ಪರಿಸರ ಸಂರಕ್ಷಣೆಯ ಹೊಣೆಗಾರಿಕೆಯಿಂದ ನೆಮ್ಮದಿಯ ಬದುಕು : ಡಾ. ಭಾಸ್ಕರ ಆಚಾರ್ಯ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂದು ಪರಿಸರ ಆತಂಕದ ಸ್ಥಿತಿಯಲ್ಲಿದ್ದು, ಅದನ್ನು ಊಳಿಸಿ ಸಮದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಇಲ್ಲವಾದಲ್ಲಿ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ. ಆದುದರಿಂದ ಪರಿಸರ, ಜೀವ ವೈವಿಧ್ಯವನ್ನು ಸಂರಕ್ಷಿಸುವ ಹೊಣೆಗಾರಿಕೆಯನ್ನು ಪ್ರತಿಯೊಬ್ಬರು ಹೊತ್ತಾಗ ನೆಮ್ಮದಿಯ ಬದುಕು ಸಾಧ್ಯ ಎಂದು ಕೋಟೇಶ್ವರದ ಡಾ. ಎನ್. ಆರ್. ಆಚಾರ್ಯ ಮೆಮೋರಿಯಲ್ ಟ್ರಸ್ಟ್ನ ಮುಖ್ಯಸ್ಥರಾದ ಡಾ. ಭಾಸ್ಕರ ಆಚಾರ್ಯ ಹೇಳಿದರು. ಅವರು ಫ್ಲೋರಾ ಎಂಡ್ ಫೌನಾ ಕ್ಲಬ್ ಕುಂದಾಪುರ, ಡಾ| ಎನ್. ಆರ್. ಆಚಾರ್ಯ ಮೆಮೋರಿಯಲ್ ಟ್ರಸ್ಟ್ ಕೋಟೇಶ್ವರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಕುಂದಾಪುರ ವಲಯದ ಆಶ್ರಯದಲ್ಲಿ ಕುಂದಾಪುರದ ಹೋಟೆಲ್ ಹರಿಪ್ರಸಾದ್ನ ಅಕ್ಷತಾ ಸಭಾಂಗಣದಲ್ಲಿ ನ.೨೬ರಂದು ನಡೆದ ಕುಂದಾಪುರ ತಾಲೂಕು ಮಟ್ಟದ ಇಕೋಕ್ಲಬ್ಗಳ ಸಮ್ಮೇಳನ ಸಮುದ್ರ ೨೦೧೬ ರಲ್ಲಿ ಡಾ| ಎನ್.ಆರ್. ಆಚಾರ್ಯ ಸ್ಮಾರಕ ಅತ್ಯುತ್ತಮ ಇಕೋ ಕ್ಲಬ್ ಪ್ರಶಸ್ತಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಸಿದ್ದಾಪುರ: ನಟನೆ ಹಾಗೂ ಭಾವನೆಗಳಿಂದ ಕೂಡಿದ ಕಲೆ ಯಕ್ಷಗಾನ. ಯಕ್ಷಗಾನವನ್ನು ನಂಬಿ ಬೆಳೆದು ಬಂದವರು ಹೆಸರು ಪಡೆದುಕೊಂಡಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಂದ ನಡೆಯಲ್ಪಡುವ ಯಕ್ಷಗಾನ ಮೇಳಗಳು ಧರ್ಮವನ್ನು ಪ್ರಸಾರ ಪಡಿಸುತ್ತವೆ. ಭಕ್ತರ ಭಕ್ತಿಯ ಭಂಡಾರ ಹೋತ್ತು ಸಾಗುವ ಕಲೆ ಯಕ್ಷಗಾನ. ಇದು ಧರ್ಮವನ್ನು ಸಾರುವ ರಥವಾಗಿದೆ ಎಂದು ಹಾಲಾಡಿ ಗ್ರಾ. ಪಂ. ಅಧ್ಯಕ್ಷ ಹಾಲಾಡಿ ಸರ್ವೋತ್ತಮ ಹೆಗ್ಡೆ ಅವರು ಹೇಳಿದರು. ಅವರು ಹಾಲಾಡಿ ಶ್ರೀ ಮರ್ಲುಚಿಕ್ಕು ದೈವಸ್ಥಾನದಲ್ಲಿ ನಡೆದ ಶ್ರೀ ಕ್ಷೇತ್ರ ಹಾಲಾಡಿಯ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದ ಪ್ರಥಮ ದೇವರ ಸೇವೆಯಾಟದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಒಳ್ಳೆಯ ಆಡಳಿತಗಾರರು ಇದ್ದಾಗ ಕ್ಷೇತ್ರಗಳು ಹಾಗೂ ಕ್ಷೇತ್ರಗಳಿಂದ ನಡೆಸಲ್ಪಡುವ ಮೇಳಗಳು ಅಭಿವೃದ್ಧಿ ಹೊಂದುತ್ತವೆ. ಕ್ಷೇತ್ರದ ಧರ್ಮದರ್ಶಿ ಹಾಲಾಡಿ ತಾರನಾಥ ಶೆಟ್ಟಿಯ ಬದ್ದತೆ, ಮೇಳದ ವ್ಯವಸ್ಥಾಪಕರಾದ ವೈ. ಕರುಣಾಕರ ಶೆಟ್ಟಿ ಅವರ ಕರ್ತವ್ಯ ನಿಷ್ಠೆ ಹಾಲಾಡಿ ಮೇಳವನ್ನು ಉನ್ನತ ಸ್ಥಾನಕ್ಕೆ ಕೊಂಡೋಯ್ದಿದೆ ಎಂದು ಹೇಳಿದರು. ಪೆರ್ಡೂರು ಹಾಗೂ ಹಾಲಾಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಲಾವಿದರು, ಬರಹಗಾರರಿಂದ ಸಮಾಜದ ಓರೆ ಕೋರೆಗಳನ್ನು ತಿದ್ದುಲು ಕಷ್ಟವಾಗುತ್ತಿರುವ ಕಾಲಘಟ್ಟದಲ್ಲಿ ಕಾರ್ಟೂನ್ ಮನಸ್ಸುಗಳನ್ನು ರೂಪಿಸುವ ಕೆಲಸ ಮಾಡುತ್ತಿದೆ. ಕಾರ್ಟೂನುಗಳ ಮೂಲಕ ಎಳೆಯರಲ್ಲಿ ವಾಸ್ತವತೆಯ ಪ್ರಜ್ಞೆ ಮೂಡಿಸುವ ಕೆಲಸ ನಡೆಯುತ್ತಿದೆ ಎಂದು ರಂಗಕರ್ಮಿ ವಸಂತ ಬನ್ನಾಡಿ ಅಭಿಪ್ರಾಯಪಟ್ಟಿದ್ದಾರೆ. ಕುಂದಾಪುರ ಕಾರ್ಟೂನ್ ಬಳಗ ಆಶ್ರಯದಲ್ಲಿ ಕುಂದಾಪುರದ ಕಲಾ ಮಂದಿರದಲ್ಲಿ ಭಾನುವಾರ ನಡೆದ ಕಾರ್ಟೂನ್ ಹಬ್ಬದ ಎರಡನೇ ದಿನ ಮಾಸ್ಟರ್ ಸ್ಟ್ರೋಕ್ ಉದ್ಘಾಟಿಸಿ ಮಾತನಾಡಿ, ಭಯೋತ್ದಾದನೆ, ಕೋಮು ಸಂಘರ್ಷ, ಜಾಗತೀಕರಣದ ಪ್ರಭಾವದಿಂದ ಸಮಾಜದ ಮೇಲಾಗುತ್ತಿರುವ ಪರಿಣಾಮವನ್ನು ಎದುರಿಸುವ ಕಾರ್ಯ ವ್ಯಂಗ್ಯಚಿತ್ರಕಾರಿಂದ ಆಗುತ್ತಿದೆ ಎಂದರು. ಸಾಹಿತ್ಯ ನಿಲ್ಲಿಸಿದ್ದ ವರ್ತಮಾನದ ಸಂವೇದನೆಗೆ ಸ್ಪಂದಿಸುವ ಕಾರ್ಯವನ್ನು ವ್ಯಂಗ್ಯಚಿತ್ರಕಾರರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸಾಹಿತ್ಯ ಹಾಗೂ ಸಿನೆಮಾ ಮಾಡಬೇಕಾದ್ದನ್ನು ಕಾರ್ಟೂನುಗಳ ಮಾಡುತ್ತಿದೆ ಎಂದವರು ಹೇಳಿದರು. ಕಾರ್ಯಕ್ರಮದಲ್ಲಿ ಖ್ಯಾತ ವ್ಯಂಗ್ಯಚಿತ್ರಗಾರ ಹರಣಿ (ಹರಿಶ್ಚಂದ್ರ ಶೆಟ್ಟ) ಅವರನ್ನು ಕಾರ್ಟೂನು ಕುಂದಾಪ್ರ ಬಳಗದಿಂದ ಸನ್ಮಾನಿಸಲಾಯಿತು. ವ್ಯಂಗ್ಯ ಚಿತ್ರ ಕಲಾವಿದರಾದ ಪಂಜು ಗಂಗೊಳ್ಳಿ, ದಿನೇಶ್ ಕುಕ್ಕುಜಡ್ಕ, ಜೇಮ್ಸ್ ವಾಜ್, ಜಯರಾಮ, ಕುಂದಾಪುರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯ ಬಿಜೆಪಿ ಸರಕಾರದ ಅವಧಿಯಲ್ಲಿ ಸಚಿವ ಸಂಪುಟ ಪುನಃರಚನೆಯ ವೇಳೆ ಸಚಿವ ಕೈತಪ್ಪಿದ್ದರಿಂದ ಬಿಜೆಪಿ ಪಕ್ಷ ತೊರೆದು ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದು ಬಂದಿದ್ದ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮರಳಿ ಮಾತೃ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಈ ಬಗ್ಗೆ ಹಲವು ದಿನಗಳಿಂದ ಹಬ್ಬಿದ್ದ ವದಂತಿಗಳಿಗೆ ತೆರೆ ಬಿದ್ದಿದ್ದು, ಸ್ವತಃ ಶಾಸಕ ಹಾಲಾಡಿ ಬಿಜೆಪಿ ಸೇರುವ ಬಗೆಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಹಿಂದುಳಿದ ವರ್ಗದವರ ಬೃಹತ್ ಏಕತಾ ಸಮಾವೇಶದಲ್ಲಿ ಭಾಗವಹಿಸಿದ್ದ ಶಾಸಕರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ತನಗೆ ಬಿಜೆಪಿ ಮಾತೃಪಕ್ಷ. ಈ ಹಿಂದೆ ಮೂರು ಬಾರಿ ಶಾಸಕನಾಗಿ ಬಿಜೆಪಿಯಿಂದ ಆಯ್ಕೆಯಾಗಿದ್ದೆ. ಕೆಲವು ಅಹಿತಕರ ಘಟನೆಯಿಂದ ಮನನೊಂದು ಪಕ್ಷ ತೊರೆಯಬೇಕಾಯಿತು. ಆದರೆ ಈಗ ಎಲ್ಲವೂ ಇತಿಹಾಸ. ಪುನಃ ಪಕ್ಷ ಸೇರ್ಪಡೆಯಾಗುವಂತೆ ಮುಖಂಡರು ಹೇಳಿದ್ದರಿಂದ ಸೇರ್ಪಡೆಗೊಳ್ಳುತ್ತಿದ್ದೇನೆ. ಕುಂದಾಪ್ರ ಡಾಟ್ ಕಾಂ. ನಾನು ಪಕ್ಷೇತರ ಶಾಸಕನಾಗಿರುವುದರಿಂದ ಪಕ್ಷ ಸೇರಲು ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಆದರೆ ಬಿಜೆಪಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ೨೦೧೬-೧೭ನೇ ಸಾಲಿನಲ್ಲಿ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ೧೪ರ ವಯೋಮಾನದ ಬಾಲಕಿಯರ ಎತ್ತರ ಜಿಗಿತ/ಹರ್ಡಲ್ಸ್ ೨೦೦ಮೀ ಓಟದ ಸ್ಪರ್ಧೆಗಳಲ್ಲಿ ಅಕ್ಷತಾ ಉತ್ತಮ ಸಾಧನೆಗೈದು ಬಾಗಲಕೋಟೆ ಜಿಲ್ಲೆಯಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗಿರುತ್ತಾಳೆ. ಕರಾಟೆ ಸ್ಪರ್ಧೆಯ ೨೯ ರಿಂದ ೩೫ ಕೆ.ಜಿ ವಿಭಾಗದಲ್ಲಿ ಸುಬ್ರಹ್ಮಣ್ಯ ಚಿನ್ನದ ಪದಕ ಪಡೆದು ಉಡುಪಿ ಜಿಲ್ಲೆಯಲ್ಲಿ ನಡೆಯುವ ರಾಜ್ಯಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆ ಆಗಿರುತ್ತಾನೆ. ಈ ಇಬ್ಬರು ಕ್ರೀಡಾಪಟುಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಸತ್ಯನಾರಾಯಣ ಜಿ ಹಾಗೂ ಮಂಜುನಾಥ ಶೆಟ್ಟಿ ತರಬೇತಿ ನೀಡಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ತಾಲೂಕು ಆಡಳಿತದ ಬಿಗುವಿನ ನಿರ್ಣಯದಿಂದಾಗಿ ಹತ್ತಾರು ವರ್ಷಗಳಿಂದ ಕುಂದಾಪುರದ ನೆಹರೂ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಕ್ಕೆ ಉಂಟಾಗಿದ್ದ ತಡೆ, ಯಕ್ಷಪ್ರಿಯರ ಸಂಘಟಿತ ಹೋರಾಟದ ಫಲವಾಗಿ ಕೊನೆಗೂ ತೆರವುಗೊಂಡಿದೆ. ಇನ್ನುಮುಂದೆ ನಿರ್ವಿಘ್ನವಾಗಿ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಕಳೆದ ಕೆಲವು ತಿಂಗಳಿಂದ ಯಕ್ಷಾಭಿಮಾನಿಗಳಲ್ಲಿ ಮುಡುಗಟ್ಟಿದ ಗೊಂದಲ, ಆತಂಕ ದೂರವಾದಂತಾಗಿದೆ. ಯಕ್ಷಗಾನದ ಪ್ರದರ್ಶನದ ಹಿನ್ನೆಲೆ, ಮಹತ್ವ, ಪ್ರದರ್ಶನಕ್ಕೆ ತಡೆಯುಂಟಾಗಿದ್ದರಿಂದ ಆಗುತ್ತಿರುವ ತೊಂದರೆಗಳ ಬಗೆಗೆ ನಿಮ್ಮ ಕುಂದಾಪ್ರ ಡಾಟ್ ಕಾಂ ಅಂತರ್ಜಾಲ ಸುದ್ದಿತಾಣ ಈ ಬಗ್ಗೆ ಸರಣಿ ವರದಿಯನ್ನು ಪ್ರಕಟಿಸಿ ಸಮಸ್ಯೆಯ ಗಂಭೀರತೆಯನ್ನು ಸಂಬಂಧಿಸಿದವರ ಗಮನಕ್ಕೆ ತರುವ ಪ್ರಯತ್ನ ಮಾಡಿ ಯಕ್ಷಪ್ರೀಯರ ಬೆಂಬಲಕ್ಕೆ ನಿಂತಿತ್ತು. ನೆಹರೂ ಮೈದಾನದ ಪಕ್ಕದ ವಿದ್ಯಾರ್ಥಿಗಳ ಹಾಸ್ಟೆಲ್ಗೆ ತೊಂದರೆಯಾಗಬಹುದು ಹಾಗೂ ಸ್ವಚ್ಛತೆಯ ಕಾರಣವನ್ನೊಡ್ಡಿ ಯಕ್ಷಗಾನ ಪ್ರದರ್ಶನಕ್ಕೆ ತಡೆಯೊಡ್ಡಲಾಗಿತ್ತು. ಆದರೆ ಶನಿವಾರ ಅಥವಾ ಭಾನುವಾರ ಮಾತ್ರವೇ ಯಕ್ಷಗಾನ ಪ್ರದರ್ಶನ ನಡೆಯಲಿರುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ತೊಂದರೆಯಾಗದು, ಸ್ವಚ್ಛತೆಯ ಜವಾಬ್ದಾರಿಯನ್ನು ಸಂಘಟಕರಿಗೆ ವಹಿಸಿದರೆ ತೊಂದರೆಯಾಗದು. ಹತ್ತಾರು ವರ್ಷಗಳಿಂದ ನಡೆದು ಬರುತ್ತಿದ್ದ ಯಕ್ಷಗಾನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆಸಕ್ತಿ ಇದ್ದರೆ ಆಯಾ ಕ್ಷೇತ್ರದಲ್ಲಿ ಪರಿಣತರಾಗಿಲು ಸಾಧ್ಯವಿದೆ. ಕೈಗೆತ್ತಿಕೊಳ್ಳುವ ಕಾರ್ಯದ ಬಗೆಗೆ ನಿರಂತರವಾದ ಪರಿಶ್ರಮ ಗೆಲುವು ಸುಲಭವಾಗಲಿದೆ ಎಂದು ಕುಂದಾಪುರ ವೆಂಕಟರಮಣ ಶಾಲೆಯ ಪ್ರಾಂಶುಪಾಲೆ ರೂಪಾ ಶೆಣೈ ಹೇಳಿದರು. ಕುಂದಾಪುರದ ಕಲಾಮಂದಿರದಲ್ಲಿ ಜರುಗುತ್ತಿರುವ ನಾಲ್ಕು ದಿನಗಳ ಕಾರ್ಟೂನು ಹಬ್ಬದಲ್ಲಿ ’ಮುಕ್ತ ಕಾರ್ಟೂನು ಕ್ಲಾಸು’ ಕಾರ್ಟೂನು ಕಾರ್ಯಾಗಾರ ಹಾಗೂ ಕಾರ್ಟೂನು ಸ್ವರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು. ಚಿತ್ರಗಳು ಪ್ರಭಾವಶಾಲಿ ಮಾಧ್ಯಮವಾಗಿದ್ದು, ಮಕ್ಕಳಿಗೆ ಬಹುಬೇಗನೆ ಅಥವಾಗುವಂತೆ ಮಾಡುತ್ತದೆ. ಚಿತ್ರ ಬಿಡಿಸುವುದರಿಂದ ಏಕಾಗ್ರತೆ, ಕ್ರೀಯಾಶೀಲತೆ ಹೆಚ್ಚುವುದಲ್ಲದೇ ಭವಿಷ್ಯದಲ್ಲೊಂದು ಸ್ವಷ್ಟ ಗುರಿ ಹೊಂದಲು ಸಾಧ್ಯವಾಗುತ್ತದೆ ಎಂದರು. ಹಿರಿಯ ಪತ್ರಕರ್ತ ಮಂಜುನಾಥ ಚಾಂದ್ ತ್ರಾಸಿ ಮಾತನಾಡಿ ಕಾರ್ಟೂನು ರಚಿಸಲು ರೇಖೆಗಳಷ್ಟೇ ಸಾಲದು. ಉತ್ತಮ ಭಾಷೆ, ಬುದ್ಧಿ ಇರಬೇಕು. ಕಾರ್ಟೂನು ಒಂದು ಪತ್ರಿಕೆಯ ಸಂಪಾದಕೀಯದಷ್ಟೇ ಪ್ರಭಾವಶಾಲಿಯಾದ ಮಾಧ್ಯಮವಾಗಿದೆ ಎಂದರು. ಕಾರ್ಯಕ್ರಮದಲ್ಲಿ ರೋಟರಿ ಮಾಜಿ ಅಸಿಸ್ಟಂಟ್ ಗವರ್ನ್ರ್ ಗಣೇಶ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ ಸರಕಾರಿ ಜ್ಯೂನಿಯರ್ ಕಾಲೇಜು ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಷಿ ಉಪಸ್ಥಿತರಿದ್ದರು. ವಿಜಯಕರ್ನಾಟಕ ಪತ್ರಿಕೆಯ…
ತೀಕ್ಷ್ಣ ಗರೆಯ ಕಾರ್ಟೂನು ಪ್ರಬಲ ಅಭಿವ್ಯಕ್ತಿ ಮಾಧ್ಯಮ: ಎಸ್ಪಿ ಅಣ್ಣಾಮಲೈ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯಾವುದೇ ವಿದ್ಯಮಾನವನ್ನೂ ಸೂಕ್ಷ್ಮವಾಗಿ ಅವಲೋಕಿಸಿ ತೀಕ್ಷ್ಣ ಗೆರೆಗಳ ಮೂಲಕ ಚಿತ್ರಿಸುವ ಬುದ್ಧಿಮತ್ತೆ, ಪ್ರತಿಭೆ ಹಾಗೂ ಸಾಮರ್ಥ್ಯ ವ್ಯಂಗ್ಯಚಿತ್ರಕಾರರಿಗಿದೆ. ಪುಟಗಳಲ್ಲಿ ಹೇಳಬೇಕಾದ್ದನ್ನು ಚಿಕ್ಕ ಕಾರ್ಟೂನು ತಿಳಿಸುತ್ತದೆ. ಹಾಗಾಗಿಯೇ ಇಂದಿಗೂ ಕಾರ್ಟೂನು ಅಭಿವ್ಯಕ್ತಿಯ ಪ್ರಬಲ ಮಾಧ್ಯಮವಾಗಿ ಉಳಿದುಕೊಂಡಿದೆ ಎಂದು ಚಿಕ್ಕಮಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಹೇಳಿದರು ಕುಂದಾಪುರ ಕಲಾಮಂದಿರದಲ್ಲಿ ಕಾರ್ಟೂನು ಕುಂದಾಪ್ರ ಸಾರಥ್ಯದಲ್ಲಿ ವಿಭಿನ್ನ ಐಡಿಯಾಸ್, ಟಿಎನ್ಎಸ್ ’ಕಾರ್ಟೂನು ಹಬ್ಬ’ ಕಾರ್ಯಕ್ರಮಕ್ಕೆ ’ಥಿಂಕ್, ಲಾಫ್ ಎಂಜಾಯ್’ ಎಂಬ ಪಾಸ್ವರ್ಡ್ ಬರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು. ನಮ್ಮ ಒಂದು ಕ್ಷಣದ ನಗುವಿನ ಹಿಂದೆ ವ್ಯಂಗ್ಯಚಿತ್ರಕಾರರ ಹಲವು ಗಂಟೆಗಳ ಆಲೋಚನೆ ಹಾಗೂ ಶ್ರಮವಿದೆ. ಎಲ್ಲವನ್ನೂ ಭಿನ್ನವಾಗಿ ನೋಡುವ ದೃಷ್ಟಿಕೋನವೇ ಅವರಲ್ಲಿನ ಭಿನ್ನ ಆಲೋಚನೆಗಳಿಗೆ ಕಾರಣವಾಗುತ್ತದೆ ಎಂದರು. ಭಾರತರವು ಹಲವು ವೈರುಧ್ಯಗಳ ದೇಶ. ವ್ಯಂಗ್ಯಚಿತ್ರಕಾರ ಎಲ್ಲವನ್ನೂ ಮೀರಿ, ಹಲವು ಗಡಿಗಳನ್ನು ದಾಟಿ ಬರುತ್ತಾನೆ. ಇದು ಸಹಜವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಗಾಣಿಗ ಸೇವಾ ಸಂಘ ಇವರ ನೇತೃತ್ವದಲ್ಲಿ ಗಾಣಿಗ ಸೇವಾ ಸಂಘ ಬೈಂದೂರು ಘಟಕ, ಉಪ್ಪುಂದ ಘಟಕ, ಗಂಗೊಳ್ಳಿ ಘಟಕ, ಹೆಮ್ಮಾಡಿ ಘಟಕ, ಬಸ್ರೂರು ಘಟಕ, ಗಾಣಿಗ ಯುವ ಸಂಘಟನೆ ಕೋಟೇಶ್ವರ, ಗಾಣಿಗ ಯುವ ಸಂಘಟನೆ ತೆಕ್ಕಟ್ಟೆ, ಗಾಣಿಗ ಯುವ ಸಂಘಟನೆ ಕುಂದಾಪುರ, ಗಾಣಿಗ ಯುವ ಸಂಘಟನೆ ಆಜ್ರಿ-ನೇರಳಕಟ್ಟೆ ಇವರ ಸಹಕಾರದೊಂದಿಗೆ ಕುಂದಾಪುರ ನವೀಕೃತ ಶ್ರೀ ವ್ಯಾಸರಾಜ ಮಠದಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ವಿಜೃಂಬಣೆಯಿಂದ ಜರುಗಿತು. ವೇದಮೂರ್ತಿ ವಿಜಯ ಪೇಜತ್ತಾಯ ಧಾರ್ಮಿಕ ವಿಧಿವಿದಾನ ನೆರವೇರಿಸಿದರು. ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಕಾರ್ಯದರ್ಶಿ ಜಿ.ಶಿವಾನಂದ ರಾವ್, ಕೋಶಾಧಿಕಾರಿ ಶಂಕರನಾರಾಯಣ ಗಾಣಿಗ, ಹೋಟಲ್ ಉದ್ಯಮಿ ಚಂದ್ರಯ್ಯ ಬೆಂಗಳೂರು, ಮುಂಬೈ ಉದ್ಯಮಿ ವಿಜಯೇಂದ್ರ ಹಾಗೂ ಸಮಾಜ ಭಾಂದವರೂ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಾಲಂಬೇರು ಚಂದನ ಸೋಮಲಿಂಗೇಶ್ವರ ಭಜನಾ ಮಂದಿರ ಇಲ್ಲಿನ ತಂಡದವರಿಂದ ಕುಣಿತ ಭಜನೆ ಮತ್ತು ಶ್ರೀನಿವಾಸ ಚೇರ್ಕಾಡಿ ಇವರಿದಂದ ಹರಿಸಂರ್ಕೀತನೆ ಕಾರ್ಯಕ್ರಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಯುವ ಸಾಹಿತಿ, ಪತ್ರಕರ್ತ ಸಂದೀಪ್ ಶೆಟ್ಟಿ ಹೆಗ್ಗದ್ದೆ ಅವರ ಚೊಚ್ಚಲ ಕುಂದಾಪ್ರ ಕನ್ನಡದ ಹಾಡುಗಳ ‘ಗಂಡ್ ಹಡಿ ಗಂಡ್’ ಆಲ್ಬಂ ಸಾಂಗ್ ಬೆಂಗಳೂರಿನ ವಿರಶೈವ ಸಭಾಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಂಡಿದೆ. ಗಂಡ್ ಹಡಿ ಗಂಡ್ ಆಲ್ಬಂನಲ್ಲಿರುವು ಎರಡೂ ಹಾಡುಗಳೂ ನವಿರಾದ ಸಾಹಿತ್ಯ, ಅದ್ದೂರಿ ಸಂಗೀತ ಸಂಯೋಜನೆಯೊಂದಿಗೆ ಮೂಡಿಬಂದಿದ್ದು ಕುಂದನಾಡಿದರ ಮನಗೆಲ್ಲಲಿದೆ. ಅಲ್ವಿನ್ ಬ್ರೂನೊ ಹಾಗೂ ವರ್ಣ ಬ್ರದರ್ಸ್ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು, ಕುಂದಗನ್ನಡದ ಸುಂದರ ಹಾಡಿಗೆ ಮನು ಹಂದಾಡಿ ಅವರೂ ಧ್ವನಿ ಸೇರಿಸಿದ್ದಾರೆ. ಹಾಡು ಕೇಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಅಥವಾ ಅಲ್ಲಿಯೇ ಪ್ಲೇ ಮಾಡಿ https://soundcloud.com/kundapra_dot_com/gand-hadi-gand-title https://soundcloud.com/kundapra_dot_com/urmanigand-na
