Author: ನ್ಯೂಸ್ ಬ್ಯೂರೋ

ಕುಂದಾಪುರದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕನ್ನಡಿಗರು ತಂಬಾ ಭಾವೈಖ್ಯತೆ ಉಳ್ಳವರಾಗಿದ್ದು, ದೇಶದಲ್ಲಷ್ಟೇ ಅಲ್ಲದೆ ವಿದೇಶದಲ್ಲಿ ಕನ್ನಡಿಗರು ಭಾವನಾತ್ಮಕ ಬೆಸುಗೆ ಮೂಲಕ ಕನ್ನಡದ ಕಂಪು ವಿಸ್ತರಿಸಿದ್ದು, ಪ್ರತಿಭಾವಂತರು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಲವಾರು ಮಹನೀಯರ ಹೋರಾಟ ಫಲ ಮೈಸೂರು, ಕರ್ನಾಟಕ ರಾಜ್ಯವಾಗಿ ಮರು ನಾಮಕರಣ ಗೊಂಡಿತು. ಹಲವಾರು ಕ್ಷೇತ್ರದಲ್ಲಿ ರಾಜ್ಯ ಪ್ರಗತಿ ಕಂಡಿದ್ದರೂ, ಇನ್ನಷ್ಟು ಪ್ರಗತಿ ಸಾಧಿಸಲು ಕನ್ನಡಿಗರು ಕೈಜೋಡಿಸಬೇಕಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಅಶ್ವಥಿ ಎಸ್ ಹೇಳಿದರು. ಕುಂದಾಪುರ ತಾಲೂಕು ಪಂಚಾಯತ್, ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ಮಂಗಳವಾರ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ದ್ವಜಾರೋಹಣ ಮತ್ತು ಗೌರವ ವಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು. ಎಂಟು ಜನ ಕನ್ನಡ ಸಾಹಿತಿಗಳು ಜ್ಞಾನ ಪೀಠ ಪ್ರಶಸ್ತಿ ಪಡೆಯುವ ಮೂಲಕ ಭಾಷೆ ಹಾಗೂ ಸಾಹಿತ್ಯ ಹಿರಿಮೆ ಎತ್ತಿ ಹಿಡಿದು ಭಾಷೆ ಶ್ರೀಮಂತ ಗೊಳಿಸಿದ್ದು, ರಾಜ್ಯ ಸರಕಾರ ಕೂಡಾ ಭಾಷಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ, ನ.1: ಕ್ರಿಯಾಶೀಲ ಯುವ ಛಾಯಾಗ್ರಾಹಕ, ತೆಕ್ಕಟ್ಟೆಯ ವಾಲ್ಮೀಕಿ ಡಿಜಿಟಲ್ಸ್‌ನ ಅಮಿತ್ ತೆಕ್ಕಟ್ಟೆ ಅವರ ನೂತನ ವೆಬ್‌ಸೈಟ್ amiththekkatte.com ಇಂದು ಲೋಕಾರ್ಪಣೆಗೊಂಡಿತು. ಕೋಟೆಶ್ವರದ ಸಹನಾ ಕನ್ವೆಶನ್ ಸೆಂಟರ್‌ನಲ್ಲಿ ಪ್ರೋಕಬ್ಬಡಿಯ ಖ್ಯಾತ ಆಟಗಾರ ರಿಶಾಂಕ ದೇವಾಡಿಗ ಲೋಕಾರ್ಪಣೆಗೊಳಿಸಿ ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣದ ಬಳಕೆ ಅನಿವಾರ್ಯವಾಗಿದ್ದು, ಉದ್ದಿಮೆಯ ಬೆಳವಣಿಗೆಗೂ ಅದು ಸಹಕಾರಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ವಾಲ್ಮೀಕಿ ಡಿಜಿಟಲ್ಸ್ ಮಾಲಿಕ ಅಮಿತ್ ತೆಕ್ಕಟ್ಟೆ, ಸಹನಾ ಕನ್ವೆಶನ್ ಸೆಂಟರ್ ಮಾಲಿಕರಾದ ಸುರೇಂದ್ರ ಶೆಟ್ಟಿ, ಬೆಂಗಳೂರು ಉದ್ಯಮಿ ನಿತೀಶ್ ದೇವಾಡಿಗ ಹಾಗೂ ವೆಬ್‌ಸೈಟ್ ವಿನ್ಯಾಸಗೊಳಿಸಿದ ಗೌತಮ ನಾವಡ ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. [quote font_size=”15″ bgcolor=”#ffffff” bcolor=”#6ed624″ arrow=”yes”]ಛಾಯಾಗ್ರಾಹಕ ಅಮಿತ್ ತೆಕ್ಕಟ್ಟೆ ತನ್ನ ಕ್ರೀಯಾಶೀಲ ಛಾಯಾಗ್ರಹಣದ ಮೂಲಕ ಗುರುತಿಸಿಕೊಂಡವರು. ಕುಂದಾಪುರದಲ್ಲಿ ಪ್ರಥಮ ಭಾರಿಗೆ ಡಿಎಸ್‌ಎಲ್‌ಆರ್ ವೆಡ್ಡಿಂಗ್ ಫಿಲ್ಮ್ಸ್ ಪರಿಚರಿಸಿದ ಖ್ಯಾತಿ ಅವರದ್ದು. ಭಿನ್ನ ಭಿನ್ನ ಪ್ರಯೋಗಗಳ ಮೂಲಕ ಛಾಯಾಗ್ರಹಣ ಕ್ಷೇತ್ರದಲ್ಲಿ ಹೊಸತನವನ್ನು ಹುಡುಕುತ್ತಿರುವ ಅಮಿತ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೊನ್ನಾವರದಿಂದ ಮಂಗಳೂರು ತೆರಳುತ್ತಿದ್ದ ರಿಡ್ಜ್ ಕಾರು ನಿಯಂತ್ರಣ ತಪ್ಪಿ ಮರವಂತೆ ರಾಷ್ಟ್ರೀಯ ಹೆದ್ದಾರಿ 66 ಬಳಿ ನಿಂತಿದ್ದ ವಾಹನಕ್ಕೆ ಡಿಕ್ಕಿಯಾಗಿ ಚರಂಡಿಗೆ ಉರುಳಿ ಬಿದ್ದ ಘಟನೆ ಮಂಗಳವಾರ ಮಧ್ಯಾಹ್ನ ವರದಿಯಾಗಿದೆ. ಕಾರಿನಲ್ಲಿದ್ದ ಕಿಯೋನಾ ಪಿಂಟೊ (8) ಗಂಭೀರ ಗಾಯಗೊಂಡಿದ್ದರೇ, ಕಾರು ಚಲಾಯಿಸುತ್ತಿದ್ದ ಸನ್ನಿ ಲೆಸಾರ‍್ಡೋ(32), ಅವರ ತಾಯಿ ಸಿಸಿಲಿಯಾ ಲೆಸಾರ‍್ಡೋ(56), ಅಕ್ಕ ಜಾಸ್ಮಿನ್ ಪಿಂಟೋ(36) ಹಾಗೂ ಆಕೆಯ ಮಗು ಕೇಲ್ ಪಿಂಟೋ(4) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.  ನ.1ರಂದು ಹುಟ್ಟಹಬ್ಬ ಆಚರಿಸಿಕೊಳ್ಳಬೇಕಿದ್ದ ಬಾಲಕಿ ಕಿಯೋನಾ  ಆಸ್ಪತ್ರೆಯಲ್ಲಿ ಗಂಭೀರ ಗಾಯಗೊಂಡು ಮಲಗಿದ್ದಾಳೆ.ಕುಂದಾಪ್ರ ಡಾಟ್ ಕಾಂ. ಮಂಗಳೂರು ನಂದಿಗುಡ್ಡ ನಿವಾಸಿಯಾಗಿರುವ ಸನ್ನಿ ಲೆಸಾರ‍್ಡೋ ಕುವೈತ್‌ನಲ್ಲಿ ಉದ್ಯೋಗಿಯಾಗಿದ್ದು, ಊರಿಗೆ ಬಂದಿದ್ದಾಗ ಕುಟುಂಬಿಕರೊಂದಿಗೆ ಹೊನ್ನಾವರದ ಸಂಬಂಧಿಕರ ಮನೆಗೆ ತೆರಳಿ ಹಿಂತಿರುಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಮರವಂತೆಯ ಮಾರಸ್ವಾಮಿ ದೇವಸ್ಥಾನದ ಸಮೀಪ ವೇಗವಾಗಿ ಬರುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿದ್ದ ವಾಹನಕ್ಕೆ ಢಿಕ್ಕಿ ಹೊಡಿದು ಮೂರು ಸುತ್ತು ಉರುಳಿ ಚರಂಡಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ ಪೆಟ್ರೋಲ್ ಬಂಕ್ ಬಳಿ ಬೈಕ್ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಅಘಫಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವರದಿಯಾಗಿದೆ. ಕುಂದಾಪುರದ ಕುಂದೇಶ್ವರ ದೇವಳದ ಬಳಿಯ ನಿವಾಸಿ ನಾರಾಯಣ ಪೂಜಾರಿ ಅವರ ಪುತ್ರ ರಾಜೇಶ್ ಪೂಜಾರಿ (26) ಮೃತ ದುರ್ದೈವಿ. ಪೋಟೋಗ್ರಾಫರ್ ಆಗಿ ಪಾರ್ಟ್‌ಟೈಮ್ ವೃತ್ತಿ ಮಾಡಿಕೊಂಡಿದ್ದ ರಾಜೇಶ್, ಮಂಗಳವಾರ ಮಧ್ಯಾಹ್ನ ತ್ರಾಸಿಗೆ ತೆರಳುತ್ತಿದ್ದ ವೇಳೆಗೆ ಪೆಟ್ರೋಲ್ ಬಂಕ್ ಕಡೆಯಿಂದ ಒಮ್ಮೆಲೆ ರಸ್ತೆಗೆ ಬಂದ ಟಿಪ್ಪರ್ ಢಿಕ್ಕಿ ಹೊಡಿದಿತ್ತು. ರಾಜೇಶ್ ತಲೆಗೆ ಗಂಭೀರ ಏಟು ತಗಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಆತನ ಸಾವಿನಿಂದ ಕುಟುಂಬ ಆಘಾತದಲ್ಲಿ ಮುಳುಗಿದೆ. ಕುಂದಾಪುರ ಪರಿಸರದಲ್ಲಿ ಎಲ್ಲರೊಂದಿಗೂ ಉತ್ತಮ ಭಾಂದವ್ಯ ಹೊಂದಿದ್ದ ರಾಜೇಶನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಿಕರು, ಸ್ನೇಹಿತರು, ಛಾಯಾಗ್ರಾಹಕರು ಆಸ್ಪತ್ರೆಯ ತೆರಳಿದ್ದರು. ಮೃತರು ತಂದೆ ನಾರಾಯಣ ಪೂಜಾರಿ ಹಾಗೂ ಈರ್ವರು ಸಹೋದರಿಯರನ್ನು ಅಗಲಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. youing photographer…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಿರಿಮಂಜೇಶ್ವರ ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೬೧ನೇ ಕನ್ನಡ ರಾಜೋತ್ಸವವನ್ನು ಆಚರಿಸಲಾಯಿತು. ಈ ಸಮಾರಂಭದಲ್ಲಿ ತಾಲೂಕು ಪಂಚಾಯತ್‌ಸದಸ್ಯರಾದ ಶ್ಯಾಮಲಾ ಕುಂದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕನ್ನಡ ರಾಜೋತ್ಸವದ ಮಹತ್ವವನ್ನು ತಿಳಿಸಿದರು. ಅತಿಥಿಗಳಾಗಿ ನಾವುಂದ ಪಂಚಾಯತ್ ಸದಸ್ಯ ಗಣೇಶ್ ಪೂಜಾರಿ ಹಾಗೂ ಶಾಲೆಯ ಟ್ರಸ್ಟಿಗಳಾದ ಶ್ರೀ ತೇಜಪ್ಪ ಶೆಟ್ಟಿ, ಮಂಜು ಪೂಜಾರಿ ಮತ್ತು ಬೃಹ್ಮಶ್ರೀ ಬೈದರ್ಕಳ ಕೋಟಿ ಚೆನ್ನಯ ಗರಡಿಯ ಕಾರ್ಯದರ್ಶಿಗಳಾದ ಶೇಖರ ಪೂಜಾರಿ ಹಾಗೂ ಶಾಲೆಯ ಸಂಚಾಲಕಾರಾದ ಶಂಕರ ಪೂಜಾರಿ, ಮೇಲ್ವಿಚಾರಕರಾದ ಎ.ಬಿ. ಪೂಜಾರಿ ಭಾಗವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯರಾದ ಎಮ್. ಜಿ. ಬಾನಾವಳಿಕರ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕನ್ನಡ ನೆಲ. ಜಲ, ಸಂಸ್ಕೃತಿಯನ್ನು ಕೊಂಡಾಡಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರು ನಾಡ ಗೀತೆಯನ್ನು ಹಾಡಿ ಕನ್ನಡ ರಾಜ್ಯೋತ್ಸವ ದಿನದ ಮಹತ್ವವನ್ನು ವಿವರಿಸಿದರು. ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಗೋವಿಂದರಾಜು ಕಾರ್ಯಕ್ರಮ ನಿರೂಪಿಸಿ ಧನ್ಯವಾದಗಳನ್ನು ಅರ್ಪಿಸಿದರು.

Read More

ಕರುಣಾಕರ ಬಳ್ಕೂರು | ಕುಂದಾಪ್ರ ಡಾಟ್ ಕಾಂ ಲೇಖನ ಒಂದು ಭಾಷೆ ಅಳಿಯಿತೆಂದರೆ ಆ ಭಾಷೆಯನ್ನು ಆಶ್ರಯಿಸಿದ ಇಡೀ ಜನಾಂಗದ ಸಮೃದ್ಧ ಪರಂಪರೆ ನಾಶವಾಗುತ್ತದೆ. ಇಂದು ಕನ್ನಡಿಗರು ಸ್ವಭಾಷಾ ಪ್ರೇಮಿಗಳಲ್ಲ, ಹೊರಗಿನವರು ಬಂದರೆ ನಾವು ಅವರ ಭಾಷೆ ಕಲಿತು ಮಾತನಾಡುತ್ತೇವೆಯೇ ಹೊರತು ಅವರು ನಮ್ಮ ಭಾಷೆ ಕಲಿಯುವಂತೆ ಮಾಡುವುದಿಲ್ಲ. ನಮ್ಮ ಮಕ್ಕಳು, ಮೊಮ್ಮಕ್ಕಳಿಗೇ ನಾವು ಕನ್ನಡ ಕಲಿಸುವುದಿಲ್ಲ. ಇಂಗ್ಲಿಷ್ ಮೀಡಿಯಂ ಸ್ಕೂಲುಗಳೇ ಬೇಕು ಹೀಗಾದರೆ ಕನ್ನಡದ ಗತಿಯಂತು ಎನ್ನುವ ಬಗ್ಗೆ ಕನ್ನಡಿಗ ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತಲ್ಲವೆ… ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಕನ್ನಡಕ್ಕಾಗಿ ಕೊರಳೆತ್ತು, ಅಲ್ಲಿ ಪಾಂಚಜನ್ಯ ಮೂಡುತ್ತದೆ ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು ಅದೇ ಗೋವರ್ಧನ ಗಿರಿಯಾಗುತ್ತದೆ.. ಎಂದು ಮಹಾಕವಿ ಕುವೆಂಪುರವರು ಕನ್ನಡ ಭುವನೇಶ್ವರಿ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಹಾರಿಸಿ ವಿಶ್ವ ಮಾನವ ಸಂದೇಶವನ್ನು ನೀಡಿದ ಮಹಾನ್ ಕವಿ. ಕನ್ನಡ ನಾಡಿನಲ್ಲಿ ಕುವೆಂಪುರಂತಹ ನೂರಾರು ಕವಿಗಳನ್ನು ಪಡೆದಿರುವ ಕನ್ನಡಿಗರೆ ಧನ್ಯರು. ಕನ್ನಡ ನಾಡಿನಲ್ಲಿ ಸಾಹಿತ್ಯ, ಕಲೆ, ಸಂಗೀತ, ನೃತ್ಯ, ವಾಸ್ತುಶಿಲ್ಪ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: 2016ನೇ ಸಾಲಿನ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಗೆ ಕುಂದಾಪುರ ತಾಲೂಕಿನ ಎಂಟು ಮಂದಿ ಆಯ್ಕೆಗೊಂಡಿದ್ದಾರೆ. ಯೋಗಬಂಧು ಸಂಜೀವಣ್ಣ, ಯಕ್ಷಗಾನ ಕಲಾವಿದ ಚಿಕ್ಕು ಪೂಜಾರಿ, ಹಿರಿಯ ಪತ್ರಕರ್ತ ಜಾನ್ ಡಿಸೋಜಾ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡುವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕುಂದಾಪುರ ತಾಲೂಕಿನಲ್ಲಿ ಪ್ರಶಸ್ತಿಗೆ ಆಯ್ಕೆಯಾದವರು: ಬಿ. ಮೋಹನ್ಚಂದ್ರ ಕಾಳಾವರ್ಕಾರ್ ಕಾಳಾವರ ಸಮಾಜ ಸೇವೆ ಎಂ. ಸಂಜೀವಣ್ಣ ಮೂಡುಕೇರಿ, ಕುಂದಾಪುರ ಸಾಮಾಜಿಕ ಯೋಗ ಶಿಕ್ಷಣ ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ, ಸಮಾಜಸೇವೆ ಎಲ್. ಎಮ್. ಇಬ್ರಾಹಿಂ ಗಂಗೊಳ್ಳಿ, ಸಮಾಜ ಸೇವೆ ಕೆ. ರತ್ನಾಕರ ಕಿಣಿ ಅಂಪಾರು ಅಂಚೆ ಸಾಹಿತ್ಯ ಕ್ಷೇತ್ರ ಜಾನ್ ಡಿಸೋಜ ಕುಂದಾಪುರ ಪತ್ರಕರ್ತ ಯೋಗೇಶ್ ಶಿರೂರು ಶಿರೂರು ಕರಾವಳಿ ರಂಗಭೂಮಿ ಕಲಾವಿದ ಚಿಕ್ಕು ಪೂಜಾರಿ ಶಿರೂರು, ಯಕ್ಷಗಾನ ಕಲಾವಿದ ಜಿಲ್ಲೆಯ ವಿವಿಧೆಡೆಗಳಿಂದ ಆಯ್ಕೆಯಾದವರು: ಗುರುರಾಜ್ ಸನಿಲ್. ಸಮಾಜ ಸೇವೆ (ಉರಗತಜ್ಞ) . ಸತೀಶ್ ಸಾಲ್ಯಾನ್ ಮಣಿಪಾಲ ಸಮಾಜ ಸೇವೆ . ರತ್ನಾಕರ್ ಸಾಮಂತ್ ಮಣಿಪಾಲ ಸಮಾಜಸೇವೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಮ್ಮ ದೇಶ ಶಾಂತಿ ಸೌಹಾರ್ದತೆಯ ನೆಲೆಯಾಗಬೇಕು. ನಮ್ಮ ದೇಶದ ಸಂಸ್ಕೃತಿಯಲ್ಲಿ ಹಿಂದಿನಿಂದಲೂ ನೆರೆಕೆರೆಯವರೊಡನೆ ಭ್ರಾತೃತ್ವ, ಕಷ್ಟ ಸಂಕಷ್ಟದ ಪರಿಸ್ಥಿತಿಯಲ್ಲಿ ಸಹಕಾರ ಜೀವನ ಆದರ್ಶಪ್ರಾಯವಾಗಿತ್ತು. ಇಂದಿನ ಆಧುನಿಕ ಜಗತ್ತಿನಲ್ಲಿ ಈ ಸಂಸ್ಕಾರಗಳನ್ನು, ಆದರ್ಶಗಳನ್ನು ಮುಡಿಪಾಗಿಟ್ಟುಕೊಂಡು,ಇನ್ನೂ ಹೆಚ್ಚು ಭಾಂದವ್ಯದ ಜೀವನಕ್ಕೆ ನಾವು ಅಣಿಯಾಗಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವ| ಜೆರಾಲ್ಡ್ ಐಸಾಕ್ ಲೋಬೋ ರವರು ಹೇಳಿದರು. ಅವರು ಗಂಗೊಳ್ಳಿಯ ಕ್ರೈಸ್ತಧರ್ಮ ಕೇಂದ್ರದ ಸರ್ವಧರ್ಮೀಯ ಸಂವಾದ ಸಮಿತಿಯ ನೇತೃತ್ವದ ಸ್ಥಳೀಯ ಸೌಹಾರ್ದ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮನೆಯಲ್ಲಿ ಅನೇಕ ಕೊಠಡಿಗಳಿದ್ದಾಗ್ಯೂ ಮನೆ ಒಂದೇ, ಬಣ್ಣಬಣ್ಣದ ಹೂಗಳಿರುವ ಹೂಗುಚ್ಛ ಒಂದೇ, ಬೇರೆ ಬೇರೆ ಕವಲು ದಾರಿಗಳಿದ್ದಾಗ್ಯೂ ಹತ್ತುವ ಬೆಟ್ಟ ಒಂದೇ ಎಂಬ ಉಲ್ಲೇಖಗಳನ್ನು ನೀಡಿ, ಬೇರೆ ಬೇರೆ ಧರ್ಮಪಂಥಗಳ ಮೂಲಕ ನಾವೆಲ್ಲರೂ ಸೇರುವ ದೇವನೊಬ್ಬನೇ. ಧರ್ಮ ನಮ್ಮ ಆಯ್ಕೆಯಲ್ಲ, ಅದು ದೈವೆಚ್ಚೆ. ಹಾಗಾಗಿ ನಾವೆಲ್ಲಾ ಧರ್ಮದವರು ಸರ್ವರೊಡನೆ ಪ್ರೀತಿ, ಶಾಂತಿ, ಸಹಬಾಳ್ವೆ, ಐಕ್ಯತೆ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಸುರಭಿ ಇದರ ಆಶ್ರಯದಲ್ಲಿ ಭಾನುವಾರ ರೋಟರಿ ಸಮುದಾಯ ಭವನದಲ್ಲಿ ೨ ದಿನಗಳ ಕಾಲ ನಡೆಯುವ ಕರ್ನಾಟಕ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಕಲಿಕೆಯ ನಾದ ಸುರಭಿ ಶಿಬಿರವನ್ನು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರೊಫೆಸರ್ ಡಾ. ಶ್ರೀಕಾಂತ್ ರಾವ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈಗಿನ ಆಧುನಿಕ ಪ್ರಪಂಚದಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಪ್ರಮಾಣ ಹೆಚ್ಚಾಗಿದ್ದು, ಜನ್ಮನೀಡಿದ ತಾಯಿ-ತಂದೆ, ವಿದ್ಯೆ ಕಲಿಸಿದ ಗುರುಗಳ ಮೇಲೆ ಹಲ್ಲೆ ಮಾಡುವಂತ ಮಟ್ಟಿಗೆ ಮಕ್ಕಳು ಬೆಳೆದಿರುವುದು ಬೇಸರತರಿಸುವ ವಿಚಾರವಾಗಿದೆ ಎಂದರು. ಹಿಂದೆ ಗ್ರಾಮೀಣ ಭಾಗದಲ್ಲಿ ಹುಟ್ಟುವುದು ಒಂದು ಶಾಪ ಎಂದು ಅಂದುಕೊಂಡಿದ್ದೆವು. ಆಗ ನಮಗೆ ಯಕ್ಷಗಾನ ಬಿಟ್ಟರೆ ಬೇರಾವ ಮನರಂಜನೆಯಿರಲಿಲ್ಲ. ಈಗಿನ ತಾಂತ್ರಿಕತೆಯಿಂದ ಎಲ್ಲವೂ ಬದಲಾವಣೆಯಾಗಿದೆ. ನಾವು ಇಂಟರ್‌ನೆಟ್ ಯುಗದಲ್ಲಿ ಬಹಳ ವೇಗ ಮತ್ತು ಒತ್ತಡಗಳ ಬದುಕು ಸಾಗಿಸುತ್ತಿದ್ದೇವೆ. ಮನಸ್ಸನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಆರೋಗ್ಯದ ಕಡೆ ಗಮನ ಹರಿಸಲು ಬಿಡುವಿಲ್ಲದೇ ದುಡಿಯುತ್ತಿದ್ದೇವೆ. ಹಣವಿದ್ದರೂ ನೆಮ್ಮದಿ ಇಲ್ಲದ ಜೀವನ ನಡೆಸುವಂತಾಗಿದೆ.…

Read More

ಅಪಾರ ಉಜಿರೆ ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಮೆಲುಕು ಹಾಕುವ ಹಂಪಿ ಉತ್ಸವವು ಇದೇ ನವೆಂಬರ್ ತಿಂಗಳ ೩, ೪ ಮತ್ತು ೫ರಂದು ಹಂಪಿಯಲ್ಲಿ ನಡೆಯಲಿದ್ದು, ಉತ್ಸವಕ್ಕೆ ಪೂರ್ವಬಾವಿಯಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅದರಲ್ಲಿ ಪಾರಂಪರಿಕ ನಡಿಗೆಯು ೨೦೧೬ರ ಹಂಪಿ ಉತ್ಸವದ ವಿಶೇಷ ಆಕರ್ಷಣೆ. ಹಂಪಿ ಸ್ಮಾರಕಗಳನ್ನು ಪರಿಚಯಿಸುವ ಪಾರಂಪರಿಕ ನಡಿಗೆಯನ್ನು ನ೩೦ರಂದು ಬೆಳಗ್ಗೆ ವೀರೂಪಾಕ್ಷ ದೇವಳದ ಮುಂಭಾಗದಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ಡಾ. ವಿ. ರಾಮಪ್ರಸಾರ್ ಮನೋಹರ್ ಪಾರಂಪರಿಕ ನಡಿಗೆಗೆ ಚಾಲನೆ ನೀಡಿದರು ಪಾರಂಪರಿಕ ನಡಿಗೆಯಲ್ಲಿ ಹಂಪಿಯ ಮಾರ್ಗದರ್ಶಕರ ನೇತೃತ್ವದಲ್ಲಿ ವೀರೂಪಾಕ್ಷ ದೇವಸ್ಥಾನ, ಬಜಾರ್, ಅಚ್ಚ್ಯುತ ದೇಗುಲ ಬಜಾರ್, ಪುಷ್ಕರಣಿ, ಚಕ್ರತೀರ್ಥ, ವರ್ಷ ದಏವಸ್ಥಾನ, ನರಸಿಂಹ ದೇವಸ್ಥಾನ, ಎರಡು ಅಂತಸ್ಥಿನ ಮಂಟಪ, ಸುಗ್ರೀವ ಕಾಲ್ವೆ, ಪುರಾತನ ಸೇತುವೆ, ಪುರಂದರ ಮಂಟಪ, ವಿಜಯವಿಠಲ ದೇವಸ್ಥಾನ, ಕಲ್ಲಿನ ರಥ, ಸಂಗೀತ ಮಂಟಪ ಮೊದಲಾದ ಸ್ಥಳಗಳಿಗೆ ಭೇಟಿ ನೀಡಲಾಯಿತು. ಪಾರಂಪರಿಕ ನಡಿಗೆಯಲ್ಲಿ ಕನ್ನಡ ವಿವಿ ಹಂಪಿ, ಹೋಟೆಲ್ ಮಾಲೀಕರ ಸಂಘ, ವ್ಯಾಪಾರಸ್ಥರ ಸಂಘ, ಸ್ಥಳೀಯ ಶಾಲಾ ಕಾಲೇಜುಗಳ…

Read More