Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹಿಂದೂ ಹಿತರಕ್ಷಣಾ ವೇದಿಕೆ ಬೈಂದೂರು ಇದರ ನೇತೃತ್ವದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿದ ಸಚಿವ ರಮಾನಾಥ ರೈ ವಿರುದ್ಧ ಬೈಂದೂರು ಪೇಟೆಯಲ್ಲಿ ಜೂನ್ 20ರ ಮಂಗಳವಾರ ಬೆಳಿಗ್ಗೆ 10ಗಂಟೆಗೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಭಾಂದವರು ಭಾಗವಹಿಸುವಂತೆ ವಿಶ್ವ ಹಿಂದೂ ಪರಿಷತ್ – ಬಜರಂಗದಳ ಬೈಂದೂರು ಪ್ರಖಂಡದ ಅಧ್ಯಕ್ಷ ಶ್ರೀಧರ ಬಿಜೂರು ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಕನ್ನಡ ವಿಶ್ವವಿದ್ಯಾಲಯ, ಹಂಪಿ ಮಾನ್ಯತೆ ಪಡೆದಿರುವ ಕುಂದಾಪುರದ ರಂಗ ಅಧ್ಯಯನ ಕೇಂದ್ರವು ನಡೆಸುವ 2017-18 ರ ಸಾಲಿನ ಒಂದು ವರ್ಷದ ನಾಟಕ ಡಿಪ್ಲೋಮಾ ತರಗತಿಗೆ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದು ಪೂರ್ಣಾವಧಿ ಕೋರ್ಸ್ ಆಗಿದ್ದು, ತರಗತಿಗಳು ಜುಲೈ 24 , 2017 ರಿಂದ 15 ಮೇ 2018 ರ ವರೆಗೆ ನಡೆಯಲಿದೆ. ತರಗತಿಗಳು ಪ್ರತಿದಿನ ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ನಡೆಯುವುದು. ಗರಿಷ್ಠ 20 ಮಂದಿಗೆ ಅವಕಾಶವಿದೆ. ಕೋರ್ಸಿನ ಅವಧಿಯಲ್ಲಿ ಪಾಶ್ಚಾತ್ಯ ರಂಗಭೂಮಿ, ಅಭಿಜಾತ ಭಾರತೀಯ ರಂಗಭೂಮಿ, ಆಧುನಿಕ ಭಾರತೀಯ ರಂಗಭೂಮಿ ಹಾಗೂ ಕನ್ನಡ ರಂಗಭೂಮಿಯ ಬಗ್ಗೆ ಸಮಗ್ರ ಅಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗುವುದು. ನಾಲ್ಕು ಪೂರ್ಣ ಪ್ರಮಾಣದ ನಾಟಕಗಳನ್ನು ತಯಾರಿಸಲಾಗುವುದು. ನಟನೆ, ನಿರ್ದೇಶನ, ಬೆಳಕು, ವರ್ಣಾಲಂಕಾರ, ರಂಗವಿನ್ಯಾಸಗಳ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಗುವುದು. ರಂಗಭೂಮಿಯ ಬಗ್ಗೆ ಈಗಾಗಲೇ ತಿಳುವಳಿಕೆ ಹೊಂದಿದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಆಯ್ಕೆಯಾದವರಿಗೆ ಊಟ ಮತ್ತು ವಸತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಕುಂದಾಪುರ ಬಾರ್ ಅಸೋಸಿಯೇಷನ್ ರಿ. ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ, ಭಂಡಾರ್‌ಕಾರ‍್ಸ್ ಪದವಿ ಪೂರ್ವ ಕಾಲೇಜು, ಕುಂದಾಪುರ ಮತ್ತು ಕಾರ್ಮಿಕ ಇಲಾಖೆ ಕುಂದಾಪುರ ಇವರ ಸಂಯಕ್ತ ಆಶ್ರಯದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮ ಭಂಡಾರ್‌ಕಾರ‍್ಸ್ ಪದವಿ ಪೂರ್ವ ಕಾಲೇಜು ಕುಂದಾಪುರದ ಎ.ವಿ.ಹಾಲ್‌ನಲ್ಲಿ ಜರುಗಿತು. ಕುಂದಾಪುರದ ೨ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶರಾದ ಚಂದ್ರಶೇಖರ ಬಣಕಾರ್ ಇವರು ಕಾರ್ಯಕ್ರಮವನ್ನು ಉದ್ಘಾಟಸಿ, ಜೂನ್ ೧೨ ರಂದು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸುತ್ತಿದ್ದು, ಚಿಕ್ಕ ಮಕ್ಕಳಿಂದ ದುಡಿಸಿಕೊಳ್ಳುವ ಪ್ರವೃತ್ತಿಯನ್ನು ಕೈಬಿಟ್ಟು, ಮಗುವಿನ ದೈಹಿಕ, ಮಾನಸಿಕ ಮತ್ತು ಬೌಧ್ಧಿಕ ಬೆಳವಣಿಗೆ ಸಹಾಯವಾಗುವ ಪೂರಕ ಅಂಶಗಳನ್ನು ಪೂರೈಸಿ ಮಕ್ಕಳು ತಮ್ಮ ಬಾಲ್ಯವನ್ನು ಅನುಭವಿಸುವುದರ ಜೊತೆಗೆ ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ಬದುಕುವ ಅವಕಾಶವನ್ನು ಕಲ್ಪಿಸಬೇಕು ಹಾಗೂ ಅಂತಹವರನ್ನು ಶಾಲೆಗಳಿಗೆ ಸೇರಿಸುವಲ್ಲಿ ಎಲ್ಲರೂ ಸಹಕರಿಸಿದಾಗ ಮಾತ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಕುಂದಾಪುರ ಬಾರ್ ಅಸೋಸಿಯೇಷನ್ (ರಿ.) ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಕುಂದಾಪುರ ಇವರ ಸಂಯಕ್ತ ಆಶ್ರಯದಲ್ಲಿ ಬಾಲ್ಯ ವಿವಾಹ ಜಾಗೃತಿ ಕಾರ್ಯಕ್ರಮ ಸರಕಾರಿ ಪದವಿ ಪೂರ್ವ ಕಾಲೇಜು, ಶಿರೂರು ಇಲ್ಲಿ ಜರುಗಿತು. ಕುಂದಾಪುರ ಬಾರ್ ಅಸೋಸಿಯೇಷನ್ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿ ಹದಿನೆಂಟು ವರ್ಷಕ್ಕಿಂತ ಕಡಿಮೆ ಪ್ರಾಯದ ಹುಡುಗಿ, ೨೧ ವರ್ಷಕ್ಕಿಂತ ಕಡಿಮೆ ಪ್ರಾಯದ ಹುಡುಗ ಪರಸ್ಪರ ಒಪ್ಪಿ ಮದುವೆಯಾಗುವುದು ಅಥವಾ ಎರಡು ಕುಟುಂಬಗಳು ಒಪ್ಪಿ ಮದುವೆ ಮಾಡಿಸುವುದುನ್ನು ಬಾಲ್ಯ ವಿವಾಹ ಎನ್ನಲಾಗುತ್ತದೆ. ಕರಾವಳಿಯ ಈ ಭಾಗದಲ್ಲಿ ಬಾಲ್ಯ ವಿವಾಹಗಳು ನಡೆದ ಪ್ರಕರಣ ತೀರಾ ಕಡಿಮೆಯಾಗಿದ್ದು, ಉತ್ತರ ಕರ್ನಾಟಕದ ಹಾಗೂ ದೇಶದ ಬೇರೆ ಬೇರೆ ಭಾಗಗಳಲ್ಲಿ ಇಂದಿಗೂ ಕೂಡಾ ಬಾಲ್ಯ ವಿವಾಹಗಳು ನಡೆಯುತ್ತಿರುವ ಬಗ್ಗೆ ವರದಿಯಾಗುತ್ತಲೆ ಇವೆ. ಇದರಿಂದಾಗಿ ಮಕ್ಕಳ ಮಾನಸಿಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟೇಶ್ವರ: ಗುರುಕುಲ ಶಾಲೆಯ ಮೊಂಟೆಸರಿ ಮಕ್ಕಳಿಗಾಗಿ ಬಣ್ಣಗಳ ದಿನ ಎಂಬ ವಿಶೇಷ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಾಮನ್ಯವಾಗಿ ಪುಟಾಣಿಗಳು ಮೊದಲು ಆಕರ್ಷಿತರಾಗುವುದೇ ಬಣ್ಣಗಳಿಗೆ, ಆ ನಿಟ್ಟಿನಲ್ಲಿ ಪುಟಾಣಿಗಳಿಗಾಗಿ ಪ್ರಾಥಮಿಕ, ಮಾದ್ಯಮಿಕ, ಮತ್ತು ನೈಸರ್ಗಕ ಬಣ್ಣಗಳ ಕುರಿತು ಪ್ರಾಯೋಗಿಕ ಮಾಹಿತಿ ನೀಡುವ ನಿಟ್ಟಿನಲ್ಲಿ ಪ್ರತಿ ವಿಭಾಗದ ಮಕ್ಕಳಿಗೆ ನಿರ್ದಿಷ್ಟ ಬಣ್ಣದ ಉಡುಗೆ ಹಾಕುವಂತೆ ಸೂಚಿಸಲಾಗಿತ್ತು. ಪ್ರತಿ ತರಗತಿಯ ಮಕ್ಕಳು ಮತ್ತು ಶಿಕ್ಷಕಿ ನಿರ್ದಿಷ್ಟ ಬಣ್ಣದ ಉಡುಗೆ ತೊಟ್ಟು ಅದಕ್ಕೆ ಸಂಬಂಧಪಟ್ಟ ವಸ್ತುಗಳನ್ನು ತಂದು ಜೋಡಿಸಿದ್ದರು. ಕಾರ‍್ಯಕ್ರಮದ ಮೊದಲಿಗೆ ಬಣ್ಣಗಳಲ್ಲಿ ಎಷ್ಟು ವಿಧಗಳು? ಅವುಗಳ ಮಹತ್ವವೇನು? ಯಾಕೆ ಈ ಹಂತದಲ್ಲಿ ಬಣ್ಣಗಳ ದಿನಾಚರಣೆಯನ್ನು ಆಚರಿಸಬೇಕು ? ಎನ್ನುವ ವಿಷಯದ ಕುರಿತು ಸವಿಸ್ತಾರ ಮಾಹಿತಿಯನ್ನು ಮುಖ್ಯ ಶಿಕ್ಷಕಿ, ವಿಶಾಲಾ ಶೆಟ್ಟಿ ತಿಳಿಸಿದರು. ಹಾಗು ಶಿಕ್ಷಕಿಯರು ಪುಟಾಣಿಗಳ ಜೊತೆ ಸೇರಿ ಬಣ್ಣಗಳ ಹಾಡುಗಳನ್ನು ಹಾಡಿದರು, ಮತ್ತು ಬಣ್ಣಗಳ ಕುರಿತು ವಿವರಣೆಯನ್ನು ನೀಡಿದರು ಜೊತೆಗೆ ಕಾಮನಬಿಲ್ಲಗೆ ಬಣ್ಣ ಹಾಕುವ ಕ್ರಿಯಾತ್ಮಕ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಬೆಂಗಳೂರಿನ ಯಕ್ಷಪ್ರೇಮಿಗಳಿಗೆ ಅಪರೂಪಕ್ಕೊಮ್ಮೆ ಜೋಡಾಟ ನೋಡುವ ಅವಕಾಶ. ಜೂನ್ 16ರ ಶುಕ್ರವಾರ ರಾತ್ರಿ 10ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷ ದಿಗ್ಗಜರ ಸಮಾಗಮದೊಂದಿಗೆ ಮೂರು ಪೌರಾಣಿಕ ಪ್ರಸಂಗಗಳನ್ನು ಕಣ್ತುಂಬಿಕೊಳ್ಳಬಹುದು. ಕಲಾದರ ಯಕ್ಷರಂಗ ಬಳಗ ಜಲವಳ್ಳಿ ಹಾಗೂ ಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ, ಕಲಾಕ್ಷೇತ್ರ ಯಕ್ಷಮಿತ್ರ ಬಳಗ ಬೆಂಗಳೂರು ಸಂಯೋಜನೆಯಲ್ಲಿ ಭೀಷ್ಮ ಪ್ರತಿಜ್ಞೆ – ವೀರ ವೃಷಸೇನ – ವೀರ ಮಾರುತಿ ಎಂಬ ಮೂರು ಪ್ರಸಂಗಗಳು ಪ್ರದರ್ಶನ ಕಾಣಲಿವೆ. ಕೊಳಗಿ, ಹಿಲ್ಲೂರು, ಬಾಳ್ಕಲ್ ಗಾನ ಸಾರಥ್ಯದಲ್ಲಿ ಪ್ರಥಮಬಾರಿಗೆ ದೇವವೃತನಾಗಿ ಜಲವಳ್ಳಿ ಅಶೋಕ್ ಭಟ್ – ಶಂತನು ಯಲಗುಪ್ಪ – ಯೋಜನಗಂಧಿ ಹಳ್ಳಾಡಿ – ಕಂದರ ಸು.ಚಿಟ್ಟಾಣಿ – ಮಾರುತಿ ಯಾಜಿ – ಬಲರಾಮ ಕಾರ್ತಿಕ ಚಿಟ್ಟಾಣಿ – ಕೃಷ್ಣ ಭಾಗವತಿಕೆ :- ನಾಗರಕೊಡಿಗೆ ಗಣೇಶ್ ಹೆಬ್ರಿ ಚಂಡೆ : ಶ್ರೀನಿವಾಸ ಪ್ರಭು ಕುಮಾರ್ ಕೊಕ್ಕರ್ಣೆ ವೃಷಸೇನ : ಹೆನ್ನಾಬೈಲ್ ನಿತೀನ್ ಶೆಟ್ಟಿ ಅರ್ಜುನ : ಐರ್ ಬೈಲ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನವಣಾ ಪ್ರಕ್ರಿಯೆ ಕಾವು ಪಡೆಯುತ್ತಿದ್ದರೆ ಇನ್ನೊಂದೆಡೆ ಇಲ್ಲೊಂದು ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ನಾಯಕ ಹಾಗೂ ವಿದ್ಯಾರ್ಥಿ ಉಪನಾಯಕನ ಆಯ್ಕೆಗಾಗಿ ಸಾರ್ವತ್ರಿಕ ಮಾದರಿಯ ಚುನಾವಣೆ ಸುರಿವ ಮಳೆಯ ನಡುವೆಯೂ ಬಿರುಸಿನಿಂದ ನಡೆಯಿತು. ಕುಂದಾಪುರ ವಲಯದ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಸಂಸದೀಯ ಮಾದರಿಯ ಚುನಾವಣೆಯ ಮೂಲಕ ವಿದ್ಯಾರ್ಥಿ ನಾಯಕ ಮತ್ತು ಉಪನಾಯಕನನ್ನು ಆಯ್ಕೆ ಮಾಡಲಾಗುತ್ತಿದೆ. ಮತಗಟ್ಟೆ ಅಧಿಕಾರಿಗಳ ಬಳಿ ಮತದಾರರ ಪಟ್ಟಿ ಇರುತ್ತದೆ. ಓಟು ಹಾಕುವ ಪ್ರತಿ ವಿದ್ಯಾರ್ಥಿಯ ಸಹಿಯನ್ನು ರಿಜಿಸ್ಟರಿನಲ್ಲಿ ಪಡೆಯಲಾಗುತ್ತದೆ. ನಂತರ ಅಳಿಸಲಾಗದ ಶಾಯಿಯನ್ನು ಮತದಾರರ ಬಲಗೈ ತೋರು ಬೆರಳಿಗೆ ಹಾಕಿ ಅಭ್ಯರ್ಥಿಗಳ ಹೆಸರು ಇರುವ ಮುದ್ರಿತ ಮತಪತ್ರವನ್ನು ನೀಡಲಾಗಿ ಅದಕ್ಕೆ ಅಲ್ಲಿ ಇಡಲಾಗಿರುವ ಪೆನ್ನಿನಿಂದ ಗುರುತು ಹಾಕುವ ಮೂಲಕ ವಿದ್ಯಾರ್ಥಿಗಳು ಮತ ಚಲಾಯಿಸುತ್ತಾರೆ. ಮತದಾನ ಪ್ರಕ್ರಿಯೆ ಮುಗಿದ ನಂತರ ಮತ ಎಣಿಕೆಯನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಸಿದ್ಧಾಪುರ: ಕಾಲೇಜಿನಿಂದ ಮನೆಗೆ ತೆರಳುತ್ತಿದ್ದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಅನ್ಯಕೋಮಿನ ಯುವಕನನ್ನು ಸಾರ್ವಜನಿಕರು ಹಿಡಿದ ಪೊಲೀಸರಿಗೊಪ್ಪಿಸಿದ ಘಟನೆ ಸಿದ್ಧಾಪುರದಲ್ಲಿ ನಡೆದಿದೆ. ಸಿದ್ಧಾಪುರ ಮೂಲದ ಅಪ್ರಾಪ್ತ ಯುವಕ (೧೭) ಪೊಲೀಸರ ವಶದಲ್ಲಿದ್ದಾನೆ. ಸಂಜೆ ವೇಳೆ ಮನೆಗೆ ತೆರಳುತ್ತಿದ್ದ ಕಾಲೇಜೊಂದರ ವಿದ್ಯಾರ್ಥಿನಿಗೆ ಸಿದ್ಧಾಪುರದ ಅನ್ಯಕೋಮಿನ ಯುವಕನೋರ್ವನನ್ನು ಅಡ್ಡಗಟ್ಟಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಆಕೆಯೊಂದಿಗೆ ಆಶ್ಲೀಲವಾಗಿ ಮಾತನಾಡಿದ್ದಲ್ಲದೇ ಪೋಟೋ ತೆಗೆಯಲು ಹೋಗಿದ್ದಾನೆ. ಯುವಕ ವರ್ತನೆಗೆ ಕಂಡು ಯುವತಿ ಕಿರುಚಿಕೊಂಡಿದ್ದು, ಕೂಡಲೇ ಸ್ಥಳೀಯರು ಒಟ್ಟಾಗಿ ಆತನನ್ನು ಹಿಡಿದು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಶಂಕರನಾರಾಯಣ ಪೊಲೀಸರು ಯುವಕನ್ನು ವಶಕ್ಕೆ ಪಡೆದಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಾರತದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು ‘ಬೀದಿಯ ಗೂಂಡಾ’ ಎಂದು ಹೋಲಿಕೆ ಮಾಡಿದ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರ ಹೇಳಿಕೆಯನ್ನು ಖಂಡಿಸಿ ಉಪ್ಪುಂದ ಪೇಟೆಯಲ್ಲಿ ಬೈಂದೂರು ಕ್ಷೇತ್ರ ಬಿಜೆಪಿ ಯುವ ಮೋರ್ಚಾ ವತಿಯಿಂದ ಸಂದೀಪ್ ದೀಕ್ಷಿತ್ ಭಾವಚಿತ್ರವನ್ನು ದಹಿಸಲಾಯಿತು. ಬೈಂದೂರು ಬಿಜೆಪಿ ಯುವಮೋರ್ಚಾ ಪ್ರಭಾರಿ ಬಿ.ಎಸ್ ಸುರೇಶ್ ಶೆಟ್ಟಿ ಮಾತನಾಡಿ ಭಾರತೀಯ ಸೇನೆಯ ಬಗೆಗೆ ದೇಶವಾಸಿಗಳಲ್ಲಿ ಅಪಾರ ಗೌರವವಿದೆ. ಸೇನಾ ಮುಖ್ಯಸ್ಥರ ಹೇಳಿಕೆಯನ್ನು ಟೀಕಿಸುವ ಭರದಲ್ಲಿ ಅವರನ್ನು ಪಾಕಿಸ್ಥಾನ ಸೇನೆಗೆ ಹೋಲಿಸಿದ್ದಲ್ಲದೇ ಗೂಂಡಾ ಎಂದು ಜರಿದಿರುವುದು ಖಂಡನೀಯ. ಕಾಂಗ್ರೆಸ್ ನಾಯಕರುಗಳ ಇಂತಹ ಹೇಳಿಕೆ ನಮ್ಮ ಸೇನೆಗೆ ಅಗೌರವ ತೋರುವಂತದ್ದು ಎಂದರು. ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ, ಹಿಂದುಳಿದ ಮೂರ್ಚಾ ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ, ಉಪ್ಪುಂದ ಗ್ರಾಪಂ ಮಾಜಿ ಸದಸ್ಯ ಜಗನ್ನಾಥ ಖಾರ್ವಿ, ಬೈಂದೂರು ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೀವಜಲವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳದೇ ಇರುವುದರಿಂದ ಉಡುಪಿ ಜಲ್ಲೆಯಲ್ಲಿ ನೀರಿನ ಹಾಹಾಕಾರ ಹೆಚ್ಚಿದೆ. ಭೂಮಿಯನ್ನು ತಂಪಾಗಿರಿಸುತ್ತಿದ್ದ ಅರಣ್ಯ ಸಂಪತ್ತು ವರ್ಷದಿಂದ ವರ್ಷಕ್ಕೆ ನಾಶವಾಗುತ್ತಿರುವುದು ನೀರಿಗೆ ಕೊರೆತೆಗೆ ದೊಡ್ಡ ಕೊಡುಗೆ ನೀಡಿದೆ ಎಂದು ಬಾಂಡ್ಯ ಎಜುಕೇಶನ್ ಟ್ರಸ್ಟ್ ಸಂಸ್ಥಾಪಕ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು. ಅವರು ವಕ್ವಾಡಿ ಗುರುಕುಲ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಇಂಗುಗುಂಡಿ ನೋಡಬನ್ನಿ ಜಲಸಂರಕ್ಷಣಾ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನಳ್ಳಿ ನೀರಿನ ವ್ಯವಸ್ಥೆ ಹೆಚ್ಚಾದಂತೆ ಅದರ ದುರುಪಯೋಗವೂ ಹೆಚ್ಚಾಗಿದೆ. ಕೊಳವೆ ಬಾವಿಯಿಂದಾಗಿ ನೀರಿನ ಮಟ್ಟ ಕುಸಿದಿದೆ. ಮಳೆ ನೀರಿನ ಕೊಯ್ಲು, ಇಂಗು ಗುಂಡಿ, ಇಂಗು ಬಾವಿಯಂತಹ ನೀರಿಂಗಿಸುವ ವಿಧಾನವನ್ನು ಒಳಗೊಂಡು ನೀರು ಉಳಿಸುವ ಕಾರ್ಯಕ್ಕೆ ಮುಂದಾಗದಿದ್ದರೆ ಮುಂದಿನ ಪೀಳಿಗೆಗೆ ಬರಡು ಭೂಮಿಯನ್ನು ಬಿಡಬೇಕಾದ ಸಂದರ್ಭ ಬಂದೊದಗಲಿದೆ ಎಂದರು. ಜಲ ತಜ್ಞ ಶ್ರೀಪಡ್ರೆ ಮಾತನಾಡಿ ಕೃತಕವಾಗಿ ನೀರು ಇಂಗಿಸುವ ಕ್ರಮ ಅಳವಡಿಸಿಕೊಳ್ಳುವುದು ಅನಿವಾರ್ಯ. ಕಾಡು ನಾಶ ಮಾಡಿದ್ದಕ್ಕೆ ಇದೊಂದು…

Read More