಜಿಲ್ಲಾ ಸವಿತ ಸಮಾಜದ ಅಧ್ಯಕ್ಷ ಅರುಣ್ ಭಂಡಾರಿ ಪರ್ಕಳ ಹೇಳಿದರು. ಅವರು ಕುಂದಾಪುರ ಕುಂದೇಶ್ವರ ರಸ್ತೆ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಜರುಗಿದ ಕುಂದಾಪುರ ತಾಲೂಕು ಪರಿಯಾಳ ಸಮಾಜ ಹಾಗೂ ಮಹಿಳಾ ಪರಿಯಾಳ ಸಮಾಜ ಜಂಟಿ ಆಶ್ರಯದಲ್ಲಿ ಜರುಗಿದ ೪ನೇ ವಾರ್ಷೀಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ಪರಿಯಾಳ ಸಮಾಜ ಸುಧಾರಕರ ಸಂಘ ಅಧ್ಯಕ್ಷ ಸುಜಯ್ ಸುವರ್ಣ ವಕ್ವಾಡಿ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪರಿಯಾಳ ಸಮಾಜ ಸುಧಾರಕರ ಸಂಘ ಅಧ್ಯಕ್ಷ ಯು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಲಲಿತಾ ಕಲಾ ಸಂಘ ಆಶ್ರಯದಲ್ಲಿ ವಿದ್ಯಾರ್ಥಿಗಳ ಕ್ರೀಯಾಶೀಲ ಚಟುವಟಿಕೆ ಉತ್ತೇಜಿಸುವ ನೆಲೆಯಲ್ಲಿ ಪೂಕಳಂ ಪುಷ್ಪ ರಂಗೋಲಿ ಸ್ಪರ್ಧೆ ಕಾಲೇಜ್ ಸಭಾಂಗಣದಲ್ಲಿ ನಡೆಸಲಾಯಿತು. ಲಲಿತ ಕಲಾ ಸಂಘದ ಸಂಯೋಜಕಿ ಸ್ಫೂರ್ತಿ ಎಸ್. ಫೆರ್ನಾಂಡಿಸ್, ಸಹ ಸಂಯೋಜಕಿ ಅನ್ವಿತಾ ಕಾರ್ಯಕ್ರಮ ಸಂಯೋಜಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ದೋಮ ಚಂದ್ರಶೇಖರ್ ಇದ್ದರು. ಸ್ಪರ್ಧೆಯಲ್ಲಿ ಪ್ರಥಮ ಬಿ.ಕಾಂ. ಡಿ ವಿಭಾಗದ ಶ್ರೇಯಾ ಸೆಬೆಸ್ಟಿನ್, ಹಾಗೂ ದ್ವಿತೀಯ ಬಿ.ಕಾಂ. ಸಿ ವಿಭಾಗದ ಯೋಗಿಶ್ ಸ್ಥಾನಗಳಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಆಶ್ರಯದಲ್ಲಿ ಕೋಟೇಶ್ವರ ನಮ್ಮ ಕಲಾಕೇಂದ್ರದ ಸಹಭಾಗಿತ್ವದಲ್ಲಿ ನಡೆದ ತಿಂಗಳ ಕಾರ್ಯಕ್ರಮದಲ್ಲಿ ಕುಂದಾಪುರದ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಕೆ. ರವಿರಾಜ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮಾಜಿ ಧರ್ಮದರ್ಶಿ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು, ಹಿರಿಯ ಗೊಂಬೆಯಾಟ ಕಲಾವಿದ ವಾಮನ ಪೈ ಹೆಮ್ಮಾಡಿ, ಸಂತೋಷ್ ಅಡ್ವರ್‌ಟೈಸಿಂಗ್ ಮಾಲಕ ಸಂತೋಷ ಕೋಣಿ ಉಪಸ್ಥಿತರಿದ್ದರು. ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ ಕೊಗ್ಗ ಕಾಮತ್ ಪ್ರಾಸ್ತಾವಿಕ ಮಾತನಾಡಿದರು. ಬಟ್ವಡಿ ಅನುದಾನಿತ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ನಾಗೇಶ್ ಶ್ಯಾನುಭಾಗ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ನಮ್ಮ ಕಲಾಕೇಂದ್ರದ ಕಲಾವಿದರಿಂದ ಭೀಷ್ಮ ಪ್ರತಿಜ್ಞೆ ತಾಳಮದ್ದಳೆ ನಡೆಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆ ಸರಕಾರಿ ಹಿರಿಯ ಪರಾಥಮಿಕ ಶಾಲೆಯಲ್ಲಿ ೭ ದಿನ ನಡೆದ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ನಡೆಯಿತು. ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಷಿ ಸಮಾರೋಪ ಭಾಷಣ ಮಾಡಿದರು. ’ಮಕ್ಕಳ ಮುಗ್ಧತೆ ಒಂದು ಸಂಪತ್ತು. ಅದನ್ನು ಯಾವತ್ತೂ ಕಳೆದುಕೊಳ್ಳಬಾರದು. ಕೀಳರಿಮೆಯಿಂದ ಮುಕ್ತರಾಗಿ, ಕರ್ತವ್ಯ ಪ್ರಜ್ಞೆ ಬೆಳೆಸಿಕೊಂಡು, ಭವಿಷ್ಯದ ಬಗ್ಗೆ ಚಿಂತಿಸಿ ಕಾರ್ಯಪ್ರವೃತ್ತರಾದರೆ ಬದುಕಿನಲ್ಲಿ ಯಶಸ್ಸು ಖಚಿತ’ ಎಂದು ಅವರು ಹೇಳಿದರು. ಪ್ರಾಂಶುಪಾಲ ಕವಿತಾ ಎಂ. ಸಿ. ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿದ್ದ ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ, ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ, ನಿವೃತ್ತ ಪ್ರಾಂಶುಪಾಲ ಎಂ. ಶಂಕರ ಖಾರ್ವಿ, ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ, ಕಾಲೇಜು ಆಡಳಿತ ಸಮಿತಿಯ ಕಾರ್ಯದರ್ಶಿ ಎನ್. ಸದಾಶಿವ ನಾಯಕ್ ಶುಭ ಹಾರೈಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಅರುಣಕುಮಾರ ಸ್ವಾಗತಿಸಿದರು. ಶಿಬಿರಾರ್ಥಿ ನಾಗರಾಜ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಜ್ಯದ 16 ಒಕ್ಕೂಟಗಳಲ್ಲಿಯೇ ದ.ಕ. ಹಾಲು ಉತ್ಪಾದಕರ ಒಕ್ಕೂಟ ರಾಜ್ಯದಲ್ಲಿ ದಾಖಲೆ ಪ್ರಮಾಣದ ಹಾಲು ಸಂಗ್ರಹಿಸುತ್ತಿದ್ದು ಈವರೆಗೂ ಪ್ರಥಮ ಸ್ಥಾನ ಕಾಯ್ದುಕೊಂಡಿದೆ ಎಂದು ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ್ ಹೆಗ್ಡೆ ಹೇಳಿದರು. ಗೋಳಿಹೊಳೆ ಗ್ರಾಪಂ ವ್ಯಾಪ್ತಿಯಲ್ಲಿ ಒಕ್ಕೂಟದ ೬೯೨ನೇ ಶಾಖೆಯಾದ ಅರೆಶಿರೂರು ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದರು. ಮಿಶ್ರತಳಿಯ ಹಸುಗಳನ್ನು ಸಾಕಿ ಆಧುನಿಕ ವಿಧಿವಿಧಾನಗಳಿಂದ ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭಗಳಿಸಲು ಸಾಧ್ಯವಾಗುತ್ತದೆ. ಸಂಘದಲ್ಲಿ ಬಂದ ಲಾಭಾಂಶದಲ್ಲಿ ಡಿವಿಡೆಂಟ್, ಬೋನಸ್ ಮೂಲಕ ಸದಸ್ಯರಿಗೆ ಕೊಡಲಾಗುತ್ತಿದೆ. ಹೈನುಗಾರಿಕೆ ಲಾಭದಾಯಿಕ ಕೃಷಿಯಾಗಿದ್ದು, ಗ್ರಾಮೀಣ ಭಾಗದ ಜನರ ಜೀವನಮಟ್ಟವನ್ನು ಆರ್ಥಿಕವಾಗಿ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು. ಬಸ್ರೂರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ. ಅಪ್ಪಣ್ಣ ಹೆಗ್ಡೆ ಂಘದ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ ನಮ್ಮ ತಾಲೂಕಿನಲ್ಲಿ ಪ್ರತಿದಿನ ನಗರಗಳಿಂದ ೧.೨೦ ಕೋಟಿ ರೂಪಾಯಿ ಹಾಲಿನ ಲಾಭಾಂಶದ ಮೂಲಕ ಹಳ್ಳಿಗಳಿಗೆ ಬರುತ್ತದೆ. ವಿಪರ್ಯಾಸವೆಂದರೆ ನಮ್ಮಲ್ಲಿ ಪ್ರತಿದಿನ ೨.೪೦ ಕೋಟಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿದ್ಯಾರ್ಥಿ ಜೀವನ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯ, ನಿರಂತರವಾಗಿ ಭಾಗವಹಿಸಲು ಅಪೂರ್ವ ಅವಕಾಶ ಒದಗಿಸುವ ಒಂದು ಸುವರ್ಣ ಘಟ್ಟವಾಗಿದೆ. ಗ್ರಾಮೀಣ ಪರಿಸರದ ಕ್ರೀಡಾ ಪ್ರತಿಭೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರದ ಇಲಾಖೆಗಳು ಆದ್ಯತೆಯ ಮೇರೆಗೆ ಕಾರ್ಯನಿರ್ವಹಿಸಬೇಕಾಗಿದೆ. ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಓದು, ಕಲಿಕೆಯ ಬಗೆಗೂ ಗಮನಹರಿಸಿ, ಸಮಯ ನೀಡಬೇಕಾದುದು ಅತ್ಯವಶ್ಯ ಎಂದು ಬೆಂಗಳೂರು ಡೆಂಟಲ್ ಲ್ಯಾಬ್ ಮತ್ತು ಕ್ಲಿನಿಕ್ ವ್ಯವಸ್ಥಾಪಕ ನಿರ್ದೇಶಕ ಬಸ್ರೂರು ಗಣೇಶ್ ಪಡಿಯಾರ್ ಅಭಿಪ್ರಾಯಪಟ್ಟರು. ಬಸ್ರೂರು ಶ್ರೀ ಶಾರದಾ ಕಾಲೇಜು ಆಶ್ರಯದಲ್ಲಿ ಕಾಲೇಜ್ ಕ್ರೀಡಾಂಗಣದಲ್ಲಿ ಗುರುವಾರ ದಿಂದ ನಡೆಯುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅಂತರ್ ಕಾಲೇಜ್ ಮಟ್ಟದ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ವಿಜೇತ ತಂಡಗಳಿಗೆ ಬಹುಮಾನವಾಗಿ ಐವತ್ತು ಸಾವಿರ ರೂ ನಗದು ಬಹುಮಾನ ಘೋಷಿಸಿದರು. ಕಾಲೇಜು ಸಂಚಾಲಕ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ ಅಧ್ಯಕ್ಷ ವೇಣುಗೋಪಾಲ ನೊಂಡ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬಿಜೂರು ಮಕ್ಕಿದೇವಸ್ಥಾನದ ಮಹಾಲಿಂಗೇಶ್ವರ ಯಕ್ಷಗಾನ ಕಲಾಮಂಡಳಿಯ ಆಶ್ರಯದಲ್ಲಿ ನಾಗೂರಿನಲ್ಲಿ ಯಕ್ಷೋತ್ಸವ-೨೦೧೬ ಪ್ರಸ್ತುತಗೊಂಡಿತು. ಅಲ್ಲಿನ ಸಂದೀಪನ್ ಶಾಲೆಯ ಆವರಣದಲ್ಲಿ ನಡೆದ ಈ ಅದ್ದೂರಿಯ ಕಾರ್ಯಕ್ರಮವನ್ನು ಕಿರುತೆರೆಯ ನಟಿ ತಳಕಾಲ್‌ಕೊಪ್ಪದ ಅನುಜ್ಞಾ ಪಿ. ರಾವ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಯಕ್ಷಗಾನವು ಜೀವಂತ ಕಲೆಯಾಗಿರುವುದರಿಂದ ಅದನ್ನು ಸಿನಿಮಾದೊಂದಿಗೆ ಹೋಲಿಸಲಾಗದು. ಸಿನಿಮಾ ತಯಾರಿ ಹಂತದಲ್ಲಿ ಅದರ ಯಾವುದೇ ವಿಭಾಗದಲ್ಲಿ ನುಸುಳುವ ದೋಷವನ್ನು ಪ್ರದರ್ಶನಪೂರ್ವದಲ್ಲಿ ಸರಿಪಡಿಸಬಹುದು. ಯಕ್ಷಗಾನದಲ್ಲಿ ಅದು ಸಾಧ್ಯವಿಲ್ಲವಾದ್ದರಿಂದ ಅದರಲ್ಲಿ ಪಾತ್ರ ನಿರ್ವಹಿಸುವವರು ಉತ್ಕೃಷ್ಟ ಸಾಧನೆ ಮಾಡಬೇಕಾಗುತ್ತದೆ. ಯಕ್ಷಗಾನ ಶ್ರೀಮಂತ ಕಲೆಯಾದುದರಿಂದ ಅದರ ಪರಂಪರೆಗೆ ಚ್ಯುತಿ ಬರದಂತೆ ಉಳಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಸಂದೀಪನ್ ಶಾಲೆಯ ಮುಖ್ಯೋಪಾಧ್ಯಾಯ ಬಿ. ವಿಶ್ವೇಶ್ವರ ಅಡಿಗ ಯಕ್ಷಗಾನದ ಪುರಾಣ ಪ್ರಸಂಗಗಳು ಎಲ್ಲ ಕಾಲಕ್ಕೂ ಅನ್ವಯವಾಗುತ್ತವೆ. ಇಂದು ಪ್ರದರ್ಶನಗೊಳ್ಳುವ ವೀರ ಅಭಿಮನ್ಯು ದೇಶದ ರಕ್ಷಣೆಗೆ ಹುತಾತ್ಮರಾಗುವ ಯೋಧರ ತ್ಯಾಗವನ್ನು ನೆನಪಿಸುತ್ತದೆ ಎಂದರು. ಮಂಗಳೂರಿನ ಸುಧಾಕರ ಸಾಲಿಯಾನ್ ಮತ್ತು ಡಾ. ಗುರುರಾಜ ಭಟ್ಟ ಶುಭ…

Read More