Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶುಭದಾ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ ಇಲ್ಲಿ ವಿದ್ಯಾರ್ಥಿ ಪರಿಷತ್‌ನ್ನು ಉದ್ಘಾಟನೆ ಆದಿತ್ಯ ಆಡಿಟೋರಿಯಂನಲ್ಲಿ ನಡೆಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಎಮ್ ಜಿ ಬಾನಾವಾಳಿಕರ್ ಸಭಾಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಶಂಕರ ಪೂಜಾರಿಯವರು ಭಾಗವಹಿಸಿದರು. ವಿದ್ಯಾರ್ಥಿ ಪರಿಷತ್ ನಾಯಕಿಯಾಗಿ ಕುಮಾರಿ ಶಿಲ್ಪಾ, ವಿದ್ಯಾರ್ಥಿ ಪರಿಷತ್ ಉಪನಾಯಕಿಯಾಗಿ ಕುಮಾರಿ ಸ್ವೀಕೃತಿ. ಹಾಗೂ ವಿದ್ಯಾರ್ಥಿ ಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಹಾಗೂ ಕುಮಾರಿ ಪುಣ್ಯಶ್ರೀ ಇವರು ಪ್ರಮಾಣ ವಚನ ಸ್ವೀಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಗೋವಿಂದರಾಜು ಪ್ರಮಾಣ ವಚನ ಭೋಧೀಸಿದರು ರೇಷ್ಮಾ ಹಾಗೂ ವಾಣಿ ಕರ್ತವ್ಯಗಳನ್ನು ತಿಳಿಸಿದರು. ಕುಮಾರಿ ರೂಪಾ ಸ್ವಾಗತಿಸಿ, ಕುಮಾರಿ ಚಂದ್ರಾವತಿ ವಂದಿಸಿ, ಕುಮಾರಿ ವಿದ್ಯಾ ಕಾರ‍್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನೂತವಾಗಿ ನಿರ್ಮಿಸಿದ ಶ್ರೀ ವಿ.ಎನ್ ಭಂಡಾರ್ಕರ್ ಮತ್ತು ಶ್ರೀಮತಿ ಲಕ್ಷ್ಮಿದೇವಿ ಭಂಡಾರ್ಕರ್ ಐ.ಸಿ.ಟಿ ಆಧಾರಿತ ತರಗತಿ ಕೊಠಡಿಯನ್ನು ಡಾ. ಎ.ಎಸ್. ಭಂಡರ್ಕರ್ ಕುಟುಂಬದವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ.ವಿವೇಕ್ ಭಂಡಾರ್ಕರ್ ಮಾತನಾಡಿ ಕಾಲೇಜಿನ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಅಧ್ಯಯನ ಮಾಡಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಬರುವ ಸವಾಲುಗಳನ್ನು ಎದುರಿಸಿ ಗುರಿಯತ್ತ ಗಮನ ಹರಿಸಿ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕರ್ ಕುಟುಂಬದ ಶಾಂತಾ ಭಂಡಾರ್ಕರ್ ಸುಧಾ ಭಂಡಾರ್ಕರ್, ವಿದ್ಯಾ ಭಂಡಾರ್ಕರ್‌ಶರ್ಮಿಳಾ ಭಂಡಾರ್ಕರ್ ಉಪಸ್ಥಿತರಿದ್ದರು. ವಿಶ್ವಸ್ಥ ಮಂಡಳಿಯ ಸದಸ್ಯರಾದ ಶಾಂತಾರಾಮ್ ಪ್ರಭು, ಪ್ರಜ್ನೇಶ್ ಪ್ರಭು, ವಿಜಯಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕರಾದ ನಾಗರಾಜ್ ವಿಜಯಲಕ್ಷ್ಮಿ ಶಾಂತಾರಾಮ್ ಮುಂತಾದವರು ಉಪಸ್ಥಿತರಿದ್ದರು. ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ನಿರ್ವಹಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹಾನ್ ವ್ಯಕ್ತಿಗಳ ಬದುಕಿನ ತತ್ವಾದರ್ಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸ್ಪಷ್ಟವಾದ ಗುರಿ, ಛಲ ಹಾಗೂ ಇಚ್ಛಾಶಕ್ತಿಯಿಂದ ಮುನ್ನಡೆದಿದ್ದಲ್ಲಿ ವಿದ್ಯಾರ್ಥಿಗಳು ಎಂತಹ ಸಾಧನೆಯನ್ನಾದರೂ ಮಾಡಬಹುದು. ಇಂದಿನ ವಿದ್ಯಾರ್ಥಿಗಳೇ ದೇಶದ ಭವಿಷ್ಯದ ನಾಯಕರು ಎಂದು ಕಿರಿಮಂಜೇಶ್ವರದ ಉದ್ಯಮಿ, ದಾನಿ ಎನ್. ವಿ. ಪ್ರಕಾಶ್ ಐತಾಳ್ ಹೇಳಿದರು. ಕಿರಿಮಂಜೇಶ್ವರ ಪ್ರೌಢಶಾಲೆಯಲ್ಲಿ ಮಂಗಳವಾರ ಮಧ್ಯಾಹ್ನ ಜರುಗಿದ ಸಮಾರಂಭದಲ್ಲಿ ಶಾಲಾ 2017-18ನೇ ಸಾಲಿನ ವಿದ್ಯಾರ್ಥಿ ಸಂಸತ್ ಹಾಗೂ ವಿವಿಧ ಶೈಕ್ಷಣಿಕ ಸಂಘಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಮುಖ್ಯಶಿಕ್ಷಕ ಶಂಕರ ಮೊಗವೀರ ಅಧ್ಯಕ್ಷತೆ ವಹಿಸಿ ಮಾತನಾಡಿ ಕಲಿಕೆಯಲ್ಲಿ ವಿದ್ಯಾರ್ಥಿಗಳ ಬದ್ಧತೆ ಅತ್ಯಗತ್ಯ. ಪಠ್ಯೇತರ ಚಟುವಟಿಕೆಗಳಲ್ಲಿ ಲಭ್ಯ ಅವಕಾಶಗಳನ್ನು ಚಾಚೂ ತಪ್ಪದೇ ಬಳಸಿಕೊಂಡು ನಾಯಕತ್ವ ಹಾಗೂ ವ್ಯಕ್ತಿತ್ವ ಬೆಳೆಸಿಕೊಳ್ಳಲು ಪ್ರಯತ್ನ ನಡೆಸಬೇಕು ಎಂದು ಕಿವಿಮಾತು ಹೇಳಿದರು. ಮುಖ್ಯ ಅತಿಥಿ ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಶಾಲಾ ಸರಕಾರದ ನೂತನ ಪ್ರತಿನಿಧಿಗಳಿಗೆ ಶುಭಹಾರೈಸಿದರು. ವಿದ್ಯಾರ್ಥಿ ಸರಕಾರದ ಮಾರ್ಗದರ್ಶಕರಾದ ಶಿಕ್ಷಕ ಬೊಮ್ಮಯ್ಯ ಬಿ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಮಲ್ಯರಬೆಟ್ಟು ಶ್ರೀ ನಾಗ ನಿಲಯ ನಿವಾಸಿ ಮಂಜಿ ಖಾರ್ವಿ (೫೭) ಅವರು ಬಾಯಿ ಕ್ಯಾನ್ಸರ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಮಾನವೀಯ ನೆರವಿನ ಅಗತ್ಯವಿದೆ. ಅಸ್ವಸ್ಥಗೊಂಡಿರುವ ಮಂಜಿ ಖಾರ್ವಿ ಅವರನ್ನು ಮೇ ೨ರಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಳೆದ ಎರಡು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಗುಣಮುಖರಾಗಲು ಹೆಚ್ಚಿನ ಚಿಕಿತ್ಸೆಯ ನೀಡಬೇಕಾಗಿದ್ದು ವೈದ್ಯಕೀಯ ವೆಚ್ಚಕ್ಕಾಗಿ ಸುಮಾರು ೩.೫ ಲಕ್ಷ ರೂ.ಗಳ ಅಗತ್ಯವಿದೆ ಮತ್ತು ಪ್ಲಾಸ್ಟಿಕ್ ಸರ್ಜರಿಗಾಗಿ ಸುಮಾರು ಒಂದರಿಂದ ಒಂದುವರೆ ಲಕ್ಷ ರೂ.ಗಳ ಎಂದು ವೈದ್ಯರು ತಿಳಿಸಿದ್ದಾರೆ. ಬಡ ಮೀನುಗಾರ ಕುಟುಂಬದ ಇವರಿಗೆ ಇಬ್ಬರು ಗಂಡು ಮಕ್ಕಳು. ಒಬ್ಬ ಮೀನುಗಾರಿಕೆ ನಡೆಸುತ್ತಿದ್ದು ಇನ್ನೊಬ್ಬ ಗ್ಯಾರೇಜ್‌ನಲ್ಲಿ ದುಡಿಯುತ್ತಿದ್ದಾನೆ. ಕಳೆದ ಎರಡು ತಿಂಗಳಿನಿಂದ ವೈದ್ಯಕೀಯ ಚಿಕಿತ್ಸೆಗಾಗಿ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿರುವ ಬಡ ಕುಟುಂಬ ಮುಂದಿನ ಚಿಕಿತ್ಸೆಗಾಗಿ ಅಷ್ಟು ದೊಡ್ಡ ಮೊತ್ತವನ್ನು ಹೊಂದಿಸಿಕೊಳ್ಳಲು ಕಷ್ಟವಾಗುತ್ತಿದ್ದು ಸಹೃದಯಿಗಳ ಉದಾರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಲಕ್ಷ್ಮೀ ಸೋಮ ಬಂಗೇರ ಪ್ರಥಮ ದರ್ಜೆ ಕಾಲೇಜು ಮಣೂರು ಪಡುಕರೆ ಇಲ್ಲಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಕಾಳಾವರ ವರದರಾಜ ಶೆಟ್ಟಿ ಪ್ರಥಮ ದರ್ಜೆ ಕಾಲೇಜಿಗೆ ವರ್ಗಾವಣೆಗೊಂಡ ಡಾ|ಎಸ್‌. ರಾಜೇಂದ್ರ ನಾಯಕ್‌ ಅವರಿಗೆ ಹಾಗೂ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿವಕುಮಾರ್‌ ಅವರಿಗೆ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸಮ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ಕಾಲೇಜಿನ ವಠಾರದಲ್ಲಿ ಜರಗಿತು. ರಾಜೇಂದ್ರ ನಾಯಕ್‌ ಅವರು ಸಮ್ಮಾನ ಸ್ವೀಕರಿಸಿ ಮಾತನಾಡಿ, ನಿರಂತರ ಒಂಬತ್ತು ವರ್ಷಗಳ ಕಾಲ ಗ್ರಾಮೀಣ ಭಾಗವಾದ ಕೋಟ ಪರಿಸರದಲ್ಲಿ ಉಪನ್ಯಾಸಕನಾಗಿ, ಪ್ರಾಂಶುಪಾಲನಾಗಿ ಸೇವೆ ಸಲ್ಲಿಸಿದ್ದು, ಅತ್ಯಂತ ಖುಷಿ ತಂದಿದೆ. ವಿದ್ಯಾರ್ಥಿಗಳ ಜತೆಗೆ ಕಳೆದ ದಿನಗಳು ನೆಮ್ಮದಿ ಕೊಟ್ಟಿದೆ. ಈ ಶೈಕ್ಷಣಿಕ ವಾತವರಣದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ನಾನು ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಕಾಲೇಜು ಸಂಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್‌ ಸಿ.ಕುಂದರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿ ರೋಟರಿ ಕ್ಲಬ್‌ನ ೨೦೧೭-೧೮ನೇ ಸಾಲಿನ ಅಧ್ಯಕ್ಷರಾಗಿ ಗಂಗೊಳ್ಳಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಉದ್ಯಮಿ ದುರ್ಗರಾಜ್ ಪೂಜಾರಿ ಆಯ್ಕೆಯಾಗಿದ್ದಾರೆ. ಕೆ.ರಾಮನಾಥ ನಾಯಕ್ (ಚುನಾಯಿತ ಅಧ್ಯಕ್ಷ), ಲಕ್ಷ್ಮೀಕಾಂತ ಮಡಿವಾಳ, ಶಿವಾನಂದ ಪೂಜಾರಿ (ಉಪಾಧ್ಯಕ್ಷರು), ಅಶೋಕ ದೇವಾಡಿಗ (ಕಾರ್ಯದರ್ಶಿ), ದಯಾನಂದ ಗಾಣಿಗ (ಜೊತೆ ಕಾರ್ಯದರ್ಶಿ), ಡಾ.ಕಾಶೀನಾಥ ಪೈ, ವಾಸುದೇವ ಶೇರುಗಾರ್, ಉಮೇಶ ಮೇಸ್ತ, ಎಚ್.ಗಣೇಶ ಕಾಮತ್, ಜನಾರ್ದನ ಪೂಜಾರಿ ಪೆರಾಜೆ (ನಿರ್ದೇಶಕರು), ನಾಗರಾಜ ಶೆಟ್ಟಿ (ಕೋಶಾಧಿಕಾರಿ), ಮನೋಜ್ ಕೆ.ಎಂ. (ಸಾರ್ಜಂಟ್ ಎಟ್ ಆರ್ಮ್ಸ), ನಾರಾಯಣ ನಾಯ್ಕ್ (ಬುಲೆಟಿನ್ ಎಡಿಟರ್), ರಾಘವೇಂದ್ರ ಭಂಡಾರ್‌ಕಾರ್ (ನಿರ್ಗಮಿತ ಅಧ್ಯಕ್ಷ), ಎಚ್.ಗಣೇಶ ಕಾಮತ್, ಡಾ.ಕಾಶೀನಾಥ ಪೈ, ಉಮೇಶ ಮೇಸ್ತ (ಸಲಹಾ ಮಂಡಳಿ ಸದಸ್ಯರು)

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹೆರಂಜಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಹೆರಿಯಣ್ಣ ಆಚಾರ್ಯ ಅವರನ್ನು ಶಾಲೆಯ ಶಿಕ್ಷಕ ವೃಂದ ಹಾಗೂ ಎಸ್‌ಡಿಎಂ ವತಿಯಿಂದ ಇತ್ತಿಚಿಗೆ ಬೀಳ್ಕೊಡಲಾಯಿತು. ಎಸ್‌ಡಿಎಂಸಿ ಅಧ್ಯಕ್ಷೆ ಜಲಜಾಕ್ಷಿ ಗೋಪಾಲ ಗಾಣಿಗ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಅಮಿತಾ ಶೆಟ್ಟಿ, ಸಿಆರ್‌ಪಿ ಶ್ರೀಕಾಂತ್ ಕಾಮತ್, ದಾನಿ ಕೃಷ್ಣ ಪೂಜಾರಿ, ಎಸ್‌ಡಿಎಂಸಿ ಮಾಜಿ ಸದಸ್ಯರುಗಳಾದ ರಘುರಾಮ ಪೂಜಾರಿ, ಮಂಜುನಾಥ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿ ಕವಿತಾ ಜಿ. ಕಾಮತ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ಗೀತಾ ಸ್ವಾಗತಿಸಿ, ಸುಮನ ವಂದಿಸಿದರು. ಶಿಕ್ಷಕಿ ಶೋಭಾ ಕಾರ್ಯಕ್ರಮ ನಿರೂಪಿಸಿದರು. ಹೆರಿಯಣ್ಣ ಆಚಾರ್ಯ ಅವರು ಅಂಪಾರು ಗುಂಡಿಬೆಟ್ಟು, ವಾಲ್ತೂರು, ಗುಜ್ಜಾಡಿ, ಮರವಂತೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಬಳಿಕ ಹೆರಂಜಾಲು ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಚಿತ್ರ ರಂಗದ ಟಿಕೆಟ್ ದರದಲ್ಲಿ ಜಿಎಸ್ಟಿಯಿಂದಾಗಿ ಉಂಟಾಗುವ ಹೆಚ್ಚಳ ಹಾಗೂ ಸಿನೆಮಾ ನಿರ್ಮಾಪಕರು ಸಲ್ಲಿಸಬೇಕಾದ ತೆರಿಗೆ ಸಮೇತ ಸರಿಯಾದ ಮಾಹಿತಿ ಈವರೆಗೆ ಲಭ್ಯವಾಗದೇ ಇರುವುದರಿಂದ ಫಿಲ್ಮ್ಚೇಂ ಬರ್ ಜಿಎಸ್ಟಿ ಬಗ್ಗೆ ಕೈಗೊಳ್ಳುವ ನಿರ್ಣಯಕ್ಕೆ ಬದ್ಧನಾಗಿರುವುದಾಗಿ ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಹೇಳಿದರು. ಕೋಟೇಶ್ವರದ ಯುವ ಮೆರಿಡಿಯನ್‌ನಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ. ಪತ್ನಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ಆಕೆಗೆ ಬೆಂಬಲಿಸಿದ್ದೆ. ರಾಹುಲ್ ಗಾಂಧಿಯವರು ನಮ್ಮ ಮನೆಗೆ ಆಗಮಿಸಿರುವ ವಿಚಾರವು ರಾಜಕೀಯ ವಲಯದಲ್ಲಿ ದೊಡ್ಡ ಸುದ್ದಿಯಾಗಿರಬಹುದು, ಆದರೆ ನನ್ನ ತಾಯಿಯ ನಿಧನದ ಬಗ್ಗೆ ಸಾಂತ್ವನ ಹೇಳಲು ಅವರು ಆಗಮಿಸಿದ್ದರು ಎಂದರು. ತೆರೆ ಕಾಣಲಿರುವ ಶಿವರಾಜ್ ಕುಮಾರ್ ನಟನೆಯ ಲೀಡರ್ ಚಿತ್ರದ ಬಗ್ಗೆ ಗಮನ ಸೆಳೆದಾಗ ಇದೊಂದು ಕಮರ್ಶಿಯಲ್ ಚಿತ್ರವಾಗಿದ್ದು ಇದರಲ್ಲಿ ದೇಶ ಪ್ರೇಮ ಹಾಗೂ ಕೌಟುಂಬಿಕ ಕಥೆ ಹೊಂದಿದೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಮೂಡುಬಗೆಯಲ್ಲಿ ಬೈಕ್ ಸವಾರರಿಗೆ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದರೇ ಹಿಂಬದಿಯ ಸವಾರ ಗಂಭೀರ ಗಾಯಗೊಂಡಿದ್ದಾರೆ. ಮೃತರನ್ನು ಹಳ್ಳಿಹೊಳೆ ಶಾಡಬೇರು ನಿವಾಸಿ ಶಿವಕುಮಾರ್ ರಾವ್ (28) ಹಾಗೂ ಗಾಯಾಳುವನ್ನು ಕೊಕ್ಕಡದ ನಿವಾಸಿ ರವಿ (35) ಎಂದು ಗುರುತಿಸಲಾಗಿದೆ. ಕುಂದಾಪುರದಿಂದ ಹಳ್ಳಿಹೊಳೆಗೆ ಪಲ್ಸರ್ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಮೂಡುಬಗೆ ರಸ್ತೆಯಲ್ಲಿ ಎದುರಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ಶಿವಕುಮಾರ್ ಸ್ಥಳದಲ್ಲಿಯೇ ಮೃತಪಟ್ಟಿದ್ದರೇ ರವಿ ಅವರು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಣಿಪಾಲದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಪಘಾತ ನಡೆಸಿದ ಟಿಪ್ಪರ್ ನಿಲ್ಲಿಸದೇ ಪರಾರಿಯಾಗಿದ್ದು ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ.  ಶಾಡಬೇರು ನಿವಾಸಿ ಮಂಜುನಾಥ್ ಅವರ ಒಬ್ಬನೇ ಮಗನಾಗಿದ್ದ ಶಿವಕುಮಾರ್ ಬೆಂಗಳೂರಿನಿಂದ ಕೆಲವು ತಿಂಗಳ ಹಿಂದಷ್ಟೇ ಊರಿಗೆ ಮರಳಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ರವಿ ಶಿವಕುಮಾರ್ ಅವರ ಸಂಬಂಧಿಯಾಗಿದ್ದು ಇಬ್ಬರು ಮಧ್ಯಾಹ್ನ ಕುಂದಾಪುರದಲ್ಲಿ ಕೃಷಿ ಸಲಕರಣೆಗಳನ್ನು…

Read More

ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಪವಿತ್ರತೀರ್ಥ ಎಂದು ಬೊಗಸೆ ತುಂಬಿಕೊಂಡು ಕಣ್ಣಿಗೆ ಒತ್ತಿಕೊಳ್ಳುತ್ತಿದ್ದ ಚಕ್ರಾನದಿ ನೀರು ಅಪವಿತ್ರ! ಕೈಯಲ್ಲಿ ನೀರು ಮುಟ್ಟಲು ಹೇಸಿಗೆ ಆಗುತ್ತದೆ. ಚಕ್ರಾ ನದಿ ಪಾತ್ರ ತ್ಯಾಜ್ಯಗಳ ಗೊಬ್ಬರಗುಂಡಿ. ಸತ್ತ ಪ್ರಾಣಿಗಳ ಕಳೇಬರ, ಜಲ ಮಾಲಿನ್ಯದಿಂದ ಸತ್ತಜಲಚರ, ಮೊಟ್ಟೆಗಳ ಓಡು, ಥರಹೇವಾರಿ ತ್ಯಾಜ್ಯ ತೊಟ್ಟಿ! ಒಂದುಕಾಲದಲ್ಲಿ ವಂಡ್ಸೆ ಬಳಿ ಪವಿತ್ರಚಕ್ರಾ ನದಿಯಲ್ಲಿ ಸ್ನಾನ ಮಾಡಿ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಜಾತ್ರೆಗೆ ಹೋಗುತ್ತಿದ್ದರು. ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಭಕ್ತರು ಚಕ್ರಾ ನದಿಯಲ್ಲಿ ಮಿಂದು, ಬಟ್ಟೆ ಒಣಗಿಸಿ, ಮುಂದೆ ಹೋಗುತ್ತಿದ್ದರಿಂದ ವಂಡ್ಸೆ ಎಂಬ ಹೆಸರು ಬರಲು ಕಾರಣ. ಒಣಸೆ ಸಂಕುಚತಗೊಂಡು ವಂಡ್ಸೆ ಆಗಿದೆ ಎನ್ನೋದು ಸ್ಥಳೀಯರ ನಂಬಿಕೆ. ಇಂತಾ ಪವಿತ್ರತೀರ್ಥದಲ್ಲಿ ಈಗ ಸ್ನಾನ ಮಾಡಿದರೆ ಚರ್ಮರೋಗ ಖಂಡಿತ. ಚಕ್ರಾ ನದಿಗೆ ಇಳಿಯೋದಕ್ಕೂ ಭಯವಾಗುತ್ತದೆ. ಚಕ್ರಾ ನದಿಯ ಒಡಲಲ್ಲಿ ಇಂತಾದ್ದೇ ತ್ಯಾಜ್ಯ ಬೀಳುತ್ತದೆ ಎನ್ನೋದಕ್ಕೆ ಬರೋದಿಲ್ಲ. ಮೊಟ್ಟೆ ಚಿಪ್ಪಿಂದ ಹಿಡಿದು, ಮಳಿ ಓಡಿನತನಕ, ಪ್ಲಾಸ್ಟಿಕ್, ಅಂಗಡಿ ಮುಂಗಟ್ಟು, ಹೋಟೆಲ್ ಸಮುಚ್ಛಯದ ಗೊಬ್ಬರಗುಂಡಿ…

Read More