Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ, ಸಾಹಿತಿಗಳಿಗೆ ಮಾತ್ರ ಸೀಮಿತವಾಗಿರದೇ ನಾಡು ನುಡಿ ಸಂಸ್ಕೃತಿ ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ತೊಡಗಿಸಿಕೊಳ್ಳುವ ಮೂಲಕ ಕನ್ನಡ ಮನಸ್ಸುಗಳನ್ನು ಅರಳಿಸುವ ಉದ್ದೇಶವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು. ಅವರು ಕನ್ನಡ ಸಾಹಿತ್ಯ ಪರಿಷತ್ ವಂಡ್ಸೆ ಹೋಬಳಿ ಘಟಕ, ಗೀತಾನಂದ ಫೌಂಡೇಶನ್ ಮಣೂರು ಪಡುಕೆರೆ ಆಶ್ರಯದಲ್ಲಿ ಕಸಾಪ ತಿಂಗಳ ಸಡಗರದ ಅಂಗವಾಗಿ ಚಿತ್ತೂರು ಚಿತ್ರಕೂಟ ಆಯುರ್ವೇದ ಆರೋಗ್ಯಧಾಮದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಪ್ರಗತಿಪರ ಸಾವಯವ ಕೃಷಿಕ ಮಹಾಬಲ ಬಾಯರಿ ಕಳಿ ದಂಪತಿಗಳನ್ನು ಸನ್ಮಾನಿಸಲಾಯಿತು. ಯುವ ಕವಿಗಳಿಂದ ಕವನ ವಾಚನ ನಡೆಯಿತು. ಕುಂದಾಪುರ ತಾಪಂ ಸದಸ್ಯ ಉದಯ ಜಿ. ಪೂಜಾರಿ, ಕಸಾಪ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ನಾರಾಯಣ ಮಡಿ, ತಾಲೂಕು ಗೌರವ ಕಾರ್ಯದರ್ಶಿ ಡಾ. ಕಿಶೋರ್‌ಕುಮಾರ್ ಶೆಟ್ಟಿ, ಚಿತ್ರಕೂಟ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಶ್ರೀ ಮಾತಾ ಆಸ್ಪತ್ರಯಲ್ಲಿ ಜನರಲ್ ಮೆಡಿಸಿನ್ ವಿಭಾಗವನ್ನು  ಕೋಟದ ಉದ್ಯಮಿ ಆನಂದ ಸಿ. ಕುಂದರ್ ಉದ್ಘಾಟಿಸಿದರು. ಬಳಿಕ ಮಾತನಾಡಿ ಸತತ 16 ವರ್ಷಗಳಿಂದ ವೈದ್ಯಕೀಯ ಸೇವೆಯನ್ನು ನೀಡುತ್ತಾ ಜನ ಸಾಮಾನ್ಯರ ವಿಶ್ವಾಸಸ ಪ್ರಶಂಸೆಗೆ ಪಾತ್ರರಾದ ಡಾ. ನಾಗೇಶ್ ಅವರು ಸ್ನಾತಕೋತ್ತರ ಪದವಿಯನ್ನು ಮುಗಿಸಿ ಕುಂದಾಪುರದ ಜನರ ಸೇವೆಗೆ ನಿರತರಾಗಿರುವುದು ಸಂತಸದ ಸಂಗತಿ ಎಂದು ಹೇಳಿದರು. ಹೃದ್ರೋಗ ಮತ್ತು ಮಧುಮೇಹ ತಜ್ಞ ಡಾ. ನಾಗೇಶ್ ಅವರು ಮಾತನಾಡಿ ಹುಟ್ಟೂರಿನಲ್ಲಿ ಸೇವೆ ಸಲ್ಲಿಸಬೇಕೆಂಬ ಇಚ್ಚೆಯಿಂದ ಕುಂದಾಪುರದ ಶ್ರೀ ಮಾತಾ ಆಸ್ಪತ್ರೆಯಲ್ಲಿ ಸೇವೆಯನ್ನು ಆರಂಭಿಸಿದ್ದು, ಉತ್ತಮ ಸೇವೆಯನ್ನು ನೀಡುವ ಉದ್ದೇಶದಿಂದ ಜನರಲ್ ಮೆಡಿಸಿನ್ ವಿಭಾಗವನ್ನು ತೆರೆಯಲಾಗಿದೆ ಎಂದರು. ಈ ಸಂದರ್ಭದಲ್ಲಿ ಡಾ.ಉಮೇಶ್ ನಾಯಕ್, ಡಾ. ಸನ್ಮಾನ ಶೆಟ್ಟಿ, ಡಾ. ಸುಮಂಗಲ ನಾಯಕ್, ಡಾ. ಸುಷ್ಮಾ, ಡಾ. ಪ್ರತಾಪ, ರಾಮ ಪುತ್ರನ್, ರತ್ನಾಕರ ನಾಯಕ್, ಸುಭಾಶ್ ಶೇಟ್, ರಾಮಚಂದ್ರ ಶೇಟ್, ಗಣೇಶ ಕಾಮತ್, ರತ್ನಾಕರ ಶೇಟ್, ಸುರೇಶ್ ಸಾಲಿಯಾನ್ ಇನ್ನಿತರರು ಉಪಸ್ಥಿತರಿದ್ದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ಘಟಕ ಏರ್ಪಡಿಸಿದ್ದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ವಾರ್ಷಿಕ ಸಂಚಿಕೆ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸಂಚಿಕೆ ‘ದೃಷ್ಟಿ’ ಅತ್ಯುತ್ತಮ ವಾರ್ಷಿಕಾಂಕ ಗೌರವವನ್ನು ಪಡೆದುಕೊಂಡಿದೆ.ನವೆಂಬರ್ ೧೯ ರಂದು ಕುಂದಾಪುರದ ಭಂಡಾರ್‌ಕರ್ಸ್ ಕಾಲೇಜಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪುರಸ್ಕಾರ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ವಿಶ್ವಕೋಶ ಎಂದೇ ಖ್ಯಾತರಾದ ನಿವೃತ್ತ ಪೋಸ್ಟ್ ಮಾಸ್ಟರ್ ಕೆ. ರಾಮಚಂದ್ರ ಕೊತ್ವಾಲ್ ದಂಪತಿಗಳನ್ನು ಅವರ ಸ್ವಗೃಹದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳ ಮತ್ತು ರೋಟರಿ ಸದಸ್ಯರು ಶಾಲು ಹೊದಿಸಿ, ಸನ್ಮಾನ ಪತ್ರ ನೀಡಿ ಗೌರವಿಸಿದರು. ಕುಂದಾಪುರದ ಧಾರ್ಮಿಕ, ಸಾಹಿತ್ಯಿಕ, ಐತಿಹಾಸಿಕ, ವ್ಯವಹಾರಿಕ ಇತರ ಎಲ್ಲಾ ಚಟುವಟಿಕೆಗಳನ್ನು ಹತ್ತಿರದಿಂದ ಅಧ್ಯಯನ ಮಾಡಿ ತಮ್ಮ ಅನುಭವಗಳನ್ನು ಲೇಖನಗಳ ಮೂಲಕ ಸಮಾಜಕ್ಕೆ ಧಾರೆ ಎರೆದ ಕೆ. ಆರ್. ಕೊತ್ವಾಲ್‌ರು ಇಂದಿನ ರಾಜ್ಯೋತ್ಸವ ಗೌರವಕ್ಕೆ ಅರ್ಹರು ಎಂದು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅದ್ಯಕ್ಷರಾದ ಕೆ. ನರಸಿಂಹ ಹೊಳ್ಳ ಅವರು ಹೇಳಿದರು. ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಪೂರ್ವಾಧ್ಯಕ್ಷರಾದ ಕೆ. ದಿನಕರ ಪಟೇಲ್, ಸದಸ್ಯರಾದ ಉಲ್ಲಾಸ್ ಕ್ರಾಸ್ತಾ, ಸೀತಾರಾಮ, ಸದಾನಂದ ಉಡುಪ, ಭಾಸ್ಕರ ಬಾಣ, ಸಿ.ಹೆಚ್. ಗಣೇಶ, ಮಂಜುನಾಥ ಕೆ.ಎಸ್., ಅರುಣಚಂದ್ರ ಕೊತ್ವಾಲ್, ಅರವಿಂದ ಕೊತ್ವಾಲ್ ಇನ್ನಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರೋಟರಿ ಸಮುದಾಯ ಭವನದಲ್ಲಿ ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಜರುಗಿತು. ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಕೆ. ಗೋಪಾಲ ಪೂಜಾರಿ, ದೇಶದ ಯುವಶಕ್ತಿಗೆ ತಮ್ಮದೇ ಆದ ಗುರುತರ ಜವಾಬ್ದಾರಿ ಇದೆ. ಈ ನಿಟ್ಟಿನಲ್ಲಿ ಯುವ ಕಾಂಗ್ರೆಸ್‌ನ ಸದಸ್ಯತ್ವವನ್ನು ಇಂದೇ ನೋಂದಣಿ ಮಾಡಿಕೊಂಡು ರಾಜ್ಯ ಹಾಗೂ ದೇಶದಲ್ಲಿ ಪಕ್ಷವನ್ನು ಬಲಿಷ್ಟಗೊಳಿಸುವುದರ ಮೂಲಕ ಅಧಿಕಾರಕ್ಕೆ ತರುವಲ್ಲಿ ಸತತ ಪ್ರಯತ್ನ ನಡೆಸಬೇಕು ಎಂದರು. ಕಾಂಗ್ರೆಸ್ ತನ್ನ ವಿರೋಧಿಗಳಿಗೆ ಸಂಘಟನಾತ್ಮಕ ಹೋರಾಟದ ಮೂಲಕ ಈಗ ಉತ್ತರ ನೀಡಬೇಕಾಗಿದೆ. ಆ ನೆಲೆಯಲ್ಲಿ ಪಕ್ಷದ ಹಿರಿಯರು ಯುವ ನೊಂದಣಿ ಅಭಿಯನದಡಿ ಪ್ರತಿಯೊಂದು ಬೂತ್ ಮಟ್ಟದಲ್ಲಿ ಭೇಟಿ ನೀಡಿ ಆ ಭಾಗದ ಹೆಚ್ಚು ಯುವಕರನ್ನು ಪಕ್ಷದ ಸದಸ್ಯರಾಗುವಲ್ಲಿ ಪ್ರಯತ್ನಿಸಬೇಕು. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ ಮೂರು ವರ್ಷಗಳುದ್ದಕ್ಕೆ ಮಾಡಿದ ಉತ್ತಮ ಕೆಲಸ, ಮೂಲ ಸೌಲಭ್ಯ ಹೆಚ್ಚಿಸಿ ಹಲವು ಜನಪರ ಯೋಜನೆಗಳನ್ನು ಕಾರ್ಯಗತಗೊಳಿಸಿ ಸಾಮಾಜಿಕ ನ್ಯಾಯಕ್ಕೆ ಒತ್ತುನೀಡಿದ ಕುರಿತಾಗಿ ಯುವಜನತೆಗೆ ಮನವರಿಕೆ ಮಾಡಬೇಕು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಂಡಾರ್‌ಕಾರ್ಸ್ ಕಾಲೇಜಿನ ಇಂಗ್ಲೀಷ್ ವಿಭಾಗ ಮುಖ್ಯಸ್ಥೆ, ಲೇಖಕಿ ಪಾರ್ವತಿ ಜಿ ಐತಾಳ್ ಅವರ ‘ಒಡಲ ಬೆಂಕಿ’ ಕಾದಂಬರಿಗೆ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್‌ನ ಸಾಹಿತ್ಯ ಪ್ರಶಸ್ತಿ ದೊರೆತಿದೆ. ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾ ಗ್ರಾಮದ ಪುಲಕೇಶಿ ರಂಗಮಂದಿರದಲ್ಲಿ ಡಿ.೮ ರಿಂದ ೧೨ರ ತನಕ ೫ ದಿನಗಳ ಕಾಲ ನಡೆಯಲಿರುವ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ೮ನೇ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಕನ್ನಡ ಬರಹಗಾರ್ತಿಯರ ಪೈಕಿ ಪ್ರಮುಖರೆನಿಸಿಕೊಂಡಿರುವ ಪಾರ್ವತಿ ಜಿ. ಐತಾಳ ಅವರು ಈವರೆಗೆ ಕಥೆ, ಕವಿತೆ, ಕಾದಂಬರಿಗಳನ್ನು ಪ್ರಕಟಿಸಿರಲ್ಲದೇ, ಮಲಯಾಳಂ ಭಾಷೆಯ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ೨ ಎಕ್ರೆ ಜಾಗ ಲಭ್ಯವಿದ್ದು, ಈ ಜಾಗದಲ್ಲಿರುವ ದೊಡ್ಡ ಗಾತ್ರದ ಮರಗಳನ್ನು ಅರಣ್ಯ ಇಲಾಖೆಯವರಿಂದ ಅಭಿಪ್ರಾಯ ಪಡೆದು ನಂತರ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಕುಂದಾಪುರ ತಾಲೂಕು ಪಂಚಾಯತ್ ಪ್ರಗತಿ ಪರಿಶೀಲನಾ ಸಭೆಯ ಅನುಪಾಲನಾ ವರದಿ ಗುರುತಿಸಿದ್ದನ್ನು ನಿವೇಶನ ರಹಿತರಿಗೆ ಭೂಮಿ ಹಕ್ಕು ಪತ್ರ ಮಂಜೂರು ಮಡಲು ಸರಕಾರ ಕ್ರಮವಹಿಸಬೇಕು ಎಂದು ಸಿಐಟಿಯು ಕುಂದಾಪುರ ತಾಲೂಕು ಅಧ್ಯಕ್ಷ ಎಚ್. ನರಸಿಂಹ ಹೇಳಿದರು. ಅವರು ತಲ್ಲೂರು, ಉಪ್ಪಿನಕುದ್ರು, ಗ್ರಾಮಗಳ ಮನೆ, ನಿವೇಶನ ರಹಿತರ- ಬೃಹತ್ ಸಮಾವೆಶ ಉದ್ಘಾಟಿಸಿ ಮಾತನಾಡಿದರು. ಕೃಷಿ ಕೂಲಿಕಾರರ ಸಂಘದ ಕುಂದಾಪುರ ತಾಲೂಕು ಕಾರ್ಯದರ್ಶಿ ವೆಂಕಟೇಶ ಕೋಣಿ ಮಾತನಾಡುತ್ತಾ ತಲ್ಲೂರು ಗ್ರಾಮದಲ್ಲಿ – ಕಂದಾಯ ಇಲಾಖೆ- ಸರಕಾರಿ ಜಾಗ ೬.೦೦ ಎಕ್ರೆ ಅತಿಕ್ರಮಣ ಸ್ಥಳವನ್ನು ಸ್ಥಳೀಯ ಗ್ರಾಮ ಪಂಚಾಯತ್‌ಗೆ ಹಸ್ತಾಂತರ ಮಾಡಲಾಗಿದ್ದು, ಕೂಡಲೇ ಹಕ್ಕು ಪತ್ರ ಮಂಜೂರು ಮಾಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು. ತಲ್ಲೂರು ಗ್ರಾಮದ ಸ.ನಂ. ೧೬೮…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲಾಡಳಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಮಾರಣಕಟ್ಟೆ ಕೃಷ್ಣಮೂರ್ತಿಮಂಜರಿಗೆ ಡಿ ಪ್ರಶಸ್ತಿಯ ಮೌಲ್ಯ, ಘನತೆಯನ್ನು ಹೆಚ್ಚಿಸುವ ಕೆಲಸ ಮಾಡಿದೆ. ಸಾಮಾನ್ಯವಾಗಿ ನಮ್ಮ ವ್ಯವಸ್ಥೆಗಳಲ್ಲಿ ಪ್ರಶಸ್ತಿಯನ್ನು ಪಡೆಯಲು ಅರ್ಜಿ ಹಾಕಬೇಕಾಗಿದೆ. ಆದರೆ ಮಂಜರು ಅರ್ಜಿ ಸಲ್ಲಿಸದಿದ್ದರೂ ಅವರ ಪರವಾಗಿ ಚಿತ್ತೂರಿನ ಸ್ಥಳಿಯರೇ ಅರ್ಜಿ ಸಲ್ಲಿಸಿದ್ದನ್ನು ಜಿಲ್ಲಾಡಳಿತ ಗುರುತಿಸಿ ಗೌರವಿಸಿರುವುದು ಹೆಮ್ಮೆಯ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ನುಡಿದರು. ಅವರು ಚಿತ್ತೂರಿನ ಬ್ರಹ್ಮಾಧ್ಯ ಕಲ್ಯಾಣ ಮಂಟಪದ ವಿಪ್ಲವ ಓಪನ್ ಗಾರ್ಡನ್‌ನಲ್ಲಿ ನಡೆದ ’ಸಾರ್ವಜಕ ಅಭಿನಂದನಾ ಸಮಾರಂಭದಲ್ಲಿ ಕೊಡುಗೈ ದಾ ಕೃಷ್ಣಮೂರ್ತಿ ಮಂಜರವರನ್ನು ಸನ್ಮಾಸಿ ಮಾತನಾಡುತ್ತಿದ್ದರು. ಮಂಜರು ಎಲ್ಲಾ ಕ್ಷೇತ್ರಗಳಿಗೂ ಪ್ರತಿಫಲಾಪೇಕ್ಷೆ ಇಲ್ಲದೆ ತನ್ನ ದುಡಿಮೆಯ ಒಂದು ಭಾಗವನ್ನು ಕಷ್ಟದಲ್ಲಿದ್ದವರಿಗೆ ದಾನ ಮಾಡುತ್ತಾ ಬಂದು ಆರ್ಥಿಕವಾಗಿ ಬಲಾಡ್ಯರಿಗೆ ಮಾದರಿಯಾಗಿದ್ದಾರೆ. ಮಂಜರ ಸೇವೆ ಹಾಗೂ ಕೊಡುಗೆ ಗಮಸಿದರೆ ಅವರಿಗೆ ರಾಜ್ಯ ಪ್ರಶಸ್ತಿ ಬರಬೇಕಾಗಿದೆ ಆದರೆ ಜಿಲ್ಲಾ ಪ್ರಶಸ್ತಿ ಬಂದಿದೆ ಎಂದು ನುಡಿದರು. ಅಧ್ಯಕ್ಷತೆ ವಹಿಸಿದ್ದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎಲ್ಲಾ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎನ್ನುವ ಮೂಲ ಉದ್ದೇಶದೊಂದಿಗೆ ಸ್ಥಾಪಿತವಾದ ಸಂಸ್ಥೆ ಗುರುಕುಲ ವಿದ್ಯಾಸಂಸ್ಥೆಗೆ ಈ ಭಾರಿ ಐಎಸ್‌ಒ (INTERNATIONAL ORGANISATION FOR STANDARDISATON ) :9001 :2015 ಇಂದ ಪ್ರಮಾಣೀಕೃತಗೊಂಡಿದೆ. ಅಂತರಾಷ್ಟ್ರೀಯ ಗುಣಮಟ್ಟದ ಪರಿಶೀಲನಾಸಂಸ್ಥೆ ತಂಡವಾದ ಡಿ.ಯು.ವಿ ಸರ್ಟೀಫಿಕೇಶನ್ ಪ್ರೈ. ಲಿಮಿಟೆಡ್‌ನ ಪ್ರಮಾಣೀಕರಣ ಪದ್ಧತಿಯಾದ ಜೆ.ಎ.ಝೆಡ್- ಎ.ಎನ್. ಝೆಡ್ ನ ಮೂಲಕ ಗುರುಕುಲ ಪಬ್ಲಿಕ್ ಶಾಲೆಯ ಮೊಂಟೆಸರಿಯಿಂದ ಪ್ರೌಢಶಾಲೆಯವರೆಗಿನ ಗುಣಮಟ್ಟದ ಶಿಕ್ಷಣ ಮತ್ತು ನಿರ್ವಹಣೆಯ ಬಗ್ಗೆ ಮೌಲ್ಯ ಮಾಪನ ಮಾಡಿ ಗುಣಮಟ್ಟ ಪರಿಶೀಲನ ಪತ್ರ ನೀಡಿದೆ. ಈ ಪರಿಶೀಲನ ಪತ್ರವು ವಿದ್ಯಾಸಂಸ್ಥೆಯ ಗುಣಮಟ್ಟ ಮತ್ತು ಅದರ ಉತ್ತಮ ನಿರ್ವಹಣೆಯ ಬಗ್ಗೆ ಇರುವ ಕೈಗನ್ನಡಿಯಾಗಿದೆ. ಸತತ ಹತ್ತು ವರ್ಷಗಳಿಂದ ಕುಂದಾಪುರ ಸುತ್ತ ಮುತ್ತಲಿನ ಹಾಗೂ ರಾಜ್ಯದ ನಾನಾ ಕಡೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಸದಾ ಹಚ್ಚ ಹಸುರಿನಿಂದ ಕಂಗೊಳಿಸುವ ಶಾಲಾ ಆವರಣ, ಸುಸಜ್ಜಿತ ಕಟ್ಟಡ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕೇರಳದ ಕ್ಯಾಲಿಕಟ್‌ನ ಪಂತೀರನ್‌ಕಾವು ಗಣೇಶ ಸಾಧನ ಕೇಂದ್ರದ ಗುರುಗಳಾದ ಶ್ರೀ ಶ್ರೀ ಯಜ್ಞಾಚಾರ್ಯ ಇವರ ಮಾರ್ಗದರ್ಶನದಲ್ಲಿ ಲೋಕಕಲ್ಯಾರ್ಥವಾಗಿ ನ.೩೦ರಿಂದ ಪ್ರಾರಂಭವಾಗುವ ಶ್ರೀ ಮಂಗಲ ಸಹಸ್ರಚಂಡಿ ಮಹಾಯಾಗದಕ್ಕೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವರ ಸನ್ನಿಧಾನದಿಂದ ವಿಶೇಷ ರಥದಲ್ಲಿ ದೀಪಾಗ್ನಿ ಕೊಂಡೊಯ್ಯಲಾಯಿತು. ಗುರುವಾರ ಬೆಳಿಗ್ಗೆ ಗೋಕರ್ಣ ಕ್ಷೇತ್ರದಿಂದ ತಿಡಂಬೊ (ಪೂಜೆಗೆ ಇಡುವ ಮೂರ್ತಿ) ದೇವರನ್ನು ಹೊತ್ತು ಕೊಲ್ಲೂರಿಗೆ ಸಾಗಿಬಂದ ವಿಶೇಷ ರಥವು ಯಾಗದ ಆರಂಭಕ್ಕೆ ಬೇಕಾದ ದೀಪಾಗ್ನಿಯನ್ನು ದೇವಿಯ ಸನ್ನಿಧಾನದಿಂದ ಪಡೆದು ನಂತರ ಶ್ರೀಕ್ಷೇತ್ರ ಕಟೀಲಿಗೆ ತೆರಳಿತು. ಅಲ್ಲಿಂದ ದೇವಿಯ ಪವಿತ್ರ ಗ್ರಂಥವನ್ನು ಪಡೆದು ನ.೦೬ಕ್ಕೆ ಕಲ್ಲಿಕೋಟೆ ತಲುಪಲಿದೆ. ನ.೧೮ರಿಂದ ಹೊರಡಲಿರುವ ಇನ್ನೊಂದು ಯಾತ್ರೆಯಲ್ಲಿ ಕನ್ಯಾಕುಮಾರಿಯಿಂದ ಶ್ರೀಚಂಡಿಕಾ ಮೂರ್ತಿಯನ್ನು ವಿಶೇಷ ರಥದಲ್ಲಿ ಕೇರಳದ ಎಲ್ಲಾ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿ ನ.೨೬ರಂದು ಯಾಗಸ್ಥಳಕ್ಕೆ ತರಲಾಗುವುದು. ಅಂದಿನಿಂದ (ನ.೨೬) ಸತತ ೧೨ ದಿನಗಳ ಪರ್ಯಂತ ಯಾಗದ ಸಂಪೂರ್ಣ ವಿಧಿ-ವಿಧಾನಗಳ ಮೂಲಕ ಡಿ.೧೦ರಂದು ಮಹಾಪೂರ್ಣಾಹುತಿ ನೀಡಲಾಗುವುದು. ಹಿಂದೆ ೨೦೦೪ರಲ್ಲಿ ಈ ಯಾಗ…

Read More